Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಹೊಸಾ ಅವತಾರದ ಸೋನು ಪ್ರೇಕ್ಷಕರ ಮನಗೆಲ್ಲುತ್ತಾರಾ? ಒಂದಷ್ಟು ಯಶಸ್ಸು ಕಂಡ ಪ್ರತೀ ನಟ ನಟಿಯರನ್ನೂ ಕೂಡಾ ಭಿನ್ನ ಬಗೆಯ ಪಾತ್ರಗಳು ಸೆಳೆಯುತ್ತವೆ. ಅಂಥಾದ್ದೊಂದು ತುಡಿತ ಕಲಾವಿದರೊಳಗೆ ಮೂಡಿಕೊಳ್ಳೋದಿದೆಯಲ್ಲಾ? ಅದು ಅವರ ಕಡೆಯಿಂದ ಅಚ್ಚರಿದಾಯಕ ಪಾತ್ರಗಳು ಎದುರುಗೊಳ್ಳುವ ಸ್ಪಷ್ಟ ಲಕ್ಷಣ. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಪ್ರೀತಿ ಸಂಪಾದಿಸಿಕೊಂಡಿರುವ ಸೋನು ಗೌಡ ಕೂಡಾ ಅಂಥಾದ್ದೊಂದು ಪಲ್ಲಟಕ್ಕೆ ತಮ್ಮನ್ನು ತಾವು ಒಡ್ಡಿಕೊಂಡಿದ್ದಾರೆ. ಅದರ ಫಲವಾಗಿಯೇ ವಿಕ್ರಂ ಪ್ರಭು ನಿರ್ದೇಶನದ ವೆಡ್ಡಿಂಗ್ ಗಿಫ್ಟ್‌ನಲ್ಲಿ ಎರಡು ಶೇಡ್‌ಗಳಿರುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದುವರೆಗಿನ ಸಿನಿಮಾ ಯಾನದಲ್ಲಿ ತಮ್ಮನ್ನು ಮೆಚ್ಚಿಕೊಂಡು ಬಂದ ಪ್ರೇಕ್ಷಕರಿಗೆಲ್ಲ ಈ ಹೊಸಾ ಅವತಾರವೂ ಮೆಚ್ಚುಗೆಯಾಗುತ್ತದೆಂಬ ಗಾಢ ನಂಬಿಕೆ ಅವರಲ್ಲಿದೆ. ಇದು ವಿಕ್ರಂ ಪ್ರಭು ನಿರ್ದೇಶನದ ಚೊಚ್ಚಲ ಚಿತ್ರ. ಸಮಾಜಕ್ಕೆ ಕಣ್ಣಾಗುವ, ಎಲ್ಲರ ಬದುಕಿಗೂ ಹತ್ತಿರಾಗುವ ಕಥಾನಕವನ್ನೊಳಗೊಂಡಿದ್ದ ಈ ಚಿತ್ರದ ನಾಯಕಿ ಯಾರಾಗಬೇಕೆಂಬುದೇ ಮೊದಲು ಯಕ್ಷ ಪ್ರಶ್ನೆಯಾಗಿತ್ತಂತೆ. ನಾಯಕಿ ಅಂದಾಕ್ಷಣ ಪಾಸಿಟಿವ್ ರೋಲ್‌ಗಳೇ ಕಣ್ಣಮುಂದೆ ಬರುತ್ತವೆ. ಆದರೆ ಈ ಪಾತ್ರಕ್ಕೆ ನಗೆಟಿವ್ ಶೇಡೂ ಇತ್ತು. ಅದನ್ನು…

