ಶೋಧ ನ್ಯೂಸ್ – Shodha Newsಶೋಧ ನ್ಯೂಸ್ – Shodha News
  • ಮುಖಪುಟ
  • ಕವರ್ ಸ್ಟೋರಿ
    • ರಾಜ್ಯ
    • ರಾಷ್ಟ್ರ
    • ಜಾಗತಿಕ
  • ರಾಜಕೀಯ
  • Editor’s Sight
    • ನೇರಾನೇರ
    • ಕಂದೀಲು
  • ಕ್ರೈಂ
  • ಸಿನಿಶೋಧ
    • ಹೀಗಿದೆ ಈ ಪಿಚ್ಚರ್
    • ಬಣ್ಣದ ಹೆಜ್ಜೆ
    • ಸ್ಪಾಟ್‌ಲೈಟ್
    • ಸೌತ್ ಜ಼ೋನ್
    • ಬಾಲಿವುಡ್
    • ಹಾಲಿವುಡ್
  • ಸಾಹಿತ್ಯ
    • ಪುಟ ತೆರೆಯೋ ಪುಳಕ
    • ಹೊಸಾ ಓದು
    • ಭಾವಬಿಂದು
  • ಲೈಫ್ ಸ್ಟೈಲ್
    • ಬೀ ಪಾಸಿಟಿವ್
    • ಲವ್ ಜ಼ೋನ್
    • ಅಧ್ಯಾತ್ಮ
    • ಫುಟ್ಪಾತ್ ಯುನಿವರ್ಸಿಟಿ
    • ಕೃಷಿ ಕುಲುಮೆ
  • ವಂಡರ್ ಮ್ಯಾಟರ್
  • ಫಟಾಫಟ್ ಸುದ್ದಿ
Facebook Twitter Instagram
Friday, March 31
Facebook Twitter YouTube RSS
ಶೋಧ ನ್ಯೂಸ್ – Shodha News ಶೋಧ ನ್ಯೂಸ್ – Shodha News
  • ಮುಖಪುಟ
  • ಕವರ್ ಸ್ಟೋರಿ
    1. ರಾಜ್ಯ
    2. ರಾಷ್ಟ್ರ
    3. ಜಾಗತಿಕ
    4. View All

    ಅಬ್ಬರಿಸಿ ಬೊಬ್ಬಿರಿದವನು ಅಪ್ಪಾ ಅಂದ!

    26/03/2023

    ಜಟ್ಕಾ ಹೋರಾಟಗಾರನ ಹೊಸಾ ಅವತಾರ!

    11/03/2023

    ಬೆಂಗಳೂರು: ಡ್ರಗ್ಸ್ ದಂಧೆಕೋರರ ಬಂಧನ!

    18/07/2022

    ಮರಗಳ ಚಿಕಿತ್ಸೆಗೆ ಆಂಬ್ಯುಲೆನ್ಸ್ ವ್ಯವಸ್ಥೆ ಎಲ್ಲಿದೆ ಗೊತ್ತಾ?

    29/11/2022

    ಭಾರತದ ಅಪ್ರತಿಮ ಗೂಢಾಚಾರ ಅಜಿತ್ ದೋವಲ್‍ಗೆ ಪಾಕಿಸ್ತಾನದಲ್ಲಿ ಏನಾಗಿತ್ತು ಗೊತ್ತಾ?

    21/11/2022

    ಸ್ಟಂಟ್ ಮಾಸ್ಟರ್ ಬೆಂಬಲಕ್ಕೆ ನಿಂತ ಅಣ್ಣಾಮಲೈ!

    17/08/2022

    ಅನಂತದಲ್ಲಿ ಲೀನವಾಯ್ತು ಕಾಡು ಕುದುರೆಯ ಹಾಡು!

    12/08/2022

    ಹವಾಮಾನ ಬದಲಾವಣೆಯ ಹೊಡೆತ!

    12/09/2022

    ಕೆಂಪು ಸಮುದ್ರದಲ್ಲಿ ರಕ್ತದೋಕುಳಿ!

    09/07/2022

    ಕೊರೋನಾ ತವರು ಚೀನಾದಲ್ಲೀಗ ನಿರಾಳ ವಾತಾವರಣ!

    07/06/2022

    ಕಾಂಗ್ರೆಸ್‍ಗೆ ದೇವೇಗೌಡ, ಯಡ್ಡಿ ಪಟಾಲಮ್ಮಿನ ಸಾಥ್?

    27/03/2023

    ಬೆಂಕಿ ಹಚ್ಚಲು ಎಷ್ಟೊಂದು ದಾರಿ!

    27/03/2023

    ಲಿಂಗಾಯತ ಮತಗಳನ್ನ ಸೆಳೆಯಲು ಕಾಂಗ್ರೆಸ್ ಕಸರತ್ತು!

    26/03/2023

    ಅಬ್ಬರಿಸಿ ಬೊಬ್ಬಿರಿದವನು ಅಪ್ಪಾ ಅಂದ!

    26/03/2023
  • ರಾಜಕೀಯ

    ಕಾಂಗ್ರೆಸ್ ನಾಯಕ ಹೇಳಿದ್ದೇನು?

    14/09/2022

    ರಾಹುಲ್ ಗಾಂಧಿ ಪಪ್ಪು ಅಲ್ಲ ಅಂದಳು ಸ್ವರ ಭಾಸ್ಕರ್!

    23/08/2022

    ಫಾರ್ಟಿ ಪರ್ಸೆಂಟ್ ಈಶ್ವರಪ್ಪನ ಹೊಸಾ ಪ್ರಲಾಪ!

    31/05/2022
  • Editor’s Sight
    1. ನೇರಾನೇರ
    2. ಕಂದೀಲು
    3. View All
  • ಕ್ರೈಂ

    ಹಬ್ಬಿಕೊಂಡಿರೋ ನಶೆಗೆ ಕೋಟಿ ರೊಕ್ಕದ ನಂಟು!

    26/03/2023

    ನಶೆಯ ಜಾಡು ಹಿಡಿದ ಖಾಕಿ ಪಡೆ!

    06/03/2023

    ಚಾಣಾಕ್ಷ ಡ್ರಗ್ಸ್ ಡಾನ್ ಒಬ್ಬನ ರೋಚಕ ಕಥೆ!

