Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಕೊರೋನಾ ಮರೆಯಾದ ಮೇಲೆ ನಾಯಿ ಬಾಲ ಡೊಂಕು! ಶೋಧ ನ್ಯೂಸ್ ಡೆಸ್ಕ್: ಈ ಮನುಷ್ಯ ಪ್ರಾಣಿಗಳು ಕೊರೋನಾದಂಥಾ ಸಾಂಕ್ರಾಮಿಕ ಕಾಯಿಲೆ ಬಂದು ಎಂತೆಂಥಾ ಪಾಠ ಕಲಿಸಿದರೂ ಬುದ್ಧಿ ಕಲಿಯುವುದಿಲ್ಲ. ಮುಂದ್ಯಾವತ್ತಾದರೂ ಕಲಿಯಬಹುದೆಂಬ ನಿರೀಕ್ಷೆಗಳೂ ತಪ್ಪೇನೋ. ಕೊರೋನಾ ಬಂದಾಗ ಆಕ್ಸಿಜನ್ನಿಗೂ ಗತಿಯಿಲ್ಲದೆ ಜನರೆಲ್ಲ ಹುಳುಗಳಿಗಿಂತಲೂ ಕಡೆಯಾಗಿ ನರಳಿ ಸತ್ತಿದ್ದರು. ಮನೆಯೊಳಗೇ ಕುಂತು ಅದನ್ನು ಕಂಡ ಮಂದಿಗೆ ನಖಶಿಖಾಂತ ಪರಿಸರ ಪ್ರೇಮ ಉಕ್ಕಿ ಹರಿದಿತ್ತು. ಪರಿಸರದ ಬಗ್ಗೆ ಕಾಳಜಿಯೇನು? ಅದರ ಬಗ್ಗೆ ಕೂತಲ್ಲಿಂದಲೇ ಮಾಡಿದ ತಿಳಿವು ಮೂಡಿಸುವ ಯಾರ್ಯ ನಡೆಸಿದ್ದೇನು… ಇದೀಗ ಕೋವಿಡ್ ರುದ್ರನರ್ತನ ಕೊಂಚ ಕಡಿಮೆಯಾಗಿದೆ. ಮನುಷ್ಯರ ಬುದ್ಧಿಯೆಂಬೋ ನಾಯಿ ಬಾಲ ಮತ್ತೆ ಡೊಂಕಾಗಿದೆ. ಕೊರೋನಾ ಅಮರಿಕೊಂಡಾಗ ಆಕ್ಸಿಜನ್ನು ಸಿಗದೆ ನರಳಾಡಿದೆವಲ್ಲಾ? ಆಗ ನಮಗೆಲ್ಲ ಪ್ರಕೃತಿ ಪುಕ್ಕಟೆ ಕೊಡುವ ಆಕ್ಸಿಜನ್ನಿನ ಬಗ್ಗೆ ಅರಿವಾಗಿತ್ತು. ಪ್ರಕೃತಿಯನ್ನು ಕಲುಷಿತಗೊಳಿಸದೆ ಅದರ ಪಾಡಿಗದನ್ನು ಬಿಡಬೇಕೆಂಬ ಬುದ್ಧಿಯೂ ಬಂದಿತ್ತು. ಆದರೆ ಜನ ಎಂಥಾ ದುಷ್ಟತನ ಹೊಂದಿದ್ದಾರೆಂಬುದಕ್ಕೆ ಪ್ರವಾಸಿ ತಾಣಗಳಲ್ಲಿ ರಾಶಿ ಬಿದ್ದಿರುವ ಕಸ, ಪ್ಲಾಸ್ಟಿಕ್ಕು ಐಟಮ್ಮುಗಳಿಗಿಂತಲೂ ಬೇರೆ ಉದಾಹರಣೆ…

Read More

ಆತ ಬ್ರಿಟಿಷರ ಬಂದೂಕಿಗೆ ಎದೆಯೊಡ್ಡಿದ್ದ ದ ಗ್ರೇಟ್ ಗಾಮ! ನಾನಾ ಕ್ಷೇತ್ರಗಳಲ್ಲಿ ಪ್ರಸಿದ್ಧರಾದವರನ್ನು ಗೂಗಲ್ ಎಂಜಿನ್ನಿನ ಡೂಡಲ್‌ನಲ್ಲಿ ಗೌರವಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ನಮ್ಮ ವರನಟ ಡಾ ರಾಜ್‌ಕುಮಾರ್ ಕೂಡಾ ಆ ಗೌರವಕ್ಕೆ ಪಾತ್ರರಾಗಿದ್ದಾರೆ. ಅದನ್ನು ಕಂಡು ಸಮಸ್ತ ಕನ್ನಡಿಗರೂ ಹೆಮ್ಮೆಪಟ್ಟುಕೊಂಡಿದ್ದಾರೆ. ಆದರೆ ಬಹಳಷ್ಟು ಸಲ ಹೀಗೆ ಡೂಡಲ್ಲಿನಲ್ಲಿ ಗೌರವಿಸಲ್ಪಡುವವರ ಬಗ್ಗೆ ಆ ಕ್ಷಣದವರೆಗೂ ಬಹುತೇಕರಿಗೆ ಏನೆಂದರೆ ಏನೂ ಅರಿವಿರುವುದಿಲ್ಲ. ಇದೀಗ ಗಾಮಾ ಪೈಲ್ವಾನ್‌ರನ್ನು ಗೂಗಲ್ ಅದೇ ರೀತಿಯಲ್ಲಿ ಗೌರವಿಸಿದೆ. ಈ ಹೊತ್ತಿನಲ್ಲಿ ಮತ್ತೆ ಈ ಪೈಲ್ವಾನ್ ಯಾರು? ಅವರ ಹಿನ್ನೆಲೆಯೇನು? ಅವರು ಮಾಡಿರುವ ಸಾಧನೆಗಳೇನು ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಕೆದಕುತ್ತಾ ಹೋದರೆ ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳು ಜಾಹೀರಾಗುತ್ತವೆ. ಗಾಮಾ ಪೈಲ್ವಾನ್ ಭಾರತದ ಹೆಮ್ಮೆಯ ಕುಸ್ತಿ ಪಟು. ಇಡೀ ವಿಶ್ವ ಮಟ್ಟದಲ್ಲಿ ಕುಸ್ತಿಪಟುವಾಗಿ ಹೆಸರುವಾಸಿಯಾಗಿದ್ದ ಗಾಮ, ೧೯೧೦ರಲ್ಲಿ ಭಾರತಕ್ಕೆ ವಿಶ್ವ ಕುಸ್ತಿ ಪ್ರಶಸ್ತಿಯನ್ನು ತಂದು ಕೊಟ್ಟಿದ್ದರು. ಇವರ ಮೂಲ ಹೆಸರು ಗುಲಾಮ್ ಮೊಹಮದ್. ಪಂಜಾಬಿನ ಅಮೃತಸರದ ಬಡ ಕುಟುಂಬದಲ್ಲಿ…

Read More

ಇದೀಗ ದಕ್ಷಿಣ ಭಾರತದ ಚಿತ್ರಗಳನೇಕವು ದೇಶ ವಿದೇಶಗಳಲ್ಲಿ ಸದ್ದು ಮಾಡುತ್ತಿವೆ. ಭಾರತೀಯ ಚಿತ್ರ ರಂಗವೆಂದರೆ ಬಾಲಿವುಡ್ ಮಾತ್ರ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದ ಮಂದಿ ಈ ಬೆಳವಣಿಗೆಗಳ ವಿರುದ್ಧ ಕುದ್ದು ಹೋಗಿದ್ದಾರೆ. ಆದರೆ ಕ್ವಾಲಿಟಿ ಕಂಟೆಂಟಿನ ಮೂಲಕವಷ್ಟೇ ಸಾಬೀತಾಗಬೇಕಿರೋ ಈ ವಿಚಾರದ ಮುಂದೆ ಒಣ ಮಾತುಗಳು, ದೌಲತ್ತಿನ ಹೇಳಿಕೆಗಳೆಲ್ಲವೂ ಮಂಕು ಹೊಡೆಯುತ್ತಿವೆ. ಒಂದು ಕಾಲದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗಗಳನ್ನು ಕಾಲ ಕಸಕ್ಕಿಂತಲೂ ಕಡೆಯಾಗಿ ನೋಡುತ್ತಿದ್ದವರೆಲ್ಲ ಪ್ರತಿಭೆಯ ಮೂಲಕವೇ ಕಂಡು ಬರುತ್ತಿರುವ ಪ್ರತಿರೋಧಗಳನ್ನು ಕಂಡು ಕಂಗಾಲಾಗಿದ್ದಾರೆ. ಹೀಗೆ ಭಾಷೆ ಭಾಷೆಗಳ ನಡುವೆ ಸಿನಿಮಾ ಮಾಧ್ಯಮದಲ್ಲಿಯೂ ಬೆಂಕಿ ಬಿದ್ದಿರುವ ಈ ಘಳಿಗೆಯಲ್ಲಿ ಪ್ರಸ್ತುತ ಸನ್ನಿವೇಶದ ಬಗ್ಗೆ ಮಂಗಳೂರು ಮೂಲದ ನಟಿ ಪೂಜಾ ಹೆಗ್ಡೆ ತನ್ನ ಅಭಿಪ್ರಾಯ ಮಂಡಿಸಿದ್ದಾಳೆ. ಹಿಂದಿ ಮತ್ತು ದಕ್ಷಿಣ ಭಾರತೀಯ ಚಿತ್ರಗಳ ಬಗ್ಗೆ ಇದೀಗ ಚರ್ಚೆಗಳು ನಡೆಯುತ್ತಿವೆಯಲ್ಲಾ? ಈ ಬಗ್ಗೆ ಪೂಜಾ ಹೆಗ್ಡೆ ಬಿಡುಬೀಸಾಗಿ ಮಾತಾಡಿದ್ದಾಳೆ. ನಾವೆಲ್ಲರೂ ಒಂದೇ ದೇಶದವರು ಮತ್ತು ಇದು ಎಲ್ಲವೂ ಒಗ್ಗೂಡಿರುವ ಭಾರತೀಯ ಚಿತ್ರರಂಗ ಎಂಬ ಅಭಿಪ್ರಾಯ ಹೊರಹಾಕಿದ್ದಾಳೆ. ಹೀಗಹೆ…

