ಇಂದು ಆವಿಷ್ಕಾರ, ಸಂಶೋಧನೆಗಳ ಭರಾಟೆಯೂ ಹೆಚ್ಚಾಗಿದೆ. ಅದಕ್ಕೆ ಸ್ಪರ್ಧೆಯೊಡ್ಡುವಂತೆ ಮಾನವರನ್ನು ನಾನಾ ಬಗೆಯ ಕಾಯಿಲೆಗಳೂ ಕೂಡಾ ಬಾಧಿಸಲಾರಂಭಿಸಿವೆ. ಆದರೆ ಕಾಸೊಂದಿದ್ದರೆ ಅದೆಂಥಾ ಕಾಯಿಲೆಗಳನ್ನಾದರೂ ವಾಸಿ ಮಾಡುವಂಥ, ಸಾವಿನ ಕ್ಷಣಗಳನ್ನು ಮತ್ತೊಂದಷ್ಟು ಕಾಲಾವಧಿಗೆ ಮುಂದೆ ತಳ್ಳುವಂಥಾ ಔಷಧಿಗಳೂ ಇದ್ದಾವೆ. ಆಧುನಿಕ ಜೀವನಶೈಲಿಯೇ ಜನರನ್ನು ಇಂಥಾ ಕಾಯಿಲೆ ಕಸಾಲೆಗಳ ಕೋರೆ ಹಲ್ಲುಗಳಲ್ಲಿ ಸಿಲುಕಿಸಿವೆ ಅನ್ನೋ ಅಪವಾದವೂ ಇದೆ. ಆಯ್ತು, ಈಗಿನ ದಿನಮಾನದಲ್ಲಿ ಕಲುಷಿತ ವಾತಾವರಣ ಮನುಷ್ಯನ ದೇಹವನ್ನು ಕಾಯಲೆಗಳ ಕೊಂಪೆಯನ್ನಾಗಿಸಿದೆ. ಹಾಗಂತ ನಮ್ಮ ಪೂರ್ವಜರನ್ನು ಇಂಥಾ ಕಾಯಿಲೆಗಳೂ ಬಾಧಿಸುತ್ತಿರಲಿಲ್ಲವಾ ಅನ್ನೋ ಪ್ರಶ್ನೆ ಕಾಡುತ್ತೆ. ಪ್ರಮಾಣ ಕೊಂಚ ಕಡಿಮೆಯಿದ್ದರೂ ಕೂಡಾ ಮಾರಣಾಂತಿಕ ಕಾಯಿಲೆಗಳು ಮತ್ತು ಸಾಂಕ್ರಾಮಿಕಗಳು ಎಲ್ಲ ಕಾಲದಲ್ಲಿಯೂ ಇದ್ದವು. ಈಗಾದರೆ ಅಂಥಾ ಕಾಯಿಲೆಗಳು ಸಲೀಸಾಗಿ ಬಂದೆರಗದಂತೆ ತಡೆಯುವಂಥಾ, ಅದರ ವಿರುದ್ಧ ಹೋರಾಡುವಂಥ ಲಸಿಕೆಗಳಿದ್ದಾವೆ. ಆದರೆ ಅದರ ಕಲ್ಪನೆಯೂ ಇಲ್ಲದಿದ್ದ ಕಾಲದಲ್ಲಿ ಜನ ಏನು ಮಾಡುತ್ತಿದ್ದರು? ಈ ಪ್ರಶ್ನೆಯೇ ಭಯಾನಕ ಸತ್ಯಗಳನ್ನ ಮುಖಾಮುಖಿಯಾಗಿಸುತ್ತೆ. ನಮ್ಮ ಪೂರ್ವಜರು ಅದಕ್ಕಾಗಿ ಒಂದಿಷ್ಟು ವಿಚಿತ್ರ ಎನ್ನಿಸುವ, ಭಯ ಆವರಿಸಿಕೊಳ್ಳುವಂಥಾ ಮಾರ್ಗೋಪಾಯಗಳನ್ನ…
Author: Santhosh Bagilagadde
ಶೋಧ ಮ್ಯೂಸ್ ಡೆಸ್ಕ್: ಬ್ರಿಟನ್ ಅನ್ನು ಅತ್ಯಂತ ಸುದೀರ್ಘಾವಧಿಯವರೆಗೆ ಆಳಿದ್ದ, ಪೊರೆದಿದ್ದ ರಾಣಿ ಎಲೆಜಬೆತ್ ತೊಂಬತ್ತಾರನೇ ವರ್ಷದಲ್ಲಿ ನಿಧನರಾಗಿದ್ದಾರೆ. ಆಕೆಯ ಅಂತ್ಯಕ್ರಿಯೆ ಕೂಡಾ ಅತ್ಯಂತ ಗೌರವಪೂರ್ವಕವಾಗಿ, ವಿಶ್ವದ ನಾನಾ ದೇಶಗಳ ನಾಯಕರುಗಳ ಸಮ್ಮುಖದಲ್ಲಿ ನೆರವೇರಿzಶ್ವೀ ಮೂಲಕ ಜಗತ್ತು ಕಂಡ ರಾಜಮನೆತನಗಳ ಅತ್ಯಂತ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಬ್ರಿಟನ್ ರಾಣಿಯಾಗಿ ಪಟ್ಟಕ್ಕೇರಿದ್ದ ಎಲಿಜಬೆತ್ ಒಂದು ಥರದಲ್ಲಿ ದಂತಕಥೆ ಇದ್ದಂತೆಂದರೂ ತಪ್ಪೇನಿಲ್ಲ. ಎಜಿಜಬೆತ್ ಕೊನೆಯುಸಿರೆಳೆದಾಕ್ಷಣದಿಂದಲೇ ಆಕೆಯ ಬಗ್ಗೆ ಇಂಟರೆಸ್ಟಿಂಗ್ ಎಂಬಂಥಾ ಒಂದಷ್ಟು ವಿಚಾರಗಳು ಜಾಹೀರಾಗುತ್ತಿವೆ. ಓರ್ವ ಮಹಿಳೆ ಒಂದು ದೇಶವನ್ನೇ ರಾಣಿಯಾಗಿ ಮುನ್ನಡೆಸೋದೆಂದರೆ ಅದು ಸಾಮಾನ್ಯದ ಸಂಗತಿಯೇನಲ್ಲ. ಈ ಹಾದಿಯ ತುಂಬ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿರುವಾಕೆ ರಾಣಿ ಎಲಿಜಬೆತ್. ವಿಶೇಷವೆಂದರೆ, ತೊಂಭತ್ತಾರನೇ ವಯಸ್ಸಿನಲ್ಲಿ ಅಸನೀಗಿದ ಈ ರಾಣಿಯ ಶವ ಪೆಟ್ಟಿಗೆಯ ಸುತ್ತಾ ಇದೀಗ ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳು ಗರಿಬಿಚ್ಚಿಕೊಳ್ಳಲಾರಂಭಿಸಿವೆ. ಸಾಮಾನ್ಯವಾಗಿ, ಇಂಥಾ ಜನಪ್ರಿಯರ ಅಂತಿಮ ವಿಧಿ ವಿಧಾನಗಳ ಸುತ್ತಾ ಒಂದಷ್ಟು ವಿಶೇಷತೆಗಳು ಹಬ್ಬಿಕೊಂಡಿರುತ್ತವೆ. ಹಾಗಿರುವಾಗ ರಾಣಿ ಎಲಿಜಬೆತ್…
ಶೋಧ ನ್ಯೂಸ್ ಡೆಸ್ಕ್: ಅಭಿವೃದ್ಧಿ ಶೀಲ ದೇಶವಾಗಿ ಗುರುತಿಸಿಕೊಂಡಿರುವ ಭಾರತದ ಮೈತುಂಬಾ ನಾನಾ ಸಮಸ್ಯೆಗಳ ಗಾಯಗಳಿದ್ದಾವೆ. ಸದ್ಯ ನಾನಾ ಭ್ರಮೆ ಬಿತ್ತಿ ಭಾರತ ಬದಲಾಗಿದೆ ಅಂತೆಲ್ಲ ಪೋಸು ಕೊಟ್ಟರೂ ಕೂಡಾ ಈವತ್ತಿಗೂ ಭಾರತ ಬಡ ದೇಶವೇ. ತೀರಾ ಸವಲತ್ತು, ಸೌಕರ್ಯಗಳು ಬೇಡ; ಕನಿಷ್ಠ ಮೂಲಭೂತ ಸೌಕರ್ಯಗಳಿಗೂ ತತ್ವಾರ ಬಂದು, ಅದೆಷ್ಟೋ ಜನರು ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ದುರಂತವೆಂದರೆ ಸ್ವತಂತ್ರ ಭಾರತವಾಗಿ ಇಷ್ಟು