Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಅದ್ಭುತ ಕಥೆ ಅಣಿಗೊಂಡಿದ್ದರ ಹಿಂದಿದೆ ಅಗಾಧ ಪರಿಶ್ರಮ! ಮೈಮೇಲಿನ ಮಚ್ಚೆಯಂತೆ ಮನಸಲ್ಲಿ ಬೇರೂರಿಕೊಂಡ ಒಂದು ಆಕಾಂಕ್ಷೆ, ಬದುಕೆಂಬುದು ಥರ ಥರದಲ್ಲಿ ಛಾಟಿ ಬೀಸಿದಾಗಲೂ ಸಾವರಿಸಿಕೊಂಡು ಇಷ್ಟದ ದಾರಿಯಲ್ಲಿ ಹೆಜ್ಜೆಯೂರುವ ಛಲ ಮತ್ತು ಅದಕ್ಕಾಗಿ ಮಾಡಿಕೊಳ್ಳುವ ಕ್ಷಣ ಕ್ಷಣದ ತಯಾರಿ… ಇಷ್ಟಿದ್ದು ಬಿಟ್ಟರೆ ಯಾರಿಗೇ ಆದರೂ ಗೆಲುವು ದಕ್ಕದಿರಲು ಸಾಧ್ಯವೇ ಇಲ್ಲ. ಅದರಲ್ಲಿಯೂ ಸಿನಿಮಾ ಎಂಬ ಮಾಯೆಯ ಬೆಂಬಿದ್ದವರಲ್ಲಿ ಇಂಥಾ ಕ್ವಾಲಿಟಿಗಳಿಲ್ಲದೇ ಹೋದರೆ ಒಂದಷ್ಟು ತಿಂಗಳ ಕಾಲ ಸಾವರಿಸಿಕೊಳ್ಳೋದೂ ಕಷ್ಟವಿದೆ. ಅಂಥಾದ್ದರ ನಡುವೆಯೇ ಜೈಸಿಕೊಂಡು ಮಹತ್ತರವಾದುದನ್ನು ಸಾಧಿಸಿದ ಛಲಗಾರರೂ ಇಲ್ಲಿದ್ದಾರೆ. ಇದೀಗ ಈ ವಾರವೇ ತೆರೆಗಾಣುತ್ತಿರುವ ವೀಲ್‌ಚೇರ್ ರೋಮಿಯೋ ಚಿತ್ರದ ಸಾರಥಿ ನಟರಾಜ್ ನಿಸ್ಸಂದೇಹವಾಗಿ ಆ ಸಾಲಿಗೆ ಸೇರ್ಪಡೆಗೊಳ್ಳುತ್ತಾರೆ! ಒಂದು ಸಿನಿಮಾ ತೆರೆಗಾಣೋ ಸಂದರ್ಭ ಬಂತೆಂದರೆ ಅದರ ಸುತ್ತ ಬೇರೆಯದ್ದೇ ಪ್ರಭೆ ಹಬ್ಬಿಕೊಂಡಿರುತ್ತೆ. ಆದರೆ ಆ ಝಗಮಗದಾಚೆಗೆ ಆ ಸಿನಿಮಾದ ಭಾಗವಾದ ಅದೆಷ್ಟೋ ಜೀವಗಳ ನೋವು ನಲಿವಿನ ಸದ್ದಿರುತ್ತದೆ. ಅದಕ್ಕೆ ಕಿವಿಯಾದರೆ ಮಾತ್ರ ಭಿನ್ನವಾದ ಮತ್ತೊಂದಷ್ಟು ಕಥಾನಕಗಳು ಬಿಚ್ಚಿಕೊಳ್ಳುತ್ತವೆ. ಈಗ ಬಿಡುಗಡೆಗೆ ತಯಾರಾಗಿರೋ…

