ವರ್ಷವೊಂದು ಮುಗಿಯುತ್ತಾ ಬಂದಾಗ, ಇನ್ನೇನು ಹೊಸಾ ವರ್ಷವೊಂದು ಕಣ್ಣಳತೆಯಲ್ಲಿಯೇ ಕೈಚಾಚುತ್ತಿರುವಾಗ, ಪಡೆದದ್ದೇನು ಕಳೆದುಕೊಂಡಿದ್ದೇನೆಂಬ ಲೆಕ್ಕಾಚಾರಗಳು ಶುರುವಾಗುತ್ತವೆ. ಆದರೆ, ಕನ್ನಡ ಚಿತ್ರರಂಗದ ಮಟ್ಟಿಗೆ ಈ ವರ್ಷ ಪಡೆದುಕೊಂಡಿದ್ದೇ ಹೆಚ್ಚೆಂದರೂ ಅತಿಶಯವೇನಲ್ಲ. ಹಾಗೆ ಗಳಿಸಿಕೊಂಡ ಗೆಲುವಿನ ಪಟ್ಟಿಗೆ ಕಡೇ ಕ್ಷಣದಲ್ಲಿ ಸೇರ್ಪಡೆಯಾಗಬಲ್ಲ ಒಂದಷ್ಟು ಚಿತ್ರಗಳಿದ್ದಾವೆ. ಆ ಯಾದಿಯಲ್ಲಿ ಇದೇ ಡಿಸೆಂಬರ್ 22ರಂದು ಬಿಡುಗಡೆಗೊಳ್ಳಲಿರುವ ಹೊಸ ದಿನಚರಿ ಚಿತ್ರ ಖಂಡಿತವಾಗಿಯೂ ಸೇರ್ಪಡೆಗೊಳ್ಳುತ್ತದೆ. ಇದು ಹೊಸಬರ ತಂಡವೊಂದು ಸೇರಿ ರೂಪಿಸಿರುವ, ಹೊಸತನಗಳನ್ನು ಹೊಂದಿರುವ ಚಿತ್ರ. ಕೀರ್ತಿ ಶೇಖರ್ ಮತ್ತು ವೈಶಾಕ್ ಪುಷ್ಪಲತಾ ಸೇರಿಕೊಂಡ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹಾಗಾದರೆ, ಹೊಸಾ ದಿನಚರಿ ಯಾವ ಬಗೆಯ ಚಿತ್ರ? ಅದರಲ್ಲಿರುವ ಕಥೆ ಎಂಥಾದ್ದೆಂಬ ಪ್ರಶ್ನೆಗಳೀಗ ಮೂಡಿಕೊಂಡಿವೆ. ಆ ನಿಟ್ಟಿನಲ್ಲಿ ಚಿತ್ರತಂಡವೇ ಒಂದಷ್ಟು ವಿಚಾರಗಳನ್ನು ಜಾಹೀರು ಮಾಡಿದೆ. ಆ ಎಲ್ಲವುಗಳ ಸಾರಾಂಶವಾಗಿ ಕಣ್ಣೆದುರು ನಿಲ್ಲೋದು ಪ್ರೀತಿ ಎಂಬ ಮಾಯೆ. ಪ್ರೀತಿ ಎಂಬುದು ಎಂದಿಗೂ ಸವಕಲಾಗದಂಥಾ ಸಿನಿಮಾ ಸರಕು. ಆದರೆ, ಅದನ್ನು ಹೊಸತನಕ್ಕೆ ಒಗ್ಗಿಸಿಕೊಂಡು ರೂಪಿಸೋದು ತ್ರಾಸದಾಯಕ ಕೆಲಸ. ಅದನ್ನು ಈ…
Author: Santhosh Bagilagadde
ನಾನಾ ದಿಕ್ಕಿನಿಂದ, ಹಲವಾರು ಆಲೋಚನೆಗಳು ಹರಿಉ ಬಂದು ಸಂಗಮಿಸಿರೆ ಮಾತ್ರವೇ ಯಾವುದೇ ಚಿತ್ರರಂಗದ ಗೆಲುವಿನ ಹಿವಿಗೊಂದು ಹೊಸಾ ಓಘ ಸಿಗುತ್ತದೆ. ಕನ್ನಡ ಚಿತ್ರರಂಗವೀಗ ಅದರ ಪರ್ವಕಾಲವೊಂದನ್ನು