ಕೊರೋನಾ ಮಾರಿ ವಕ್ಕರಿಸಿಕೊಂಡ ನಂತರದಲ್ಲಿ ಅದೇಕೋ ಸಾವೆಂಬುದು ಮತ್ತಷ್ಟು ಸಲೀಸಾದಂತಿದೆ. ಸಣ್ಣಪುಟ್ಟ ಖಾಯಿಲೆ ಕಸಾಲೆಗಳೂ ಭೀಕರ ಸ್ವರೂಪ ಪಡೆದು ಜೀವ ಬಲಿ ಪಡೆಯುತ್ತಿವೆ. ನಲವತ್ತರಾಚೆ ಹೊಂಚಿ ಕೂರುತ್ತಿದ್ದ ಸಾವೆಂಬುದೀಗ ಮೂವತ್ತರ ಆಸುಪಾಸಿನಲ್ಲೇ ಗಸ್ತು ಹೊಡೆಯಲು ಶುರುವಿಟ್ಟಿದೆ. ತೀರಾ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಅಸುನೀಗಿದ ಪುನೀತ್ ಅಗಲಿಕೆ ಜೀವ ಹಿಂಡುತ್ತಿರುವಾಗಲೇ, ಅದನ್ನು ಹೋಲುವ ಮತ್ತೊಂದಷ್ಟು ಸಾವುಗಳು ಸಂಭವಿಸುತ್ತಿವೆ. ಇದೀಗ ಆ ಸೂತಕದ ಛಾಯೆ ಮಲೆಯಾಳಂ ಚಿತ್ರರಂಗಕ್ಕೆ ಕವುಚಿಕೊಂಡಿದೆ! ಕಳೆದ ಒಂದಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದುಕೊಂಡು, ಇದೀಗ ತಾನೇ ಸ್ವತಂತ್ರ ನಿರ್ದೇಶಕರಾಗಿದ್ದವರು ಜೋಸೆಫ್ ಮನು. ಪಾದರಸದಂತಿದ್ದ ಮೂವತ್ತೊಂದರ ಪ್ರಾಯದ ಜೋಸೆಫ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸಾಕಷ್ಟು ಭರವಸೆ ಮೂಡಿಸಿದ್ದ ಈ ಯುವ ನಟನ ಅಕಾಲಿಕ ನಿರ್ಗಮನದಿಂದ ಮಾಲಿವುಡ್‍ಗೆ ಮಂಕು ಕವಿದಂತಾಗಿದೆ. ಅಷ್ಟಕ್ಕೂ ಜೋಸೆಫ್‍ರದ್ದು ಸಾಯುವ ವಯಸ್ಸೇನಲ್ಲ. ಆದರೆ ನ್ಯುಮೋನಿಯಾ ಸಮಸ್ಯೆ ಎಂಬುದು ಆತನನ್ನು ಹೈರಾಣು ಮಾಡಿತ್ತು. ಮೊನ್ನೆದಿನ ಜೋಸೆಫ್ ಆಸ್ಪತ್ರೆ ಪಾಲಾಗಿ ಪರಿಸ್ಥಿತಿ ಬಿಗಡಾಯಿಸಿದ್ದರೂ ಕೂಡಾ ಇಂಥಾ ದುರ್ವಾರ್ತೆಯನ್ನು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಆದರೆ, ಎಲ್ಲ ಹರಕೆ…
Author: Santhosh Bagilagadde
