ಕನ್ನಡ ಚಿತ್ರರಂಗದ ಮಟ್ಟಿಗಿದು ಹೊಸಾ ಅನ್ವೇಷಣೆಯ ಪರ್ವ ಕಾಲ. ಅದಾಗಲೇ ಆ ದಿಸೆಯಲ್ಲಿ ತಯಾರುಗೊಂಡಿರುವ ಒಂದಷ್ಟು ಸಿನಿಮಾಗಳು ತೆರೆಗಾಣಲು ಸಜ್ಜಾಗಿವೆ. ಮತ್ತೊಂದಷ್ಟು ಸಿನಿಮಾಗಳು ಕೊರೋನಾ ಕಂಟಕದಿಂದ ಸಾಕಷ್ಟು ಪಡಿಪಾಟಲು ಪಟ್ಟು, ಎಲ್ಲ ಸವಾಲುಗಳನ್ನೂ ಮೀರಿಕೊಂಡು, ಸಾವರಿಸಿಕೊಂಡು ಇದೀಗ ಸಿನಿಮಾ ಮಂದಿರಗಳತ್ತ ಮುಖ ಮಾಡಿವೆ. ಅಂಥಾ ಸಿನಿಮಾಗಳಲ್ಲಿ ನಿಸ್ಸಂದೇಹವಾಗಿಯೂ `ನಾಕು ಮುಖ’ ಸೇರಿಕೊಳ್ಳುತ್ತದೆ. ಪ್ರತಿಭಾನ್ವಿತರಾದ ಕುಶನ್ ಗೌಡ ನಿರ್ದೇಶನ ಮಾಡಿ ನಟಿಸಿರುವ ಈ ಸಿನಿಮಾ ನಿಮ್ಮ ಮುಂದೆ ಅವತರಿಸಲು ಕೆಲವೇ ಘಂಟೆಗಳು ಮಾತ್ರವೇ ಬಾಕಿ ಉಳಿದುಕೊಂಡಿವೆ. ಹಾಗೆ ನೋಡಿದರೆ, ಕಲಾ ಜಗತ್ತಿನ ಒಂದೊಂದು ವಿಭಾಗಗಳಲ್ಲಿ ಪಳಗಿಕೊಳ್ಳುವುದೇ ಕಷ್ಟ. ಅದನ್ನು ನಿಭಾಯಿಸುವುದೂ ಕೂಡಾ ತ್ರಾಸದಾಯಕ ಕೆಲಸ. ಅಂಥಾದ್ದರಲ್ಲಿ ಬರವಣಿಗೆ, ನಿರ್ದೇಶನ ಮತ್ತು ನಟನೆಗೂ ರೆಡಿ ಅಂತ ನಿಂತು ಬಿಡುವುದೊಂದು ದುಃಸ್ಸಾಹಸ. ಅದು ಕೆಲವೇ ಕೆಲ ಮಂದಿಗೆ ಮಾತ್ರವೇ ಸಾಧ್ಯವಾಗುತ್ತೆ. ಸಿಕ್ಕ ಸಿಕ್ಕವ ತಲೆ ಸವರಿ ಅವರಿಂದ ಟ್ರಿಮ್ ಮಾಡಿಸಿಕೊಂಡು ಕಥೆಗಾರರೆನ್ನಿಸಿಕೊಳ್ಳುವ ತಲುಬು ಹೊಂದಿರುವವರು, ಬರಹಗಾರ ಅನ್ನಿಸಿಕೊಳ್ಳುವ ಹುಚ್ಚಿರುವವರು ಮತ್ತು ನಿರ್ದೇಶನದ ಕನಸು ಕಾಣುವವರು ಗಾಂಧಿನಗರದ…
Author: Santhosh Bagilagadde
ಹದಿಹರೆಯದ ತಲ್ಲಣಗಳನ್ನು ಪಕ್ಕಾ ಬೋಲ್ಡ್ ಆಗಿ ದಾಖಲಿಸೋದರಲ್ಲಿ ನಿರ್ದೇಶಕ ಯೋಗರಾಜ ಭಟ್ ಅವರದ್ದು ಎತ್ತಿದ ಕೈ. ಭಾವ ತೀವ್ರತೆಯನ್ನೂ ಕೂಡಾ ಭೋಳೇ ಶೈಲಿಯಲ್ಲಿ ದಾಟಿಸಬಲ್ಲ ಚಾಕಚಕ್ಯತೆಯೇ ಅವರ ಗೆಲುವಿನ ಗುಟ್ಟೆಂದರೂ ಅತಿಶಯವೇನಲ್ಲ. ಅಂಥಾ ಯೋಗರಾಜ್ ಭಟ್ `ಪದವಿಪೂರ್ವ’ ಎಂಬ ಶೀರ್ಷಿಕೆಯಿಟ್ಟುಕೊಂಡು