Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ವಿಕ್ರಾಂತ್ ರೋಣ ಚಿತ್ರದಲ್ಲಿ ರಾರಾ ರಕ್ಕಮ್ಮ ಸಾಂಗಿಗೆ ಮೈ ಬಳುಕಿಸುತ್ತಾ, ಕರ್ನಾಟಕದಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಾಕೆ ಜಾಕ್ವೆಲಿನ್ ಫನಾರ್ಂಡಿಸ್. ಬಾಲಿವುಡ್ಡಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಈಕೆಗೆ ಅಂದುಕೊಂಡಂತೆ ನೆಲೆಗಾಣಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಈಕೆ ಸುದ್ದಿಯಲ್ಲಿದ್ದದ್ದೆಲ್ಲ ನಟ ಸಲ್ಮಾನ್ ಖಾನ್ ಜೊತೆಗಿಒನ ಅಫೇರಿನ ವಿಚಾರದಲ್ಲಿಯೇ. ಇಂಥಾ ಜಾಕ್ವೆಲಿನ್ ಇದೀಗ ಇನ್ನೂರು ಕೋಟಿ ಕಿಮ್ಮತ್ತಿನ ಮಹಾ ಮೋಸವೊಂದರಲ್ಲಿ ತಗುಲಿಕೊಂಡಿದ್ದಾಳೆ. ಈ ಇನ್ನೂರು ಕೋಟಿ ವಂಟನೆಯ ಇಕ್ಕಳದಿಂದ ಬಿಡಿಸಿಕೊಳ್ಳಲಾರದೆ ಒದ್ದಾಡುತ್ತಿದ್ದಾಳೆ. ಸದ್ಯಕ್ಕೆ ಈ ಕೇಸಿನ ಸುತ್ತ ಇಡಿ ಅಧಿಕಾರಿಗಳು ಗಸ್ತು ಹೊಡೆಯುತ್ತಿರೋದನ್ನು ಗಮನಿಸಿದರೆ ರಾರಾ ರಕ್ಕಮ್ಮ ಅಂದವಳಿಗೆ ಜೈಲುವಾಸ ಫಿಕ್ಸಾದಂತಿದೆ. ಹಣದ ಮೋಹಕ್ಕೀಡಾಗಿದ್ದ ಜಾಕ್ವೆಲಿನ್ ಇದೀಗ ರೋದನೆ ಶುರುವಿಟ್ಟುಕೊಂಡಿದ್ದಾಳೆ. ವಂಚಕ ಸುಕೇಶ್ ಚಂದ್ರಶೇಖರ್ ತನ್ನ ಬದುಕನ್ನೇ ಬರ್ಬಾದು ಮಾಡಿದ ಅಂತೆಲ್ಲ ಗೋಳಾಡುತ್ತಿದ್ದಾಳೆ. ರಾಷ್ಟ್ರೀಯ ಮಟ್ಟದಲ್ಲಿ ಹೈ ಪ್ರೊಫೈಲ್ ವಂಚಕನಾಗಿ ಕುಖ್ಯಾತಿ ಪಡೆದಿರುವವನು ಸುಕೇಶ್ ಚಂದ್ರಶೇಖರ್. ಹೈಫೈ ಜನರನ್ನು ಪರಿಚಯ ಮಾಡಿಕೊಂಡು, ನಾನಾ ರೂಪದಲ್ಲಿ ಯಾಮಾರಿಸಿ ಕಾಸು ಪೀಕುವುದು ಸುಕೇಶನ ವಂಚನೆಯ ವರಸೆ. ಇಂಥಾ ಸುಕೇಶ ಇತ್ತೀಚೆಗೆ…