Read More

ಈ ಜೀವಜಗತ್ತಿನ ಅಚ್ಚರಿಗಳು ಮೊಗೆದಷ್ಟೂ ಮತ್ತೆ ಮತ್ತೆ ಉತ್ಪತ್ತಿಯಾಗುತ್ತಿರುತ್ತವೆ. ಇದುವರೆಗೂ ಹಲವಾರು ಮಂದಿ ಇಂಥಾ ಅಚ್ಚರಿಗಳನ್ನು ತಡಕಾಡೋದನ್ನೇ ಧ್ಯೇಯವಾಗಿಸಿಕೊಂಡು ಬದುಕಿದ್ದಾರೆ. ಜೀವ ಸಂಕುಲದ ನಾನಾ ಅಚ್ಚರಿಗಳನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ. ಒಂದು ಜೀವಿಯ ಸೂಕ್ಷ್ಮ ಕದಲಿಕೆಗಳಿಗೂ ಕಣ್ಣಾಗುತ್ತಾ, ಅದರ ಜೀವನ ಕ್ರಮವನ್ನು ಅಭ್ಯಸಿಸೋದೆಂದರೆ ಅದೇನು ಸಾಮಾನ್ಯದ ಸಂಗತಿಯಾ? ಈ ನಿಟ್ಟಿನಲ್ಲಿ ಹೇಳುವುದಾದರೆ ಜೀವ ಜಗತ್ತಿನ ಬಗ್ಗೆ ಈಗ ಆಗಿರುವಂಥಾ ಸಂಶೋಧನೆಗಳನ್ನು ವಿಶಾಲ ಸಮುದ್ರದ ಒಂದಷ್ಟು ಹನಿಗಳಿಗಷ್ಟೇ ಹೋಲಿಸಬಹುದೇನೋ… ಸಮುದ್ರ ಜೀವಿಯಾದ ಆಕ್ಟೋಪಸ್ ಅನ್ನೇ ತೆಗೆದುಕೊಳ್ಳಿ… ಅದು ಮೊಟ್ಟೆಯಿಟ್ಟು ಮರಿ ಮಾಡೋದರಿಂದ ಹಿಡಿದು ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ. ಹಾಗಂತ ಇದಿಷ್ಟೇ ಆಕ್ಟೋಪಸ್ಸಿನ ಜೀವನ ಕ್ರಮ ಅಂತ ಷರಾ ಬರೆಯಲು ಸಾಧ್ಯವಿಲ್ಲ. ಯಾಕೆಂದರೆ, ಆಕ್ಟೋಪಸ್ ಜೀವನ ಕ್ರಮದಲ್ಲಿ ಮನುಷ್ಯನ ಕಣ್ಣಿಗೆ ನಿಲುಕದ ಅದೆಷ್ಟೋ ವಿಚಾರಗಳು ಬಾಕಿ ಉಳಿದುಕೊಂಡಿವಿ. ಇದೀಗ ಯಾರಿಗೇ ಆದರೂ ಅಚ್ಚರಿಯಾಗುವಂಥಾ ಮತ್ತೊಂದು ವಿಚಾರ ಅನಾವರಣಗೊಂಡಿದೆ. ಅದರನ್ವಯ ಹೇಳೋದಾದರೆ, ಒಂದು ಹಂತದಲ್ಲಿ ಈ ಆಕ್ಟೋಪಸ್ಸಿನ ದೇಹದ ತುಂಬೆಲ್ಲ ವಿಷಕಾರಕ…