ನಿರ್ಮಾಣಕ್ಕಿಳಿದಾಗ ತಾನೇ ತಾನಾಗಿ ಅದರತ್ತ ಪ್ರೇಕ್ಷಕರ ಗಮನ ಕೇಂದ್ರೀಕರಿಸಿತ್ತು. ಆರಂಭದಲ್ಲೇ ಸುದ್ದಿಯಾಗುತ್ತಾ, ಹೆಜ್ಜೆ ಹನೆಜ್ಜೆಯಲ್ಲೂ ನಿರೀಕ್ಷೆ ಮೂಡಿಸಿದ್ದ ಈ ಚಿತ್ರ ಕಳೆದ ವರ್ಷದ ಕಡೇಯ ಭಾಗದಲ್ಲಿ ಬಿಡುಗಡೆಗೊಂಡಿತ್ತು. ಒಂದಷ್ಟು ನಿರೀಕ್ಷೆಯನ್ನೂ ಮೂಡಿಸಿತ್ತು. ಇದೀಗ ಪದವಿ ಪೂರ್ವ ಚಿತ್ರ ಸನ್ ನೆಕ್ಸ್ಟ್ ಮೂಲಕ ಓಟಿಟಿಗೆ ಲಗ್ಗೆಯಿಡುತ್ತಿದೆ! ಇದೇ ಮಾರ್ಚ್ ಮೂರನೇ ತಾರೀಕಿನಿಂದ ಪದವಿ ಪೂರ್ವ ಚಿತ್ರ ಸನ್ ನೆಕ್ಸ್ಟ್ ಓಟಿಟಿ ಪ್ಲಾಟ್‍ಫಾರ್ಮಿನಲ್ಲಿ ಪ್ರದರ್ಶನ ಶುರು ಮಾಡಲಿದೆ. ಇಲ್ಲಿಯೂ ಕೂಡಾ ಪ್ರೇಕ್ಷಕರ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಮೂಡಿಕೊಳ್ಳುವ ನಿರೀಕ್ಷೆ ಚಿತ್ರ ತಂಡದಲ್ಲಿದೆ. ಸಿನಿಮಾದಿಂದ ಸಿನಿಮಾಕ್ಕೆ ಹೊಸಾ ಕಾನ್ಸೆಪ್ಟುಗಳೊಂದಿಗೆ ಎದುರಾಗುವ ಯೋಗರಾಜ್ ಭಟ್, ನಿರ್ಮಾಪಕರಾಗಿ ಈ ಚಿತ್ರವನ್ನೂ ಕೂಡಾ ಹೊಸಾ ಬಗೆಯಲ್ಲಿ ಕಟ್ಟಿ ಕೊಟ್ಟಿದ್ದಾರೆ.…
ಕಡಲ ತೀರದ ಭಾರ್ಗವ ಚಿತ್ರ ತೆರೆಗಾಣಲು ಕ್ಷಣಗಣನೆ ಆರಂಭವಾಗಿದೆ. ಒಂದಿಡೀ ಚಿತ್ರತಂಡದ ಪರಿಶ್ರಮ ಸಾರ್ಥಕಗೊಳ್ಳುವ ಘಳಿಗೆಯೂ ಹತ್ತಿರಾಗುತ್ತಿದೆ. ಈ ಹೊತ್ತಿನಲ್ಲಿ ಕಡಲ ತೀರದ ಭಾರ್ಗವನ ಒಡಲಲ್ಲಿರಬಹುದಾದ ಕಥೆಗಳು, ಆ ಬಿಂದುವಿನಿಂದ ಗರಿಗೆದರಿಕೊಳ್ಳಲಿರೋ ಪಾತ್ರಗಳ ಸುತ್ತಾ ಒಂದಷ್ಟು ಚರ್ಚೆಗಳಾಗುತ್ತಿವೆ. ಐದು ಬಹುಮುಖ್ಯ ಪಾತ್ರಗಳ ಸುತ್ತ ಸುತ್ತುವ, ರೋಚಕ ತಿರುವುಗಳನ್ನು ಹೊಂದಿರುವ ಈ ಸಿನಿಮಾದಲ್ಲಿ ರಂಗಭೂಮಿಯಲ್ಲಿ ಹದಗೊಂಡಿರುವ ಅಪರೂಪದ ಪ್ರತಿಭೆ ರಾಘವ್ ನಾಗರಾಜ್ ಕೂಡಾ ಒಂದು ಪಾತ್ರವಾಗಿದ್ದಾರೆ. ಆ ಪಾತ್ರವೇ ತನ್ನ ವೃತ್ತಿ ಬದುಕಿಗೆ ಹೊಸಾ ದಿಕ್ಕು ತೋರಲಿದೆಯೆಂಬಂಥಾ ಗಾಢ ನಂಬುಗೆಯೂ ಅವರಲ್ಲಿದೆ. ಇದು ಪನ್ನಗ ಸೋಮಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಈಗಾಗಲೇ ಟೀಸರ್, ಟ್ರೈಲರ್ ಮೂಲಕ ಇದರ ಕಸುವೇನೆಂಬುದರ ಸ್ಪಷ್ಟ ಸೂಚನೆಗಳು ಸಿಕ್ಕಿವೆ. ಅದರ ಮೂಲಕವೇ ಒಂದಷ್ಟು ಪಾತ್ರಗಳ ಚಹರೆಗಳೂ ಗೋಚರಿಸಿವೆ. ಅದರಲ್ಲಿ ರಾಘವ್ ನಾಗರಾಜ್ ನಟಿಸಿರುವ ಪಾತ್ರವೂ ಸೇರಿಕೊಂಡಿದೆ. ಈಗಾಗಲೇ ಹಲವಾರು ಸೀರಿಯಲ್ಲುಗಳಲ್ಲಿ ನಟಿಸಿ, ನಾಯಕರಾಗಿಯೂ ನೆಲೆ ಕಂಡುಕೊಳ್ಳುವ ಸನ್ನಾಹದಲ್ಲಿರುವವರು ರಾಘವ್. ಸಾಮಾನ್ಯವಾಗಿ, ರಂಗಭೂಮಿಯ ಹಿನ್ನೆಲೆಯಿಂದ ಬಂದವರಿಗೆ ಎಂಥಾ ಪಾತ್ರವನ್ನಾದರೂ…
ಒಂದು ಕಡೆಯಿಂದ ಪ್ಯಾನಿಂಡಿಯಾ ಸಿನಿಮಾಗಳ ಹಂಗಾಮಾ ಚಾಲ್ತಿಯಲ್ಲಿರುವಾಗಲೇ, ಮತ್ತೊಂದು ದಿಕ್ಕಿನಿಂದ ಹಲವು ಬಗೆಯ ಪ್ರಯತ್ನಗಳು ಚಾಲ್ತಿಯಲ್ಲಿವೆ. ಅಂಥಾ ಪ್ರಯತ್ನಗಳ ಸಾಲಿನಲ್ಲಿ ನೆಲ ಮೂಲದ ಕಥೆಗಳು, ನಾನಾ ಭಾಗಗಳಲ್ಲಿ ಜರುಗಿದ್ದ ಸತ್ಯ ಘಟನೆಗಳೂ ಕೂಡಾ ಸಿನಿಮಾ ಫ್ರೇಮಿನಲ್ಲಿ ನಸುನಗಲಾರಂಭಿಸಿವೆ. ಅಂಥಾ ಸಿನಿಮಾಗಳ ಪೈಕಿ ಇದೀಗ ಬಿಡುಗಡೆಗೆ ಸಜ್ಜುಗೊಂಡಿರುವ `1 ರಾಬರಿ ಕಥೆ’ಯೂ ಸೇರಿಕೊಂಡಿದೆ. ಶೀರ್ಷಿಕೆಯಲ್ಲಿಯೇ ಕಥೆಯ ಜೀವಾಳದ ಸುಳಿವನ್ನು ಅಡಗಿಸಿಕೊಂಡಿರುವ ಈ ಸಿನಿಮಾದ ಜಬರ್ಧಸ್ತಾದ ವೀಡಿಯೋ ಸಾಂಗ್ ಒಂದೀಗ ಬಿಡುಗಡೆಗೊಂಡಿದೆ! ಈ ಲೂಟಿ ಸಾಂಗ್ ದಿವ್ಯ ರಾಮಚಂದ್ರ ಮತ್ತು ಹರ್ಷ ಉಪ್ಪಾರರ ಧ್ವನಿಯಲ್ಲಿ ಮೂಡಿ ಬಂದಿದೆ. ಈ ಸಿನಿಮಾದ ನಿರ್ದೇಶಕರಾದ ಗೋಪಾಲ್ ಹಳ್ಳೇರ್ ಹೊನ್ನಾವರ ಸದರಿ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ಅದು ನಾಟಿ ಶೈಲಿಯ ಶ್ರೀವತ್ಸರ ಸಂಗೀತ ಸ್ಪರ್ಶದೊಂದಿಗೆ ಪ್ರೇಕ್ಷಕರನ್ನು ಮುಟ್ಟಿದೆ. ಒಂದಷ್ಟು ಒಳ್ಳೆ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿರುವ ಈ ಹಾಡಿನ ಮೂಲಕ 1 ರಾಬರಿ ಕಥೆಯತ್ತ ಪ್ರೇಕ್ಷಕರ ಚಿತ್ತ ಕೀಲಿಸಿಕೊಂಡಿದೆ. ನಾಯಕ ನಾಯಕಿಯರಾದ ರಣಧೀರ್ ಗೌಡ ಮತ್ತು ರಿಷ್ವ್ವಿ ಭಟ್ ಮಾದಕವಾಗಿ ಹೆಜ್ಜೆ…