Read More

ಇಡೀ ಜಗತ್ತಿನ ತುಂಬೆಲ್ಲ ವಯೋಮಾನದ ಹಂಗಿಲ್ಲದೆ ಕೊರೋನಾ ವೈರಸ್ ಜೀವ ಭಯ ಹುಟ್ಟಿಸಿದೆ. ಅದರಲ್ಲಿಯೂ ವಯೋವೃದ್ಧರ ದೇಹಕ್ಕೆ ಈ ವೈರಸ್ ಹೊಕ್ಕರೆ ಬಚಾವಾಗೋದು ಕಷ್ಟ ಎಂಬ ಭೀತಿಯಂತೂ ವ್ಯಾಪಕವಾಗಿದೆ. ದೇಹದೊಳಗೆ ರೋಗ ನಿರೋಧಕ ಶಕ್ತಿಯಿರೋ ವಯಸ್ಸಿನವರೇ ಈ ವೈರಸ್ ಮುಂದೆ ಮಂಡಿಯೂರಿದ ಉದಾಹರಣೆಗಳಿದ್ದಾವೆ. ಹಾಗಿರುವಾಗ ಇಳಿ ಸಂಜೆಯಲ್ಲಿರುವ, ವಯೋಸಹಜ ಖಾಯಿಲೆ ಕಸಾಲೆಗಳಿಂದ ಹೈರಾಣುಗೊಂಡಿರುವ ವೃದ್ಧರು ಈ ವೈರಸ್ಸನ್ನು ಜಯಿಸಿಕೊಳ್ಳೋದು ಕಿಷ್ಟ ಅಂತ ವೈದ್ಯಕೀಯ ಲೋಕವೇ ಷರಾ ಬರೆದಿತ್ತು. ಆದರೆ ಆತ್ಮಸ್ಥೈರ್ಯವೊಂದಿದ್ದರೆ ಯಾವ ವಯೋಮಾನದಲ್ಲಿಯೂ ಇಂಥಾ ವೈರಸ್ಸುಗಳ ಬಾಧೆಯನ್ನು ಬಗ್ಗು ಬಡಿಯಬಹುದೆಂಬುದನ್ನು ಸ್ಪೇನ್ ದೇಶದ ವೃದ್ಧೆಯೊಬ್ಬರು ತೋರಿಸಿಕೊಟ್ಟಿದ್ದಾರೆ. ಹಾಗೆ ಕೊರೋನಾದಿಂದ ಬಚಾವಾಗಿದ್ದ ಆಕೆಗೀಗ ವಿಶ್ವದ ಅತ್ಯಂತ ಹಿರಿಯ ನಾಗರಿಕಳೆಂಬ ಗೌರವವೂ ಸಿಕ್ಕಿದೆ. ಈಕೆ ಕೊರೋನಾ ವಿರುದ್ಧ ಹೋರಾಡಿ ಗೆಲುವಿನ ನಗೆ ಬೀರಿದ ಕಥೆ ನಿಜಕ್ಕೂ ರೋಚಕವಾಗಿದೆ. ಅಂದಹಾಗೆ, ಇಡೀ ಜಗತ್ತೇ ಅಚ್ಚರಿಗೊಳ್ಳುವಂತೆ ಕೋವಿಡ್ 19ನಿಂದ ಬಚಾವಾದ ಈ ವೃದ್ಧೆ ಮರಿಯಾ ಬನ್ಯಾಸ್. ಆಕೆಯ ವಯಸ್ಸು ಭರ್ತಿ ನೂರಾ ಹದಿಮೂರು ವರ್ಷವಾಗಿತ್ತು. ಈ ಕಾರಣದಿಂದಲೇ…

Read More

ನಾವೆಲ್ಲ ಪುಟ್ಟ ಮಕ್ಕಳು ಅಳದಂತೆ ನೋಡಿಕೊಳ್ಳಲು ಹರಸಾಹಸ ಪಡ್ತೀವಿ. ಚಿಕ್ಕ ಮಕ್ಕಳು ತುಸು ಅತ್ತರೂ ಅದನ್ನು ಸಮಾಧಾನಿಸಲು ಮನೆ ಮಂದಿಯೆಲ್ಲ ಹರಸಾಹಸ ಪಡ್ತಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಎಲ್ಲ ದೇಶಗಳಲ್ಲಿಯೂ ಅಂಥಾದ್ದೇ ಮನಸ್ಥಿತಿ ಇದೆ. ಯಾರಾದ್ರೂ ಪುಟ್ಟ ಮಕ್ಕಳು ಅಳೋದನ್ನ, ಅಬೋಧ ಕಣ್ಣುಗಳಲ್ಲಿ ನೀರು ತುಂಬಿಕೊಂಡು ದೈನ್ಯದಿಂದ ನೋಡೋದನ್ನ ಬಯಸ್ತಾರಾ? ಬಯಸೋದಿಲ್ಲ ಅಂತಲೇ ನಾವೆಲ್ಲ ಅಂದ್ಕೊಂಡಿರ್ತೀವಿ. ಆದ್ರೆ ಅದು ಶುದ್ಧ ಸುಳ್ಳು. ಜಪಾನ್ ದೇಶದಲ್ಲಿ ಅಖಂಡ ನಾನೂರು ವರ್ಷಗಳಿಂದ ರೂಢಿಯಲ್ಲಿರೋ ಸಂಪ್ರದಾಯದ ಕಥೆ ಕೇಳಿದ್ರೆ ನಿಮಗೂ ಹಾಗನ್ನಿಸದಿರೋದಿಲ್ಲ. ನಾವು ಮಗು ಅಳದಂತೆ ನೋಡಿಕೊಳ್ಳಲು ಹಣಗಾಡ್ತೀವಲ್ಲ? ಜಪಾನಿಗರು ಮಕ್ಕಳನ್ನು ಭೋರಿಟ್ಟು ಅಳುವಂತೆ ಮಾಡಲು ಅಷ್ಟೇ ಹರಸಾಹಸ ಪಡ್ತಾರಂತೆ. ಇದು ವಿಚಿತ್ರ ಅನ್ನಿಸಿದ್ರೂ ನಂಬಲೇ ಬೇಕಾದ ಸತ್ಯ. ಅದು ಗಂಡು ಮಗುವಾಗಿದ್ರೂ ಹೆಣ್ಣು ಮಗುವಾಗಿದ್ರೂ ಎಷ್ಟು ಅತ್ತರೂ ಜಪಾನ್ ಮಂದಿಗೆ ಸಮಾಧಾನವಿರೋದಿಲ್ಲ. ಯಾಕಂದ್ರೆ ಹೆಚ್ಚು ಅತ್ತಷ್ಟೂ ಅವು ಮುಂದಿನ ಜೀವನದಲ್ಲಿ ಹೆಚ್ಚು ಖುಷಿಯಾಗಿರತ್ತವೆಂಬ ನಂಬಿಕೆ ಅವರಲ್ಲಿದೆ. ಆ ನಂಬಿಕೆಗೆ ಸರಿಸುಮಾರು ನಾಲಕ್ಕುನೂರು ವರ್ಷಗಳಾಗಿವೆ. ಆದ್ದರಿಂದಲೇ…