    06/02/2023

    ಡ್ರಗ್ಸ್ ಮಾಫಿಯಾದಿಂದ ಸೆಕ್ಸ್ ರ್ಯಾಕೆಟ್ಟಿನವರೆಗೆ…

    16/01/2023

    ಗಂಡನನ್ನೇ ಗುಂಡಿಟ್ಟು ಕೊಂದಿದ್ದಳು!

    28/11/2022
  • ಸಿನಿಶೋಧ
    1. ಹೀಗಿದೆ ಈ ಪಿಚ್ಚರ್
    2. ಬಣ್ಣದ ಹೆಜ್ಜೆ
    3. ಸ್ಪಾಟ್‌ಲೈಟ್
    4. ಸೌತ್ ಜ಼ೋನ್
    5. ಬಾಲಿವುಡ್
    6. ಹಾಲಿವುಡ್
    7. View All

    ಮೃಷ್ಟಾನ್ನದ ನಿರೀಕ್ಷೆಯ ಮುಂದೆ ಹಳಸಲು ಚಿತ್ರಾನ್ನ!

    17/03/2023

    ಜನರನ್ನು ಮುಟ್ಟುವ ಹಾದಿಯಲ್ಲೇ ಮುಗ್ಗರಿಸಿದ ಸ್ಥಿತಿ!

    04/03/2023

    ಮನಸೆಂಬೋ ಕಡಲಿಗೆ ವ್ಯಾಕುಲಗಳ ಗಾಳ ಇಳಿದಾಗ…

    03/03/2023

    ಕಾಡಿನೊಡಲ ನಿಟ್ಟುಸಿರಿಗೆ ಮುಖ್ಯವಾಹಿನಿಯನ್ನು ಮುಟ್ಟಿದ ತೃಪ್ತಿ!

    03/03/2023

    ಕಡಲ ತೀರದ ಭಾರ್ಗವ ಚಿತ್ರದಲ್ಲಿದೆ ಖಡಕ್ ಪಾತ್ರ!

    01/03/2023

    ಅಷ್ಟಕ್ಕೂ ಕಡಲ ತೀರದ ಭಾರ್ಗವ ಚಿತ್ರದ ಅಸಲೀ ಕಥೆಯೇನು?

    27/02/2023

    ಇದು ವರುಣ್ ರಾಜ್ ಬಗೆಗಿನ ಅಚ್ಚರಿಯ ಕಥೆ!

    23/02/2023

    ಕಡಲ ತೀರದ ಭಾರ್ಗವ ಭರತ್ ಗೌಡ ಮನದಾಳ!

    22/02/2023

    ಇಂಗ್ಲಿಷ್ ರಮ್ಯಾ ಮೇಲೆ ಪ್ರೇಕ್ಷಕರ ಮುನಿಸು!

    27/03/2023

    ಹೀರೋ ಆಗಿಯೂ ಗಮನ ಸೆಳೆದರು ಸುಬ್ರಮಣ್ಯ ಪ್ರಸಾದ್!

    24/03/2023

    ಗುರು ದೇಶಪಾಂಡೆ ಮ್ಯಾಜಿಕ್ ಮಾಡೋ ನಿಖರ ಮುನ್ಸೂಚನೆ!

    24/03/2023

    ಇದು ಮಜಾ ಟಾಕೀಸ್ ಖ್ಯಾತಿಯ ರಾಜಶೇಖರ್ ನಿರ್ದೇಶನದ ಚಿತ್ರ!

    21/03/2023

    ಎಲ್ಲ ವ್ಯಾಕುಲವೂ ಮಂಕಾಗುವಂಥಾ ಗೆಲುವು ಸಿಗಬಹುದಾ?

    17/03/2023

    ನರೇಶ್‍ಗೆ 4 ಮತ್ತು ಪವಿತ್ರಾಗೆ 3ನೇ ಅನುಭವ!

    10/03/2023

    ಮೆಲೋಡಿಯತ್ತ ಮರಳಿ ಮರುಳಾಗಿಸಿದರು ಯೋಗರಾಜ ಭಟ್!

    09/03/2023

    ಓ ಮೈ ಡಾರ್ಲಿಂಗ್ ಅಂದವಳದ್ದು ಪಕ್ಕಾ ಬೋಲ್ಡ್ ಕ್ಯಾರೆಕ್ಟರ್!

    28/02/2023

    ವರ್ಮಾ ಜೊತೆಗಿನ ಲವ್ ಅಫೇರ್ ನಿಜವಾ?

    14/03/2023

    ವ್ಯರ್ಥ ಪ್ರಲಾಪವಾಯ್ತು ಬಲಪಂಥೀಯರ ಬಾಯ್ಕಾಟ್ ಅಭಿಯಾನ?

    03/03/2023

    ಬಾಲಿವುಡ್ಡಿಂದ ಸೌತ್‍ವರೆಗೂ ವಿಲನ್‍ಗಿರಿ!

    27/02/2023

    06/02/2023

    ಬಳುಕೋ ಬಳ್ಳಿ ಶಿಲ್ಪಾ ಶೆಟ್ಟಿ ಮೇಲೆ ಕಣ್ಣಿಟ್ಟ ಕನ್ನಡದ ಕೇಡಿ!

    28/02/2023

    ನಗಿಸೋನ ಮನಸಲ್ಲಿತ್ತು ಎಂದೂ ನೀಗದ ದುಃಖ!

    21/12/2022

    ಇಂಗ್ಲಿಷ್ ರಮ್ಯಾ ಮೇಲೆ ಪ್ರೇಕ್ಷಕರ ಮುನಿಸು!

    27/03/2023

    ಹೀರೋ ಆಗಿಯೂ ಗಮನ ಸೆಳೆದರು ಸುಬ್ರಮಣ್ಯ ಪ್ರಸಾದ್!

    24/03/2023

    ಗುರು ದೇಶಪಾಂಡೆ ಮ್ಯಾಜಿಕ್ ಮಾಡೋ ನಿಖರ ಮುನ್ಸೂಚನೆ!

    24/03/2023

    ಇದು ಮಜಾ ಟಾಕೀಸ್ ಖ್ಯಾತಿಯ ರಾಜಶೇಖರ್ ನಿರ್ದೇಶನದ ಚಿತ್ರ!