Read More

ಶೋಧ ನ್ಯೂಸ್ ಡೆಸ್ಕ್:  ಇದೀಗ ದೇಶದ ತುಂಬೆಲ್ಲ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಪರವಾದ ಅಲೆ ಎದ್ದುಕೊಂಡಿದೆ. ಮಿಕ್ಕ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿ, ಧರ್ಮದಮಲಿನಲ್ಲಿ ಮಿಂದೇಳುತ್ತಿರುವಾಗ ಕೇಜ್ರಿವಾಲ್ ತಮ್ಮದೇ ಆದ ಅಭಿವೃದ್ಧಿ ಪಥವನ್ನು ಆಯ್ದುಕೊಂಡಿರೋದೇ ಅದಕ್ಕೆ ಕಾರಣ. ಹೀಗೆ ಎದ್ದಿರುವ ಅಲೆಯಲ್ಲಿ ತೂರಿಕೊಂಡು ಅಧಿಕಾರ ಹಿಡಿಯುವ ಆಸೆಯಿಂದಲೇ ಒಂದಷ್ಟು ಮಂದಿ ಆಮ್ ಆದ್ಮಿ ಪಕ್ಷ ಸೇರಿಕೊಂಡಿದ್ದೂ ಇದೆ. ಆ ಸಾಲಿನಲ್ಲಿ ಉತ್ತರಾಖಂಡದ ಎಎಪಿ ನಾಯಕರಾಗಿ ಗುರುತಿಸಿಕೊಂಡು, ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿಯೂ ಬಿಂಬಿತರಾಗಿದ್ದ ಅಜಯ್ ಕೊಥಿಯಾಲ್ ಕೂಡಾ ಸೇರಿಕೊಂಡಿದ್ದಾರೆ. ಯಾಕೆಂದರೆ, ಅವರೀಗ ಏಕಾಏಕಿ ಎಎಪಿಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿಕೊಂಡಿದ್ದಾರೆ. ಅಜಯ್ ಕೊಥಿಯಾಲ್ ನಿವೃತ್ತ ಕರ್ನಲ್. ಕಳೆದ ವಿಧಾನಸಭಾ ಚುನಾವಣೆಯ ಹೊತ್ತಿಗೆಲ್ಲ ಅವರು ಉತ್ತರಾಖಂಡದ ತುಂಬ ಶೈನಪ್ ಆಗಿದ್ದರು. ಒಂದು ವೇಳೆ ಎಎಪಿ ಗೆದ್ದರೆ ಖಂಡಿತಾ ಕೊಥಿಯಾಲ್ ಸಿಎಂ ಆಗುತ್ತಾರೆಂಬಂತೆ ಸುದ್ದಿಗಳು ಹಬಬಿಕೊಂಡಿದ್ದವು. ಆದರೆ ಅದು ಹೇಗೋ ಅಲ್ಲಿ ಬಿಜೆಪಿ ಜಯಭೇರಿ ಭಾರಿಸಿತ್ತು. ಚುನಾವಣೆಗೂ ಮುನ್ನ ಮಹತ್ತರವಾದುದೇನನ್ನೋ ಮಾಡುವಂತೆ ಭ್ರಮೆ…

Read More

ದೂರದೂರಿನಿಂದ ಗುರುಗ್ರಾಮ್‌ಗೆ ಬಂದಿದ್ದ ಪ್ಯಾಷನ್ ಡಿಸೈನರ್ ಒಬ್ಬಳು ಹದಿನಾಲಕ್ಕನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ. ಗುರುಗ್ರಾಮ್‌ನ ಫರಿದಾಬಾದ್ ರಸ್ತೆಯಲ್ಲಿರುವ ಗ್ವಾಲ್ ಪಹಾರಿಯಾ ವ್ಯಾಲಿ ವ್ಯೂ ಪ್ಲಾಟಿನಲ್ಲಿ ವಾಸವಿದ್ದ ಇಪ್ಪತೈದು ವರ್ಷದ ಫ್ಯಾಶನ್ ಡಿಸೈನರ್ ಚಾರು ಖುರಾನಾ ಆತ್ಮಹತ್ಯೆ ಮಾಡಿಕೊಂಡಿರುವಾಕೆ. ಸೋಮವಾರ ರಾತ್ರಿ ಒಂಭತ್ತೂವರೆಯ ಸುಮಾರಿಗೆ ಚಾರು ಹದಿನಾಲಕ್ಕನೇ ಮಹಡಿಯಿಂದ ಜಿಗಿದಾಗ ಆಸುಪಾಸಿನ ಮಂದಿ ಕಂಗಾಲಾಗಿ ಸುತ್ತ ನೆರೆದದಿದ್ದರು. ಅದರಲ್ಲೊಂದಷ್ಟು ಮಂದಿ ಹತ್ತಿರದ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದರು. ತಕ್ಷಣವೇ ಸ್ಥಳಕ್ಕಾಗಮಿಸಿದ್ದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಚಾರು ಅಸನೀಗಿದ್ದಳು. ಆದರೆ ಸ್ಥಳ ಪರಿಶೀಲನೆ ನಡೆಸಿದರೂ ಕೂಡಾ ಪೊಲೀಸರಿಗೆ ಡೆತ್ ನೋಟ್ ಸೇರಿದಂತೆ ಯಾವ ಮಾಹಿತಿಯೂ ಸಿಕ್ಕಿಲ್ಲ. ಗುರುಗ್ರಾಮ್‌ಗೆ ಆಗಮಿಸಿದ ಪೋಶಕರೂ ಕೂಡಾ ಆ ಆತ್ಮಹತ್ಯೆಯ ಬಗ್ಗೆ ಬೇರ‍್ಯಾವ ಮಾತುಗಳನ್ನೂ ಆಡಿಲ್ಲ. ಈ ಕಾರಣಂದಿಂದ ಪೋಸ್ಟ್ ಮಾರ್ಟಮ್ ನಡೆಸಿದ ಬಳಿಕ ಪೊಲೀಸರು ಶವವನ್ನು ಪೋಶಕರಿಗೆ ಒಪ್ಪಿಸಿದ್ದಾರೆ. ಮೇಲುನೋಟಕ್ಕೆ ಇದೊಂದು ಆತ್ಮಹತ್ಯೆಯಂತೆ ಕಾಣಿಸುತ್ತಿದೆ. ಅದರ ಹಿಂದೆ ಬೇರೆ ಏನಾದರೂ…

