Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಬಾಯ್ಬಿಟ್ಟರೆ ಸಾಕು; ವಿವಾದಗಳೇ ಪುಟಿದೆದ್ದು ಕುಣಿಯಲಾರಂಭಿಸುತ್ತವೆ. ಕೆಲವೊಮ್ಮೆ ಮೇಧಾವಿಯಂತೆ, ಮತ್ತೆ ಕೆಲ ಘಳಿಗೆಗಳಲ್ಲಿ ಪ್ರಚಾರದ ತೆವಲಿನ ಸಾಧಾರಣ ಆಸಾಮಿಯಂತೆ ಕಾಣಿಸೋ ವರ್ಮಾ ಫಿಲ್ಟರ್‌ಲೆಸ್ ಮಾತುಗಳಿಗೆ ಭಲೇ ಫೇಮಸ್ಸು. ತನ್ನೊಳಗಿನ ಸರಕು ಖಾಲಿಯಾಗಿದೆ ಎಂಬುದು ಗೊತ್ತಾದಾಕ್ಷಣ, ಹಡಬೇ ಜಾಯಮಾನದವರಾದರೆ ಯಾರನ್ನೋ ನಕಲು ಮಾಡುವ ನೀಚ ಬುದ್ಧಿ ಪ್ರದರ್ಶಿಸುತ್ತಾರೆ. ಯಾವುದನ್ನೂ ಕ್ರಿಯೇಟಿವ್ ವಲಯದಲ್ಲಿ ಬಚ್ಚಿಟ್ಟುಕೊಳ್ಳಲಾಗೋದಿಲ್ಲವೆಂಬ ಸತ್ಯ ಗೊತ್ತಿದ್ದರೂ ನೌಟಂಕಿ ನಾಟಕವನ್ನೇ ಬದುಕಾಗಿಸಿಕೊಳ್ಳುವ ನಿರ್ಲಜ್ಜತನದ ಪರಮಾವಧಿ ತಲುಪಿಕೊಳ್ಳುತ್ತಾರೆ. ಆದರೆ ವರ್ಮಾ ತನ್ನ ಹಾದಿ ಬಿಟ್ಟು ಆಚೀಚೆ ಕದಲಲಿಲ್ಲ ಎಂಬುದೇ ಅವರ ಮೇಲೆ ಗೌರವ ಮೂಡಿಸುತ್ತೆ. ಇಂಥಾ ವರ್ಮಾ ಮತ್ತೆ ಬಿಡುಬೀಸಾಗಿ ಮಾತಾಡಿದ್ದಾರೆ. ಈ ಬಾರಿ ಅವರ ಮಾತಿನ ಕೇಂದ್ರ ಸ್ಥಾನದಲ್ಲಿರುವುದು ಖ್ಯಾತ ಮಾರ್ಷಲ್ ಆರ್ಟಿಸ್ಟ್, ನಟ ಬ್ರೂಸ್‌ಲೀ. ಈತ ಜಗತ್ತಿನ ಎಲ್ಲ ಭಾಗದವರನ್ನೂ ಪ್ರಭಾವಿಸಿದ, ಜಗತ್ತಿನೆಲ್ಲೆಡೆ ಅಭಿಮಾನಿ ವರ್ಗವನ್ನೊಳಗೊಂಡಿದ್ದಾನೆ. ಒಂದು ಕಾಲದಲ್ಲಿ, ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ವರ್ಮಾ ಬ್ರೂಸ್‌ಲೀಯಿಂದ ಪ್ರಭಾವಿತನಾಗಿದ್ದರಂತೆ. ಆ ವಯಸ್ಸಿನಲ್ಲಿಯೇ ವರ್ಮಾ ಬ್ರೂಸ್‌ಲೀಯ ‘ಎಂಟರ್ ದಿ ಡ್ರ್ಯಾಗನ್’ ಅನ್ನು…