Read More

ದೇವರೂರಿನ ದಾರಿಹೋಕನ ಮೋಹಕ ಪ್ರೇಮಕಥೆ! ಝೈದ್ ಖಾನ್ ನಾಯಕನಾಗಿ ಆಗಮಿಸುತ್ತಿರುವ ಬಹುನಿರೀಕ್ಷಿತ ಚಿತ್ರ ಬನಾರಸ್. ಜಯತೀರ್ಥ ನಿರ್ದೇಶನದ ಈ ಸಿನಿಮಾ ಟೈಟಲ್ ಲಾಂಚ್ ಆದಂದಿನಿಂದಲೇ ನಾನಾ ಥರದಲ್ಲಿ ನಿರೀಕ್ಷೆ ಮೂಡಿಸಿತ್ತು. ಆ ನಂತರದಲ್ಲಿ ಕಲಾವಿದನ ಕುಂಚದಲ್ಲರಳಿದ ಅಮೂರ್ತ ಚಿತ್ತಾರದಂಥಾ ಪೋಸ್ಟರ್‌ಗಳ ಮೂಲಕ ಬನಾರಸ್ ಸೃಷ್ಟಿಸಿದ್ದ ಸಂಚಲನವಿದೆಯಲ್ಲಾ? ಅದು ಸಾಮಾನ್ಯವಾದುದೇನಲ್ಲ. ಆ ಬಳಿಕ ತನ್ನ ಪಾಡಿಗೆ ತಾನು ಚಿತ್ರೀಕರಣದಲ್ಲಿ ತಲ್ಲೀನವಾಗಿ, ಚಿತ್ರೀಕರಣ ಪೂರೈಸಿಕೊಂಡಿರುವ ಬನಾರಸ್ ಇದೀಗ ಚೆಂದದ ಹಾಡೊಂದರ ಮೂಲಕ ಚರ್ಚೆ ಹುಟ್ಟು ಹಾಕಿದೆ. ಪ್ರೇಮವೆಂಬೋ ಧ್ಯಾನವನ್ನು, ದೈವೀಕ ಸುಗಂಧದಲ್ಲಿ ಸುತ್ತುವರೆದಂತಿರೋ ಈ ಹಾಡೀಗ ಟ್ರೆಂಡಿಂಗ್‌ನಲ್ಲಿದೆ. ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಾ ದಾಖಲೆಯ ಹಾದಿಯತ್ತ ದಾಪುಗಾಲಿಡುತ್ತಿದೆ. ಜಯತೀರ್ಥ ಒಂದು ಸಿನಿಮಾವನ್ನು ಕೈಗೆತ್ತಿಕೊಂಡರೆಂದರೆ ಸಹಜವಾಗಿಯೇ ಅದರತ್ತ ಪ್ರೇಕ್ಷಕರ ಚಿತ್ತ ಕದಲಿಬಿಡುತ್ತೆ. ಅದರಲ್ಲಿಯೂ ಬನಾರಸ್ ಒಂದು ವಿಶಿಷ್ಟ ಪ್ರೇಮ ಕಾವ್ಯವೆಂಬಂಥಾ ಸುಳಿವು ಸಿಕ್ಕಾಕ್ಷಣವೇ ಭರವಸೆ ಇಮ್ಮಡಿಗೊಂಡಿತ್ತು. ಯಾಕೆಂದರೆ ಅಂತಾರಾಜ್ಯ ಪ್ರೇಮ್‌ಕಹಾನಿಯ ಕಥೆ ಹೊಂದಿದ್ದ ಒಲವೇ ಮಂದಾರ ಚಿತ್ರವನ್ನು ಜಯತೀರ್ಥ ನಿರ್ದೇಶನ ಮಾಡಿದ್ದ ಪರಿಯೇ ಅಂಥಾದ್ದಿದೆ. ಬನಾರಸ್‌ನಲ್ಲಿಯೂ ಕೂಡಾ…