Read More

ಶೋಧ ನ್ಯೂಸ್ ಡೆಸ್ಕ್: ಕೊರೋನಾದ ನಾಲ್ಕನೇ ಅಲೆ ಅಲ್ಲಲ್ಲಿ ವಿಶ್ವದ ನಾನಾ ದೇಶಗಳನ್ನು ಬಾಧಿಸಲಾರಂಭಿಸಿದೆ. ಬೇರೇನೂ ಸರಕು ಸಿಕ್ಕದೇ ಹೋದರೆ ಭಾರತೀಯ ದೃಷ್ಯ ಮಾಧ್ಯಮಗಳೂ ಕೂಡಾ ಆ ಬಗ್ಗೆ ಗಂಟಲು ಹರಿದುಕೊಂಡು ಬಯಬೀಳಿಸಲು ಸನ್ನದ್ಧವಾಗಿವೆ. ಇಂಥಾ ಹೊತ್ತಿನಲ್ಲಿ ಮತ್ತೊಂದು ಮಾರಕ ಸಾಂಕ್ರಾಮಿಕ ಜಗತ್ತನ್ನು ಕಂಗಾಲು ಮಾಡಿದೆ. ಮಂಕಿಪಾಕ್ಸ್ ಎಂಬ ಈ ಸಾಂಕ್ರಾಮಿಕ ಕಾಯಿಲೆ ಈಗಾಗಲೇ ವಿಶ್ಯಾದ್ಯಂತ ಹಬ್ಬಿಕೊಂಡು ಭಾರತಕ್ಕೂ ನುಸುಳಿದೆ. ಈ ಹಿಂದೆ ಚೀನಾದ ವುಹಾಂಗ್‌ನಲ್ಲಿಯೂ ಕೊರೋನಾ ವೈರಸ್ಸು ಇದೇ ರೀತಿ ಕಾಣಿಸಿಕೊಂಡಿತ್ತು. ಆ ಘಳಿಗೆಯಲ್ಲಿ ಅದು ಮುಂದೊಂದು ದಿನ ವಿಶ್ವಕ್ಕೇ ಹಬ್ಬಿಕೊಂಡು ನಮ್ಮನ್ನೂ ಕಾಡುತ್ತದೆಂಬ ಕಲ್ಪನೆ ಯಾರಿಗೂ ಇದ್ದಿರಲಿಕ್ಕಿಲ್ಲ. ಇದೀಗ ಮಂಕಿಪಾಕ್ಸ್ ಕೂಡಾ ಅಂಥಾದ್ದೇ ಡೇಂಜರಸ್ ರೂಪ ಧರಿಸಿಕೊಂಡು ಮುಂದುವರೆಯುತ್ತಿದೆ. ವಿಶೇಷವೆಂದರೆ ಈ ಬಾರಿ ಬಹುತೇಕ ದೇಶಗಳು ಆರಂಭಿಕವಾಗಿಯೇ ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿವೆ. ಅದರಲ್ಲಿಯೂ ಬಾಂಗ್ಲಾ ದೇಶದಲ್ಲಿಯಂತೂ ಬೇರೆ ದೇಶಗಳಿಗೂ ಮಾದರಿಯೆಂಬಂಥಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬಾಂಗ್ಲಾದಲ್ಲಿ ಇದುವರೆಗೂ ಒಂದೇ ಒಂದು ಮಂಕಿಪಾಕ್ಸ್ ಕೇಸುಗಳು ದಾಖಲಾಗಿಲ್ಲ. ಆದರೆ ಅದಾಗಲೇ ಅಲ್ಲಿನ ಸರ್ಕಾರ…