Read More

ಈ ಗೆಲುವು ಅನ್ನೋದಿದೆಯಲ್ಲಾ? ಅದು ಯಾವ ವಿಶ್ಲೇಷಣೆಗಳ ನಿಲುಕಿಗೂ ಸಿಗದ ಮಾಯಾವಿ. ಕೆಲ ಮಂದಿ ಪ್ರತಿಭಾವಂತರಾಗಿದ್ದರೂ, ಅದಕ್ಕೆ ಬೇಕಾದ ಪರಿಶ್ರಮ, ಶ್ರದ್ಧೆಗಳೆಲ್ಲ ಇದ್ದರೂ ಗೆಲುವೆಂಬುದು ಕೈಗೆಟುಕದೆ ಕಾಡಿಸುತ್ತದೆ. ಆದರೆ ಇನ್ನೂ ಕೆಲ ಪುಣ್ಯಾತ್ಮರಿಗೆ ಎಲ್ಲೋ ಒಂದು ಕಡೆ ಕೂತು ಖಾಲಿ ಡಬ್ಬ ಬಡಿದರೂ ಸಲೀಸಾಗಿ ಗೆಲುವು ದಕ್ಕಿ ಬಿಡುತ್ತದೆ. ಈ ಮಾತಿಗೆ ತಾಜಾ ಉದಾಹರಣೆಯಂತಿರುವ ಪ್ರತಿಭೆ ಚಂದನ್ ಶೆಟ್ಟಿ. ಬಗಲಲ್ಲಿರೋ ಡಬ್ಬದ ಬಲದಿಂದಲೇ ಬಿಗ್‌ಬಾಸ್ ಶೋಗೂ ಹೋಗಿ ಬಂದ ಚಂದನ್ ಶೆಟ್ಟಿ ಆ ನಂತರ ಒಂದಷ್ಟು ಎಫರ್ಟ್ ಹಾಕುತ್ತಿದ್ದಾನೆಂಬುದೇ ಸಂತಸದ ಸಂಗತಿ. ಹೀಗಿರುವ ಚಂದನ್ ಇದೀಗ ಮ್ಯೂಸಿಕ್ಕಿನ ನಡುವೆಯೇ ನಟನೆಯತ್ತ ಕೈಚಾಚಿದ್ದಾನೆ. ಸದ್ಯ ಆತನಿಗೀಗ ನಟನಾಗೋ ನಶೆಯೇರಿಕೊಂಡಂತಿದೆ! ರೆಟ್ರೋ ಶೈಲಿಯ ಸುಕ್ಕಾ ಸಾಂಗ್ ಮೂಲಕವೂ ಟಾಕ್ ಕ್ರಿಯೇಟ್ ಮಾಡಿರುವ ಚಂದನ್ ಶೆಟ್ಟಿಯ ಮೂಡೆಲ್ಲವೂ ಇದೀಗ ನಟನೆಯ ಸುತ್ತಲೇ ಕೇಂದ್ರೀಕರಿಸಿಕೊಂಡಿದೆ. ಅಚ್ಚರಿದಾಯಕವಾಗಿ ಆತ ಎಲ್ರ ಕಾಲೆಳಿಯುತ್ತೆ ಕಾಲ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಸುದ್ದಿ ಹೊರಬಿದ್ದಿತ್ತು. ಅದರ ಒಂದಷ್ಟು ಝಲಕ್ಕು ಕಂಡ ಮಂದಿ…

