Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಶೋಧ ನ್ಯೂಸ್ ಡೆಸ್ಕ್: ದೇಶಾದ್ಯಂತ ಇದೀಗ ರಾಜಕೀಯ ದ್ವೇಷ, ವಾಗ್ದಾಳಿ, ಮಾರಾಮಾರಿಗಳು ಮೇರೆ ಮೀರಿಕೊಂಡಿವೆ. ಕೆಲವೊಮ್ಮೆ ಅವುಗಳು ಹೊಡೆದಾಟ, ಬಡಿದಾಟದ ಹಂತವನ್ನೂ ತಲುಪಿಕೊಳ್ಳುತ್ತಿವೆ. ಇದೀಗ ಪುಣೆಯಲ್ಲಿಯೂ ಅಂಥಾದ್ದೇ ಒಂದು ವಿದ್ಯಮಾನ ಘಟಿಸಿದೆ. ಈ ಭಾಗದಲ್ಲಿ ಬಿಜೆಪಿಯ ಹಿರಿಯ, ಪ್ರಭಾವಿ ನಾಯಕರಾಗಿ ಗುರ್ತಿಸಿಕೊಂಡಿದ್ದ ವಿನಾಯಕ್ ಅಂಬೇಕರ್ ಮೇಲೆ ಅವರದ್ದೇ ಕಚೇರಿಗೆ ನುಗ್ಗಿದ ಎನ್‌ಸಿಪಿ ಕಾರ್ಯಕರ್ತರು ಭಯಾನಕವಾಗಿ ಹಲ್ಲೆ ನಡೆಸಿದ್ದಾರೆ. ಈ ವಿಚಾರವೀಗ ಆನ್‌ಲೈನ್ ತುಂಬೆಲ್ಲ ವೈರಲ್ ಆಗಿ ಬಿಟ್ಟಿದೆ. ಈಗಂತೂ ರಾಜಕೀಯ ಮುಖಂಡರೂ ಕೂಡಾ ತಮ್ಮ ಜಿದ್ದು, ದ್ವೇಷಗಳನ್ನೆಲ್ಲ ಸಾಮಾಜಿಕ ಜಾಲತಾಣಗಳ ಮೂಲಕವೇ ಕಶಾರಿಕೊಳ್ಳಲಾರಂಭಿಸಿದ್ದಾರೆ. ಈ ಕಾರಣದಿಂದ ಹಿಂಬಾಲಕರೂ ಕೂಡಾ ಅಲ್ಲಿಯೇ ಲಂಗರು ಹಾಕಿ ಕಚ್ಚಾಡಿಕೊಂಡು ರಾಡಿಯೆಬ್ಬಿಸುತ್ತಾರೆ. ಬಿಜೆಪಿ ಮುಖಂಡ ವಿನಾಯಕ್ ಅಂಬೇಕರ್ ಕೂಡಾ ಅಂಥಾದ್ದೇ ಒಂದು ಕಚ್ಚಾಟಕ್ಕೆ ಎಡೆ ಮಾಡಿಕೊಡುವಂಥಾ ಯಡವಟ್ಟೊಂದನ್ನು ಮಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಅಂಬೇಕರ್ ಇತ್ತೀಚೆಗೆ ಎನ್‌ಸಿಪಿಯ ಮಾಜೀ ನಾಯಕ ಶರದ್ ಪವಾರ್ ಬಗೆಗೊಂದು ಪೋಸ್ಟ್ ಹಾಕಿದ್ದರಂತೆ. ಆ ಪೋಸ್ಟ್ ಶರದ್ ಪವಾರ್ ಅವರನ್ನು ಅವಮಾನಿಸುವಂತಿದ್ದುದರಿಂದ ಶರದ್…

