Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಕನ್ನಡದ ಗಿಲ್ಲಿ ಎಂಬೊಂದು ಚಿತ್ರದ ಮೂಲಕ ನಟಿಯಾಗಿ ಪಾದಾರ್ಪಣೆ ಮಾಡಿದ್ದಾಕೆ ರಕುಲ್ ಪ್ರೀತ್ ಸಿಂಗ್. ಜಗ್ಗೇಶ್ ಮಗ ಹೀರೋ ಆಗಿದ್ದ ಆ ಚಿತ್ರ ಹೀನಾಯವಾಗಿ ಗೋತಾ ಹೊಡೆದರೂ, ಅದಾಗಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ರಕುಲ್ ಮಾತ್ರ ಭರಪೂರ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಳು. ತೆಲುಗು, ತಮಿಳು ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ರೂಪುಗೊಂಡಿದ್ದಳು. ಹೀಗೆ ಏಕಾಏಕಿ ನಟಿಯಾಗಿ ಆಗಮಿಸಿ, ಆ ನಂತರದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ್ದ ರಕುಲ್, ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದದ್ದು ತೆಲುಗು ಚಿತ್ರರಂಗದಲ್ಲಿ. ಬಹುಕಾಲದ ನಂತರ ಮಾಧ್ಯಮವೊಂದರಲ್ಲಿ ಕಾಣಿಸಿಕೊಂಡಿರುವ ರಕುಲ್, ತೆಲುಗು ಚಿತ್ರರಂಗದ ತನ್ನ ವೈಭೋಗದ ದಿನಗಳನ್ನು ಮೆಲುಕು ಹಾಕಿದ್ದಾಳೆ. ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತಾಡುತ್ತಿದ್ದ ರಕುಲ್, ತೆಲುಗು ಚಿತ್ರರಂಗದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ತನ್ನ ವೃತ್ತಿ ಬದುಕಿನ ಬಗ್ಗೆ ಮಾತಾಡಿದ್ದಾಳೆ. ಒಂದು ಕಾಲದಲ್ಲಿ ಬಳುಕುವ ಬಳ್ಳಿಯಂತಿದ್ದ ಈ ಹುಡುಗಿ ತೆಲುಗು ಚಿತ್ರರಂಗದಲ್ಲಿ ಭಾರೀ ಬೇಡಿಕೆ ಹೊಂದಿದ್ದಳು. ವರ್ಷವೊಂದಕ್ಕೆ ಏನಿಲ್ಲವೆಂದರೂ ನಾಲಕೈದು ಚಿತ್ರಗಳಲ್ಲಿಯಾದರೂ ನಟಿಸುತ್ತಿದ್ದಳು. ಹಾಗೆ ನಟಿಸಿದ ಬಹುತೇಕ ಚಿತ್ರಗಳು…