Read More

ಕೆಲ ನಟ ನಟಿಯರ ಪಾಲಿಗೆ ನಸೀಬೆಂಬುದು ಕೈ ಕೊಡುತ್ತದೋ, ತಪ್ಪು ನಿರ್ಧಾರಗಳೇ ಅಂಥಾದ್ದೊಂದು ಸ್ಥಿತಿ ತಂದಿಡುತ್ತವೋ ಗೊತ್ತಿಲ್ಲ; ಅಂಥವರು ಬೆಳೆದು ನಿಲ್ಲುತ್ತಾರೆಂಬಂಥಾ ನಂಬಿಕೆ ಹುಟ್ಟಿಸಿ ಹೇಳ ಹೆಸರಿಲ್ಲದಂತೆ ಮರೆಯಾಗಿ ಬಿಡುತ್ತಾರೆ. ಅಂಥವರ ಸಾಲಿನಲ್ಲಿ ನಿಧಿ ಸುಬ್ಬಯ್ಯ ಕೂಡಾ ಸೇರಿಕೊಳ್ಳುತ್ತಾಳೆ. ಮೂಲತಃ ಮಾಡೆಲಿಂಗ್ ಕ್ಷೇತ್ರದಿಂದ ಆಗಮಿಸಿ, ಫೇರ್ ಆಂಡ್ ಲವ್ಲಿ ಜಾಹೀರಾತಿನ ಮೂಲಕ ಪರಿಚಯಗೊಂಡಿದ್ದ ಈಕೆಗೆ ಆರಂಭ ಕಾಲದಿಂದಲೂ ನಸೀಬು ಕೈಕೊಡುತ್ತಾ ಬಂದಿತ್ತು. ನಟಿಯಾಗಿ ನೆಲೆ ನಿಲ್ಲಲು ತಿಣುಕಾಡುತ್ತಲೇ ಮರೆಯಾಗಿದ್ದ ಈಕೆಯನ್ನು ಬಿಗ್ ಬಾಸ್ ಶೋ ಅಲ್ಲದೇ ಹೋಗಿದ್ದರೆ ಜನ ಮರೆತೇ ಬಿಡುತ್ತಿದ್ದರೇನೋ. ಅಂತೂ ಆ ಶೋನ ಪರಿಣಾಮವಾಗಿಯೇ ನಿಧಿಯ ವೃತ್ತಿ ಬದುಕು ಸೆಕೆಂಡ್ ಇನ್ನಿಂಗ್ಸ್‌ನತ್ತ ಹೊರಳಿಕೊಂಡಂತಿದೆ! ಬಿಗ್ ಬಾಸ್ ಶೋನ ನಂತರ ನಿಧಿ ಒಂದಷ್ಟು ಸಿನಿಮಾಗಳಲ್ಲಿ ಅವಕಾಶಗಳನ್ನು ಪಡೆಯಬಹುದೆಂಬ ನಿರೀಕ್ಷೆಯಿತ್ತು. ಆದರೆ ಅತ್ತಲಿಂದ ಅದಕ್ಕೆ ಪೂರಕವಾದ ಯಾವ ಸುದ್ದಿಯೂ ಬಂದಿರಲಿಲ್ಲ. ಕಡೆಗೂ ಬಿಗ್‌ಬಾಸ್ ಶೋನ ಮತ್ತೊಂದು ಸೀಜನ್ನು ಶುರುವಾಗುತ್ತಿರುವ ಈ ಹೊತ್ತಿನಲ್ಲಿ ನಿಧಿ ಕಡೆಯಿಂದ ಶುಭ ಸುದ್ದಿಯೊಂದು ಹೊರಬಿದ್ದಿದೆ. ಅದರನ್ವಯ ಹೇಳೋದಾದರೆ,…

Read More

ಅಲ್ಲಿ ಚಿತ್ರೀಕರಣ ನಡೆಸಿದ್ದೇ ಒಂದು ಅದ್ಭುತ ಅನುಭವ! ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ಇಂದು ತೆರೆಗಂಡಿದೆ. ಪ್ರೀಮಿಯರ್ ಶೋಗಳಲ್ಲಿ ಭರಪೂರ ಮೆಚ್ಚುಗೆಗೆ ಪಾತ್ರವಾಗಿರುವ ಈ ಚಿತ್ರ ರಾಜ್ಯಾದ್ಯಂತ ಹೆಚ್ಚಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈವತ್ತಿನ ಸನ್ನಿವೇಶದಲ್ಲಿ ಯಾವುದೇ ಚಿತ್ರಗಳು ಒಂದಷ್ಟು ಡಿಲೇ ಆದರೂ ಅದರಿಂದ ಪ್ರೇಕ್ಷಕರು ವಿಮುಖರಾಗುತ್ತಾರೆ. ಅಂಥಾ ವಾತಾವರಣದಲ್ಲಿ ಎರಡ್ಮೂರು ವರ್ಷಗಳ ಕಾಲ ಕುತೂಹಲವನ್ನು ಯಥಾ ಪ್ರಕಾರವಾಗಿ ಕಾಯ್ದಿಟ್ಟುಕೊಂಡು ಬಂದಿರುವ ಚಿತ್ರ ಚೇಸ್. ವಿಲೋಕ್ ಶೆಟ್ಟಿ ಸೇರಿದಂತೆ ಒಂದಿಡೀ ಚಿತ್ರತಂಡ ಶ್ರಮ ವಹಿಸಿ, ಚೇಸ್ ಅನ್ನು ಪ್ರೇಕ್ಷಕರ ಕುತೂಹಲದ ಕೇಂದ್ರದಲ್ಲಿ ಕಾಪಿಟ್ಟುಕೊಂಡು ಬಂದಿತ್ತು. ಅದೆಲ್ಲವೂ ಸಾರ್ಥಕಗೊಳ್ಳುವ ಕ್ಷಣಗಳು ಇಂದು ಎದುರಾಗಿವೆ. ಒಡಲ ತುಂಬಾ ವಿಶೇಷತೆಗಳನ್ನು ಬಚ್ಚಿಟ್ಟುಕೊಂಡಿರುವ ಈ ಸಿನಿಮಾವನ್ನು ಸಿಂಪ್ಲಿ ಫನ್ ಮೀಡಿಯಾ ನೆಟ್‌ವರ್ಕ್ ಬ್ಯಾನರಿನಡಿಯಲ್ಲಿ ಮನೋಹರ್ ಸುವರ್ಣ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ವಿಲೋಕ್ ಶೆಟ್ಟಿಯ ಕಲ್ಪನೆಯಂತೆಯೇ ಇಡೀ ಚಿತ್ರ ಮೂಡಿ ಬರಲು ಒತ್ತಾಸೆಯಾಗಿ ನಿಂತಿದ್ದಾರೆ. ಈ ಕಾರಣದಿಂದಲೇ ಬಾಲಿವುಡ್ಡಿನ ಮಂದಿಯೂ ಕಾಲಿಡಲಾಗಂಥಾ ಅಪರೂಪದ ಪ್ರದೇಶಗಳಲ್ಲಿ ಚೇಸ್‌ನ ದೃಷ್ಯಾವಳಿಗಳು ಕಳೆಗಟ್ಟಿಕೊಂಡಿವೆ.…