Read More

ಕನ್ನೇರಿ ಸೃಷ್ಟಿಸಿದ ಸಾಮಾಜಿಕ ಪರಿವರ್ತನೆಗೆ ಸಾಟಿಯಿಲ್ಲ! ಒಂದು ಸಿನಿಮಾ ಗಟ್ಟಿಯಾದ ಕಂಟೆಂಟು ಹೊಂದಿದ್ದರೆ ಪ್ರಚಾರದ ಭರಾಟೆಯಾಚೆಗೂ ಜನಮಾನಸವನ್ನ ಸೆಳೆಯಬಲ್ಲದು ಎಂಬುದಕ್ಕೆ ಕನ್ನೇರಿ ತಾಜಾ ಉದಾಹರಣೆಯಾಗಿ ನಿಂತಿದೆ. ಯಾವತ್ತಿದ್ದರೂ ನೆಲಮೂಲದ, ನಮ್ಮ ನಡುವಿನ ಸಂಕಟಗಳಿಗೆ ಧ್ವನಿಯಾಗುವಂಥಾ ನೈಜ ಕಥಾನಕಗಳತ್ತ ಪ್ರೇಕ್ಷಕರು ಆಕರ್ಷಿತರಾಗುತ್ತಾರೆ. ಅಂಥಾದ್ದೇ ನೈಜ ಘಟನೆಯೊಂದಕ್ಕೆ ಕನ್ನಡಿ ಹಿಡಿದಿರುವ ಚಿತ್ರ ಕನ್ನೇರಿ. ಈ ಚಿತ್ರದಲ್ಲಿ ಪ್ರತೀ ಪಾತ್ರಗಳೂ ಪ್ರೇಕ್ಷಕರ ಪಾಲಿಗೆ ಸರ್‌ಪ್ರೈಸ್ ಆಗಿರಬೇಕೆಂಬಂತೆ ನಿರ್ದೇಶಕ ನೀನಾಸಂ ಮಂಜು ರೂಪಿಸಿದ್ದಾರೆ. ಅದೆಲ್ಲದರ ಫಲವೆಂಬಂತೆ ಕನ್ನೇರಿಯೀಯ ಯಶಸ್ವಿಯಾಗಿ ನೂರು ದಿನಗಳನ್ನು ದಾಟಿಕೊಂಡು ನೂರಾ ಐದನೇ ದಿನದ ಸಂಭ್ರಮವನ್ನು ಆಚರಿಸಿಕೊಂಡಿದೆ. ಸಿನಿಮಾ ಪಾಲಿಗೆ ಸಂಭ್ರಮವೆಂಬುದು ದಿನ, ವಾರಗಳಿಗೆ ಸೀಮಿತವಾಗಿರುವ ಈ ಘಳಿಗೆಯಲ್ಲಿ ಕನ್ನೇರಿ ದಾಖಲಿಸಿದ ಅಮೋಘ ಗೆಲುವಿದೆಯಲ್ಲಾ? ಅದು ಪ್ರತೀ ಸಿನಿಮಾ ಪ್ರೇಮಿಗಳನ್ನೂ ಥ್ರಿಲ್ ಆಗಿಸುವಂಥಾದ್ದು! ಇತ್ತೀಚಿನ ವರ್ಷಗಳಲ್ಲಿ ಸಿನಿಮಾವೊಂದು ನೂರರ ಗಡಿ ದಾಟಿಕೊಂಡಿದ್ದ ಉದಾಹರಣೆಗಳಿಲ್ಲ. ನೂರರ ಸಂಭ್ರಮವೆಂಬುದು ಮೆಲುಕು ಹಾಕಿ ಮುದಗೊಳ್ಳಬಹುದಾದಂಥಾ ಗತವೈಭವವಷ್ಟೇ ಎಂಬಂತಾಗಿತ್ತು. ನೆಲೆ ಕಂಡುಕೊಳ್ಳಲು ಕೋಟಿ ಕೋಟಿ ಬಜೆಟ್ಟಿನ ದೊಡ್ಡ ಚಿತ್ರಗಳೇ ತಿಣುಕಾಡುವ…

Read More

ಯಾರೇ ಆದರೂ ನಿರ್ದೇಶನದಲ್ಲಿ ಮೊದಲ ಹೆಜ್ಜೆಯಲ್ಲಿಯೇ ಅಗಾಧ ಪ್ರಮಾಣದಲ್ಲಿ ಭರವಸೆ ಮೂಡಿಸೋದು ಕಡುಗಷ್ಟದ ಕೆಲಸ. ಆದರೆ ಶೀತಲ್ ಶೆಟ್ಟಿ ಮಾತ್ರ ಲೀಲಾಜಾಲವಾಗಿಯೇ ಅದನ್ನು ಸಾಧ್ಯವಾಗಿಸಿದ್ದಾರೆ. ಅದರ ಫಲವಾಗಿಯೇ ಆರಂಭದಿಂದ ಇಲ್ಲೀವಯವರೆಗೂ ಕುತೂಹಲವನ್ನು ಕಾಪಿಟ್ಟುಕೊಂಡು ಬಂದಿರುವ ವಿಂಡೋ ಸೀಟ್ ಜುಲೈ೧ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಈ ಹೊತ್ತಿನಲ್ಲಿ ಈ ಚಿತ್ರದ ಬಗ್ಗೆ ಮತ್ತಷ್ಟು ಮೋಹಗೊಳ್ಳುವಂತೆ ಮಾಡುವಂಥಾ ಚೆಂದದ ವೀಡಿಯೋ ಸಾಂಗ್ ಒಂದು ಇದೀಗ ಲಾಂಚ್ ಆಗಿದೆ. ಮನಸಿಗೆ ತಂಗಾಳಿ ತೀಡಿದಂತಾಗಿ, ಯಾವುದೋ ಭಾವಲೋಕದಲ್ಲಿ ಕಳೆದು ಹೋಗುವಂತೆ ಮಾಡುವ ಈ ವೀಡಿಯೋ ಸಾಂಗ್‌ಗೀಗ ವ್ಯಾಪಕ ಮೆಚ್ಚುಗೆ ಸಿಗುತ್ತಿದೆ. ಹೆಚ್ಚೆಚ್ಚು ವೀಕ್ಷಣೆಯೂ ದಕ್ಕುತ್ತಿದೆ. ಅತಿ ಚೆಂದದ ಹೂಗೊಂಚಲು ಈ ಕಿಟಕಿಯಾಚೆ ಕಂಡಂತಿದೆ ಎಂಬ ಸಮ್ಮೋಹಕ ಸಾಲುಗಳಿಂದ ಶುರುವಾಗುವ ಈ ಹಾಡು, ದೃಷ್ಯವೈಭವ, ಸಾಹಿತ್ಯ ಮತ್ತು ಸಂಗೀತ ಸೇರಿದಂತೆ ಎಲ್ಲ ರೀತಿಯಿಂದಲೂ ಕಾಡುವಂತಿದೆ. ಈ ಹಾಡಿಗೆ ವಿಜಯ ಪ್ರಕಾಶ್ ಧ್ವನಿಯಾಗಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ನಿರ್ದೇಶನದಲ್ಲಿ ರೂಪುತಳೆದ ಈ ಹಾಡಿಗೆ ಖ್ಯಾತ ನಿರ್ದೇಶಕ ಯೋಗರಾಜ ಭಟ್ ಸಾಹಿತ್ಯ ಒದಗಿಸಿದ್ದಾರೆ.…