    21/03/2023
  • ಸಾಹಿತ್ಯ
    1. ಪುಟ ತೆರೆಯೋ ಪುಳಕ
    2. ಹೊಸಾ ಓದು
    3. ಭಾವಬಿಂದು
    Featured
    ಲೈಫ್ ಸ್ಟೈಲ್

    ಸ್ನೇಹಿತರು ಇಲ್ಲದಿದ್ರೆ ರಕ್ತ ಹೆಪ್ಪುಗಟ್ಟಿ ಸಾಯೋ ಅಪಾಯವಿದೆಯಂತೆ!

    By Santhosh Bagilagadde29/11/2022
    Recent
    ಲೈಫ್ ಸ್ಟೈಲ್

    ಸ್ನೇಹಿತರು ಇಲ್ಲದಿದ್ರೆ ರಕ್ತ ಹೆಪ್ಪುಗಟ್ಟಿ ಸಾಯೋ ಅಪಾಯವಿದೆಯಂತೆ!

    29/11/2022By Santhosh Bagilagadde
  • ಲೈಫ್ ಸ್ಟೈಲ್
    1. ಬೀ ಪಾಸಿಟಿವ್
    2. ಲವ್ ಜ಼ೋನ್
    3. ಅಧ್ಯಾತ್ಮ
    4. ಫುಟ್ಪಾತ್ ಯುನಿವರ್ಸಿಟಿ
    5. ಕೃಷಿ ಕುಲುಮೆ
    Featured
    ವಂಡರ್ ಮ್ಯಾಟರ್

    ಉತ್ಸಾಹದ ಅಜ್ಜಿಯೀಗ ಜಗತ್ತಿನ ಅತ್ಯಂತ ಹಿರಿಯ ಮಹಿಳೆ!

    By Santhosh Bagilagadde23/01/2023
    Recent
    ವಂಡರ್ ಮ್ಯಾಟರ್

    ಉತ್ಸಾಹದ ಅಜ್ಜಿಯೀಗ ಜಗತ್ತಿನ ಅತ್ಯಂತ ಹಿರಿಯ ಮಹಿಳೆ!

    23/01/2023By Santhosh Bagilagadde
    ವಂಡರ್ ಮ್ಯಾಟರ್

    ಮಕ್ಕಳನ್ನು ಅಳಿಸಲು ಜಪಾನಿಗರ ಸರ್ಕಸ್ಸು!

    21/01/2023By Santhosh Bagilagadde
    ವಂಡರ್ ಮ್ಯಾಟರ್

    ಆ ದೇಶದಲ್ಲಿ ಅಪಹರಣವೂ ಕಾನೂನು ಸಮ್ಮತ!

    20/01/2023By Santhosh Bagilagadde
  • ವಂಡರ್ ಮ್ಯಾಟರ್

    ನಶೆ ಏರಿಸಿಕೊಂಡವರಂದ್ರೆ ಸಾವಿಗೂ ಲವ್ವು!

    01/03/2023

    ಮಂಜುಗಡ್ಡೆಗಳ ಅಡಿಯಲ್ಲಿ ಸಿಕ್ಕಿದ್ದು 3500 ವರ್ಷದ ಕರಡಿ!

    27/02/2023

    ಉತ್ಸಾಹದ ಅಜ್ಜಿಯೀಗ ಜಗತ್ತಿನ ಅತ್ಯಂತ ಹಿರಿಯ ಮಹಿಳೆ!

    23/01/2023

    ಮಕ್ಕಳನ್ನು ಅಳಿಸಲು ಜಪಾನಿಗರ ಸರ್ಕಸ್ಸು!

    21/01/2023

    ಆ ದೇಶದಲ್ಲಿ ಅಪಹರಣವೂ ಕಾನೂನು ಸಮ್ಮತ!

    20/01/2023
  • ಫಟಾಫಟ್ ಸುದ್ದಿ

    ಥಾಣೆಯಲ್ಲಿ ಹೀಗೊಂದು ಕಟ್ಟೆಚ್ಚರಿಕೆ!

    06/03/2023

    ಕೋಳಿಯ ದೇಹದಲ್ಲಿ ಪತ್ತೆಯಾಯ್ತು ಡೆಡ್ಲಿ ಬ್ಯಾಕ್ಟೀರಿಯಾ!

    27/02/2023

    ಗೋವಿನಂತೆ ನಾಯಿಗಳಿಗೂ ಬದುಕುವ ಹಕ್ಕಿಲ್ಲವೇ?

    27/02/2023

    ಅಸ್ತಮಾ ಕಾಯಿಲೆ ಉಲ್ಬಣಿಸುವಂತೆ ಮಾಡಿತು ದೀಪಾವಳಿ!

    01/11/2022

    ಖಾಸಗೀತನಕ್ಕೆ ಬೆಲೆಯಿಲ್ಲವೇ ಅಂದ್ರು ವಿರಾಟ್!

    31/10/2022
ಶೋಧ ನ್ಯೂಸ್ – Shodha Newsಶೋಧ ನ್ಯೂಸ್ – Shodha News
Home » ಗಾಂಜಾ ಹೆನ್ನಾಗರದ ಹೆಡೆಮೆಟ್ಟಬಹುದೇ ಪ್ರತಾಪ್ ರೆಡ್ಡಿ?

ಗಾಂಜಾ ಹೆನ್ನಾಗರದ ಹೆಡೆಮೆಟ್ಟಬಹುದೇ ಪ್ರತಾಪ್ ರೆಡ್ಡಿ?