ವರ್ಷ ಕಳೆದರೂ ಕೂಡಾ ಅಪಘಾತವಾದಾಗ ಸೂಕ್ತವಾದೊಂದು ಆಂಬುಲೆನ್ಸ್ ಸೇವೆ ಸಿಗೋ ವ್ಯವಸ್ಥೆ ಇನ್ನೂ ಇಂಡಿಯಾದ ಮೂಲೆ ಮೂಲೆಗಳಿಲ್ಲ. ಇಂಥಾದ್ದೊಂದು ಅವ್ಯವಸ್ಥೆಗೆ ಕನ್ನಡಿ ಹಿಡಿಯುವಂಥಾ ವೀಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಪಘಾತದಲ್ಲಿ ತೀವ್ರಥರವಾಗಿ ಗಾಯಗೊಂಡಿರುವ ರೋಗಿಯೋರ್ವನನ್ನು ಜಿಸಿಬಿಬಿಯಲ್ಲಿ ಕೊಂಡೊಯ್ಯುತ್ತಿರುವ ಆ ವೀಡಿಯೋವನ್ನು ವ್ಯಕ್ತಿಯೋರ್ವರು ಹಂಚಿಕೊಂಡಿದ್ದಾರೆ. ಅದು ಮಧ್ಯಪ್ರದೇಶದ ಕಟ್ನಿ ಎಂಬಲ್ಲಿಯದ್ದೆಂದು ಹೇಳಲಾಗುತ್ತಿದೆ. ಅದರ ಅಸಲೀಯತ್ತೇನು? ಅದರ ಹಿಂದಿರೋ ವಸ್ತುಸ್ಥಿತಿಯೇನೆಂಬ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ಸದರಿ ವೀಡಿಯೋದ ಹಿಂದೆ ಅದೇನೇನಿದೆಯೋ ಗೊತ್ತಿಲ್ಲ. ಆದರೆ ಅಂಥಾ ಪರಿಸ್ಥಿತಿ ಈವತ್ತಿಗೂ ಭಾರತದ…
ಶೋಧ ನ್ಯೂಸ್ ಡೆಸ್ಕ್: ಪದೇ ಪದೆ ಎದುರಾಗುವ ಪ್ರಾಕೃತಿಕ ವಿಪತ್ತುಗಳ ನಡುವೆಯೂ, ಅಡಿಗಡಿಗೆ ಫೀನಿಕ್ಸಿನಂತೆ ಎದ್ದು ನಿಲ್ಲುತ್ತಾ ಬಂದಿರುವ ವಿಶಿಷ್ಟ ದೇಶ ಜಪಾನ್. ಇದುವರೆಗೂ ಆ ದೇಶದ ಮಂದಿ ಅದೆಷ್ಟು ಪ್ರಾಕೃತಿಕ ಅವಘಡಗಳಿಗೀಡಾದರು, ಅದೆಷ್ಟು ತಲ್ಲಣಿಸಿದರೆಂದರೆ, ಜಗತ್ತಿನ ಬೇರ‍್ಯಾವುದೇ ದೇಶವಾದರೂ ಸರ್ವನಾಶವಾಗಿ ಬಿಡುತ್ತಿತ್ತೇನೋ. ಆದರೆ, ಇಂಥಾ ಸವಾಲುಗಳೆದುರಾದಾಗ ಅದಕ್ಕೆ ಎದೆಯೊಡ್ಡಿ ಜೈಸಿಕೊಳ್ಳುವ ಕಲೆಯನ್ನು ಪ್ರಕೃತಿಯೇ ಆ ಜನರಿಗೆ ಕೊಟ್ಟಂತಿದೆ. ಹೀಗೆ ಪ್ರಾಕೃತಿಕ ವಿಪತ್ತುಗಳಿಂದ ನಲುಗುತ್ತಿರುವ ಜಪಾನಿಗರಿಗೀಗ ಮತ್ತೊಂದು ಕಂಟಕ ಎದುರಾಗಿದೆ. ಅದು ರಣಭೀಕರ ಚಂಡಮಾರುತದ ರೂಪದಲ್ಲಿ ಜಪಾನಿಗೆ ಲಗ್ಗೆಯಿಟ್ಟಿದೆ. ಗಂಟೆಗೆ ಇನ್ನೂರೈವತ್ತು ಕಿಲೋಮೀಟರ್‌ಗೂ ಅಧಿಕ ವೇಗದಲ್ಲಿ ಅಪ್ಪಳಿಸುತ್ತಿರುವ ಈ ಭೀಕರ ಚಂಡಮಾರುತ, ಜಪಾನಿನ ಕರಾವಳಿ ಸೇರಿದಂತೆ ಕೆಲ ಪ್ರದೇಶಗಳನ್ನು ಅಕ್ಷರಶಃ ಸ್ಮಶಾನವನ್ನಾಗಿಸಿದೆ. ಕಡಲ ತೀರದ ಮಂದಿತಯ ಬದುಕಂತೂ ಬೀದಿಗೆ ಬಂದುಬಿಟ್ಟಿದೆ. ಅದೆಷ್ಟೋ ಜನರು ಜೀವ ಕಳೆದುಕೊಂಡಿದ್ದಾರೆ. ಒಂದಷ್ಟು ಪ್ರದೇಶಗಳಿಗೆ ಅಲ್ಲಿನ ಆಡಳಿತ ರೆಡ್ ಅಲರ್ಟ್ ಘೋಶಿಸಿದೆ. ಆದರೆ ಅದೆಂಥಾದ್ದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರೂ ಕೂಡಾ ರಣ ವೇಗದ ಗಾಳಿ ಎಲ್ಲವನ್ನೂ ಛಿದ್ರವಾಗಿಸುತ್ತಿದೆ.…
ಸಿನಿಮಾ ರಂಗದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬುದು ಹಲವರ ಕನಸು. ಅದಕ್ಕಾಗಿ ಪಡುವ ಪರಿಶ್ರಮ, ಆ ಹಾದಿ ತಂದೊಡ್ಡುವ ಸವಾಲುಗಳು ಸಲೀಸಾದುವೇನಲ್ಲ; ಅದನ್ನು ಎದುರಿಸಿ ದಾಟಿಕೊಳ್ಳದಿದ್ದರೆ ಗೆಲುವೆಂಬುದು ದಕ್ಕುವುದು ಕನಸಿನ ಮಾತು. ಆದರೆ, ಅಷ್ಟೆಲ್ಲವನ್ನೂ ಮೀರಿಕೊಂಡು ಬಣ್ಣದ ಜಗತ್ತಿಗೆ ಬಂದ ಹೆಣ್ಣುಮಕ್ಕಳ ಪಾಲಿಗೆ ಮತ್ತೊಂದು ಆಯಾಮದ ಕಂಟಕಗಳು ಹೆಜ್ಜೆ ಹೆಜ್ಜೆಗೂ ಎದುರಾಗುತ್ತಲೇ ಹೋಗುತ್ತವೆ. ಅದರಲ್ಲಿಯೂ ಸಿನಿಮಾ ರಂಗದ ಆಯಕಟ್ಟಿನ ಜಾಗಗಳಲ್ಲಿ ಕೂತಿರುವ ಕೆಲ ಮಂದಿ, ಅವಕಾಶ ಕೇಳಿ ಬಂದ ಹುಡುಗೀರನ್ನು ಮಂಚ ಹತ್ತಿಸಿಕೊಳ್ಳುವ ಖಯಾಲಿ ಇಟ್ಟುಕೊಂಡಿರುತ್ತಾರೆ. ಇಂಥಾ ಹೀನ ಮನಃಸ್ಥಿತಿಯ ವಿರುದ್ಧ ವರ್ಷಗಳ ಹಿಂದೆ ಕಾಸ್ಟಿಂಗ್ ಕೌಚ್ ಅಂತೊಂದು ವಿಚಾರ ಮುನ್ನೆಲೆಗೆ ಬಂದಿತ್ತು. ಕೊರೋನಾ ಕಾಲಘಟ್ಟದಲ್ಲಿ ತಣ್ಣಗಾದಂತಿದ್ದ ಕಾಸ್ಟಿಂಗ್ ಕೌಚ್‌ಗೀಗ ಮತ್ತೆ ಜೀವ ಬಂದಿದೆ. ಇದೀಗ ಕನ್ನಡವೂ ಸೇರಿದಂತೆ ನಾನಾ ಚಿತ್ರರಂಗಗಳಲ್ಲಿ ಮತ್ತೆ ಕಾಸ್ಟಿಂಗ್ ಕೌಚ್ ವೃತ್ತಾಂತ ಗರಿಬಿಚ್ಚಿಕೊಳ್ಳಲಾರಂಭಿಸಿದೆ. ಅದರ ಭಾಗವಾಗಿಯೇ ಮಧ್ಯಪ್ರದೇಶ ಮೂಲದ ಬಾಲಿವುಡ್ ನಟಿ ಹಾಗೂ ರಂಗಭೂಮಿಯ ಪ್ರತಿಭಾನ್ವಿತ ಕಲಾವಿದೆ ಪೂಜಾ ಪಾಂಡೆ ಕಾಸ್ಟಿಂಗ್ ಕೌಚ್ ಅನುಭವಗಳನ್ನು ತೆರೆದಿಟ್ಟಿದ್ದಾಳೆ. ಆಕೆಯ…
ಹೆಚ್ಚೇನಲ್ಲ; ಹದಿನೈದಿಪ್ಪತ್ತು ಅಡಿಯಿಂದ ಕೆಳಕ್ಕೆ ಬಿದ್ದರೂ ಸೊಂಟವೂ ಸೇರಿದಂತೆ, ದೇಹದ ನಾನಾ ಭಾಗದ ಮೂಳೆಗಳು ಮುರಿಯೋ ಸಂಭವವಿದೆ. ತಲೆ ಕೆಳಗಾಗಿ ಬಿದ್ದರಂತೂ ಬದುಕೋದೇ ಡೌಟು. ಇನ್ನು ನೂರಾರು ಅಡಿಯಿಂದ ಬಿದ್ದರಂತೂ ಮೇಲೆದ್ದು ಬರೋ ಸಾಧ್ಯತೆಗಳೇ ಕಡಿಮೆ. ಹಾಗಿದ್ದ ಮೇಲೆ ಸಾವಿರಾರು ಅಡಿಯಿಂದ ಕೆಳಕ್ಕೆ ಬಿದ್ದರೆ ಬದುಕೋದು ಸಾಧ್ಯವೇ? ಇಂಥಾ ಪ್ರಶ್ನೆ ಎದುರಾದ್ರೆ ಸಾರಾಸಗಟಾಗಿ ಸಾಧ್ಯವಿಲ್ಲ ಎಂಬ ಉತ್ತರವೇ ಎದುರುಗೊಳ್ಳುತ್ತೆ. ಆದರೆ ಅದನ್ನು ಸುಳದ್ಳು ಮಾಡುವಂಥಾ ಘಟನೆಯೊಂದು ೧೯೭೦ರ ದಶಕದಲ್ಲಿಯೇ ನಡೆಯಲಾಗಿದೆ. ಅದು ಗಿನ್ನಿಸ್ ರೆಕಾರ್ಡಿನಲ್ಲಿಯೂ ದಾಖಲಾಗಿ ಬಿಟ್ಟಿದೆ! ಸರ್ಬಿಯಾ ದೇಶದ ಪ್ಲೈಟ್ ಅಟೆಂಡೆಂಟ್ ವೆಸ್ನಾ ವುಲೋವಿಕ್ ಎಂಬ ಗಟ್ಟಿಗಿತ್ತಿ ಹೆಣ್ಣು ಮಗಳು ಈ ಪವಾಡಸದೃಶ ಘಟನೆಯ ಕೇಂದ್ರಬಿಂದು. ಹಲವಾರು ವರ್ಷಗಳಿಂದಲೂ ವಿಮಾನ ಯಾನದ ಬಗ್ಗೆ ಕನಸು ಕಂಡು ಕಡೆಗೂ ಪ್ಲೈಟ್ ಅಟೆಂಡೆಂಟ್ ಆಗಿದ್ದ ಆಕೆ ವಿಮಾನ ಪತನದ ಆಘಾತ ಎದುರಿಸುವಂತಾಗಿತ್ತು. ಗಡಿಬಿಡಿಯಲ್ಲಿ ಪ್ಯಾರಾಚೂಟ್ ಅನ್ನೂ ಹಿಡಿದುಕೊಳ್ಳದೆ ಕ್ರ್ಯಾಶ್ ಆಗಿದ್ದ ವಿಮಾನದಿಂದ ಹಾರಿಕೊಂಡ ಆಕೆ ಮೂವತ್ಮೂರು ಸಾವಿರ ಅಡಿಗಳಷ್ಟು ಎತ್ತರದಿಂದ ಭೂಮಿಗೆ ಬಿದ್ದಿದ್ದಳು.…
ರೇವ್ ಪಾರ್ಟಿಗಳ ಸರದಾರ ಶ್ರೀನಿ ಪಕ್ಕಾ ಪಿಂಪ್! ಕೊರೋನಾ ಕಾಲಘಟ್ಟದಲ್ಲಿ ಸ್ಯಾಂಡಲ್‌ವುಡ್ಡಿನ್ನ ಡ್ರಗ್ಸ್ ವ್ಯಸನದ ಕುರಿತಾದ ಸುದ್ದಿಗಳು ಬಹುದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದವು. ಸಿಸಿಬಿ ಪೊಲೀಸರು ಕನ್ನಡ ಚಿತ್ರರಂಗವನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಿ, ರಾಗಿಣಿ ಮತ್ತು ಸಂಜಾನಾರನ್ನು ಬಂಧಿಸಿದ್ದರು. ಹಾಗೆ ತಿಂಗಳುಗಟ್ಟಲೆ ಜೈಲಿನಲ್ಲಿ ಬಂಧಿಯಾಗಿದ್ದಾಕೆ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ. ಜೈಲೊಳಗೇ ನಾನಾ ರೀತಿಯ ಡ್ರಾಮಾ ನಡೆಸಿ ಕಡೆಗೂ ಬೇಲ್ ಪಡೆದು ಹೊರ ಬಂದಿರುವ ರಾಗಿಣಿಗೆ, ಈ ಕ್ಷಣಕ್ಕೂ ಕಂಟಕದ ಕತ್ತಿಯ ಮೊನೆ ನೆತ್ತಿಯ ಮೇಲೆ ತೂಗುತ್ತಲೇ ಇದೆ. ಅತ್ತ ಸಿಸಿಬಿ ಪೊಲೀಸರ ಗಮನ ಬೇರೆಡೆಯತ್ತ ಹೊರಳಿಕೊಂಡಿರುವಂತಿರೋದರಿಂದ, ಹೇಗೋ ಬಚಾವಾದೆ ಅಂತಿದ್ದ ರಾಗಿಣಿಗೀಗ ಅನಿರೀಕ್ಷಿತ ಶಾಕ್ ಒಂದು ಎದುರಾಗಿದೆ; ಖುದ್ದು ಸಿಸಿಬಿ ಪೊಲೀಸರೇ ತನ್ನ ಖಾಸಾ ಗೆಣೆಕಾರ, ಕುಖ್ಯಾತ ಡ್ರಗ್ ಪೆಡ್ಲರ್ ಶಿನೀವಾಸ್ ಸುಬ್ರಮಣ್ಯ ಅಲಿಯಾಸ್ ಶ್ರೀನಿಯನ್ನು ಬಂಧಿಸುವ ಮೂಲಕ! ವೀರಮದಕರಿ ಚಿತ್ರದ ಮೂಲಕ ಸುದೀಪ್‌ಗೆ ನಾಯಕಿಯಾಗಿ ಕನ್ನ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದವಳು ರಾಗಿಣಿ. ಆ ನಂತರದಲ್ಲಿ ಕನ್ನಡದ ನೆಲದಲ್ಲಿಯೇ ಭರಪೂರ…
ರೀಮೇಕೆಂಬ ಸತ್ಯ ಮುಚ್ಚಿಡಲು ಕಾರಣವೇನು? ಮಾನ್ಸೂನ್ ರಾಗ… ಹೀಗೊಂದು ಸಿನಿಮಾ ಅಣಿಗೊಳ್ಳುತ್ತಿರುವ ವಿಚಾರ ಕೇಳಿಯೇ ಪ್ರೇಕ್ಷಕರೆಲ್ಲ ಥ್ರಿಲ್ ಆಗಿ ಹೋಗಿದ್ದರು. ನಂತರ ಹೆಸರಿಗೆ ತಕ್ಕುದಾದ ಆರ್ಧ್ರ ಛಾಯೆ ಹೊಂದಿದ್ದ ಪೋಸ್ಟರುಗಳು ಕಂಡ ಮೇಲಂತೂ ಪ್ರೇಕಲ್ಷಕರು ನಿರೀಕ್ಷೆಯ ಅಗ್ಗಿಷ್ಠಿಕೆಯ ಮುಂದೆ ನಿಂತು ಬೆಚ್ಚಗಾಗಲಾರಂಭಿಸಿದ್ದರು; ಈ ಸಿನಿಮಾ ಬಗ್ಗೆ ಇನ್ನೂ ಹೆಚ್ಚೆಚ್ಚು ಮಾಹಿತಿ ಪಡೆಯಲು ಕಾತರರಾಗಿದ್ದರು. ಅದರಲ್ಲಿಯೂ ವಿಶೇಷವಾಗಿ, ವಿಲನ್ ಆಗಿ ಅಬ್ಬರಿಸಿ ಸದ್ದು ಮಾಡಿದ್ದ ಡಾಲಿ ಧನಂಜಯ್ ಹೀರೋ ಆಗಿ, ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಂಬ ಸುಳಿವು ಸಿಕ್ಕಿದ್ದೇ ಮಾನ್ಸೂನಿನ ಹನಿಗಳು ಪ್ರತೀ ಮನಸುಗಳಲ್ಲಿಯೂ ತೊಟ್ಟಿಕ್ಕಲು ಶುರುವಿಟ್ಟುಕೊಂಡಿತ್ತು. ಒಟ್ಟಾರೆಯಾಗಿ ಇದೊಂದು ಭಿನ್ನ ಕಥಾನಕ, ಮಾನ್ಸೂನಿನಲ್ಲಿ ತೋಯ್ದ ಗಹನವಾದ ಕಥೆ ಇದರೊಳಗಿದೆ ಎಂಬೆಲ್ಲ ನಂಬಿಕೆಗಳು ತಂತಾನೇ ಮೂಡಿಕೊಂಡಿದ್ದವು. ಆದರೆ ಮಾನ್ಸೂನಿನ ಮೊದಲ ಮಳೆಯ ಮಣ್ಣ ಘಮಲಿನಂಥಾದ್ದೇ ತಾಜಾ ಅನುಭೂತಿಯ ನಿರೀಕ್ಷೆಯೊಂದಿಗೆ ಸಿನಿಮಾ ಮಂದಿರ ಹೊಕ್ಕ ಮಂದಿಗೆ ಎದುರಾಗಿರೋದು, ಮುಗ್ಗಲು ಹಿಡಿದ ಕಮಟು ಮತ್ತು ಲಯ ತಪ್ಪಿದ ರಾಗ! ನಿಮಗೆಲ್ಲ ಗೊತ್ತಿಲ್ಲದಿರುವುದೇನಲ್ಲ; ಮಳೆ ಅಂದರೇನೇ ವಿಭಿನ್ನ ಅನುಭೂತಿ.…
ಎಲ್ಲವೂ ನಿರೀಕ್ಷೆಯಂತೆಯೇ ಘಟಿಸುತ್ತಿರುವ ಅಪಾರ ಖುಷಿ ಬನಾರಸ್ ಚಿತ್ರತಂಡವನ್ನು ತಬ್ಬಿಕೊಂಡಿದೆ. ಓರ್ವ ನವ ನಾಯಕನ ಚಿತ್ರವೊಂದು ಈ ಪರಿಯಾಗಿ, ತಾನೇತಾನಾಗಿ ಸೌಂಡು ಮಾಡಲು ಸಾಧ್ಯವಾ ಅತೊಂದು ಅಚ್ಚರಿ ಮೂಡುವಂತೆ ಬನಾರಸ್ ಟಾಕ್ ಕ್ರಿಯೇಟ್ ಮಾಡುತ್ತಿದೆ. ಗಮನೀಯ ಅಂಶವೆಂದರೆ, ಇಂಥಾದ್ದೊಂದು ಸಕಾರಾತ್ಮಕ ವಾತಾವರಣಕ್ಕೆ ಕಾರಣವಾಗಿರೋದು ಚೆಂದದ ಹಾಡುಗಳ ಹಂಗಾಮಾ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಮಾಯಗಂಗೆ ಎಂಬ ಹಾಡನ್ನು ಬಹುತೇಕರು ಮತ್ತೆ ಮತ್ತೆ ಕೇಳುತ್ತಾ ಸುಖಿಸುತ್ತಿದ್ದಾರೆ. ಈ ಕಾರಣದಿಂದಲೇ ಅದು ದೊಡ್ಡ ಮಟ್ಟದಲ್ಲಿ ಟ್ರೆಂಡ್ ಸೆಟ್ ಮಾಡಿದೆ. ಆ ಮೆಲೋಡಿಯ ಮಾಧುರ್ಯವಿನ್ನೂ ಚಾಲ್ತಿಯಲ್ಲಿರುವಾಗಲೇ, ಟಪ್ಪಾಂಗುಚ್ಚಿ ಶೈಲಿಯ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಗೊಂಡಿದೆ. ನಿರ್ದೇಶಕ ಜಯತೀರ್ಥ ಸಿನಿಮಾ ಅಂದ ಮೇಲೆ ಅಲ್ಲಿ ಮತ್ತೆ ಮತ್ತೆ ಕೇಳುವಂಥಾ ಹಾಡುಗಳ ಹಾಜರಿ ಇದ್ದೇ ಇರುತ್ತದೆ. ಹಾಗೊಂದು ನಂಬಿಕೆ ಪ್ರೇಕ್ಷಕ ವಲಯದಲ್ಲಿ ಪಡಿಮೂಡಿಕೊಂಡಿದೆ. ಆ ನಂಬಿಕೆ ಬನಾರಸ್ ಮೂಲಕ ಮತ್ತಷ್ಟು ಹೊಳಪುಗಟ್ಟಿಕೊಂಡಿದೆ. ಈ ಹಿಂದೆ ಮಾಯಗಂಗೆ ಹಾಡು ಬರೆದಿದ್ದ ವಿ. ನಾಗೇಂದ್ರ ಪ್ರಸಾದ್ ಅವರೇ ಈಗ ಬಿಡುಗಡೆಯಾಗಿರೋ ಟ್ರೋಲ್ ಸಾಂಗಿಗೂ…
ಜೈಲಲ್ಲಿಟ್ಟರೂ ಆತ ಹೇಗೆ ಎಸ್ಕೇಪ್ ಆಗ್ತಿದ್ದ ಗೊತ್ತಾ? ಈಗ ಎಲ್ಲಿ ನೋಡಿದ್ರೂ ಬರೀ ಡ್ರಗ್ಸ್‌ನದ್ದೇ ಸುದ್ದಿ. ಕರ್ನಾಟಕದಲ್ಲಿ ಅದ್ಯಾವ ಕಾಲದಿಂದ್ಲೋ ಹಬ್ಬಿಕೊಂಡಿದ್ದ ಡ್ರಗ್ಸ್ ದಂಧೆಯ ಬೇಸಿಗೇ ಈಗ ಬೆಂಕಿ ಬಿದ್ದಿದೆ. ಸಿಸಿಬಿ ಅಧಿಕಾರಿಗಳಂತೂ ಈ ಬಾರಿ ಈ ದಂಧೆಯನ್ನ ಥಂಡಾ ಹೊಡೆಸೋ ಸಂಕಲ್ಪದೊಂದಿಗೆ ಕಾರ್ಯಾಚರಣೆ ನಡೆಸ್ತಿದ್ದಾರೆ. ಹಾಗಾದ್ರೆ ಇದರ ಬೇರುಗಳಿರೋದು ಕರ್ನಾಟದಲ್ಲಿ ಮಾತ್ರವಾ? ಯಾಕೆ ಈ ಬಾರಿ ಬರೀ ಕರ್ನಾಟಕದಲ್ಲಿ ಮಾತ್ರವೇ ಇದರ ಸದ್ದಾಗ್ತಿದೆ ಅನ್ನೋ ಹತ್ತಾರು ಪ್ರಶ್ನೆಗಳಿದ್ದಾವೆ. ಆದ್ರೆ ಡ್ರಗ್ಸ್ ದಂಧೆಯ ಆಳ ಅಗಲ ಅರಿಯಬೇಕಾದ್ರೆ ಇಂಟರ್‌ನ್ಯಾಷನಲ್ ಡ್ರಗ್ಸ್ ಮಾಫಿಯಾದ ಭೀಕರ ಸ್ವರೂಪವನ್ನೊಮ್ಮೆ ಜಾಲಾಡಲೇ ಬೇಕು. ಕೊಕೇನ್, ಮರಿಜುವಾನ ಸೇರಿದಂತೆ ಡ್ರಗ್ಸ್‌ನಲ್ಲಿ ನಾನಾ ವಿಧಗಳಿದ್ದಾವೆ. ಅದೊಂದು ನಶೆಯೇರಿಸೋ ಮಾಯಾಲೋಕ. ಈವತ್ತಿಗೆ ಕರ್ನಾಟಕದಲ್ಲಿ ಪಡ್ಡೆ ಹುಡುಗರ ಕೈಗೂ ಸಲೀಸಾಗಿ ಸಿಗೋ ಡ್ರಗ್ಸ್ ದೂರದ ದೇಶಗಳಿಂದ ಲೀಲಾಜಾಲವಾಗಿಯೇ ಸರಬರಾಜಾಗುತ್ತೆ. ಇಂದು ಅಂತಾರಾಷ್ಟ್ರೀಯ ಭದ್ರತಾ ವ್ಯವಸ್ಥೆ ಬಿಗುವಾಗಿದೆ. ಆದ್ರೂ ದೇಶದಿಂದ ದೇಶಕ್ಕೆ ಸಲೀಸಾಗಿ ಅದು ಸಾಗಾಟವಾಗ್ತಿರೋದೇ ಆ ದಂಧೆ ಬೆಳೆದು ನಿಂತಿರೋ ರೀತಿಗೆ ಸಾಕ್ಷಿ.…