ಸದ್ಯದ ಮಟ್ಟಿಗೆ ಎಲ್ಲಾ ವರ್ಗದ ಪ್ರೇಕ್ಷಕರೊಳಗೂ ಕೌತುಕದ ಕಂದೀಲೊಂದನ್ನು ಆರದಂತೆ ಕಾಪಿಟ್ಟುಕೊಂಡಿರುವ ಚಿತ್ರ `ಕಡಲ ತೀರದ ಭಾರ್ಗವ’. ಸಾಮಾನ್ಯವಾಗಿ ಯಶಸ್ವೀ ಸಿನಿಮಾಗಳದ್ದೊಂದು ಅನೂಹ್ಯವಾದ ಹೆಜ್ಜೆ ಜಾಡಿರುತ್ತೆ. ಈ ಸಿನಿಮಾ ಸಾಗಿ ಬಂದ ಹಾದಿಯ ತುಂಬೆಲ್ಲ ಅದರ ಛಾಯೆಗಳು ದಟ್ಟವಾಗಿಯೇ ಗೋಚರಿಸುತ್ತವೆ. ಟೀಸರ್, ಟ್ರೈಲರ್ ಮೂಲಕವೇ ಕಡಲ ತೀರದ ಭಾರ್ಗವ ಹುಟ್ಟು ಹಾಕಿರೋ ಕ್ರೇಜ್ ಇದೆಯಲ್ಲಾ? ಅದು ಎಂಥವರನ್ನೂ ಬೆರಗಾಗಿಸುವಂತಿದೆ. ಈ ಎಲ್ಲ ಪಲ್ಲಟಗಳ ಹಿಂದೆ ಒಂದಿಡೀ ಚಿತ್ರತಂಡದ ಶ್ರಮವಿದೆ. ಅದರಲ್ಲಿಯೂ ವಿಶೇಷವಾಗಿ ಈ ಸಿನಿಮಾದ ನಿರ್ದೇಶಕ ಪನ್ನಗ ಸೋಮಶೇಖರ್ ಅವರದ್ದು ಸಿಂಹಪಾಲೆಂಬುದರಲ್ಲಿ ಯಾವ ಸಂದೇಹವೂ ಇಲ್ಲ! ಈಗಾಗಲೇ ಟೀಸರ್, ಟ್ರೈಲರ್, ಹಾಡುಗಳು ಸೇರಿದಂತೆ ಒಂದಷ್ಟು ಬಗೆಯಲ್ಲಿ ಕಡಲ ತೀರದ ಭಾರ್ಗವ ಪ್ರೇಕ್ಷಕರನ್ನು ಸೋಕಿದ್ದಾನೆ. ಈ ಅಷ್ಟೂ ನಡೆಯಲ್ಲಿಯೂ ನಿರ್ದೇಶಕ ಪನ್ನಗ ಸೋಮಶೇಖರ್ ಅವರ ಜಾಣ್ಮೆ ಎದ್ದು ಕಾಣಿಸುತ್ತದೆ. ಪ್ರಚಾರದ ಸಂದರ್ಭದಲ್ಲಿ ಹೇಗೆಲ್ಲ ಮುಂದುವರೆಯಬೇಕೆಂಬುದೂ ಒಂದು ಕಲೆ. ಕೆಲ ಮಂದಿಗೆ ಒಂದಷ್ಟು ದೂರ ಸಾಗಿದ ನಂತರವೂ ಅದು ದಕ್ಕುವುದಿಲ್ಲ. ಆದರೆ, ಪನ್ನಗ ಸೋಮಶೇಖರ್…
ಸಿಕ್ಕ ಪಬ್ಲಿಸಿಟಿ, ಯಶಸ್ಸುಗಳನ್ನು ಮೆರೆದಾಟದ ಅಸ್ತ್ರವಾಗಿಸಿಕೊಂಡ ಅನೇಕರು ನಾನಾ ಚಿತ್ರರಂಗದಲ್ಲಿ ಯಥೇಚ್ಛವಾಗಿಯೇ ಕಾಣ ಸಿಗುತ್ತಾರೆ. ಅಂಥವರೆಲ್ಲ ಹೇಳ ಹೆಸರಿಲ್ಲದಂತೆ ನೇಪಥ್ಯಕ್ಕೆ ಸರಿದಿದ್ದಾರೆ. ಆದರೆ, ಹಿಡಿತ ತಪ್ಪಿದ ಬದುಕು, ತನ್ನನ್ನೇ ಅಪಾದಮಸ್ತಕ ನುಂಗಿದಂತಿದ್ದ ನಾನಾ ಚಟಗಳು ಮತ್ತು ಅವುಗಳ ಫಲವಾಗಿಯೇ ಸಿಕ್ಕ ಜೈಲು ವಾಸ… ಇಂಥಾ ನಾನಾ ಪೆಟ್ಟುಗಳನ್ನು ಬದಲಾವಣೆಯ ಮೆಟ್ಟಿಲಾಗಿಸಿಕೊಂಡು, ಓರ್ವ ನಟನಾಗಿ ಮರುಹುಟ್ಟು ಪಡೆದುಕೊಂಡಿರುವಾತ ಸಂಜಯ್ ದತ್. ಸದ್ಯಕ್ಕೆ ವಿಲನ್ ಅವತಾರವೆತ್ತಿರೋ ಸಂಜು ಬಾಬಾಗೆ ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ಬೇಡಿಕೆ ತೀವ್ರಗೊಂಡಿದೆ. ಅದಾಗಲೇ ಸಂಜುಬಾಬಾ ಯಾವ ಭಾಷೆಗಳಲ್ಲಿ ನಟಿಸಿದ್ದರೋ ಗೊತ್ತಿಲ್ಲ; ಆದರೆ ಕನ್ನಡದ ಕೆಜಿಎಫ್‍ನಲ್ಲಿ ಅಧೀರನ ಪಾತ್ರ ನಿರ್ವಹಿಸಿದರು ನೋಡಿ? ಆತನ ಖದರ್ ಮತ್ತಷ್ಟು ಫಳಗುಟ್ಟಲಾರಂಭಿಸಿದೆ. ವಿಶೇಷವೆಂದರೆ ಸಂಜಯ್ ದತ್‍ಗೆ ದಕ್ಷಿಣ ಭಾರತೀಯ ಚಿತ್ರರಂಗದಿಂದಲೇ ಹೆಚ್ಚೆಚ್ಚು ಆಫರ್‍ಗಳು ಬರುತ್ತಿವೆ. ಅವೆಲ್ಲವೂ ಕೂಡಾ ವಿಲನ್‍ಗಿರಿಯ ಪಾತ್ರಗಳೇ. ಈ ಸೆಕೆಂಡ್ ಹಾಫ್‍ನಲ್ಲಿ ನಾಯಕನಾಗಿ ನಟಿಸಿ, ತಕ್ಕ ಪಾತ್ರ ಸಿಗದೆ ನಗೆಪಾಟಲಿಗೀಡಾಗೋದಕ್ಕಿಂತ, ವಿಲನ್ ಪಾತ್ರಗಳನ್ನು ಮಾಡಿ ಮನಸಲ್ಲುಳಿಯೋದೇ ವಾಸಿ ಎಂಬ ತೀರ್ಮಾನಕ್ಕೆ ಸಂಜಯ್…
ಎಲ್ಲವೂ ರಾಸಾಯನಿಕ ಮಯವಾಗಿರುವ ಈ ದಿನಮಾನದಲ್ಲಿ ಯಾವುದೆಂದರೆ ಯಾವ ಆಹಾರವೂ ಅಸಲೀ ಗುಣಗಳನ್ನು ಉಳಿಸಿಕೊಂಡಿಲ್ಲ. ಹಾಗಿರುವಾಗ ನಾನಾ ಮೆಡಿಸಿನ್ನುಗಳನ್ನು ನೀಡಿ ನಲವತ್ತೆರಡು ದಿನದೊಳಗೆ ಮೂರ್ನಾಲಕ್ಕು ಕೇಜಿ ತೂಗುವಂತೆ ಮಾಡೋ ಫಾರಂ ಕೋಳಿಗಳಿಂದ ಆರೋಗ್ಯಕ್ಕೆ ಒಳಿತಾಗಲು ಸಾಧ್ಯವೇ? ಇಂಥಾ ವಿಷಗಳ ಕಟಾಂಜನದಂತಿರೋ ಫಾರಂ ಕೋಳಿಗಳಲ್ಲಿ ಆಗಾಗ ಭೀಕರ ರೋಗಗಳು ಕಂಡು ಬರುತ್ತವೆ. ಇದೀಗ ವಿಜ್ಞಾನಿಗಳ ತಂಡವೊಂದು ತಿಂದವರ ಜೀವಕ್ಕೆ ಎರವಾಗಬಲ್ಲ ಡೆಡ್ಲಿ ಬ್ಯಾಕ್ಟೀರಿಯಾವೊಂದನ್ನು ಕೋಳಿಗಳ ದೇಹದಲ್ಲಿ ಪತ್ತೆಹಚ್ಚಿದೆ. ಅಂದಹಾಗೆ, ವಿಜ್ಞಾನಿಗಳ ತಂಡ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶದಲ್ಲಿ ಇಂಥಾದ್ದೊಂದು ಸಂಶೋಧನೆ ನಡೆಸಿದೆ. ಹಲವಾರು ದಿನಗಳ ಕಾಲ ನಿರಂತರವಾಗಿ ಫಾರಂ ಕೋಳಿಗಳನ್ನು ನಿಗಾವಣೆಯಲ್ಲಿಡುವ ಮೂಲಕ ಬ್ಯಾಕ್ಟೀರಿಯಾವನ್ನು ಪತ್ತೆಹಚ್ಚಿದೆ. ಆ ಬ್ಯಾಕ್ಟೀರಿಯಾದಿಂದ ಮಾನವನ ದೇಹದಲ್ಲಾಗಬಹುದಾದ ವ್ಯತಿರಿಕ್ತ ಪರಿಣಾಮಗಳನ್ನೂ ಮನನ ಮಾಡಿಕೊಂಡಿದೆ. ಆ ವಿವರಗಳು ನಿಜಕ್ಕೂ ಬೆಚ್ಚಿಬೀಳುವಂತಿವೆ! ಆ ಕೋಳಿಗಳಲ್ಲಿ ಪತ್ತೆಯಾಗಿರುವ ಬ್ಯಾಕ್ಟೀರಿಯಾ ಮನುಷ್ಯನ ದೇಹ ಹೊಕ್ಕರೆ ಔಷಧಿಗಳೇ ಕಾರ್ಯನಿರ್ವಹಿಸದಂಥಾ ಸ್ಥಿತಿಯನ್ನು ತಂದೊಡ್ಡುತ್ತದೆ. ಇದರಿಂದಾಗಿ ನ್ಯುಮೋನಿಯಾದಂಥಾ ಕಾಯಿಲೆಗಳಿಗೂ ತುತ್ತಾಗೋದು ಪಕ್ಕಾ. ಇಂಥಾ ವೈರಸ್ ಕೋಳಿಯ ದೇಹದಲ್ಲಿ…
ಹುಡುಕಾಡುವ ಮನಸಿದ್ದರೆ, ಎದೆ ತುಂಬಾ ಬೆರಗಿನ ಒರತೆಯೊಂದು ಸದಾ ಜಿನುಗುತ್ತಿದ್ದರೆ ಹೆಜ್ಜೆ ಇಟ್ಟಲ್ಲೆಲ್ಲ ಪ್ರಾಕೃತಿಕ ಅಚ್ಚರಿಗಳು ತೊಡರಿಕೊಳ್ಳುತ್ತವೆ. ವಿಶೇಷವೆಂದರೆ, ಈ ಜಗತ್ತಿನ ಅದೆಷ್ಟೋ ಮಂದಿ ಅಂಥಾ ಅಚ್ಚರಿಗಳನ್ನು ದಂಡಿ ದಂಡಿಯಾಗಿ ಜಗತ್ತಿನ ಮುಂದೆ ತೆರೆದಿಡುತ್ತಿದ್ದಾರೆ. ಈ ಜಗತ್ತಿನಲ್ಲಿರುವ ಜೀವ ವೈವಿಧ್ಯಗಳ ಬಗ್ಗೆ ಅಧ್ಯಯನ ನಡೆಸಲೆಂದೇ ಅದೆಷ್ಟೋ ಮಂದಿ ತಜ್ಞರು ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಅಂಥಾದ್ದೇ ತಂಡವೊಂದು ಭರ್ತಿ 3500 ವರ್ಷಗಳಷ್ಟು ಹಳೇಯ ಕರಡಿಯೊಂದರ ಕಳೇಬರವನ್ನು ಪತ್ತೆಹಚ್ಚಿದ್ದಾರೆ! ಇಂಥಾದ್ದೊಂದು ಪರಮಾಚ್ಚರಿ ಎದುರಾದದ್ದು ಸೈಬೀರಿಯಾದ ಮಂಜುಗಡ್ಡೆಯಿಂದಾವೃತವಾದ ಅರಣ್ಯ ಪ್ರದೇಶದಲ್ಲಿ. ಸಾಮಾನ್ಯವಾಗಿ, ಯಾವುದೇ ಜೀವಿಗಳ ಮೃತ ದೇಹಗಳಾದರೂ ದಿನದೊಪ್ಪತ್ತಿನಲ್ಲಿಯೇಢ ಕೊಳೆತು ನಾರುತ್ತವೆ. ಮತ್ತೂ ಒಂದಷ್ಟು ದಿನ ಕಳೆದರೆ ಹುಳ ಹತ್ತಿಕೊಂಡು ಜೀರ್ಣವಾಗಿ ಅಸ್ಥಿಪಂಜರ ಮಾತ್ರವೇ ಉಳಿದುಕೊಳ್ಳುತ್ತೆ. ಆದರೆ, ಹಿಮದ ಅಡಿಯಲ್ಲಿ ಸಂಪೂರ್ಣವಾಗಿ ಹುದುಗಿಕೊಂಡಿದ್ದ ಈ ಕರಡಿಯ ದೇಹ ಮಾತ್ರ ಹೇಳಿಕೊಳ್ಳುವಂಥಾ ಯಾವುದೇ ಡ್ಯಾಮೇಜುಗಳಿಲ್ಲದೆ ಸುಸ್ಥಿತಿಯಲ್ಲಿತ್ತು. ಇದರ ಕಳೇಬರ ಪತ್ತೆಯಾದದ್ದು 2020ರ ಸುಮಾರಿಗೆ. ಸೈಬೀರಿಯಾದ ಕಾಡಿಗೆ ಹೊಂದಿಕೊಂಡಂತಿರುವ ಬುಡಕಟ್ಟ ಜನಾಂಗದ ದನಗಾಹಿಗಳಿಗೆ ಅದು ಸಿಕ್ಕಿತ್ತು. ಬಹುಶಃ ಹಿಮ ಪದರಗಳ…
