Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

live bridges: ನಮ್ಮ ಕಣ್ಣು, ಕೈಯಳತೆಯಲ್ಲಿರೋದರ ಬಗ್ಗೆ ನಮ್ಮಲ್ಲೊಂದು ಸದರವಾದ ಭಾವನೆ ಇರುತ್ತೆ. ಅದು ಮನುಷ್ಯ ಸಹಜವಾದ ಗುಣ ಇದ್ದಿರಬಹುದೇನೋ. ಏನಾದರೂ ಸುಂದರವಾದ ಸ್ಥಳಗಳು, ಕುತೂಹಲ ಕರವಾದ ಅಂಶಗಳೆದುರಾದರೆ ಅವೆಲ್ಲ ಯಾವುದೋ ಬೇರೆ ದೇಶದ್ದಿರಬಹುದೆಂದೇ ಅಂದುಕೊಳ್ಳುತ್ತೇವೆ. ಆದರೆ ನಾವು ಸಾಮಾಜಿಕ ಜಾಲತಾಣಗಳಲ್ಲಿಯೋ, ಇತರೇ ಮೂಲಗಳಿಂದಲೇ ಕಣ್ತುಂಬಿಕೊಳ್ಳುವ ಅದೆಷ್ಟೋ ವೈಶಿಷ್ಟ್ಯಗಳು ನಮ್ಮ ಸುತ್ತಲಿನದ್ದೇ ಆಗಿರುತ್ತದೆ ಅನ್ನೋದು ನಿಜವಾದ ಮಜದ ಸಂಗತಿ. ಜೀವಂತ ಮರದ ಬೇರುಗಳಿಂದಲೇ ರಚನೆಯಾದ ಮೋಹಕ ಸೇತುವೆಗಳನ್ನು ಆಗಾಗ ನೋಡುತ್ತಿರುತ್ತೇವೆ. ಅವುಗಳ ರಚನೆ ಎಂಥವರನ್ನೂ ಅರೆಕ್ಷಣ ಸೆಳೆದುಕೊಂಡು ಅದರ ಸುತ್ತಲೇ ಆಲೋಚನೆಗೆ ಹಚ್ಚುವಂತಿರುತ್ತವೆ. ನಿಖರವಾಗಿ ಹೇಳಬೇಕಂದ್ರೆ ಅಂಥಾ ಸಜೀವ ಪ್ರಾಕೃತಿಕ ಸೇತುವೆಗಳಿರೋದು ನಮ್ಮದೇ ನೆಲವಾದ ಚಿರಾಪುಂಜಿಯಲ್ಲಿ! ಚಿರಾಪುಂಜಿ ಸದಾ ಮಳೆಯಿಂದಲೇ ಮಾಘಸ್ನಾನ ಮಾಡಿಸಿಕೊಳ್ಳುವ ಪ್ರದೇಶ. ಅದಕ್ಕೆ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವೆಂಬ ಹೆಗ್ಗಳಿಕೆಯೂ ಇದೆ. ಹೀಗೆ ಮಳೆ ಬೀಳೋದರಿಂದಲೇ ಈ ಪ್ರದೇಶದಲ್ಲಿ ಅಗಾಧವಾದ ಸಸ್ಯರಾಶಿಗಳಿ, ಯಾವ ಕಾಲಕ್ಕೂ ಬತ್ತದ ಜೀವತೊರೆಗಳಿವೆ. ಅಂಥಾ ತೊರೆಗಳ ಸಮೀಪ ಎರಡು ಪ್ರದೇಶಗಳನ್ನು ಎರಡೂ ಬಸಿಯ…