0
By Santhosh Bagilagadde on 02/07/2022 ಕ್ರೈಂ

ಮತ್ತೆ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾದ ಸದ್ದು ಮೊಳಗಿದೆ. ಈ ಮಾಫಿಯಾಕ್ಕೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕಗಳಿದ್ದಾವೆಂಬ ಬಗ್ಗೆ ಈ ಹಿಂದಿನಿಂದಲೇ ಗುಮಾನಿಗಳಿದ್ದವು. ಅದು ಯಾವ ಸಂಶಯಗಳಿಗೂ ಎಡೆ ಮಾಡಿಕೊಡದಂತೆ ಈಗಾಗಲೇ ನಿಜವಾಗಿದೆ. ಅದು ಮತ್ತೊಮ್ಮೆ ಸಾಬೀತಾಗಿರೋದು ಬಾಲಿವುಡ್ಡಿನ ಖ್ಯಾತ ನಟ ಶಕ್ತಿ ಕಪೂರ್ ಪುತ್ರ ಸಿದ್ಧಾಂತ್ ಕಪೂರ್ ಬೆಂಗಳೂರಿನಲ್ಲಿ ತಗುಲಿಕೊಳ್ಳುವ ಮೂಲಕ. ಹಲಸೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಎಂಜಿ ರಸ್ತೆಯ ಐಶಾರಾಮಿ ಹೊಟೇಲಿನಲ್ಲಿ ನಡೆಯುತ್ತಿದ್ದ ಪಾರ್ಟಿಯೊಂದಕ್ಕೆ ರೇಡು ನಡೆಸಿದಾಗ ನಶೆಗೆ ವಶವಾಗಿ ತೇಲಾಡುತ್ತಿದ್ದ ಗ್ಯಾಂಗೊಂದು ರೆಡ್ ಹ್ಯಾಂಡಾಗಿಯೇ ತಗುಲಿಕೊಂಡಿದೆ. ಆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಮೂವತೈದಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಅದರಲ್ಲಿ ನಟ ಸಿದ್ಧಾಂತ್ ಕಪೂರ್ ಮಾದಕ ವಸ್ತುಗಳನ್ನು ಸೇವಿಸಿದ್ದಾನೆಂಬುದೂ ಪಕ್ಕಾ ಆದಂತಿದೆ.

ನಿಮಗೆಲ್ಲ ಮರೆತು ಹೋಗಲು ಸಾಧ್ಯವೇ ಇಲ್ಲ. ಕಳೆದ ಒಂದೆರಡು ವರ್ಷಗಳಿಂದ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ. ರಾಗಿಣಿ, ಸಂಜನಾರಂಥ ನಟೀಮಣಿಯರು ಜೈಲುಪಾಲಾಗಿ ವಾಪಾಸಾದದ್ದೂ ಆಗಿದೆ. ಸದ್ಯಕ್ಕೆ ಈ ನಟಿಯರಿಬ್ಬರೂ ಏನೂ ಆಗೇ ಇಲ್ಲವೆಂಬಂತೆ ಮತ್ತೆ ಬಣ್ಣ ಬಳಿದುಕೊಂಡು ಓಡಾಡುತ್ತಿದ್ದಾರೆ. ಅದರ ಬೆನ್ನಲ್ಲಿಯೇ ಈಗ ಬಾಲಿವುಡ್‌ನೊಂದಿಗೆ ನಂಟು ಹೊಂದಿರುವಂಥಾ ಸದರಿ ಪ್ರಕರಣವನ್ನು ಹಲಸೂರು ಪೊಲೀಸರು ಬೇಧಿಸಿದ್ದಾರೆ. ಹೈಟೆಕ್ ದಂಧೆ, ದೋಖಾವಳಿಗಳ ಕರ್ಮಭೂಮಿಯಂತಾಗಿರೋ ಎಂಜಿ ರಸ್ತೆಯ ದಿ ಪಾರ್ಕ್ ಹೊಟೇಲಿನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿದೆಯೆಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಇಂಥಾ ಬಂಧನಗಳಿಂದ ಆಗುವ, ಈಗಾಗಲೇ ಆಗಿರುವ ಪ್ರಯೋಜನವೇನೆಂಬ ಪ್ರಶ್ನೆ ಮಾತ್ರವೇ ಪ್ರಜ್ಞಾವಂತರಲ್ಲಿದೆ.

ಈ ಪ್ರಶ್ನೆ ನಾಗರಿಕ ವಲಯದಲ್ಲಿ ಸೃಷ್ಟಿಯಾಗಿರೋದಕ್ಕೆ ಖಂಡಿತವಾಗಿಯೂ ಕಾರಣಗಳಿದ್ದಾವೆ. ಈಗೊಂದಷ್ಟು ವರ್ಷಗಳಿಂದ ಸತತವಾಗಿ ಪೊಲೀಸರು, ಸಿಸಿಬಿ ಮಂದಿ ಡ್ರಗ್ಸ್ ದಂಧೆಕೋರರ ಹೆಡೆ ಮೆಟ್ಟಲು ಶತ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಸಂಜನಾ ಮತ್ತು ರಾಗಿಣಿ ಕೇಸಿನಲ್ಲಂತೂ ಪೊಲೀಸರು ತೀರಾ ನಿಷ್ಟುರವಾಗಿ ತನಿಖೆ ನಡೆಸುತ್ತಿರುವಂತೆ ಬಿಂಬಿಸಿಕೊಂಡಿದ್ದರು. ಆ ಪ್ರಕರಣದಲ್ಲಿ ಅಂತಾರಾಜ್ಯ ಡ್ರಗ್ ಪೆಡ್ಲರ್‌ಗಳ ಜಾಡು ಸಿಕ್ಕಿದೆ ಎಂಬಂತೆಯೂ ಗುಲ್ಲೆಬ್ಬಿಸಲಾಗಿತ್ತು. ಆದರೆ, ಆ ತನಿಖೆ ಎತ್ತ ಸಾಗುತ್ತಿದೆ? ಸೆರೆ ಸಿಕ್ಕವರರ ಕಥೆ ಏನಾಯ್ತು? ಈ ಸಮಾಜವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಡ್ರಗ್ಸ್ ಜಾಲವನ್ನು ಈ ಕ್ಷಣಕ್ಕೂ ನಾಮಾವಶೇಷ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ? ಇಂಥಾ ಪ್ರಶ್ನೆಗಳು ಸಾರ್ವಜನಿಕರಲ್ಲಿದೆ. ನಿಖರವಾಗಿ ಉತ್ತರಿಸುವ ಔದಾರ್ಯವನ್ನು ಮಾತ್ರ ಖಾಕಿ ಪಡೆ ತೋರಿಸುತ್ತಿಲ್ಲ.

