Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಲೋಕಸಭಾ ಚುನಾವಣೆಯ (mp election) ಅಖಾಡ ರಂಗೇರಿಕೊಂಡಿದೆ. ಬಹುತೇಕ ಎಲ್ಲ ಪಕ್ಷಗಳಲ್ಲಿಯೂ ಟಿಕೆಟ್ ಲಾಬಿ, ಆಂತರಿಕ ಜಟಾಪಟಿಗಳು ಮೇರೆಮೀರಿವೆ. ಆದರೆ, ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರ ಹಿಡಿಯುವ ಉಮೇದಿನಲ್ಲಿರುವ ಬಿಜೆಪಿಯ ಒಡಲು ಮಾತ್ರ ಕರ್ನಾಟಕದ ಮಟ್ಟಿಗೆ ಅಕ್ಷರಶಃ ಧಗಧಗಿಸಲಾರಂಭಿಸಿದೆ. ಯಾಕೆಂದರೆ, ಎಲ್ಲರ ನಿರೀಕ್ಷೆ ಮೀರಿ ಜಗಜಟ್ಟಿಗಳಂತೆ ಮೆರೆಯುತ್ತಿದ್ದ, ಮಾತೆತ್ತಿದರೆ ಮತಗಳ ನಿಡುವೆ ಪೆಟ್ರೋಲು ಸುರಿದ ಬೆಂಕಿ ಹಚ್ಚುತ್ತಿದ್ದವರಿಗೇ ಟಿಕೇಟು ಕೈತಪ್ಪೋದು ಗ್ಯಾರೆಂಟಿ ಎಂಬಂತಾಗಿದೆ. ಸದ್ಯದ ಮಟ್ಟಿಗೆ ಮೈಸೂರು-ಕೊಡಗು ಲೋಕಸಭಾ ಕ್ರೇತ್ರದಲ್ಲಿ ಪ್ರತಾಪ್ ಸಿಂಂಹನಿಗೆ ತಬ್ಬಲಿ ಸ್ಥಿತಿಯೊಂದು ಸುತ್ತಿಕೊಂಡಿದೆ. ಒಳಸುಳಿಗಳನ್ನು ಬಲ್ಲ, ಕ್ಷೇತ್ರದೊಳಗಿನ ಪಲ್ಲಟಗಳ ಅರಿವಿರುವವರಿಗೆ ಇದು ನಿರೀಕ್ಷಿತ. ದೂರದಿಂದ ಸಿಂಹದ ಅಟಾಟೋಪಗಳನ್ನು ಕಂಡಿದ್ದವರಿಗಿದು ಅನಿರೀಕ್ಷಿತ ಆಘಾತ! ಅದೇನೇ ಗೋಳಾಡಿದರೂ, ಆನ್ ಲೈನಲ್ಲಿ ಕಣ್ಣೀರಿಟ್ಟರೂ ಪ್ರತಾಪ್ ಸಿಂಹ ಟಿಕೆಟ್ ವಂಚಿತನಾಗೋದು ಪಕ್ಕಾ. ಖುದ್ದು ಪ್ರತಾಪ್ ಇದು ರಾಜ್ಯದ ಕೆಲ ನಾಯಕರ ಷಡ್ಯಂತ್ರ ಅಂತೆಲ್ಲ ಪರೋಕ್ಷವಾಗಿ ಬಿಂಬಿಸಲು ಯತ್ನಿಸುತ್ತಿದ್ದಾರೆ. ಈ ಮೂಲಕ ಕುದುರಿಕೊಳ್ಳುವ ಅನುಕಂಪದಲ್ಲಿ ಕಳೆದು ಹೋದ ರಾಜಕೀಯ ಕಿಮ್ಮತ್ತನ್ನು ಸಂಭಾಳಿಸಿಕೊಳ್ಳುವ ಜಾಣ ನಡೆ…