Read More

ಅವರು ತಮ್ಮನ್ನು ಹಸು ಅಂದುಕೊಂಡಿರ‍್ತಾರೆ! ಈ ವಿಶ್ವದಲ್ಲಿ ಚಿತ್ರ ವಿಚಿತ್ರವಾದ ಕಾಯಿಲೆಗಳಿದ್ದಾವೆ. ಬಂದರೆ ಜೀವವನ್ನೇ ತೆಗೆದು ಬಿಡುವಂಥವು, ಅಕ್ಷರಶಃ ನರಕಯಾತನೆ ತಂದಿಡುವಂಥವೂ ಸೇರಿದಂತೆ ಕಾಯಿಲೆಗಳಿಗೆ ನಾನಾ ಮುಖ. ಅದು ದೈಹಿಕ ಕಾಯಿಲೆಗಳ ವಿಚಾರ. ಇನ್ನುಳಿದಂತೆ ಕೆಲ ಮಾನಸಿಕ ವ್ಯಾಧಿಗಳಿದ್ದಾವೆ. ಅವುಗಳ ಬಗ್ಗೆ ಅರಿಯುತ್ತಾ ಹೋದಂತೆ ನಂಬಲಸಾಧ್ಯವಾದ, ಇಂಥಾ ಕಾಯಿಲೆಗಳೀ ಇರ‍್ತಾವಾ ಎಂಬಂತೆ ಅಚ್ಚರಿ ಮೂಡಿಸುವವಿವರಗಳು ಬಿಚ್ಚಿಕೊಳ್ಳುತ್ತವೆ. ಹಾಗೆ ನೋಡಿದರೆ ಮನಸಿಗೆ ಸಂಬಂಧಿಸಿದ ಕಾಯಿಲೆಗಳದ್ದೊಂದು ದೊಡ್ಡ ಪಟ್ಟಿಯೇ ಇದೆ. ನಮ್ಮ ಪಾಲಿಗೆ ಬೋಧ ಕಳೆದುಕೊಂಡು ಕಂಡ ಕಂಡಲ್ಲಿ ಸುತ್ತುವಂಥಾದ್ದು ಮಾನಸಿಕ ಕಾಯಿಲೆ. ಆದರೆ ಅದಕ್ಕೆ ಅದೆಲ್ಲವನ್ನೂ ಮೀರಿದ ಮಜಲುಗಳಿದ್ದಾವೆ. ಈಗ ನಾವು ಹೇಳ ಹೊರಟಿರೋದು ಅಂಥಾದ್ದೇ ಒಂದು ವಿಚಿತ್ರವಾದ ಕಾಯಿಲೆಯ ಬಗ್ಗೆ, ಈ ಮಾನಸಿಕ ವ್ಯಾಧಿ ಅಮರಿಕೊಂಡರೆ ಆ ರೋಗಿಗೆ ಮಾತ್ರವ್ಲ್ಲದೇ ಮನೆ ಮಂದಿಗೂ ನರಕ ಕಾಣಿಸುತ್ತೆ. ಯಾಕಂದ್ರೆ ಈ ಕಾಯಿಲೆಗೀಡಾದವರು ತಮ್ಮನ್ನು ತಾವು ಹಸು ಎಂದೇ ಭ್ರಮಿಸ್ತಾರಂತೆ. ಅದೇನು ಸಾಮಾನ್ಯದ ಭ್ರಮೆಯಲ್ಲ. ಅದು ಆವರಿಸಿಕೊಳ್ಳುತ್ತಿದ್ದಂತೆಯೇ ಅವರು ಥೇಟು ಹಸುವಿನಂತೆ ವರ್ತಿಸಲಾರಂಭಿಸ್ತಾರೆ. ಎರಡು…

Read More

ಜೇನು ನೊಣಗಳು ಚುಚ್ಚೋದು ಮನುಷ್ಯರಿಗೆ ಮಾತ್ರವಲ್ಲ! ಜೇನು ತುಪ್ಪ ಅಂದಾಕ್ಷಣ ಬಾಯಲ್ಲಿ ನೀರೂರಿಸದಿರೋರ ಸಂಖ್ಯೆ ವಿರಳ. ರುಚಿಯಲ್ಲಿ, ಔಷಧೀಯ ಗುಣಗಳಲ್ಲಿ ಜೇನುತುಪ್ಪವನ್ನ ಮೀರಿಸುವ ಮತ್ತೊಂದು ಮದ್ದಿರಲಿಕ್ಕಿಲ್ಲ. ಈ ಕಾರಣದಿಂದಲೇ ಜೇನು ತುಪ್ಪ ತೆಗೆಯೋ ಕೆಲಸ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ಆದ್ರೆ, ಹಾಗೆ ಜೇನು ತೆಗೆಯೋ ಕೆಲಸ ಜೇನು ತುಪ್ಪದಷ್ಟು ಸ್ವೀಟಾಗಿರೋ ಮ್ಯಾಟರ್ ಖಂಡಿತಾ ಅಲ್ಲ. ಅದು ಅಕ್ಷರಶಃ ಯುದ್ಧವಿದ್ದಂತೆ. ಯಾಕಂದ್ರೆ, ನೋಡಲು ಪುಟ್ಟ ಗಾತ್ರಕ್ಕಿರೋ ಜೇನು ನೊಣಗಳ ಸಿಟ್ಟಿನ ಮೊನೆ ಅಷ್ಟೊಂದು ಚೂಪಾಗಿದೆ! ನಿಖರವಾಗಿ ಹೇಳ ಬೇಕಂದ್ರೆ ಈ ಪುಟ್ಟ ಜೇನ್ನೊಣಗಳಿಗೆ ಮೈ ತುಂಬಾ ಸಿಟ್ಟಿರುತ್ತೆ. ಸಾಮಾನ್ಯವಾಗಿ ಜೇನ್ನೊಣಗಳು ಕಚ್ಚುತ್ತವೆಂಬ ತಪ್ಪು ಕಲ್ಪನೆಯಿದೆ. ಅಸಲಿಗೆ ಅವು ಕಚ್ಚೋದಿಲ್ಲ. ಬದಲಾಗಿ ಚೂಪಾದ ಈಟಿಯಂಥಾ ಪಂಜಿನಿಂದ ಚುಚ್ಚುತ್ತವೆ. ಹೆಜ್ಜೇನಿನಂಥಾ ಜೇನು ನೊಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಚ್ಚಿದ್ರೆ ಅದೆಂಥಾ ಗಟ್ಟಿ ಆಸಾಮಿಗಳೇ ಆದ್ರೂ ಬದುಕೋದು ಕಷ್ಟವಿದೆ. ಸಿಹಿಯಾದ ಜೇನು ಕೊಡೋ ಈ ಜೇನ್ನೊಣಗಳು ಯಾಮಾರಿದ್ರೆ ಅಷ್ಟೊಂದು ಡೇಂಜರಸ್ ಈಗಿ ಬಿಡುತ್ವೆ. ಈವತ್ತಿಗೂ ನಮ್ಮ ನಡುವೆ ಜೇನು…

Read More

ಸುಂದರ ಪತಂಗದ ಬಗೆಗೊಂದು ಬೆರಗು ಮೂಡಿಸೋ ವಿಚಾರ! ಈ ಜೀವ ಜಗತ್ತು ಮತ್ತು ಅದಕ್ಕೆ ಪ್ರಕೃತಿಯೇ ಕೊಡಮಾಡಿರೋ ಸೌಕರ್ಯಗಳು ಯಾವ ನಿಲುಕಿಗೂ ಸಿಗುವಂಥಾದ್ದಲ್ಲ. ಅದರಲ್ಲೊಂದಷ್ಟನ್ನು ಒಂದಷ್ಟು ಅಧ್ಯಯನಗಳು ಜಾಹೀರು ಮಾಡಿವೆಯಷ್ಟೆ. ಇಡೀ ಜಗತ್ತು ಯಾವುದೋ ಸ್ಪರ್ಧೆಗೆ ಬಿದ್ದಿರುವಾಗ ಒಂದಷ್ಟು ಜೀವಗಳು ಜೀವಜಗತ್ತಿನ ಸೂಕ್ಷ್ಮಗಳಿಗೆ ಕಣ್ಣಾಗಿವೆ. ಪುಟ್ಟ ಜೀವಿಗಳ ಮಿಸುಕಾಟವನ್ನೂ ಮನನ ಮಾಡಿಕೊಳ್ಳೋ ಉತ್ಸಾಹವೇ ಜೀವಜಾಲದ ಒಂದಷ್ಟು ಅಚ್ಚರಿಗಳನ್ನು ನಮ್ಮೆದುರಿಗೆ ತೆರೆದಿಟ್ಟಿವೆ. ಅದರ ಫಲವಾಗಿಯೇ ನೋಡಿದಾಕ್ಷಣ ಮನಸನ್ನು ಪ್ರಫುಲ್ಲಗೊಳಿಸೋ ಚಿಟ್ಟೆಗಳ ಬಗ್ಗೆಯೂ ಅಧ್ಯಯನಗಳು ನಡೆದಿವೆ. ಅದು ಅನಾವರಣಗೊಳಿಸಿರೋ ಸತ್ಯ ನಿಜಕ್ಕೂ ಆಹ್ಲಾದಕರವಾಗಿದೆ. ನಮಗೆಲ್ಲ ಸಿಹಿ, ಕಹಿ, ಒಗರಿನಂಥಾ ಎಲ್ಲ ರುಚಿಗಳನ್ನೂ ಗ್ರಹಿಸೋ ಏಕೈಕ ಅಂಗ ನಾಲಗೆ. ರುಚಿಯನ್ನು ಆಘ್ರಾಣಿಸೋ ಗಂಥಿಗಳೆಲ್ಲ ಇರೋದು ನಮ್ಮ ನಾಲಗೆಯಲ್ಲಿಯೇ. ಒಂದು ವೇಳೆ ನಮ್ಮ ಕೈನಲ್ಲೋ, ಪಾದದಲ್ಲೋ ರುಚಿಯ ಗ್ರಂಥಿ ಇದ್ದಿದ್ದರೆ ಗ್ರಹಿಸಬಾರದ ರುಚಿಗಳನ್ನೆಲ್ಲ ಗ್ರಹಿಸಿ ವಾಂತಿ ಮಾಡಿಕೊಳ್ಳಬೇಕಾಗ್ತಿತ್ತೇನೋ. ನಮ್ಮ ಪಾಲಿಗೆ ಅಸಾಧ್ಯ ಅನ್ನಿಸೋ ಅಂಗದಲ್ಲಿಯೇ ಚಿಟ್ಟೆಗೆ ಪ್ರಕೃತಿ ರುಚಿಯ ಗಂಥಿಯನ್ನಿಟ್ಟಿದೆ. ವಿಶೇಷ ಅಂದ್ರೆ, ಈ ಚಿಟ್ಟೆಗಳು ರುಚಿಯನ್ನು…