ಸಂಭ್ರಮಿಸುತ್ತಿದೆ. ಭೂತಾರಾಧನೆಯ ಅಸ್ಮಿತೆ ಹೊಂದಿರುವ ತುಳುನಾಡ ಕಥನವನ್ನೊಳಗೊಂಡಿದ್ದ ಕಾಂತಾರವೀಗ ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ. ಆ ಚಿತ್ರದ ಮೂಲಕ ಪಂಜುರ್ಲಿ ದೈವದ ಕಾರಣೀಕ ಜಗದಗಲ ಹಬ್ಬಿಕೊಂಡಿದೆ. ಅದೇ ತುಳುನಾಡಮಣ್ಣಿನಲ್ಲಿ ಜೀವಪಡೆದು, ಇದೀಗ ನಾನಾ ದಿಕ್ಕುಗಳತ್ತ ಪ್ರಭೆ ಬೀರಿರುವ ಮತ್ತೊಂದು ಕಾರಣೀಕದ ದೈವ ಕೊರಗಜ್ಜ. ಈಗ ಕೊರಗಜ್ಜನ ರೋಚಕ ಕಥನ ಚಿತ್ರರೂಪ ಧರಿಸಿಕೊಂಡಿದೆ. ಅದು ಕರಿ ಹೈದ ಕರಿ ಅಜ್ಜ ಚಿತ್ರವಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದೆ. ಸರಿಸುಮಾರು ಹನ್ನೆರಡನೇ ಶತಮಾನದಲ್ಲಿ ಜೀವಿಸಿದ್ದ ಕೊರಗಜ್ಜ ದೈವದ ಬಗ್ಗೆ ಈಗ ನಾನಾ ದಿಕ್ಕುಗಳಲ್ಲಿ ಚರ್ಚೆಗಳಾಗುತ್ತಿವೆ. ಕರುನಾಡಿನ ನಾನಾ ದಿಕ್ಕುಗಳಿಂದ ಭಕ್ತರು ಕೊರಗಜ್ಜನ ದರ್ಶನಕ್ಕಾಗಿ ದಕ್ಷಿಣಕನ್ನಡದತ್ತ ಬಂದು ಹೋಗಲಾರಂಭಿಸಿದ್ದಾರೆ. ಇದೇ ಹೊತ್ತಿನಲ್ಲಿ ಮೈಸೂರು ಮುಂತಾದೆಡೆಗಳಲ್ಲಿ ಕೊರಗಜ್ಜನನ್ನು ಪ್ರತಿಷ್ಠಾಪಿಸಿ ಕಾಸು ಗೆಬರುವ ದಂಧೆಗಳೂ ಕೂಡಾ ಜೋರಾಗಿಯೇ ನಡೆಯುತ್ತಿವೆ. ಈ ಕುರಿತಾದ ಪರ ವಿರೋಧದ…
ಈ ವಿಚಾರ ನಿಮಗೆ ವಿಚಿತ್ರ ಅನ್ನಿಸಬಹುದು. ಆದರಿದು ಕಠೋರ ಸತ್ಯ. ನಮ್ಮ ನಿಲುಕಿಗೆ ಸಿಕ್ಕಂತೆ ಶಾರ್ಕ್‍ಗಳು, ಹಾವುಗಳಿಂದಾಗಿ ಒಂದಷ್ಟು ಜನ ಸಾಯ್ತಾರೆ ಅಂದ್ಕೋತೀವಿ. ಆದ್ರೆ ಅದು ಸುಳ್ಳು. ಹಾಗಂತ ವರ್ಷಗಟ್ಟಲೆ ವಿಶ್ವದ ನಾನಾ ಭಾಗಗಳನ್ನ ಗಮನದಲ್ಲಿಟ್ಟುಕೊಂಡು ನಡೆಸಿರೋ ವರದಿಯೇ ಸ್ಪಷ್ಟಪಡಿಸಿದೆ. ಹಾಗಾದ್ರೆ ಯಾವುದರಿಂದ ಹೆಚ್ಚಿನ ಜನ ಅಕಾಲ ಮರಣಕ್ಕೀಡಾಗ್ತಾರೆ ಅನ್ನೋ ಪ್ರಶ್ನೆ ಸಹಜಾನೇ. ಅದಕ್ಕುತ್ತರವಾಗಿ ನಿಲ್ಲೋದು