Read More

ಬೆಂಗಳೂರಿನ (rameshwaram cafe blast) ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣವೀಗ ದಿನಕ್ಕೊಂದು, ಕ್ಷಣಕ್ಕೊಂದು ದಿಕ್ಕು ಬದಲಿಸುತ್ತಾ ಮುಂದುವರೆಯುತ್ತಿದೆ. ಈ ಪ್ರಕರಣವೀಗ ರಾಷ್ಟ್ರೀಯ ತನಿಖಾ ದಳದ ನೆರಳಿಗೆ ಸರಿದಿದೆ. ಅಷ್ಟಕ್ಕೂ ಇಂಥಾ ಸ್ಫೋಟಗಳು ನಡೆದಾಗ ನೇರವಾಗಿ ಇದೊಂದು ಭಯೋತ್ಪಾದನಾ ಕೃತ್ಯ ಎಂಬ ವಿಚಾರ ಮೇಲುನೋಟಕ್ಕೇ ಸಾಬೀತಾಗುತ್ತದೆ. ಬೆಂಗಳೂರು ಮಂದಿ ತುಸು ನಿರಾಳವಾದಾಗೆಲ್ಲ ಇಂಥಾ ವಿಧ್ವಂಸಕ ಕೃತ್ಯಗಳು ಘಟಿಸಿದಾಗ ನಾಗರಿಕರು ಕಂಗಾಲಾಗುತ್ತಾರೆ. ಇಂಥಾ ಹೊತ್ತಿನಲ್ಲಿ ಈ ವ್ಯವಸ್ಥೆಯಿಂದ ಭಯೋತ್ಪಾದನಾ (terrorism)ಕೃತ್ಯಗಳನ್ನು ಮಟ್ಟ ಹಾಕಲು ಯಾಕೆ ಸಾಧ್ಯವಾಗುತ್ತಿಲ್ಲ? ಡಜನ್ನುಗಟ್ಟಲೆ ನಟೋರಿಯಸ್ ಭಯೋತ್ಪಾದಕರನ್ನು ಹಂತ ಹಂತವಾಗಿ ಜೈಲು ಸೇರಿಸಲಾಗಿದೆಯಲ್ಲಾ? ಅಂಥವರಿಂದ ಮಾಹಿತಿ ಕಲೆ ಹಾಕಿ ರಾಜ್ಯದಲ್ಲಿ ಹಬ್ಬಿಕೊಂಡಿರುವ ಭಯೋತ್ಪಾದನೆಯ ಬೇರುಗಳನ್ನು ಕಿತ್ತೆಸೆಯಲು ಯಾಕೆ ಸಾಧ್ಯವಾಗುತ್ತಿಲ್ಲ? ಹೀಗೆ ಸಾಲು ಸಾಲು ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡುತ್ತವೆ. ಸದ್ಯದ ಮಟ್ಟಿಗೆ ಪರಪ್ಪನ ಅಗ್ರಹಾರದೊಳಗೆ ನಡೆಯುತ್ತಿರುವ ಹಲಾಲು ಕೃತ್ಯಗಳು ಆ ಎಲ್ಲ ಪ್ರಶ್ನೆಗಳಿಗೂ ನಿಖರ ಉತ್ತರದಂತಿವೆ! ಅಲ್ಲಿ ನಡೆಯುತ್ತಿರೋದು ಉಗ್ರ ಪರಿವರ್ತನೆ! ಜೈಲು ಅಂದರೆ ಅಕ್ಷರಶಃ ಮನಃ ಪರಿವರ್ತನೆಯ ಜಾಗ ಎಂಬುದು ಸವಕಲು…

Read More

ಬಾಲಿವುಡ್ಡಿನಲ್ಲಿ ಮತ್ತೊಂದು ಸಂಸಾರ ಹಳ್ಳ ಹಿಡಿದ ಸ್ಪಷ್ಟ ಸೂಚನೆಯೊಂದು ರವಾನೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರ ಅವತಾರವೆತ್ತುತ್ತಾ ಬಂದಿದ್ದ, ಮುಖ ಮುಚ್ಚಿಕೊಂಡೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದ (raj kundra) ಕುಂದ್ರಾ ಏಕಾಏಕಿ ಸೋಶಿಯಲ್ ಮೀಡಿಯಾ ಮೂಲಕ ಬಾಂಬು ಸಿಡಿಸಿದ್ದಾನೆ. ತಾನು ಮತ್ತು ಶಿಲ್ಪಾ ಶೆಟ್ಟಿ (actress shilpa shetty) ಪರಸ್ಪರ ದೂರಾಗಿದ್ದೇವೆ ಅನ್ನೋದು ಅದರ ಸಾರಾಂಶ. ಅಷ್ಟಕ್ಕೂ ಈ ಸುದ್ದಿ ಯಾರಿಗೂ ಆಘಾತ ತಂದಿಲ್ಲ. ಯಾಕೆಂದರೆ, ಈ ಸೆಲೆಬ್ರಿಟಿಗಳ ವಿಚಾರದಲ್ಲಿ ಡಿವೋರ್ಸ್ ಎಂಬುದು ಮದುವೆಯಷ್ಟೇ ಸಾಮಾನ್ಯ ಸಂಗತಿ. ಶಿಲ್ಪಾ ಶೆಟ್ಟಿ ದಾಂಪತ್ಯದ ವಿಚಾರದಲ್ಲಿ ಹೇಳೋದಾದರೆ, ಯಾವಾಗ ರಾಜ್ ಕುಂದ್ರಾ ಕೊರೋನಾ ಹೊತ್ತಲ್ಲಿ ಜೈಲು ಸೇರಿಕೊಂಡನೋ, ಆ ಮೂಲಕ ಆತನ ಅಸಲೀ ದಂಧೆ ಜಗಜ್ಜಾಹೀರಾಗುತ್ತಲೇ ಸಂಸಾರದಲ್ಲಿ ಬಿರುಗಾಳಿ ಶುರುವಾಗಿತ್ತು. ಅದೀಗ ಇಬ್ಬರನ್ನೂ ಎರಡು ದಿಕ್ಕಿಗೆ ಎತ್ತೆಸೆದ ಲಕ್ಷಣಗಳು ಗೋಚರಿಸುತ್ತಿವೆ! ಹಾಗೆ ನೋಡಿದರೆ, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಾಂಪತ್ಯದ ಬಗ್ಗೆ ರೂಮರುಗಳು ಹಬ್ಬಲಾರಂಭಿಸಿದ್ದು ಇಂದು ನಿನ್ನೆಯೇನಲ್ಲ. ಕುಂದ್ರಾನ ನೀಲಿ ಚಿತ್ರದ ಲೀಲಾವಳಿಗಳು ಜಾಹೀರಾಗುತ್ತಲೇ ಶಿಲ್ಲಾ…