Read More

ಹಾವುಗಳ ಕುಟುಂಬ ಅದೆಷ್ಟು ದೊಡ್ಡದಿದೆ ಗೊತ್ತಾ? ಇದು ಜೀವ ಜಗತ್ತಿನ ಅಸೀಮ ವಿಸ್ಮಯ! ಈ ವರ್ಷವೂ ನಾಗರ ಪಂಚಮಿ ಆಗಮಿಸೋದರಲ್ಲಿದೆ. ಪ್ರತಿಯೊಂದರಲ್ಲೂ ಭಕ್ತಿ ಹಾಸುಹೊಕ್ಕಾಗಿರೋ ನಮ್ಮಲ್ಲಿ ಹಾವುಗಳ ಬಗ್ಗೆಯೂ ಒಂದಷ್ಟು ನಂಬಿಕೆಗಳಿದ್ದಾವೆ. ಆದ್ರೆ ಹಾವುಗಳ ಬಗೆಗಿನ ಅಸಲೀ ವಿಚಾರಗಳು ನಮ್ಮೆಲ್ಲರ ನಂಬಿಕೆಗಳನ್ನು ಮೀರಿದಂಥಾದ್ದು. ನಾವೆಲ್ಲ ಹಾವೆಂದರೆ ಬೆಚ್ಚಿ ಬೀಳ್ತೇವೆ. ಈ ಜಗತ್ತಿನಲ್ಲಿರೋ ಎಲ್ಲ ಹಾವುಗಳೂ ಡೇಂಜರಸ್ ಅನ್ನೋದಷ್ಟೇ ನಮ್ಮ ಕುರುಡು ನಂಬಿಕೆ. ಇದರಿಂದಾಗಿಯೇ ಈವತ್ತು ಹಾವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹಾಗೆ ಮನುಷ್ಯ ಪ್ರಹಾರಕ್ಕೆ ಸಿಕ್ಕು ನಶಿಸಿದರೂ ಈ ಹಾವುಗಳದ್ದು ಈವತ್ತಿಗೂ ಬಹು ದೊಡ್ಡ ಫ್ಯಾಮಿಲಿ. ಈ ಹಾವುಗಳು ಸೃಷ್ಟಿಯ ಅತ್ಯಂತ ಅಚ್ಚರಿದಾಯಕ ಜೀವಿಗಳು. ಸ್ವಚ್ಚತೆಗೆ ರೋಲ್ ಮಾಡೆಲ್ಲುಗಳಿಂತಿರೋ ಹಾವುಗಳ ಚಹರೆ, ಜೀವನಕ್ರಮ, ಪ್ರಬೇಧಗಳು ಸೇರಿದಂತೆ ಎಲ್ಲವೂ ಅಚ್ಚರಿಯ ಆಗರಗಳೇ. ಜೀವ ವೈವಿಧ್ಯದಲ್ಲಿ ತಮ್ಮದೇ ಸ್ಥಾನ ಉಳಿಸಿಕೊಂಡಿರೋ ಹಾವುಗಳದ್ದು ಬಹುದೊಡ್ಡ ಕುಟುಂಬ. ಜಗತ್ತಿನ ಬಹುತೇಕ ಭೂಭಾಗಗಳಲ್ಲಿ ಹಬ್ಬಿಕೊಂಡಿರೋ ಇವುಗಳಲ್ಲಿ ಹತ್ತತ್ತಿರ ನಾಲಕ್ಕು ಸಾವಿರಕ್ಕೂ ಮೀರಿದ ಪ್ರಬೇಧಗಳಿವೆ. ಇದ್ರಲ್ಲಿ ನಲವತ್ತರಷ್ಟು ವಿಭಿನ್ನ ಉಪ…

