Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಕಡೆಗೂ ಅಳೆದೂ ತೂಗಿ (bjp) ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡಿದೆ. ಹೊಸಾ ಮುಖಗಳಿಗೆ ಮಣೆ ಹಾಕುವ ನೆರಳಿನಲ್ಲಿ. (rss) ಆರೆಸೆಸ್ ಆಣತಿಯೇ ಪ್ರಧಾನವಾಗಿ ಕೆಲಸ ಮಾಡಿರೋದು ಕೂಡಾ ಮೇಲು ನೋಟಕ್ಕೇ ಗೋಚರಿಸಿದೆ. (congress) ಕಾಂಗ್ರೆಸ್ ಮಂದಿಗೆ ಟಾಂಗ್ ಕೊಡುವ ನೆಪದಲ್ಲಿ ಕೆಲವರನ್ನು ವ್ಯವಸ್ಥಿತವಾಗಿ ಹಣಿಸು, ಮೂಲೆಗುಂಪು ಮಾಡುವ ಹುನ್ನಾರಗಳೂ ಕೂಡಾ ಗಮನ ಸೆಳೆದಿವೆ. ಕೆಲ ಮಂದಿಯನ್ನಂತೂ ಅವರಿಗಿಷ್ಟವಿಲ್ಲದಿದ್ದರೂ ಎತ್ತಿ ಯಾರೆದುರೋ ನಿಲ್ಲಿಸಿದಂತೆಯೂ ಭಾಸವಾಗುತ್ತಿದೆ. ಅಂಥಾ ಹರಕೆಯ ಕುರಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವವರು (v. somanna) ವಿ. ಸೋಮಣ್ಣ. ಅಧಿಕಾರದಾಸೆಯಿಂದಲೇ ಕಮಲವನ್ನು ಎದೆಗವುಚಿಕೊಂಡಿದ್ದ ಸೋಮಣ್ಣನೀಗ, ಈ ಬಾರಿಯ ಚುನಾವಣೆಯೇ ತನ್ನ ರಾಜಕೀಯ ಬದುಕಿನ ಕೊನೇಯ ಕಣವಾಗುತ್ತದೇನೋ ಎಂಬಂಥಾ ಭಯದಲ್ಲಿದ್ದಾರೆ. ಇದೆಲ್ಲದಕ್ಕೂ ಕಾರಣವಾಗಿರೋದು ಖುದ್ದು (bjp) ಬಿಜೆಪಿ ನಾಯಕರ ರಣತಂತ್ರಗಳೇ! ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದು ವೀರಾಧಿ ವೀರರಂತೆ ಪೋಸು ಕೊಡುತ್ತಲೇ, ಎಸೆದ ಕಲ್ಲು ಎದೆ ಮೇಲೆ ಬಿದ್ದಾಗ ಕುಂಯ್ಯೋ ಅನ್ನಲೂ ಆಗದೆ, ನೋವು ತಡೆದುಕೊಳ್ಳುವ ಶಕ್ತಿಯೂ ಇಲ್ಲದೆ ಮುಲುಕ್ಯಾಡುವುದು ಬಿಜೆಪಿಗರ ಜಾಯಮಾನ. ಅತ್ತ…