ಸೊಳ್ಳೆಗಳು. ಬಹುಶಃ ಈ ಸೊಳ್ಳೆಗಳ ಹಾವಳಿ ಇಲ್ಲದ ಭೂಪ್ರದೇಶಗಳೇ ಅಪರೂಪವೇನೋ. ಅಷ್ಟು ದೊಡ್ಡ ಪ್ರಮಾಣದಲ್ಲಿ ಸೊಳ್ಳೆಗಳು ವಿಶ್ವವನ್ನೆಲ್ಲ ವ್ಯಾಪಿಸಿಕೊಂಡಿವೆ. ಗಮನೀಯ ಅಂಶ ಅಂದ್ರೆ ಅದ್ರ ಎಲ್ಲ ಪ್ರಭೇದಗಳೂ ಕೂಡಾ ಡೆಡ್ಲಿ ಗುಣ ಲಕ್ಷಣಗಳನ್ನೇ ಒಳಗೊಂಡಿವೆ. ವಿಶ್ವದ ತುಂಬೆಲ್ಲ ಇಂಥ ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಲು ಜನ ಹರಸಾಹಸ ಪಡ್ತಿದ್ದಾರೆ. ಆದರೂ ಕೂಡಾ ಅದರಲ್ಲಿ ಸಂಪೂರ್ಣ ಯಶ ಕಾಣಲಾಗ್ತಿಲ್ಲ. ಈ ಕಾರಣದಿಂದಲೇ ಪ್ರತೀ ವರ್ಷ ಏನಿಲ್ಲವೆಂದರೂ ಐವತ್ತು ಸಾವಿರದಷ್ಟು ಜನ ಸೊಳ್ಳೆಗಳಿಂದಾನೇ ಜೀವ ಕಳೆದುಕೊಳ್ತಿದ್ದಾರಂತೆ. ಒಂದು ವರದಿಯ ಪ್ರಕಾರ ಶಾರ್ಕ್ ದಾಳಿಯಿಂದ ಡಜನ್ನಿನಷ್ಟು ಜನ ಜೀವ ಕಳೆದುಕೊಳ್ತಿದ್ದಾರೆ.…
ನಮ್ಮ ದೇಹದ ಪ್ರತೀ ಅಂಗಾಂಗಗಳಿಗೂ ತಮ್ಮದೇ ಆದ ಮಹತ್ವ ಇದ್ದೇ ಇದೆ. ಅದರಲ್ಲಿ ಒಂದು ಹೆಚ್ಚು ಒಂದು ಕಡಿಮೆ ಅನ್ನೋದು ಇಲ್ಲವೇ ಇಲ್ಲ. ಅದರಲ್ಲೊಂದಕ್ಕೆ ತೊಂದರೆಯಾದರೂ ಕೂಡಾ ಇಡೀ ದೇಹದ ಒಟ್ಟಾರೆ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತೆ. ಅದರಲ್ಲಿಯೂ ಮೂಗಂತೂ ಕೇವಲ ಆಘ್ರಾಣಿಸೋದಕ್ಕೆ, ಉಸಿರಾಡೋದಕ್ಕೆ ಮಾತ್ರವಲ್ಲದೇ ಬಾಹ್ಯ ಸೌಂದರ್ಯದಲ್ಲಿಯೂ ಪ್ರಧಾನ ಪಾತ್ರ ವಹಿಸುತ್ತೆ. ಅವರಿವರ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡೋದಕ್ಕೆ ಮೂಗು ತೂರಿಸೋದು ಅನ್ನೋ ವಿಶೇಷಣ ನಮ್ಮ ನಡುವೆ ಚಾಲ್ತಿಯಲ್ಲಿದೆ. ಅದು ಮೂಗಿನ ಮಹತ್ವದ ದ್ಯೋತಕವೂ ಹೌದು. ಆದ್ರೆ ಈ ಮೂಗಿನ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳಿದ್ದಾವೆ. ಅವೆಲ್ಲವೂ ಯಾರಿಗೇ ಆದ್ರೂ ಅಚ್ಚರಿಯುಂಟು ಮಾಡುವಂತಿರೋದು ಸುಳ್ಳಲ್ಲ. ಮೂಗೆಂಬುದು ಮುಖದ ಒಟ್ಟಾರೆ ಸೌಂದರ್ಯದ ಕೇಂದ್ರ ಬಿಂದು. ಅದು ಇರಬೇಕಾದ ಜಾಗದಲ್ಲಿ, ಇಂತಿಷ್ಟೇ ಆಕಾರದಲ್ಲಿದ್ರೆ ಚೆನ್ನ. ಆ ಮೂಗಿನಲ್ಲಿಯೂ ನಾನಾ ವೆರೈಟಿಗಳಿರೋದು ಕಣ್ಣ ಮುಂದಿನ ಸತ್ಯ. ಈ ಕಾರಣದಿಂದಾನೆ ಪುಟ್ಟ ಮಕ್ಕಳ ಮೂಗನ್ನು ಕೊಂಚ ವಿಶೇಷವಾಗಿಯೇ ತಿದ್ದಿ ತೀಡುವ ಪರಿಪಾಠ ಚಾಲ್ತಿಯಲ್ಲಿದೆ.…
ಪ್ರಕೃತಿಯ ವೈಚಿತ್ರ್ಯಗಳಿಗೆ ಕೊನೆಯೆಂಬುದಿಲ್ಲ. ವಿಜ್ಞಾನ ಅದೆಷ್ಟೇ ಆವಿಷ್ಕಾರಗಳನ್ನ ನಡೆಸಿದರೂ ಅದರ ಕಣ್ಣು ತಪ್ಪಿಸಿಕೊಂಡಿರೋ ಅದೆಷ್ಟೋ ಅದ್ಭುತಗಳು ಈ ಜಗತ್ತಿನಲ್ಲಿವೆ. ನಾವು ಪ್ರಕೃತಿಯನ್ನ ನಮ್ಮ ದೃಷ್ಟಿಗೆ ಸೀಮಿತಗೊಳಿಸಿ ನೋಡುತ್ತೇವೆ. ಆದರೆ ಅದರ ನಿಗೂಢಗಳು ಕಣ್ಣಳತೆಯನ್ನ ಮೀರಿದಂತಿವೆ. ನದಿ ನೀರೆಂದರೆ ತಣ್ಣಗಿರುತ್ತದೆಂಬುದು ನಮ್ಮ ನಂಬಿಕೆ. ಅದನ್ನ ಸುಳ್ಳು ಮಾಡುವಂಥಾ ವರತೆಯೊಂದು ನಮ್ಮದೇ ದೇಶದಲ್ಲಿದೆ. ಆದ್ರೆ ಅಮೇಜಾನಿನ ದಟ್ಟ ಕಾಡಿನ ಒಡಲಲ್ಲೊಂದು ನದಿ ಕೊತ ಕೊತನೆ ಕುದಿಯುತ್ತಾ ಅದೆಷ್ಟೋ ಕಾಲದಿಂದ ಹರಿಯುತ್ತಿದೆ. ಅದು ದಟ್ಟವಾದ ಅಮೇಜಾನ್ ಕಾಡಿನ ಗರ್ಭದಲ್ಲಿರೋ ಅಚ್ಚರಿ. ಆಂಡ್ರ್ಯೂ ರೋeóÉೂೀ ಎಂಬ ಉತ್ಸಾಹಿ ಯುವ ವಿಜ್ಞಾನಿ ಪ್ರಯತ್ನಿಸದಿದ್ದರೆ ಆ ನದಿ ನಿಗೂಢವಾಗಿಯೇ ಉಳಿದು ಬಿಡುತ್ತಿತ್ತೇನೋ… ಆದ್ರೆ ಆತನ ಪರಿಶ್ರಮ, ಕುತೂಹಲದ ಕಾರಣದಿಂದ ಇಂಥಾದ್ದೊಂದು ಪರಮಾಚ್ಚರಿ ಜಗತ್ತಿನೆದುರು ಅನಾವರಣಗೊಂಡಿದೆ. ಅಂಥಾ ಅಪರೂಪದ ನದಿಯ ಗುಣಲಕ್ಷಣಗಳನ್ನ ನೋಡಿದ್ರೆ ಯಾರೇ ಆದ್ರೂ ಅವಾಕ್ಕಾಗದಿರೋಕೆ ಸಾಧ್ಯವೇ ಇಲ್ಲ. ಅಮೇಜಾನ್ ಕಾಡೆಂದರೆ ಅಪಾರ ಜೀವರಾಶಿ, ಯಾವ ಲೆಕ್ಕಕ್ಕೂ ನಿಲುಕದ ಸಸ್ಯ ಸಂಪತ್ತಿನಿಂದ ಕೂಡಿದ ಪ್ರದೇಶ. ಆ ದಟ್ಟಡವಿಯ ತುಂಬಾ ನಿಗೂಢಗಳದ್ದೇ…