Read More

ಬಾಹುಬಲಿ (bahubali movie) ಚಿತ್ರದ ಮೂಲಕ ಪ್ಯಾನಿಂಡಿಯಾ ಸ್ಟಾರ್ ಆಗಿ ರೂಪುಗೊಂಡವರು (prabhas) ಪ್ರಭಾಸ್. ಅದಕ್ಕೂ ಮುನ್ನವೇ ತೆಲುಗು ಚಿತ್ರರಂಗದಲ್ಲಿ ಗೆಲುವು ಕಂಡಿದ್ದ ಪ್ರಭಾಸ್ ಗೆ ದೊಡ್ಡ ಮಟ್ಟದ ಪ್ಯಾನ್ ಬೇಸಿದೆ. ಅದರಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರದ್ದೇ ಮೇಲುಗೈ. ಈ ಹೊತ್ತಿಗೂ ಪ್ರಭಾಸ್ ಮದುವೆಯ ಮ್ಯಾಟರ್ ಬಗ್ಗೆ ಗುಲ್ಲೆದ್ದಾಗೆಲ್ಲಾ, ಅಂಥಾ ಮಹಿಳಾ ಅಭಿಮಾನಿಗಳು ಕಂಗಾಲಾಗಿ ಬಿಡುತ್ತಾರೆ. ಪ್ರಭಾಸ್ ಸದ್ಯಕ್ಕೆ ಮದುವೆಯಾಗದೆ ಬ್ಯಾಚುಲರ್ ಆಗಿಯೇ ಉಳಿಯಲೆಂಬಂತೆ ಆಶಿಸುವ ಹುಡುಗಿಯರ ಸಂಖ್ಯೆಯೂ ಬಹಳಷ್ಟಿದೆ. ಅಂಥವರಿಗೆಲ್ಲ ಈ ದಸರೆಯ ಸಂದರ್ಭದಲ್ಲಿ ಎದೆ ಅದುರೋ ಸುದ್ದಿಯೊಂದು ಅಧಿಕೃತವಾಗಿಯೇ ಜಾಹೀರಾಗಿದೆ. ಅದರನ್ವಯ ಹೇಳೋದಾದರೆ, ಇನ್ನು ಒಂದು ವರ್ಷದೊಳಗೆ ಪ್ರಭಾಸ್ ಮದುವೆಯಾಗೋದು ಗ್ಯಾರೆಂಟಿ! ಪ್ರಭಾಸ್ ಅಭಿಮಾನಿಗಳ ಚಿತ್ತವೆಲ್ಲ ಇದೀಗ ಸಲಾರ್ ಚಿತ್ರದ ಮೇಲಿದೆ. ಯಾಕೆಂದರೆ, ಅದು ಅವರೆಲ್ಲರ ಪಾಲಿಗೆ ಬಹು ಮಹತ್ವಾಕಾಂಕ್ಷೆಯ ಚಿತ್ರ. ಇತ್ತೀಚೆಗೇಕೋ ಪ್ರಭಾಸ್ ನಸೀಬು ಸಂಪೂರ್ಣವಾಗಿ ಕೈ ಕೊಟ್ಟಂತಿದೆ. ಬಾಹುಬಲಿಯ ಗೆಲುವಿನ ಕಿಡಿ ಆರದಂತೆ ಕಾಪಿಟ್ಟುಕೊಳ್ಳುವಲ್ಲಿ ಆತ ಹೆಜ್ಜೆ ಹೆಜ್ಜೆಗೂ ಸೋಲುತ್ತಾ ಬಂದಿದ್ದಾರೆ. ಸಲಾರ್ ಏನಾದರೂ ಮಗುಚಿಕೊಂಡರೆ,…