ಇದೀಗ ದಕ್ಷ ಪೊಲೀಸ್ ಅಧಿಕಾರಿ ಎಂದೇ ಹೆಸರುವಾಸಿಯಾಗಿರುವ ಪ್ರತಾಪ್ ರೆಡ್ಡಿ ಪೊಲೀಸ್ ಆಯುಕ್ತರಾಗಿದ್ದಾರೆ. ಈ ಸಮಾಜದಲ್ಲಿ ಆಳವಾಗಿ ಬೇರೂರಿರುವ ಸಖಲ ದಂಧೆಗಳ ಚಹರೆಯೂ ಅವರಿಗೆ ಅರಿವಿದೆ. ಈ ಕಾರಣದಿಂದಲೇ ಸಿಸಿಬಿಗೂ ಸೂಕ್ತ ನಿದರ್ಶನ ನೀಡಿ, ಪ್ರತೀ ಪೊಲೀಸ್ ಠಾಣೆಗಳನ್ನೂ ಕೂಡಾಡ್ರಗ್ಸ್ ದಂಧೆಯ ವಿರುದ್ಧ ಸನ್ನದ್ಧವಾಗುವಂತೆ ಮಾಡುವ ನಿಟ್ಟಿನಲ್ಲಿ ಅವರು ಕಾರ್ಯ ನಿರ್ವಹಿಸುತ್ತಾರೆಂಬ ಬಗ್ಗೆ ಜನರಲ್ಲಿ ನಂಬಿಕೆ ಇದೆ. ಅದನ್ನು ಉಳಿಸಿಕೊಳ್ಳುವ ಭಾರ ಪ್ರತಾಪ್ ರೆಡ್ಡಿಯವರ ಮೇಲಿದೆ. ನಿಷ್ಠುರವಾಗಿ ಹೇಳಬೇಕೆಂದರೆ, ಡ್ರಗ್ಸ್ ವಿಚಾರದಲ್ಲಿ ಇಡೀ ರಾಜ್ಯದ ಪೊಲೀಸ್ ವ್ಯವಸ್ಥೆ ನಿಜಕ್ಕೂ ವಿಫಲವಾಗಿದೆ. ಇದುವರೆಗೂ ಸಿಕ್ಕಿರುವ ಕೆಲ ಅಂಕಿ ಅಂಶಗಳೇ ಈ ಮಾತನ್ನು ಪುಷ್ಟೀಕರಿಸುವಂತಿವೆ.

ಇದೇ ಪೊಲೀಸ್ ಇಲಾಖೆ ಡ್ರಗ್ಸ್ ಮಾಫಿಯಾವನ್ನು ಬಡಿದು ಮಲಗಿಸುವ ಪಣ ತೊಟ್ಟಂತೆ ಆಗಾಗ ಅಬ್ಬರಿಸುತ್ತೆ. ಆದರೆ ಪದೇ ಪದೆ ಜನರ ಗಮನವನ್ನು ಬೇರೆಡೆಗೆ ಸೆಳೆದು, ಮೂಲ ತನಿಖೆಯ ಹಾದಿಯಲ್ಲಿಯೇ ಪೊಲೀಸ್ ಇಲಾಖೆ ಎಡವಟ್ಟು ಮಾಡಿಕೊಳ್ಳುತ್ತಿದೆ. ಕಳೆದ ಬಾರಿಯ ವಿಚಾರವನ್ನೇ ಗಮನಸಿ. ಅದ್ಯಾರೋ ರಾಗಿಣಿ, ಸಂಜನಾ ಮುಂತಾದ ಆರಕ್ಕೇರದ ಮೂರಕ್ಕಿಳಿಯದ ನಟಿಯರನ್ನು ಡ್ರಗ್ಸ್ ದಂಧೆಯಲ್ಲಿ ಬಂಧಿಸಲಾಗಿತ್ತು. ಈ ಬಾರಿ ಅದ್ಯಾವನೋ ಬಾಲಿವುಡ್ಡಿನ ಸವಕಲು ನಟ ಸಿದ್ಧಾಂತ್ ಕಪೂರನನ್ನು ಬಂಧಿಸಲಾಗಿದೆ. ಮಾಧ್ಯಮಗಳೂ ಕೂಡಾ ಇಂಥಾ ಸೆಲೆಬ್ರಿಟಿಗಳನ್ನು ಬಂಧಿಸಿದಾಗ ಬೇರೆ ದಿಕ್ಕಿನಲ್ಲಿ ಅಬ್ಬರಿಸುತ್ತಾವೆಯೇ ಹೊರತು, ನಿಜವಾದ ದಿಕ್ಕಿಗೆ ತನಿಖೆಯ ಹಾದಿ ಹೊರಳಿಕೊಳ್ಳುವಂತೆ ಮಾಡೋದು ಮಾಧ್ಯಮಗಳಿಗೂ ಬೇಕಿಲ್ಲ.

