ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ನಿರ್ದೇಶನದ ಹರಿಕಥೆ ಅಲ್ಲ ಗಿರಿಕಥೆ ತೆರೆಗಾಣಲು ಕ್ಷಣಗಣನೆ ಶುರುವಾಗಿದೆ. ಟೈಟಲ್ ಲಾಂಚ್ ಆದ ಘಳಿಗೆಯಿಂದ ಇಲ್ಲಿಯವರೆಗೂ ನಾನಾ ಥರದಲ್ಲಿ ಟಾಕ್ ಕ್ರಿಯೇಟ್ ಮಾಡುತ್ತಾ ಸಾಗಿ ಬಂದಿರುವ ಚಿತ್ರವಿದು. ಇದು ಪ್ರೇಕ್ಷಕರನ್ನು ಬಹುವಾಗಿ ಸೆಳೆದುಕೊಳ್ಳಲು ಒಂದಷ್ಟು ಕಾರಣಗಳಿದ್ದಾವೆ. ಆದರೆ ಆ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲೋದು ನಾಯಕನಾಗಿ ನಟಿಸಿರುವ ರಿಶಭ್ ಶೆಟ್ಟಿ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಅದಕ್ಕೆ ಕಾರಣವಾಗಿರೋದು ನಿರ್ದೇಶಕನಾಗಿ, ನಟನಾಗಿ ರಿಶಭ್ ಸಾಗಿ ಬಂದಿರುವ ಭಿನ್ನವಾದ ಹಾದಿ. ಈ ಕಾರಣದಿಂದಲೇ ಅವರ ಇರುವಿಕೆಯಿರುವಲ್ಲಿ ಹೊಸತನದ ಹಾಜರಿಯಿರುತ್ತದೆಂಬ ಗಾಢ ನಂಬಿಕೆ ಪ್ರೇಕ್ಷಕರಲ್ಲಿ ಬಲಗೊಂಡಿದೆ. ನಿರ್ದೇಶಕನಾಗಿ ರಿಶಭ್ ಶೆಟ್ಟರು ತಮ್ಮದೇ ಶೈಲಿಯ ಮೂಲಕ, ಆಲೋಚನಾ ಕ್ರಮಗಳ ಮೂಲಕ ಗೆಲುವು ದಾಖಲಿಸುತ್ತಾ ಬಂದಿದ್ದಾರೆ. ಬೆಲ್ ಬಾಟಂ ನಂತರದಲ್ಲಿ ಅವರು ನಟನಾಗಿಯೂ ಹೊಸಾ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅದರ ಮುಂದುವರೆದ ಭಾಗವಾಗಿ ದಾಖಲಾಗಲಿರುವ ಚಿತ್ರ ಹರಿಕಥೆ ಅಲ್ಲ ಗಿರಿಕಥೆ. ಓರ್ವ ನಟನಾಗಿಯೂ ತಮ್ಮದೇ ಅಭಿರುಚಿಯನ್ನು ದಕ್ಕಿಸಿಕೊಂಡು ಮುಂದುವರೆಯುತ್ತಿರುವ ರಿಶಭ್ ಒಂದು ಚಿತ್ರವನ್ನು…
Author: Santhosh Bagilagadde
ಜೀವ ಉಳಿಸೋ ವೈದ್ಯ ವೃತ್ತಿಗೆ ಅಪಮಾನ ಎಸಗುವ ಕೆಲಸ ಮಾಡೋ ಒಂದಷ್ಟು ವೈದ್ಯರು ದೇಶಾಧ್ಯಂತ ತುಂಬಿ ಹೋಗಿದ್ದಾರೆ. ಸಮಸ್ಯೆ ಹೊತ್ತು ಬಂದ ರೋಗಿಗಳನ್ನು ಬೆದರಿಸಿ, ಸುಳ್ಲು ಹೇಳಿ ಕಾಸು ಪೀಕೋ ಕಸುಬು ಮಾಡೋ ಮೂಲಕ ಕೆಲ ವೈದ್ಯರು