Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಇದೀಗ ಸಿನಿಮಾ ಪ್ರೇಕ್ಷಕರ ನಡುವೆ ಗಾಢವಾಗಿ ಚರ್ಚೆ ಹುಟ್ಟು ಹಾಕಿರುವ ಚಿತ್ರ ಯಾವುದು ಅಂತೇನಾದರೂ ಪ್ರಶ್ನೆಯೊಂದು ಎದುರಾದರೆ, ಬಹುಪಾಲು ಮಂದಿಯ ಉತ್ತರವಾಗಿ ಹೊರಹೊಮ್ಮುವ ಚಿತ್ರ ಇನಾಮ್ದಾರ್. ಬೇರೆಯದ್ದೇ ಛಾಯೆ, ಕಲ್ಪನಾ ಜಗತ್ತಿಗೆ ಕೈ ಹಿಡಿದು ಕರೆದೊಯ್ಯುವಂಥಾ ಚಹರೆಗಳ ಮೂಲಕ ಈಗಾಗಲೇ ಇನಾಮ್ದಾರ್ ಬಹುನಿರೀಕ್ಷಿತ ಚಿತ್ರವಾಗಿ ದಾಖಲಾಗಿದೆ. ಬಿಡುಗಡೆಯ ಹೊಸ್ತಿಲಲ್ಲಿರುವ ಈ ಸಿನಿಮಾವೀಗ ಸಿಲ್ಕು ಮಿಲ್ಕು ಎಂಬ ಮಾದಕವಾದ, ಉತ್ತರ ಕರ್ನಾಟಕ ಜವಾರಿ ಭಾಷಾ ಸ್ಪರ್ಶ ಹೊಂದಿರುವ ಹಾಡೊಂದರ ಮೂಲಕ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ. ದೃಷ್ಯ, ಸಂಗೀತ, ಸಾಹಿತ್ಯ ಸೇರಿದಂತೆ ಎಲ್ಲದರಲ್ಲಿಯೂ ಗಮನ ಸೆಳೆಯುವಂತಿರುವ ಈ ಹಾಡೀಗ ಟ್ರೆಂಡಿಗ್‍ನತ್ತ ದಾಪುಗಾಲಿಡುತ್ತಿದೆ. ಯಾವತ್ತಿದ್ದರೂ ಈ ನೆಲದ ಘಮ ಹೊದ್ದ ಬೇರೆ ಬೇರೆ ಭಾಗಗಳ ಭಾಷಾ ಶೈಲಿ ಹಾಡಾಗೋದೊಂದು ಬೆರಗು. ವಿಶೇಷವಾಗಿ ಇನಾಮ್ದಾರ್ ಕರಾವಳಿ ಮತ್ತು ಉತ್ತರಕರ್ನಾಟಕಗಳ ನಡುವೆ ಕನೆಕ್ಷನ್ನು ಹೊಂದಿರುವ ಅಪರೂಪದ ಕಥೆಯನ್ನೊಳಗೊಂಡಿದೆ. ಆ ಕಥಾ ಹಂದರಕ್ಕೆ ತಕ್ಕುದಾಗಿ ಈ ಹಾಡು ಮೂಡಿ ಬಂದಿದೆ. ಕುಂಟೂರು ಶ್ರೀಕಾಂತ್ ಬರೆದಿರೋ ಈ ಹಾಡಿಗೆ ರಾಕೇಶ್…