Read More

ಇದು ಎಲ್ಲ ಭಾವಗಳೂ ಬೆರಳಂಚಿಗೆ ಬಂದು ನಿಂತಿರುವ ಕಾಲ. ಅದರ ಫಲವಾಗಿಯೇ ಇಲ್ಲಿ ಯಾವುದೂ ಬೆರಗಾಗಿ ಉಳಿದುಕೊಂಡಿಲ್ಲ. ಫೇಸ್‍ಬುಕ್ಕಿನ ಇನ್‍ಬಾಕ್ಸಿನಲ್ಲಿ ಮೊಳೆಯ ಪ್ರೀತಿ, ಕ್ಷಣಾರ್ಧದಲ್ಲಿ ವಾಟ್ಸಪ್ಪಿಗೆ ರವಾನೆಯಾಗುತ್ತೆ. ಅಲ್ಲಿ ಹಬ್ಬಿಕೊಳ್ಳುವ ದಂಡಿ ದಂಡಿ ಮಾತಿಗಳಿಗೆ ಪಿಸುಮಾತುಗಳ ಮಾಧುರ್ಯವಿರುವುದಿಲ್ಲ. ಕಾಯುವಿಕೆಯ ಸಂಭ್ರಮ ಇಮೋಜಿಗಳಲ್ಲಿ ಕಳೆದು ಹೋಗಿ, ಮೌನವೆಂಬುದು ಗುರುತಿರದ ಸರಕಿನಂತಾಗಿ, ಬರೀದೇ ಮಾತುಗಳ ಸಂತೆಯಲ್ಲಿ ಎಲ್ಲವೂ ಪರ್ಯಾವಸಾನವಾಗುತ್ತಿದೆ. ಇಂಥಾ ಜಗತ್ತಿನಲ್ಲಿ ಪ್ರೀತಿ ಎಂಬುದು ಏಕಾಏಕಿ ಘಟಿಸಿಬಿಡುವ ಜಾತ್ರೆಯಂಥಾದ್ದು. ಅದು ಅಷ್ಟೇ ವೇಗವಾಗಿ ಮುಗಿದ ಮೇಲೆ, ಅಲ್ಲೇಲ್ಲೋ ಮೂಲೆಯಲ್ಲಿ ಭಾವಗಳ ತೇರು ಕೂಡ ನಿಲ್ಲುವುದಿಲ್ಲ. ಇಂಥಾ ಶುಷ್ಕ ಕಾಲಮಾನದಲ್ಲಿ ಕಾಗದದಲ್ಲಿ ಹರಡಿಕೊಂಡಿದ್ದ ಭಾವುಕ ಕಾಲಮಾನವನ್ನು ಧ್ಯಾನಿಸೋದೊಂದು ಪುಳಕ. ಇಂಥಾ ಸೂಕ್ಷ ಭಾವಗಳಿಗೆ ದೃಷ್ಯ ರೂಪ ಸಿಕ್ಕತಿರುವ ಅಪರೂಪದ ಚಿತ್ರ `ಕಾಗದ’ವೀಗ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲು ಸಜ್ಜಾಗಿ ನಿಂತಿದೆ! ಕಾಗದ ಎಂಬ ಶೀರ್ಷಿಕೆ ಕೇಳಿದಾಕ್ಷಣವೇ ಎಂಥವರ ಮನಸಲ್ಲಾದರೂ ನೂರು ಭಾವಗಳ ವೀಣೆ ನುಡಿದಂತಾಗುತ್ತದೆ. ಅಂಥಾದ್ದೊಂದು ಶೀರ್ಷಿಕೆಯನ್ನು ಪ್ರೇಮ ಕಥಾನಕವೊಂದಕ್ಕೆ ಆಯ್ಕೆ ಮಾಡಿಕೊಳ್ಳುವ ಮೂಲಕ ರಂಜಿತ್ ಕುಮಾರ್…