Read More

ಇದ್ದು ಭಿನ್ನ ಜಾಡಿನ ಕ್ರೈಂ ಥ್ರಿಲ್ಲರ್! ರಗಡ್ ಕಥಾನಕದ ಚಿತ್ರವೊಂದು ಸದ್ದೇ ಇಲ್ಲದೆ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ರೆಡಿಯಾಗಿ ನಿಂತಿದೆ. ಈ ಚಿತ್ರ ಪ್ರೇಕ್ಷಕರ ಗಮನ ಸೆಳೆದಿದ್ದು, ಭಾರೀ ಸದ್ದು ಮಾಡಿದ್ದು ಒಂದು ಪೋಸ್ಟರ್ ಮೂಲಕ. ಹೀಗೆ ಅಚ್ಚರಿದಾಯಕವಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಚಿತ್ರ ಯೆಲ್ಲೋ ಗ್ಯಾಂಗ್. ಶೀರ್ಷಿಕೆಯಲ್ಲಿಯೇ ನಿಗೂಢವೇನನ್ನೋ ಬಚ್ಚಿಟ್ಟುಕೊಂಡಂತಿರುವ ಯೆಲ್ಲೋ ಗ್ಯಾಂಗ್ಸ್ ಮೂಲಕ ರವೀಂದ್ರ ಪರಮೇಶ್ವರಪ್ಪ ಸ್ವತಂತ್ರ ನಿರ್ದೇಶಕರಾಗಿ ಅಡಿಯಿರಿಸುತ್ತಿದ್ದಾರೆ. ಯೆಲ್ಲೋ ಗ್ಯಾಂಗ್ ಎಂಬ ಶೀರ್ಷಿಕೆಯೇ ಕಥೆಯ ಸುತ್ತಾ ಒಂದಷ್ಟು ಕುತೂಹಲ ಮೂಡಿಸುವಂತಿದೆ. ಈ ಬಗ್ಗೆ ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಒಂದು ಡ್ರಗ್ ಡೀಲ್ ಸುತ್ತಾ ತೆರೆದುಕೊಂಡು, ಆ ನಂತರ ಕಾಸಿನ ಕೇಂದ್ರಿತವಾಗಿ ಬಿಚ್ಚಿಕೊಳ್ಳುವ ರಗಡ್ ಕಥೆಯನ್ನು ಯೆಲ್ಲೋ ಗ್ಯಾಂಗ್ಸ್ ಹೊಂದಿದೆಯಂತೆ. ಇತ್ತೀಚೆಗಷ್ಟೇ ಇದರ ಟೀಸರ್ ಒಂದು ಬಿಡುಗಡೆಗೊಂಡಿತ್ತು. ಈವತ್ತಿಗೆ ಯೆಲ್ಲೋ ಗ್ಯಾಂಗ್ ಬಿಡುಗಡೆಯ ಹೊಸ್ತಿಲಲ್ಲಿ ಈ ಪರಿಯಾಗಿ ನಿರೀಕ್ಷೆ ಮೂಡಿಸಿದೆಯೆಂದರೆ, ಅದರಲ್ಲಿ ಟೀಸರ್ ಪಾಲು ಬೆಟ್ಟದಷ್ಟಿದೆ. ಇದರೊಂದಿಗೆ ಹಬ್ಬಿಕೊಂಡಿರುವ ಕಥೆಯೆಡೆಗಿನ ಕುತೂಹಲವಿದೆಯಲ್ಲಾ? ಅದನ್ನು ಅಕ್ಷರಶಃ…

Read More

ಕೊರೋನಾ ಕರಿಛಾಯೆಯ ನಡುವೆ ಮಂಕಾದಂತಿದ್ದ ಒಂದಷ್ಟು ಚಿತ್ರಗಳೀಗ ಸಾವರಿಸಿಕೊಂಡು ಬಿಡುಗಡೆಯ ಅಂಚಿಗೆ ಬಂದು ನಿಂತಿದೆ. ಹಾಗೆ ನೋಡಿದರೆ, ಹೀಗೆ ಕೊರೋನಾ ಕಾಲದಲ್ಲಿ ಗ್ರಹಣ ಕವುಚಿಕೊಂಡ ಸಿನಿಮಾಗಳದ್ದೇ ಮತ್ತೊಂದು ಸಿನಿಮಾಕ್ಕಾಗುವಷ್ಟು ದುರಂತ ಕಥೆಗಳಿದ್ದಾವೆ. ಅರೆಬರೆ ಚಿತ್ರೀಕರಣಗೊಂಡಿದ್ದ ಸಿನಿಮಾಗಳದ್ದೇ ಒಂದು ಕಥೆಯಾದರೆ, ಇನ್ನೇನು ಬಿಡುಗಡೆಗೆ ದಿನಾಂಕ ನಿಗಧಿಯಾಗಿದ್ದ ಚಿತ್ರಗಳದ್ದು ಮತ್ತೊಂದು ವ್ಯಥೆ. ಹಾಗೆ ೨೦೨೦ರ ಏಪ್ರಿಲ್ ತಿಂಗಳ ಆಸುಪಾಸಲ್ಲಿ ಬಿಡುಗಡೆಗೆ ಸಿದ್ಧವಾಗಿ, ಹಠಾತ್ ಲಾಕ್‌ಡೌನಿನಿಂದಾಗಿ ಮರೆಗೆ ಸರಿದಿದ್ದ ಚಿತ್ರಗಳ ಸಾಲಿನಲ್ಲಿ ‘೯ ಸುಳ್ಳು ಕಥೆಗಳು’ ಚಿತ್ರ ಪ್ರಧಾನವಾಗಿ ಗುರುತಿಸಿಕೊಳ್ಳುತ್ತದೆ. ವರ್ಷಗಳ ಹಿಂದಿನಿಂದಲೇ ರಿಷಭ್ ಶೆಟ್ಟಿ ಹಾಡಿದ್ದೊಂದು ಹಾಡು ಮತ್ತು, ಟೀಸರ್, ಟ್ರೈಲರ್‌ಗಳ ಮೂಲಕ ಭರವಸೆ ಮೂಡಿಸಿದ್ದ ಈ ಚಿತ್ರ ಮುಂದಿನ ವಾರ ಅಂದರೆ, ೯ನೇ ತಾರೀಕಿನಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ. ನವರಸಗಳ ಆಧಾರದಲ್ಲಿ ಒಂಬತ್ತು ದಿಕ್ಕಿನ, ಒಂಬತ್ತು ಬಗೆಯ ವಿಭಿನ್ನ ಕಥಾಗುಚ್ಛಗಳನ್ನೊಳಗೊಂಡಿರುವ ಚಿತ್ರ ‘೯ ಸುಳ್ಳು ಕಥೆಗಳು’. ಶೃಂಗಾರ, ಹಾಸ್ಯ, ಕರುಣ, ರೌಧ್ರ, ವೀರ, ಭಯಾನಕ, ಅದ್ಭುತ, ಬೀಭತ್ಸ ಹಾಗೂ ಶಾಂತರಸಗಳ ಒಂಬತ್ತು ಕಥೆಯೊಂದಿಗೆ ಮಂಜುನಾಥ್…