Read More

ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋದು ನಮ್ಮ ನಡುವೆ ಚಾಲ್ತಿಯಲ್ಲಿರುವ ಪುರಾತನ ನುಡಿಗಟ್ಟು. ಆದರೆ ಕೆಲ ಮಂದಿಗೆ ಮಾತ್ರ ಪೂರ್ತಿ ಕೆಟ್ಟ ನಂತರವೂ ಬುದ್ಧಿ ನೆಟ್ಟಗಾಗುವುದಿಲ್ಲ. ಈ ಮಾತಿಗೆ ತಾಜಾ ಉದಾಹರಣೆಯಂತಿರೋದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತಲುಪಿಕೊಂಡಿರುವ ಶೋಚನೀಯ ಸ್ಥಿತಿ. ಎರಡೆರಡು ಸಾರಿ ಹೀನಾಯವಾಗಿ ಸೋತರೂ ಕೂಡಾ ಇದರ ಮುಖ್ಯ ನಾಯಕರಿಗೆ ಸತ್ಯದರ್ಶನವಾಗಲೇ ಇಲ್ಲ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಯಾಕೆ ಈ ಪರಿಯಾಗಿ ಅದಃಪಾತಾಳ ಕಂಡಿತೆಂಬ ಪ್ರಶ್ನೆಯನ್ನು ಅದರ ನಾಯಕರು ತಮಗೆ ತಾವೇ ಕೇಳಿಕೊಳ್ಳಲಿಲ್ಲ. ಅದರ ಫಲವಾಗಿ ಇಡೀ ಪಕ್ಷವೇ ಹಳ್ಳ ಹಿಡಿದು ಹೋಗಿದೆ. ಹೀಗೆ ಕಾಂಗ್ರೆಸ್ ಅಳಿವಿನ ಅಂಚಿನಲ್ಲಿರುವಾಗ ಅಧಿನಾಯಕಿ ಸೋನಿಯಾ ಗಾಂಧಿಗೆ ಮೆಲ್ಲಗೆ ಜ್ಞಾನೋದಯವಾದಂತಾಗಿದೆ. ಅತೀ ಹೆಚ್ಚು ಕಾಲ ಅಧಿಕಾರದಲ್ಲಿದ್ದುದರಿಂದಾಗಿ ಬರ ಬರುತ್ತಾ ಕಾಂಗ್ರೆಸ್‌ನದ್ದು ಆನೆ ನಡೆದದ್ದೇ ದಾರಿ ಎಂಬಂತಾಗಿತ್ತು. ನೋಡ ನೋಡುತ್ತಲೇ ಎಲ್ಲ ಆಶಯಗಳನ್ನೂ ಮೀರಿ ಕುಟುಂಬ ರಾಜಕಾರಣ ಮೇರೆ ಮೀರಿಕೊಂಡಿತ್ತು. ನಾನಾ ಡೌಲು ಮಾಡುತ್ತಾ ಅಧಿಕಾರಕ್ಕೆ ಬಂದ ನಾಯಕರೆಲ್ಲ ತಮ್ಮ ಮಕ್ಕಳು ಸಂಬಂಧಿಗಳನ್ನೇ ಅಧಿಕಾರ ರಾಜಕಾರಣದ…