Read More

froug vomit: ನಮಗೆ ಗೊತ್ತಿರೋ ಒಂದಷ್ಟು ಪ್ರಬೇಧದ ಜೀವಿಗಳ ಬದುಕಿನ ಕ್ರಮದ ಬಗ್ಗೆ ನಮಗೆಲ್ಲ ತೆಳುವಾಗಿ ಗೊತ್ತಿರುತ್ತೆ. ಅವುಗಳ (food culture) ಆಹಾರ ಕ್ರಮ, ಅವುಗಳ ವರ್ತನೆ, ಅವುಗಳಿಂದ ನಮಗಾಗಬಹುದಾದ ಅಪಾಯಗಳ ಬಗ್ಗೆ ಮಾತ್ರವೇ ನಮ್ಮ ದೃಷಿ ನೆಟ್ಟಿರುತ್ತೆ. ಆದರೆ ನಮ್ಮ ಕಣ್ಣಿಗೆ ಕಾಣಿಸೋ ಅದೆಷ್ಟೋ ಜೀವಿಗಳ ಬಗ್ಗೆ ನಮಗೆಲ್ಲ ಏನೆಂದರೆ ಏನೂ ಗೊತ್ತಿರೋದಿಲ್ಲ. ಅದೇನಿದ್ದರೂ ಅಸೀಮ ಕುತೂಹಲ, ತಪಸ್ಸಿನಂಥಾ ಅಧ್ಯಯನಗಳಿಗೆ ಮಾತ್ರವೇ ದಕ್ಕುವಂಥಾದ್ದು. ಈ ಮಾತಿಗೆ ಕಪ್ಪೆಗಳಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಕಪ್ಪೆಗಳಲ್ಲಿ ನಾನಾ ಪ್ರಬೇಧಗಳಿದ್ದಾವೆ. ಮನುಷ್ಯರು ವಾಸವಿರೋ ಪ್ರದೇಶಗಳಲ್ಲಿಯೇ ಒಂದಷ್ಟು ಜಾತಿಯ ಕಪ್ಪೆಗಳು ವಾಸಿಸುತ್ತವೆ. ಮಲೆನಾಡಿನ ಪ್ರದೇಶಗಳಲ್ಲಿಯಂತೂ ಅವೂ ಕೂಡಾ ಮನುಷ್ಯರ ಸಹಜೀವಿಗಳಂತಿರುತ್ತವೆ. ಆದರೆ ಹಾಗೆ ಕಪ್ಪೆಗಳನ್ನು ದಿನನಿತ್ಯ ನೋಡುವವರಿಗೂ ಕೂಡಾ ಅವುಗಳ ಬಗ್ಗೆ ಏನೂ ಗೊತ್ತಿರೋದಿಲ್ಲ. ಅದೆಷ್ಟೋ ವರ್ಷಗಳ ಕಾಲ ಇಂಥಾ ಕಪ್ಪೆಗಳ ಬಗ್ಗೆ ಜೀವ ಶಾಸ್ತ್ರಜ್ಞರು ಅಧ್ಯಯನ ನಡೆಸುತ್ತಾ ಬಂದಿದ್ದಾರೆ. ಜಗತ್ತಿನ ನಾನಾ ಭಾಗಗಳಲ್ಲಿ ನಡೆದಿರೋ ಇಂಥಾ ಅಧ್ಯಯನಗಳು ಕಪ್ಪೆಗಳ ಜೀವನಕ್ರಮದ ಬಗ್ಗೆ ಅಚ್ಚರಿಯ ಸಂಗತಿಗಳನ್ನ…

Read More

ಮನುಷ್ಯರ ದೇಹ (human body) ರಚನಾ ಕ್ರಮವೇ ಒಂದು ಪ್ರಾಕೃತಿಕ ಅದ್ಭುತ. ಅದು ಈ ಜಗತ್ತಿನಲ್ಲಿರೋ ದಿವ್ಯ ಶಕ್ತಿಯೊಂದರ ಲೀಲೆ ಅನ್ನೋರಿದ್ದಾರೆ. ಅದನ್ನೇ ಭಗವಂತನ ಕೊಡುಗೆ ಅನ್ನುವವರೂ ಇದ್ದಾರೆ. ಆದರೆ ವಿಜ್ಞಾನ ಮಾತ್ರ ಅದರಾಚೆಗಿನ ಸತ್ಯಗಳನ್ನ ತೆರೆದಿಡುತ್ತಲೇ ಬಂದಿದೆ. ಬಾಹ್ಯ ಸೌಂದರ್ಯದ ಮಾತು ಹಾಗಿರಲಿ; ಮನುಷ್ಯದ ದೇಹದೊಳಗಿನ ರಚನೆ ನಿಜಕ್ಕೂ ವಿಸ್ಮಯ. ಅಲ್ಲಿರೋ ಒಂದೊಂದು ಆಯವ್ಯಯಗಳದ್ದೂ ಒಂದೊಂದು ಬಗೆ. ಅವು ಇಡೀ ದೇಹವನ್ನು ಸಮಸ್ಥಿತಿಯಲ್ಲಿಡುವ ರೀತಿ, ಅವು ಕಾರ್ಯ ನಿರ್ವಹಿಸುವ ಕ್ರಮಗಳೆಲ್ಲವೂ ರೋಚಕ. ಅದರಲ್ಲಿಯೂ ನಮ್ಮ ದೇಹದ ಆಧಾರಸ್ತಂಭದಂತಿರೋ ಮೂಳೆಗಳ (bones) ಶಕ್ತಿಯ ಬಗ್ಗೆ ಕೇಳಿದರಂತೂ ಯಾರೇ ಆದರೂ ಅವಾಕ್ಕಾಗುವಂತಿದೆ. ಸಾಮಾನ್ಯವಾಗಿ ಮನುಷ್ಯರ ತೂಕದಲ್ಲಿ ವೈಪರೀತ್ಯಗಳಿರುತ್ತವೆ. ಕೆಲ ಮಂದಿ ಕ್ವಿಂಟಾಲುಗಟ್ಟಲೆ ತೂಕ ಇರ್ತಾರೆ. ಅಂಥವರಿಗೆ ತಮ್ಮ ದೇಹವನ್ನು ತಾವೇ ಹೊರೋದೂ ಕೂಡಾ ತ್ರಾಸದಾಯಕವಾಗಿರುತ್ತೆ. ಆದ್ದರಿಂದಲೇ ಕೂತಲ್ಲಿಂದ ಮೇಲೇಳಲೂ ಕೂಡಾ ಯಾವುದಾದರೊಂದು ಆಸರೆ ಬೇಡುತ್ತಾರೆ. ಹಾಗಿರುವಾಗ ಆ ಪಾಟಿ ದೇಹ ಉದುರಿಕೊಳ್ಳದಂತೆ ಸಮಸ್ಥಿತಿಯಲ್ಲಿಟ್ಟಿರೋದು ನಮ್ಮ ದೇಹದ ತುಂಬಾ ಹರಡಿಕೊಂಡಿರೋ ಮೂಳೆಗಳು. ಈ ವಿಚಾರವೇ…