Read More

ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ನಿರ್ದೇಶಕರಾಗಿ ಗುರುತಿಸಿಕೊಂಡಿರುವವರು ದುನಿಯಾ ಸೂರಿ. ರಾ ಸನ್ನಿವೇಶಗಳ ಮೂಲಕವೇ ನೋಡುಗರ ಮನಸನ್ನು ಆದ್ರ್ರಗೊಳಿಸಬಲ್ಲ ಛಾತಿಯಿಂದಲೇ ಸೂರಿ ಇದುವರೆಗೂ ಗೆಲುವು ದಾಖಲಿಸುತ್ತಾ ಬಂದಿದ್ದಾರೆ. ಇದೀಗ ಅವರು ಅಂಬರೀಶ್ ಪುತ್ರ ಅಭಿಷೇಕ್ ನಾಯಕನಾಗಿರೋ ಬ್ಯಾ ಮ್ಯಾನರ್ಸ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾನ್ಯವಾಗಿ ಒಂದು ಸಿನಿಮಾ ಆರಂಭಿಸಿದರೆ, ಅದನ್ನೊಂದು ಧ್ಯಾನದಂತೆ ಪರಿಭಾವಿಸುವವರು ಸೂರಿ. ಅದರ ನಡುವಲ್ಲಿಯೇ ಮತ್ತೊಂದು ಚಿತ್ರದತ್ತ ಅವರು ಹೊರಳಿಕೊಳ್ಳೋದಿಲ್ಲ. ಆದರೆ, ಸಣ್ಣದೊಂದು ಗ್ಯಾಪು ಸಿಕ್ಕರೂ ಹೊಸಾ ದೃಷಯ ಕಾವ್ಯವೊಂದಕ್ಕೆ ಅಣಿಗೊಂಡು ಬಿಡೋದು ಸೂರಿ ಸ್ಪೆಷಾಲಿಟಿ. ಇದೀಗ ಅವರು ಅದಕ್ಕೆ ತಕ್ಕುದಾಗಿಯೇ ಹೊಸಾ ಚಿತ್ರಕ್ಕೆ ತಯಾರಾಗಿದ್ದಾರೆ! ಸೂರಿ ಬ್ಯಾಡ್ ಮ್ಯಾನರ್ಸ್ ನಂತರದಲ್ಲಿ ನಿರ್ದೇಶನ ಮಾಡಲಿರೋ ಈ ಚಿತ್ರವನ್ನು ಜಯಣ್ಣ ನಿರ್ಮಾಣ ಮಾಡೋದು ಪಕ್ಕಾ ಆದಂತಿದೆ. ಬ್ಯಾಡ್ ಮ್ಯಾನರ್ಸ್ ಬ್ಯುಸಿಯ ನಡುವೆಯೇ ಸೂರಿ ಜಯಣ್ಣನೊಂದಿಗೆ ಮಾತುಕತೆ ನಡೆಸಿದ್ದಾರೆ. ಅದಕ್ಕೀಗ ಅಧಿಕೃತವಾಗಿಯೇ ಚಾಲನೆಯೂ ಸಿಕ್ಕಂತಾಗಿದೆ. ಅಂದಹಾಗೆ, ಈ ಹೊಸಾ ಸಿನಿಮಾದಲ್ಲಿ ವಿರಾಟ್ ನಾಯಕನಾಗಿ ನಟಿಸಲಿದ್ದಾನಂತೆ. ಮೊದಲ ಚಿತ್ರದಲ್ಲಿಯೇ ಭರವಸೆ ಮೂಡಿಸಿದ್ದ ಹುಡುಗ ವಿರಾಟ್. ಅಪ್ಪಟ…