Read More

ಪ್ರೇಮ ಕಥಾನಕವೆಂಬುದು ಅದಾಗ ತಾನೇ ಅಚಾನಕ್ಕಾಗಿ ಎದೆಯ ಮಿದುವಿಗೆ ತಾಕಿದ ಪರಾಗವಿದ್ದಂತೆ. ಅದೆಷ್ಟು ಸಲ ಅದರಿಂದ ಸೋಕಿಸಿಕೊಂಡರೂ ಆ ಅನುಭೂತಿ ತಾಜಾ ತಾಜಾ. ಸಿನಿಮಾ ವಿಚಾರದಲ್ಲಂತೂ ಈ ಮಾತು ಸಾರ್ವಕಾಲಿಕ ಸತ್ಯ. ಪ್ರೀತಿ ಎಂಬುದು ಅಂಥಾದ್ದೊಂದು ಮಾಯೆ ಅಲ್ಲದೇ ಹೋಗಿದ್ದರೆ, ಬಹುಶಃ ಅದನ್ನು ಕೇಂದ್ರೀಕರಿಸುವಂಥಾ ಕಥಾನಕಗಳು ಅದ್ಯಾವತ್ತೋ ಬ್ರೇಕ್ ತೆಗೆದುಕೊಳ್ಳುತ್ತಿದ್ದವು. ಆ ಮಾಯೆಯ ಮುಂದುವರೆದ ಭಾಗವೆಂಬಂತೆ ಒಂದು ಸಿನಿಮಾ ತಯಾರಾಗಿ ನಿಂತಿದೆ. `ಅಮರ ಪ್ರೇಮಿ ಅರುಣ್’ ಎಂಬ ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ಟರ ನೆರಳೂ ಬಿದ್ದಿದೆ. ಯಾಕೆಂದರೆ, ಅವರ ಗರಡಿಯಲ್ಲಿ ಪಳಗಿಕೊಂಡಿರುವ ಪ್ರವೀಣ್ ಕುಮಾರ್ ಈ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಶೀರ್ಷಿಕೆ ಕೇಳಿದರೇನೇ ಇದೊಂದು ಪ್ರೇಮ ಕಥೆಯನ್ನೊಳಗೊಂಡಿರೋ ಚಿತ್ರವೆಂಬುದು ಖಾತರಿಯಾಗುತ್ತೆ. ಒಂದಷ್ಟು ದಿಕ್ಕಿನಲ್ಲಿ ಆಲೋಚಿಸಿದರೆ, ಸಿದ್ಧಸೂತ್ರದ ಒಂದಷ್ಟು ಕಲ್ಪನೆಗಳೂ ಮೂಡಿಕೊಳ್ಳುತ್ತವೆ. ಹಾಗಂತ, ಈ ಸಿನಿಮಾವನ್ನು ಅಂಥಾ ಚೌಕಟ್ಟಿನಲ್ಲಿ ಕಟ್ಟಿ ಹಾಕುವಂತಿಲ್ಲ. ಯಾಕೆಂದರೆ, ಒಂದಿಡೀ ಕಥೆಯನ್ನು ಹೊಸತನದೊಂದಿಗೆ, ಹಳ್ಳಿಯ ಬ್ಯಾಕ್‍ಡ್ರಾಪಿನಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆಯಂತೆ. ಬಿಸಿಲಿನ ಜಳಕ ಮಾಡಿಕೊಂಡಂತಿರೋ ಬಳ್ಳಾರಿಯಲ್ಲಿ ನಡೆಯೋ…