Read More

ವಿಲೋಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚೇಜ಼್ ಚಿತ್ರವೀಗ ಎಲ್ಲ ಕುತೂಹಲದ ಕೇಂದ್ರಬಿಂದು. ಈ ಚಿತ್ರ ದಿನವೊಂದು ಹೊರಳಿಕೊಂಡಾಕ್ಷಣವೇ ಪ್ರೇಕ್ಷಕರ ಮುಂದೆ ಬರಲಿದೆ. ಭರ್ತಿ ಎರಡು ವರ್ಷಗಳ ಕಾಲ ತಯಾರುಗೊಂಡು, ಕೊರೋನಾ ಕಂಟಕವನ್ನು ಸಮರ್ಥವಾಗಿ ದಾಟಿಕೊಂಡಿರುವ ಈ ಚಿತ್ರವೀಗ ಪ್ರೇಕ್ಷಕರನ್ನು ಮುಖಾಮುಖಿಯಾಗೋ ಸಡಗರದಲ್ಲಿದೆ. ಮೊನ್ನೆಯಷ್ಟೇ ಇದರ ಟ್ರೇಲರ್ ಒಂದು ಬಿಡುಗಡೆಯಾಗಿತ್ತಲ್ಲಾ? ಅದು ಮೂಡಿ ಬಂದಿರೋ ರೀತಿಯೇ ಒಂದಿಡೀ ಚಿತ್ರ ರೂಪುಗೊಂಡಿರುವ ರೀತಿಗೆ ಸ್ಪಷ್ಟ ಉದಾಹರಣೆ. ಅದರೊಂದಿಗೆ ಮೇಕಿಂಗ್‌ನ ಅದ್ದೂರಿತನ ಮತ್ತು ಭಿನ್ನ ಕಥನದ ಸೂಚನೆಗಳೂ ಕೂಡಾ ಹೊರ ಬಿದ್ದಿವೆ. ಚೇಜ಼್‌ನ ಆಕರ್ಷಣೆಗಳು ಇದೀಗ ಹಂತ ಹಂತವಾಗಿ, ಒಂದೊಂದಾಗಿ ಜಾಹೀರಾಗುತ್ತ ಪ್ರೇಕ್ಷಕರೊಳಗೆ ಕುತೂಹಲವೆಂಬುದು ನಿಗಿನಿಗಿಸಿದೆ. ನಿರ್ದೇಶಕ ವಿಲೋಕ್ ಶೆಟ್ಟಿ ಇದರಲ್ಲಿನ ಒಂದೊಂದು ಪಾತ್ರಗಳನ್ನೂ ಸಹ ಸದಾ ಕಾಡುವಂತೆ, ನೆನಪಿಟ್ಟುಕೊಳ್ಳುವಂತೆ ರೂಪಿಸಿದ್ದಾರಂತೆ. ಕೆಲ ಪಾತ್ರಗಳಂತೂ ಪ್ರೇಕ್ಷಕರೆಲ್ಲರೂ ಅಚ್ಚರಿಗೊಳ್ಳುವಂತಿದೆ. ಈ ಚಿತ್ರದಲ್ಲಿ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಶೀತಲ್ ಶೆಟ್ಟಿ, ರಾಜೇಶ್ ನಟರಂಗ, ಸುಶಾಂತ್ ಪೂಜಾರಿ ಮುಂತಾದವರ ತಾರಾಗಣವಿದೆ ಎಂಬುದೂ ಕೂಡಾ…