Read More

ಮೀನುಗಾರಿಕಾ ವೃತ್ತಿ ನಡೆಸುವವರನ್ನು ಕಡಲ ಮಕ್ಕಳೆಂದೇ ಕರೆಯೋದು ವಾಡಿಕೆ. ಆದರೆ ಕಡಲಿಗಿಳಿದವರು ಮತ್ತೆ ಸುರಕ್ಷಿತವಾಗಿ ಗೂಡು ಸೇರಿಕೊಳ್ಳುತ್ತಾರೆಂಬುದಕ್ಕೆ ಯಾವ ಗ್ಯಾರೆಂಟಿಯೂ ಇಲ್ಲ. ನಮ್ಮದೇ ದಕ್ಷಿಣ ಕನ್ನಡದ ಕರಾವಳಿ ತೀರದಲ್ಲಿ ನಾಪತ್ತೆಯಾದ ಅದೆಷ್ಟೋ ಮೀನುಗಾರರು ಇಂದಿಗೂ ಪತ್ತೆಯಾಗಿಲ್ಲ. ಅದು ಕಡಲ ಗರ್ಭದ ಕರಾಳ ನಿಗೂಢ. ಹೀಗೆ ಮೀನು ಹಿಡಿಯಲು ತೆರಳಿದವರ ಬದುಕಿನ ಬೆಚ್ಚಿ ಬೀಲಿಸೋ ಕಥನಗಳಿಗೆ, ದುರಂತಗಳಿಗೆ ಕೊನೆ ಮೊದಲಿಲ್ಲ. ಈಗ ಹೇಳ ಹೊರಟಿರೋದು ಅಂಥಾದ್ದೇ ಕಥೆ. ವಿಶೇಷವೆಂದರೆ, ಅದರ ಕ್ಲೈಮ್ಯಾಕ್ಸು ದುರಂತವಲ್ಲ. ಕಣ್ಣು ಹಾಯಿಸಿದಷ್ಟೂ ದೂರ ನೀರಲ್ಲದೆ ಮತ್ತೇನೂ ಕಾಣಿಸದಂಥಾ ಕಡಲು. ಅದರ ನಡುವೆ ಬಿರುಗಾಳಿಗೆ ಸಿಕ್ಕು ಕೆಟ್ಟು ನಿಂತ ನಾವೆ. ಅದರೊಳಗೆ ಅದುವರೆಗಿನ ಶ್ರಮದ ಫಲವಾಗಿ ಗುಡ್ಡೆಬಿದ್ದ ಐದು ಕ್ವಿಂಟಾಲಿನಷ್ಟು ಮೀನಿನ ರಾಶಿ ಮತ್ತು ಅದರ ಇಕ್ಕೆಲದಲ್ಲಿ ಯಾವ ದಿಕ್ಕೂ ತೋಚದೆ ಕಂಗಾಲಾಗಿ ನಿಂತ ಎರಡು ಜೀವಗಳು… ಇವಿಷ್ಟು ವಿವರಗಳೇ ಅದೆಂಥಾ ಕಠೋರ ಕ್ಷಣಗಳೆಂಬುದನ್ನು ಯಾರಿಗಾದರೂ ಮನದಟ್ಟು ಮಾಡಿಸುತ್ತವೆ. ಅಂಥಾದ್ದೊಂದು ಘೋರ ಸ್ಥಿತಿಯಲ್ಲಿ ಸಮುದ್ರದ ನಡುವಲ್ಲಿ ತಿಂಗಳು ಕಳೆದಾಗಲೇ ಇಬ್ಬರಲ್ಲೊಬ್ಬ…