Read More

ನೀವೇನಾದ್ರೂ ಸರಿರಾತ್ರಿಯವರೆಗೂ ಕೆಲಸ ಮಾಡೋ ರೂಢಿಯಿಟ್ಟುಕೊಂಡಿದ್ರೆ ನಿಮ್ಮನ್ನ ಥರ ಥರದ ಗೊಂದಲಗಳು ಮುತ್ತಿಕೊಂಡಿರುತ್ವೆ. ಯಾಕಂದ್ರೆ ಬೆಳಗ್ಗೆ ಬೇಗನೆ ಏಳಲಾರದ ಸ್ಥಿತಿ ಒಟಾರೆ ಬದುಕಿನ ಟೈಂ ಟೇಬಲ್ಲನ್ನೇ ಅದಲು ಬದಲು ಮಾಡಿರತ್ತೆ. ಯಾಕಂದ್ರೆ ನಮ್ಮಲ್ಲಿ ಬೆಳಗ್ಗೆ ಬೇಗನೆದ್ದು ದಿನಚರಿ ಆರಂಭಿಸೋದು ಜೀವನ ಕ್ರಮವಾಗಿ ಬಿಟ್ಟಿದೆ. ದಿನಾ ಬೆಳಗ್ಗೆ ಸೂರ್ಯೋದಯಕ್ಕಿಂತಲೂ ಮುಂಚೆ ಏಳೋದು ಸಾತ್ವಿಕ ವಿದ್ಯಮಾನ ಅಂತಲೂ ಬಿಂಬಿತವಾಗಿದೆ. ಇನ್ನುಳಿದಂತೆ ಅಧ್ಯಾತ್ಮಿಕವಾಗಿಯೂ ಬೆಳಗ್ಗೆ ಬೇಗನೆ ಏಳೋದರ ಮಹತ್ವದ ಬಗ್ಗೆ ಮಣಗಟ್ಟಲೆ ವಿವರಣೆಗಳಿದ್ದಾವೆ. ಆದ್ರೆ ರಾತ್ರಿ ಕೆಲಸದ ಗುಂಗು ಹತ್ತಿಸಿಕೊಂಡವರಿಗೆ ಬದುಕಲ್ಲೇನೋ ಅಮೂಲ್ಯ ಕ್ಷಣಗಳು ಮಿಸ್ ಆದಂತೆ ಭಾಸವಾಗುತ್ತಿರುತ್ತೆ. ಬೆಳಗಿನ ಆ ಸ್ಫಟಿಕದಂಥಾ ವಾತಾವರಣಕ್ಕೆ ಕಣ್ತೆರೆಯುವ ಮುದ, ಎಳೇಯ ಸೂರ್ಯ ರಶ್ಮಿಗಳ ಹಿಮ್ಮೇಳದ ಆಹ್ಲಾದಗಳನ್ನೆಲ್ಲ ಮಿಸ್ ಮಾಡ್ಕೋತಿದ್ದೀವೇನೋ ಅನ್ನೋ ಭಾವ ಬಿಡದೇ ಕಾಡುತ್ತಿರುತ್ತೆ. ಇದು ಮಾನಸಿಕ ತೊಳಲಾಟವಾದ್ರೆ, ಮನೆಮಂದಿಯಿಂದ ದಿನಾ ಲೇಟಾಗಿ ಏಳ್ತಾರೆನ್ನೋ ಕಂಪ್ಲೇಟಂತೂ ಇದ್ದೇ ಇರುತ್ತೆ. ಇಂಥಾ ಸಂದರ್ಭದಲ್ಲಿ ಬದುಕು ಗೂಬೆಗಿಂತಲೂ ಕಡೆಯಾಗ್ತೇನೋ ಅಂತ ಕೊರಗ್ತಿರೋರಿಗೆ ಇಲ್ಲೊಂದು ಶುಭ ಸುದ್ದಿಯಿದೆ. ಬೆಳಗ್ಗೆ ಬೇಗನೆದ್ದು ಮೈ…