ಹಾಗಾದರೆ, ಚಿಲ್ಟು ಪಲ್ಟುಗಳೆಲ್ಲ ಡ್ರಗ್ಸ್ ಮಾರೋದನ್ನು ಪೊಲೀಸರು ಪತ್ತೆಹಚ್ಚುತ್ತಾರೆ. ಆದರೆ ಬೇರೆ ಬೇರೆ ರಾಜ್ಯಗಳಿಂದ, ದೇಶಗಳಿಂದ ಗಾಂಜಾ ಸರಬರಾಜು ಮಾಡುವ ದಂಧೆಕೋರರನ್ನು ಹತ್ತಿಕ್ಕಲು ಪೊಲೀಸರಿಂದ ಯಾಕೆ ಸಾಧ್ಯವಾಗುತ್ತಿಲ್ಲ? ಗಾಂಜಾ ದಂಧೆಯ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿರುವಾಗಲೇ ಹೈಫೈ ಪಾರ್ಟಿಗಳಲ್ಲಿ ಗಾಂಜಾ ಸರಬರಾಜಾಗುತ್ತದೆ. ಆ ಗಾಂಜಾ ಎಲ್ಲಿಂದ ಬರುತ್ತದೆ? ಪೊಲೀಸ್ ಇಲಾಖೆಯಲ್ಲಿಯೇ ಖದೀಮರಿಲ್ಲದೇ ಈ ದಂಧೆ ಈ ಪರಿಯಾಗಿ ವಿಜೃಂಭಿಸಲು ಸಾಧ್ಯವೇ? ಈ ಎಲ್ಲ ಪ್ರಶ್ನೆಗಳನ್ನು ಹರವಿಕೊಂಡು ಕೂತರೆ, ಕೆಲ ಘಟ್ಟಗಳಲ್ಲಿ ಪೊಲೀಸರೇ ಪಟ್ಟಭದ್ರರ ಮರ್ಜಿಗೆ ಬೀಳುತ್ತಿದ್ದಾರೇನೋ ಎಂಬಂಥಾ ಸಂಶಯಗಳು ಕಾಡುತ್ತವೆ. ಯಾಕೆಂದರೆ, ಈವತ್ತಿಗೆ ಈ ನಾಡಿನ ಹಲವಾರು ರಜಕಾರಣಿಗಳ ಮಕ್ಕಳೇ ಡ್ರಗ್ ಅಡಿಕ್ಟುಗಳಾಗಿದ್ದಾರೆ. ಇಂಥಾ ರಾಜಕಾರಣಿಗಳು ತಮ್ಮ ಮಕ್ಕಳು ತಗುಲಿಕೊಂಡು ಮಾನ ಹರಾಜಾಗುತ್ತದೆ ಎಂದಾದಾಗ ಸುಮ್ಮನಿರಲು ಸಾಧ್ಯವೇ. ಪೊಲೀಸ್ ಇಲಾಖೆಯ ಮೇಲೆ ಒತ್ತಡ ತಂದು ಪ್ರಕರಣ ಮುಚ್ಚಿಹಾಕುತ್ತಾರೆ. ಅಲ್ಲಿಗೆ ಡ್ರಗ್ ಪೆಡ್ಲರ್‌ಗಳ ಒಂದು ಜಾಲವೇ ಸೇಫ್ ಆಗುತ್ತದೆ.

ಈವತ್ತಿಗೆ ಸಿನಿಮಾ ನಟನಟಿಯರು ಡ್ರಗ್ಸ್ ಸೇವನೆ ಮಾಡುತ್ತಾರೆಂಬುದೇ ದೊಡ್ಡ ಸುದ್ದಿಯಾಗುತ್ತಿದೆ. ಮೀಡಿಯಾಗಳೂ ಕೂಡಾ ಅದರತ್ತಲೇ ಫೋಕಸ್ಸು ಮಾಡುತ್ತಿವೆ. ಆದರೆ ಈವತ್ತಿಗೆ ಈ ದಂಧೆ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡಿಕೊಂಡಿದೆ. ತೀರಾ ಮಲೆನಾಡಿನಂಥಾ ಹಳ್ಳಿ ಮೂಲೆಗಳಿಗೂ ಆ ಜಾಲ ಹಬ್ಬಿಕೊಂಡಿದೆ. ಅಷ್ಟಕ್ಕೂ ಈ ಗಾಂಜಾ ಚಟ ಅಂಟಿಕೊಳ್ಳಲು ದೊಡ್ಡ ಕಾರಣವೇ ಬೇಕಿಲ್ಲ. ಆ ಕ್ಷಣದ ಡಿಪ್ರೆಷನ್, ಲವ್ ಫೇಲ್ಯೂರಿನಂಥಾ ಕಾಮನ್ ಸಮಸ್ಯೆಗಳೂ ಕೂಡಾ ಡ್ರಗ್ಸ್ ಜಾಲದ ವಿಸ್ತರಣೆಯ ಸರಕುಗಳೇ. ಅಂಥಾ ತೊಳಲಾಟದಲ್ಲಿರುವ ವಿದ್ಯಾರ್ಥಿಗಳ ಕೈಯಳತೆಯಲ್ಲಿಯೇ ಡ್ರಗ್ಸ್ ಜಾಲ ಕಾರ್ಯ ನಿರ್ವಹಿಸುತ್ತಿದೆ. ಆದರೆ ಅದನ್ನು ಹತ್ತಿಕ್ಕುವಂಥಾ ಪರಿಣಾಮಕಾರಿ ಮಾರ್ಗಗಳನ್ನು ಅದೇಕೋ ಪೊಲೀಸರು ಹುಡುಕುತ್ತಿಲ್ಲ.

ಪೊಲೀಸರ ಮೇಲೆ ಡ್ರಗ್ಸ್ ವಿಚಾರವಾಗಿ ಆರೋಪಗಳು ಕೇಳಿ ಬಂದಾಗೆಲ್ಲ, ಅವರು ತಾವು ಹಿಡಿದಿರುವ ಕೇಸುಗಳ ಸಂಖ್ಯೆಯನ್ನು ಎತ್ತಿ ಹಿಡಿಯುತ್ತಾರೆ. ಕಳೆದ ಮೂರು ವರ್ಷಗಳಲ್ದಲಿ ಹತ್ತತ್ತಿರ ಹನ್ನೆರಡು ಸಾವಿರದಷ್ಟು ಡ್ರಗ್ಸ್ ಕೇಸುಗಳು ನಮ್ಮ ರಾಜ್ಯದಲ್ಲಿಯೇ ಪತ್ತೆಯಾಗಿವೆ ಎಂದರೆ ಯಾರಿಗಾದರೂ ಅಚ್ಚರಿಯಾಗದಿರೋದಿಲ್ಲ. ಅರೇ ಪೊಲೀಸರು ಇಷ್ಟೊಂದು ಆಕ್ಟೀವ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರಲ್ಲಾ ಅನ್ನೋ ಮೆಚ್ಚುಗೆಯೂ ಮೂಡಿಕೊಳ್ಳಬಹುದು. ಆದರೆ ಈ ಅಂಕಿಅಂಶ ಪೊಲೀಸ್ ಇಲಾಖೆಯ ಗಟ್ಟಿತನವನ್ನು ಸಾರುತ್ತಿಲ್ಲ. ಬದಲಾಗಿ ವೈಫಲ್ಯವನ್ನು ಎತ್ತಿ ತೋರಿಸುತ್ತಿವೆ. ಯಾಕೆಂದರೆ, ಮೂರು ವರ್ಷಗಳಲ್ಲಿ ದಾಖಲಾಗಿರುವ ಈ ಪರಿಯ ಕೇಸುಗಳು ಡ್ರಗ್ಸ್ ಮಾಫಿಯಾ ಕರುನಾಡನ್ನು ವ್ಯಾಪಕವಾಗಿ ಆವರಿಸಿಕೊಂಡಿರೋದಕ್ಕೆ ಸ್ಪಷ್ಟ ಸಾಕ್ಷಿ.