Read More

ಐದು ವರ್ಷಗಳ ಬಳಿಕ ಸೆರೆಸಿಕ್ಕ ಹಂತಕರು! ಕೊಲೆಗಡುಗರು, ಪಾತಕಿಗಳು ಅದೆಷ್ಟೇ ಬುದ್ಧಿವಂತರಾದರೂ ಕಾನೂನಿನ ಪರಿಧಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ… ಇದು ಸಿನಿಮಾ ಡೈಲಾಗಿನಂತೆ ಕಂಡರೂ ವಾಸ್ತವವಾಗಿಯೂ ಪದೇ ಪದೆ ಸಾಬೀತಾಗುತ್ತಿರುವ ಸತ್ಯ. ಅದನ್ನು ಸುಳ್ಳಾಗದಂತೆ ಕಾಪಿಟ್ಟುಕೊಳ್ಳುವ ನಿಟ್ಟಿನಲ್ಲಿ ಖಾಕಿ ಪಡೆ ಹಗಲಿರುಳೆನ್ನದೆ ಶ್ರಮಿಸುತ್ತಿದೆ. ಕೊಲೆಗಡುಕರು ಅದೆಷ್ಟೇ ಪಟ್ಟು ಹಾಕಿದರೂ ಯಾವುದಾದರೊಂದು ರೂಪದಲ್ಲಿ ಕೆಡವಿಕೊಂಡೇ ತೀರೋದು ಪೊಲೀಸರ ಸ್ಪೆಷಾಲಿಟಿ. ಅದಕ್ಕೆ ಸೂಕ್ತ ಉದಾಹರಣೆಯೊಂದು ಇದೀಗ ಸಿಕ್ಕಿದೆ; ಹಳೇಯ ಚಿನ್ನಾಭರಣ ಖರೀದಿಸುವ ನೆಪದಲ್ಲಿ ಓರ್ವನನ್ನು ಕೊಂದಿದ್ದ ಹಂತಕ ಐದು ವರ್ಷಗಳ ನಂತರ ಸಿಕ್ಕಿ ಬೀಳುವ ಮೂಲಕ! ಆಡುಗೋಡಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮೈಸೂರಿನ ಹೆಬ್ಬಾಳ ಮೂಲದ ಮಧು ಎಂಬಾತನನ್ನು ಬಂಧಿಸಲಾಗಿದೆ. ಇಷ್ಟರಲ್ಲಿಯೇ ಆ ಕೊಲೆಯಲ್ಲಿ ಭಾಗಿಯಾಗಿದ್ದ ಇನ್ನುಳಿದ ಐವರನ್ನೂ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದು ೨೦೧೪ರಲ್ಲಿ ನಡೆದಿದ್ದ ಕೊಲೆ ಪ್ರಕರಣ. ಮಧು ತನ್ನ ಐವರು ಸ್ನೇಹಿತರೊಂದಿಗೆ ಸೇರಿಕೊಂಡು ಆಡುಗೋಡಿಯ ಶ್ರೀಮಂತರಾದ ಉದಯ ರಾಜ್ ಸಿಂಗ್‌ರ ಮನೆಗೆ ಭೇಟಿ ನೀಡಿದ್ದರು. ಅದು ಹೇಗೋ ಅವರಿಗೆ ಮಾತಲ್ಲಿಯೇ…