Read More

bhangarh fort: ವೈಜ್ಞಾನಿಕ (scintific) ಭೂಮಿಕೆಯಲ್ಲಿ ಆಲೋಚಿಸುವವರ ಪಾಲಿಗೆ ಈ ದೆವ್ವ ಭೂತಗಳೆಲ್ಲವೂ (ghost) ಒಂದು ಭ್ರಮೆ. ಅದರ ಆಚೀಚೆಗೆ ಇರೋದು ಬರೀ ಮಿಥ್ಯ ಮಾತ್ರ. ಆದ್ದರಿಂದ ಅದರ ಬಗ್ಗೆ ಹುಡುಕಾಡೋದಕ್ಕೆ ಏನೆಂದರೆ ಏನೂ ಉಳಿದುಕೊಂಡಿಲ್ಲ. ಒಂದೊಂದು ಪ್ರದೇಶಗಳ ರಚನೆ ಮತ್ತು ಅದು ಹುಟ್ಟಿಸೋ ಭೀತ ಭಾವನೆಗಳೇ ದೆವ್ವ-ಭೂತಗಳೆಂಬೋ (ghost) ಕಲ್ಪನೆಯ ಮೂಲ ಅನ್ನೋದು ವಿಚಾರವಂತರ ಅಭಿಮತ. ಆದರೆ, ಇಂಥಾ ಸಥ್ಯದಾಚೆಗೂ ಈ ಸಮಾಜದಲ್ಲಿ ಒಂದಷ್ಟು ನಂಬಿಕೆಗಳು ಹಾಸು ಹೊಕ್ಕಾಗಿವೆ. ಕೆಲ ಪ್ರದೇಶಗಳು ಈವತ್ತಿಗೂ ಭೂತ ಪ್ರೇತಗಳ ಆವಾಸ ಸ್ಥಾನಗಳಾಗಿ ಬಿಂಬಿಸಲ್ಪಟ್ಟಿವೆ. ಈ ಕ್ಷಣಕ್ಕೂ ಐತಿಹಾಸಿಕ ಕೋಟೆಯೊಂದು (ghost fort} ದೆವ್ವಗಳ ಆವಾಸ ಸ್ಥಾನದಂತಾಗಿ ಜನರಲ್ಲೊಂದು ಖಾಯಂ ಭಯವನ್ನ ಬಿತ್ತಿ ಬಿಟ್ಟಿದೆ. ರಾಜಸ್ಥಾನದ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿ ಮೈಚಾಚಿಕೊಂಡಿರೋ ಒಂದು ಕೋಟೆಗೂ ಕೂಡಾ ಅಂಥಾದ್ದೇ ಭೀಕರ ಚರ್ಯೆಯೊಂದು ಅಂಟಿಕೊಂಡಿದೆ. ಈ ಕೋಟೆಯಿರೋದು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಅರಾವಳಿ ಪರ್ವತ ಶ್ರೇಣಿಗಳಲ್ಲಿ. ಭಾನಗಡ್ ಕೋಟೆ ಎಂದೇ ಪ್ರಸಿದ್ಧಿ ಪಡೆದಿರೋ ಈ ಕೋಟೆ ಸುತ್ತಲ…

Read More

delhi: ಕೊರೋನಾ ಕರಾಳ ಪರ್ವವೊಂದನ್ನು ಪ್ರಯಾಸ ಪಟ್ಟು ದಾಟಿಕೊಂಡ ಖುಷಿ ದೇಶವಾಸಿಗಳನ್ನು ಆವರಿಸಕೊಂಡಿದೆ. ಬಹುತೇಕ ಎಲ್ಲರೂ ಕೂಡಾ ಈ ಮಹಾಮಾರಿ ಶಾಶ್ವತವಾಗಿ ತೊಲಗಿತೆಂಬಂತೆ ನಿರಾಳವಾಗಿದ್ದಾರೆ. ಆದರೆ, ಆಗಾಗ ಕೊರೋನಾ ಮಾರಿ ನಾನಾ ಸ್ವರೂಪಗಳಲ್ಲಿ ತನ್ನ ಇರುವಿಕೆಯನ್ನು ಸಾಬೀತು ಪಡಿಸುತ್ತಿದೆ. ಈ ಮೂಲಕ ಮತ್ತೆ ಭಯದ ನಗಾರಿ ಹೊಡೆದುಕೊಳ್ಳುವಂತೆ ಮಾಡುತ್ತಿದೆ. ಕೆಲವೊಮ್ಮೆ ಬೇರ್ಯಾವ ಸುದ್ದಿಗಳಿಗೂ ದಿಕ್ಕಿಲ್ಲದಿದ್ದಾಗ ಮಾಧ್ಯಮ ಮಂದಿ ಕೊರೋನಾ ಹುಳ ಬಿಡುತ್ತಾರೆಂಬ ಆರೋಪವೂ ಸಾರ್ವಜನಿಕ ವಲಯದಲ್ಲಿದೆ. ಆದರೀಗ ದೆಹಲಿಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಏರುಗತಿ ಕಾಣುತ್ತಿರೋದು ಇಡೀ ದೇಶವನ್ನೇ ದಿಗಿಲಾಗಿಸಿಬಿಟ್ಟಿದೆ! ದೆಹಲಿಯಲ್ಲಿ ಆಗಾಗ ಕೊರೋನಾ ಪ್ರಕರಣಗಳು ಕಾಣಿಸಿಕೊಳ್ಳುತ್ತಾ ಬಂದಿದ್ದಾವೆ. ಆದರೆ ಈಗ ಕಂಡು ಬಂದಿರುವಷ್ಟು ಪ್ರಮಾಣದ ಪೀಡಿತರ ಸಂಖ್ಯೆ ಲಾಕ್‍ಡೌನ್ ಮುಗಿದ ನಂತಗರದಲ್ಲಿ ಹಿಂದ್ಯಾವತ್ತೂ ಕಾಣಿಸಿರಲಿಲ್ಲ. ಈಗ್ಗೆ ತಿಂಗಳಿಂದೀಚೆಗೆ ಕೊರೋನಾ ಕಾಣಿಸಿಕೊಂಡಿತ್ತಾದರೂ, ಇತ್ತೀಚೆಗೆ ಒಂದೇ ದಿನದಲ್ಲಿ ದೆಹಲಿ ನಗರದಲ್ಲಿ ಸಾವಿದರ ಆರುನೂರಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿವೆ. ಈ ಮೂಲಕ ಪಾಸಿಟಿವಿಟಿ ರೇಟ್ ಕೂಡಾ ಏಕಾಏಕಿ ಏರುಗತಿ ಕಂಡಿದೆ. ಹೇಳಿಕೇಳಿ ದೆಹಲಿ ಆಗಾಗ…