Read More

ಇಲ್ಲಿದೆ ವೈಫ್ ಸ್ವಾಪಿಂಗ್ ಬಗೆಗಿನ ಬೆಚ್ಚಿ ಬೀಳಿಸೋ ಮ್ಯಾಟರ್! ಜಗತ್ತು ಆಧುನಿಕತೆಗೆ ಒಡ್ಡಿಕೊಂಡಂತೆಲ್ಲಾ ಮನುಷ್ಯನ ವಿಕೃತಿಗಳು ಮೇರೆ ಮೀರುತ್ತಿವೆ. ಅದರಲ್ಲಿಯೂ ಲೈಂಗಿಕ ತೃಷೆಗಾಗಿ ಆಧುನಿಕ ಜಗತ್ತು ಅನುಸರಿಸುತ್ತಿರೋ ಅಡ್ಡದಾರಿಗಳಿವೆಯಲ್ಲಾ? ಅವು ಎಂಥವರನ್ನಾದರೂ ಬೆಚ್ಚಿ ಬೀಳಿಸುವಂತಿವೆ. ಒಂದು ಕಡೆಯಲ್ಲಿ ದೇಶಾದ್ಯಂತ ಅತ್ಯಾಚಾರ ಪ್ರಕರಣಗಳು ಮೇರೆ ಮೀರುತ್ತಿವೆ. ಸನಾನತನವಾದಿಗಳು ಅದಕ್ಕೆ ಹೆಣ್ಣು ಮಕ್ಕಳು ಧರಿಸೋ ಬಟ್ಟೆಯೇ ಕಾರಣ ಎಂಬಂಥಾ ಮತ್ತೊಂದು ಬಗೆಯ ವಿಕೃತಿಯನ್ನ ಪ್ರತಿಪಾದಿಸುತ್ತಿದ್ದಾರೆ. ಹಾಗಾದರೆ ಎಲ್ಲ ಇದ್ದೂ ಮನುಷ್ಯ ಮತ್ತಷ್ಟು ಲೈಂಗಿಕತೆಗಾಗಿ ಯಾಕೆ ಹಾತೊರೆಯುತ್ತಾನೆ? ಮನುಷ್ಯತ್ವವನ್ನೇ ಅಣಕಿಸುವಂಥಾ ವೈಫ್‌ಸ್ವಾಪಿಂಗ್ ದಂಧೆಗಳ ಮೂಲಕ ಯಾಕೆ ಖುಷಿ ಕಾಣಲು ಪ್ರಯತ್ನಿಸುತ್ತಾನೆಂಬುದಕ್ಕೆಲ್ಲ ಸನಾತನಿಗಳ ಬಳಿ ಉತ್ತರವಿಲ್ಲ. ಅಂಥಾ ಅಗಾಧ ವಿಕೃತಿ ಮನಸೊಳಗೇ ಇಲ್ಲದೇ ಹೋಗಿದ್ದರೆ ಕಟ್ಟಿಕೊಂಡ ಹೆಂಡತಿಯರನ್ನೇ ಅದಲು ಬದಲು ಮಾಡಿಕೊಂಡು ಸುಖಿಸುವ ಖೂಳ ಬುದ್ಧಿ ಹಬೆಯಾಡಲು ಸಾಧ್ಯವೇ? ನಮ್ಮದು ಎಲ್ಲಿಯೂ ಸಂಸ್ಕೃತಿ, ಕಟ್ಟುಪಾಡುಗಳ ಎಲ್ಲೆ ಮೀರದ ಸಮಾಜ. ಅದರೊಳಗೇ ಲೈಂಗಿಕ ವಾಂಛೆಗಳೂ ಕೂಡಾ ಹದ ಮೀರದೆ ಮುಂದುವರೆದುಕೊಂಡು ಬಂದಿವೆ. ಅಲ್ಲಲ್ಲಿ, ಆಗಾಗ ಅದು ಹದ್ದು ಮೀರಿ…

Read More

ಇಡೀ ಜಗತ್ತು ಕೊರೋನಾ ವೈರಸ್ಸಿನ ಮುಂದೆ ಮಂಡಿಯೂರಿದ್ದಾಗ, ಜನ ಹುಳಗಳಿಗಿಂತಲೂ ಕಡೆಯಾಗಿ ಹಾದಿ ಬೀದಿಯಲ್ಲಿ ಜೀವ ಬಿಡುತ್ತಿದ್ದಾಗ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬೆಚ್ಚಗೆ ಮಲಗಿಕೊಂಡಿದ್ದ. ಹೇಳಿಕೇಳಿ ಅದು ಸರ್ವಾಧಿಕಾರದ ಕಪಿಮುಷ್ಠಿಯಲ್ಲಿರುವ ದೇಶ. ಯಾರೆಂದರೆ ಯಾರೂ ಕೂಡಾ ಕಿಮ್ ಜಾಂಗ್ ಹಾಕಿದ ಗೆರೆಯನ್ನು ದಾಟುವಂತಿಲ್ಲ. ಯಾವಾಗ ಇಡೀ ವಿಶ್ವದ ತುಂಬೆಲ್ಲ ಕೊರೋನಾ ಛಾಯೆ ಆವರಿಸಿಕೊಂಡಿತ್ತೋ ಆಗ ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದ ಕಿಮ್, ವೈರಸ್ಸು ತನ್ನ ದೇಶದ ಗಡಿ ದಾಟದಂತೆ ನೋಡಿಕೊಂಡಿದ್ದ. ಇದೀಗ ವಿಶ್ವದ ನಾನಾ ದೇಶಗಳಲ್ಲಿ ಕೊರೋನಾ ನಾಲಕ್ಕನೇ ಅಲೆಯ ಮುನ್ಸೂಚನೆ ಸಿಗಲಾರಂಭಿಸಿದೆ. ಕೊರೋನಾ ಜನ್ಮ ಸ್ಥಳ ಚೀನಾ ನಾಲಕ್ಕನೇ ಸುತ್ತಿನಲ್ಲಿ ಪಡಿಪಾಟಲು ಪಡುತ್ತಿದೆ. ನಮ್ಮದೇ ಭಾರತದಲ್ಲಿನ ನಾನಾ ಭಾಗಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ ಅಂತ ಮಾಧ್ಯಮಗಳು ಬೊಂಬಡ ಬಜಾಯಿಸುತ್ತಿವೆ. ಇಂಥಾ ಹೊತ್ತಿನಲ್ಲಿ ಉತ್ತರ ಕೊರಿಯಾದ ಸ್ಥಿತಿ ಹೇಗಿದೆ? ಅಲ್ಲಿನ ಮಂದಿ ಈ ಬಾರಿಯೂ ಸೇಫ್ ಜೋನಿನಲ್ಲಿದ್ದಾರಾ ಅಂತ ನೋಡಹೋದರೆ, ವಾತಾವರಣ ಖುಲ್ಲಂಖುಲ್ಲ ಪ್ರತಿಕೂಲವಾಗಿ…