Read More

ಈಗೊಂದೆರಡು ದಶಕಗಳ ಹಿಂದೆ ಕಾಲದ ಕಾಲುಗಳಿಗೆ ಈ ಪಾಟಿ ವೇಗ ಇರಲಿಲ್ಲವೇನೋ… ಹೀಗಂತ ಸೆನ್ಸಿಟಿವ್ ಮನಸ್ಥಿತಿಯ ಜನರಿಗೆಲ್ಲ ಒಂದಲ್ಲ ಒಂದು ಹಂತದಲ್ಲಿ ಅನ್ನಿಸಿರುತ್ತೆ. ಅದು ಭ್ರಮೆಯೋ, ವಾಸ್ತವವೋ ಭಗವಂತನೇ ಬಲ್ಲ. ಆದರೆ ಆ ಕಾಲಘಟ್ಟದಲ್ಲಿ ಎಲ್ಲವೂ ನಿಧಾನವಾಗಿ ಚಲಿಸಿತ್ತೇನೋ ಅಂತಲೇ ಭಾಸವಾಗುತ್ತೆ. ಹಾಗಿದ್ದ ಮೇಲೆ ಆ ದಿನಮಾನದಲ್ಲಿ ಹುಟ್ಟಿದ ಮಕ್ಕಳು ಬೇಗ (fast growthing) ಬೆಳೆಯೋದುಂಟೇ? ಮಕ್ಕಳು ಹುಟ್ಟಿ ಅವು ದೊಡೋರಾಗೋದಕ್ಕೂ ಕೂಡಾ ಸುದೀರ್ಘ ಕಾಲಮಾನವೇ ಬೇಕಾಗುತ್ತಿತ್ತೇನೋ ಅನ್ನಿಸುತ್ತೆ. ಅದೇ ರೀತಿ ಈಗಿನ ಕಾಲಮಾನದಲ್ಲಿ ಕಣ್ಣೆದುರೇ ಹುಟ್ಟಿದ ಮಕ್ಕಳು ಬಹು ಬೇಗನೆ ಬೆಳೆಯುತ್ತಿದ್ದಾರೇನೋ (fast growthing) ಎಂಬಂತೆಯೂ ಗುಮಾನಿ ಮೂಡುತ್ತೆ. ಈಗ ನೆನ್ನೆ ಮೊನ್ನೆ ಹುಟ್ಟಿದ ಮಕ್ಕಳೂ ವೇಗವಾಗಿ ಬೆಳೆಯುತ್ತವೆ. ನಮ್ಮ ಜಮಾನಕ್ಕಿಂತಲೂ ಸ್ಪೀಡಾಗಿ ವರ್ತಿಸಲಾರಂಭಿಸುತ್ತವೆ. ಮೊಬೈಲಿನಂಥ ಉಪಕರಣಗಳನ್ನು ನಮಗಿಂತಲೂ ಲೀಲಾಜಾಲವಾಗಿ ಬಳಸೋದನ್ನೂ ಕಲಿತುಕೊಳ್ಳುತ್ತವೆ. ಹಾಗಾದ್ರೆ ನಿಜಕ್ಕೂ ಈ ಜಮಾನದ ಮಕ್ಕಳ ಬೆಳವಣಿಗೆ ವೇಗವಾಗಿದೆಯಾ? ಅಥವಾ ಹಾಗನ್ನಿಸೋದು ನಮ್ಮ ಭ್ರಮೆಯಾ? ಗೊತ್ತಿಲ್ಲ. ಆದರೆ ಒಂದು ಸಂಶೋಧನೆ ಯಾವ ಕಾಲಮಾನದಲ್ಲಿ ಮಕ್ಕಳು ವೇಗವಾಗಿ…

Read More

ರಣ ಬೇಸಗೆಯೊಂದು (summer season) ಕಡೆಗಾಲದತ್ತ ಹೆಜ್ಜೆ ಹಾಕುತ್ತಿರುವ ಕಾಲಮಾನವಿದು. ಥರ ಥರದ ಖಾಯಿಲೆ, ವಾರಗಟ್ಟಲೆ ಹೈರಾಣು ಮಾಡಿ ಹಾಕುವ ವಿಕ್ಷಿಪ್ತ (fever) ಜ್ವರದ ಬಾಧೆಯಿಂದ ಜನ ಕಂಗಾಲಾಗಿದ್ದಾರೆ. ಬೇರೇನೂ ಗತಿಯಿಲ್ಲದ ಘಳಿಗೆಯಲ್ಲಿ ಕೊರೋನಾ ವೈರಸ್ಸಿನ ಹುಳ ಬಿಡುವ ಮಾಧ್ಯಮಗಳು, ಬೇರೆ ಸರಕುಗಳನ್ನು ಜಗಿಯುತ್ತಿರುವಾಗಲೇ, ಕೊರೋನಾ ಕೇಸುಗಳ ಸಂಖ್ಯೆಯೂ ಏರುಗತಿ ಕಾಣುತ್ತಿದೆ. ಹಾಗಂತ ಇಂಥಾ ವಿದ್ಯಮಾನಗಳು ಕೇವಲ ನಮ್ಮ ದೇಶಕ್ಕ ಮಾತ್ರವ ಸೀಮಿತವಾಗಿದೆ ಅಂದುಕೊಳ್ಳುವಂತಿಲ್ಲ. ಯಾಕೆಂದರೆ, ಜಗತ್ತಿನ ಅದೆಷ್ಟೋ ದೇಶಗಳು ಈ ಕ್ಷಣದಲ್ಲಿ ಚಿತ್ರ ವಿಚಿತ್ರವಾದ, (corona virus) ಕೊರೋನಾಕ್ಕಿಂತಲೂ ಭೀಕರವಾದ ವೈರಸ್ಸುಗಳ ಕಾಟದಿಂದ ಕಂಗಾಲಾಗಿವೆ! ಸದ್ಯಕ್ಕೆ ಅತ್ಯಂತ ಹೆಚ್ಚು ಬಡತನದ ಬೇಗೆ ಹೊಂದಿರುವ ಆಫ್ರಿಕಾದಲ್ಲಿ ವಿಚಿತ್ರವಾದೊಂದು ವೈರಸ್ ಹಾವಳಿ ವಿಪರೀತಕ್ಕಿಟ್ಟುಕೊಂಡಿದೆ. ತಲೆ ನೋವು, ವಾಂತಿಯಂಥಾದ್ದೆಲ್ಲ ತೀರಾ ಮಾಮೂಲಿ ಆರೋಗ್ಯ ಸಮಸ್ಯೆಗಳೆಂದೇ ಬಿಂಬಿಸಿಕೊಂಡಿವೆ. ಆದರೆ, ಆಫ್ರಿಕಾದ ಕೆಲ ಭಾಗಗಳಲ್ಲಿ ಮಾತ್ರ ಅಂಥಾ ಲಕ್ಷಣಗಳು ಕಂಡು ಬಂತೆಂದರೆ ಜನ ತತ್ತರಿಸಿ ಹೋಗುತ್ತಿದ್ದಾರೆ. ಯಾಕೆಂದರೆ, ಅಲ್ಲಿ ಹಬ್ಬಿಕೊಂಡಿರುವ ಅನಾಹುತಕಾರಿ ವೈರಸ್ಸೊಂದರ ಆರಂಭಿಕ ಚಿನ್ಹೆಗಳಾಗಿ ವಿಪರೀತ…