Read More

ಕ್ಷೇತ್ರ ಯಾವುದೇ ಆಗಿರಲಿ; ಎಲ್ಲ ವ್ಯವಹಾರಗಳನ್ನು ಮೀರಿದ ತಪಸ್ಸೊಂದಿರದೇ ಹೋದರೆ ಸೃಜನಾತ್ಮಕವಾಗಿ ಏನೂ ಹುಟ್ಟಲು ಸಾಧ್ಯವಿಲ್ಲ. ಹಾಗಿದ್ದ ಮೇಲೆ ಸೃಜನಶೀಲತೆಯೇ ಆತ್ಮವಾಗಿರುವ ಸಿನಿಮಾ ರಂಗಕ್ಕೆ ಅಂಥಾದ್ದೊಂದು ಅಸೀಮ ಧ್ಯಾನದ ಹಾಜರಿ ಇದ್ದೇ ಇರಬೇಕು. ಹೆಚ್ಚಿನ ಮಂದಿ ನಿರ್ದೇಶನ, ನಟನೆ ಮುಂತಾದವುಗಳನ್ನು ಮಾತ್ರವೇ ಸೃಜನಶೀಲತೆಯ ಪರಿಧಿಗೆ ತರುತ್ತಾರೆ. ಆದರೆ ಓರ್ವ ನಿರ್ಮಾಪಕನೊಳಗೂ ಅಂಥಾ ಗುಣ ಇಲ್ಲದೇ ಹೋದರೆ ಸಿನಿಮಾ ಒಂದು ಎಲ್ಲ ಕೋನಗಳಿಂದಲೂ ಪರಿಪೂರ್ಣವಾಗಿ ಮೂಡಿ ಬರಲು ಸಾಧ್ಯವಾಗುವುದಿಲ್ಲ. ಇಲ್ಲಿಯವರೆಗೂ ನಿರ್ಮಾಣ ವಿಭಾಗದಲ್ಲಿ ಇಂಥಾ ಮನಸ್ಥಿತಿಒ ಹೊಂದಿರುವವರೇ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಇದೀಗ ಅಂಥಾದ್ದೇ ಮನಸ್ಥಿತಿ, ಸಿನಿಮಾ ವ್ಯಾಮೋಹ ಹೊಂದಿರುವ ಮನೋಹರ್ ಸುವರ್ಣ ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ಚಿತ್ರದ ಮೂಲಕ ಆಗಮಿಸಿದ್ದಾರೆ. ಈ ಮೂಲಕ ಕನ್ನಡ ಚಿತ್ರ ನಿರ್ಮಾಣ ವಲಯದಲ್ಲೊಂದು ‘ಸುವರ್ಣ’ ಅಧ್ಯಾಯ ಶುರುವಾಗುವ ಮುನ್ಸೂಚನೆ ನಿಖರವಾಗಿಯೇ ಸಿಗಲಾರಂಭಿಸಿದೆ! ಯಾವುದೇ ಸಿನಿಮಾ ರೂಪುಗೊಳ್ಳೋದರ ಹಿಂದೆ ಒಂದಷ್ಟು ಘಟ್ಟಗಳಿರುತ್ತವೆ. ಒಂದು ಕಥೆ ಹುಟ್ಟಿ, ಅದು ಸಿನಿಮಾ ರೂಪ ಪಡೆದು ಗೆದ್ದೇ ಗೆಲ್ಲುತ್ತದೆಂಬಂಥಾ ನಂಬಿಕೆ ಹುಟ್ಟಿದ…