Read More

ಯಾವುದೇ ಆಡಂಬರದ ಹಂಗಿಲ್ಲದೆ ಕೆಲ ಚಿತ್ರಗಳು ಸೈಲೆಂಟಾಗಿ ತಯಾರುಗೊಂಡು ಬಿಡುಗಡೆಗೆ ಸನ್ನದ್ಧವಾಗುತ್ತವೆ. ಆ ಮೂಲಕವೇ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಸೆಳೆದುಕೊಳ್ಳುವಲ್ಲಿಯೂ ಯಶಸ್ವೀಯಾಗುತ್ತವೆ. ಆ ಯಾದಿಯಲ್ಲಿ ರಣವ್ಯೂಹ ಚಿತ್ರವೂ ಸೇರಿಕೊಳ್ಳುತ್ತೆ. ಇದೀಗ ರಣವ್ಯೂಹದ ಟ್ರೈಲರ್ ಮತ್ತು ಹಾಡುಗಳು, ಕಲಾವಿದರ ಸಂಘದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದ ಮೂಲಕ ಬಿಡುಗಡೆಗೊಂಡಿವೆ. ಖ್ಯಾತ ನಿರ್ಮಾಪಕರೂ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರೂ ಆಗಿರುವ ಭಾ.ಮಾ ಹರೀಶ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಟ್ರೈಲರ್ ಮತ್ತು ಹಾಡುಗಳು ಮೂಡಿಬಂದಿರುವ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಲೇ, ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಶ್ರೀ ಶಿರಡಿ ಸಾಯಿಬಾಬಾ ಮೀವೀಸ್ ಬ್ಯಾನರಿನಡಿಯಲ್ಲಿ ವೇಣುಕುಮಾರ್ ಎಂ.ಜಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀಪತಿ ಪೂಜಾರಿ, ಶ್ರುತಿ ಹರೀಶ್ ಮತ್ತು ಮಂಜುಳಾ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಎಸ್.ಎಸ್ ಶಂಕರ್‌ನಾಗ್ ವಿಭಿನ್ನವಾದ, ಸಂಕೀರ್ಣವಾದ ಕಥಾ ಹಂದರದೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ. ಮನುಷ್ಯರೆಲ್ಲರಲ್ಲಿ ಅಡಕವಾಗಿರುವಂಥಾ ಅಸಂಗತವಾದ ವ್ಯಕ್ತಿತ್ವ, ಮನಃಸ್ಥಿತಿಗಳ ಗಹನ ವಿಚಾರಗಳೊಂದಿಗೆ ರಣವ್ಯೂಹದ ಕಥೆ ಸುತ್ತಿಕೊಂಡಿದೆ. ಯಾವುದೇ…

Read More

ಆಗಾಗ ನಾನಾ ಅವತಾರಗಳಲ್ಲಿ ಪ್ರತ್ಯಕ್ಷರಾಗುತ್ತಾ, ಒಂದಷ್ಟು ವಿವಾದದ ಮೂಲಕ ಸದ್ದು ಮಾಡುತ್ತಿರುವಾತ ಕಾಳಿಮಠದ ಸ್ವಾಮೀಜಿಯಾಗಿ ಗುರುತಿಸಿಕೊಂಡಿರುವ ರಿಷಿಕುಮಾರ. ಮೂಲರ್ತ ಡ್ಯಾನ್ಸರ್ ಕೂಡಾ ಆಗಿರುವ ರಿಷಿ, ಒಂದು ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ ಅಂತೊಂದು ಸುದ್ದಿ ವರ್ಷಗಳ ಹಿಂದೆಯೇ ಹಬ್ಬಿಕೊಂಡಿತ್ತು. ಆ ನಂತರದಲ್ಲಿ ಸದ್ದೇ ಇಲ್ಲದೆ ಒಪ್ಪ ಓರಣವಾಗಿ ಚಿತ್ರೀಕರಣ ಮುಗಿಸಿಕೊಂಡಿದ್ದ ಈ ಚಿತ್ರವೀಗ ಇದೇ ವಾರ ಬಿಡುಗಡೆಗೊಳ್ಳಲು ಸನ್ನದ್ಧವಾಗಿದೆ. ಸದ್ಯದ ಮಟ್ಟಿಗೆ ಸಮಾಜಮುಖಿಯಾದ, ಒಂದೊಳ್ಳೆ ಕಥಾಹಂದರದೊಂದಿಗೆ ತಯಾರುಗೊಂಡಿರುವ ‘ಸರ್ವಂ ನಾಟ್ಯಮಯಂ’ ಎಂಬ ಈ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಹಿಡಿಸುವಂತೆ ಮೂಡಿ ಬಂದಿದೆಯಂತೆ. ಡಿಎಂಕೆ ಆಡ್ ಜೋನ್ ಬ್ಯಾನರಿನಡಿಯಲ್ಲಿ ಮನೋಜ್ ವರ್ಮಾ ನಿರ್ಮಾಣ ಮಾಡಿರುವ ಈ ಚಿತ್ರವನ್ನು, ವಿಜಯನಗರ ಮಝು ಅಂತಲೇ ಹೆಸರಾಗಿರುವ ಮಂಜುನಾಥ್ ಬಿ.ಎನ್ ನಿರ್ದೇಶನ ಮಾಡಿದ್ದಾರೆ. ಶೀರ್ಷಿಕೆ ಕೇಳಿದಾಕ್ಷಣವೇ ಇದು ನಾಟ್ಯದ ಭೂಮಿಕೆಯಲ್ಲಿ ಜರುಗುವ ಕಥಾನಕವನ್ನೊಳಗೊಂಡ ಚಿತ್ರವೆಂಬ ವಿಚಾರ ಸ್ಪಷ್ಟವಾಗುತ್ತದೆ. ಈಗ ಒಂದೇ ಆವೇಗದ ಚಿತ್ರಗಳ ಜಮಾನ. ಇಂಥಾದ್ದರ ನಡುವೆ ಯಾವುದೋ ಗಹನವಾದ ವಿಚಾರಗಳೊಂದಿಗೆ, ಮನಮುಟ್ಟುವಂತೆ ಈ ಚಿತ್ರ ಮೂಡಿ…

