ಪರಪ್ಪನ ಅಗ್ರಹಾರ ಜೈಲಿನೊಳಗೆ ವಿಕೃತ ಕಾಮಿ ಉಮೇಶ್ ರೆಡ್ಡಿ, ಭಯೋತ್ಪಾದಕ ಶಕೀಲ್, ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಬಂಧಿಯಾದ ರನ್ಯಾ ರಾವ್ ಗೆಣೆಕಾರನಂಥವರೆಲ್ಲ ಅಕ್ಷರಶಃ ಎಂಜಾಯ್ ಮಾಡುತ್ತಿದ್ದಾರೆ. ಒಂದು ವೀಡಿಯೋ ಮೂಲಕ ಪರಪ್ಪನ ಅಗ್ರಹಾರ ಜೈಲೊಳಗಿನ ಬಗ್ಗಡ ಕರುನಾಡಿನ ತುಂಬೆಲ್ಲ ಹಬ್ಬಿಕೊಂಡಿದೆ. ಈ ಕಾರಣದಿಂದಲೇ ರಾಜ್ಯ ಸರ್ಕಾರದ ಮಾನ ರಾಷ್ಟ್ರ ಮಟ್ಟದಲ್ಲಿ ಹರಾಜಾಗಿದೆ. ಈ ಹಂತದಲ್ಲಿ ತಲೆ ನೆಟ್ಟಗಿರುವ ಆಸಾಮಿಯೊಬ್ಬ ಗೃಹಮಂತ್ರಿಯಾಗಿದ್ದರೆ, ಜೈಲೊಳಗೆ ಕೈದಿಗಳಿಗೆ ಇಂಥಾ ಸೌಲಭ್ಯ ಕೊಟ್ಟವರ್‍ಯಾರು ಎಂಬ ನಿಟ್ಟಿನಲ್ಲಿ ತನಿಖೆ ನಡೆಸಿ, ಎಲ್ಲ ಭ್ರಷ್ಟರನ್ನೂ ಅಂಡಿಗೊದ್ದು ಹೊರದಬ್ಬುವ ಕೆಲಸ ಮಾಡುತ್ತಿದ್ದರು. ಆದರೆ ಪರಮೇಶ್ವರ್ ವೀಡಿಯೋ ಲೀಕ್ ಮಾಡಿದ್ಯಾರೆಂಬ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಕ್ರಿಮಿನಲ್ಲುಗಳಿಗೆ, ಭಯೋತ್ಪಾದಕರಿಗೆ, ವಿಕೃತ ಕಾಮಿಗಳ ಪಾಲಿಗೆ ಜೈಲೊಂದು ರೆಸಾರ್ಟಿನಂತಾಗುತ್ತದೆಂದರೆ, ಅದು ಈ ದುಷ್ಟ ವ್ಯವಸ್ಥೆಯ ಅಸಲೀ ದುರಂತ. ನಿಜಕ್ಕೂ ಪರಪ್ಪನ ಅಗ್ರಹಾರ ಜೈಲಿನೊಳಗೆ ಎಂಥಾ ಪರಿಸ್ಥಿತಿ ಇದೆ ಅನ್ನೋದರ ತನಿಖಾ ವರದಿ ಇಲ್ಲಿದೆ… -ಸಂತೋಷ್ ಬಾಗಿಲಗದ್ದೆ ರಾಜಕಾರಣಿಗಳೇ ಪ್ರಭುಗಳಾಗಿ ಮೆರೆಯುತ್ತಿರೋ ದುಷ್ಟ ವ್ಯವಸ್ಥೆಯಿದು. ಇಂಥಾ ರಾಜಕಾರಣಿಗಳು ಅಧಿಕಾರ…
ಪರಪ್ಪನ ಅಗ್ರಹಾರ ಜೈಲಿನೊಳಗೆ ವಿಕೃತ ಕಾಮಿ ಉಮೇಶ್ ರೆಡ್ಡಿ, ಭಯೋತ್ಪಾದಕ ಶಕೀಲ್, ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಬಂಧಿಯಾದ ರನ್ಯಾ ರಾವ್ ಗೆಣೆಕಾರನಂಥವರೆಲ್ಲ ಅಕ್ಷರಶಃ ಎಂಜಾಯ್ ಮಾಡುತ್ತಿದ್ದಾರೆ.…