ಇಂಥಾ ಪ್ರಕರಣಗಳಲ್ಲಿ ಹಾದಿ ಬೀದಿಗಳಲ್ಲಿ ಡ್ರಗ್ಸ್ ಮಾರಾಟ ಮಾಡುವವರನ್ನು ಬಂಧಿಸಲಾಗುತ್ತದೆ. ಆದರೆ ಅವರಿಗೆ ಅಂತಾರಾಜ್ಯಗಳಿಂದ ನಶೆ ತುಂಬಿ ಕಳಿಸುವ ಜಾಲವಾನ್ನು ಮಟ್ಟ ಹಾಕುವತ್ತ ಗಂಭೀರವಾದ ಪ್ರಯತ್ನಗಳು ನಡೆಯುತ್ತಿಲ್ಲ. ಹಾಗೊಂದು ವೇಳೆ ಅದು ನಡೆದಿದ್ದರೆ ಖಂಡಿತವಾಗಿಯೂ ಕರುನಾಡಿನ ತುಂಬೆಲ್ಲ ಡ್ರಗ್ಸ್ ಕಮಟು ಹಬ್ಬಿಕೊಳ್ಳುತ್ತಿರಲಿಲ್ಲ. ವಿಷಾಧನೀಯ ಸಂಗತಿಯೆಂದರೆ ಸರ್ಕಾರಗಳೂ ಕೂಡಾ ಡ್ರಗ್ಸ್ ಮಾಫಿಯಾ ತಡೆಗೆ ಪರಿಣಾಮಕಾರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಬಿದ್ದ ನಶೆಯ ದಾಸರನ್ನು ವಿಮುಕ್ತಿಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ನಗೆಪಾಟಲಿನ ಸಂಗತಿಗಳನ್ನು ಸರ್ಕಾರಗಳು ಹರಿಯ ಬಿಡುತ್ತಿವೆ. ಆದರೆ ನಶೆ ಹಬ್ಬಿಸುವ ಜಾಲವನ್ನು ಹೆಡೆಮುರಿ ಕಟ್ಟದ ಹೊರತು ನಶೆಗೆ ದಾಸರಾಗುವುದನ್ನು ತಡೆಯಲಾಗೋದಿಲ್ಲ ಎಂಬ ಕನಿಷ್ಟ ಕಾಮನ್‌ಸೆನ್ಸ್ ಕೂಡಾ ಈ ಸರ್ಕಾರಗಳಿಗೆ ಇದ್ದಂತಿಲ್ಲ!

ಈವತ್ತಿಗೂ ನಾನಾ ರಾಜ್ಯಗಳ ಗಡಿಯಿಂದ ಕೇಜಿಗಟ್ಟಲೆ ಡ್ರಗ್ಸ್ ಕರ್ನಾಟಕಕ್ಕೆ ಹರಿದು ಬರುತ್ತಿದೆ. ಇದು ಇಡೀ ಸಮಾಜವನ್ನೇ ನಾಮಾವಶೇಷ ಮಾಡುವ ದುಷ್ಟ ದಂಧೆ. ಈ ಬಗ್ಗೆ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಈ ಕೂಡಲೆ ಕ್ರಮ ಕೈಗೊಳ್ಳಬೇಕಿದೆ. ಸಿನಿಮಾ ನಟ ನಟಿಯರನ್ನು ಬಂಧಿಸಿ ಡೌಲು ತೋರಿಸೋದನ್ನು ಬಿಟ್ಟು ನಮ್ಮ ಮಕ್ಕಳು ಮರಿಗಳನ್ನು ಈ ಮಾಫಿಯಾದ ಕಪಿಮುಷ್ಟಿಗೆ ಸಿಗದಂತೆ ಕಾಪಾಡುವ ಕೆಲಸ ತುರ್ತಾಗಿ ಆಗಬೇಕಿದೆ. ಇದು ಕೇವಲ ಬೆಂಗಳೂರಿನಲ್ಲಿ ಜಾರಿಗೆ ಬಂದರೆ ಸಾಲದು. ಗಾಂಜಾ ಮಾಫಿಯಾವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದ ಪ್ರತೀ ಹಳ್ಳಿಗಳಲ್ಲಿಯೂ ಸಮರೋಪಾದಿಯಲ್ಲಿ ನಡೆಯಬೇಕಿದೆ. ಗೃಹ ಸಚಿವ ಅರಗ ಜ್ಞಾನೇಂದ್ರರ ತವರಾದ ತೀರ್ಥಹಳ್ಳಿ ಸಾಗರ ಮುಂತಾದೆಡೆಗಳಲ್ಲಿಯೇ ಮಂದಿ ಗಾಂಜಾ ವಶವಾಗಿದ್ದಾರೆ. ಅವರು ಈ ದಂಧೆಯನ್ನು ತಡೆಗಟ್ಟಲು ಒಂದಿಡೀ ಪೊಲೀಸ್ ಇಲಾಖೆಯನ್ನೇ ಸನ್ನದ್ಧಗೊಳಿಸಬೇಕಿದೆ.

#bengaluru #drugs mafia #karnataka #prathap reddy
Share. Facebook Twitter Email Telegram WhatsApp
Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

Related Posts

ಕ್ರೈಂ

ಹಬ್ಬಿಕೊಂಡಿರೋ ನಶೆಗೆ ಕೋಟಿ ರೊಕ್ಕದ ನಂಟು!

26/03/2023By Santhosh Bagilagadde
ಕ್ರೈಂ

ನಶೆಯ ಜಾಡು ಹಿಡಿದ ಖಾಕಿ ಪಡೆ!

06/03/2023By Santhosh Bagilagadde
ಕ್ರೈಂ

ಚಾಣಾಕ್ಷ ಡ್ರಗ್ಸ್ ಡಾನ್ ಒಬ್ಬನ ರೋಚಕ ಕಥೆ!

06/02/2023By Santhosh Bagilagadde
ಶೋಧಿಸಿ
Quick Bytes
ಕವರ್ ಸ್ಟೋರಿ

ಕಾಂಗ್ರೆಸ್‍ಗೆ ದೇವೇಗೌಡ, ಯಡ್ಡಿ ಪಟಾಲಮ್ಮಿನ ಸಾಥ್?