ನಾವು ಅಡಿಗಡಿಗೆ ಹೊರ ಜಗತ್ತಿನ ಅಚ್ಚರಿಗಳತ್ತ ಕಣ್ಣರಳಿಸಿ ನೋಡ್ತೇವೆ. ಅಲ್ಲಿನ ಅಗಾಧ ವಿಸ್ಮಯಗಳನ್ನು ಇಂಚಿಂಚಾಗಿ ನೋಡುತ್ತಾ ಸಖೇದಾಶ್ಚರ್ಯ ಹೊಮ್ಮಿಸ್ತೇವೆ. ಇಡೀ ಜಗತ್ತನ್ನೇ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತಾಡಿ ನೋಡಲೇ ಬೇಕಾದ ಸ್ಥಳಗಳನ್ನ ಕಣ್ತುಂಬಿಕೊಳ್ಳಲು ಕಾತರರಾಗ್ತೇವೆ. ಆದ್ರೆ ಹಾಗೆ ಹೊರ ಜಗತ್ತಿನತ್ತ ಕಣ್ಣು ಕೀಲಿಸೋದ್ರಲ್ಲಿ ನಮ್ಮದೇ ದೇಹದ ಚಕಿತ ಸಂಗತಿಗಳತ್ತ ಅಸಡ್ಡೆ ತೋರಿಒಸುತ್ತೇವೆ. ನಮ್ಮೊಳಗೇ ನಾವರಿಯದ ಜಗತ್ತೊಂದಿದೆ, ನಮ್ಮ ದೇಹದ ಬಗ್ಗೆಯೇ ತಿಳಿದುಕೊಳ್ಳೋಕೆ ಸಾಕಷ್ಟಿದೆ ಅನ್ನೋ ವಿಚಾರವನ್ನ ಮರೆತೇ ಬಿಡುತ್ತೇವೆ. ನಿಜವಾಗಿ ಹೇಳ್ಬೇಕಂದ್ರೆ ನಮ್ಮೆಲ್ಲ ದೇಹವೇ ಒಂದು ಅದ್ಭುತ ಜಗತ್ತು. ಅದರ ಮೇಲ್ಮೈ ಮತ್ತು ಒಳಗೆಲ್ಲಾ ಅಗೋಚರ ವಿಸ್ಮಯಗಳಿದ್ದಾವೆ. ಅದರಲ್ಲಿ ಹೊಕ್ಕುಳು ಕೂಡಾ ಸೇರಿಕೊಂಡಿದೆ. ಹೊಕ್ಕುಳೆಂದರೆ ಒಂದಷ್ಟು ರೊಮ್ಯಾಂಟಿಕ್ ಕಲ್ಪನೆಗಳಿದ್ದಾವೆ. ಸಿನಿಮಾಗಳಲ್ಲಿಯಂತೂ ರಸಿಕತೆ ಸ್ಫುರಿಸುವಂಥಾ ಸನ್ನಿವೇಶಗಳನ್ನ ನಟೀಮಣಿಯರ ಹೊಕ್ಕುಳ ಸುತ್ತಲೇ ಚಿತ್ರೀಕರಿಸಲಾಗಿದೆ. ಆದ್ರೆ ಅಂಥಾ ಹೊಕ್ಕುಳಲ್ಲಿ ಹೊಕ್ಕಿ ಕೂತಿರಬಹುದಾದ ಬ್ಯಾಕ್ಟೀರಿಯಾಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಕ್ಕಿಲ್ಲ. ಈ ವಿಚಾರ ಗಂಡು ಮತ್ತು ಹೆಣ್ಣಿಗೂ ಅನ್ವಯಿಸುತ್ತೆ. ಇತ್ತೀಚೆಗೆ ಹೊರ ಬಂದಿರೋ ಒಂದು ಸಂಶೋಧನೆಯ ಪ್ರಕಾರವಾಗಿ…