Read More

ಆಧುನಿಕ ಜಗತ್ತು ಪ್ರತಿಯೊಬ್ಬರಿಗೂ ಒತ್ತಡದ (tress) ಬಳುವಳಿ ಕೊಟ್ಟಿದೆ. ಕೆಲಸ, ಕಾರ್ಯ , ಕಷ್ಟ ಕಾರ್ಪಣ್ಯಗಳು ಸೇರಿದಂತೆ ಇಲ್ಲಿ ಎಲ್ಲವೂ ಉಸಿರುಗಟ್ಟಿಸೋ ಸರಕುಗಳೇ. ರೇಸಿಗಿಳಿದಂತೆ ಪ್ರತೀ ದಿನ ಕಳೆಯೋ ಮಂದಿಯ ಪಾಲಿಗೆ ಕೊಂಚ ಏಕಾಂತ, ತಟುಕು ಸಮಾಧಾನವೂ ಮರೀಚಿಕೆಯಾಗಿ ಬಿಟ್ಟಿದೆ. ಇಂಥಾ ಜಂಜಾಟಗಳಲ್ಲಿ ಸಿಕ್ಕಿಕೊಂಡಿರೋ ಪ್ರತಿಯೊಬ್ಬರೂ ಸಣ್ಣದೊಂದು ಏಕಾಂತದಲ್ಲಿ ಮಿಂದೆದ್ದು ನಿರಾಳವಾಗಲು ಸದಾ ಹಪಾಹಪಿಸ್ತಾರೆ. ಆದ್ರೆ ಅದೇನೇ ಪ್ರಯತ್ನ ಪಟ್ಟರೂ ಅದು ಬಹುತೇಕರಿಗೆ ಸಿಗೋದೇ ಇಲ್ಲ. ಆ ನಿರಾಸೆಯ ಮುಂದೆ ಹೆಚ್ಚಿನವರಿಗೆ ಕಂತೆ ಕಂತೆ ಕಾಸೂ ಕಸದಂತೆ ಕಾಣಿಸಲಾರಂಭಿಸುತ್ತೆ. ಹಾಗಾದ್ರೆ ಈ ಏಕಾಂತ, ಬ್ಯುಸಿ ಲೈಫಿನ ಬಾನಿನಲ್ಲಿ ಮೂಡೋ ಕಾಮನಬಿಲ್ಲಿನಂಥಾ ಒಚಿಟಿ ವಾತಾವರಣ ಅಷ್ಟೊಂದು ಪಾಸಿಟಿವ್ ಎನರ್ಜಿ ತುಂಬುತ್ತಾ ಅನ್ನೋ ಪ್ರಶ್ನೆ ಮೂಡುತ್ತೆ. ಇದಕ್ಕೆ ನಮ್ಮ ನಡುವೆ ಬಿಲ್ಡಪ್ಪುಗಳ ಒಂದಷ್ಟು ಉತ್ತರಗಳು ಸಿದ್ಧವಿರಬಹುದು. ಆದರೆ ವಿಜ್ನಾನ, ಸೈಕಾಲಜಿ ಮತ್ತು ಅದರ ತಳಹದಿಯಲ್ಲಿ ನಡೆದಿರೋ ಒಂದಷ್ಟು ಸಂಶೋಧನೆಗಳು ಮಾತ್ರ ಮತ್ತೊಂದು ಭಯಾನಕ ಸಂಗತಿಯನ್ನ ಜಾಹೀರು ಮಾಡುತ್ತವೆ. ಅಂಥಾ ಸಂಶೋಧನೆಗಳು ಏಕಾಂತದ ಡೇಂಜರಸ್ ಮುಖವನ್ನು…