Read More

ಬೆಂಗಳೂರಿನ ತುಂಬಾ ಹರಡಿಕೊಂಡಿರುವ ಬಹುತೇಕ ಪಾರ್ಲರ್ ಹಾಗೂ ಸ್ಪಾಗಳ (massage parlour) ಅಸಲೀ ರೂಪವೇ ಬೇರೆಯದ್ದಿದೆ. ಹೊರಗೆ ಸೌಂದರ್ಯ ಕಾಳಜಿಯ ರಂಗು ರಂಗಿನ ಬೋರ್ಡು, ಒಳಗೆ ಕಾಮದ ಕಥಕ್ಕಳಿ… ಇದು ಬೆಂಗಳೂರಿನ ತುಂಬಾ ಹಬ್ಬಿಕೊಂಡಿರುವ ಮಸಾಜ್ ಸೆಂಟರ್ ಅರ್ಥಾತ್ ಸ್ಪಾಗಳ ಅಸಲಿ ಅಂತರಾಳ. ಐಟಿ ಸಿಟಿಯ ನಿಯಾನ್ ದೀಪಗಳಾಚೆಗಿನ ಮಿಣುಕು ಕತ್ತಲಲ್ಲಿ ನಡೆಯುವ ವೇಶ್ಯಾ ದಂಧೆಯದ್ದೇ ಒಂದು ತೂಕವಾದರೆ, ಬೃಹತ್ ಮಹಲುಗಳಲ್ಲಿ ನಡೆಯುವ ಇಂಥಾ ಮಸಾಜ್ ಪಾರ್ಲರುಗಳಲ್ಲಿ ಚಾಲ್ತಿಯಲ್ಲಿರುವ ಸೆಕ್ಸ್ ರ‍್ಯಾಕೆಟ್ಟಿನದ್ದೇ ಮತ್ತೊಂದು ತೂಕ. ಇತ್ತೀಚೆಗಂತೂ ನಗರದ ತುಂಬಾ ಇಂಥಾ ಹೈಟೆಕ್ ವೇಶ್ಯಾ (sex racket) ಅಡ್ಡೆಗಳು ಎಗ್ಗಿಲ್ಲದೆ ದಂಧೆ ನಡೆಸುತ್ತಿವೆ. ಪಿಂಪ್‌ಗಳಂತೂ ಯಾವುದೇ ಭಯವಿಲ್ಲದೆ ಗಿರಾಕಿ ಹುಡುಕಿ ಕಾಸು ಪೀಕುವ ಕೆಲಸದಲ್ಲಿ ಫುಲ್ ಬ್ಯುಸಿ. ಬೆಂಗಳೂರಿನ ಸಖಲ ಏರಿಯಾಗಳಲ್ಲಿಯೂ ಇಂಥಾ ಮಸಾಜ್ ಸೆಂಟರುಗಳು ತಲೆಯೆತ್ತಿವೆ. ಅದರಲ್ಲಿ ಬಹುತೇಕ ವೇಶ್ಯಾ ದಂಧೆಯ ಕಾರಸ್ಥಾನಗಳಾಗಿ ಬದಲಾಗಿವೆ. ಮರ್ಯಾದಸ್ಥರು ವಾಸಿಸುವ ಪ್ರದೇಶಗಳಲ್ಲಿ ಇಂಥಾ ಅಡ್ಡೆಗಳು ತಲೆಯೆತ್ತಿ ನೆಮ್ಮದಿಯಾಗಿ ಓಡಾಡಲೂ ಆಗದ ಪರಿಸ್ಥಿತಿ ಇದೆ. ಇಂಥಾ…