Read More

ಖತ್ರಾ ಚಿತ್ರಕ್ಕೆ ಮಡಿವಂತಿಕೆಯ ಕತ್ತರಿ! ಪ್ರಸಿದ್ಧ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಸಿನಿಮಾ ಮೂಲಕ ಸದ್ದು ಮಾಡೋದನ್ನು ನಿಲ್ಲಿಸಿ ಒಂದಷ್ಟು ವರ್ಷಗಳೇ ಕಳೆದು ಹೋಗಿವೆ. ವರ್ಮಾರ ಬತ್ತಳಿಕೆಯಲ್ಲಿ ಸರಕುಗಳು ಮುಗಿದು ಹೋಗಿವೆ ಎಂಬಂಥಾ ಆರೋಪಗಳೂ ಕೂಡಾ ಆಗಾಗ ಕೇಳಿ ಬರುತ್ತವೆ. ಆದರೆ ಇದ್ಯಾವುದಕ್ಕೂ ಕೇರು ಮಾಡುವ ಜಾಯಮಾನ ವರ್ಮಾರದ್ದಲ್ಲ. ಕೆಲವೊಮ್ಮೆ ತೀರಾ ತಲೆ ಕೆಟ್ಟಂಥಾ ಹೇಳಿಕೆ ಕೊಡುತ್ತಾ, ಮತ್ತೆ ಕೆಲವೊಮ್ಮೆ ಯಾರೇ ಆದರೂ ತಲೆ ಕೆಡಿಸಿಕೊಳ್ಳುವಂಥಾ ವಿಚಾರಗಳನ್ನು ಹರಿಯಬಿಡುತ್ತಾ ವರ್ಮಾ ಸದಾ ಕಾಲವೂ ಚಾಲ್ತಿಯಲ್ಲಿರುತ್ತಾರೆ. ಅಂಥಾ ವರ್ಮಾ ಈ ಬಾರಿ ಖುದ್ದಾಗಿ ತಲೆಕೆಡಿಸಿಕೊಂಡಿದ್ದಾರೆ. ಅದಕ್ಕೆ ಕಾರಣವಾಗಿರೋದು ಅವರೇ ನಿರ್ದೇಶನ ಮಾಡಿರುವ ಖತ್ರಾ ಚಿತ್ರದ ಹೀನಾಯ ಸೋಲು! ರಾಮ್ ಗೋಪಾಲ್ ವರ್ಮಾ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸೆಕ್ಸ್ ಸಂಬಂಧಿತ ಕಥಾ ಹಂದರದತ್ತ ವಾಲಿಕೊಂಡಿದ್ದಾರೆ. ಒಂದು ಕಾಲದಲ್ಲಿ ಪ್ರೇಕ್ಷಕರ ನಾಡಿಮಿಡಿತವನ್ನು ಸಮರ್ಥವಾಗಿ ಅರ್ಥ ಮಾಡಿಕೊಂಡಿದ್ದ ಅವರೀಗ ಹೆಜ್ಜೆ ಹೆಜ್ಜೆಗೂ ಮುಗ್ಗರಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿ ಆ ಸರಣಿಗೆ ಸೇರ್ಪಡೆಗೊಂಡಿರುವ ಚಿತ್ರ ಖತ್ರಾ. ನಾಯಕಿಯನ್ನು ಬಟ್ಟೆ ಸುಲಿದು ನಿಲ್ಲಿಸಿದರೂ,…