Read More

ನಮ್ಮಲ್ಲಿ ಹೊಟ್ಟೆಗೆ ಹೆಚ್ಚಾಗಿ ನವರಂಧ್ರಗಳಲ್ಲಿಯೂ ಚಿಮ್ಮುವ ರೇಂಜಿಗೆ ಎಣ್ಣೆ (drinkers) ಹೊಡೆಯುವವರಿದ್ದಾರೆ. ಹಾಗೆ ಭರ್ಜರಿ ಕಿಕ್ಕೇರಿಸಿಕೊಂಡು ಫುಟ್ಪಾತು ಸರ್ವೆ ಮಾಡುವವರು, ಅಲ್ಲೇ ಬೋರಲಾಗಿ ಬಿದ್ದುಕೊಳ್ಳುವವರು, ಗಲ್ಲಿ ಗಟಾರ ಕೊಚ್ಚೆ ಕೊಳಕೆನ್ನದೆ ಉಳ್ಳಾಡುವವರೆಲ್ಲ ನಮಗೆ ಪರಿಚಿತರಾಗಿರ್ತಾರೆ. ಅಂಥಾ ಕುಡುಕರಿಗೆಲ್ಲ ಕಾಸಿಲ್ಲದ ಟೈಮಲ್ಲಿ ಎಣ್ಣೆಯೆಂಬುದು ಮಾಯೆಯಂತೆ ಕಾಡಿರುತ್ತೆ. ಬರಿದಾದ ಜೇಬಲ್ಲಿ ಬಾಯಾರಿ ಕುಂತ ಪ್ರತೀ ಕುಡುಕರಿಗೂ ಹಗಲು ಹೊತ್ತಲ್ಲೇ ಪುಗಸಟ್ಟೆ ಎಣ್ಣೆಯ ಕನಸು ಬಿದ್ದಿರುತ್ತೆ. ಕಾಸಿಲ್ಲದಿದ್ದರೂ ಮೊಗೆ ಮೊಗೆದು ಮನಸಾರೆ ಕುಡಿಯುವಂಥಾ ವ್ಯವಸ್ಥೆ ಇರಬೇಕಿತ್ತೆಂದು ಹಲುಬಾಡುತ್ತಾರೆ. ನಮ್ಮ ದೇಶದ ಸಮಸ್ತ ಕುಡುಕರಿಗೆ ಬೀಳೋ ಆ ಕನಸು ಇಟಲಿ ದೇಶದಲ್ಲಿ ವಾಸ್ತವದ ಅವತಾರವೆತ್ತಿದೆ. ಇಟಲಿಯ ಕ್ಯಾಲ್ಟಾರಿ ಡಿ ಒರ್ಟೋನಾ ಎಂಬಲ್ಲಿ ಕುಡುಕರ ಪಾಲಿನ ಸ್ವರ್ಗದಂಥಾ ತೀರ್ಥಕ್ಷೇತ್ರವೊಂದಿದೆ. ಅಲ್ಲಿ ರೆಡ್ ವೈನ್ ಕಾರಂಜಿಯಾಗಿ ಸದಾ ಚಿಮ್ಮುತ್ತಿರುತ್ತೆ. ದಿನದ ಇಪ್ಪತ್ನಾಲಕ್ಕು ಗಂಟೆ ನಿರಂತರವಾಗಿ ಚಿಮ್ಮೋ ಈ ವೈನನ್ನು ಜನ ಫ್ರೀಯಾಗಿಯೇ ಮೊಗೆದು ಕುಡಿಯುತ್ತಾರೆ. ಅಂದ ಹಾಗೆ ಈ ರೆಡ್ ವೈನಿನ ಪುಗಸಟ್ಟೆ ಕಾರಂಜಿ ದ್ರಾಕ್ಷಿ ತೋಟದ ನಡುವಲ್ಲಿದೆ. ನಮ್ಮ…