ಯಾವುದೋ ಘಳಿಗೆಯಲ್ಲಿ ಹೆಗಲೇರಿಕೊಂಡು, ಸಂಪೂರ್ಣವಾಗಿ ಆವರಿಸಕೊಳ್ಳುವ ಚಟಗಳು ಕೊಂಚ ಯಾಮಾರಿದರೂ ಜೀವಕ್ಕೇ ಕಂಟಕವಾಗಿ ಬಿಡುತ್ತವೆ. ಮೊದ ಮೊದಲು ಯಾವುದೋ ದುಃಖಕ್ಕೆ, ಹಳವಂಡಕ್ಕೆ, ಹತಾಶೆಗೆ ಸಾಥ್ ಕೊಡುವಂತೆ ಕಾಣಿಸೋ ಇಂಥಾ ಚಟಗಳೇ ಬದುಕನ್ನ ಆಪೋಶನ ತೆಗೆದುಕೊಂಡ ದಂಡಿ ದಂಡಿ ಉದಾಹರಣೆಗಳಿದ್ದಾವೆ. ಅದರಲ್ಲಿಯೂ ನಶೆಯ ಉತ್ತುಂಗದ ಸ್ಥಿತಿ ತಲುಪಿಸೋ ಗಾಂಜಾ ಗುಂಗು ಹತ್ತಿಕೊಂಡಂರಂತೂ ಬದುಕು ಲಯ ತಪ್ಪಿತೆಂದೇ ಅರ್ಥ. ಹಾಗೆ ಗಾಂಜಾ ನಶೆಯ ನಂಟು ಬೆಳೆಸಿಕೊಂಡವರೆಲ್ಲ ಬೆಚ್ಚಿ ಬೀಳುವಂಥಾ ಸಂಶೋಧನಾ ವರದಿಯೊಂದೀಗ ಜಾಹೀರಾಗಿದೆ! ಇಂಥಾದ್ದೊಂದು ವರದಿಯನ್ನು ಬಹುಕಾಲದ ಸಂಶೋಧನೆಯ ನಂತರ ಹೊರಗೆಡವಿರೋದು ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ತಂಡ. ಇದರ ನೆರಳಿನಲ್ಲಿ ಹತ್ತಾರು ಮಂದಿ ತಜ್ಞರು ವರ್ಷಾಂತರಗಳ ಕಾಲ ವಿಸ್ತøತವಾದ ಅಧ್ಯಯನ ನಡೆಸಿದ್ದರು. ಆ ಅಧ್ಯಯನಗಳ ಕೇಂದ್ರ ಬಿಂದುವಾಗಿದ್ದದ್ದು ಗಾಂಜಾ ಸೇವನೆ ಮನುಷ್ಯನ ದೇಹದ ಮೇಲೆ ಬೀರುವಂಥಾ ವ್ಯತಿರಿಕ್ತ ಪರಿಣಾಮಗಳ ಕುರಿತಾಗಿತ್ತು. ಇದರ ಫಲವಾಗಿಯೇ ಅವರು ಭೀಕರ ಸತ್ಯವೊಂದನ್ನು ಕಂಡುಕೊಂಡಿದ್ದರೆ. ಅದರ ಪ್ರಕಾರವಾಗಿ ಹೇಳುವುದಾದರೆ, ನಿಯಮಿತವಾಗಿ ಗಾಂಜಾ ಸೇವಿಸೋದರಿಂದ ನಾನಾ ಅನಾರೋಗ್ಯಗಳು ಉಂಟಾಗುತ್ತವೆ. ಅಂಥವರು…