By Santhosh Bagilagadde27/03/2023
ಕವರ್ ಸ್ಟೋರಿ

ಬೆಂಕಿ ಹಚ್ಚಲು ಎಷ್ಟೊಂದು ದಾರಿ!

By Santhosh Bagilagadde27/03/2023
ಸಿನಿಶೋಧ

ಇಂಗ್ಲಿಷ್ ರಮ್ಯಾ ಮೇಲೆ ಪ್ರೇಕ್ಷಕರ ಮುನಿಸು!

By Santhosh Bagilagadde27/03/2023
ಕವರ್ ಸ್ಟೋರಿ

ಲಿಂಗಾಯತ ಮತಗಳನ್ನ ಸೆಳೆಯಲು ಕಾಂಗ್ರೆಸ್ ಕಸರತ್ತು!

By Santhosh Bagilagadde26/03/2023
ಕ್ರೈಂ

ಹಬ್ಬಿಕೊಂಡಿರೋ ನಶೆಗೆ ಕೋಟಿ ರೊಕ್ಕದ ನಂಟು!

By Santhosh Bagilagadde26/03/2023
ರಾಜ್ಯ

ಅಬ್ಬರಿಸಿ ಬೊಬ್ಬಿರಿದವನು ಅಪ್ಪಾ ಅಂದ!

By Santhosh Bagilagadde26/03/2023
ಶೋಧ ನ್ಯೂಸ್ ಸೋಷಿಯಲ್ ಮೀಡಿಯಾ
  • Facebook
  • Twitter
  • YouTube
  • WhatsApp
ನಮ್ಮ ಬಗ್ಗೆ..
ನಮ್ಮ ಬಗ್ಗೆ..

ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

All Rights Reserved by dreamwings media
Email: dreamwingsmedia@gmail.com

ಕವರ್ ಸ್ಟೋರಿ
ಕವರ್ ಸ್ಟೋರಿ

ಕಾಂಗ್ರೆಸ್‍ಗೆ ದೇವೇಗೌಡ, ಯಡ್ಡಿ ಪಟಾಲಮ್ಮಿನ ಸಾಥ್?

By Santhosh Bagilagadde27/03/2023

ಪ್ರದ್ಮನಾಭ ನಗರದ ದಿಕ್ಕಿನಲ್ಲಿ ರಾಜಕೀಯ ಸಂಚಲನ! ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹಿತವಾಗಿದೆ. ಇದೀಗ ಯಾವ ಕ್ಷೇತ್ರದಿಂದ ಯಾರು ಕಣಕ್ಕಿಳಿಯುತ್ತಾರೆ, ಯಾವ…

ಕವರ್ ಸ್ಟೋರಿ

ಬೆಂಕಿ ಹಚ್ಚಲು ಎಷ್ಟೊಂದು ದಾರಿ!

27/03/2023By Santhosh Bagilagadde
ಸಿನಿಶೋಧ

ಇಂಗ್ಲಿಷ್ ರಮ್ಯಾ ಮೇಲೆ ಪ್ರೇಕ್ಷಕರ ಮುನಿಸು!

27/03/2023By Santhosh Bagilagadde
ಕವರ್ ಸ್ಟೋರಿ

ಲಿಂಗಾಯತ ಮತಗಳನ್ನ ಸೆಳೆಯಲು ಕಾಂಗ್ರೆಸ್ ಕಸರತ್ತು!

26/03/2023By Santhosh Bagilagadde
ಕ್ರೈಂ

ಹಬ್ಬಿಕೊಂಡಿರೋ ನಶೆಗೆ ಕೋಟಿ ರೊಕ್ಕದ ನಂಟು!

26/03/2023By Santhosh Bagilagadde
ಟಾಪ್ 10 ಸುದ್ಧಿಗಳು
  • ಭಟ್ಟರ ಗರಡಿಯ ಪ್ರತಿಭೆ ಪ್ರವೀಣ್ ಈಗ ಸ್ವತಂತ್ರ ನಿರ್ದೇಶಕ! (557)
  • ಸೆಕ್ಸ್ ಎಂಬುದು ನಿಷೆಧಿತ ವಿಷಯ ಅಂದ್ರು ವರ್ಮಾ! (415)
  • ಕರಾವಳಿ ಕಥೆ ಕಣ್ಮುಂದೆ ಬರಲು ಕ್ಷಣಗಣನೆ! (335)
  • ಹೊಸತನ ಮೆತ್ತಿಕೊಂಡ ಮೈಥಾಲಾಜಿಕಲ್ ಥ್ರಿಲ್ಲರ್ ಚಿತ್ರ! (300)
  • ಮನಸಿಗೆ ತಾಕುವ ಕಥೆಗೆ ಹಳ್ಳಿ ಸೊಗಡಿನ ಸಾಥ್! (277)
  • ಕನ್ನಡಕ್ಕೆ ದಕ್ಕಿದ ಕನಸುಗಾರ ನಿರ್ಮಾಪಕ! (271)
  • ಮತ್ತೆ ಮಹಿಳಾ ಕೇಂದ್ರಿತ ಕಥೆಯ ಮಾರ್ಧನಿ! (206)
  • ಒಂದೊಳ್ಳೇ ಚಿತ್ರವನ್ನು ಪ್ರೇಕ್ಷಕರೇ ಗೆಲ್ಲಿಸಿದರು ನೋಡಿ! (173)
  • ಕಡಲ ತೀರದ ಭಾರ್ಗವ ಚಿತ್ರದಲ್ಲಿದೆ ಖಡಕ್ ಪಾತ್ರ! (135)
  • ಮಗಳು ಜಾನಕಿಯ ಚಂದು ಭಾರ್ಗಿ ನಿರ್ಗಮನ! (126)
News Archives

Archives

  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
Facebook Twitter YouTube RSS
  • Home
  • About us
  • Terms of Service
  • Privacy Policy
  • Sitemap
  • Get In Touch
Copyrights © 2019 - 23, All Rights Reserved by Dreamwings Media. | Developed and Maintained by: DIGICUBE SOLUTIONS

Type above and press Enter to search. Press Esc to cancel.