Read More

ಪಿ.ಎನ್ ಸತ್ಯ ಶಿಷ್ಯನ ಭಿನ್ನ ಯಾನ! ಸಿನಿಮಾ ಕನಸೆಂಬುದು ಕೈಚಾಚಿದವರಿಗೆಲ್ಲ ಸಲೀಸಾಗಿ ದಕ್ಕುವಂಥಾದ್ದಲ್ಲ. ಅಲ್ಲಿ ಅಲೆದಾಡಬೇಕು, ಏದುಸಿರು ಬಿಟ್ಟು ಕಾದಾಡಬೇಕು, ಯಾರದ್ದೋ ನೆರಳಲ್ಲಿ ಅವುಡುಗಚ್ಚಿ ಕುಳಿತು ಕೆಲಸವನ್ನೇ ಧ್ಯಾನವಾಗಿಸಿಕೊಳ್ಳಬೇಕು. ಅಂಥಾದ್ದೊಂದು ಅಸೀಮ ಧ್ಯಾನದ ಫಲವಾಗಿಯೇ ಹುಟ್ಟು ಪಡೆದ ವಿಶಿಷ್ಟ ಚಿತ್ರ ಭೈರವ. ಈ ಮೂಲಕ ಖ್ಯಾತ ನಿರ್ದೇಶಕ ಪಿ.ಎನ್ ಸತ್ಯ ಅವರ ಗರಡಿಯಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅವರ ಬಹುತೇಕ ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಸಾಥ್ ಕೊಟ್ಟಿರುವ ರಾಮ್ ತೇಜ್ ನಿರ್ದೇಶನದ ಚೊಚ್ಚಲ ಚಿತ್ರ. ಟೈಟಲ್ ಅನೌಸ್ ಆದೇಟಿಗೆ ತನ್ನೊಳಗಿನ ಖದರ್ ಮೂಲಕವೇ ಈ ಸಿನಿಮಾ ಸದ್ದು ಮಾಡಿತ್ತು. ಇದೀಗ ಚಿತ್ರೀಕರಣವನ್ನೆಲ್ಲ ಸಾಂಘವಾಗಿ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿಕೊಂಡಿದೆ. ಕಳೆದ ದೀಪಾವಳಿಯ ಹೊತ್ತಿಗೆಲ್ಲಾ ಚಿತ್ರೀಕರಣ ಆರಂಭಿಸಿದ್ದ ಮೈಥಾಲಾಜಿಕಲ್ ಥ್ರಿಲ್ಲರ್ ಚಿತ್ರ ಭೈರವ. ಈಗಾಗಲೇ ಕಮರೊಟ್ಟು ಚೆಕ್‌ಪೋಸ್ಟ್, ಒಲವೇ ಮಂದಾರ ಪಾರ್ಟ್೨, ಚೀ ಥೂ ಯುವಕರ ಸಂಘ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಸನತ್ ಭೈರವ ನಾಯಕನಾಗಿ ಎಂಟ್ರಿ ಕೊಡುವ ಸನ್ನಾಹದಲ್ಲಿದ್ದಾರೆ.…

Read More

ಹೇಮಂತ್ ಕುಮಾರ್ ನಿರ್ದೇಶನದ ತುರ್ತು ನಿರ್ಗಮನ ಚಿತ್ರ ತೆರೆಗಾಣಲು ಕ್ಷಣಗಣನೆ ಶುರುವಾಗಿದೆ. ಈ ಹೊತ್ತಿಗಾಗಲೇ ಈ ಸಿನಿಮಾದ ಕಥೆ, ಪಾತ್ರಗಳ ಬಗ್ಗೆ ವ್ಯಾಪಕವಾಗಿ ಚರ್ಚೆಗಳು ನಡೆಯಲಾರಂಭಿಸಿವೆ. ಅಷ್ಟೊಂದು ವಿಶೇಷತೆಗಳಿಂದ ಕೂಡಿರುವ ಪಾತ್ರಗಳು ತುರ್ತು ನಿರ್ಗಮನದಲ್ಲಿದೆ ಎಂಬ ವಿಚಾರ ಈಗಾಗಲೇ ಎಲ್ಲರಿಗೂ ಮನದಟ್ಟಾಗಿದೆ. ಅದರಲ್ಲಿಯೂ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲಿ ನಟಿಸಿದ್ದಾರೆಂಬುದೇ ಹಲವರ ಕುತೂಹಲಕ್ಕೆ ಕಾರಣವಾಗಿದೆ. ಯಾಕೆಂದರೆ, ನಿರ್ದೇಶನ ಮಾಡಿರೋದು, ನಟಿಸಿರುವುದು ಕೆಲವೇ ಕೆಲ ಸಿನಿಮಾಗಳಲ್ಲಿಯೇ ಆದರೂ ರಾಜ್ ಶೆಟ್ಟಿ ಎರಡೂ ವಲಯಗಳಲ್ಲಿ ತಮ್ಮೇ ಆದೊಂದು ಛಾಪು ಮೂಡಿಸಿದ್ದಾರೆ. ಈ ಕಾರಣದಿಂದಲೇ ಅವರ ಪಾತ್ರ ತುರ್ತು ನಿರ್ಗಮನದಲ್ಲಿ ಹೇಗಿರಬಹುದೆಂಬ ಕ್ಯೂರಿಯಾಸಿಟಿ ಸಹಜವಾಗಿಯೇ ಎಲ್ಲರಲ್ಲಿದೆ. ಒಂದಷ್ಟು ಕಾಲದವರೆಗೂ ನಿರ್ದೇಶಕರು ರಾಜ್ ಶೆಟ್ಟಿ ಪಾತ್ರವನ್ನು ಗೌಪ್ಯವಾಗಿಟ್ಟಿದ್ದರು. ಆದರೆ, ಬಿಡುಗಡೆಯ ಘಳಿಗೆ ಹತ್ತಿರಾಗುತ್ತಿರುವ ಸಂದರ್ಭದಲ್ಲಿ ಆ ಬಗೆಗಿನ ಒಂದಷ್ಟು ಮಾಹಿತಿಗಳನ್ನು ಬಿಟ್ಟು ಕೊಟ್ಟಿದ್ದಾರೆ. ರಾಜ್‌ರ ಒಂದಷ್ಟು ಗೆಟಪ್ಪುಗಳೂ ಹೊರಬಂದಿವೆ. ಈ ಚಿತ್ರದಲ್ಲಿನ ಪ್ರತೀ ಪಾತ್ರಗಳನ್ನೂ ಒಂದೊಂದು ತೆರನಾಗಿ ಪ್ರೇಕ್ಷಕರನ್ನು ತಾಕುವಂತೆ ಹೇಮಂತ್ ರೂಪಿಸಿದ್ದಾರೆ.…

