ಪ್ರದೇಶದಿಂದ ಪ್ರದೇಶಕ್ಕೆ ಜೀವನಕ್ರಮ, ಸಂಪ್ರದಾಯಗಳು ಬದಲಾಗೋದು ಮಾಮೂಲು. ಹಾಗಿದ್ದ ಮೇಲೆ ದೇಶದಿಂದ ದೇಶಕ್ಕೆ ಅದರಲ್ಲಿ ಅಜಗಜಾಂತರ ವ್ಯತ್ಯಾಸಗಳಿರುತ್ತವೆ. ಇಂಥಾ ಒಂದಷ್ಟು ರೀತಿ ರಿವಾಜು ನಂಬಿಕೆಗಳಲ್ಲಿ ಸಾಮ್ಯತೆಗಳಿದ್ದರೂ ಮತ್ತೊಂದಷ್ಟು ಆಯಾ ದೇಶಕ್ಕೆ ಮಾತ್ರವೇ ಸೀಮಿತವಾಗಿರುತ್ತವೆ. ಚೀನಾದಲ್ಲಿ ಸಾವಿರಾರು ವರ್ಷಗಳಿಂದಲೂ ಚಾಲ್ತಿಯಲ್ಲಿದ್ದು, ಇತ್ತೀಚೆಗೆ ನಿಶೇಧಕ್ಕೊಳಪಟ್ಟಿರೋ ಒಂದು ವಿಲಕ್ಷಣ ಸಂಪ್ರದಾಯವೂ ಆ ಸಾಲಿಗೆ ಸೇರುವಂತಿದೆ.
ಚೀನಾದ ಹಲವಾರು ಸಂಪ್ರದಾಯಗಳು, ಪ್ರಾಕೃತಿಕ ವಾತಾವರಣ, ಕೃಷಿ ಚಟುವಟಿಕೆ ಮುಂತಾದವುಗಳೆಲ್ಲವೂ ಭಾರತಕ್ಕೆ ಹೋಲಿಕೆಯಾಗುವಂತಿವೆ. ಆದರೆ ಈಗ ಹೇಳಹೊರಟಿರೋ ವಿಚಾರ ಮಾತ್ರ ಯಾವ ದೇಶಗಳೊಂದಿಗೂ ಹೋಲಿಕೆಯಾಗಲು ಸಾಧ್ಯವೇ ಇಲ್ಲದಂಥಾದ್ದು. ಚೀನಾದ ಒಂದಷ್ಟು ಪ್ರದೇಶಗಳಲ್ಲಿ ಹೆಣ್ಣು ಮಕ್ಕಳ ಪಾದಗಳನ್ನು ಪುಟ್ಟದಾಗಿರುವಂತೆ ನೋಡಿಕೊಳ್ಳಲಾಗುತ್ತಿತ್ತಂತೆ. ಹೆಣ್ಣು ಮಕ್ಕಳಿಗೆ ಪಾದ ಚಿಕ್ಕದಾಗಿದ್ದರೆ ಸೌಂದರ್ಯಕ್ಕೆ ಹೊಸಾ ಮೆರುಗು ಸಿಗುತ್ತದೆಂಬುದು ಈ ನಂಬಿಕೆಯ ತಳಹದಿಯಾಗಿತ್ತು.
ಹೆಣ್ಣು ಮಕ್ಕಳ ಪಾದ ಬೆಳೆಯುತ್ತಾ ಬಂದಂತೆ ಏನಿಲ್ಲವೆಂದರೂ ಐದಾರು ಇಂಚುಗಳಷ್ಟು ಬೆಳೆಯುತ್ತದೆ. ಆದರೆ ಚೀನೀಯರಿಗೆ ಅಷ್ಟು ದೊಡ್ಡದಾಗಿ ಹೆಣ್ಣು ಮಕ್ಕಳ ಪಾದ ಬೆಳೆಯೋದು ಅಸಹ್ಯದಂತೆ ಕಾಣಿಸುತ್ತಿತ್ತಂತೆ. ಆದ್ದರಿಂದಲೇ ಚಿಕ್ಕಂದಿನಿಂದಲೇ ಹೆಣ್ಣುಮಕ್ಕಳ ಪಾದಗಳಿಗೆ ಟೈಟ್ ಆಗಿ ಬ್ಯಾಂಡೇಜು ಸುತ್ತಿ ಹಲವಾರು ವರ್ಷಗಳ ಕಾಲ ಅವು ಬೆಳೆಯದಂತೆ ನೋಡಿಕೊಳ್ಳಲಾಗುತ್ತಿತ್ತಂತೆ. ಕೆಲವೊಮ್ಮೆ ಮೂಳೆ ಮುರಿತ ಸಂಭವಿಸಿ, ಕೆಲವರಿಗೆ ಸೆಫ್ಟಿಕ್ ಆಗಿ ನಾನಾ ಬಾಧೆ ಅನುಭವಿಸುವಂತಾಗುತ್ತಿತ್ತಂತೆ. ಆದರೂ ಕೂಡಾ ಆ ಸಂಪ್ರದಾಯ ಸಾವಿರಾರು ವರ್ಷಗಳಿಂದ ಚಾಲ್ತಿಯಲ್ಲಿತ್ತು. ಇತ್ತೀಚೆಗೆ ಅದರಿಂದಾಗೋ ಹಿಂಸೆಯನ್ನು ಮನಗಂಡು, ಹೋರಾಟ ನಡೆದ ಫಲವಾಗಿ ಈ ಸಂಪ್ರದಾಯ ನಿಶೇಧಕ್ಕೊಳಪಟ್ಟಿದೆಯಂತೆ.