ಸಂಸದ ಪ್ರತಾಪ್ ಸಿಂಹ ಅಭಿವೃದ್ಧಿ ಕಾರ್ಯಗಳಿಗಿಂತಲೂ ನಾನಾ ವಿವಾದಗಳ ಮೂಲಕವೇ ಆಗಾಗ ಸದ್ದು ಮಾಡುತ್ತಿರುತ್ತಾರೆ. ಈ ಭರದಲ್ಲಿ ಆಗಾಗ ಎಡವಟ್ಟು ಹೇಳಿಕೆಗಳು ಕೂಡಾ ಅವರ ಕಡೆಯಿಂದ ಧಾರಾಳವಾಗಿಯೇ ಹೊರಬರುತ್ತಿರುತ್ತವೆ. ಇದೀಗ ಆತ ಬೀದಿನಾಯಿಗಳ ಸಮಸ್ಯೆಯ ಬಗ್ಗೆ ತನ್ನದೇ ಆದೊಂದು ವಾದವನ್ನು ಮಂಡಿಸಿದ್ದಾರೆ. ಬೀದಿ ನಾಯಿಗಳನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುವುದೊಂದೇ ಆ ಸಮಸ್ಯೆಗಿರುವ ಏಕೈಕ ಪರಿಹಾರವೆಂಬುದು ಪ್ರತಾಪ್ ಮಾತಿನ ಸಾರಾಂಶ. ಬೆಂಗಳೂರು ಸೇರಿದಂತೆ ಅಲಲ್ಲಿ ಆಗಾಗ ಬೀದಿನಾಯಿಗಳ ಉಪಟಳ ಅತಿಯಾಗುತ್ತದೆ. ಒಮ್ಮೊಮ್ಮೆ ಪುಟ್ಟ ಮಕ್ಕಳ ಮೇಲೆ ದಾಳಿ ನಡೆಸುತ್ತಾ, ಕಂಡವರನ್ನು ಕಚ್ಚುತ್ತಾ ಇಂಥಾ ಶ್ವಾನಗಳು ಅಟಾಟೋಪ ಶುರುವಿಡುತ್ತವೆ. ಹಾಗೆ ಕಚ್ಚುವ ಬೀದಿನಾಯಿಗಳನ್ನು ಕನಿಕರವಿಲ್ಲದೆ ಕೊಲ್ಲಬೇಕೆಂಬುದು ಸಂಸದನ ಮಾತು. ಪ್ರಾಣಿ ದಯಾ ಸಂಘಗಳು ಮತ್ತು ಪ್ರಾಣಿ ಪ್ರೇಮಿಗಳ ದೆಸೆಯಿಂದ ಈವರೆಗೂ ಅಂಥಾ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದಿರುವ ಸಿಂಹ, ಅಂಥಾ ಪ್ರಾಣಿ ಪ್ರೇಮಿಗಳ ಮಕ್ಕಳಿಗೆ ಬೀದಿ ನಾಯಿಗಳು ಕಚ್ಚಿದರೆ ಗೊತ್ತಾಗುತ್ತೆ ಅಂತಲೂ ವ್ಯಗ್ಯವಾಡಿದ್ದಾರೆ. ಅಷ್ಟಕ್ಕೂ ಈ ಬೀದಿ ನಾಯಿಗಳ ಸಮಸ್ಯೆಗೊಂದು ಸುಧೀರ್ಘವಾದ ಇತಿಹಾಸವೇ ಇದೆ.…
ನಮ್ಮಲ್ಲಿರೋದು ಪ್ರಜಾಪ್ರಭುತ್ವ, ಇಲ್ಲಿ ಪ್ರಜೆಗಳೇ ಪ್ರಭುಗಳು ಎಂಬಿತ್ಯಾದಿ ಸವಕಲು ಸ್ಲೋಗನ್ನುಗಳಿವೆಯಲ್ಲಾ? ಅದೇನಿದ್ದರೂ ಜನಪ್ರತಿನಿಧಿಗಳೆಂಬೋ ಫಟಿಂಗರ ನಾಲಿಗೆ ಕೆರೆತ ನಿವಾರಿಸುವ ಮೂಲಿಕೆಯಾಗಿಯಷ್ಟೇ ಬಳಕೆಯಾಗುತ್ತಿದೆ. ಜನರಿಂದ ಆಯ್ಕೆಯಾಗಿ ಅಧಿಕಾರ ಕೇಂದ್ರ ತಲುಪಿಕೊಂಡ ಖಾದಿಗಳು, ಪಟ್ಟಾಗಿ ಕೂತು ಓದಿ ಅಧಿಕಾರಿಗಳಾದವರ ಬೂಟುಗಾಲುಗಳ ಪ್ರಮುಖ ಗುರಿ ಈ ನೆಲದ ಬಾಯಿ ಸತ್ತ ಮುಗ್ಧರೇ ಎಂಬುದು ಕರಾಳ ಸತ್ಯ. ಈ ಮಾತಿಗೆ ಅಪವಾದವೆಂಬಂತಿರುವ ಜನಪ್ರತಿನಿಧಿಗಳು, ಅಧಿಕಾರಿಗಳಿರಬಹುದಾದರೂ ಅಂಥವರ ಧ್ವನಿಗೂ ಇಲ್ಲಿ ಕಿಮ್ಮತ್ತಿಲ್ಲ. ಇಂಥಾ ದುಷ್ಟ ವ್ಯವಸ್ಥೆಯ ನಗ್ನ ಸತ್ಯವೊಂದಕ್ಕೆ ದೃಷ್ಯ ರೂಪ ಬಂದಂತಿರೋ ಚಿತ್ರ `ಗೌಳಿ’. ದೊಡ್ಡ ಮಟ್ಟದಲ್ಲಿ ಭರವಸೆ ಮೂಡಿಸಿದ್ದ ಈ ಸಿನಿಮಾವೀಗ ಬಿಡುಗಡೆಗೊಂಡಿದೆ! ಅಷ್ಟಕ್ಕೂ ಗೌಳಿ ಈ ಪರಿಯಲ್ಲಿ ನಿರೀಕ್ಷೆ ಮೂಡಿಸಿರೋದರ ಹಿಂದೆ ನಾನಾ ಕಾರಣಗಳಿದ್ದವು. ಒಂದು ಕಡೆಯಲ್ಲಿ ಬಿಸಿ ನೆತ್ತರ ಹುಡುಗ ಸೂರ, ಹಸಿ ಹಸೀ ಕಥೆಯೊಂದರ ಸಾರಥ್ಯ ವಹಿಸಿದ ಸುಳಿವು, ಆರಕ್ಕೇರದೆ ಮೂರಕ್ಕಿಳಿಯದ ಸ್ಥಿತಿಯಲ್ಲಿದ್ದ ಶ್ರೀನಗರ ಕಿಟ್ಟಿಯ ರಗಡ್ ಲುಕ್ಕು ಮತ್ತು ಒಂದೇ ಏಟಿಗೆ ಪ್ಯಾನಿಂಡಿಯಾ ಮಟ್ಟ ಮುಟ್ಟುವಂತಿದ್ದ ಮೇಕಿಂಗ್ ವೈಖರಿ… ಹೀಗೆ…
ಇದು ಹೇಳಿಕೇಳಿ ಪ್ಯಾನಿಂಡಿಯಾ ಸಿನಿಮಾಗಳ ಜಮಾನ. ಬರೀ ಬಾಯಿಮಾತಿಗೆ ಸೀಮಿತವಾಗದೆ ಕಂಟೆಂಟಿನ ಕಸುವಿನಿಂದಲೇ ಇಂಥಾ ಅರ್ಹತೆ ಪಡೆದುಕೊಂಡ, ದೇಶ ಮಟ್ಟದಲ್ಲಿ ಬಿಡುಗಡೆಗೆ ಸಜ್ಜುಗೊಂಡಿರುವ ಒಂದಷ್ಟು ಸಿನಿಮಾಗಳಿದ್ದಾವೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ಚಿತ್ರ ಗದಾಯುದ್ಧ. ಪ್ರಚಾರದ ಪಟ್ಟುಗಳಿಲ್ಲದೆ, ತನ್ನ ಆಂತರ್ಯದ ವೈಶಿಷ್ಟ್ಯದ ಸುಳಿವುಗಳಿಂದಲೇ ಈ ಚಿತ್ರ ಒಂದಷ್ಟು ಚರ್ಚೆ ಹುಟ್ಟು ಹಾಕಿದೆ. ಈ ಮೂಲಕ ಸಿನಿಮಾಸಕ್ತರ ಗಮನ ಗದಾಯುದ್ಧದತ್ತ ಹೊರಳಿಕೊಂಡಿದೆ. ಗದಾಯುದ್ಧವೆಂಬುದು ಚಿರಪರಿಚಿತ ವಿಚಾರ. ಅಂಥಾದ್ದೊಂದು ಪರಿಚಿತ ಶೀರ್ಷಿಕೆಯಡಿಯಲ್ಲಿ ಯಾವ ಥರದ ಕಥೆ ಹೇಳಲಾಗಿದೆ? ಒಟ್ಟಾರೆ ಚಿತ್ರದ ರೂಪುರೇಷೆಗಳೇನು, ವಿಶೇಷತೆಗಳೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಒಂದಷ್ಟು