Read More

ಕೆಜಿಎಫ್ (kgf) ಸರಣಿ ಗೆಲುವಿನ ನಂತರದಲ್ಲಿ ರಾಕಿಂಗ್ ಸ್ಟಾರ್ ಯಶ್ (yash) ಇಂಟರ್‍ನ್ಯಾಷನಲ್ ಸ್ಟಾರ್ ಆಗಿ ಬಿಟ್ಟಿದ್ದಾರೆ. ಸದ್ಯಕ್ಕೀಗ ಅವರ ಮುಂದಿನ ನಡೆಯೇನೆಂಬುದರ ಸುತ್ತಾ ಸಿನಿಮಾ ಪ್ರೇಮಿಗಳ ಚರ್ಚೆಗಳು ಚಾಲ್ತಿಯಲ್ಲಿವೆ. ಒಂದು ಕಡೆಯಿಂದ ಯಶ್ ಕೆಜಿಎಫ್ (kgf3) ಮೂರನೇ ಭಾಗಕ್ಕೆ ತಯಾರಿ ನಡೆಸುತ್ತಿದ್ದಾರೆಂಬ ಸುದ್ದಿ ಕೇಳಿ ಬರುತ್ತಲೇ, ಮತ್ತೊಂದು ಕಡೆಯಿಂದ ಇನ್ನು ಆ ಸರಣಿ ಸಾಕು ಎಂಬಂಥಾ ಮಾತುಗಳೂ ಕೇಳಿ ಬರುತ್ತಿವೆ. ಆದರೂ ಕೂಡಾ ರಾಕಿ ಭಾಯ್‍ಗೆ ಡಾರ್ಕ್ ಶೇಡಿನ ನಶೆ ಇಳಿದಂತೆ ಕಾಣಿಸುತ್ತಿಲ್ಲ. ಹಾಗಂತ, ಯಶ್‍ಗೆ ಬೇರೆ ಅವಕಾಶಗಳ ಕೊರತೆ ಇದೆ ಅಂತಲೂ ಅಲ್ಲ. ಹೊಸಾ ಸಿನಿಮಾದ ವಿಚಾರದಲ್ಲಿ ಅದೆಂಥಾದ್ದೇ ಜಗ್ಗಾಟ ನಡೆದರೂ ಯಶ್ ಮೇಲೆರುವ ಕ್ರೇಜ್ ಮಾತ್ರ ಒಂದಿನಿತೂ ಕಡಿಮೆಯಾಗಿಲ್ಲ! ಒಂದು ಕಾಲದಲ್ಲಿ ಪರಭಾಷೆಗಳಲ್ಲಿ ಪ್ರಸಿದ್ಧಿ ಪಡೆದ ನಟಿಯರನ್ನು ಕನ್ನಡಕ್ಕೆ ಕರೆತರುವ ಸರ್ಕಸ್ಸುಗಳಾಗುತ್ತಿದ್ದವು. ಆದರೆ, ಅಂಥಾ ನಟಯರನ್ನು ಕರೆತರೋದು ಹೆಚ್ಚಿನ ಸಂದರ್ಭದಲ್ಲಿ ಕನಸಿನ ಮಾತಾಗುತ್ತಿತ್ತು. ಆದರೀಗ ಅದೇ ಪರಭಾಷಾ ಚಿತ್ರರಂಗದ ನಂಬರ್ ಒನ್ ನಟಿಯರೆಲ್ಲ ಯಶ್‍ಗೆ ನಾಯಕಿಯಾಗಿ ಕನ್ನಡಕ್ಕೆ…