ವೃತ್ತಿ ಪಾವಿತ್ರ್ಯಕ್ಕೇ ಮಸಿ ಬಳಿಯುತ್ತಿದ್ದಾರೆ. ಆದರೆ ಮುಂಬೈನಲ್ಲಿ ಪೊಲೀಸರು ಬಂಧಿಸಿರೋ ಈ ಆಯುರ್ವೇದ ವೈದ್ಯ ಮಾಡುತ್ತಿದ್ದದ್ದು ಮಾತ್ರ ರಂಥವರನ್ನೂ ಬೆಚ್ಚಿ ಬೀಳಿಸುವಂಥಾ ಅಸಹ್ಯದ ಕೆಲಸ. ಮುಂಬೈನ ಪೂರ್ವ ಮಹಿಮ್ ಪ್ರದೇಶದ ಮೀನುಗಾರರ ಕಾಲೊನಿಯಲ್ಲಿ ಲ್ಲಿನಿಕ್ ಇಟ್ಟುಕೊಂಡಿದ್ದ ಡಾ ಜನಾರ್ಧನ್ ನರಸಯ್ಯ ಎಂಬಾತ ಈ ಅಸಹ್ಯದ ರೂವಾರಿ. ಈತ ಆಯುರ್ವೇದದ ಕ್ಲಿನಿಕ್ ನಡೆಸುತ್ತಾ ಮಹಿಳೆಯರ ಗುಪ್ತ ಸಮಸ್ಯೆಗಳಿಗೆ ಔಷಧ ಕೊಡೋ ಅವತಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಆದರೆ ಅರವತ್ತೆರಡು ವರ್ಷದ ಈತ ಇತ್ತೀಚೆಗೆ ಮಾತ್ರ ಹೈಟೆಕ್ ವೇಶ್ಯಾ ದಂಧೆ ನಡೆಸುತ್ತಾ ಭರಪೂರವಾಗಿ ಕಾಸು ಬಾಚಲಾರಂಭಿಸಿದ್ದ. ಈತ ತನ್ನಲ್ಲಿಗೆ ರೋಗಿಗಳಾಗಿ ಬರೋ ಮಹಿಳೆಯರನ್ನು ಪಳಗಿಸಿಕೊಂಡು ಹಣದಾಸೆ ತೋಎಇಸಿ ವೇಶ್ಯಾವಾಟಿಕೆ ನಡೆಸಲಾರಂಭಿಸಿದ್ದ. ತನ್ನ ಕ್ಲಿನಿಕ್ ನ ಕಮೆಳ ಭಾಗದಲ್ಲಿದ್ದ…
ಅವಳಿಂದ ಕೊಲೆಯಾದ ರೋಗಿಗಳ ಸಂಖ್ಯೆ ೧೦೬! ಮಾನಸಿಕ ಸ್ಥಿಮಿತ ಕೈ ಮೀರಿ ಹೋದರೆ ಎಂಥಾ ಜವಾಬ್ದಾರಿಯುತ ಸ್ಥಾನದಲ್ಲಿ ಕೂತವರನ್ನೂ ಪಾತಾಳಕ್ಕಿಳಿಸುತ್ತದೆ. ಸಾಮಾನ್ಯರನ್ನೂ ಕ್ರಿಮಿನಲ್‌ಗಳನ್ನಾಗಿಸುತ್ತೆ. ತೀರಾ ಜೀವ ಉಳಿಸೋ ವೈದ್ಯ ವೃತ್ತಿಯ ಭಾಗವಾದ ನರ್ಸ್‌ಗಳನ್ನೂ ಕೊಲೆ ಪಾತಕಿಗಳಾಗಿಸುತ್ತೆ. ಇದಕ್ಕೆ ತಾಜಾ ಉದಾಹರಣೆ ಜರ್ಮನಿಯ ನಲವತ್ತೊಂದು ವರ್ಷ ವಯಸ್ಸಿನ ನರ್ಸ್ ನಿಯೆಲ್ ಹ್ಯೂಗೆಲ್! ಜರ್ಮನಿಯ ಬ್ರಮೆನ್ ನಗರದ ಪ್ರಸಿದ್ಧವಾದ ಆಸ್ಪತ್ರೆಯೊಂದರಲ್ಲಿ ೨೦೦೫ರವರೆಗೆ ನರ್ಸ್ ಆಗಿ ಸೇವೆ ಮಾಡಿದ್ದ ನಿಯೆಲ್ ಹ್ಯೂಗೆಲ್‌ಜೀ ವೃತ್ತಿಯಲ್ಲಿ ಸಾಕಷ್ಟು ಮನ್ನಣೆ ಗಳಿಸಿದ್ದಳು. ೧೯೯೯ರಲ್ಲಿ ವೃತ್ತಿಗೆ ಸೇರಿಕೊಂಡಿದ್ದ ಈಕೆ ೨೦೦೫ರ ವರೆಗೂ ಎರಡು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದಳು. ಆದರೆ ೨೦೦೫ರಲ್ಲಿ ಈಕೆಯಿಂದ ಚಿಕಿತ್ಸೆ ಪಡೆದ ರೋಗಿಗಳು ಸಾಲು ಸಾಲಾಗಿ ಸತ್ತಿದ್ದರು. ಇದು ಭಾರೀ ದೊಡ್ಡ ಸುದ್ದಿಯಾಗಿ ಅಲ್ಲಿನ ಪೊಲೀಸರು ನಿಯೆಲ್ ಹ್ಯೂಗೆಲ್‌ಳ ವಿರುದ್ಧ ದೂರುಗಳು ಕೇಳಿ ಬರಲಾರಂಭಿಸಿದ್ದವು. ಆದರೆ ಹೇಗೋ ಬಚಾವಾಗಿದ್ದ ಈಕೆಯನ್ನು ೨೦೦೮ರಲ್ಲಿ ಪೊಲೀಸರು ಬಂಧಿಸಿದ್ದರು. ಇದೀಗ ಈ ಬಗ್ಗೆ ವಿಸ್ತೃತವಾಗಿ ತನಿಖೆ ನಡೆಸಿರೋ ಪೊಲೀಸರು ಬೆಚ್ಚಿ ಬೀಳೋ ವಿವರ…
ಹಾರರ್ ಜಾನರಿನ ಚಿತ್ರವೆಂದಾಕ್ಷಣ ಸಹಜವಾಗಿಯೇ ಪ್ರೇಕ್ಷಕರು ಕಣ್ಣರಳಿಸುತ್ತಾರೆ. ಅದರಲ್ಲಿಯೂ ಹಲವಾರು ವಿಶೇಷತೆಗಳನ್ನೊಳಗೊಂಡಿರುವ, ಪ್ರಯೋಗಾತ್ಮಕ ಗುಣಗಳಿರುವ, ತಾಂತ್ರಿಕ ಶ್ರೀಮಂತಿಕೆಯಿಂದ ಮೈ ಕೈ ತುಂಬಿಕೊಂಡಿರುವ ಚಿತ್ರವೆಂದ ಮೇಲೆ ಅದರತ್ತ ಪ್ರೇಕ್ಷಕರು ಆಕರ್ಷಿತರಾಗದಿರಲು ಸಾಧ್ಯವೇ? ಆ ದಿಸೆಯಲ್ಲಿಯೇ ಸಮಸ್ತ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿರುವ ಚಿತ್ರ ಸ್ಪೂಕಿ ಕಾಲೇಜ್. ಎಫ್‌ಎಂ ಜಾಕಿಯಾಗಿದ್ದುಕೊಂಡು, ಭಿನ್ನ ಅಭಿರುಚಿಗಳನ್ನೊಳಗೊಂಡಿರುವ ಭರತ್ ಜೆ ನಿರ್ದೇಶನದ ಈ ಚಿತ್ರವೀಗ ಟೀಸರ್ ಮೂಲಕ ಟಾಕ್ ಕ್ರಿಯೇಟ್ ಮಾಡಿದೆ. ಹೀಗೆ ಎಲ್ಲ ವರ್ಗಗಳ ಪ್ರೆಕ್ಷಕರ ಕುತೂಹಲದ ಕಿನಾರೆಯಲ್ಲಿ ಲಂಗುರು ಹಾಕುವಂತೆ ಮಾಡಿದ ಈ ಟೀಸರ್ ಅನ್ನು ಪ್ರಕಾಶನಾಥ್ ಸ್ವಾಮೀಜಿ ಬಿಡುಗಡೆಗೊಳಿಸಿದ್ದಾರೆ. ಹಾಗೆ ಬಿಡುಗಡೆಗೊಂಡ ಕ್ಷಣದಿಂದಲೇ ಈ ಟೀಸರ್‌ಗೆ ಹೆಚ್ಚೆಚ್ಚು ವೀಕ್ಷಣೆಗಳು ಸಿಗುತ್ತಿವೆ. ಸಾಮಾಜಿಕ ಜಾಲತಾಣವೂ ಸೇರಿದಂತೆ ಎಲ್ಲಡೆಯಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ರಂಗಿತರಂಗದ ನಂತರದಲ್ಲಿ ಗಟ್ಟಿ ಕಥೆ ಹೊಂದಿರುವ ಹಾರರ್ ಚಿತ್ರ ಅಂತೆಲ್ಲ ಪ್ರೇಕ್ಷಕ ವಲಯದಲ್ಲಿಯೇ ಮಾತುಗಳು ಹರಿದಾಡುತ್ತಿದೆ. ಅಷ್ಟರ ಮಟ್ಟಿಗೆ ಈ ಟೀಸರ್ ಪರಿಣಾಮಕಾರಿಯಾಗಿದೆ. ಹಾರರ್ ಸಿನಿಮಾಗಳೆಂದರೆ ಬರೀ ಭಯ ಬೀಳಿಸೋದಷ್ಟೇ ಎಂಬಂತೆ ಅನೇಕರು…