Read More

ಜಗತ್ತು ಅದೇನೇ ಮುಂದುವರೆದಿದೆ ಅಂದ್ರೂ ಹಲವಾರು ವಿಷಯಗಳಲ್ಲದು ಹಿಂದೆಯೇ ನಿಂತು ಬಿಟ್ಟಿದೆ. ಕೆಲ ಪಿಡುಗುಗಳಿಂದ ಅದೆಷ್ಟೇ ವಿಮೋಚನೆಗೊಳ್ಳಲು ಹವಣಿಸಿದ್ರೂ ಆಚರಣೆಗಳ ಹಣೆಪಟ್ಟಿಯಡಿಯಲ್ಲಿ ಅವು ಜೀವಂತವಾಗಿವೆ. ಇಡೀ ಜಗತ್ತಿನ ತುಂಬಾ ಹೆಣ್ಣನ್ನು ಭೋಗದ ವಸ್ತುವಾಗಿಯಷ್ಟೇ ಕಾಣೋ ಮನಸ್ಥಿತಿ ಕೂಡಾ ಆ ಲಿಸ್ಟಿಗೆ ಖಂಡಿತಾ ಸೇರಿಕೊಳ್ಳುತ್ತೆ. ಈವತ್ತಿಗೆ ಹೆಣ್ಣು ಯಾವುದರಲ್ಲಿಯೂ ಪುರುಷರಿಗೆ ಕಡಿಮೆಯಲ್ಲ ಅನ್ನೋದು ಸಾಬೀತಾಗಿದೆ. ಆದರೂ ಹೆಣ್ಣನ್ನು ಅಡಿಯಾಳಾಗಿಸಿಕೊಳ್ಳೋ ಹುನ್ನಾರಗಳು ಮಾತ್ರ ಹಲವು ಮುಖವಾಡ ಧರಿಸಿ ಜೀವಂತವಾಗಿವೆ. ಪ್ರಸ್ತುತ ಪ್ರತೀ ದೇಶಗಳಲ್ಲಿಯೂ ಹೆಣ್ಣು ಮಕ್ಕಳ ಮೇಲಾಗೋ ದೌರ್ಜನ್ಯ ತಡೆಗೆ ಬಿಗುವಾದ ಕಾನೂನು ಕಟ್ಟಳೆಗಳಿವೆ. ಭಾರತವೂ ಅದಕ್ಕೆ ಹೊರತಾಗಿಲ್ಲ. ಮಹಿಳೆಯರನ್ನು ಕಿಡ್ನಾಪ್‍ನಂಥಾ ಹಿಂಸೆಗೊಳಪಡಿಸಿದರಂತೂ ಕಾನೂನು ನರಕ ತೋರಿಸುತ್ತೆ. ಈವತ್ತಿಗೆ ಮಹಿಳಾ ಸಂಕುಲ ಒಂದಷ್ಟು ನಿರಾಳವಾಗಿರೋದು ಇಂಥಾದ್ದರಿಂದಲೇ. ಹೀಗೆ ಜಗತ್ತೆಲ್ಲ ಹೆಣ್ಣಿನ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವಾಗ ಅದೇ ಜಗತ್ತಿನ ಭಾಗವಾಗಿರೋ ಒಂದು ದೇಶದಲ್ಲಿ ಹುಡುಗೀರನ್ನ ಕಿಡ್ನಾಪ್ ಮಾಡೋದು ಲೀಗಲ್ ಆಗಿದೆ ಅಂದ್ರೆ ಅಚ್ಚರಿಯಾಗದಿರೋದಿಲ್ಲ. ಇಂಥಾದ್ದೊಂದು ಅನಿಷ್ಟದ ರಿವಾಜು ಜಾರಿಯಲ್ಲಿರೋದು ಕಿರ್ಗಿಸ್ತಾನ್ ದೇಶದಲ್ಲಿ. ಸಾಮಾನ್ಯವಾಗಿ ಹೆಣ್ಣೊಬ್ಬಳನ್ನು…