Read More

ದೇಶಾದ್ಯಂತ ಸನ್ನಿಯಂತೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಕಾಮಪಿಪಾಸುಗಳಿಂದ ನಡೆಯುತ್ತಿರುವ ಈ ಒಂದೊಂದು ಘಟನಾವಳಿಗಳೂ ಕೂಡಾ ಮನುಷ್ಯ ಸಂಕುಲವನ್ನೇ ನಾಚಿಕೆಗೀಡು ಮಾಡುತ್ತಿವೆ. ಇಂಥಾದ್ದು ನಡೆದಾಗೆಲ್ಲ ಕೆಲ ಮಂದಿ ಮುಠ್ಠಾಳರು ಹೆಣ್ಣು ಮಕ್ಕಳು ಹಾಕಿಕೊಳ್ಳುವ ಬಟ್ಟೆಯತ್ತ, ಅವರ ನಡತೆಯತ್ತ ಬೊಟ್ಟು ಮಾಡಿ ತೋರಿಸೋದಿದೆ. ಆದರೆ ಅದರ ಹಿಂದಿರೋದೊಂದು ಪೈಶಾಚಿಕ, ಕೊಳಕು ಮನಸ್ಥಿತಿ ಮಾತ್ರ ಎಂಬುದು ಅಂತಿಮ ಸತ್ಯ. ಈ ವಾದಕ್ಕೆ ಪುರಾವೆವೆಂಬಂಥಾ ಅನೇಕಾರು ಹೇಸಿಗೆಯ ಕೃತ್ಯಗಳು ಈಗಾಗಲೇ ನಡೆದಿವೆ. ಮುಂಬೈನಲ್ಲಿ ನಡೆದಿರುವ ಭೀಕರ ಘಟನೆ ಅದರ ಮುಂದುವರೆದ ಭಾಗದಂತೆ ಕಾಣಿಸುತ್ತಿದೆ. ಮುಂಬೈನ ಶಾಲೆಯೊಂದರಲ್ಲಿ ಕೇವಲ ಐದು ವರ್ಷಗಳ ಪುಟ್ಟ ಹೆಣ್ಣು ಕೂಸಿನ ಮೇಲೆ ಶಾಲಾ ಸಹಾಯಕನೋರ್ವ ಅತ್ಯಾಚಾರವೆಸಗಲು ನೋಡಿದ್ದಾನೆ. ಶಾಲೆಯಲ್ಲಿ ಸಹಾಯಕರಾಗಿರುವವರ ಮೇಲೆ ಮಕ್ಕಳಿಗೆ ಶಿಕ್ಷಕರಿಗಿಂತಲೂ ಹೆಚ್ಚೇ ಸಲುಗೆಯಿರುತ್ತದೆ. ಅದರಲ್ಲಿಯೂ ಇನ್ನೂ ಲೋಕವರಿಯದ ಐದು ವರ್ಷದ ಕಂದಮ್ಮನಿಗೆ ಇಂಥಾ ವಿಕೃತಿಗಳೆಲ್ಲ ಹೇಗೆ ಗೊತ್ತಾಗಲು ಸಾಧ್ಯ? ಆ ಸಹಾಯಕ ಅದನ್ನೇ ಬಂಡವಾಳವಾಗಿಸಿಕೊಂಡು ಆ ಮಗುವಿನ ಮೇಲೆ ನಾನಾ ಥರದಲ್ಲಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಇದೇ ಸೋಮವಾರ ಈ…