Read More

ಸದಾ ಒಂದು ಹರಿವಿನಂಥಾ ಸ್ಥಿತಿ ಜಾರಿಯಲ್ಲಿಲ್ಲದೇ ಹೋದರೆ ಮನಷ್ಯರ ಮನಸು ನಾನಾ ಕಾಯಿಲೆ, ಮಾನಸಿಕ ತಲ್ಲಣಗಳ ಕೊಂಪೆಯಂತಾಗಿ ಬಿಡುತ್ತದೆ. ಸದಾ ಒಂದಷ್ಟು ಜನರೊಂದಿಗೆ ಬೆರೆಯುತ್ತಾ, ಅಡ್ಡಾಡುತ್ತಿರುವವರಿಗೆ ಗೃಹಬಂಧನ ವಿಧಿಸಿದರಂತೂ ಮಾನಸಿಕ ಸ್ಥಿತಿ ಸ್ಥಿಮಿತ ಕಳೆದುಕೊಂಡು ಬಿಡುತ್ತದೆ. ಹಾಗಾದರೆ ಕೊರೋನಾ ವೈರಸ್ ಬಾಧೆಯಿಂದ ಲಾಕ್‌ಡೌನ್ ಘೋಷಣೆಯಾದ ಬಳಿಕ ಜನ ತಿಂಗಳಿಂದೀಚೆಗೆ ಮನೆಯೊಳಗೇ ಬಂಧಿಯಾಗಿದ್ದಾರಲ್ಲಾ? ಈ ಸಂದರ್ಭದಲ್ಲಿ ಕೊರೋನಾಗಿಂತಲೂ ಭೀಕರವಾಗಿ ಜನರನ್ನು ಮಾನಸಿಕ ತೊಳಲಾಟಗಳು ಕಾಡೋದಿಲ್ಲವೇ. ಮಾನಸಿಕವಾಗಿ ಜನ ಅದ್ಯಾವ್ಯಾವರೀತಿಯಲ್ಲಿ ಬೇಯುತ್ತಿದ್ದಾರೆಂಬುದೆಲ್ಲ ಕೊರೋನಾ ಕಾಲದ ಅಧ್ಯಯನ ಯೋಗ್ಯ ಅಂಶಗಳೇ! ಕೊರೋನಾ ಅಂದರೊಂದು ವೈರಸ್. ಆದರದು ದೈಹಿಕವಾಗಿ ತಮ್ಮೊಳಗೆ ಸೇರಿ ಬಲಿ ಪಡೆಯುವ ಭಯವೇ ಅನೇಕರನ್ನು ನಾನಾ ಥರದಲ್ಲಿ ಮಾನಸಿಕವಾಗಿಯೂ ಹೈರಾಣು ಮಾಡಿ ಹಾಕುತ್ತಿದೆ. ಅದರಲ್ಲಿಯೂ ಇಂಥಾ ಭಯವೆಂಬುದು ಕನಸಿನ ರೂಪದಲ್ಲಿ ಹಲವರನ್ನು ಕಾಡುತ್ತಿದೆ ಅನ್ನೋದು ನಿಜಕ್ಕೂ ಇಂಟರೆಸ್ಟಿಂಗ್ ಸಂಗತಿ. ಕೆಲ ಮಂದಿಗಂತೂ ಕೊರೋನಾ ಭಯ ಗಾಢ ನಿದ್ದೆಯಿಂದೆದ್ದು ಬೆವರಾಡುವ ರೀತಿಯಲ್ಲಿ ಕಾಡುತ್ತಿದೆ. ಬಹುಶಃ ಒಂದಷ್ಟು ಮಂದಿ ಇಂಥಾ ಚಿತ್ರವಿಚಿತ್ರ ಅನುಭವಗಳನ್ನು ಮನಸಲ್ಲೇ ಇಟ್ಟುಕೊಂಡು ಮತ್ತಷ್ಟು…