Read More

ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಕ್ರೌರ್ಯದ ಅಧ್ಯಾಯಗಳನ್ನು ಉಳಿಸಿ ಹೋದವನು ಅಡಾಲ್ಫ್ ಹಿಟ್ಲರ್. ಕ್ರೂರತನದ ಉತ್ತುಂಗದಂತಿದ್ದ ಹಿಟ್ಲರ್ ವಿಶ್ವ ಕಂಡ ಅಪಾಯಕಾರಿ ಸರ್ವಾಧಿಕಾರಿಗಳಲ್ಲೊಬ್ಬ. ವಿರೋಧಿಗಳನ್ನು ಇರುವೆಗಳಿಗಿಂತ ಕಡೆಯಾಗಿ ಹೊಸಕಿದ ಹಿಟ್ಲರನದ್ದು ರಕ್ತಸಿಕ್ತ ವ್ಯಕ್ತಿತ್ವ. ಕರುಣೆಯ ಪರಿಚಯವೇ ಇಲ್ಲದಂತಿದ್ದ ಈತ ಕೊಲ್ಲಲು ಬಳಸುತ್ತಿದ್ದ ವಿಧಾನಗಳೇ ನಡುಕ ಹುಟ್ಟಿಸುವಂತಿವೆ. ಆತ ವಿಷಾನಿಲ ಬಿಟ್ಟು ಜನರನ್ನು ಕೊಂದ ಕಥೆ ಜನಜನಿತ. ಆದ್ರೆ ಆತ ಚಪ್ಪರಿಸಿ ತಿನ್ನೋ ಚಾಕೋಲೇಟ್ ಅನ್ನೂ ಕೂಡಾ ಕೊಲ್ಲಲು ಬಳಸಿದ್ದ ಮಹಾ ಕಿರಾತಕ. ಇಡೀ ಜಗತ್ತನ್ನೇ ತನ್ನ ಕೈ ವಶ ಮಾಡಿಕೊಳ್ಳಬೇಕೆಂಬ ರಣ ಹಸಿವಿಂದ ತೊನೆದಾಡಿದ್ದವನು ಹಿಟ್ಲರ್. ಆರಂಭದಲ್ಲಿ ಭಾವನೆ ಕೆರಳಿಸಿ ಜನರನ್ನ ಮರುಳು ಮಾಡಿದ್ದ ಆತ ಅದನ್ನೇ ಅಸ್ತ್ರವಾಗಿಸಿಕೊಂಡಿದ್ದ. ಆದರೂ ಅವನ ಹಿಕಮತ್ತಿನ ವಿರುದ್ಧ ಅನೇಕರು ಬಂಡೆದ್ದಿದ್ದರು. ಅಂಥವರನ್ನೆಲ್ಲ ಕ್ರೂರ ಹಾದಿಯಲ್ಲಿ ಕೊಂದ ಹಿಟ್ಲರ್‍ಗೆ ಎಥಿಕ್ಸ್ ಅನ್ನೋದರ ಪರಿಚಯವೇ ಇರಲಿಲ್ಲ. ಅದಿದ್ದಿದ್ದರೆ ಚಾಕೋಲೇಟ್ ಬಾಂಬು ತಯಾರಿಸಿ ಮೋಸದಿಂದ ಕೊಲ್ಲೋ ಮಾರ್ಗವನ್ನಾತ ಅನುಸರಿಸುತ್ತಿರ್ಲಿಲ್ಲ. ಹಿಟ್ಲರ್ ಮಾರ್ಗದರ್ಶನದಲ್ಲಿಯೇ ಚಾಕೋಲೇಟ್ ಕೋಟೆಡ್ ಬಾಂಬು ತಯಾರಾಗಿತ್ತು. ಸ್ಫೋಟಕ ಸಾಧನಗಳನ್ನ…