ಸ್ವಾರಸ್ಯಕರ ಉತ್ತರಗಳು ಎದುರುಗೊಳ್ಳುತ್ತವೆ! ಅಂದಹಾಗೆ, ಗದಾಯುದ್ಧ ಶ್ರೀವತ್ಸ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಎರಡು ದಶಕಗಳಿಗೂ ಹೆಚ್ಚು ಕಾಲ ಕಿರುತೆರೆ ಮತ್ತು ಚಿತ್ರರಂಗದ ಭಾಗವಾಗಿದ್ದ ಶ್ರೀವತ್ಸ, ಹಲವು ಘಟಾನುಘಟಿ ನಿರ್ದೇಶಕರುಗಳ ಗರಡಿಯಲ್ಲಿ ಪಳಗಿಕೊಂಡಿದ್ದಾರೆ. 2015ರಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಿದ್ದ ಮೃಗಶೀರ ಅಂತೊಂದು ಸಿನಿಮಾ ತೆರೆಗಂಡಿತ್ತಲ್ಲಾ? ಅದನ್ನು ನಿರ್ದೇಶನ ಮಾಡಿದ್ದವರು ಇದೇ ಶ್ರೀವತ್ಸ. ನಾನಾ ದಿಕ್ಕಿನಲ್ಲಿ ಗಮನ…
ಒಮ್ಮೊಮ್ಮೆ ಯಾವುದೋ ಸಿನಿಮಾದ ಸಣ್ಣ ತುಣುಕಿನಲ್ಲಿ ಹಣಕಿ ಹಾಕುವ ಪಾತ್ರದ ಚಹರೆಗಳು ಮನಸಲ್ಲುಳಿದು ಬಿಡುತ್ತವೆ. ಅಂಥಾದ್ದೊಂದು ಪವಾಡ ಸಂಭವಿಸುವುದು ತುಸು ಅಪರೂಪವಾದರೂ, ಹಾಗೆ ಮನ ಸೆಳೆದ ಪಾತ್ರದ ರೂವಾರಿಯಾದ ನಟರು ಯಶಸ್ವಿಯಾಗುತ್ತಾರೆಂಬುದರಲ್ಲಿ ಸಂದೇಹವೇನಿಲ್ಲ. ಕಡಲ ತೀರದ ಭಾರ್ಗವ ಚಿತ್ರದ ವಿಚಾರದಲ್ಲಿ ಹೇಳೋದಾದರೆ ಟೀಸರ್ ಮತ್ತು ಟ್ರೈಲರ್‍ನಲ್ಲಿ ಕಂಡಿರುವ ಅದೊಂದು ರಗಡ್ ಲುಕ್ಕಿನ ಪಾತ್ರ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿ ಬಿಟ್ಟಿದೆ. ಆ ಪಾತ್ರವನ್ನು ಆವಾಹಿಸಿಕೊಂಡು ನಟಿಸಿರುವವರು ವರುಣ್ ರಾಜ್. ವಿಶೇಷವೆಂದರೆ, ಹೀಗೆ ನಟನಾಗಿ ಸಂಚಲನ ಸೃಷ್ಟಿಸೋ ಸೂಚನೆ ಕೊಟ್ಟಿರುವ ವರುಣ್ ಈ ಸಿನಿಮಾಮಾದ ನಿರ್ಮಾಪಕರೂ ಹೌದು! ಸಿನಿಮಾ ನಿರ್ಮಾಣವೆಂಬುದು ಕೂಡಾ ಒಂದು ಕಲೆ. ಅದನ್ನು ಒಲಿಸಿಕೊಳ್ಳಬೇಕೆಂದರೆ ಸಾಕಷ್ಟು ಕಸರತ್ತುಗಳನ್ನು ನಡೆಸಬೇಕಾಗುತ್ತದೆ. ಅಂಥಾದ್ದರಲ್ಲಿ ನಿರ್ಮಾಣದ ಜೊತೆಗೆ, ನಾಯಕರಲ್ಲೊಬ್ಬರಾಗಿಯೂ ನಟಿಸೋದೆಂದರೆ ಅದು ಸಲೀಸಿನ ಸಂಗತಿಯೇನಲ್ಲ. ಒಂದು ವೇಳೆ ಅಂಥಾ ಸಾಹಸಕ್ಕಿಳಿದರೆ, ಎರಡು