Read More

ಹೂವಿನಂಥಾ ಹಾಡಿನ ಮಹಾ ಮೋಡಿ! ಕಾಡುವ ಹಾಡಿಗೆ ಮನಸೋಲದವರಿಲ್ಲ. ಸಂಗೀತ ಪ್ರೇಮಿಗಳಂತೂ ಕೇಳುತ್ತಾ ಮತ್ಯಾವುದೋ ಭಾವ ಲೋಕದಲ್ಲಿ ಕಳೆದು ಹೋಗಿಸುವಂಥಾ ಹಾಡಿಗಾಗಿ ಸದಾ ಧ್ಯಾನಿಸುತ್ತಿರುತ್ತಾರೆ. ಅಂಥಾ ಹಾಡೊಂದು ಅಚಾನಕ್ಕಾಗಿ ಕಿವಿ ಸೋಕಿದಾಗ ಆಗುವ ಖುಷಿಯಿದೆಯಲ್ಲಾ? ಅದು ಜಗದ ಎಲ್ಲ ಸೌಭಾಗ್ಯ, ಸುಖಗಳನ್ನೂ ಮೀರಿದ ಮಾಯೆ. ಅದನ್ನು ಅನುಭವಿಸಬಹುದೇ ಹೊರತು ಮಾತಲ್ಲಿ ಹಿಡಿದಿಡೋದಾಗಲಿ, ಅಕ್ಷರಗಳಲ್ಲಿ ಬಂಧಿಸೋದಾಗಲಿ ಕಡುಗಷ್ಟದ ಕೆಲಸ. ಇತ್ತಿತ್ತಲಾಗಿ ಅಂಥಾದ್ದೊಂದು ಸ್ವರ್ಗ ಸುಖವನ್ನು ಕೇಳಿದ ಪ್ರತಿಯೊಬ್ಬರೆದೆಯೂ ಮೊಗೆದು ಸುರಿದ ಹಾಡು ಬನಾರಸ್‌ನ ಮಾಯಗಂಗೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಈ ಹಾಡನ್ನು ಕೇಳಿ ಥ್ರಿಲ್ ಆಗದವರೇ ಇಲ್ಲ. ಅಷ್ಟು ಚೆಂದಗೆ ಮೂಡಿ ಬಂದಿದ್ದ ಮಾಯಗಂಗೆಯನ್ನು ಎಲ್ಲರೂ ಮನಸೊಳಗೆ ಹರಿಯಲು ಬಿಟ್ಟಿದ್ದಾಳೆ, ಈ ಕಾರಣದಿಂದಲೇ ಈಗ ಮಾಯಗಂಗೆ ಕರುನಾಡಿನ ಗಡಿದಾಟಿ, ನೆರಯ ರಾಜ್ಯಗಳಲ್ಲಿಯೂ ಮೈದುಂಬಿ ಹರಿಯುತ್ತಿದ್ದಾಳೆ. ಹಾಗೊಂದು ಮಹಾಮೋಡಿ ಘಟಿಸದೇ ಹೋಗಿದ್ದರೆ ಖಂಡಿತವಾಗಿಯೂ ಇಷ್ಟು ಕಡಿಮೆ ಅವಧಿಯಲ್ಲಿ ಈ ಹಾಡಿಗೆ ಐದು ಮಿಲಿಯನ್ನಿಗೂ ಅಧಿಕ ವೀಕ್ಷಣೆಗಳು ಸಿಕ್ಕಲು ಸಾಧ್ಯವಾಗುತ್ತಿರಲಿಲ್ಲ. ನಿಮಗೆಲ್ಲ ಗೊತ್ತಿರುವಂತೆ ಜಯತೀರ್ಥ ನಿರ್ದೇಶನದ ಬನಾರಸ್…