Read More

ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಸಿನಿಮಾ ಕಡಲ ತೀರದ ಭಾರ್ಗವ. ಈ ಹೆಸರು ಕೇಳಿದಾಕ್ಷಣವೇ ಸಾಹಿತ್ಯಾಸಕ್ತರಿಗೆಲ್ಲ ಶಿವರಾಮ ಕಾರಂತರ ನೆನಪಾಗುತ್ತದೆ. ಆದರೆ ಈ ಚಿತ್ರದಲ್ಲಿರೋದು ಪಕ್ಕಾ ಮಾಸ್ ಭಾರ್ಗವ. ಈ ಹಿಂದೆ ಇದರದ್ದೊಂದು ಮಿಂಚಿನಂಥಾದ್ದೊಂದು ಟೀಸರ್ ಲಾಂಚ್ ಆಗಿತ್ತು. ಆ ಮೂಲಕ ಕಡಲ ತೀರದ ಭಾರ್ಗವ ಅದೆಂಥಾ ಮಾಸ್ ಲುಕ್ ಹೊಂದಿದ್ದಾನೆ, ಇಲ್ಲಿ ಅದೆಷ್ಟು ಕಟ್ಟುಮಸ್ತಾದ ಕಥೆಯಿದೆ ಅನ್ನೋದರ ಸ್ಪಷ್ಟ ಸುಳಿಉವು ಸಿಕ್ಕಿತ್ತು. ಇಂಥಾ ಸುಳಿವುಗಳ ಮೂಲಕ ಗಾಢ ಕುತೂಹಲ ಮೂಡಿಸಿರುವ ಈ ಸಿನಿಮಾವೀಗ ಬಿಡುಗಡೆಯ ಅಂಚಿನಲ್ಲಿದೆ. ಈ ಹೊತ್ತಿನಲ್ಲಿ ಟ್ರೈಲರ್ ಲಾಂಚ್‍ಗೂ ಮುಹೂರ್ತ ನಿಗಧಿಯಾಗಿದೆ. ಚಿತ್ರತಂಡ ಪ್ರಕಟಿಸಿರುವ ಮಾಹಿತಿಯ ಪ್ರಕಾರ ಇದೇ ತಿಂಗಳ 13ರಂದು ಟ್ರೈಲರ್ ಬಿಡುಗಡೆಗೊಳ್ಳಲಿದೆ. ಒಂದು ಕನಸುಗಾರರ, ಸಿನಿಮಾ ವ್ಯಾಮೋಹಿಗಳ ತಂಡ ಸೇರಿ ಸಿದ್ಧಪಡಿಸಿರುವ ಈ ಸಿನಿಮಾ ಈಗಾಗಲೇ ಎಲ್ಲ ದಿಕ್ಕುಗಳಲ್ಲಿಯೂ ಟಾಕ್ ಕ್ರಿಯೇಟ್ ಮಾಡಿದೆ. ಪ್ರಚಾರದ ಅಬ್ಬರದಾಚೆಗೂ ತಾನೇ ತಾನಾಗಿ ಪ್ರೇಕ್ಷಕರೆಲ್ಲ ಕಡಲ ತೀರದ ಭಾರ್ಗವನತ್ತ ಕಣ್ಣಿಟ್ಟಿದ್ದಾರೆ. ಹೀಗೆ ಸದ್ದಿಲ್ಲದೆ ತೆರೆಗಾಣೋ…

Read More

ಶರಣ್ ಹುಟ್ಟುಹಬ್ಬದ ರಂಗನ್ನು ಮತ್ತಷ್ಟು ಹೆಚ್ಚಿಸುವಂಥಾ ಛೂ ಮಂತರ್ ಟೀಸರ್ ಬಿಡುಗಡೆಗೊಂಡಿದೆ. ಇದು ರಣ್ ಹುಟ್ಟು ಹಬ್ಬಕ್ಕೆ ಉಡುಗೊರೆ ಎಂಬಂತೆ ಹೊರ ಬಂದಿರೋ ಈ ಟೀಸರ್ ಪ್ರೇಕ್ಷಕರ ಪಾಲಿಗೂ ಹಬ್ಬದಂತಿದೆ. ಈ ಹಿಂದಿನಿಂದಲೂ ಛೂ ಮಂತರ್ ಬಗೆಗೊಂದು ಗಾಢ ಕುತೂಹಲ ಗರಿಗೆದರಿಕೊಂಡಿತ್ತಲ್ಲಾ? ಅದೆಲ್ಲವನ್ನು ಮತ್ತಷ್ಟು ನಿಗಿನಿಗಿಸುವಂತೆ ಮಾಡುವಲ್ಲಿಯೂ ಸದರಿ ಟೀಸರ್ ಯಶ ಕಂಡಿದೆ. ನವನಿರ್ದೇಶಕ ನವನೀತ್ ಭಿನ್ನವಾದ ಕಥೆಯೊಂದಿಗೆ ಮ್ಯಾಜಿಕ್ ಮಾಡಿದ್ದಾರೆಂಬ ನಂಬುಗೆ, ಮೇಕಿಂಗ್‍ನ ಅದ್ದೂರಿತನದತ್ತ ಒಂದು ಅಚ್ಚರಿ ಮತ್ತು ಛೂ ಮಂತರ್ ಶರಣ್ ವೃತ್ತಿ ಬದುಕಿಗೆ ಮಹತ್ತರ ತಿರುವು ನೀಡೋ ಭರವಸೆಯನ್ನು ಈ ಟೀಸರ್ ಪ್ರತೀ ಪ್ರೇಕ್ಷಕರ ಮನಸಲ್ಲಿಯೂ ಪ್ರತಿಷ್ಠಾಪಿಸಿಬಿಟ್ಟಿದೆ! ಅಷ್ಟರ ಮಟ್ಟಿಗೆ ಛೂ ಮಂತರ್ ಟೀಸರ್ ಕಮಾಲ್ ಮಾಡಿದೆ. ಒಂದು ಗಟ್ಟಿ ಕಥೆ ಮತ್ತು ಅದರೊಂದಿಗೆ ಹೊಸೆದುಕೊಂಡಿರುವ ಹಾರರ್ ಅಂಶಗಳು ಪ್ರತಿಯೊಬ್ಬರನ್ನೂ ಸೆಳೆದಿವೆ. ಇಲ್ಲಿನ ಪಾತ್ರಗಳು ಭಿನ್ನ ಚಹರೆಗಳೊಂದಿಗೆ ಪ್ರೇಕ್ಷಕರೊಳಗಿಳಿದಿವೆ. ಅದರಲ್ಲಿಯೂ ನಾಯಕ ಶರಣ್ ಗೆಟಪ್ಪುಗಳಂತೂ ನಾನಾ ಬಗೆಯಲ್ಲಿ ಚರ್ಚೆಗಳಿಗೂ ಕಾರಣವಾಗಿದೆ. ಒಂದು ಪರಿಣಾಮಕಾರಿಯಾದ, ಯಶಸ್ವೀ ಟೀಸರ್ ಒಂದು…

Read More

ಡ್ರಗ್ಸ್ ನಶೆಯೆಂಬುದೀಗ ಒಂದಿಡೀ ದೇಶವನ್ನೇ ಅಪಾದಮಸ್ತಕ ಆವರಿಸಿಕೊಂಡಿದೆ. ಆದರೆ, ನಮ್ಮ ರಾಜ್ಯದಲ್ಲಿ ಪೊಲೀಸರೇಕೋ ಚಿತ್ರರಂಗದ ಮಂದಿಯನ್ನೇ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಒಂದಷ್ಟು ಪ್ರಶ್ನೆಗಳಿರೋದು ಸತ್ಯ. ಆದರೆ, ಹಾಗೆ ಚಿತ್ರರಂಗ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯ ಪ್ರಧಾನ ಟಾರ್ಗೆಟ್ ಆಗಿರೋದಕ್ಕೂ ಒಂದಷ್ಟು ನಿಖರ ಕಾರಣಗಳಿದ್ದಾವೆಂಬುದೂ ಅಷ್ಟೇ ಸತ್ಯ. ಯಾಕೆಂದರೆ, ಕಾಸು, ಖ್ಯಾತಿಯ ಮದವೇರಿದ ಬಹುತೇಕ ಎಲ್ಲ ಭಾಷೆಗಳ ಚಿತ್ರರಂಗಗಳಲ್ಲಿಯೂ ನಶೆಯ ರುದ್ರನರ್ತನ ಸಾಂಘವಾಗಿಯೇ ನಡೆಯುತ್ತಿದೆ. ಅದರಲ್ಲಿಯೂ ಬಾಲಿವುಡ್‌ನಲ್ಲಿಯಂತೂ ಡ್ರಗ್ಸ್ ಚಟ ಮಾಮೂಲಿ ಎಂಬಂತಾಗಿದೆ. ಆ ಚಟಕ್ಕೆ ದಾಸಾನುದಾಸನಾಗಿ, ಒಂದು ಹಂತದಲ್ಲಿ ತನ್ನ ಬದುಕನ್ನೇ ಅಧ್ವಾನವೆಬ್ಬಿಸಿಕೊಂಡಿದ್ದಾತ ಸಂಜಯ್ ದತ್. ಇದೀಗ ಖುದ್ದು ಅವರೇ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವಂಥಾ ಮಾತುಗಳನ್ನಾಡಿದ್ದಾರೆ. ಸಂಜಯ್ ದತ್‌ನದ್ದು ವರ್ಣರಂಜಿತ ವ್ಯಕ್ತಿತ್ವ. ಕೇವಲ ಹೆಂಗಳೆಯರ ವಿಚಾರದಲ್ಲಿ ಮಾತ್ರವಲ್ಲ; ಬದುಕಿನ ನಾನಾ ಮಜಲುಗಳಲ್ಲಿಯೂ ಆತನೊಬ್ಬ ಸ್ವೇಚ್ಛೆಯನ್ನೇ ಧರಿಸಿಕೊಂಡಂತೆ ಬದುಕಿದ ಆಸಾಮಿ. ಒಂದು ಹಂತದಲ್ಲಿ ಸಂಜು ಬಾಬಾಗೆ ಡ್ರಗ್ಸ್‌ನ ರುಚಿ ಹತ್ತಿಕೊಂಡಿತ್ತು. ಸಾಮಾನ್ಯವಾಗಿ, ಈ ಡ್ರಗ್ಸ್ ಚಟದ ವಿಚಾರದಲ್ಲಿ…

Read More

ಜೈಲಲ್ಲಿಟ್ಟರೂ ಆತ ಹೇಗೆ ಎಸ್ಕೇಪ್ ಆಗ್ತಿದ್ದ ಗೊತ್ತಾ? ಈಗ ಎಲ್ಲಿ ನೋಡಿದ್ರೂ ಬರೀ ಡ್ರಗ್ಸ್‍ನದ್ದೇ ಸುದ್ದಿ. ಕರ್ನಾಟಕದಲ್ಲಿ ಅದ್ಯಾವ ಕಾಲದಿಂದ್ಲೋ ಹಬ್ಬಿಕೊಂಡಿದ್ದ ಡ್ರಗ್ಸ್ ದಂಧೆಯ ಬೇಸಿಗೇ ಈಗ ಬೆಂಕಿ ಬಿದ್ದಿದೆ. ಸಿಸಿಬಿ ಅಧಿಕಾರಿಗಳಂತೂ ಈ ಬಾರಿ ಈ ದಂಧೆಯನ್ನ ಥಂಡಾ ಹೊಡೆಸೋ ಸಂಕಲ್ಪದೊಂದಿಗೆ ಕಾರ್ಯಾಚರಣೆ ನಡೆಸ್ತಿದ್ದಾರೆ. ಹಾಗಾದ್ರೆ ಇದರ ಬೇರುಗಳಿರೋದು ಕರ್ನಾಟದಲ್ಲಿ ಮಾತ್ರವಾ? ಯಾಕೆ ಈ ಬಾರಿ ಬರೀ ಕರ್ನಾಟಕದಲ್ಲಿ ಮಾತ್ರವೇ ಇದರ ಸದ್ದಾಗ್ತಿದೆ ಅನ್ನೋ ಹತ್ತಾರು ಪ್ರಶ್ನೆಗಳಿದ್ದಾವೆ. ಆದ್ರೆ ಡ್ರಗ್ಸ್ ದಂಧೆಯ ಆಳ ಅಗಲ ಅರಿಯಬೇಕಾದ್ರೆ ಇಂಟರ್‍ನ್ಯಾಷನಲ್ ಡ್ರಗ್ಸ್ ಮಾಫಿÀಯಾದ ಭೀಕರ ಸ್ವರೂಪವನ್ನೊಮ್ಮೆ ಜಾಲಾಡಲೇ ಬೇಕು. ಕೊಕೇನ್, ಮರಿಜುವಾನ ಸೇರಿದಂತೆ ಡ್ರಗ್ಸ್‍ನಲ್ಲಿ ನಾನಾ ವಿಧಗಳಿದ್ದಾವೆ. ಅದೊಂದು ನಶೆಯೇರಿಸೋ ಮಾಯಾಲೋಕ. ಈವತ್ತಿಗೆ ಕರ್ನಾಟಕದಲ್ಲಿ ಪಡ್ಡೆ ಹುಡುಗರ ಕೈಗೂ ಸಲೀಸಾಗಿ ಸಿಗೋ ಡ್ರಗ್ಸ್ ದೂರದ ದೇಶಗಳಿಂದ ಲೀಲಾಜಾಲವಾಗಿಯೇ ಸರಬರಾಜಾಗುತ್ತೆ. ಇಂದು ಅಂತಾರಾಷ್ಟ್ರೀಯ ಭದ್ರತಾ ವ್ಯವಸ್ಥೆ ಬಿಗುವಾಗಿದೆ. ಆದ್ರೂ ದೇಶದಿಂದ ದೇಶಕ್ಕೆ ಸಲೀಸಾಗಿ ಅದು ಸಾಗಾಟವಾಗ್ತಿರೋದೇ ಆ ದಂಧೆ ಬೆಳೆದು ನಿಂತಿರೋ ರೀತಿಗೆ ಸಾಕ್ಷಿ.…

Read More

ಕನ್ನಡ ಚಿತ್ರರಂಗವೀಗ ಗೆಲುವಿನ ನಾಗಾಲೋಟದಲ್ಲಿದೆ. ಎಲ್ಲರ ಚಿತ್ರವೂ ಸ್ಟಾರ್‍ಗಳ ಸಿನಿಮಾಗಳತ್ತ ನೆಟ್ಟುಕೊಂಡು, ಪ್ಯಾನಿಂಡಿಯಾ ಕನವರಿಕೆಯಲ್ಲಿ ಬಹುತೇಕರು ಕಳೆದು ಹೋಗಿದ್ದಾರೆ. ಅದರ ನಡುವಲ್ಲಿಯೇ ಸೀಮಿತ ಚೌಕಟ್ಟಿನಲ್ಲಿಯೂ ಪ್ರೇಕ್ಷಕರ ಅಭಿರುಚಿಯನ್ನು ಕಾಪಿಟ್ಟುಕೊಳ್ಳುವಂಥಾ ಭಿನ್ನ ಪ್ರಯತ್ನಗಳು ಒಂದರ ಹಿಂದೊಂದರಂತೆ ನಡೆಯುತ್ತಿವೆ. ಹೀಗೆ ಪಕ್ಕಾ ಕಮರ್ಶಿಯಲ್ ಸಿನಿಮಾಗಳ ಶಕೆಯೊಂದು ಆರಂಭವಾಗಿರುವ ಈ ಹೊತ್ತಿನಲ್ಲಿ, ಒಂದಷ್ಟು ಸಿನಿಮಾ ಪ್ರೇಮಿಗಳು ಕಾದಂಬರಿ ಆಧಾರಿತ ಸೂಕ್ಷ್ಮ ಕಥಾನಕಗಳನ್ನು ಕನವರಿಸುತ್ತಿದ್ದಾರೆ. ಅಂಥ ಸದಬಿರುಚಿಯ ಪ್ರೇಕ್ಷಕರೆಲ್ಲ ಖುಷಿಗೊಳ್ಳುವಂತೆ `ಚೌಕಬಾರ’ ಎಂಬ ಸಿನಿಮಾವೊಂದು ರೂಪುಗೊಂಡು, ಬಿಡುಗಡೆಗೆ ತಯಾರಾಗಿ ನಿಂತಿದೆ! ಅಂದಹಾಗೆ, ಚೌಕಬಾರ ಚಿತ್ರ ಹಂತ ಹಂತವಾಗಿ ಸುದ್ದಿ ಮಾಡುತ್ತಾ, ಈಗಾಗಲೇ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿದೆ. ವಿಶೇಷವೆಂದರೆ, ತೊಂಭತ್ತರ ದಶಕದ ಆರಂಭ ಕಾಲದಿಂದಲೂ ಕಿರುತೆರೆಯಲ್ಲಿ ಸ್ಟಾರ್‍ಗಿರಿ ಪಡೆದುಕೊಂಡಿದ್ದ ವಿಕ್ರಮ್ ಸೂರಿ ಈ ಸಿನಿಮಾವನ್ನು ನಿರ್ದೇಶಕನ ಮಾಡಿದ್ದಾರೆ. ಅವರ ಮಡದಿ ನಮಿತಾ ರಾವ್ ನಿರ್ಮಾಣದೊಂದಿಗೆ, ನಾಯಕಿಯಾಗಿಯೂ ನಟಿಸಿದ್ದಾರೆ. ಕಿರುತೆರೆಯಲ್ಲಿ ಸ್ಟಾರ್ ಜೋಡಿ ಅಂತಲೇ ಹೆಸರಾಗಿರುವ ಈ ದಂಪತಿ ಚೌಕಬಾರದೊಂದಿಗೆ ಸಿನಿಮಾ ನಿರ್ಮಾಣ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಬದುಕಿನ ಸೂಕ್ಷ್ಮ…

Read More

ಕನ್ನಡ ಚಿತ್ರಪ್ರೇಮಿಗಳ ಪಾಲಿನ ಪ್ರೀತಿಯ ಹಾಸ್ಯ ನಟನಾಗಿ, ಆ ನಂತರದಲ್ಲಿ ಏಕಾಏಕಿ ನಟನೆಯ ಮತ್ತೊಂದು ಆಯಾಮದತ್ತ ಹೊರಳಿಕೊಂಡವರು ಶರಣ್. ಹಾಗೆ ಶರಣ್ ನಾಯಕನಾಗುವ ನಿರ್ಧಾರ ಪ್ರಕಟಿಸಿದಾಗ ಅವರನ್ನು ಇಷ್ಟಪಡುವ ಮಂದಿಯಲ್ಲೂ ಕೂಡಾ ಇದೊಂದು ವ್ಯರ್ಥ ಸಾಹಸವೆಂಬಂಥಾ ಮನಃಸ್ಥಿತಿ ಮೂಡಿಕೊಂಡಿತ್ತು. ಅದೆಲ್ಲವನ್ನೂ ಅತ್ಯಂತ ಕಡಿಮೆ ಅವಧಿಯಲ್ಲಿ ಸುಳ್ಳಾಗಿಸಿ, ನಾಯಕನಾಗಿ ಕಾಲೂರಿ ನಿಲ್ಲುವಲ್ಲಿ ಶರಣ್ ಯಶ ಕಂಡಿದ್ದಾರೆ. ಹಾಸ್ಯ ನಟನಾಗಿ ಬೇಡಿಕೆ ಹೊಂದಿರುವಾಗಲೇ ನಾಯಕನಾಗೋ ತಲುಬು ಹತ್ತಿಸಿಕೊಂಡು ಅನೇಕರು ವಿಫಲರಾಗಿದ್ದಾರೆ. ಆದರೆ, ಶರಣ್ ಅವರದ್ದು ಭಿನ್ನವಾದ ಯಶದ ಪರ್ವ. ಆ ಪರ್ವವೀಗ ಒಂದಷ್ಟು ಪ್ರಯೋಗಾತ್ಮಕ ಗುಣಗಳೊಂದಿಗೆ ಹೊಸಾ ಆವೇಗ ಕಂಡುಕೊಂಡಿದೆ. ಅದರ ಭಾಗವಾಗಿಯೇ ಬಿಡುಗಡೆಗೆ ಸಜ್ಜುಗೊಂಡಿರೋ ಚಿತ್ರ `ಛೂ ಮಂತರ್’! ಹಾಗೆ ನೋಡಿದರೆ, ಛೂ ಮಂತರ್ ಆರಂಭದಿಂದಲೂ ಗಾಢವಾದೊಂದು ಕುತೂಹಲಕ್ಕೆ ಕಾರಣವಾಗಿತ್ತು. ನಂತರದ ದಿನಗಳಲ್ಲಿ ಹಂತಹಂತವಾಗಿ ಅದನ್ನು ಕಾಪಿಟ್ಟುಕೊಳ್ಳುವ ಜಾಣ್ಮೆಯನ್ನೂ ಕೂಡಾ ಚಿತ್ರತಂಡ ಪ್ರದರ್ಶಿಸುತ್ತಾ ಬಂದಿತ್ತು. ಅಂದಹಾಗೆ, ಇದು ಈ ಹಿಂದೆ ಕರ್ವ ಅಂತೊಂದು ಚೆಂದದ ಚಿತ್ರ ನಿರ್ದೇಶನ ಮಾಡಿದ್ದ ನವನೀತ್ ನಿರ್ದೇಶನದಲ್ಲಿ ಮೂಡಿ…