ಆಧುನಿಕತೆಯ ಭರಾಟೆಯಲ್ಲಿ ಎಲ್ಲವೂ ಶೋಕಿಯ ವಸ್ತುಗಳಾಗಿ ಹೋಗಿವೆ. ಕಾಫಿ, ಟೀ, ಪಾನಕಗಳ ಜಾಗವನ್ನು ಆಕರ್ಷಕ ಪಾನೀಯಗಳು ಒಂದೇ ಸಮನೆ ಓವರ್‍ಟೇಕ್ ಮಾಡಿ ಬಿಟ್ಟಿವೆ. ಸಿ, ಕೋಕಕೋಲಾದಂಥಾ ಪಾನೀಯಗಳಿಗೆ ಜನ ಮನಸೋತಿದ್ದಾರೆ. ತೀರಾ ಊಟ ತಿಂಡಿಯ ಸಂದರ್ಭದಲ್ಲಿಯೂ ಅವುಗಳನ್ನೇ ಗುಟುಕರಿಸುವಷ್ಟು ಅಡಿಕ್ಟ್ ಆಗಿಬಿಟ್ಟಿದ್ದಾರೆ. ನಮ್ಮ ನಡುವೆ ಜಂಕ್ ಫುಡ್ ಕಲ್ಚರ್ ಬೆಳೆದುಕೊಂಡಿದೆಯಲ್ಲಾ? ಅದಕ್ಕೆ ಇಂಥ ಪಾನೀಯಗಳು ಪಕ್ಕಾ ಸಾಥ್ ಕೊಡುತ್ತಿವೆ. ಅದೇ ಹೊತ್ತಲ್ಲಿ ಈ ಪಾನೀಯಗಳು ಅದೆಷ್ಟು ಡೇಂಜರಸ್ ಅನ್ನೋದರ ಬಗ್ಗೆಯೂ ಶೋಧನೆಗಳು ನಡೆದಿವೆ. ಹಲವಾರು ಪ್ರಯೋಗಗಳ ಮೂಲಕ ಅವುಗಳ ಭೀಕರ ಸ್ವರೂಪವನ್ನು ಜಾಹೀರು ಮಾಡಲಾಗಿದೆ. ಆದರೂ ಜನ ಮಾತ್ರ ಅದರ ಗುಂಗಿನಿಂದ ಹೊರಬಂದಿಲ್ಲ. ಹೀಗೆ ಜನರನ್ನು ಮೋಡಿಗೀಡು ಮಾಡಿರೋ ಪಾನೀಯಗಳಲ್ಲಿ ಮೌಂಟೈನ್ ಡಿವ್ ಕೂಡಾ ಸೇರಿಕೊಂಡಿದೆ. ಆನ ಈ ಪಾನೀಯಾಕ್ಕೂ ಮಾರು ಹೋಗಿದ್ದಾರೆ. ಅದರ ಭೀಕರ ಸ್ವರೂಪ ಎಂಥಾದ್ದೆಂಬುದನ್ನು ಇದೀಗ ಸಂಶೋಧಕರೇ ತೆರೆದಿಟ್ಟಿದ್ದಾರೆ. ಈ ಪಾನೀಯದಲ್ಲಿ ಕಟ್ಟುಮಸ್ತಾದ ಇಲಿಯನ್ನು ನೆನೆಸಿಟ್ಟರೆ ಅದು ನೋಡ ನೋಡುತ್ತಲೇ ಸಂಪೂರ್ಣವೆಂಬಂತೆ ಕರಗಿ ಹೋಗುತ್ತೆ. ಹಾಗಾದ್ರೆ ಅದರಲ್ಲಿ…
ಇದು ದಿನದ ಇಪ್ಪತ್ನಾಲಕ್ಕು ಗಂಟೆಯೂ ಸುದ್ದಿಗಳ ಗಿರಣಿ ಚಾಲೂ ಇರುವ ದಿನಮಾನ. ಲೆಕ್ಕವಿರದಷ್ಟು ಟೀವಿ ಚಾನೆಲ್‍ಗಳು ದಂಡಿ ದಂಡಿ ಸುದ್ದಿಗಳನ್ನ ಹೆಕ್ಕಿ ತೆಗೆಯುತ್ತವೆ. ಪತ್ರಿಕೆಗಳೂ ಕೂಡಾ ಅನಾದಿ ಕಾಲದಿಂದಲೂ ಆ ಕೆಲಸ ಮಾಡ್ತಾನೇ ಬಂದಿವೆ. ಅದೂ ಸಾಲದೆಂಬಂತೆ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿಯೂ ಸುದ್ದಿಗಳ ಭರಾಟೆ ಮೇರೆ ಮೀರಿದೆ. ಒಟ್ಟಾರೆಯಾಗಿ ಈಗ ಸುದ್ದಿಗಳದ್ದೇ ಗೌಜು ಗದ್ದಲ. ಇಂಥಾ ಸುದ್ದಿಗಳ ಭರಾಟೆಯಲ್ಲಿ ಒಂದು ದಿನ ಸುದ್ದಿಗಳು ಕಡಿಮೆಯಿದ್ದರೆ ಮಾಧ್ಯಮಗಳ ಪಾಡೇನು ಅನ್ನೋ ಕ್ಯೂರಿಯಾಸಿಟಿ ಕಾಡುತ್ತೆ. ಒಂದಷ್ಟು ಮಂದಿಯಾದ್ರೂ ಅದರ ಬಗ್ಗೆ ಆಲೋಚಿಸಿರ್ತಾರೆ. ಒಂದು ವೇಳೆ ಯಾವ ಸುದ್ದಿಯೂ ಇಲ್ಲದೇ `ಇಂದು ಸುದ್ದಿಗಳಿಲ್ಲ’ ಅಂತ ಅನೌನ್ಸ್ ಮಾಡಬೇಕಾಗಿ ಬಂದರೆ ಹೇಗಿರಬಹುದನ್ನೋದು ಕಲ್ಪನೆಗೂ ನಿಲುಕೋದಿಲ್ಲ. ಆದರೆ ತಂತ್ರಜ್ಞಾನ ತುಂಬಾನೇ ಹಿಂದುಳಿದಿದ್ದ ಕಾಲದಲ್ಲಿ ಒಂದೇ ಒಂದು ಸಲ ಅಂಥಾ ಕಲ್ಪನೆ ನಿಜವಾಗಿತ್ತಂತೆ. ಅದು ಕಳೆದ ಶತಮಾನದ ಆರಂಭಿಕ ದಿನಗಳು. ರೇಡಿಯೋಗಳೇ ಆಗಿನ ಸುದ್ದಿ ಸಂಗಾತಿಗಳು. ಆ ಕಾಲಕ್ಕೆ ಬಿಬಿಸಿ ರೇಡಿಯೋ ಜಗದ್ವಿಖ್ಯಾತಿ ಗಳಿಸಿತ್ತು. 1930ರ ಏಪ್ರಿಲ್ ಹದಿನೆಂಟನೇ ತಾರೀಕಿನಂದು…
ಟೊಮ್ಯಾಟೋ ಕೆಚಪ್ ಅಂದ್ರೆ ಬಹುತೇಕರ ಬಾಯಲ್ಲಿ ನೀರೂರುತ್ತೆ. ಅದು ನಾನಾ ಆಹಾರಗಳಿಗೆ ಬೆಸ್ಟ್ ಕಾಂಬಿನೇಷನ್ ಅಂತಲೇ ಈವತ್ತಿಗೆ ಫೇಮಸ್ಸು. ಅದರ ಕಾರಣದಿಂದಲೇ ನಾನಾ ತಿನಿಸುಗಳ ರುಚಿ ದುಪ್ಪಟ್ಟಾಗುತ್ತೆ. ಈ ರುಚಿಯ ಕಾರಣದಿಂದಲೇ ಕೆಚಪ್ ಅನ್ನೋದು ವಿಶ್ವಾದ್ಯಂತ ಆಹಾರಪ್ರಿಯರ ಹಾಟ್ ಫೇವರಿಟ್ ಆಗಿ ಬಿಟ್ಟಿದೆ. ಹೀಗೆ ನಾವೆಲ್ಲ ಚಪ್ಪರಿಸಿ ತಿನ್ನೋ ಕೆಚಪ್ ಹಿಂದೆ ಅಚ್ಚರಿದಾಯಕ ಹಿಸ್ಟರಿಯಿದೆ. ಯಾರಿಗೇ ಆದ್ರೂ ನಂಬಲು ತುಸು ಕಷ್ಟವಾಗುವಂಥ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳೂ ಇದ್ದಾವೆ. ಈಗ ನಮ್ಮ ಆಹಾರದ ಭಾಗವಾಗಿರೋ ಟೊಮ್ಯಾಟೋ ಕೆಚಪ್ ಒಂದು ಕಾಲದಲ್ಲಿ ನಾನಾ ಕಾಯಿಲೆಗಳಿಗೆ ಔಷಧಿಯಂತೆ ಬಳಕೆಯಾಗ್ತಿತ್ತಂತೆ.