Read More

ಅಲ್ಲಿಂದಲೇ ಹಬ್ಬುತ್ತಿದೆ ಗಾಂಜಾ ನಶೆ! ಬೆಂಗಳೂರೆಂಬ ಮಹಾನಗರದಿಂದ ಅಕ್ರಮ ವಲಸಿಗರನ್ನು ಹೊರ ದಬ್ಬಬೇಕೆಂಬ ಕೂಗು ಆಗಾಗ ಕೇಳಿ ಬಂದು ತಣ್ಣಗಾಗುತ್ತದೆ. ಹಾಗೆ ನಾನಾ ಥರದಲ್ಲಿ ಇಲ್ಲಿಗೆ ಬಂದು ಠಿಕಾಣಿ ಹೂಡಿರುವವರೆಲ್ಲ ಗಾಂಜಾ ಮಾಫಿಯಾವೂ ಸೇರಿದಂತೆ ಥರ ಥರದ ದಂಧೆಗಳಲ್ಲಿ ಭರಪೂರವಾಗಿಯೇ ಕಾಸೆಣಿಸುತ್ತಿದ್ದಾರೆ. ಓದುವ ನೆಪದಲ್ಲಿ ಇಲ್ಲಿ ಬೀಡು ಬಿಟ್ಟಿರುವ ವಿದೇಶಿ ವಿದ್ಯಾರ್ಥಿಗಳು ಶುದ್ಧಾನುಶುದ್ಧ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಕತ್ತಲಾವರಿಸುತ್ತಲೇ ಅಡ್ಡಾ ಹಾಕಿ ಹೊಟ್ಟೆತುಂಬಾ ಕುಡಿದು, ಗಾಂಜಾ ಸೇದಿ ತಾರಾಡುತ್ತಾ ಈ ಲಫಂಗರು ನಡೆಸುತ್ತಿರುವ ಅನಾಹುತಗಳು ಒಂದೆರಡಲ್ಲ. ಈ ಬಗ್ಗೆ ಆಗಾಗ ಮಾತಾಡುತ್ತಾ ಬಂದಿರೋ ಬೆಂಗಳೂರು ಪೊಲೀಸ್ ಆಯುಕ್ತರು ತಕ್ಷಣಕ್ಕೆ ಈ ಬಗ್ಗೆ ಗಮನಮ ಹರಿಸದೇ ಹೋದರೆ ಮತ್ತದೇ ಅನಾಹುತಗಳು ಪುನರಾವರ್ತನೆಯಾಗೋದರಲ್ಲಿ ಯಾವ ಅನುಮಾನವೂ ಇಲ್ಲ.ಅದೇನೇ ಸರ್ಕಸ್ಸು ನಡೆಸಿದರೂ ದಕ್ಷಿಣಾಫ್ರಿಕಾ ಮೂಲದ ಮಂದಿ ಬೆಂಗಳೂರಲ್ಲಿ ನಡೆಸುತ್ತಿರುವ ಅಕ್ರಮ ದಂಧೆಗಳನ್ನು ಮರೆಮಾಚಲು ಸಾಧ್ಯವಿಲ್ಲ. ಈ ಘಟನೆಯನ್ನಿಟಟುಕೊಂಡು ಬೆಂಗಳೂರಲ್ಲಿ ವಾಸ ಮಾಡುತ್ತಿರುವ ದಕ್ಷಿಣಾಫ್ರಿಕಾ ಖಂಡದ ಮಂದಿ ವಿಶ್ವದ ಮಾಧ್ಯಮಗಳ ಮುಂದೆ ನಿಂತು ಅಮಾಯಕರಂತೆ ಪೋಜು ಕೊಡುತ್ತಿದ್ದಾರೆ.…