Read More

ಶೋಧ ನ್ಯೂಸ್ ಡೆಸ್ಕ್: ಹೊತ್ತಿನ ಕೂಳಿಗಾಗಿ ಮೈ ಬಗ್ಗಿಸಿ ದುಡಿಯೋ ಅದೆಷ್ಟೋ ಜೀವಗಳ ಮೇಲೆ ಉಳ್ಳವರು ಪ್ರಹಾರ ನಡೆಸುವಂಥಾ ಘಟನಾವಳಿಗಳು ಆಗಾಗ ನಡೆಯುತ್ತಿರುತ್ತವೆ. ಇಂಥಾ ಬಡಪಾಯಿ ಜೀವಗಳ ಮೇಲೆ ಆಕ್ರಮಣ ನಡೆಸಿ, ಹಿಂಸಿಸಿದರೆ ಖದೀಮರಿಗೆ ಅದೆಂಥಾ ಸುಖ ಸಿಗುತ್ತದೋ ಗೊತ್ತಿಲ್ಲ. ಅಂತೂ ಕಷ್ಟಪಟ್ಟು ದುಡಿದು ತಿನ್ನುವವರನ್ನು ಪರಿ ಪರಿಯಾಗಿ ಕಾಡುವಂಥಾ ವಿಕೃತಿ ಎಲ್ಲೆಡೆ ಮೇಳೈಸಿಕೊಂಡಿದೆ. ಇಂಥಾದ್ದೇ ಒಂದು ಘಟನೆಯೀಗ ಉತ್ತರ ಪ್ರದೇಶದಲ್ಲಿಒ ನಡೆದು ಹೋಗಿದೆ. ಹರಿದ ನೋಟನ್ನು ತೆಗೆದುಕೊಳ್ಳಲು ನಿ೮ರಾಕರಿಸಿದ್ದ ಫಿಜ್ಜಾ ಡೆಲಿವರಿ ಹುಡುಗನ ಮೇಲೆ ನಶೆಯೇರಿಸಿಕೊಂಡಿದ್ದ ಗ್ಯಾಂಗೊಂದು ಗುಂಡು ಹಾರಿಸಿಬಿಟ್ಟಿದೆ. ಮೊನ್ನೆ ದಿನ ಎಂದಿನಂತೆ ಶಹಜಹಾನ್ ಪುರದ ಆ ಫಿಜ್ಜಾ ಡೆಲಿವರಿ ಬಾಯ್ ಕಾರ್ಯಾರಂಭ ಮಾಡಿದ್ದಾನೆ. ಶಹಜಹಾನ್‌ಪುರ ಆತನ ಪಾಲಿಗೆ ಚಿರಪರಿಚಿತ. ಸರಿರಾತ್ರಿಯ ಹೊತ್ತಾದರೂ ಕೂಡಾ ಯಾವುದೇ ಅಂಜಿಕೆ, ಹೆದರಿಕೆ ಇಲ್ಲದೆ ಆತ ಫಿಜ್ಜಾ ಡೆಲಿವರಿ ಮಾಡುತ್ತಿದ್ದ. ಹೀಗಿರುವಾಗಲೇ ಮೊನ್ನೆ ದಿನ ಆತನಿಗೊಂದು ಆರ್ಡರ್ ಬಂದಿದೆ. ಹೇಳಿದ ಸಮಯಕ್ಕೆ ಸರಿಯಾಗಿ ಆ ಹುಡುಗ ಡೆಲಿವರಿ ಕೊಟ್ಟಿದ್ದಾನೆ. ಈ ಹಂತದಲ್ಲಿ ಫಿಜ್ಜಾ…