ದೋಣಿಗೆ ಕಾಲಿಟ್ಟು ಸರಿದೂಗಿಸಿಕೊಂಡು ಸಾಗುವ ಸವಾಲೆದುರಾಗುತ್ತೆ. ಈ ನಿಟ್ಟಿನಲ್ಲಿ ಹೇಳುವುದಾದರೆ, ನಿರ್ಮಾಣ ಕಾರ್ಯದಲ್ಲಿ ಗಣನೀಯವಾಗಿ ಕಾರ್ಯನಿರ್ವಹಿಸಿರುವ ವರುಣ್ ಎಲ್ಲವನ್ನೂ ಬಹು ಜಾಣ್ಮೆಯಿಂದಲೇ ನಿಭಾಯಿಸಿದ್ದಾರೆ.…
ಒಂದಷ್ಟು ಪ್ರಯೋಗ, ಪ್ರತೀ ಹೆಜ್ಜೆಯಲ್ಲಿಯೂ ಪಡಿಮೂಡಿಕೊಳ್ಳುವ ಹೊಸತನವಿಲ್ಲದೇ ಹೋದರೆ ಚಿತ್ರರಂಗವೆಂಬುದು ಅಕ್ಷರಶಃ ನಿಂತ ನೀರಿನಂತಾಗಿ ಬಿಡುತ್ತೆ. ಖುಷಿಯ ಸಂಗತಿಯೆಂದರೆ, ಇಲ್ಲಿನ ಕ್ರಿಯಾಶೀಲ ಮನಸುಗಳು ಆಗಾಗ ಚೌಕಟ್ಟಿನಾಚೆಗೆ ಹೊರಳಿಕೊಳ್ಳುತ್ತವೆ; ಮಹತ್ತರವಾದುದೇನನ್ನೋ ಪ್ರೇಕ್ಷಕರ ಮುಂದಿಟ್ಟು ಅಚ್ಚರಿ ಮೂಡಿಸುತ್ತವೆ. ಅಂಥಾ ಕ್ರಿಯಾಶೀಲ ಮನಸುಗಳ ಯಾದಿಯಲ್ಲಿ ನಿಸ್ಸಂದೇಹವಾಗಿಯೂ ನಿರ್ದೇಶಕ ಗುರು ದೇಶಪಾಂಡೆ ಸೇರಿಕೊಳ್ಳುತ್ತಾರೆ. ಸಿನಿಮಾ ಶಾಲೆ ತೆರೆದು ಹೊಸಾ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಲೇ, ಹೊಸಾ ಆಲೋಚನೆ ಬಿತ್ತುತ್ತಿರುವ ಗುರು ದೇಶಪಾಂಡೆ ಇದೀಗ `ಪೆಂಟಗನ್’ ಅಂತೊಂದು ಅಚ್ಚರಿಯೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದ್ದಾರೆ. ಈಗಾಗಲೇ ಟೀಸರ್ ಮೂಲಕ ಸಂಚಲನ ಮೂಡಿಸಿರುವ ಈ ಚಿತ್ರದ ಲಿರಿಕಲ್ ವೀಡಿಯೋ ಸಾಂಗ್ ಒಂದು ಇದೀಗ ಬಿಡುಗಡೆಗೊಂಡಿದೆ. ಪ್ರತೀ ಸಿನಿಮಾಗಳಲ್ಲಿಯೂ ಹಾಡುಗಳಿಗೆ ವಿಶೇಷವಾದ ಪ್ರಾಶಸ್ತ್ಯ ಕೊಡುತ್ತಾ ಬಂದಿರುವ ಗುರು ದೇಶಪಾಂಡೆ, ಪೆಂಟಗನ್ ವಿಚಾರದಲ್ಲಿಯೂ ಅದನ್ನು ಮುಂದುವರೆಸಿದ್ದಾರೆ. `ಬಾ ಹೊರಗೆ ಬಾ’ ಅಂತ ಶುರುವಾಗೋ ಈ ಹಾಡಿನ ಸಾಹಿತ್ಯ. ಅದರ ಹಿನ್ನೆಲೆಯಲ್ಲಿ ಕದಲುವ ದೃಷ್ಯಗಳು ಮತ್ತು ಎಂಥವರನ್ನೂ ಅರೆಕ್ಷಣದಲ್ಲಿಯೇ ಆವರಿಸಿಕೊಳ್ಳಬಲ್ಲ ಸಂಗೀತವನ್ನು ಆಸ್ವಾದಿಸಿದವರೆಲ್ಲ ಥ್ರಿಲ್ ಆಗಿದ್ದಾರೆ. ಬಹುಶಃ…