Read More

ನೀವೇನಾದರೂ ಕೊಂಚ ಗ್ರಾಮೀಣ ಪ್ರದೇಶದವರಾಗಿದ್ದರೆ ಕಣಜನ ಹುಳುವಿನ (Hornet Insect) ಪರಿಚಯವಿರುತ್ತೆ. ಪ್ರದೇಶದಿಂದ ಪ್ರದೇಶಕ್ಕೆ ಇದರ ಹೆಸರು ಬದಲಾದೀತೇನೋ. ಆದ್ರೆ ಅದರ ದಾಳಿಯ ಭಯ ಮಾತ್ರ ಎಲ್ಲ ಕಡೆಯೂ ಅಷ್ಟೇ ತೀವ್ರವಾಗಿರುತ್ತೆ. ಕೊಂಚ ಕಾಡಿನ (forrest) ಅಂಚಿನಲ್ಲಿರೋ ಕಣಜನ ಹುಳುವಿನ (Hornet Insect ದಾಳಿ ನಿಜಕ್ಕೂ ಭೀಕರವಾಗಿರುತ್ತೆ. ತಲೆಗೇನಾದರೂ ಐದಾರು ಹುಳ ಚುಚ್ಚಿದರೆ ಮನುಷ್ಯ ಸತ್ತೇಹೋಗಿ ಬಿಡ್ತಾನೆ. ಜೇನು ಹುಳಗಳಿಗಿಂತ ತುಸು ದೊಡ್ಡ ಗಾತ್ರ ಕಣಜನ ಹುಳುಗಳದ್ದು. ಜೇನು ಹುಳುಗಳಿರೋ ಪ್ರದೇಶದಲ್ಲಿ ಇವುಗಳ ಹಾಜರಿ ಇರುತ್ತೆ. ಜೇನು ಸಾಕಣೆ ಮಾಡುವಲ್ಲಿಯಂತೂ ಇವು ಇದ್ದೇ ಇರುತ್ತವೆ. ಜೇನು ನೊಣಗಳನ್ನ ಕೊಂದು ಮಕರಂದ ಅಪಹರಿಸುವಲ್ಲಿಯೂ ಕಣಜಗಳದ್ದು ಎತ್ತಿದ ಕೈ. ಇಂಥಾ ಕಣಜಗಳು ಯಾವುದೇ ಪ್ರಚೋದನೆ ಇಲ್ಲದೆಯೂ ಮನುಷ್ಯರ ಮೇಲೆ ದಾಳಿ ಮಾಡಿ ಬಿಡುತ್ತವೆ. ಜೇನು ಹುಳುಗಳಾದರೆ ಕೆಣಕಿದರೆ ಮಾತ್ರವೇ ಆತ್ಮರಕ್ಷಣೆಗೆ ದಾಳಿ ಮಾಡುತ್ವೆ. ಆದ್ರೆ ಈ ಕಣಜನ ಹುಳುಗಳು ಮಾತ್ರ ಅದೇಕೆ ಪ್ರಚೋದನೆ ಇಲ್ಲದೆ ದಾಳಿ ಮಾಡುತ್ವೆ ಅನ್ನೋದು ಗ್ರಾಮೀಣರನ್ನ ಕಾಡೋ ಪ್ರಶ್ನೆ. ಅದಕ್ಕೆ…