Read More

ಮೇರೆ ಮೀರಿಕೊಂಡಿರುವ ರಾಜಕೀಯ ವೈಷಮ್ಯದ ನಡುವೆ ಮನುಷ್ಯತ್ವವೇ ಮರೆಯಾಗಿ ಬಿಟ್ಟಿದೆ. ಇಲ್ಲಿ ಕೊಲೆ, ಹೊಡದಾಟ ಬಡಿದಾಟಗಳೆಲ್ಲವೂ ಸೆನ್ಸಿಟಿವ್ ವಿಚಾರಗಳಾಗುಳಿದಿಲ್ಲ. ಅದೂ ಕೂಡಾ ರಾಜಕೀಯ ಅಸ್ವಿತ್ವಕ್ಕಾಗಿನ ಹೋರಾಟದಂತೆ, ಬಲಪ್ರದರ್ಶನದಂತೆಯೇ ಬಿಂಬಿಸಲ್ಪಡುತ್ತಿದೆ. ಇಂಥಾ ರಾಕ್ಷಸೀಯ ಕೃತ್ಯಗಳನ್ನು ಪಕ್ಷಾಧಾರಿತವಾಗಿ ಬೆಂಬಲಿಸುವಂಥಾ ಹೀನ ಮನಃಸ್ತಿತಿ ನಿಜಕ್ಕೂ ಪ್ರಜ್ಞಾವಂತರಲ್ಲೊಂದು ಆತಂಕ ಹುಟ್ಟಿಸಿಬಿಟ್ಟಿದೆ. ಸೈದ್ಧಾತಿಕ ಭಿನ್ನಾಭಿಪ್ರಾಯ, ಪಕ್ಷ ಭೇದಗಳಿಗೆಲ್ಲ ಕೈ ಮಿಲಾಯಿಸೋದು, ಜೀವ ತೆಗೆಯುವುದೇ ಅಂತಿಮ ಫಲಿತಾಂಶ ಎಂಬಂಥಾ ಅನಾಹುತಕಾರಿ ಮನಃಸ್ಥಿತಿ ವೇಗವಾಗಿ ಹಬ್ಬುತ್ತಿದೆ. ಅದರ ಭಾಗವಾಗಿಯೇ ಇಂದೀಗ ಮಧ್ಯಪ್ರದೇಶದ ಇಂಧೋರ್‌ನಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಒಬ್ಬ ಬಿಜೆಪಿ ಮುಖಂಡನನ್ನು ಕೊಲೆ ಮಾಡಲೆತ್ನಿಸಿದ್ದಾನೆ. ಈ ಪ್ರಕರಣದಲ್ಲಿ ಆರೋಪಿಯಾಗಿರುವಾತ, ಇಂಧೋರ್‌ನ ವಾರ್ಡ್ ನಂಬರ್ ಇಪ್ಪತ್ತೆರಡರ ಕಾಂಗ್ರೆಸ್ ಕಾರ್ಪೋರೇಟರ್ ರಾಜು ಭಡೋರಿಯಾ. ರಾಜುವಿಗೂ ಬಿಜೆಪಿ ಮುಖಂಡ ಚಂದು ಶಿಂಧೆ ಎಂಬಾತನಿಗೂ ರಾಜಕೀಯ ಕಾರಣಗಳಿಗಾಗಿ ವೈಮನಸ್ಯ ಮೂಡಿಕೊಂಡಿತ್ತು. ಇವರಿಬ್ಬರ ನಡುವೆ ಸಾಕಷ್ಟು ಸಲ ಮಾರಾಮಾರಿಗಳೂ ಕೂಡಾ ನಡೆದಿದ್ದವು. ಅದನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಕಾರ್ಪೋರೇಟರ್ ರಾಜು ಭಡೋರಿಯಾ, ಶಿಂಧೆಯನ್ನು ಮುಗಿಸುವ ಪ್ಲಾನು ಮಾಡಿದ್ದ. ಅದರನ್ವಯ ಕೆಲ ದಿನಗಳ…