Read More

ಬ್ರಹ್ಮ ಮಾಡಿದ್ದು ತಪ್ಪೆಂದ ರೋಮಿಯೋ ಅಪ್ಪ! ಇದೀಗ ಅಷ್ಟದಿಕ್ಕುಗಳಲ್ಲಿಯೂ ಕುತೂಹಲ ಹುಟ್ಟುಹಾಕಿ ಇದೇ ತಿಂಗಳ ಇಪ್ಪತ್ತೇಳರಂದು ತೆರೆಗಾಣಲು ಸಜ್ಜಾಗಿರುವ ಚಿತ್ರ ವೀಲ್‌ಚೇರ್ ರೋಮಿಯೋ. ಕೆಲ ಕಥಾನಕಗಳ ಸುಳಿವು ಸಿಕ್ಕಾಕ್ಷಣ ಈ ಪರಿಯಾಗಿಯೂ ಕಥೆಯೊಂದು ರೂಪುತಳೆಯಬಹುದಾ ಎಂಬಂಥ ಅಚ್ಚರಿ ಕಾಡುತ್ತೆ. ಅಂಥಾ ಭವಗಳನ್ನು ಪ್ರತೀ ಮನಸುಗಳಲ್ಲಿಯೂ ತುಂಬಿರುವ ಈ ಚಿತ್ರ ಅದಾಗಲೇ ಆರಂಭಿಕ ಗೆಲುವು ಪಡೆದಾಗಿದೆ. ವರ್ಷದ ಹಿಂದೆ ಬಿಡುಗಡೆಗೊಂಡಿದ್ದ ಟ್ರೈಲರ್, ಇತ್ತೀಚೆಗೆ ಲಾಂಚ್ ಆಗಿದ್ದ ವೀಡಿಯೋ ಸಾಂಗ್ ವೀಲ್‌ಚೇರ್ ರೋಮಿಯೋ ಮಿನುಗುವಂತೆ ಮಾಡಿದೆ. ಈ ಪ್ರಭೆಯಲ್ಲಿಯೇ ಇದೀಗ ಈ ಚಿತ್ರದ ಆತ್ಮಕಥೆಯಂಥಾ ಮತ್ತೊಂದು ವೀಡಿಯೋ ಸಾಂಗ್ ಬಿಡುಗಡೆಗೊಂಡಿದೆ. ನಾನಾ ದಿಕ್ಕಿನಲ್ಲಿ ಆಲೋಚಿಸುವಂತೆ ಮಾಡಿ ಭಾವುಕವಾಗಿಸುವ ಈ ಹಾಡಿನ ಮೂಲಕ ವೀಲ್‌ಚೇರ್ ರೋಮಿಯೋ ಎಲ್ಲರೆದೆಯೊಳಗೂ ಇಳಿದುಬಿಟ್ಟಿದ್ದಾನೆ. ಹಾಡುಗಳಿಗೆ ಒಂದಿಡೀ ಸಿನಿಮಾದ ಸೆಳೆತವನ್ನು ಕೇಳುಗರೆದೆಗೆ ನಾಟಿಸುವ ಶಕ್ತಿಯಿದೆ. ಆದರೆ ಅದನ್ನು ಪರಿಣಾಮಕಾರಿಯಾಗಿ ಬಳಿಸಿಕೊಳ್ಳುವುದು ಭಲೇ ಕಷ್ಟದ ಕೆಲಸ. ನಿರ್ದೇಶಕ ನಟರಾಜ್ ಬಲು ಆಸ್ಥೆಯಿಂದಲೇ ಅದರಲ್ಲಿ ಗೆದ್ದಿದ್ದಾರೆ. ಇಡೀ ಚಿತ್ರದ ಆತ್ಮವನ್ನು ಒಂದು ಹಾಡಿನಲ್ಲಿ ಹಿಡಿದಿಡುವಂಥಾ…

Read More