Read More

ಈ ಜಗತ್ತಿನ ಜೀವಜಾಲದ ಸಂಕೀರ್ಣ ಸ್ಥಿತಿ ಯಾವ ಸಂಶೋಧನೆಗಳಿಗೂ ಸಹ ಅಷ್ಟು ಸಲೀಸಾಗಿ ನಿಲುಕುವಂಥಾದ್ದಲ್ಲ. ಇದುವರೆಗೂ ಹಲವಾರು ವಿಜ್ಞಾನಿಗಳು, ಸಂಶೋಧಕರು ಈ ಜಾಲದ ಬೆಂಬಿದ್ದು ಹುಡುಕಾಡುತ್ತಲೇ ಇದ್ದಾರೆ. ಹಾಗೆ ಹೊರಟು ನಿಂತಾಗೆಲ್ಲ ಅವರರ ಮುಂದೆ ಜೀವ ಜಗತ್ತಿನ ಪರಮಾದ್ಭುತಗಳು ಹಂತ ಹಂತವಾಗಿ ತೆರೆದುಕೊಳ್ಳುತ್ತಲೇ ಸಾಗುತ್ತಿವೆ. ಚಾರ್ಲ್ಸ್ ಡಾರ್ವಿನ್‌ರಂಥವರು ಜೀವ ಜಗತ್ತಿನ ರಹಸ್ಯಗಳನ್ನು ತಪಸ್ಸಿನಂತೆ ಭೇದಿಸಿ ಒಂದಷ್ಟು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಆ ನಂತರವೂ ಸಾಕಷ್ಟು ಮಂದಿ ಅದೇ ದಾರಿಯಲ್ಲಿ ಮುಂದುವರೆದಿದ್ದಾರೆ. ಆದರೂ ಈ ಕ್ಷಣಕ್ಕೂ ಇದು ಜೀವ ಜಗತ್ತು ಎಂಬರ್ಥದಲ್ಲಿ ಚೌಕಟ್ಟು ಹಾಕಿ ಹೇಳುವಂಥಾ ವಾತಾವರಣವಿಲ್ಲ. ಯಾಕೆಂದರೆ, ಅದೊಂದು ಸಮುದ್ರವನ್ನೂ ಮೀರಿದ ಆಳ ವಿಸ್ತಾರವುಳ್ಳ ವಿಚಾರವೆಂಬುದು ಎಲ್ಲರಿಗೂ ಮನದಟ್ಟಾಗಿದೆ. ಅದರ ಫಲವಾಗಿಯೇ ಹೊಸ ಹೊಸಾ ಅಚ್ಚರಿಗಳು ಎದುರಾಗುತ್ತಿವೆ. ಅದನ್ನು ನೋಡುತ್ತಾ ಕಣ್ಣರಳಿಸಿ ಖುಷಿಪಡುವ ಸುಖವಷ್ಟೇ ನಮ್ಮದು! ಈ ಏಡಿಗಳು ಪ್ರಪಂಚದಲ್ಲಿರುವ ಜೀವ ಸಂಕುಲದಲ್ಲಿಯೇ ಒಂದಷ್ಟು ವೈವಿಧ್ಯತೆಯನ್ನೊಳಗೊಂಡಿರುವ ಜೀವಿಗಳು. ಸ್ಥಳೀಯವಾಗಿ ನೋಡುವುದಾದರೆ ಅವುಗಳಲ್ಲಿ ಬಹಳಷ್ಟು ಪ್ರಬೇಧಗಳಿದ್ದಾವೆ. ನಮ್ಮ ಜನರ ಪಾಲಿಗೆ ಅದು ಅದ್ಭುತ ಆಹಾರವೂ…

Read More

ಸಿಂಪ್ಲಿ ಫನ್ ಮೀಡಿಯಾ ನೆಟ್‌ವರ್ಕ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಚೇಜ಼್ ಚಿತ್ರ ಬಿಡುಗಡೆಗೆ ಒಂದು ದಿನವಷ್ಟೇ ಬಾಕಿ ಉಳಿದುಕೊಂಡಿದೆ. ವಿಲೋಕ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಮೊನ್ನೆ ಬಿಡುಗಡೆಯಾಗಿದ್ದ ಟ್ರೈಲರ್ ಮೂಲಕ ಸೃಷ್ಟಿಸಿರುವ ಕ್ರೇಜ್ ಸಾಮಾನ್ಯವಾದುದೇನಲ್ಲ. ಆರಂಭಿಕ ಹಂತದಿಂದಲೂ ಹೆಜ್ಜೆ ಹೆಜ್ಜೆಗೂ ಟಾಕ್ ಕ್ರಿಯೇಟ್ ಮಾಡುತ್ತಾ ಸಾಗಿ ಬಂದಿದ್ದ ಈ ಸಿನಿಮಾ ಪ್ರತಿಯೊಂದು ವಿಚಾರದಲ್ಲಿಯೂ ವಿಶೇಷತೆಗಳನ್ನೇ ಒಡಲಲ್ಲಿಟ್ಟುಕೊಂಡಿದೆ. ಅದರಲ್ಲಿಯೂ ವಿಲೋಕ್ ಶೆಟ್ಟಿ ತಮ್ಮ ಕನಸಿಗೆ ತಕ್ಕುದಾಗಿಯೇ ಅತ್ಯಂತ ಶ್ರದ್ಧೆಯಿಂದ ಇದರ ಹಾಡುಗಳು ಮೂಡಿ ಬರುವಂತೆ ನೋಡಿಕೊಂಡಿದ್ದಾರೆ. ಈ ಕಾರಣದಿಂದಲೇ ಚೇಸ್‌ನದ್ದು ಇತ್ತೀಚಿನ ದಿನಮಾನದ ಅತ್ಯುತ್ತಮ ಆಲ್ಬಂ ಅಂತ ಹೆಸರಾಗಿದೆ. ಈ ಚಿತ್ರದೊಂದಿಗೆ ಮಾಲಿವುಡ್‌ನ ಖ್ಯಾತ ಗಾಯಕ ಮಖ್ಬೂಲ್ ಮನ್ಸೂರ್ ಮೊಹಮದ್ ಕನ್ನಡ ಚಿತ್ರಪ್ರೇಮಿಗಳಿಗೆ, ಸಂಗೀತಾಸಕ್ತರಿಗೆ ಪರಿಚಯವಾಗಿದ್ದಾರೆ. ಕೇರಳದ ಪ್ರಸಿದ್ಧ ಸಂಗೀತ ನಿರ್ದೇಶಕ ಗೋಪಿ ಸುಂದರ್ ಅವರೊಂಗಿಗೆ ವರ್ಷಾಂತರಗಳ ಕಾಲದಿಂದ ಕಾರ್ಯ ನಿರ್ವಹಿಸಿ ಪಳಗಿಕೊಂಡಿರುವವರು ಮನ್ಸೂರ್. ದೇಶ ವಿದೇಶಗಳಲ್ಲಿಯೂ ಮೋಹಕ ಕಂಠಸಿರಿಯಿಂದ ಪ್ರಸಿದ್ಧಿ ಪಡೆದಿರುವ ಅವರು ಮಲೆಯಾಳದ ಎನ್ನು ನಿಂಟೆ ಮೊಯಿದಿನ್ ಚಿತ್ರದ ಮುಕ್ಕತ್ತಿಪೆನ್ನೆ…