Read More

ಎಲ್ಲಿ ಮಡಿವಂತಿಕೆ ಅಧಿಕವಾಗಿರುತ್ತೋ ಅಲ್ಲಿಯೇ ನಾನಾ ಬಯಕೆಗಳು ಥರ ಥರದ ಮುಖವಾಡ ತೊಟ್ಟು ಕೂತಿರುತ್ವೆ. ಭಾರತದಲ್ಲಿಯಂತೂ (india) ನಾನಾ ವಿಚಾರಗಳಲ್ಲಿ ಇಂಥಾ ಮಡಿವಂತಿಕೆ ತೀವ್ರವಾಗಿದೆ. ಹಾಗಿರುವಾಗ ಕಾಮದ (sex) ಬಗ್ಗೆ ಇಲ್ಲಿ ಬಿಡು ಬೀಸಾಗಿ ಮಾತಾಡೋದು ಕೊಂಚ ಕಷ್ಟ. ಆದ್ರೆ ಜನಸಂಖ್ಯೆ ಮಾತ್ರ ಇಡೀ ವಿಶ್ವಕ್ಕೇ ಸೆಡ್ಡು ಹೊಡೆಯುವಂತೆ ಬೆಳೆಯುತ್ತಲೇ ಇದೆ. ಇದರಾಚೆಗೆ ಮೈಥುನದ ಬಗ್ಗೆ ಅತೀವ ಆಸಕ್ತಿ ಹೊಂದಿರೋ ಮಂದಿಯ ಪಾಲಿಗೆ ಇತ್ತೀಚಿನ ದಿನಗಳಲ್ಲಿ ನೀಲಿ ಚಿತ್ರಗಳು ವರದಾನವಾಗಿವೆ. ಇಂಥಾ ನೀಲಿ ಚಿತ್ರಗಳನ್ನ (porn sites) ಹುಡುಕಾಡಿ ನೋಡೋ ದೇಶಗಳ ಲಿಸ್ಟಿನಲ್ಲಿ ನಮಗೂ ಅಗ್ರ ಸ್ಥಾನವಿದೆ. ಅದರಲ್ಲಿ ಲಿಂಗಾಧಾರಿತ ಸರ್ವೆಗಳು ನಡೆದಾಗ ಹೆಂಗಳೆಯ ಪಾಲೂ ಮಹತ್ತರವಾಗಿರೋ ವಿಚಾರ ಬಯಲಾಗಿದೆ. ಅದರರ್ಥ ನೀಲಿ ಚಿತ್ರಗಳತ್ತ ವಯೋಮಾನದ ಹಂಗಿಲ್ಲದೆ ಜನ ವಾಲಿಕೊಂಡಿದ್ದಾರನ್ನೋದು. ಹೀಗೆ ನೀಲಿ ಚಿತ್ರಗಳನ್ನ ನೋಡೋದನ್ನೇ ಚಟವಾಗಿಸಿಕೊಂಡರೆ ಅದರಿಂದ ಮನೋ ದೈಹಿಕವಾಗಿ ಒಂದಷ್ಟು ಅಡ್ಡಪರಿಣಾಮಗಳಾಗುತ್ತವೆ. ಹಾಗಂತ ನೀಲಿ ಚಿತ್ರಗಳಿಂದ ಮನಸಿಗೆ, ದೇಹಕ್ಕೆ ಮಾತ್ರವೇ ಪರಿಣಾಮವಾಗುತ್ತೆ ಅಂದುಕೊಳ್ಳುವಂತಿಲ್ಲ. ಅದರಿಂದ ನಿಮ್ಮ ಮೊಬೈಲು, ಕಂಪ್ಯೂಟರ್,…

Read More

ಕೊರೋನಾ (corona) ಕರಾಳ ಪರ್ವವೊಂದನ್ನು ಪ್ರಯಾಸ ಪಟ್ಟು ದಾಟಿಕೊಂಡ ಖುಷಿ ದೇಶವಾಸಿಗಳನ್ನು ಆವರಿಸಕೊಂಡಿದೆ. ಬಹುತೇಕ ಎಲ್ಲರೂ ಕೂಡಾ ಈ ಮಹಾಮಾರಿ ಶಾಶ್ವತವಾಗಿ ತೊಲಗಿತೆಂಬಂತೆ ನಿರಾಳವಾಗಿದ್ದಾರೆ. ಆದರೆ, ಆಗಾಗ ಕೊರೋನಾ ಮಾರಿ (pendamic) ನಾನಾ ಸ್ವರೂಪಗಳಲ್ಲಿ ತನ್ನ ಇರುವಿಕೆಯನ್ನು ಸಾಬೀತು ಪಡಿಸುತ್ತಿದೆ. ಈ ಮೂಲಕ ಮತ್ತೆ ಭಯದ ನಗಾರಿ ಹೊಡೆದುಕೊಳ್ಳುವಂತೆ ಮಾಡುತ್ತಿದೆ. ಕೆಲವೊಮ್ಮೆ ಬೇರ್ಯಾವ ಸುದ್ದಿಗಳಿಗೂ ದಿಕ್ಕಿಲ್ಲದಿದ್ದಾಗ ಮಾಧ್ಯಮ (media) ಮಂದಿ ಕೊರೋನಾ ಹುಳ ಬಿಡುತ್ತಾರೆಂಬ ಆರೋಪವೂ ಸಾರ್ವಜನಿಕ ವಲಯದಲ್ಲಿದೆ. ಆದರೀಗ ದೆಹಲಿಯಲ್ಲಿ ಕೊರೋನಾ (corona virus) ಪೀಡಿತರ ಸಂಖ್ಯೆ ಏರುಗತಿ ಕಾಣುತ್ತಿರೋದು ಇಡೀ ದೇಶವನ್ನೇ ದಿಗಿಲಾಗಿಸಿಬಿಟ್ಟಿದೆ. ಇದೀಗ ದೆಹಲಿಯಲ್ಲಿ (delhi) ಸಾವಿನ ಸಂಖ್ಯೆಯಲ್ಲಿಯೂ ತೀವ್ರಗತಿಯಲ್ಲಿ ಏರಿಕೆ ಕಂಡಿದೆ! ದೆಹಲಿಯಲ್ಲಿ ಆಗಾಗ ಕೊರೋನಾ ಪ್ರಕರಣಗಳು ಕಾಣಿಸಿಕೊಳ್ಳುತ್ತಾ ಬಂದಿದ್ದಾವೆ. ಆದರೆ ಈಗ ಕಂಡು ಬಂದಿರುವಷ್ಟು ಪ್ರಮಾಣದ ಪೀಡಿತರ ಸಂಖ್ಯೆ ಲಾಕ್‍ಡೌನ್ ಮುಗಿದ ನಂತಗರದಲ್ಲಿ ಹಿಂದ್ಯಾವತ್ತೂ ಕಾಣಿಸಿರಲಿಲ್ಲ. ಈಗ್ಗೆ ತಿಂಗಳಿಂದೀಚೆಗೆ ಕೊರೋನಾ ಕಾಣಿಸಿಕೊಂಡಿತ್ತಾದರೂ, ಇತ್ತೀಚೆಗೆ ಒಂದೇ ದಿನದಲ್ಲಿ ದೆಹಲಿ ನಗರದಲ್ಲಿ ಸಾವಿದರ ಆರುನೂರಕ್ಕೂ ಹೆಚ್ಚು ಪ್ರಕರಣಗಳು…