Read More

ಹುಷಾರು ನಿಮಗೆ ಗೊತ್ತಿಲ್ಲದೆ ನಿಮ್ಮೊಳಗೂ ಅಡಗಿರಬಹುದು ಈ ರೋಗ! ಯಾವುದನ್ನೇ ಆದ್ರೂ ಆಳವಾಗಿ ಹಚ್ಚಿಕೊಳ್ತಾ ಹೋದಂತೆ ಅದೊಂದು ಕಾಯಿಲೆಯಾಗಿ ಬೇರಿಳಿಸೋ ಅಪಾಯವೇ ಹೆಚ್ಚು. ಕೆಲವೊಮ್ಮೆ ನಾವು ಮಾಮೂಲು ಅಂದುಕೊಳ್ಳೋ ಅದೆಷ್ಟೋ ಮಾನಸಿಕ ಪಲ್ಲಟಗಳು ನಮ್ಮನ್ನೇ ಹಿಂಸೆಗೀಡುಮಾಡೋ ಅಪಾಯವಿರುತ್ತೆ. ನಿಮಗೆ ಅಚ್ಚರಿಯಾದೀತು, ಆದ್ರೆ ಸಿನಿಮಾ, ಕ್ರೀಡೆ ಸೇರಿದಂತೆ ನೀವ್ಯಾರನ್ನಾದ್ರೂ ಅಪಾರವಾಗಿ ಹಚ್ಚಿಕೊಂಡ್ರೆ ಅದೂ ಕೂಡಾ ಒಂದು ಮಾನಸಿಕ ವ್ಯಾಧಿಯಾಗಿ ಮಾರ್ಪಾಡಾಗಬಹುದು. ಇದು ವಿಚಿತ್ರವಾದ್ರೂ ಸತ್ಯ. ವಿಶ್ವದಲ್ಲಿ ಅದೆಷ್ಟೋ ಮಂದಿ ಇಂಥಾದ್ದೊಂದು ಹೇಳಿಕೊಳ್ಳಲಾರದ ಕಾಯಿಲೆಯಿಂದ ಪರಿತಪಿಸ್ತಿದ್ದಾರೆ. ಸಾಮಾನ್ಯವಾಗಿ ಸಿನಿಮಾ ತಾರೆಯರ ಬಗ್ಗೆ ವಿಪರೀತ ಅಭಿಮಾನವಿರುತ್ತೆ. ಸಿನಿಮಾಗಳಲ್ಲಿ ಅಂಥವ್ರ ಅಭಿನಯ ನೋಡಿ ಮೆಚ್ಚಿಕೊಳ್ಳೋದು, ಅವರನ್ನೊಮ್ಮೆ ಭೇಟಿಯಾಗಬೇಕಂತ ಹಂಬಲಿಸೋದೆಲ್ಲ ಮಾಮೂಲಿ. ಆದ್ರೆ ಅದನ್ನ ಮೀರಿದ ಮತ್ತೊಂದು ಹಂತವಿದೆ. ಅದು ಸೀರಿಯಸ್ಸಾಗಿ ಅಂಥಾ ತಾರೆಯರೊಂದಿಗೆ ಲವ್ವಲ್ಲಿ ಬೀಳೋ ಹಂತ. ನೀವೇನಾದ್ರು ಆ ಘಟ್ಟ ತಲುಪಿಕೊಂಡಿದ್ದೀರಾದ್ರೆ ಕೊಂಚ ಯೋಚಿಸಿ ಅದ್ರಿಂದ ಹೊರ ಬನ್ನಿ. ಯಾಕಂದ್ರೆ ಅದೊಂದು ಭ್ರಾಮಕ ಕಾಯಿಲೆ! ಇಂಥಾ ಕಾಯಿಲೆಗೆ ಮನೋ ವೈದ್ಯರು ಎರಟೋಮೇನಿಯಾ ಎಂಬ ಹೆಸರಿಟ್ಟಿದ್ದಾರೆ. ಅದೇನಾದ್ರೂ…

Read More