Read More

ಮಂಗಳೂರು ಮೂಲದ ಹುಡುಗಿಯರು ಈಗಾಗಲೇ ನಾನಾ ಭಾಷೆಗಳಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಶಿಲ್ಪಾ ಶೆಟ್ಟಿ, ಐಶ್ವರ್ಯಾ ರೈ ಮತ್ತು ಇತ್ತೀಚಿನ ತಲೆಮಾರಿನ ಪೂಜಾ ಹೆಗ್ಡೆಯ ತನಕ ಆ ಪಟ್ಟಿ ಮುಂದುವರೆಯುತ್ತದೆ. ಆ ಸಾಲಿಗೆ ಬಹು ಹಿಂದೆಯೇ ಸೇರ್ಪಡೆಯಾಗಿರೋ ಹೊಸಾ ಹುಡುಗಿ ಕೃತಿ ಶೆಟ್ಟಿ. ಕೆಲವೊಮ್ಮೆ ಕೆಲ ನಟಿಯರು ಅದೇನೇ ಸರ್ಕಸ್ಸು ನಡೆಸಿದರೂ ಯಾವುದೇ ಭಾಷೆಗಳಲ್ಲಿಯೂ ಬರಖತ್ತಾಗೋದಿಲ್ಲ. ಮತ್ತೆ ಕೆಲ ನಟಿಯರಿಗೆ ಲಕ್ಕೆಂಬುದು ಮೊದಲ ಹೆಜ್ಜೆಯಿಂದಲೇ ಬಲವಾಗಿ ಕುದುರಿಕೊಳ್ಳುತ್ತೆ. ಅದಕ್ಕೆ ತಕ್ಕುದಾದ ಪ್ರತಿಭೆ ಇದ್ದರಂತೂ ಯಶಸ್ಸಿನ ನಾಗಾಲೋಟವನ್ನು ಯಾರಿಂದಲೂ ಕಟ್ಟಿ ಹಾಕಲು ಸಾಧ್ಯವಾಗುವುದಿಲ್ಲ. ಆ ಸಾಲಿಗೆ ಸೇರಿಕೊಳ್ಳುವಾಕೆ ಕೃತಿ ಶೆಟ್ಟಿ. ಈಗಾಗಲೇ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ದೊಡ್ಡ ಹೆಸರು ಮಾಡಿರುವ ಕೃತಿ, ಇದೀಗ ಸೂರ್ಯನಿಗೆ ಜೋಡಿಯಾಗಿ ತಮಿಳು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡುತ್ತಿದ್ದಾಳೆ. ಸೂರ್ಯನ ಹೊಸಾ ಚಿತ್ರದ ಬಗ್ಗೆ ತಮಿಳು ಚಿತ್ರ ಪ್ರೇಮಿಗಳ ನಡುವೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆದಿದ್ದವು. ಆ ಚಿತ್ರವನ್ನು ಸೂರ್ಯ ೪೧ ಎಂದೇ ಈವರೆಗೂ ಗುರುತಿಸಲಾಗುತ್ತಿತ್ತು. ಕಡೆಗೂ ಈಗ…

Read More