ಅತ್ಯಂತ ಕಡಿಮೆ ಅವಧಿಯಲ್ಲಿಯೇ ಕನ್ನಡ ಚಿತ್ರರಂಗದ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿರುವವರು ರಾಜವರ್ಧನ್. ಪ್ರಸಿದ್ಧ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರರಾದ ರಾಜವರ್ಧನ್, ದೊಡ್ಡ ಮಟ್ಟದಲ್ಲಿ ಹೆಸರು ಸಂಪಾದಿಸಿರುವುದು ತನ್ನೊಳಗಿನ ನಟನೆಯ ಕಸುವಿನಿಂದಲೇ. ತಾನು ನಟಿಸುವ ಒಂದೊಂದು ಸಿನಿಮಾಗಳೂ ಸಂಚಲನ ಸೃಷ್ಟಿಸುವಂತಿರಬೇಕು, ಚಾಲೆಂಜಿಂಗ್ ಅನ್ನುಸುವಂಥಾ ಪಾತ್ರಗಳೇ ಬೇಕೆಂಬ ಅಪರೂಪದ ಮನಃಸ್ಥಿತಿಯನ್ನವರು ಕಾಪಿಟ್ಟುಕೊಂಡಿದ್ದಾರೆ. ಸದ್ಯಕ್ಕೆ ಏಕಕಾಲದಲ್ಲಿಯೇ ಮೂರು ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಿರುವ ರಾಜವರ್ಧನ್, ಅದರಲ್ಲೊಂದಾಗಿರುವ `ಪ್ರಣಯಂ’ ಮೂಲಕ ಸದ್ದು ಮಾಡಲಾರಂಭಿಸಿದ್ದಾರೆ. ಇದೀಗ ಆ ಸಿನಿಮಾದ ಟೀಸರ್ ಲಾಂಚ್ ಆಗಿದೆ. ಟೀಸರ್, ಟ್ರೈಲರ್ ಮೂಲಕ ಒಂದಿಡೀ ಸಿನಿಮಾದ ಸಾರವನ್ನು ಕುತೂಹಲ ಹರಳುಗಟ್ಟುವಂತೆ ಕಟ್ಟಿ ಕೊಡೋದೊಂದು ಸಾಹಸ. ಅದನ್ನು ಸಾಧ್ಯವಾಗಿಸಿಕೊಂಡ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸಿವೆ. ಆ ಯಾದಿಯಲ್ಲಿ `ಪ್ರಣಯಂ’ ಕೂಡಾ ಸೇರಿಕೊಳ್ಳುವ ಸೂಚನೆಗಳು ದಟ್ಟವಾಗಿಯೇ ಗೋಚರಿಸಲಾರಂಭಿಸಿವೆ. ನಿಖರವಾಗಿ ಹೇಳಬೇಕೆಂದರೆ, ಈ ಟೀಸರ್ ನೋಡುಗರಲ್ಲಿ ರೋಚಕ ರೋಮಾಂಚನ ಮೂಡಿಸಿದೆ. ಶೀರ್ಷಿಕೆ ಕೇಳಿದಾಕ್ಷಣವೇ ಇದೊಂದು ಪ್ರೇಮ ಕಥೆಯ ಚಿತ್ರವೆಂಬ ಸುಳಿವು ಸಿಕ್ಕಿ ಹೋಗುತ್ತೆ. ಆದರೆ ಈ ಟೀಸರ್…
ಅದೆಂಥಾದ್ದೇ ಪರಿಸ್ಥಿತಿ ಇದ್ದರೂ ಒಂದೊಳ್ಳೆ ಚಿತ್ರಕ್ಕೆ ಸಾಥ್ ಕೊಟ್ಟೇ ಕೊಡುತ್ತಾರೆಂಬುದು ಮತ್ತೊಮ್ಮೆ ಸಾಬೀತಾಗಿದೆ; ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ `ಹೊಂದಿಸಿ ಬರೆಯಿರಿ’ ಚಿತ್ರದ ಗೆಲುವಿನ ಮೂಲಕ. ಈ ಹಿಂದೆಯೂ ಕೂಡಾ ಪರಭಾಷಾ ಚಿತ್ರಗಳ ಹಾವಳಿ ಮತ್ತು ದೊಡ್ಡ ಸಿನಿಮಾಗಳ ಭರಾಟೆಗಳ ನಡುವೆಯೂ ಪ್ರೇಕ್ಷಕರು ಭಿನ್ನ ಕಥಾನಕದ ಸಿನಿಮಾಗಳನ್ನು ಬದುಕಿಸಿದ ಉದಾಹರಣೆಗಳಿದ್ದಾವೆ. ಆ ಸಾಲಿಗೀಗ ಹೊಂದಿಸಿ ಬರೆಯಿರಿ ಚಿತ್ರವೂ ಸೇರ್ಪಡೆಗೊಂಡಿದೆ. ಬಿಡುಗಡೆಯಾದ ಮೊದಲ ವಾರದಲ್ಲಿ ಬಂದೊದಗಿದ್ದ ಸ್ಥಿತಿ ಕಂಡು ಖುದ್ದು ಚಿತ್ರತಂಡ ಕಂಗಾಲಾಗಿತ್ತು. ಆದರೆ, ನಂತರದಲ್ಲಿ ಸಿನಿಮಾ ನೋಡಿದ ಮಂದಿಯ ಸದಭಿಪ್ರಾಯಗಳು ಬಾಯಿಂದ ಬಾಯಿಗೆ ಹಬ್ಬಿಕೊಂಡು, ಮನಸುಗಳನ್ನು ಆವರಿಸಿಕೊಂಡಿವೆ. ಅದುವೇ ಚಿತ್ರಮಂದಿರಗಳನ್ನು ತುಂಬಿಸಿ, ಇದೀಗ ಹೊಂದಿಸಿ ಬರೆಯಿರಿ ಚಿತ್ರ ಇಪ್ಪತೈದನೇ ದಿನದ ಸನಿಹದಲ್ಲಿದೆ! ಫೆಬ್ರವರಿ ಹತ್ತರಂದು ಹೊಂದಿಸಿ ಬರೆಯಿರಿ ಬಿಡುಗಡೆಗೊಂಡಿತ್ತು. ಆ ಘಳಿಗೆಯಲ್ಲಿ ಚಿತ್ರತಂಡದಲ್ಲಿ ಬೇರೆಯದ್ದೇ ಥರದ ಭರವಸೆ ಇತ್ತು. ಯಾಕೆಂದರೆ, ಕನ್ನಡ ಚಿತ್ರರಂಗದ ಮಟ್ಟಿಗೆ ತುಂಬಾನೇ ಹೊಸತೆನ್ನಿಸುವಂಥಾ, ಪ್ರಯೋಗಾತ್ಮಕ ಹಾದಿಯಲ್ಲಿ ಚಿತ್ರತಂಡ ಪ್ರಚಾರ ನಡೆಸಿತ್ತು. ಅದರಲ್ಲಿ ಅಡಗಿದ್ದ ಕ್ರಿಯಾಶೀಲತೆಯೂ ಬೆರಗು ಮೂಡಿಸಿದ್ದದ್ದು ಸುಳ್ಳಲ್ಲ.…
ಸಿನಿಮಾ ಒಂದಕ್ಕೆ ಹೇಗೆಲ್ಲ ಪ್ರಚಾರ ಕೊಡಿಸಬಹುದೆಂಬುದಕ್ಕೂ, ಹಾಗೆ ಸಿಕ್ಕ ಪ್ರಚಾರದ ಶಿಖರವೇರಿ ನಿಂತ ಚಿತ್ರವೊಂದನ್ನು ಹೇಗೆ ಸೋಲಿನ ಪ್ರಪಾತಕ್ಕೆ ದೊಪ್ಪನೆ ಕೆಡವಬಹುದೆಂಬುದಕ್ಕೂ ಸಜೀವ ಉದಾಹರಣೆಯಂತಿರುವವರು ನಿರ್ದೇಶಕ ಜೋಗಿ ಪ್ರೇಮ್. ಈತನ ಪ್ರಚಾರದ ವರಸೆ, ಆರಂಭದಲ್ಲೇ ಕೊಡುವ ಬಿಟ್ಟಿ ಪೋಸುಗಳ ಬಗ್ಗೆ ಸಾಕಷ್ಟು ಮೂದಲಿಕೆಗಳೆದುರಾಗಿವೆ. ಕಡೆಗೂ ಅದೆಲ್ಲದರಿಂದಾಗಿ ಪ್ರೇಮ್ಸ್ ಕೊಂಚ ಬದಲಾದಂತಿದ್ದರು. ಈ ಹಿಂದೆ ಏಕ್ ಲವ್ ಯಾ ಸಂದರ್ಭದಲ್ಲಿ ಅಂಥಾದ್ದೊಂದು ಬದಲಾವಣೆ ಪ್ರೇಮ್ ವ್ಯಕ್ತಿತ್ವದಲ್ಲಿ ಸ್ಪಷ್ಟವಾಗಿಯೇ ಕಾಣಿಸಿಕೊಂಡಿತ್ತು. ಇದೀಗ ಹೊಸಾ ಚಿತ್ರದ ಭೂಮಿಕೆಯಲ್ಲಿ ಮತ್ತದೇ ಹಳೇ ಪ್ರೇಮ್ ಅವತರಿಸಿಬಿಟ್ಟಂತಿದೆ! ಪ್ರೇಮ್ ಕೆಡಿ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿರೋದು ಮತ್ತು ಧ್ರುವ ಸರ್ಜಾ ಅದರ ನಾಯಕನಾಗಿ ನಟಿಸುತ್ತಿರೋದು ಗೊತ್ತಿರುವ ವಿಚಾ. ಸದ್ಯಕ್ಕೆ ಧ್ರುವ ಮಾರ್ಟಿನ್ ಪ್ರಮೋಷನ್ನಿನಲ್ಲಿ ಬ್ಯುಸಿಯಾಗಿರೋದರಿಂದ ಸದ್ಯಕ್ಕೆ ಕೇಡಿ ಶುರುವಾಗೋ ಲಕ್ಷಣಗಳಿಲ್ಲ. ಆದರೆ ಆ ಸಿನಿಮಾ ಸೃಷ್ಟಿಸುತ್ತಿರುವ ಹೈಪುಗಳಿಗೇನೂ ಕಡಿಮೆಯಿಲ್ಲ. ಎಂದಿನಂತ ತಾರಾಗಣಕ್ಕೆ ಘಟಾನುಘಟಿ ನಟ ನಟಿಯರ ಹೆಸರನ್ನು ಹರಿಯ ಬಿಡುವ ಮೂಲಕವೇ ಪ್ರೇಮ್ ಕೇಡಿಗೆ ಪ್ರಚಾರ ಕೊಡಿಸುವ ಪ್ರಯತ್ನ ಮಾಡುತ್ತಿದ್ದಾರೆ.…
ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ಬಾಲ ನಟಿಯರಾಗಿ ನಟಿಸಿದ್ದವರನೇಕರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಮತ್ತೆ ಕೆಲವರು ಪತ್ತೆಯೇ ಇಲ್ಲದಂತೆ ಎಲ್ಲೆಲ್ಲೋ ಕಳೆದು ಹೋಗಿದ್ದಾರೆ. ಹಾಗೆ ಬಾಲ ನಟಿಯಾಗಿ ಎಂಟ್ರಿ ಕೊಟ್ಟು, ಚಾಲ್ತಿಯಲ್ಲಿರುವವರ ಪೈಕಿ ತಮಿಳಿನಲ್ಲಿ ಒಂದಷ್ಟು ಪ್ರಸಿದ್ಧಿ ಪಡೆದುಕೊಂಡಿರುವ ಅನಿಕಾ ಸುರೇಂದ್ರನ್ ಕೂಡಾ ಸೇರಿಕೊಳ್ಳುತ್ತಾಳೆ. ಬಹುಶಃ ಅನಿಕಾ ಸುರೇಂದ್ರನ್ ಅಂದರೆ ಬೇರೆ ಭಾಷೆಯ ಮಂದಿಗೆ ಗುರುತು ಹತ್ತುವುದು ತುಸು ಕಷ್ಟವೇನೋ… ಆದರೆ, ಅಜಿತ್ ನಟನೆಯ ವಿಶ್ವಾಸಂ ಚಿತ್ರದಲ್ಲಿ ಅವರ ಮಗಳಾಗಿ ನಟಿಸಿದ್ದ ಪುಟ್ಟ ಹುಡುಗಿ ಅಂದರೆ ಎಲ್ಲರಿಗೂ ಗುರುತು ಹತ್ತೀತು! ಈ ಹುಡುಗಿಯ ಬಗ್ಗೆ ಈಗ ಪ್ರಸ್ತಾಪಿಸುತ್ತಿರೋದಕ್ಕೂ ಕಾರಣವಿದೆ. ಅನಿಕಾ ಸುರೇಂದ್ರನ್ ಈಗ ದೊಡ್ಡವಳಾಗಿದ್ದಾಳೆ. ಸಿನಿಮಾ ನಾಯಕಿಯಾಗುವ ಮಟ್ಟಕ್ಕೆ ಬೆಳೆದು ನಿಂತಿದ್ದಾಳೆ. ಓ ಮೈ ಡಾರ್ಲಿಂಗ್ ಎಂಬ ಪ್ರೇಮ ಕಥೆಯಾಧಾರಿತ ತೆಲುಗು ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾಳೆ. ಈ ಮೊದಲ ಚಿತ್ರದಲ್ಲಿಯೇ ಮೈ ಚಳಿ ಬಿಟ್ಟು ಕಿಸ್ಸಿಂಗ್ ಸೀನ್‍ನಲ್ಲಿ ಕಾಣಿಸಿಕೊಳ್ಳುವ ಮೂಲಕ ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಗಿದ್ದಾಳೆ. ಈ ಕಿಸ್ಸಿಂಗ್ ಸೀನ್ ಬಗ್ಗೆ…
ಅದೇನು ದುರಂತವೋ ಗೊತ್ತಿಲ್ಲ; ಕೆಲ ನಟರು ಎಲ್ಲ ರೀತಿಯಿಂದಲೂ ಅರ್ಹರಾಗಿದ್ದರೂ ಕೂಡಾ ಒಂದು ಬ್ರೇಕ್‍ಗಾಗಿ ವರ್ಷಗಟ್ಟಲೆ ಸೈಕಲ್ಲು ಹೊಡೆದು ಸರ್ಕಸ್ಸು ನಡೆಸಬೇಕಾಗುತ್ತೆ. ಕನ್ನಡ ಚಿತ್ರರಂಗದ ಮಟ್ಟಿಗೆ ಹೇಳೋದಾದರೆ, ಈ ಮಾತಿಗೆ ಉದಾಹರಣೆಯಾಗಿ ನಿಲ್ಲಬಲ್ಲ ನಟರದ್ದೊಂದು ದಂಡೇ ಇದೆ. ಆ ಸಾಲಿಗೆ ಇತ್ತೀಚಿನ ಸೇರ್ಪಡೆಯಂತಿದ್ದ ಹುಡುಗ ರಾಕೇಶ್ ಅಡಿಗ. ಚುರುಕು ಸ್ವಭಾವದ, ಪ್ರತಿಭಾವಂತನೂ ಆಗಿರುವ ರಾಕೇಶ್ ಈವರೆಗೂ ಒಂದಷ್ಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾನಾದರೂ ಹೇಳಿಕೊಳ್ಳುವಂಥಾ ಗೆಲುವು ಕೈ ಹಿಡಿಯಲಿಲ್ಲ. ಇಂಥಾ ವಾತಾವರಣದಲ್ಲಿಯೇ ರಾಕೇಶ್ ಏಕಾಏಕಿ ಕಾಕ್ರೋಚ್ ಅವತಾರವೆತ್ತಿದ್ದಾನೆ! ಈ ಬಾರಿಯ ಬಿಗ್‍ಬಾಸ್‍ನ ಓಟಿಟಿ ಅವತರಣಿಕೆಯಲ್ಲಿ ಸ್ಪರ್ಧಿಯಾಗಿದ್ದಾತ ರಾಕೇಶ್ ಅಡಿಗ. ಸೋನು ಗೌಡಳ ಹಿಂದೆ ಸುತ್ತಿ ರಂಕಲು ಮಾಡಿಕೊಂಡರೂ ಒಂದಷ್ಟು ಚೆಂದಗೆ ಆಡಿದ್ದ ಈತ ಸೀಜನ್9ಗೂ ಪಾದಾರ್ಪಣೆ ಮಾಡಿದ್ದ. ಅಲ್ಲಿಯೂ ಸ್ತ್ರೀ ಸೌಖ್ಯದ ಹಂಬಲದಲ್ಲಿ ಅಡ್ಡಾಡುತ್ತಾ, ಪ್ರೇಕ್ಷಕರಿಂದ ಒಂದಷ್ಟು ಉಗಿಸಿಕೊಂಡಿದ್ದ ರಾಕೇಶ್ ಅಡಿಗ, ಆಟದ ವಿಚಾರಕ್ಕೆ ಬಂದಾಗ ಮೆಚ್ಚುಗೆ ಗಳಿಸಿಕೊಳ್ಳುತ್ತಿದ್ದ. ಆ ದೆಸೆಯಿಂದಲೇ ಫೈನಲ್ ವರೆಗೂ ತಲುಪಿಕೊಂಡು ರನ್ನರ್ ಅಪ್ ಆಗಿ ಹೊರಬಿದ್ದಿದ್ದ. ಹಾಗೆ…