Read More

ಸಮುದ್ರದಲ್ಲಿ ವಾಸಿಸೋ ತಿಮಿಂಗಿಲ (whale) ಅತ್ಯಂತ ಅಪಾಯಕಾರಿ ಜಲಚರ. ಟನ್ನುಗಟ್ಟಲೆ ತೂಕದ, ಎಂಥಾ ದೊಡ್ಡ ಪ್ರಾಣಿಗಳನ್ನಾದರೂ ಸಲೀಸಾಗಿ ನುಂಗಿ ಜೀರ್ಣಿಸಿಕೊಳ್ಳಬಲ್ಲ ಸಾಮಥ್ರ್ಯ ಹೊಂದಿರೋ ತಿಮಿಂಗಿಲದ (whale shark) ಬಗೆಗಿನ ಸತ್ಯಗಳು ಅದರ ಗಾತ್ರದಷ್ಟೇ ಅಗಾಧವಾಗಿವೆ. ತಿಮಿಂಗಿಲ ಅತ್ಯಂತ ದೊಡ್ಡ ಗಾತ್ರದ ಜಲಚರ. ಹಾಗಿದ್ದ ಮೇಲೆ ಅವುಗಳ ಜೀವನ ಕ್ರಮ, ಅಂಗಾಗಗಳ ವಿಸ್ಮಯಗಳೂ ಕೂಡಾ ಅಷ್ಟೇ ದೊಡ್ಡ ಗಾತ್ರದ್ದಾಗಿರುತ್ತವೆ. ಒಂದು ಅಧ್ಯಯನ ತಿಮಿಂಗಿಲದ ಹೃದಯದ (whale heart) ಬಗೆಗಿನ ಇಂಟರೆಸ್ಟಿಂಗ್ ವಿಚಾರಗಳನ್ನು ಪತ್ತೆಹಚ್ಚಿದೆ. ತಿಮಿಂಗಿಲಗಳು ಕಡಿಮೆ ಅಂದರೂ ನೂರಾ ಐವತ್ತು ಟನ್‍ಗಿಂತ ಅಧಿಕ ತೂಕ ಹೊಂದಿರುತ್ತವೆ. ಅವುಗಳು ಸುಮ್ಮನೊಮ್ಮೆ ಮಿಸುಕಾಡಲೂ ಕೂಡಾ ತೊಂಭತ್ತು ಅಡಿಗಳಷ್ಟು ವಿಶಾಲವಾದ ಪ್ರದೇಶ ಬೇಕಾಗುತ್ತೆ. ಇಂಥಾ ದೈತ್ಯ ಗಾತ್ರದ ಹೃದಯವೇ ಒಂದು ವಿಸ್ಮಯ. ತಿಮಿಂಗಿಲಗಳ ಗಾತ್ರಕ್ಕೆ ತಕ್ಕ ಹಾಗೆಯೇ ಅವುಗಳ ಹೃದಯವೂ ಇರುತ್ತದೆ. ಅದು ಎಷ್ಟು ದೊಡ್ಡದಾಗಿರುತ್ತೆ ಅಂದ್ರೆ, ಅದರ ಗಾತ್ರ ಕಾರುಗಳಷ್ಟಿರುತ್ತೆ. ಅದನ್ನು ತೂಕಕ್ಕಿಟ್ಟರೆ 1300 ಪೌಂಡುಗಳಷ್ಟು ತೂಗುತ್ತೆ. ಕೇವಲ ಹೃದಯ ಮಾತ್ರವಲ್ಲದೆ ಅವುಗಳ ಪ್ರತೀ ಅಂಗಾಂಗಗಳೂ…

Read More

ಐಸ್‍ಕ್ರೀಮ್ ಎಂದಾಕ್ಷಣ ಬಾಯಲ್ಲಿ ನೀರೂರಿಸಿಕೊಳ್ಳದಿರುವವರೇ ವಿರಳ. ಮಕ್ಕಳಿಂದ ಮೊದಲ್ಗೊಂಡು ಮುದುಕರವರೆಗೂ ಐಸ್ ಕ್ರೀಂ (ice cream) ಅಭಿಮಾನಿಗಳಿದ್ದಾರೆ. ಈಗಂತೂ ನಾನಾ ವೆರೈಟಿಗಳ ಐಸ್ ಕ್ರೀಂಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಒಂದು ಫ್ಲೇವರ್ ಇಷ್ಟವಿಲ್ಲದಿದ್ದರೆ ನೂರಾರು ಫ್ಲೇವರುಗಳು ನಿಮಗಾಗಿ ಕಾದು ಕೂತಿರುತ್ತವೆ. ಅದರಲ್ಲಿ ಒಂದಷ್ಟು ಫ್ಲೇವರುಗಳು ಇಷ್ಟವಿಲ್ಲ ಅನ್ನುವವರು ಸಿಗಬಹುದು. ಆದರೆ ಸಾರಾಸಗಟಾಗಿ ಐಸ್ ಕ್ರೀಮನ್ನೇ ಒಲ್ಲೆ ಅನ್ನುವರು ಸಿಗೋದು ಅಪರೂಪ. ಇಂಥಾದ್ದೊಂದು ಸಾರ್ವಕಾಲಿಕ ಫೇವರಿಟ್ ತಿನಿಸು ಹುಟ್ಟಿಕೊಂಡಿದ್ದು ಹೇಗೆ? ಇಂಥಾ ಕಲ್ಪನೆ ಮೊದಲು ಮೂಡಿಕೊಂಡಿದ್ದು ಯಾವ ಕಾಲಮಾನದಿಂದ ಅನ್ನೋ ಬೆಚ್ಚಗಿನ ಆಲೋಚನೆಗೆ ತಣ್ಣಗಿನ ಐಸ್‍ಕ್ರೀಮು ಕಿಚ್ಚು ಹಚ್ಚುತ್ತೆ. ಈ ನಿಟ್ಟಿನಲ್ಲಿ ಹುಡುಕಾಡಿದರೆ ಇಂಥಾದ್ದೇ ಕಾಲಮಾನದಲ್ಲಿ ಐಸ್ ಕ್ರೀಂ ಆವಿಷ್ಕರಿಸಲ್ಪಟ್ಟಿತು ಅಂತ ನಿಖರವಾಗಿ ಹೇಳುವಂಥಾ ಅಂಶಗಳು ಪತ್ತೆಯಾಗೋದಿಲ್ಲ. ಯಾಕಂದ್ರೆ, ಅದರ ಹುಟ್ಟು ಮನುಷ್ಯನ ರೂಪಾಂತರಗಳಷ್ಟೇ ಸಂಕೀರ್ಣವಾಗಿದೆ. ನಾನಾ ಬಗೆಯಲ್ಲಿ ಟ್ರೈ ಮಾಡುತ್ತಾ, ಹಲವಾರು ಕಾಲಮಾನಗಳಲ್ಲಿ ಹೈ ಫೈ ಜನರ ನಾಲಗೆಗಳನ್ನು ತಣ್ಣಗಾಗಿಸುತ್ತಾ ರುಚಿ ಹತ್ತಿಸಿದ ಐಸ್ ಕ್ರೀಮಿಗೆ ಶತಮಾನಗಳಷ್ಟು ಹಿಂದಿನ ಐತಿಹ್ಯವಿದೆ! ಅದರ ಜಾಡು…

Read More

ಹುಟ್ಟಿನಿಂದಲೇ ಮೂಗರಾದವರು, ಕಿವಿ ಕೇಳಿಸದ ಸಮಸ್ಯೆಯಿರುವವರು ಕೈ ಸನ್ನೆಯಲ್ಲಿಯೇ ಮಾತಾಡೋದು ಗೊತ್ತೇ ಇದೆ. ಅದು ಮೂಗರ ಕಥೆಯಾಯ್ತು. ಇನ್ನುಳಿದಂತೆ ಮಾತು ಬರುವವರಿಗೆ ಸಂವಹನ ನಡೆಸೋದಕ್ಕಾಗಿ ಇಡೀ ವಿಶ್ವದಲ್ಲಿ ನಾನಾ ಭಾಷೆಗಳಿದ್ದಾವೆ. ಈ ಭಾಷೆಗಳೇ ಯಾವ ಸಂಶೋಧನೆಗಳಿಗೂ ನಿಲುಕದಷ್ಟು ಸಂಖ್ಯೆಯಲ್ಲಿವೆ. ನಮ್ಮ ದೇಶವನ್ನೇ ತೆಗೆದುಕೊಂಡರೆ ಗ್ರಾಮೀಣ ಭಾಗಗಳಲ್ಲಿಯೂ ಹರಡಿಕೊಂಡಿರೋ ಭಾಷೆಗಳು ಮತ್ತವುಗಳ ಶೈಲಿಗಳು ಅಚ್ಚರಿಯ ಗುಡಾಣದಂತಿವೆ. ಆದರೆ ಮಾತು ಬಂದರೂ ಕೂಡಾ ಕೈ ಸನ್ನೆಯಲ್ಲಿಯೇ ಮಾತಾಡೋ ಜನರೂ ಈ ಭೂಮಿಯ ಮೇಲಿದ್ದಾರೆ. ಅವರ ಪಾಲಿಗೆ ಅಂಥಾ ಸನ್ನೆಗಳೇ ಭಾಷೆ! ಈ ವಿಚಾರವನ್ನ ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ. ಇದು ನಿಜಾನಾ ಎಂಬಂಥಾ ಸಂದೇಹವೂ ಕಾಡದಿರೋದಿಲ್ಲ. ಮಾತಾಡೋ ಶಕ್ತಿ ಇದ್ದರೂ ಜನ ಸನ್ನೆಗಳ ಮೂಲಕವೇ ಮಾತಾಡ್ತಾರೆ ಅಂದ್ರೆ ಸಹಜವಾಗಿಯೇ ಗುಮಾನಿ ಮೂಡಿಕೊಳ್ಳುತ್ತೆ. ಆದರಿದನ್ನ ನಂಬದೇ ವಿಧಿಯಿಲ್ಲ. ಯಾಕಂದ್ರೆ ಅಂಥಾ ವಿಚಿತ್ರ ಜನ ಪ್ರಸಿದ್ಧ ಪ್ರವಾಸಿಗರ ಸ್ವರ್ಗ ಎಂದೆನಿಸಿರೋ ಬಾಲಿಯಲ್ಲಿದೆ. ಇಲ್ಲಿನ ಬಿಂಕಲಾ ಎಂಬ ಒಂದಿಡೀ ಹಳ್ಳಿಯ ಜನ ಸನ್ನೆಗಳಲ್ಲಿಯೇ ಪರಸ್ಪರ ಮಾತಾಡಿಕೊಳ್ತಾರೆ. ಬಾಲಿ ಅಂದರೆ ಭೂಲೋಕದ…