Read More

ಕೆಲವೊಮ್ಮೆ ಜೀವನದಲ್ಲಿ ತುಂಬಾ ಇಷ್ಟಪಟ್ಟಿದ್ದನ್ನೇ ಕಳೆದುಕೊಳ್ಳೋ ಸಂದರ್ಭಗಳೆದುರಾಗುತ್ವೆ. ಅದರೊಂದಿಗೆ ಭಾವನೆಗಳು, ನೆನಪುಗಳನ್ನೂ ಕಳೆದುಕೊಂಡಂತೆ ಒದ್ದಾಡೋ ಸಂದರ್ಭಗಳೂ ಸೃಷ್ಟಿಯಾಗುತ್ವೆ. ಹೆಚ್ಚಿನಾದಾಗಿ ಅಂಥಾ ಸಂದಭರ್ಧ ಸೃಷ್ಟಿಯಾಗೋದು ಚಿನ್ನಾಭರಣಗಳ ರೂಪದಲ್ಲಿ. ಒಂದು ಉಂಗುರ, ಮೂಗಿನ ನತ್ತು, ಕಿವಿಯೋಲೆಗಳಲ್ಲಿಯೂ ಇಂಥಾ ಸೆಂಟಿಮೆಂಟುಗಳಿರುತ್ತವೆ. ಅವೇನಾದ್ರೂ ಕಳೆದು ಹೋಗಿ ಸಿಗದಿದ್ರೆ ಹೆಂಗಳೆಯರು ಹೆಜ್ಜೆ ಹೆಜ್ಜೆಗೂ ಕೊರಗ್ತಾರೆ. ಆದ್ರೆ ಹೆಚ್ಚಿನವ್ರಿಗೆ ಕೊರಗೇ ಖಾಯಂ. ಆದ್ರೆ ಇಲ್ಲೊಬ್ಬಳು ಅದೃಷ್ಟವಂತ ಮಹಿಳೆಯ ಪಾಲಿಗೆ ಪವಾಡ ಸದೃಷವಾಗಿ ಕಳೆದು ಹೋದ ರಿಂಗು ವಾಪಾಸಾಗಿದೆ. ಅರೇ ಒಂದು ಚಿನ್ನದ ಉಂಗುರ ಕಳೆದು ಹೋಗಿ ಮತ್ತೆ ಸಿಗೋದ್ರಲ್ಲಿ ಪವಾಡ ಏನಿರತ್ತೆ ಅಂತ ಅಂದ್ಕೋತೀರೇನೋ… ಈ ಪ್ರಕರಣವನ್ನ ವಿಶೇಷವಾಗಿಸಿರೋದು ಅದು ಮರಳಿ ಸಿಕ್ಕ ಅಚ್ಚರಿದಾಯಕ ರೀತಿ. ಅದರ ವಿವರ ಕೇಳಿದರೆ ಯಾರೇ ಆದ್ರೂ ಥ್ರಿಲ್ ಆಗದಿರೋಕೆ ಸಾಧ್ಯವೇ ಇಲ್ಲ. ಇಂಥಾದ್ದೊಂದು ಅಪರೂಪದ ವಿದ್ಯಮಾನ ಘಟಿಸಿರೋದು ಸ್ವೀಡನ್ನಿನಲ್ಲಿ. ಅಲ್ಲಿನ ಮಹಿಳೆಯೊಬ್ಬಾಕೆ ೧೯೯೫ರಲ್ಲಿ ಇಷ್ಟದ ಚಿನ್ನದುಂಗುರವನ್ನ ಕಳೆದುಕೊಂಡಿದ್ಲು. ಆ ವರ್ಷ ಕ್ರಿಸ್‌ಮಸ್‌ಗೆ ಅಡುಗೆ ತಯಾರಿ ಮಾಡುವಾಗ ಆ ರಿಂಗ್ ಬೆರಳಿಂದ ಕಳಚಿಕೊಂಡು ಕಣ್ಮರೆಯಾಗಿತ್ತು.…

Read More

ಉನ್ನತ ಹುದ್ದೆಗೇರಿದವಳಿಗೆ ಬೀದಿಯೇ ಮನೆಯಾಗಿತ್ತು! ಸಣ್ಣದೊಂದು ಅವಮಾನವಾಗುತ್ತೆ… ನಾವು ಅದರೆದುರು ಅದಾಗ ತಾನೇ ಕಣ್ಣು ಬಿಟ್ಟ ಪುಟ್ಟ ಬೆಕ್ಕಿನಂತೆ ಮುದುರಿಕೊಳ್ತೀವಿ. ಎಲ್ಲಿ ಸೋಲೆದುರಾಗುತ್ತೋ ಅನ್ನೋ ಭಯವೇ ಒಂದಷ್ಟು ಗೆಲುವುಗಳನ್ನ ಆರಂಭದಲ್ಲೇ ಹೊಸಕಿ ಹಾಕುತ್ತೆ. ನಮಗೆಲ್ಲ ನಮ್ಮ ಬಲಹೀನತೆಗಳನ್ನ ಬಚ್ಚಿಟ್ಟುಕೊಳ್ಳೋದಕ್ಕೆ ಸಾವಿರ ಕಾರಣಗಳು ಸಿಗುತ್ವೆ. ಈ ಕಾರಣಗಳಿಂದಲೇ ಗೆಲುವೆಂಬುದು ಸಾವಿರ ಗಾವುದ ದೂರ ನಿಂತು ಬಿಟ್ಟಿದೆ ಅನ್ನೋ ವಾಸ್ತವವನ್ನ ಮರೆ ಮಾಚೋದೂ ಸಹ ಸಲೀಸು ನಮಗೆ. ನಮ್ಮ ಉತ್ಸಾಹ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಹುಲ್ಲಿನ ಬಣವೆಯಂತೆ ಧಗಧಗಿಸುತ್ತೆ. ಕ್ಷಣಾರ್ಧದಲ್ಲಿಯೇ ಬೂದಿ ಮಾತ್ರವೇ ಎದುರಿಗುಳಿಯುತ್ತೆ. ಇಂಥಾ ಮನಸ್ಥಿತಿಗಳಿಗೆ ನಾಚಿಕೆಯಾಗುವಂಥ, ಎಂಥವರನ್ನೂ ಬಡಿದೆಬ್ಬಿಸಿ ಸಾಧನೆಯತ್ತ ಮುನ್ನುಗ್ಗುವಂತೆ ಮಾಡುವಂಥ ಒಂದಷ್ಟು ಸತ್ಯ ಘಟನೆಗಳು ನಮ್ಮ ನಡುವಲ್ಲಿವೆ. ಅಂಥಾ ಅಪರೂಪದ ಒಂದಷ್ಟು ವ್ಯಕ್ತಿತ್ವಗಳೂ ಇದ್ದಾವೆ. ಇದೀಗ ಹೇಳ ಹೊರಟಿರೋದು ರೂಬಿ ಅನ್ನೋ ಅಚ್ಚರಿದಾಯಕ ಹೆಣ್ಣುಮಗಳೊಬ್ಬಳ ಸಾಧನೆಯ ಬಗ್ಗೆ… ಆಕೆ ರೂಬಿ ಮಲಿಕ್. ಈವತ್ತಿಗೆ ಇಡೀ ದೇಶವೇ ಈ ಹುಡುಗಿ ಏರಿದ ಎತ್ತರ ಕಂಡು ಬೆರಗಾಗುತ್ತಿದೆ. ಇಂಟರೆಸ್ಟಿಂಗ್…