Read More

ಸುಧಾರಾಣಿ ಎಂಬ ಹೆಸರು ಕೇಳಿದಾಕ್ಷಣ ಪ್ರತೀ ಚಿತ್ರಪ್ರೇಮಿಗಳ ಮನಸು ಪ್ರಪುಲ್ಲಗೊಳ್ಳುತ್ತೆ. ಸ್ಮೃತಿಪಟಲದ ತುಂಬಾ ಅವರ ನಾನಾ ಪಾತ್ರಗಳ ಚಿತ್ತಾರ ಮೂಡಿಕೊಳ್ಳುತ್ತೆ. ಎಂಭತ್ತರ ದಶಕದ ನಂತರದಲ್ಲಿ ಮುಖ್ಯನಾಯಕಿಯಾಗಿ ಬೆಳ್ಳಿತೆರೆಯನ್ನು ಆವರಿಸಿಕೊಂಡಿದ್ದ ಅವರು ಮಾಡಿದ್ದ ಮೋಡಿಯೇ ಅಂಥಾದ್ದಿದೆ. ಹಾಗೆ ಪ್ರಸಿದ್ಧ ನಾಯಕಿಯಾಗಿ ಮೆರೆದು, ಸ್ಟಾರ್‌ಗಳಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದ ಸುಧಾರಾಣಿ, ಒಂದಷ್ಟು ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರು. ಸಾಂಸಾರಿಕ ಜೀವನದಲ್ಲಿ ಕಳೆದು ಹೋಗಿದ್ದರು. ಆ ನಂತರ ಕಳೆದ ವರ್ಷದಿಂದ ಮತ್ತೆ ಬಣ್ಣ ಹಚ್ಚಿರುವ ಅವರಿಗಾಗಿ ಅಪರೂಪದ ಪಾತ್ರಗಳು ಅರಸಿ ಬರುತ್ತಿವೆ. ಸದ್ಯ ಅವರು ನಾಳೆ ಬುಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರ ತುರ್ತು ನಿರ್ಗಮನದಲ್ಲಿ ವಿಶಿಷ್ಟವಾದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಈ ಚಿತ್ರದ ಕಥೆಯನ್ನು ಸಿದ್ಧಪಡಿಸುವಾಗಲೇ ಅದರಲ್ಲಿನ ನರ್ಸ್ ಪಾತ್ರಕ್ಕೆ ಸುಧಾರಾಣಿ ಹೇಳಿ ಮಾಡಿಸಿದ್ದಾರೆಂದು ಹೇಮಂತ್ ಕುಮಾರ್‌ಗೆ ಅನ್ನಿಸಿತ್ತಂತೆ. ಆ ಕ್ಷಣದಲ್ಲಿಯೇ ಅದನ್ನು ಸುಧಾರಾಣಿ ಒಪ್ಪಿಕೊಳ್ಳದಿರೋದಿಲ್ಲ ಎಂಬಂಥಾ ನಂಬಿಕೆಯೂ ಅವರಲ್ಲಿತ್ತಂತೆ. ಸುಧಾರಾಣಿ ತಮ್ಮ ಎರಡನೇ ಇನ್ನಿಂಗ್ಸ್‌ನ ಪ್ರತೀ ಹೆಜ್ಜೆಗಳನ್ನೂ ಎಚ್ಚರಿಕೆಯಿಕೆಯಿಂದ ಎತ್ತಿಡುತ್ತಿರುವವರು. ತಮಗೆ ಸಿಗುವ ಪ್ರತೀ ಚಿತ್ರ, ಪ್ರತೀ…

Read More

ಈ ನೆಲದ ಬುಡಕಟ್ಟು ಜನಾಂಗಗಳೀಗ ಅತ್ತ ಆಧುನಿಕತೆಗೆ ಸಂಪೂರ್ಣವಾಗಿ ಒಗ್ಗಿಕೊಳ್ಳಲೂ ಆಗದೆ, ಇತ್ತ ತಮ್ಮ ಪಾರಂಪರಿಕ ಬೇರುಗಳನ್ನು ಸಂಪೂರ್ಣವಾಗಿ ಕಿತ್ತಿಟ್ಟುಕೊಂಡಂತೆ ಬದುಕಲೂ ಆಗದ ಸಂದಿಗ್ಧ ಸ್ಥಿತಿಯಲ್ಲಿದೆ. ಒಂದು P ಲಕ್ಕೆ ಬುಡಕಟ್ಟು ಸಮುದಾಯದ ಹಾಡಿಗಳೊಳಗೆ ಆಧುನಿಕತೆಯ ಸಣ್ಣದೊಂದು ಕಿರಣವೂ ಹೊಳೆಯಲು ಸಾಧ್ಯವಾಗದಂಥಾ ವಾತಾವರಣವಿತ್ತು. ಆದರೀವತ್ತು ಬುಡಕಟ್ಟು ಸಮುದಾಯಗಳ ಮಕ್ಕಳಿಗೂ ಒಂದಷ್ಟು ಅಕ್ಷರ ಪರಿಚಯವಾಗುತ್ತಿದೆ. ಸದಾ ಸಂದಿಗ್ಧ ವಾತಾವರಣದಲ್ಲಿಯೇ ಬದುಕುತ್ತಾ ಬಂದಿರೋ ಇಂಥಾ ಸಮುದಾಯದಲ್ಲಿಯೂ ಉನ್ನತ ವ್ಯಾಸಂಗ, ಅದಕ್ಕೆ ತಕ್ಕುದಾದಂಥ ಸ್ಥಾನಮಾನಗಳ ಕನಸು ಗರಿಗೆದರಿಕೊಳ್ಳುತ್ತಿದೆ. ಇದೇ ಹೊತ್ತಿನಲ್ಲಿ ಕೇರಳದಲ್ಲಿನ ಬುಡಕಟ್ಟು ಸಮುದಾಯದ ಹೆಣ್ಣುಮಗಳೊಬ್ಬಳು ಉಪ ಜಿಲ್ಲಾಧೀಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಶ್ರೀಧನ್ಯಾ ವಯನಾಡಿನ ಪುದುತನ ಪಂಚಾಯ್ತಿ ವ್ಯಾಪ್ತಿಗೆ ಬವರುವ ಪ್ರದೇಶವೊಂದರ ಬಡ ಬುಡಕಟ್ಟು ಸಮುದಾಯದಿಂದ ಬಂದವರು. ತೀರಾ ಪೇಟೆ ಕಡೆ ಬಂದು ಕಾಲೇಜು ತನಕ ವ್ಯಾಸಂಗ ಮಾಡೋದೇ ಈ ಸಮುದಾಯದ ಪಾಲಿಗೆ ಬಹುದೊಡ್ಡ ಸಾಧನೆ ಎಂಬಂಥಾ ವಾತಾವರಣವಿದೆ. ಹಾಗೆ ನೋಡಿದರೆ, ಕರ್ನಾಟಕವೂ ಸೇರಿದಂತೆ ಎಲ್ಲ ಭಾಗಗಳ ಬುಡಕಟ್ಟು ಜನ ಆಂಗಗಳ…

Read More

ಹೇಗಾದರೂ ಮಾಡಿ ಚಿತ್ರರಂಗದಲ್ಲಿ ಏನಾದರೊಂದು ಸಾಧಿಸಬೇಕೆಂಬ ಹಂಬಲ ಹೊತ್ತ ಜೀವಗಳೆಲ್ಲ ಬದುಕಿನ ಯಾವುದೋ ಇರಿಕ್ಕು ಗಲ್ಲಿಗಳಲ್ಲಿ ಕಳೆದು ಹೋಗೋದಿದೆ. ವರದಂತೆ, ಅದುವರೆಗಿನ ತಪಸ್ಸಿನ ಫಲದಂತೆ ಒಲಿದು ಬಂದ ಅವಕಾಶವನ್ನು ಉಪಯೋಗಿಸಿಕೊಂಡು ತಾರೆಗಳಾದವರಿಗೂ ಏಕಾಏಕಿ ಮಂಕಾಗುವ, ಕಳೆದು ಹೋಗಿ ಬಿಡುವ ಅಪಾಯ ಇದ್ದೇ ಇರುತ್ತೆ. ಅದು ಬಣ್ಣದ ಜಗತ್ತಿನ ಬಣ್ಣನೆಗೆ ನಿಲುಕದ ಮಾಯೆ. ಹಾಗೆ ನಾಯಕ ನಟರಾಗಿ ಮಿಂಚಿ, ಭರವಸೆ ಮೂಡಿಸಿ ಇದ್ದಕ್ಕಿದ್ದಂತೆ ನೇಪಥ್ಯಕ್ಕೆ ಸರಿದ ಒಂದಷ್ಟು ಪ್ರತಿಭೆಗಳಿದ್ದಾವೆ. ಆ ಸಾಲಿನಲ್ಲಿ ಪ್ರಧಾನವಾಗಿ ಗಣನೆಗೆ ತೆಗೆದುಕೊಳ್ಳಬಹುದಾದ ಹೆಸರು ಸುನೀಲ್ ರಾವ್ ಅವರದ್ದು. ಖ್ಯಾತ ಗಾಯಕಿ ಬಿ.ಕೆ ಸುಮಿತ್ರಾರ ಮಗ ಸುನೀಲ್ ರಾವ್. ಅದರಾಚೆಗೆ ತನ್ನದೇ ಆದ ಐಡೆಂಟಿಟಿ ಪಡೆದುಕೊಂಡು ಮರೆಯಾಗಿದ್ದ ಅವರು ತುರ್ತು ನಿರ್ಗಮನದ ಮೂಲಕ ಮತ್ತೆ ಆಗಮಿಸಿದ್ದಾರೆ. ಇದು ಸಿನಿ ಪ್ರೇಮಿಗಳ ಪಾಲಿಗೆ ಖುಷಿಯ ಸಂಗತಿ. ಕಡಿಮೆಯೇನಲ್ಲ; ಹತ್ತತ್ತಿರ ಹನ್ನೆರಡು ವರ್ಷಗಳ ಕಾಲ ಚಿತ್ರರಂಗದಿಂದ ದೂರವುಳಿದಿದ್ದವರು ಸುನೀಲ್ ರಾವ್. ಈ ಹಂತದಲ್ಲಿ ಅವರು ತೆರೆಗೆ ಸರಿದ ಬಗ್ಗೆ ಊಹಾಪೋಹಗಳು ಹಬ್ಬಿಕೊಂಡಿದ್ದವು. ಗಾಂಧಿನಗರದಗುಂಟ…

Read More