Read More

ಅಪರೂಪದ ಕಥೆ ಹುಟ್ಟಿದ್ದೇ ಒಂದು ಅಚ್ಚರಿ! ಸಿನಿಮಾವೊಂದು ಯಾವುದೇ ಪ್ರಚಾರದ ಪಟ್ಟುಗಳಿಲ್ಲದೆ, ಹೈಪುಗಳಿಲ್ಲದೆ ತಾನೇ ತಾನಾಗಿ ತನ್ನ ಕಂಟೆಂಟಿನ ಸುಳಿವಿನ ಮೂಲಕ ತಾಕುವುದಿದೆಯಲ್ಲಾ? ಅದು ಅತ್ಯಂತ ಅಪರೂಪದ ರೋಮಾಂಚಕ ವಿದ್ಯಮಾನ. ಕೆಲವೇ ಕೆಲ ಚಿತ್ರಗಳು ಮಾತ್ರವೇ ಇಂಥಾದ್ದೊಂದು ಮ್ಯಾಜಿಕ್ ಮಾಡಿ ಬಿಡುತ್ತವೆ. ಅಂಥಾ ಮ್ಯಾಜಿಕ್ಕಿಗೆ ತಾಜಾ ಉದಾಹರಣೆಯಾಗಿ ನಿಲ್ಲುವ ಚಿತ್ರ ವೀಲ್‌ಚೇರ್ ರೋಮಿಯೋ. ನಟರಾಜ್ ಚೊಚ್ಚಲ ನಿರ್ದೇಶನದ ಈ ಸಿನಿಮಾ ಈಗಾಗಲೇ ಎಲ್ಲಾ ವರ್ಗದ ಪ್ರೇಕ್ಷಕರನ್ನು ಪರಿಣಾಮಕಾರಿಯಾಗಿ ಹಿಡಿದಿಟ್ಟುಕೊಂಡಿದೆ. ಟ್ರೈಲರ್, ಹಾಡುಗಳ ಮೂಲಕ ಗಾಢ ಪರಿಣಾಮ ಬೀರಿರುವ ವೀಲ್‌ಚೇರ್ ರೋಮಿಯೋನ ಆಟ ಈ ವಾರ ರಾಜ್ಯಾದ್ಯಂತ ಶುರುವಾಗಲಿದೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸಹನಿರ್ದೇಶಕರಾಗಿ, ಯಶಸ್ವೀ ಸಂಬಾಷಣೆಕಾರರಾಗಿ ನೆಲೆ ಕಂಡುಕೊಂಡಿರುವವರು ನಟರಾಜ್. ಹದಿನೈದು ವರ್ಷಗಳಿಗೂ ಹೆಚ್ಚುಕಾಲದ ಅನುಭವದೊಂದಿಗೆ ಅವರೀಗ ಸ್ವತಂತ್ರ ನಿರ್ದೇಶಕರಾಗಿ ಅಡಿಯಿರಿಸಿದ್ದಾರೆ. ಈಗಾಗಲೇ ಟ್ರೈಲರ್ ಮತ್ತು ಚಿತ್ರತಂಡವೇ ಬಿಟ್ಟು ಕೊಟ್ಟಿರುವ ಸಣ್ಣ ಸಣ್ಣ ಕ್ಲೂಗಳ ಮೂಲಕ ರೋಮಿಯೋನ ಕಥೆ ಎಂಥಾದ್ದೆಂಬುದರ ಸುಳಿವು ಸಿಕ್ಕಿದೆ. ಅದುವೇ ಅಗಾಧ ಪ್ರಮಾಣದಲ್ಲಿ ನಿರೀಕ್ಷೆ ಹರಳುಗಟ್ಟುವಂತೆ ಮಾಡಿಬಿಟ್ಟಿದೆ.…

Read More

ಕರಣ್ ಮಾನ ಮೇಯ್ಲ್‌ನಲ್ಲಿದೆ! ಸಿನಿಮಾ ಮಂದಿ ನಾನಾ ಪ್ರಾಕಾರದಲ್ಲಿ ಕಳವು ಮಾಡೋದಕ್ಕೆ ಒಂದು ಸುದೀರ್ಘವಾದ ಇತಿಹಾಸವೇ ಇದೆ. ಇಂಥಾ ಅಕ್ಷರಗಳವು ವೃತ್ತಾಂತ ಕೇವಲ ಸಿನಿಮಾ ವಲಯಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಪತ್ರಿಕೋದ್ಯಮ ಸೇರಿದಂತೆ ಎಲ್ಲ ಕ್ರಿಯಾಶೀಲ ವಲಯಕ್ಕೂ ಹಬ್ಬಿಕೊಂಡಿದೆ. ಯಾರದ್ದೋ ಸರಕನ್ನು ತಮ್ಮದೆಂದು ಹೇಳಿಕೊಂಡು ಮೆರೆಯುವವರು, ಯಾರೋ ಬರೆದಿದ್ದಕ್ಕೆ ತಾನೇ ಅಪ್ಪ ಅಂದುಕೊಂಡು ಅವರಿವರ ಬಳಿ ಮೆಚ್ಚುಗೆ ಗಿಟ್ಟಿಸಿಕೊಳ್ಳುವವರು, ಕನಿಷ್ಟ ಒಂದು ಕ್ರೆಡಿಟ್ಟು ಕೊಡಬೇಕೆಂಬ ಖಬರೂ ಇಲ್ಲದ ಲಫಂಗರು ಈ ವಲಯಗಳಲ್ಲಿದ್ದಾರೆ. ಸಿನಿಮಾದಲ್ಲಂತೂ ಯಾರೋ ಕನಸು ಕಟ್ಟಿಕೊಂಡು ಕಥೆ ಬರೆದಿರುತ್ತಾರೆ. ಮತ್ಯಾರೋ ಅದನ್ನು ಲಪಟಾಯಿಸಿ ಮೈಲೇಜು ಪಡೆದುಕೊಳ್ಳುತ್ತಾರೆ. ಅಂಥಾದ್ದೊಂದು ಘನ ಗಂಭೀರ ಆರೋಪವೀಗ ಬಾಲಿವುಡ್ಡಿನ ನಿರ್ದೇಶಕ ಕಂ ನಿರ್ಮಾಪಕ ಕರಣ್ ಜೋಹರ್‌ಗೂ ಮೆತ್ತಿಕೊಂಡಿದೆ! ನಿರ್ದೇಶಕನಾಗಿ ಬಾಲಿವುಡ್ಡಿಗೆ ಪ್ರವೇಶ ಮಾಡಿ, ಆ ನಂತರದಲ್ಲಿ ನಿರ್ಮಾಪಕನಾಗಿಯೂ ನೆಲೆ ಕಂಡುಕೊಂಡಿರುವಾತ ಕರಣ್ ಜೋಹರ್. ಹೆಸರು, ಖ್ಯಾತಿ, ಹಣವೆಲ್ಲವನ್ನೂ ಮಾಡಿಕೊಂಡಿಕೊಂಡಿರುವ ಕರಣ್ ಧರ್ಮ ಪ್ರೊಡಕ್ಷನ್ಸ್ ಹೆಸರಿನಲ್ಲಿ ಸ್ವಂತದ ನಿರ್ಮಾಣ ಸಂಸ್ಥೆಯನ್ನೂ ಮಾಡಿಕೊಂಡಿದ್ದಾರೆ. ಅದರ ಕಡೆಯಿಂದ ಬಹು ಕೋಟಿ ಕಿಮ್ಮತ್ತಿನ…