Read More

ಕೆಲವೊಮ್ಮೆ ಚಿತ್ರರಂಗದಲ್ಲಿ ಹಠಾತ್ ಗೆಲುವು ದಾಖಲಾಗಿ ಬಿಡೋದಿದೆ. ಒಂದಷ್ಟು ಮಂದಿ ಅಪಸ್ವರವೆತ್ತಿದರೂ, ಕಂಟೆಂಟಿನ ಬಗ್ಗೆ ವ್ಯಾಪಕ ತಕರಾರುಗಳಿದ್ದರೂ, ಅವುಗಳೇ ಸಿನಿಮಾ ಮಂದಿರ ಹೌಸ್ ಫುಲ್ಲಾಗುವಂತೆ ಮಾಡೋದೂ ಇದೆ. ಅಂಥಾದ್ದೊಂದು ವಾತಾವರಣಕ್ಕೆ ಇತ್ತೀಚಿನ ಉದಾಹರಣೆಯಾಗಿ ದಾಖಲಾಗುವ ಚಿತ್ರ, ತೆಲುಗಿನ ಪುಷ್ಟ. ಇದರೊಳಗೆ ಹೇಳಿಕೊಳ್ಳುವ ಕಥೆಯಾಗಲಿ, ವೈಶಿಷ್ಟ್ಯವಾಗಲಿ ಏನೂ ಇಲ್ಲ ಎಂಬಂಥಾ ಮಾತುಗಳು ಕೇಳಿ ಬಂದಿದ್ದವು. ಆದರೂ ಅಲ್ಲು ಅರ್ಜುನ್ ನಿರ್ವಹಿಸಿದ್ದ ಪಾತ್ರ, ಡೈಲಾಗುಗಳು ಮತ್ತದರ ಸೆಳೆಯುವಂಥಾ ಚಹರೆಗಳೆಲ್ಲವೂ ಸೇರಿಕೊಂಡು ಪುಷ್ಪಾ ದೊಟ್ಟ ಮಟ್ಟದಲ್ಲಿಯೇ ಗೆಲುವು ದಾಖಲಿಸಿತ್ತು. ಈಗಾಗಲೇ ಒಂದಷ್ಟು ಗೆಲುವು ಕಂಡು ಯಶಸ್ವೀ ನಟನೆನಿಸಿಕೊಂಡಿರುವ ಅಲ್ಲು ಅರ್ಜುನ್‌ಗೆ ಪುಷ್ಪ ಬಹುದೊಡ್ಡ ಬ್ರೇಕ್ ನೀಡಿ ಬಿಟ್ಟಿದೆ. ಪಷ್ಪ ಚಿತ್ರ ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಬಿಡುಗಡೆಯಾಗಿ ಸದ್ದು ಮಾಡಿತ್ತು. ಇದರಲ್ಲಿನ ಅಲ್ಲು ಅರ್ಜುನ್ ಹೇಳಿದ್ದ ಬಹುತೇಕ ಡೈಲಾಗುಗಳು ಟ್ರೆಂಡ್ ಸೆಟ್ ಮಾಡಿದ್ದವು. ಇದಾದ ಬಳಿಕ ಅಲ್ಲು ಮುಂದ್ಯಾವ ಚಿತ್ರದಲ್ಲಿ ನಟಿಸುತ್ತಾನೆಂದು ಅಭಿಮಾನಿ ಬಳಗ ಕಾದು ಕೂತಿದೆ. ಈ ನಡುವೆ ಪುಷ್ಪ ಚಿತ್ರದ ನಂತರ ಪ್ಯಾನಿಂಡಿಯಾ ಲೆವೆಲ್ಲಿನ ಹೀರೋನಂತೆ…

Read More

ಶಂಕರಣ್ಣನ ಅಭಿಮಾನಿ ಪ್ರಭಾಕರ್ ಬದುಕಿನ ಹಾದಿ… ಶೀರ್ಷಿಕೆಯಲ್ಲಿನ ಸೆಳೆತದಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಚಿತ್ರ ಕೌಟಿಲ್ಯ. ಈಗಾಗಲೇ ಪ್ರೇಕ್ಷಕರನ್ನು ನಾನಾ ದಿಕ್ಕಿನಲ್ಲಿ ಸೆಳೆದಿರುವ ಈ ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆಗಾಣುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬಿಡುಗಡೆಯಾಗಿದ್ದ ಈ ಚಿತ್ರದ ಟ್ರೈಲರ್ ನೋಡಿ ಬಹುತೇಕರು ಬೆರಗಾಗಿದ್ದರು. ಯಾವ ಸದ್ದುಗದ್ದಲವೂ ಇಲ್ಲದೆ ಮುಂದುವರೆದು ಬಂದು, ಬಿಡುಗಡೆಯ ಹೊಸ್ತಿಲಿನಲ್ಲಿ ನಿಂತಿದ್ದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಟಾಕ್ ಕ್ರಿಯೇಟು ಮಾಡಿದ್ದೇ ಈ ಟ್ರೈಲರ್ ಮೂಲಕ. ಕೌಟಿಲ್ಯ ಎಂಬ ಹೆಸರೇ ಚಿತ್ರದೊಳಗೆ ಅಡಕವಾಗಿರುವ ವಿಭಿನ್ನ ಕಥೆ ಮತ್ತು ವೈಶಿಷ್ಟ್ಯಗಳಿಗೆ ಕನ್ನಡಿ ಹಿಡಿಯುವಂತಿದೆ. ಒಟ್ಟಾರೆ ಕಥೆಯ ಬಗ್ಗೆ ಯಾವೊಂದು ಸುಳಿವನ್ನೂ ಬಿಟ್ಟುಕೊಡದ ಚಿತ್ರತಂಡ ಈ ಮೂಲಕ ಕುತೂಹಲವನ್ನು ಮತ್ತಷ್ಟು ತೀವ್ರಗೊಳಿಸಿದೆ. ಹೀಗೆ ಜನಮಾನಸವನ್ನು ಸೆಳೆದಿರುವ ಕೌಟಿಲ್ಯ ಚಿತ್ರದ ಮೂಲಕವೇ ಉತ್ತರಕರ್ನಾಟಕ ಸೀಮೆಯ ಅಪ್ಪಟ ಪ್ರತಿಭೆ ಪ್ರಭಾಕರ ಶೇರಖಾನೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅರ್ಜುನ್ ರಮೇಶ್ ಮತ್ತು ಪ್ರಿಯಾಂಕಾ ಚಿಂಚೊಳ್ಳಿ ನಾಯಕ, ನಾಯಕಿಯರಾಗಿ ನಟಿಸಿದ್ದಾರೆ. ಉತ್ತರಕರ್ನಾಟಕದಿಂದ ಬಂದು…