ಅದುವರೆಗೂ ಆಹಾರವಾಗಿದ್ದ ಟೊಮ್ಯಾಟೋಗೆ ಔಷಧಿಯ ಖದರ್ ತಂದು ಕೊಟ್ಟಾತ ಡಾ. ಜಾನ್ ಕೂಕ್ ಬೆನೆಟ್ ಎಂಬಾತ. 1834ರಲ್ಲಿ ಬೆನೆಟ್ ನಾನಾ ರೋಗಗಳಿಗೆ ಮದ್ದಾಗಿ ಟೊಮ್ಯಾಟೋ ಕೆಚಪ್ ಅನ್ನು ಸಿದ್ಧಪಡಿಸಿದ್ದನಂತೆ. ಅದರಲ್ಲಿ ವಿಟಮಿನ್ಸ್ ಮತ್ತು ಆಂಟಿ ಆಕ್ಸಿಡೆಂಟ್ಸ್ ಇರೋದ್ರಿಂದ ಅದು ಹಲವು ಖಾಯಿಲೆಗಳಿಗೆ ರಾಮಬಾಣ ಅಂತ ಬೆನೆಟ್ ಪ್ರತಿಪಾದಿಸಿದ್ದ. ಅದರಿಂದಲೇ ಡಯೇರಿಯಾ, ಜಾಂಡೀಸ್‍ನಂಥಾ ಕಾಯಿಲೆಯನ್ನೂ ಗುಣಪಡಿಸಿದ್ದ. ಬಹುಶಃ ಯಾರೋ…
ಗೆಲ್ಲಲೇ ಬೇಕೆಂಬ ಛಲದ ಹಾದಿಗೆ ಕಾಲೂರಿದವರು ಯಾವತ್ತಿದ್ದರೂ ಗೆದ್ದೇ ಗೆಲ್ತಾರೆ. ಅಡಿಗಡಿಗೆ ನಸೀಬು ಕಣ್ಣಾಮುಚ್ಚಾಲೆಯಾಡಿದ್ರೂ ಗೆಲುವೆಂಬುದು ದಕ್ಕಿಯೇ ತೀರುತ್ತೆನ್ನೋದಕ್ಕೆ ಸಾಕಷ್ಟು ಉದಾಹರಣೆಗಳಿದ್ದಾವೆ. ಯಾರದ್ದೋ ಶ್ರಮಕ್ಕೆ ವಾರಸೂದಾರರಾಗೋರ ಗೆಲುವು ನೀರ ಮೇಲಿನ ಗುಳ್ಳೆಯಿದ್ದಂತೆ. ಆ ಕ್ಷಣಕ್ಕದು ಆಕರ್ಷನೀಯವಾಗಿ ಕಂಡರೂ ಅದು ಹೆಚ್ಚು ಕಾಲ ಉಳಿಯುವಂಥಾದ್ದಲ್ಲ. ಆದರೆ ಅಗಾಧ ಪರಿಶ್ರಮಕ್ಕೊಲಿಯೋ ಗೆಲುವು ಸಾವಿನಲ್ಲೂ ಕೈ ಹಿಡಿಯುತ್ತೆ. ಈ ಮಾತು ನಿಮಗೆ ಉತ್ಪ್ರೇಕ್ಷೆ ಅನ್ನಿಸೀತೇನೋ. ಆದ್ರೆ ಈ ಸ್ಟೋರಿ ಕೇಳಿದ್ರೆ ಖಂಡಿತಾ ನಿಮ್ಮ ಮನಸ್ಥಿತಿ ಬದಲಾಗುತ್ತೆ. ಅಂದಹಾಗೆ ಈಗ ಹೇಳ ಹೊರಟಿರೋ ಕಥೆ ಜನಪ್ರಿಯ ಜಾಕಿಯೊಬ್ಬನದ್ದು. ಕುದುರೆ ರೇಸ್ ಅನ್ನೋದು ಇಡೀ ಜಗತ್ತಿನ ತುಂಬೆಲ್ಲ ಕ್ರೇಜ್ ಇರುವಂಥಾದ್ದು. ಅದರ ಹಿನ್ನೆಲೆಯಲ್ಲಿರೋ ಜೂಜು ಅನೇಕರ ಬದುಕನ್ನ ಬರ್ಬಾದು ಮಾಡಿದ್ರೂ ಕುದುರೆ ರೇಸಿನ ಜಾಕಿಗಳಿಗೆ ಗೆಲುವ ಶ್ರಮಕ್ಕಷ್ಟೇ ದಕ್ಕುತ್ತೆ. ಈ ಮಾತಿಗೆ ಜಾಕಿ ಫ್ರಾಂಕ್ ಹೇಯ್ಸ್ ತಾಜಾ ಉದಾಹರಣೆ. ಫ್ರಾಂಕ್ ಹೇಯ್ಸ್ ಕುದುರೆ ರೇಸ್ ಪ್ರಿಯರಿಗೆಲ್ಲ ಪರಿಚಿತ ಹೆಸರು. ಈತ ಕುದುರೆ ಜಾಕಿಯಾಗಿ ಹಲವಾರು ವರ್ಷಗಳ ಕಾಲ ಶ್ರಮ…