ಕನ್ನಡ ಚಿತ್ರರಂಗದೊಳಗೀಗ ಹೊಸತನದ ಸುಳಿಗಾಳಿ ಬಲವಾಗಿಯೇ ಬೀಸಲಾರಂಭಿಸಿದೆ. ಅದರ ಭಾಗವಾಗಿಯೇ ಈ ವಾರ ರಾಜ್ಯಾದ್ಯಂತ ತೆರೆಗಾಣುತ್ತಿರುವ ಚಿತ್ರ ತುರ್ತು ನಿರ್ಗಮನ. ಇತ್ತೀಚಿನ ವರ್ಷಗಳಲ್ಲಿ ಊಹೆಗೆ ನಿಲುಕದಂಥಾ ವಿಶಿಷ್ಟ ಕಥೆಗಳು ದೃಷ್ಯ ರೂಪ ಧರಿಸಿ ಬರುತ್ತವೆ. ಬಹುಶಃ ಭಿನ್ನ ನೆಲೆಯಲ್ಲಿ ಆಲೋಚಿಸುವ ಯುವ ಮನಸುಗಳು ಇಲ್ಲದೇ ಹೋಗಿದ್ದರೆ ಇಂಥಾದ್ದೊಂದು ಮನ್ವಂತರ ಸಾಧ್ಯವಾಗುತ್ತಿರಲಿಲ್ಲವೇನೋ… ನಮ್ಮೆಲ್ಲರ ಕಣ್ಣಿಗೆ ಸದಾ ಬೀಳುತ್ತಾ, ಒಳಗೆಲ್ಲೋ ಆಗಾಗ ಆಲೋಚನೆಗೆ ಹಚ್ಚುವ ತುರ್ತು ನಿರ್ಗಮನವೆಂಬ ಬೋರ್ಡಿದೆಯಲ್ಲಾ? ಅದರ ಸುತ್ತಾ ಪಾತಾಳಗರಡಿ ಹಾಕಿ, ನಮ್ಮೆಲ್ಲರ ಬದುಕಿಗೆ ಹತ್ತಿರವಾದ ಚೆಂದದ ಕಥೆಯೊಂದಿಗೆ ಹೇಮಂತ್ ಕುಮಾರ್ ಈ ಚಿತ್ರವನ್ನು ರೂಪಿಸಿದ್ದಾರೆ. ತುರ್ತು ನಿರ್ಗಮನ ಎಂಬ ಟೈಟಲ್ ಲಾಂಚ್ ಆಗುತ್ತಲೇ ಪ್ರೇಕ್ಷಕರು ಅದರತ್ತ ಆಕರ್ಷಿತರಾಗಿದ್ದರು. ಆ ಬಳಿಕ ಪೋಸ್ಟರ್, ಫಸ್ಟ್ ಲುಕ್ ಮುಂತಾದವುಗಳ ಮೂಲಕ ಈ ಚಿತ್ರ ಮತ್ತಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹೀಗೆ ಆರಂಭದಿಂದ ಇಲ್ಲಿಯವರೆಗೂ ಕುತೂಹಲವನ್ನು ಕಾಪಿಟ್ಟುಕೊಂಡು ಬಂದಿದ್ದ ಈ ಚಿತ್ರವೀಗ ಬಿಡುಗಡೆಯ ಸನ್ನಾಹದಲ್ಲಿದೆ. ಇಂಥಾ ಅಪರೂಪದ ಕಥೆಯ ಸುಳಿವು ಸಿಕ್ಕಾಕ್ಷಣ ಅದರ ಹುಟ್ಟಿನ ಸುತ್ತಮುತ್ತ…
ವಿಚಿತ್ರ ಬ್ಲಡ್‌ಗ್ರೂಪಿನ ಆ ಹುಡುಗನ್ಯಾರು ಗೊತ್ತಾ? ವೈದ್ಯಲೋಕದ ವಿಸ್ಮಯಗಳಿಗೆ ಕೊನೆ ಮೊದಲಿಲ್ಲ. ನಮಗೆಲ್ಲ ಮನುಷ್ಯನ ಒಂದಷ್ಟು ರಕ್ತದ ಗುಂಪುಗಳ ಪರಿಚಯವಿದೆ. ಅದರಲ್ಲೆ ಕೆಲ ರಕ್ತದ ