Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಈ ಜಗತ್ತಿನಲ್ಲಿ ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದೆ ಪರಡಾಡುವ ಕೋಟ್ಯಂತರ ಜೀವಗಳಿದ್ದಾವೆ. ಅದರಾಚೆಗೆ ಕಪ್ಪು, ಕುರೂಪಗಳೆಂಬ ಕೀಳರಿಮೆಯ ಕುಲುಮೆಯಲ್ಲಿ ಮತ್ತಷ್ಟು ಜೀವಗಳು ಬೇಯುತ್ತಿದ್ದಾವೆ. ಇಂಥಾದ್ದರ ನಡುವೆ ಕೆಲ ಮಂದಿ ನಾನಾ ಥರದ ಶೋಕಿಗಳಿಗಾಗಿಯೇ ಬದುಕುತ್ತಿದ್ದಾರೆ. ಪ್ರಾಕೃತಿಕವಾಗಿ ಸಿಕ್ಕ ಸೌಂದರ್ಯವನ್ನೂ ಕೂಡಾ ಕಷ್ಟಪಟ್ಟು, ದುಡ್ಡು ಖರ್ಚು ಮಾಡಿ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂಥಾದ್ದೇ ಮನಸ್ಥಿತಿಯ ಹುಚ್ಚನೊಬ್ಬ ಇರುವ ಸೌಂದರ್ಯವನ್ನ ಕುರೂಪ ಮಾಡಿಕೊಳ್ಳಲು ಬರೋಬ್ಬರಿ ಐದು ಲಕ್ಷಕ್ಕೂ ಹೆಚ್ಚಿನ ಹಣವನ್ನ ಮುಡಿಪಾಗಿಟ್ಟಿದ್ದಾನೆ. ಅಂಥಾದ್ದೊಂದು ಹುಚ್ಚುತನದ ಮೂಲಕವೇ ಕುಖ್ಯಾತಿ ಗಳಿಸಿರುವಾತ ಜರ್ಮನಿ ದೇಶದ ಸ್ಯಾಂಡ್ರೋ. ಈತನ ಹುಚ್ಚಾಟದ ಬಗ್ಗೆ ಒಂದಷ್ಟು ಮಂದಿ ಉಗಿದು ಉಪ್ಪಾಕಲಾರಂಭಿಸಿದ್ದಾರೆ. ಅಷ್ಟಕ್ಕೂ ಈ ಆಸಾಮಿಗಿದ್ದದ್ದು ವಿಚಿತ್ರವಾದ ಬಯಕೆ. ತನ್ನ ದೇಹವನ್ನು ಥೇಟು ಅಸ್ಥಿಪಂಜರದ ಆಕಾರದಲ್ಲಿ ರೂಪಿಸಬೇಕನ್ನೋದು ಅವನ ಬಯಕೆ. ಇದಕ್ಕಾಗಿ ಅಸ್ಥಿಪಂಜರದಂತೆ ಮೈ ತುಂಬಾ ಟ್ಯಾಟೂ ಹಾಕಿಸಿಕೊಂಡಿದ್ದ. ಆತನ ಹುಚ್ಚು ಅದ್ಯಾವ ಪರಿ ಇತ್ತೆಂದರೆ ಲಕ್ಷಾಂತರ ಖರ್ಚು ಮಾಡಿ ಕಿವಿಗಳನ್ನೂ ಶಾಶ್ವತವಾಗಿ ಕೀಳಿಸಿಕೊಂಡಿದ್ದಾನೆ. ಈ ಪ್ರಪಂಚದಲ್ಲಿ ಇನ್ನೂ ಎಂತೆಂಥ ಹುಚ್ಚರಿದ್ದಾರೋ…

Read More

ಕನ್ನಡ ಚಿತ್ರರಂಗದ ಅಸಲೀ ತಾಕತ್ತೇನೆಂಬುದೀಗ ಇಡೀ ದೇಶಕ್ಕೇ ಗೊತ್ತಾಗಿದೆ. ಬರೀ ಪ್ಯಾನಿಂಡಿಯಾ ಲೇಬಲ್ಲಿನ ಚಿತ್ರಗಳು ಮಾತ್ರವಲ್ಲ; ಕರ್ನಾಟಕಕ್ಕೆ ಮಾತ್ರವೇ ಸೀಮಿತವಾಗಿ ತಯಾರುಗೊಂಡ ಚಿತ್ರಗಳೂ ಕೂಡಾ ರಾಷ್ಟರಮಟ್ಟದಲ್ಲಿ ಸದ್ದು ಮಾಡುತ್ತಿವೆ. ಕೋಟಿ ಕೋಟಿ ಬಾಚಿಕೊಳ್ಳುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸುವಂತಿವೆ. ಅದಕ್ಕೊಂದು ತಾಜಾ ಉದಾಹರಣೆ ಕಾಂತಾರ. ಇದೀಗ ಶ್ರೀನಗರ ಕಿಟ್ಟಿ ಅಭಿನಯದ ಗೌಳಿ ಚಿತ್ರದ ಮೂಲಕ ಆ ಸಮ್ಮೋಹಕ ಇತಿಹಾಸ ಮರುಕಳಿಸಲಿದೆಯಾ? ಈ ನೆಲದ ಘಮಲಿನ ನೈಜ ಕಥಾನಕವನ್ನೊಳಗೊಂಡಿರುವ ಗೌಳಿ ರಾಷ್ಟ್ರ ಮಟ್ಟದಲ್ಲಿ ಕಮಾಲ್ ಮಾಡಲಿದೆಯಾ? ಇಂಥಾ ಅನೇಕ ನೆಲೆಯಲ್ಲಿ ಪ್ರಶ್ನೆಗಳು ಮೂಡಿಕೊಂಡಿವೆ. ಈ ಸಿನಿಮಾದ ಟೀಸರ್ ನೋಡಿದವರೆಲ್ಲರ ಮನಸಲ್ಲಿ ಹೌದೆಂಬ ಉತ್ತರ ಗಟ್ಟಿಯಾಗಿ ಬೇರೂರಿಕೊಂಡಿದೆ! ಯಾವುದೇ ಪ್ರಚಾರದ ಗಿಮಿಕ್ಕುಗಳಿಲ್ಲದೆ, ತೆರೆಗಾಣುವ ಹಾದಿಯಲ್ಲಿ ಯಾವ ಕಾರ್ಯತಂತ್ರಗಳನ್ನೂ ಅನುಸರಿಸದೆ, ತಾನೇತಾನಾಗಿ ಚಿತ್ರವೊಂದು ಈ ಪರಿಯಾಗಿ ಭರವಸೆ ಮೂಡಿಸೋದಿದೆಯಲ್ಲಾ? ಅದು ಅಪರೂಪದ ಗೆಲುವೊಂದರ ಸ್ಪಷ್ಟ ಸೂಚನೆ. ಈ ನಿಟ್ಟಿನಲ್ಲಿ ನೋಡೋದಾದರೆ, ಗೌಳಿ ಈ ಹೊಸಾ ಸಂವತ್ಸರವನ್ನು ಅಮೋಘ ಗೆಲುವಿನ ಮೂಲಕ ಸಂಪನ್ನಗೊಳಿಸುವ ಲಕ್ಷಣಗಳು ಸ್ಪಷ್ಟವಾಗಿಯೇ ಗೋಚರಿಸುತ್ತಿವೆ. ಈ…

Read More

ಪ್ರೀತಿ ಎಂಬುದು ಸಿನಿಮಾ ವಿಚಾರದಲ್ಲಿ ಯಾವತ್ತಿಗೂ ಸವಕಲಾಗದ ಮಾಯೆ. ಪ್ರೀತಿ, ಪ್ರೇಮಗಳ ಬಗ್ಗೆ ಲೆಕ್ಕವಿಡಲಾರದಷ್ಟು ಸಿನಿಮಾಗಳು ಬಂದಿದ್ದರೂ, ಅದನ್ನೇ ಕೇಂದ್ರವಾಗಿಟ್ಟುಕೊಂಡು ಮತ್ತೊಂದಷ್ಟು ಚಿತ್ರಗಳು ತಯಾರಾಗಿವೆ. ಅದು ಒಡ್ಡುವ ಬೊಗಸೆ ಮತ್ತು ಧ್ಯಾನಿಸುವ ಮನಸ್ಸು ಅದೆಷ್ಟು ಪ್ರಫಲ್ಲವಾಗಿರುತ್ತದೋ, ಕ್ರಿಯಾಶೀಲವಾಗಿರುತ್ತದೋ, ಅಷ್ಟೇ ತಾಜಾತನದಿಂದ ದಕ್ಕುವ ಮಾಯೆ. ಅಂಥಾದ್ದೊಂದು ತಾಜಾ ಅನುಭೂತಿ ಹೊತ್ತುಕೊಂಡು ಬಿಡುಗಡೆಗೆ ತಯಾರುಗೊಂಡಿರುವ ಚಿತ್ರ `ಕೈ ಜಾರಿದ ಪ್ರೀತಿ’! ಶೀರ್ಷಿಕೆ ಕೇಳಿದರೇನೇ ಇದೊಂದು ಪ್ರೇಮ ಕಥಾನಕವೆಂಬ ಸ್ಪಷ್ಟವಾದ ಸುಳಿವು ಸಿಗುತ್ತದೆ. ಆದರೆ, ಇಲ್ಲಿರೋದು ಮಾಮೂಲಿ ಕಥೆಯಲ್ಲ; ಅದರೊಂದಿಗೆ ಮೆಲುವಾದೊಂದು ಸಂದೇಶವೂ ಇದೆಯೆಂಬ ಸೂಚನೆ ಚಿತ್ರತಂಡದ ಕಡೆಯಿಂದ ಸಿಗುತ್ತದೆ. ಈಗಾಗಲೇ ಹೊರ ಬಂದಿರುವ ಹಾಡುಗಳು ಮತ್ತು ಕಥೆಯಲ್ಲಿ ಅಡಕವಾಗಿರುವಂಥಾ ಒಂದಷ್ಟು ವಿಶೇಷ ಅಂಶಗಳ ಸುಳಿವುಗಳೊಂದಿಗೆ ಕೈ ಜಾರಿದ ಪ್ರೀತಿ ಪ್ರೇಕ್ಷಕರ ಮನಸಿಗಂಟಿಕೊಂಡಿದೆ. ಒಂದಷ್ಟು ಮಂದಿ ಈ ಸಿನಿಮಾದ ಬರುವಿಕೆಗಾಗಿ ಕಾತರರಾಗಿದ್ದಾರೆ. ಅದ್ಯಾವುದೇ ಕನಸಾಗಿದ್ದರೂ ಕೂಡಾ ಅಚಲ ಶ್ರದ್ಧೆ, ಪರಿಶ್ರಮ ಮತ್ತು ಏನೇ ಆದರೂ ಮಾಡಿಯೇ ತೀರುವ ಛಾತಿಗಳಿಲ್ಲದೆ ಕೈಗೆಟುಕುವಂಥಾದ್ದಲ್ಲ. ಅಂಥಾದ್ದೊಂದು ಮನಃಸ್ಥಿತಿ ಇಲ್ಲದೇ ಹೋಗಿದ್ದರೆ,…

Read More

ಕಳೆದ ವರ್ಷದ ಗೆಲುವಿನ ಸಿಹಿ ಮತ್ತು ಅದರಿಂದಾಗಿಯೇ ಸ್ಫುರಿಸಿದ ಭರವಸೆಗಳ ಒಡ್ಡೋಲಗದಲ್ಲಿ ಕನ್ನಡ ಚಿತ್ರರಂಗ ಹೊಸಾ ಸಂವತ್ಸರಕ್ಕೆ ತೆರೆದುಕೊಂಡಿದೆ. ಅದಕ್ಕೆ ಮತ್ತಷ್ಟು ಆವೇಗ ನೀಡುವಂಥಾ ಒಂದಷ್ಟು ಸಿನಿಮಾಗಳು ಗೆಲುವಿನ ಖಾತೆ ತೆರೆಯಲು ಸನ್ನದ್ಧವಾಗಿ ನಿಂತಿವೆ. ಆ ಯಾದಿಯಲ್ಲಿ ಮೊದಲ ಸಾಲಿನ ಸ್ಥಾನ ಗಿಟ್ಟಿಸಿಕೊಂಡಿರುವ ಚಿತ್ರ ಧೈರ್ಯಂ ಸರ್ವತ್ರ ಸಾಧನಂ. ಈಗಾಗಲೇ ಲಿರಿಕಲ್ ಸಾಂಗ್ ಸೇರಿದಂತೆ ನಾನಾ ಬಗೆಯಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾ, ಒಂದಷ್ಟು ನಿರೀಕ್ಷೆ, ಭರವಸೆಗಳನ್ನು ಹುಟ್ಟುಹಾಕಿದೆ. ಇದೇ ಹೊತ್ತಿನಲ್ಲಿ ಸೆನ್ಸಾರ್ ಅನ್ನೂ ಮುಗಿಸಿಕೊಂಡು, ಇನ್ನೇನು ಅತೀ ಶೀಘ್ರದಲ್ಲಿ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸಲಾರಂಭಿಸಿದೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ `ಹೆಂಡವೇ ನಮ್ಮನೆ ದ್ಯಾವರು’ ಎಂಬೊಂದು ವೀಡಿಯೋ ಸಾಂಗ್ ವ್ಯಾಪಕ ಮೆಚ್ಚುಗೆ ಗಳಿಸಿಕೊಂಡಿತ್ತು. ಇದರೊಂದಿಗೆ ಸದರಿ ಚಿತ್ರದ ಬಗೆಗಿನ ಕುತೂಹಲ ಪ್ರೇಕ್ಷಕರೆದೆಗೆ ದಾಟಿಕೊಂಡಿತ್ತು. ಈ ಹಾಡು ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿರುವಾಗಲೇ ಚಿತ್ರತಂಡ ಬಿಡುಗಡೆಗೆ ಮುಹೂರ್ತ ಹುಡುಕಲಾರಂಭಿಸಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ, ತಿಂಗಳೊಪ್ಪತ್ತಿನಲ್ಲಿಯೇ ಧೈರ್ಯಂ ಸರ್ವತ್ರ ಸಾಧನಂ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ. ಹೀಗೆ…

Read More

ಹೂಜಿಯೊಳಗೆ ಕಲ್ಲುಗಳನ್ನ ಹಾಕಿ ಉಪಾಯದಿಂದ ಬಾಯಾರಿಕೆ ನೀಗಿಕೊಂಡ ಕಾಗೆಯ ಕಥೆ ನಮಗೆಲ್ಲ ಪರಿಚಿತ. ಅದು ಆ ಪಕ್ಷಿಯ ಅಗಾಧವಾದ ಬುದ್ಧಿವಂತಿಕೆಯನ್ನ ಸಾರಿ ಹೇಳುತ್ತೆ. ಆದರೂ ಕೂಡಾ ಂದು ಕೆಟ್ಟ ಶಕುನದ ಪಕ್ಷಿ ಎಂದೇ ಬಿಂಬಿತವಾಗಿದೆ. ಆದ್ದರಿಂದಲೇ ಅದರ ಬಗೆಗೊಂದು ತಾತ್ಸಾರ ತಂತಾನೇ ಮೂಡಿಕೊಂಡು ಬಿಟ್ಟಿದೆ. ಆದ್ರೆ ಕಾಗೆಯ ಗ್ರಹಿಕೆ, ಸ್ಮರಣ ಶಕ್ತಿ, ಬುದ್ಧಿವಂತಿಕೆ ನಿಜಕ್ಕೂ ಕಂಗಾಗಾಗುವಂಥಾದ್ದು. ಭಾರತದಲ್ಲಿ ಒಂದಷ್ಟು ನಂಬಿಕೆಗಳು ಕಾಗೆಯ ಸುತ್ತಾ ಹಬ್ಬಿಕೊಂಡಿದೆ. ಕಾಗೆ ಮುಟ್ಟಿದರೊಂದು ಶಕುನ, ಅದು ಕೂಗಿದರೊಂದು ಶಕುನ… ಒಟ್ಟಾರೆಯಾಗಿ ಅದು ಪಿಂಡ ಪ್ರಧಾನ ಮಾಡೋ ಸಮಯದಲ್ಲಿ ಮಾತ್ರವೇ ಉಪಯೋಗಕ್ಕೆ ಬರೋ ಪಕ್ಷಿ ಎಂಬಂತಾಗಿ ಹೋಗಿದೆ. ಆದ್ರೆ ವಾಶಿಂಗ್ಟನ್ ಯುನಿವರ್ಸಿಟಿಯೊಂದು ವರ್ಷಾಂತರಗಳ ಕಾಲ ನಡೆಸಿರೋ ಅಧ್ಯಯನ ಕಾಗೆಯ ಅಗಾಧ ಶಕ್ತಿ ಸಾಮಥ್ರ್ಯಗಳಿಗೆ ಕನ್ನಡಿ ಹಿಡಿಯುವಂತಿದೆ. ಕಾಗೆಯದ್ದು ಅಪರಿಮಿತ ಸ್ಮರಣ ಶಕ್ತಿ. ಸಾಮಾನ್ಯವಾಗಿ ಕಾಗೆಗಳು ಸಂಘ ಜೀವಿಗಳು. ಸಿಕ್ಕ ಆಹಾರವನ್ನು ಅದೆಂಥಾ ಹಸಿವಿದ್ದರೂ ಅವು ಒಂದೊಂದೇ ಕಬಳಿಸೋದಿಲ್ಲ. ತಮ್ಮವರನ್ನೆಲ್ಲ ಕೂಗಿ ಕರೆದು ಹಂಚಿ ತಿನ್ನುತ್ತವೆ. ಅವು ಒಂಥರಾ ನಿರುಪದ್ರವಿ…

Read More

ಐಟಿ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿರುವ ದಂಧೇ, ದೋಖಾಬಾಜಿಗಳು ಪೊಲೀಸ್ ಇಲಾಖೆಯ ಅಂಕೆಗೆ ಸಿಗದಂತೆ ಹಬ್ಬಿಕೊಂಡಿವೆ. ದೇಶ ವಿದೇಶಗಳಿಂದ ಅನ್ನ, ವಿದ್ಯೆ ಅರಸಿ ಬರುವವರ ಪಾಲಿಗೆ ಬೆಂಗಳೂರು ಸದಾ ಪೊರೆಯುವ ಬಂಧುವಿದ್ದಂತೆ. ಆದರೆ, ಕೆಲ ಮಂದಿ ಮಾತ್ರ ಇಂಥಾ ನಾನಾ ವೇಷ ಧರಿಸಿ ಬಂದು ಇಲ್ಲಿಯೇ ಠಿಕಾಣಿ ಹೂಡುತ್ತಿದ್ದಾರೆ. ಕೆಲ ವಿದೇಶಿ ಪ್ರಜೆಗಳಂತೂ ವಿದ್ಯಾರ್ಥಿಗಳ ಸೋಗಿನಲ್ಲಿ ಬಂದು ಇಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ಡ್ರಗ್ಸ್ ಸೇರಿದಂತೆ ನಾನಾ ದಂಧೆಗಳ ಭಾಗವಾಗಿದ್ದಾರೆ. ಇದುವರೆಗೂ ತಾಂಜೇನಿಯಾ ಮೂಲದ ಅಕ್ರಮ ಬೆಂಗಳೂರು ನಿವಾಸಿಗಳ ಮೇಲೆ ಡ್ರಗ್ಸ್ ಮಾಫಿಯಾದ ಆರೋಪಗಳಿದ್ದವು. ಅವರಲ್ಲಿ ಕೆಲ ಮಂದಿಯೀಗ ಬೆಂಗಳೂರಿನಲ್ಲಿ ವೇಶ್ಯಾ ದಂಧೆಗಿಳಿದಿರೋ ಗುಮಾನಿಗಳಿದ್ದಾವೆ! ಹೆಸರಘಟ್ಟ ಮುಖ್ಯ ರಸ್ತೆಯ ಗಣಪತಿ ನಗರದ ಆಜೂಬಾಜು ಸೇರಿದಂತೆ, ಬೆಂಗಳೂರಿನ ನಾನಾ ಪ್ರದೇಶಗಳಲ್ಲಿ ವಿದೇಶಿ ವಿದ್ಯಾರ್ಥಿಗಳ ಅಟಾಟೋಪ ಇಂದು ನಿನ್ನೆಯದ್ದಲ್ಲ. ಈ ಭಾಗದಲ್ಲಿ ಹೈಟೆಕ್ ಕಾಲೇಜುಗಳು ತಲೆ ಎತ್ತಿರೋದರಿಂದ ಈ ಭಾಗದಲ್ಲಿ ದಕ್ಷಿಣಾಫ್ರಿüಕಾ ಕಡೆಯ ವಿದ್ಯಾರ್ಥಿಗಳು ಬಂದು ಗುಡ್ಡೆ ಬೀಳುತ್ತಿದ್ದಾರೆ. ಹೀಗೆ ಬಂದ ಆಸಾಮಿಗಳು ಅದುಮಿಕೊಂಡು ಓದು ಬರಹ…

Read More

ಈಗ ಎಲ್ಲೆಲ್ಲಿಯೂ ಮಾಲ್ ಸಂಸ್ಕೃತಿ ಹಬ್ಬಿಕೊಂಡಿದೆ. ಆಗತಾನೇ ಕೊಯ್ದ ಹಣ್ಣು ತರಕಾರಿ ಬೀದಿ ಬದಿಯಲ್ಲಿದ್ರೆ ಜನ ಅದ್ರತ್ತ ತಿರುಗಿಯೂ ನೋಡೋದಿಲ್ಲ. ದೊಡ್ಡ ದೊಡ್ಡ ಮಾಲ್‌ಗಳಲ್ಲಿ ಹಣ್ಣು ತರಕಾರಿ ಕೊಂಡರೇನೋ ಅಂಥವ್ರಿಗೆಲ್ಲ ಸಮಾಧಾನ. ಕಲಾತ್ಮಕವಾಗಿ ಜೋಡಿಸಿರುವ, ನಾನಾ ವ್ಯಾಪಾರೀ ಹಕೀಕತ್ತುಗಳಿಗೇ ಜನರ ಮನಸು ಸೋಲುತ್ತೆ. ಅಂಥಾ ಹೈಫೈ ಮಳಿಗೆಗಳಿಂದ ತಂದರೇನೇ ಹಣ್ಣು ಸೇರಿದಂತೆ ಎಲ್ಲವೂ ಫ್ರೆಶ್ ಆಗಿರುತ್ತೆಂಬ ನಂಬಿಕೆ ಹಲವರಲ್ಲಿದೆ. ಆದ್ರೆ ಈಗ ಹೊರ ಬಿದ್ದಿರೋ ಒಂದು ಸುದ್ದಿ ಅಂಥಾ ನಂಬಿಕೆಗಳನ್ನೆಲ್ಲ ಶುದ್ಧ ಭ್ರಮೆಯನ್ನಾಗಿಸಿದೆ. ಆರೋಗ್ಯ ಕಾಳಜಿ ಹೊಂದಿರುವವ ಪಾಲಿನ ಮೆಚ್ಚಿನ ಹಣ್ಣು ಆಪಲ್. ದಿನಾ ಒಂದು ಸೇಬು ತಿಂದರೆ ಅನಾರೋಗ್ಯದಿಂದ ದೂರ ಇರಬಹುದೆಂಬ ನಾಣ್ನುಡಿಯೇ ಇದೆ. ಅದರಲ್ಲಿ ಸತ್ಯವಿರೋದೂ ಹೌದು. ಪ್ರತಿಯೊಂದನ್ನೂ ಲಾಭಕ್ಕೆ ಬಳಸಿಕೊಳ್ಳೋ ವ್ಯಾಪಾರಿ ಬುದ್ಧಿ ಸೇಬನ್ನು ಬಿಡೋದುಂಟೇ? ಆದ್ದರಿಂದಲೇ ಆಪಲ್ ವ್ಯಾಪಾರಿಗಳು ತಾಜಾತನದ ವಿಚಾರದಲ್ಲಿ ಗ್ರಾಹಕರನ್ನು ಸಲೀಸಾಗಿ ಯಾಮಾರಿಸುತ್ತಿದ್ದಾರಂತೆ. ಸೇಬು ಸರ್ವ ಋತುಗಳಲ್ಲಿಯೂ ದುಬಾರಿ ಬೆಲೆ ಕಾಯ್ದಿಟ್ಟುಕೊಂಡಿರೋ ಹಣ್ಣು. ಅದೆಷ್ಟೇ ತಾಜಾ ಹಣ್ಣನ್ನ ತಂದ್ರೂ ದಿನ ಕಳೆಯೋದರೊಳಗದು ಮುರುಟಿಕೊಳ್ಳುತ್ತೆ.…

Read More

ಯಾವುದಂದ್ರೆ ಯಾವುದಕ್ಕೂ ಕೇರು ಮಾಡದವರೂ ಜಿರಲೆ ಕಂಡರೆ ಜೀವವೇ ಹೋದಂತೆ ಕಿರುಚಿಕೊಳ್ಳೋದಿದೆ. ಅದ್ರಲ್ಲಿಯೂ ಹೆಚ್ಚಿನ ಹೆಂಗಳೆಯರಿಗೆ ಈ ಜಿರಲೆ ಭಯ ತುಸು ಹೆಚ್ಚು. ಅಡುಗೆ ಮನೆಯಲ್ಲಿಯೇ ಹೆಚ್ಚಾಗಿ ಉತ್ಪತ್ತಿಯಾಗೋ ಜಿರಲೆಗಳು ಬಹುತೇಕ ಎಲ್ಲರಲ್ಲಿಯೂ ಅಸಹ್ಯ ಹುಟ್ಟಿಸುತ್ವೆ. ಈ ಕಾರಣದಿಂದಾನೆ ಆಗಾಗ ಹೊಟೇಲು ತಿನಿಸುಗಳಲ್ಲಿ ಜಿರಲೆ ಫ್ಲೇವರ್ ಪ್ರತ್ಯಕ್ಷವಾಗೋದಂತೂ ನಮ್ಮಲ್ಲಿ ಮಾಮೂಲು. ಈಗ ಹೇಳ ಹೊರಟಿರೋದು ಅದೇ ಜಿರಲೆಯ ಅಚ್ಚರಿಯ ಅವತಾರವೊಂದರ ಬಗ್ಗೆ. ನಿಮಗೆ ಕಾರು, ಬೈಕ್ ಮುಂತಾದ ರೇಸ್‌ಗಳು ಕಾಮನ್. ಅದರ ನಾನಾ ಪ್ರಾಕಾರಗಳು ನಮ್ಮ ದೇಶದಲ್ಲಿಯೂ ಕ್ರೇಜ಼್ ಸೃಷ್ಟಿಸಿರೋದು ಗೊತ್ತೇ ಇದೆ. ಆದ್ರೆ ಕಣ್ಣೆದುರು ಕಾಣಿಸಿಕೊಂಡರೆ ಕಸಿವಿಸಿಗೀಡು ಮಾಡೋ ಜಿರಳೆಗಳದ್ದೂ ಒಂದು ರೇಸ್ ಭಲೇ ಫೇಮಸ್ಸಾಗಿದೆ. ಅದು ದೂರದ ದೇಶ ಆಸ್ಟ್ರೇಲಿಯಾದಲ್ಲಿ ಕಾಮನ್. ಆದ್ರೆ ಆ ಜಿರಲೆ ರೇಸಿನ ಹಿಂದೆ ಅದೆಷ್ಟೋ ವರ್ಷಗಳ ಇತಿಹಾಸವೇ ಇದೆ. ಜಿರಲೆ ರೇಸ್ ಎಂಬುದು ಒಂದು ಜೂಜಿನ ರೂಪದಲ್ಲಿ ಆಸ್ಟ್ರೇಲಿಯಾದಲ್ಲಿ ಬಹು ಕಾಲದಿಂದಲೂ ಚಾಲ್ತಿಯಲ್ಲಿದೆ. ಈ ವಿಚಿತ್ರ ರೇಸ್ ಅಲ್ಲಿ ಪ್ರತೀ ಜನವರಿ ೨೬ನೇ…

Read More

ಕನ್ನಡ ಚಿತ್ರರಂಗವೀಗ ಹೊಸಾ ಸಂವತ್ಸರದತ್ತ ನವೋತ್ಸಾಹದಿಂದ ಮುಖ ಮಾಡಿ ನಿಂತಿದೆ. ಕಳೆದ ವರ್ಷದ ಸಮ್ಮೋಹಕ ಗೆಲುವಿನ ಪ್ರಭೆಯಲ್ಲಿಕಯೇ ಮತ್ತೊಂದಷ್ಟು ಹೊಸತನದ, ಭಿನ್ನ ಕಥಾನಕದ ಚಿತ್ರಗಳು ಬಿಡುಗಡೆಯ ಹೊಸ್ತಿಲಿನಲ್ಲಿವೆ. ಅದರಲ್ಲೊಂದಷ್ಟು ಸಿನಿಮಾಗಳು ಕಳೆದ ವರ್ಷದಿಂದಲೇ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡು ಸಾಗಿ ಬಂದಿವೆ. ಈ ಕಾರಣದಿಂದಲೇ ನಿರೀಕ್ಷೆ ಮೂಡಿಸಿರುವ ಅಂಥಾ ಚಿತ್ರಗಳ ಸಾಲಿನಲ್ಲಿ ಕಡಲ ತೀರದ ಭಾರ್ಗವ ಚಿತ್ರವೂ ಸೇರಿಕೊಳ್ಳುತ್ತೆ. ಈ ಹಿಂದೆ ಟೀಸರ್ ಮೂಲಕ ಸಂಚನ ಸೃಷ್ಟಿಸಿದ್ದ ಈ ಈ ಕಥನವೀಗ, ಚೆಂದದ ಹಾಡೊಂದರ ಮೂಲಕ ಭೋರ್ಗರೆದಿದೆ. ಮಧುರ ಮಧುರ ಎಂಬ ಹಾಡಿನೊಂದಿಗೆ ರೊಮ್ಯಾಂಟಿಕ್ ಫೀಲ್ ಒಂದನ್ನು ಕೇಳುಗರೆದೆಗೆ ದಾಟಿಸಿ, ಅವ್ಯಕ್ತ ಭಾವವೊಂದನ್ನು ಪ್ರತೀ ಮನಸುಗಳಿಗೆ ನಾಟಿಸುವಲ್ಲಿ ಯಶ ಕಂಡಿದೆ. ಅಂದಹಾಗೆ, ಇದು ಪನ್ನಗ ಸೋಮಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಇದರ ಭಾಗವಾಗಿರೋ ಸದರಿ ಹಾಡನ್ನು ಭರ್ಜರಿ ಚೇತನ್ ಬರೆದಿದ್ದಾರೆ. ಅನಿಲ್ ಸಿಜೆ ಸಂಗೀತ ನ ಇರ್ದೇಶನದಲ್ಲಿ ಕಳೆಗಟ್ಟಿಕೊಂಡಿರುವ ಈ ಗೀತೆ ಎಆರ್‍ಸಿ ಮ್ಯೂಸಿಕ್ ಚಾನೆಲ್ ಮೂಲಕ ಬಿಡುಗಡೆಗೊಂಡಿದೆ.…

Read More

ಸುಮ್ಮನೊಮ್ಮೆ ಆಕಾಶದತ್ತ ಕಣ್ಣೆತ್ತಿ ದಿಟ್ಟಿಸಿದರೆ ಅದೆಂಥಾ ಸಂದಿಗ್ಧ ಘಳಿಗೆಯಲ್ಲೂ ನಿರಾಳ ಭಾವ ತಬ್ಬಿಕೊಳ್ಳುತ್ತೆ. ಆ ಕೊನೆಯಿರದ ಅಗಾಧತೆಯ ಮುಂದೆ ನಮ್ಮ ದುಗುಡಗಳೆಲ್ಲ ತೀರಾ ಸಣ್ಣದೆನಿಸುತ್ತೆ. ಆಕಾಶದ ತಾಕತ್ತು ಬರೀ ಅಷ್ಟಕ್ಕೆ ಮಾತ್ರವೇ ಸೀಮಿತವಲ್ಲ. ಅದೊಂದು ವಿಸ್ಮಯ, ವಿಚಿತ್ರಗಳ ನಿಗೂಢ ಆಕರ್ಷಣೆ. ಅಲ್ಲಿ ಸರಿಯುತ್ತ ಹೆಪ್ಪುಗಟ್ಟೋ ಮೋಡ ಮಳೆಯಾಗಿ ತಂಪೆರೆಯುತ್ತೆ. ಮತ್ತೊಂದೆಡೆ ಸೂರ್ಯ ಚಂದ್ರರನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡು ಭೂಮಿಯನ್ನೇ ನಿಯಂತ್ರಿಸುತ್ತೆ. ರಾತ್ರಿಯಾಗುತ್ತಲೇ ಅಸಂಖ್ಯಾತ ನಕ್ಷತ್ರಗಳಿಂದ ತನ್ನನ್ನ ತಾನೇ ಸಿಂಗರಿಸಿಕೊಳ್ಳುತ್ತೆ. ಕೇವಲ ಎಳೇಯ ಮಕ್ಕಳಿಗೆ ಮಾತ್ರವಲ್ಲ; ಹಣ್ಣಣ್ಣು ಮುದುಕರವರೆಗೂ ಆಕಾಶ ಅನ್ನೋದೊಂದು ನಿರಂತರ ಸೆಳೆತವಾಗಿ ಉಳಿದುಕೊಂಡಿದೆ. ಈವತ್ತಿಗೆ ವಿಜ್ಞಾನ ಅಂತರೀಕ್ಷದ ಇಂಚಿಂಚು ನಿಗೂಢಗಳನ್ನೂ ಬಗೆದು ಬಯಲಾಗಿಸಿದೆ. ಆದರೂ ಅಂತರೀಕ್ಷವೆಂಬುದು ನಿತ್ಯ ನಿಗೂಢ. ನಮ್ಮ ಮನಸಲ್ಲಿ ಬಾನಲ್ಲಿ ಮಿಂಚೋ ನಕ್ಷತ್ರಗಳು ಛಳುಕು ಮೂಡಿಸುತ್ವೆ. ಕಣ್ಣಿನ ಪರಿಧಿ ಮೀರಿ ಚೆಲ್ಲಿದಂತಿರೋ ಆ ನಕ್ಷತ್ರಗಳು ಅದೆಷ್ಟಿರಬಹುದೆಂಬ ಪ್ರಶ್ನೆ ಕಾಡುತ್ತೆ. ಅದರ ಮುಂದೆ ಗಣಿತವೇ ಮಂಡಿಯೂರಿದಂತೆಯೂ ಭಾಸವಾಗುತ್ತೆ. ಯಾಕಂದ್ರೆ, ನಕ್ಷತ್ರಗಳ ಸಂಖ್ಯೆ ಅಗಣಿತವಾದದ್ದು. ಅದು ಎಷ್ಟಿರಬಹುದೆಂಬುದಕ್ಕೆ ಮತ್ತೊಂದು ಸಂಕೀರ್ಣದತ್ತ ಬೊಟ್ಟು…

Read More