Read More

ಈ ಜಗತ್ತಿನ ಯಾವ ಜೀವಿಗಳಲ್ಲಿ ಅಂತೆಂಥಾ ಅದ್ಭುತ ಶಕ್ತಿ ಅಡಗಿದೆಯೋ ಹೇಳಲು ಬರುವುದಿಲ್ಲ. ನಮ್ಮ ಕಣ್ಣ ಮುಂದೆ ಸಣ್ಣ ಸಣ್ಣದಾಗಿ ಅಡ್ಡಾಡುವ ಕೂಡಾ ಪ್ರಕೃತಿ ಮಹತ್ತರವಾದ ಶಕ್ತಿಯನ್ನ ಕರುಣಿಸಿರುತ್ತೆ. ಆದರೆ ಅದು ಬರಿಗಣ್ಣಿಗೆ ಕಾಣಿಸೋದಿಲ್ಲ. ಕಂಡರೂ ಕೂಡಾ ಅದು ಒಟ್ಟಾರೆ ಶಕ್ತಿಯ ಒಂದು ಬಿಂದು ಮಾತ್ರವೇ ಆಗಿರುವ ಸಾಧ್ಯತೆಗಳಿದ್ದಾವೆ. ನಮ್ಮೆಲ್ಲರಿಗೂ ಕೂಡಾ ಜೇನು ನೊಣಗಳ ಬಗ್ಗೆ ಗೊತ್ತೇ ಇದೆ. ಗೊತ್ತಿದೆ ಅಂದ್ರೆ ಎಲ್ಲ ಗೊತ್ತಿದೆ ಅಂದುಕೊಳ್ಳಲಾಗೋದಿಲ್ಲ. ಜೇನು ತುಪ್ಪ, ಅದರ ಚೆಂದದ ರುಚಿ ಮತ್ತು ಅದರ ಔಷಧೀಯ ಗುಣಗಳ ಬಗ್ಗೆ ಗೊತ್ತಿರುತ್ತದೆಯಷ್ಟೆ. ಅದರಾಚೆಗೆ ಅವುಗಳ ಪರಿಶ್ರಮ ಮತ್ತು ಜೀವನ ಕ್ರಮಗಳಂತೂ ನಿಬ್ಬೆರಗಾಗುವಂತಿವೆ. ಆದ್ರೆ ಈಗ ಹೇಳ ಹೊರಟಿರೋ ವಿಚಾರ ಅದನ್ನೂ ಮೀರಿಸುವಂಥಾದ್ದು. ಜೇನು ನೊಣಗಳು ರಕ್ಕಸ ಬಾಂಬುಗಳನ್ನ ಕಂಡು ಹಿಡಿಯುವಂಥಾ ಶಕ್ತಿಯನ್ನೂ ಹೊಂದಿವೆಯಂತೆ. ಈ ವಿಚಾರವನ್ನು ಜಗತ್ತಿನ ಒಂದಷ್ಟು ಕೀಟ ಸಸ್ತ್ರಜ್ಞರೂ ಕೂಡಾ ಅಂಗೀಕರಿಸಿದ್ದಾರೆ. ಮೆಕ್ಸಿಕೋದ ಲಾಸ್ ಅಲಾಮಸ್ ವಿಜ್ಞಾನಿಗಳು ಬಾಂಬ್ ಡಿಕ್ಟೇಟರ್ ಬಗ್ಗೆ ಆಳವಾದ ಸಂಶೋಧನೆ ನಡೆಸಿದ್ರು. ಅದಕ್ಕಾಗಿ ಜೇನು…

Read More