Read More

ಸುಮ್ಮನೊಮ್ಮೆ ಯೋಚಿಸಿ ನೋಡಿ; ಕಾಸೆಂಬುದು ನಮ್ಮ ಬದುಕಿನಲ್ಲಿ ನಮಗೇ ಗೊತ್ತಿಲ್ಲದಂತೆ ನಾನಾ ಬೆರಗುಗಳನ್ನು ಸೃಷ್ಟಿಸಿರುತ್ತೆ. ಸರಿಯಾಗಿ ದಿಟ್ಟಿಸಿದರೆ ಆ ಮಾಯೆಯ ಅಲಗಿನಿಂದಾದ ಗಾಯಗಳೇ ಹೆಚ್ಚು ಸಿಗುತ್ತವೆ. ಕೆಲ ಮಂದಿಯಂತೂ ಹೇಗಾದರೂ ಕಾಸು ಪೇರಿಸಿಕೊಳ್ಳಬೇಕೆಂಬ ಭರದಲ್ಲಿ ನಾನಾ ಥರದಲ್ಲಿ ಲಗಾಟಿ ಹೊಡೆಯುತ್ತಾರೆ. ಜೀವದಷ್ಟೇ ನಂಬಿಕೆಯಿಟ್ಟುಕೊಂಡಿದ್ದವರ ನೆತ್ತಿಗೆ ದೋಖಾ, ದಗಲ್ಬಾಜಿಗಳ ಮೂಲಕ ಘಾಸಿಯುಂಟು ಮಾಡುತ್ತಾರೆ. ಯಾರದ್ದೋ ಶ್ರಮಕ್ಕೆ ಅಪ್ಪನಾಗಿ ಮೆರೆಯುತ್ತಾರೆ. ಅದನ್ನು ದಕ್ಕಿಸಿಕೊಳ್ಳಲು ನಾನಾ ಥರದ ಆಟ ಕಟ್ಟುತ್ತಾರೆ. ಅಂಥಾ ನೌಟಂಕಿ ಆಟದ ಪಾರಂಗತರಿಗೂ ಕೂಡಾ, ಕಾಸಿಗಿಂತ ಬೆಚ್ಚನೆಯದ್ದೊಂದು ಸ್ನೇಹ, ಉಗುರುಬೆಚ್ಚಗಿನ ಹಿತವಾದ ಪ್ರೀತಿ ಮತ್ತು ಎದೆಯೊಳಗೆ ಸದಾ ಪ್ರವಹಿಸುವ ಮನುಷ್ಯತ್ವವೊಂದೇ ಶಾಶ್ವತವೆಂಬ ಅಂತಿಮ ಸತ್ಯದ ಅರಿವಾಗುತ್ತೆ. ಅಷ್ಟರಲ್ಲಿ ಕಾಲ ಮಿಂಚಿ ಹೋಗಿ ಕೈ ಚಾಚಿದರೂ ಹತ್ತಿರದ ಜೀವಗಳು ಸಿಗದೇ ಹೋಗೋ ನರಕ ಮಾತ್ರವೇ ಜೊತೆಗಿರುತ್ತೆ. ಇಂಥಾ ಕಾಂಚಾಣವೆಂಬ ಮಾಯೆಯ ಸುತ್ತ ಹಬ್ಬಿಕೊಂಡಿರೋ ರೋಚಕ ಕಥನದ ಚಿತ್ರವೊಂದು ಬಿಡುಗಡೆಗೆ ಸಜ್ಜಾಗಿ ನಿಂತಿದೆ! ಅಂದಹಾಗೆ, ಶೀರ್ಷಿಕೆ ಕೇಳಿದಾಕ್ಷಣವೇ ಇಷ್ಟೆಲ್ಲ ಲಹರಿಗೆ ಬೀಳಿಸುವಂತಿರೋ ಆ ಚಿತ್ರ `ರುಪಾಯಿ’.…

Read More

ಕರಾವಳಿಯ ದಿಕ್ಕಿನಿಂದ ಕನ್ನಡ ಚಿತ್ರರಂಗದತ್ತ ಗೆಲುವಿನ ಕುಳಿರ್ಗಾಳಿ ಬೀಸಿ ಬರಲಾರಂಭಿಸಿದೆ. ಆ ಭಾಗದ ಕಥಾನಕವನ್ನೊಳಗೊಂಡಿದ್ದ ಕಾಂತಾರ ಚಿತ್ರವಂತೂ ವಿಶ್ವಾದ್ಯಂತ ಅದೆಂಥಾ ಕ್ರೇಜ್‍ನ ಕಿಡಿ ಹೊತ್ತಿಸಿ ಗೆದ್ದಿತೆಂಬುದು ಕಣ್ಣ ಮುಂದಿನ ಸತ್ಯ. ಹಾಗೆ ನೋಡಿದರೆ, ಕರಾವಳಿ ಸೀಮೆ ರೋಚಕ ಕಥನಗಳ ಅಕ್ಷಯ ಪಾತ್ರೆಯಿದ್ದಂತೆ. ಈ ಕಾರಣದಿಂದಲೇ ಆ ನೇಟಿವಿಟಿಯ ಕಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ದೃಷ್ಯರೂಪ ಧರಿಸುತ್ತಾ, ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದ್ದಾವೆ. ಸದ್ಯಕ್ಕೆ ಆ ಸಾಲಿನಲ್ಲಿ ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆ, ಕುತೂಹಲ ಹುಟ್ಟು ಹಾಕಿರುವ ಚಿತ್ರ `ಕುದ್ರು’! ಹಾಗಾದರೆ, ಕುದ್ರು ಅಂದರೇನು? ಅಂತೊಂದು ಪ್ರಶ್ನೆ ಕರ್ನಾಟಕದ ಬೇರೆ ಭಾಗಗಳ ಮಂದಿಯನ್ನು ಕಾಡೋದು ಸಹಜ. ಆದರೆ, ಕರಾವಳಿಗರ ಪಾಲಿಗದು ಪರಿಚಿತ, ಬದುಕಿನ ಭಾಗ. ನದಿ ಸಮುದ್ರವನ್ನ ಕೂಡುವಲ್ಲಿ, ನೀರಿನಿಂದಾವೃತವಾದ ಮಧ್ಯ ಭಾಗದಲ್ಲಿ ಹುಟ್ಟಿಕೊಳ್ಳುವ ನಡುಗಡ್ಡೆಯನ್ನು ಕರಾವಳಿ ಸೀಮೆಯಲ್ಲಿ ಕುದ್ರು ಅಂತ ಕರೆಯಲಾಗುತ್ತೆ. ಅಂಥಾದ್ದೊಂದು ಪ್ರದೇಶದಲ್ಲಿ ನಡೆಯೋ ರೋಚಕ ಕಥೆಯೊಂದನ್ನು ಈ ಮೂಲಕ ದೃಷ್ಯೀಕರಿಸಲಾಗಿದೆ. ವಿಶೇಷವೆಂದರೆ, ಈ ಸಿನಿಮಾದ ನಿರ್ಮಾಪಕರಾದ ಭಾಸ್ಕರ್ ನಾಯಕ್ ಅವರೇ ಈ ಕಥೆಯನ್ನು…