Read More

ಚಿತ್ರರಂಗದಲ್ಲಿ ಹಣಕಾಸಿಗೆ ಸಂಬಂಧಿಸಿದಂಥಾ ರಂಕಲುಗಳು ಸಂಭವಿಸೋದು ಮಾಮೂಲು. ಅದಕ್ಕೆ ಭಾಷೆಯ ಗಡಿಗಳ ಹಂಗಿಲ್ಲ. ಎಂತೆಂಥಾ ಕ್ರಿಯಾಶೀಲರೂ ಕೂಡಾ ಇಂಥಾ ಹಣಕಾಸಿನ ಲಫಡಾಗಳಲ್ಲಿ ತಗುಲಿಕೊಂಡು, ಹೆಸರು ಕೆಡಿಸಿಕೊಂಡಿದ್ದಿದೆ. ಇದೀಗ ಆ ಸಾಲಿನಲ್ಲಿ ಒಂದಷ್ಟು ವಿವಾದ ಹುಟ್ಟುಹಾಕುವ ಸರದಿ ತಮಿಳಿನಲ್ಲಿ ನಿರ್ದೇಶಕನಾಗಿ ಪ್ರಖ್ಯಾತಿ ಪಡೆದುಕೊಂಡಿರುವ ಲಿಂಗುಸ್ವಾಮಿ ಅಲಿಯಾಸ್ ನಮ್ಮಾಳ್ವರ್ ಲಿಂಗುಸ್ವಾಮಿ ಅವರದ್ದು. ಸಿನಿಮಾ ಒಂದರ ನಿರ್ಮಾಣಕ್ಕೆಂದು ೧.೩ ಕೋಟಿ ಲೋನ್ ಪಡೆದು ಕೈಯೆತ್ತಿದ್ದ ಲಿಂಗುಸ್ವಾಮಿ ವಿರುದ್ಧ ಚೆಕ್ ಬೌನ್ಸ್ ಕೇಸು ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ಕೋರ್ಟ್ ಹತ್ತು ಸಾವಿರ ದಂಡ ಪಾವತಿ ಅಥವಾ ಆರು ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ತಾಕೀತು ಮಾಡಿತ್ತು. ಕಡೆಗೂ ಲಿಂಗುಸ್ವಾಮಿ ಹತ್ತು ಸಾವಿರ ಫೈನ್ ಕಟ್ಟಿ ಜೈಲು ವಾಸದಿಂದ ತಪ್ಪಿಸಿಕೊಂಡಿದ್ದಾರೆ. ಲಿಂಗುಸ್ವಾಮಿ ಕಾರ್ತಿ ಮತ್ತು ಸಮಂತಾ ನಟನೆಯ ಎನ್ನಿ ಏಜು ನಾಲ್ ಎಂಬ ಚಿತ್ರವನ್ನು ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ತಿರುಪತಿ ಬ್ರದರ್ಸ್ ಎಂಬ ಬ್ಯಾನರಿನ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದ ಲಿಂಗುಸ್ವಾಮಿ, ಅದಕ್ಕಾಗಿ…

Read More