Read More

ಭಾರತದಲ್ಲಿನ ನಾನಾ ಪ್ರದೇಶಗಳಲ್ಲಿ ಹಾಸು ಹೊಕ್ಕಾಗಿರೋ ನಂಬಿಕೆಗಳೇ ಚಿತ್ರ ವಿಚಿತ್ರ. ಕೆಲವೊಂದನ್ನು ಕೇಳಿದರೆ ಯಾವ ಪ್ರತಿಕ್ರಿಯೆಯನ್ನೂ ಕೊಡದೇ ಅವಾಕ್ಕಾಗುವಂತಿರುತ್ತವೆ. ಇನ್ನೂ ಕೆಲ ಆಚರಣೆಗಳಂತೂ ಇಂಥಾದ್ದು ಈ ಕಾಲದಲ್ಲಿ ಮಾತ್ರವಲ್ಲ, ಯಾವ ಕಾಲದಲ್ಲಿಯೂ ಇರಲು ಸಾಧ್ಯವೇ ಇಲ್ಲ ಅನ್ನಿಸುವಂತಿರುತ್ತವೆ. ಈಗ ಹೇಳ ಹೊರಟಿರೋ ವಿಚಾರ ಕೇಳಿದರಂತೂ ನಿಮಗೂ ಕೂಡಾ ಅಂಥಾದ್ದೊಂದು ದಿಗ್ಭ್ರಮೆ ಆಗದಿರಲು ಸಾಧ್ಯವೇ ಇಲ್ಲ! ಅಂಥಾದ್ದೊಂದು ವಿಚಿತ್ರದಲ್ಲಿಯೇ ವಿಚಿತ್ರವಾದ ಆಚರಣೆ ರೂಢಿಯಲ್ಲಿರೋದು ಪ್ರಸಿದ್ಧ ಪ್ರವಾಸಿ ಸ್ಥಳಗಾಳಾದ ಕುಲು ಮತ್ತು ಮನಾಲಿ ಪ್ರದೇಶದಲ್ಲಿ. ಇವೆರಡೂ ಕೂಡಾ ಅವಳಿ ಪ್ರದೇಶಗಳು. ಇಲ್ಲಿಗೆ ಜೀವಿತದಲ್ಲಿ ಒಮ್ಮೆಯಾದರೂ ಭೇಟಿ ಕೊಡ ಬೇಕೆಂಬುದು ಅದೆಷ್ಟೋ ಪ್ರವಾಸಪ್ರಿಯರ ಮಹಾ ಕನಸು. ಇಂಥಾ ಪ್ರವಾಸಿಗರ ಚಿತ್ರವೆಲ್ಲ ಆ ಪ್ರದೇಶಗಳ ವಾತಾವರಣ, ಪರಿಸರದ ಸುತ್ತಲೇ ಕೇಂದ್ರೀಕರಿಸಿರುತ್ತೆ. ಆದ್ರೆ ಕೊಂಚ ಕ್ಯೂರಿಯಾಸಿಟಿ ಇದ್ದರೂ ಕೂಡಾ ಆ ವಾತಾವರಣದಲ್ಲಿ ಹಾಸುಹೊಕ್ಕಾಗಿರೋ ಅದೆಷ್ಟೋ ಅಚ್ಚರಿದಾಯಕ ಆಚರಣೆಗಳು ಕಣ್ಣಿಗೆ ಬೀಳುತ್ತವೆ. ಹಿಮಾಚಲಪ್ರದೇಶದ ಭಾಗವಾಗಿರೋ ಕುಲು ಮನಾಲಿಯ ಭಾಗದಲ್ಲಿಯೇ ಪಿನಿ ಅನ್ನೋ ಗ್ರಾಮವಿದೆ. ಅಲ್ಲಿ ದಸರಾ ಬಂತೆಂದರೆ ವಿಶೇಷವಾದ ಹಬ್ಬವೊಂದು…

Read More