ಬಿಜೆಪಿಗೆ ಕೋಮುವಾದ ಬಿಟ್ರೆ ಬೇರೆ ಟಾಪಿಕ್ಕಿಲ್ಲ ಅಂದೋರ‍್ಯಾರು? | ಶೋಧ ನ್ಯೂಸ್ - Shodha News ಬಿಜೆಪಿಗೆ ಕೋಮುವಾದ ಬಿಟ್ರೆ ಬೇರೆ ಟಾಪಿಕ್ಕಿಲ್ಲ ಅಂದೋರ‍್ಯಾರು? | ಶೋಧ ನ್ಯೂಸ್ - Shodha News

ಬಿಜೆಪಿ ಪಕ್ಷ ನರೇಂದ್ರ ಮೋದಿ ಸಾರಥ್ಯದೊಂದಿಗೆ ಅಧಿಕಾರ ಕೇಂದ್ರಕ್ಕೆ ಬಂದಾಗ ಈ ನೆಲದ ಮಂದಿಗೆ ಬೇರೆಯದ್ದೇ ರೀತಿಯ ನಿರೀಕ್ಷೆಗಳಿದ್ದವು. ಇನ್ನೇನು ಕೆಲವೇ ದಿನಗಳಲ್ಲಿ ಅಚ್ಛೇದಿನ್ ಎಂಬುದು ಮನೆಬಾಗಿಲಿಗೆ ಬಂದು ನಿಂತುಬಿಡುತ್ತದೆ ಎಂಬಂತೆ ಅನೇಕ ಅಮಾಯಕರು ನಂಬಿಕೊಂಡಿದ್ದರು. ಆದರೆ ಮೋದಿ ಸಾರಥ್ಯದ ಸರ್ಕಾರ ಸಿಕ್ಕ ಅಧಿಕಾರವನ್ನು ಮಂಕುಬೂದಿ ಎರಚಲು ಬಳಸಿಕೊಂಡು ಮುಂದುವರೆಯುತ್ತಿದೆ ಎಂಬ ಕುದಿತ ಪ್ರಜ್ಞಾವಂತರಲ್ಲಿದೆ. ಈ ಕಾರಣದಿಂದಲೇ ಇದೀಗ ವಿಪಕ್ಷದ ಮಂದಿಯ ಕಟು ಟೀಕೆಗಳನ್ನು ಎದುರಿಸುವ ಸಂದರ್ಭ ಮೋದಿ ಸರ್ಕಾರದ ಮುಂದಿದೆ.

ಇದೀಗ ಛತ್ತೀಸ್‌ಘಡದ ಮುಖ್ಯಮಂತ್ರಿ ಭೂಪೇಶ್ ಬಘೇಲಾ ಬಿಜೆಪಿ ವಿರುದ್ಧ ತೀಕ್ಣವಾಗಿಯೇ ಹರಿ ಹಾಯ್ದಿದ್ದಾರೆ. ಈ ಬಿಜೆಪಿ ಮಂದಿಗೆ ಕೋಮುವಾದ ಮತ್ತು ಅದರ ಸುತ್ತಲಿನ ವಿಚಾರವನ್ನು ಬಿಟ್ಟರೆ ಮಾತಾಡಲು ಬೇರೆ ಟಾಪಿಕ್ಕೇ ಇಲ್ಲ ಅಂದಿದ್ದಾರೆ. ಬಿಜೆಪಿ ನಾಯಕರು ಕೋಮುವಾದ ಮತ್ತು ಧಾರ್ಮಿಕ ಮತಾಂತರಗಳ ಬಗ್ಗೆಯಷ್ಟೇ ಪದೇ ಪದೆ ಮಾತಾಡುತ್ತಾರೆ. ಅವರು ಬೇರ‍್ಯಾವ ವಿಚಾರಗಳನ್ನೂ ಮಂಡಿಸಲಾಗದಷ್ಟು ಬರಿದಾಗಿದ್ದಾರೆಂದೂ ಬಘೇಲಾ ಹರಿಹಾಯ್ದಿದ್ದಾರೆ.

ಇದೇ ಸಂದರ್ಭದಲ್ಲಿ ಬಘೇಲಾ ತಮ್ಮ ರಾಜ್ಯದಲ್ಲಿ ಮತಾಂತರದ ಬಗ್ಗೆ ತಾವು ತಳೆಯುವ ನಿಲುವಿನ ಬಗ್ಗೆಯೂ ಸ್ಪಷ್ಟಪಡಿಸಿದ್ದಾರೆ. ಪ್ರತಿಯೊಬ್ಬರೂ ಅವರವರಿಗೆ ಬೇಕಾದ ಧರ್ಮಗಳನ್ನು ಅನುಸರಿಸಲು ಸ್ವತಂತ್ರರು ಅಂದಿರುವ ಅವರು, ಒಂದೊಮ್ಮೆ ಬಲವಂತದಿಂದ ಮತಾಂತರ ಮಾಡುವಂಥಾ ಕೃತ್ಯಗಳು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ. ಈ ಮೂಲಕ ಬಿಜೆಪಿ ಮಂದಿಗೆ ಮತ್ತೊಮ್ಮೆ ಮುಜುಗರ ಎದುರಾಗಿದೆ. ಆದರೂ ಮತೀಯವಾದದ ಮಬ್ಬಿನಿಂದ ಅದರ ನಾಯಕರು ಹೊರಬರುವ ಸೂಚನೆಗಳು ಮಾತ್ರ ಕಾಣಿಸುತ್ತಿಲ್ಲ.

error: Content is protected !!