Read More

ಶೋಧ ನ್ಯೂಸ್ ಡೆಸ್ಕ್: ಬಿಜೆಪಿ ಪ್ರಣೀತ ಮಸಲತ್ತುಗಳಿಂದಾಗಿ ದೇಶಾದ್ಯಂತ ಪಕ್ಷಾಂತರಿಗಳ ಹಾವಳಿ ಮೇರೆ ಮೀರಿಕೊಂಡಿದೆ. ಕಾಂಗ್ರೆಸ್ ಮುಕ್ತ ಭಾರತವೆಂಬ ಸಂವಿಧಾನ ವಿರೋಧಿ ಘೋಷಣೆಯೊಂದಿಗೆ ಒಂದು ಕಡೆಯಿಂದ ಕಾಂಗ್ರೆಸ್ಸಿನ ಮಂದಿಯನ್ನು ತಂದು ತುಂಬಿಕೊಳ್ಳುತ್ತಿರುವ ವರಿಷ್ಟರ ನಡೆ ಪಕ್ಷದ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಪಕ್ಷಾಂತರ ಪರ್ವದ ಭಾಗವಾಗಿಯೇ ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್ಸಿನ ಅರ್ಜುನ್ ಸಿಂಗ್ ಬಿಜೆಪಿ ಸೇರಿಕೊಂಡಿದ್ದರು. ಭಾರೀ ಹುಮ್ಮಸ್ಸಿನಿಂದ ಬಿಜೆಪಿ ಸೇರಿಕೊಂಡಿದ್ದ ಅವರೀಗ ಹಠಾತ್ತನೆ ಮತ್ತೆ ಹಳೇ ದೊಡ್ಡಿ ಸೇರಿಕೊಂಡಿದ್ದಾರೆ! ಕಳೆದ ಲೋಕಸಭಾ ಚುನಾವಣೆಯ ಹೊತ್ತಿಗೆಲ್ಲ ಅರ್ಜುನ್ ಸಿಂಗ್ ಏಕಾಏಕಿ ಬಿಜೆಪಿ ಪಾಳೆ ಸೇರಿಕೊಂಡಿದ್ದರು. ಹೀಗೆಯೇ ಅನೇಕ ಮಂದಿ ಟಿಎಂಸಿಯಿಂದ ಬಿಜೆಪಿಗೆ ನೆಗೆದಿದ್ದರು. ಇದಕ್ಕೆ ಫಲವಾಗಿ ಅರ್ಜುನ್‌ರನ್ನು ಬಿಜೆಪಿ ವೈಸ್ ಪ್ರೆಸಿಡೆಂಟ್ ಕೂಡಾ ಮಾಡಿತ್ತು. ಆದರೆ ಸ್ವಪಕ್ಷದಿಂದಲೇ ಅವರಿಗೆ ಹೇಳಿಕೊಳ್ಳುವಂಥಾ ಸಹಕಾರ ಸಿಕ್ಕಿರಲಿಲ್ಲ. ಅದಾಗಿ ಸ್ವಲ್ಪ ದಿನ ಕಳೆಯೋದರೊಳಗೆ ಮಮತಾ ಬ್ಯಾನರ್ಜಿ ಬಿಜೆಪಿಗೆ ಸೆಡ್ಡು ಹೊಡೆದು ಗೆದ್ದು ಬಂದಿದ್ದಾರೆ. ಆ ಪಲ್ಲಟದಿಂದಾಗಿ ಬಿಜೆಪಿ ಸೇರಿದ್ದ ಒಂದಷ್ಟು ಮಂದಿ ಮತ್ತೆ ಟಿಎಂಸಿ…