Read More

honeybee: ಜೇನು ತುಪ್ಪ (honey ಅಂದಾಕ್ಷಣ ಬಾಯಲ್ಲಿ ನೀರೂರಿಸದಿರೋರ ಸಂಖ್ಯೆ ವಿರಳ. ರುಚಿಯಲ್ಲಿ, ಔಷಧೀಯ ಗುಣಗಳಲ್ಲಿ ಜೇನುತುಪ್ಪವನ್ನ ಮೀರಿಸುವ ಮತ್ತೊಂದು ಮದ್ದಿರಲಿಕ್ಕಿಲ್ಲ. ಈ ಕಾರಣದಿಂದಲೇ ಜೇನು ತುಪ್ಪ ತೆಗೆಯೋ ಕೆಲಸ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ಆದ್ರೆ, ಹಾಗೆ ಜೇನು ತೆಗೆಯೋ ಕೆಲಸ ಜೇನು ತುಪ್ಪದಷ್ಟು ಸ್ವೀಟಾಗಿರೋ ಮ್ಯಾಟರ್ ಖಂಡಿತಾ ಅಲ್ಲ. ಅದು ಅಕ್ಷರಶಃ ಯುದ್ಧವಿದ್ದಂತೆ. ಯಾಕಂದ್ರೆ, ನೋಡಲು ಪುಟ್ಟ ಗಾತ್ರಕ್ಕಿರೋ ಜೇನು ನೊಣಗಳ ಸಿಟ್ಟಿನ ಮೊನೆ ಅಷ್ಟೊಂದು ಚೂಪಾಗಿದೆ! ನಿಖರವಾಗಿ ಹೇಳ ಬೇಕಂದ್ರೆ ಈ ಪುಟ್ಟ ಜೇನ್ನೊಣಗಳಿಗೆ ಮೈ ತುಂಬಾ ಸಿಟ್ಟಿರುತ್ತೆ. ಸಾಮಾನ್ಯವಾಗಿ ಜೇನ್ನೊಣಗಳು ಕಚ್ಚುತ್ತವೆಂಬ ತಪ್ಪು ಕಲ್ಪನೆಯಿದೆ. ಅಸಲಿಗೆ ಅವು ಕಚ್ಚೋದಿಲ್ಲ. ಬದಲಾಗಿ ಚೂಪಾದ ಈಟಿಯಂಥಾ ಪಂಜಿನಿಂದ ಚುಚ್ಚುತ್ತವೆ. ಹೆಜ್ಜೇನಿನಂಥಾ ಜೇನು ನೊಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಚ್ಚಿದ್ರೆ ಅದೆಂಥಾ ಗಟ್ಟಿ ಆಸಾಮಿಗಳೇ ಆದ್ರೂ ಬದುಕೋದು ಕಷ್ಟವಿದೆ. ಸಿಹಿಯಾದ ಜೇನು ಕೊಡೋ ಈ ಜೇನ್ನೊಣಗಳು ಯಾಮಾರಿದ್ರೆ ಅಷ್ಟೊಂದು ಡೇಂಜರಸ್ ಈಗಿ ಬಿಡುತ್ವೆ. ಈವತ್ತಿಗೂ ನಮ್ಮ ನಡುವೆ ಜೇನು ಹುಳುಗಳ ಬಗ್ಗೆ ಅಗಾಧ…

Read More