Read More

ಒಂದು ಕಡೆಯಲ್ಲಿ ಮೂಢ ನಂಬಿಕೆಗಳು (superstition) ಈ ಸಮಾಜದ (society) ಆಳದಲ್ಲಿ ಬೇರೂರಿಕೊಂಡಿವೆ. ಅದರ ವಿಡುದ್ಧ ಸಾಕಷ್ಟು ವರ್ಷಗಳಿಂದಲೂ ನಾನಾ ಜಾಗೃತಿಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದೇ ಸಮಾಜದ ಮತ್ತೊಂದು ಮಗ್ಗುಲಲ್ಲಿ ಪ್ರಾಕೃತಿಕ ಅಚ್ಚರಿಗಳು, ನಾಸ್ತಿಕ ನಂಬಿಕೆಗಳು ಎಲ್ಲವಕ್ಕೂ ಸವಾಲೊಡ್ಡುವಂತೆ ಪ್ರಜ್ವಲಿಸುತ್ತಲೇ ಇದ್ದಾವೆ. ಹುಡುಕಿದರೆ ನಮ್ಮಲ್ಲಿ ವಿಜ್ಞಾನಕ್ಕೇ ನೇರ ಸವಾಲೆಸೆಯುವಂಥಾ, ಬರಿಗಣ್ಣಿಗೆ ಕಾಣಿಸಿದ್ದನ್ನು ನಂಬಲು ಸಾಧ್ಯವಾಗದಂಥಾ ಅಚ್ಚರಿಗಳಿದ್ದಾವೆ. ಅಂಥಾ ಅಚ್ಚರಿಗಳಲ್ಲಿ ಹಿಮಾಚಲ ಪ್ರದೇಶದಲ್ಲಿರೋ ಜ್ವಾಲಾಜಿ ಮಾತಾ ಮಂದಿರ ಪ್ರಮುಖವಾದದ್ದು. ಇದು ಭಾರತೀಯ ಆಧ್ಯಾತ್ಮಿಕ ವಲಯದಲ್ಲಿಯೇ ಪ್ರಧಾನವಾದ ಶಕ್ತಿ ಪೀಠಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಸಾಮಾನ್ಯವಾಗಿ ಯಾವುದೇ ದೇವಸ್ಥಾನಗಳಲ್ಲಿತಯಾದ್ರೂ ದೇವರ ವಿಗ್ರಹಗಳಿಗೆ ಪೂಜೆ ಸಲ್ಲಿಸಲಾಗುತ್ತೆ. ಆದರೆ ಈ ದೇವಳದಲ್ಲಿ ಒಂದು ಬೆಂಕಿಯ ಜ್ವಾಲೆಯನ್ನೇ ಆರಾಧಿಸಲಾಗುತ್ತೆ. ಹಾಗಂತ ಅದು ಮನುಷ್ಯರ್ಯಾರೋ ಹಚ್ಚಿಟ್ಟ ದೀಪವಲ್ಲ. ದೊಂದಿಯೂ ಅಲ್ಲ. ಅದು ಅದೆಷ್ಟೋ ಶತಮಾನಗಳ ಹಿಂದಿನಿಂದಲೂ ಸಣ್ಣ ಕಿಂಡಿಯ ಮೂಲಕ ಭೂಗರ್ಭದಿಂದ ಹೊರ ಹೊಮ್ಮುತ್ತಿರೋ ಜ್ವಾಲೆ. ಇದರ ಮಗ್ಗುಲಲ್ಲಿಯೇ ಕುದಿಯೋ ನೀರಿನ ಒರತೆಯೂ ಇದೆ ಅನ್ನೋದು ಈ ಸ್ಥಳದ ಮತ್ತೊಂದು ವಿಶೇಷ.…

Read More

ಸುಚೇಂದ್ರ ಪ್ರಸಾದ್ (suchendra prasad) ನಿರ್ದೇಶನದ `ಮಾವು ಬೇವು’ (maavu bevu) ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಒಂದೊಳ್ಳೆ ಕಂಟೆಂಟು ಹೊಂದಿರುವ ಚಿತ್ರ ಪ್ರಚಾರದ ಪಟ್ಟುಗಳಾಚೆಗೂ ಪ್ರೇಕ್ಷಕರನ್ನು ಸೆಳೆಯುತ್ತದೆ, ಆಕರ್ಷಣೆಯ ಕೇಂದ್ರಬಿಂದುವಾಗುತ್ತದೆ ಎಂಬುದಕ್ಕೆ ಬಹುಶಃ ಮಾವು ಬೇವು ಚಿತ್ರಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ತನ್ನ ಆಂತರ್ಯ ಕಸುವಿನ ಕಾರಣದಿಂದಲೇ ಹೀಗೆ ಸದ್ದು ಮಾಡುತ್ತಿರುವ `ಮಾವು ಬೇವು’ (maavu bevu)  ಹಲವಾರು ವಿಶೇಷತೆಗಳನ್ನೊಳಗೊಂಡಿದೆ. ಇಲ್ಲಿ ಈ ಕಾಲಮಾನಕ್ಕೆ ಕನ್ನಡಿ ಹಿಡಿಯುವಂಥಾ ಅದ್ಭುತ ಕಥಾನಕವಿದೆ. ನಮ್ಮ ಜೊತೆಯಲ್ಲೇ ಹೆಜ್ಜೆ ಹಾಕುವಂತೆ ಭಾಸವಾಗೋ ಪಾತ್ರಗಳಿವೆ. ಅಂಥಾದ್ದೊಂದು ವಿಶಿಷ್ಟವಾದ ಪಾತ್ರಕ್ಕೆ ಕನ್ನಡ ಕಿರುತೆರೆ ಮತ್ತು ಚಿತ್ರರಂಗದ ಪ್ರತಿಭಾನ್ವಿತ ನಟ ನೀನಾಸಂ ಸಂದೀಪ್ (neenasam sandeep) ಜೀವ ತುಂಬಿದ್ದಾರೆ. ಈ ಮೂಲಕ ಎಸ್. ರಾಜಶೇಖರ್ ನಿರ್ಮಾಣ ಮಾಡಿರುವ ##ಮಾವು ಬೇವು ಚಿತ್ರದ ನಾಯಕನಾಗಿ ನಟಿಸಿರುವ ತುಂಬು ತೃಪ್ತಿಯೊಂದು ಸಂದೀಪ್ ಅವರಲ್ಲಿದೆ. ನೀನಾಸಂ ಸಂದೀಪ್ ರಂಗಭೂಮಿಯಿಂದ ಬಂದ ಗಟ್ಟಿ ಪ್ರತಿಭೆ. ಯಾವ ಪಾತ್ರವಾದರೂ ಸೈ ಎಂಬಂಥಾ ಛಾತಿ ಹೊಂದಿರುವ…

Read More

ಸದ್ಯದ ಮಟ್ಟಿಗೆ ಬಿಜೆಪಿ (bjp) ಎಂಬುದು ಅಕ್ಷರಶಃ ಮುರಿದ ಮನೆಯಂತಾಗಿದೆ. ಉತ್ತರದ ಬಿಜೆಪಿ ದೊರೆಗಳ ಸಾರಥ್ಯದಲ್ಲಿ ಅದೆಂಥಾದ್ದೋ ಕ್ರಾಂತಿ ಮಾಡಲು ಹೋಗಿ, ಬಿಜೆಪಿ ಬುಡದಲ್ಲೇ ಕ್ಷಣಕ್ಕೊಂದು ಬಾಂಬುಗಳು ಭಡಾರೆನ್ನಲಾರಂಭಿಸಿವೆ. ಹಾಗೆ ನೋಡಿದರೆ, ದಶಕಗಳ ಹಿಂದಿದ್ದ ಸ್ಥಿತಿಯತ್ತಲೇ ಬಿಜೆಪಿ (bjp) ಭಾರೀ ವೇಗದಿಂದ ಹಿಮ್ಮುಖ ಚಲನೆ ಮಾಡುತ್ತಿರುವಂತೆಯೂ ಭಾಸವಾಗುತ್ತಿದೆ. ಇಂಥಾ ಹೊತ್ತಿನಲ್ಲಿ ಮುರಿದ ಮನೆಯ ಮ್ಲಾನ ವದನದ ಹಿರೀಕನಂತೆ ಕಾಣಿಸುತ್ತಿರುವರು (yadiyurappa) ಯಡಿಯೂರಪ್ಪ. ತಾವೇ ಶ್ರಮ ಪಟ್ಟು ಬೆಳೆಸಿದ ಬಿಜೆಪಿ ತನ್ನ ಕಣ್ಣೆದುರೇ ಮುರುಟಿಕೊಳ್ಳುತ್ತಿರುವ ಧಾರುಣ ಕಂಡು ಮರುಗಲೂ ಆಗದೆ, ಸಂಭ್ರಮಿಸಲೂ ಆಗದೆ ಯಡ್ಡಿ (yadiyurappa) ವಿಲಗುಡುತ್ತಿದ್ದಾರೆ! ಕಳೆದ ಬಾರಿ ಆಪರೇಷನ್ನಿನ ಮೂಲಕವೇ ಮತ್ತೆ ಸಿಎಂ ಆಗೋ ಆಸೆಯನ್ನು ಪೂರೈಸಿಕೊಂಡಿದ್ದವರು ಯಡಿಯೂರಪ್ಪ. ಈ ಬಾರಿಯಾದರೂ ಕೊಂಚ ನಿರಾಳವಾಗಿ ಅಧಿಕಾರ ನಡೆಸಬೇಕೆಂಬ ಅವರ ಕನಸಿಗೆ ಬಹಳ ಬೇಗನೆ ತಣ್ಣೀರೆರಚಿದಂತಾಗಿತ್ತು. ಖುದ್ದು ಬಿಜೆಪಿಯಲ್ಲಿಯೇ ಅವರನ್ನು ಅಧಿಕಾರದಿಂದಿಳಿಸುವಂಥಾ ಕಸರತ್ತುಗಳು ಚಾಲನೆ ಪಡೆದುಕೊಂಡಿದ್ದವು. ಕಡೆಗೂ ವರ್ಷ ಬಾಕಿ ಇರುವಾಗಲೇ ಯಡಿಯೂರಪ್ಪ ಕಣ್ಣೀರುಗರೆಯುತ್ತಾ ಸಿಎಂ ಕುರ್ಚಿಯಿಂದ ಇಳಿದು ಹೋಗುವಂತಾಗಿತ್ತು. ಈ…