Read More

ಶೋಧ ನ್ಯೂಸ್ ಡೆಸ್ಕ್: ಅದೆಷ್ಟೋ ಮಂದಿ ಜೀವ ಉಳಿಸಿಕೊಳ್ಳುವುದಕ್ಕಾಗಿ, ಬದುಕೋದಕ್ಕಾಗಿ ಸಾಕಷ್ಟು ಕಸರತ್ತುಗಳನ್ನು ನಡೆಸುತ್ತಾರೆ. ಅದೇ ಹೊತ್ತಿನಲ್ಲಿ ಮತ್ತೊಂದಷ್ಟು ಮಂದಿ ಇರೋ ಗಟ್ಟಿಮುಟಾದ ದೇಹದ ಮೂಳೆ ಮುರಿಸಿಕೊಳ್ಳಲು, ನಡು ಬೀದಿಯಲ್ಲಿ ಕಣ್ಮುಚ್ಚಿ, ಮತ್ತೊಂದಷ್ಟು ಮಂದಿಯ ಜೀವ ತೆಗೆಯಲು ಮಾಡಬಾರದ ಸರ್ಕಸ್ಸು ನಡೆಸುತ್ತಾರೆ. ಪೊಲೀಸ್ ವ್ಯವಸ್ಥೆ ಅದೆಷ್ಟೇ ಕಣ್ಗಾವಲಿಟ್ಟರೂ ಇಂಥಾ ಕಚೇಷ್ಟೆಗಳು ಮಾತ್ರ ಕೊಂಚವೂ ತಗ್ಗುತ್ತಿಲ್ಲ. ಇದರ ಭಾಗವಾಗಿಯೇ ಹಾದಿ ಬೀದಿಗಳಲ್ಲಿ ವೀಲಿಂಗ್ ಮಾಡುವಂಥಾ ಹುಚ್ಚು ಆಗಾಗ ಕೆದರಿಕೊಳ್ಳುತ್ತೆ. ಆದರೆ ನೋಯ್ಡಾದಲ್ಲೊಬ್ಬ ಇಂಥಾ ತಿರ್ಕೆ ಶೋಕಿಯ ಉಚ್ಛ್ರಾಯ ಸ್ಥಿತಿ ತಲುಪಿಕೊಂಡಿದ್ದಾನೆ. ಈ ಆಸಾಮಿ ಬೈಕ್‌ನಲ್ಲಿ ವೀಲಿಂಗ್ ನಡೆಸಿ ಹುಚ್ಚಾಟ ನಡೆಸುವ ವಿಡಿಯೋ ಮತ್ತು ಎರಡು ಚಲಿಸುವ ಎಸ್‌ಯುವಿ ಕಾರುಗಳ ಬಾನೆಟ್ಟಿನಲ್ಲಿ ನಿಂತು ಸವಾರಿ ಮಾಡೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಾಹನಗಳು ಅತಿಯಾಗಿ ಓಡಾಡೋ ರಸ್ತೆಯಲ್ಲಿ ನಡೆದ ಈ ಹುಚ್ಚಾಟ ಕಂಡು ಕಾಳಜಿಯುಳ್ಳ ನೆಟ್ಟಿಗರೆಲ್ಲ ಗರಂ ಆಗಿದ್ದರು. ಅದು ನಿಜಕ್ಕೂ ಅತ್ಯಂತ ಅಪಾಯಕರವಾದ ಸ್ಟಂಟು. ನಡು ರಸ್ತೆಯಲ್ಲಿ ಚಲಿಸುತ್ತಿರುವ ಎರಡು ಕಾರುಗಳ…

Read More