Read More

ಅತ್ತ ದರ್ಶನ್ ನಿಂತರೂ, ಕುಂತರೂ ವಿವಾದವೇಳುತ್ತಿದೆ. ಹಾಗೆ ನೋಡಿದರೆ, ಕ್ರಾಂತಿ ಚಿತ್ರದ ಶುರುವಾತಿನಿಂದ ಹಿಡಿದು ಇಲ್ಲಿಯವರೆಗೂ ವಿವಾದಗಳ ಮೆರವಣಿಗೆಯೇ ಮೂಡಿಕೊಂಡಿದೆ. ಇದೀಗ ಇಂಥಾ ವಿವಾದವೆಂಬುದು ಕ್ರಾಂತಿಯ ನಾಯಕಿ ರಚಿತಾ ರಾಮ್ ಹೆಗಲೇರಿಕೊಂಡಿದೆ. ಒಂದು ವಿನಮ್ರವಾದ ತಪ್ಪೊಪ್ಪಿಗೆಯ ಮೂಲಕ ರಚಿತಾ ಇದೊಂದು ವಿವಾದದ ಸ್ವರೂಪ ಪಡೆಯೋದನ್ನು ತಡೆಯೋ ದಾರಿಗಳಿದ್ದವು. ಆದರಾಕೆ, ಹೆಗಲೇರಿದ್ದ ವಿವಾದವನ್ನು ಮೊಂಡು ಮಾತುಗಳ ಮೂಲಕ ಕೊಡವಿಕೊಳ್ಳಲು ನೋಡಿದಳು. ಅದರ ಫಲವಾಗಿಯೇ ಅದೀಗ ರಚಿತಾಳ ನೆತ್ತಿಗೇರಿ ಕೂರುವಂತಾಗಿದೆ! ಸಾಮಾನ್ಯವಾಗಿ, ಸೆಲೆಬ್ರಿಟಿ ಅಂದುಕೊಂಡವರಿಗೆ ಸಾಮಾನ್ಯ ಜ್ಞಾನವಿರುವುದು ಕಡಿಮೆ. ಆದರೆ, ಪ್ರಸ್ತುತ ವಿದ್ಯಮಾನಗಳನ್ನು ಅರಿತುಕೊಂಡು, ಇತಿಹಾಸ, ದೇಶ, ಸಂವಿಧಾನ, ಕಾನೂನುಗಳ ಬಗ್ಗೆ ತೆಳುವಾಗಿಯಾದರೂ ಒಂದಷ್ಟು ತಿಳುವಳಿಕೆ ಹೊಂದಿರೋದು ಅವಶ್ಯಕ. ಅದರಲ್ಲಿಯೂ ಸಾರ್ವಜನಿಕವಾಗಿ ಮಾತಾಡುವಾಗ ಮೈ ತುಂಬಾ ಕಣ್ಣಾಗಿರುವ ಎಚ್ಚರ ಸಾಮಾಜಿಕ ಬದುಕಿನಲ್ಲಿ ಅತಿ ಮುಖ್ಯ. ಗ್ಲಾಮರ್‍ನತ್ತ ಮಾತ್ರವೇ ಗಮನ ಹರಿಸುವ ರಚಿತಾ ರಾಮ್‍ಗೆ ಅಂಥಾದ್ದರ ಗಂಧ ಗಾಳಿ ಇರುವಂತಿಲ್ಲ. ಇದ್ದಿದ್ದರೆ ಗಣರಾಜ್ಯೋತ್ಸವವನ್ನು ಮರೆತುಬಿಡಿ, ಕ್ರಾಂತಿ ನೋಡಿ ಎಂಬಂಥಾ ದಡ್ಡ ಹೇಳಿಕೆ ಆಕೆಯ ಕಡೆಯಿಂದ ತೂರಿ…

Read More