Read More

actress ramola: ಕಿರುತೆರೆಯಲ್ಲಿ ಒಂದಷ್ಟು ಪ್ರಸಿದ್ಧಿ ಪಡೆಯುತ್ತಲೇ ಏಕಾಏಕಿ ಹಿರಿತೆರೆಗೆ ಲಗ್ಗೆಯಿಡೋದು ಅನೇಕ ನಟ ನಟಿಯರ ಮಹಾ ಕನಸು. ಆದರೆ, ಆ ಯೋಗ ಮಾತ್ರ ಅಷ್ಟು ಸಲೀಸಾಗಿ ಎಲ್ಲರಿಗೂ ದಕ್ಕುವಂಥಾದ್ದಲ್ಲ. ಆದರೆ, ಹಿರಿತೆರೆಯಲ್ಲಿ (film industry) ಮಿಂಚುವ ಸೆಳೆತವಿರುತ್ತದಲ್ಲಾ? ಅದು ನಾನಾ ಆಟ ಆಡಿಸುತ್ತೆ. ಕೆಲವರನ್ನು ಹತ್ತಿದ ಏಣಿಯನ್ನೇ ಒದ್ದು ಕೆಡವಿ ಬಿಡುವಂತೆಯೂ ಪ್ರೇರೇಪಿಸುತ್ತೆ. ಹಾಗೆ ತಿಮಿರು ತೋರಿಸಿ ಸೀರಿಯಲ್ಲುಗಳಿಂದ ಅರ್ಧಕ್ಕೇ ಎದ್ದು ಬಂದವರನೇಕರು ಹೇಳ ಹೆಸರಿಲ್ಲದಂತೆ ಮಾಯವಾಗಿದ್ದಾರೆ. ಇನ್ನೂ ಕೆಲ ಮಂದಿ ಗಾಂಧಿನಗರದ ಸಂದಿಗೊಂದಿಗಳಲ್ಲಿ ಅಂತರ್‍ಪಿಶಾಚಿಗಳಂತೆ ಅಂಡಲೆಯುತ್ತಿದ್ದಾರೆ. ಈ ಹುಡುಗಿ (ramola) ರಮೋಲಾ ಕನ್ನಡತಿ (kannadathi) ಎಂಬ ಹಿಟ್ ಸೀರಿಯಲ್ಲಿನಿಂದ ಇದ್ದಕ್ಕಿಂದಂತೆ ಮಾಯವಾಗಿ, ಸಿನಿಮಾದಲ್ಲಿ ಪ್ರತ್ಯಕ್ಷಳಾದಾಗ ಬಹುತೇಕರು ಈಕೆಯೂ ಸೋತವರ ಸಾಲಿಗೆ ಸೇರುತ್ತಾಳೆಂದೇ ಅಂದುಕೊಂಡಿದ್ದರು. ಆದರೆ, ಆಕೆಯೀಗ ಅಕ್ಷರಶಃ ಅವಕಾಶಗಳ ಒಡ್ಡೋಲಗದಲ್ಲಿ ಮಿಂಚಲಾರಂಭಿಸಿದ್ದಾಳೆ! ವರ್ಷದ ಹಿಂದೆ ಕನ್ನಡತಿ ಅಂತೊಂದು ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಪ್ರತಿಭಾನ್ವಿತ ನಟಿ ರಂಜನಿ ರಾಘವನ್ ಆ ಸೀರಿಯಲ್ಲಿನ ನಾಯಕಿಯಾಗಿ ನಟಿಸಿದ್ದಳು. ಆಕೆಗೆ ಸದಾ…

Read More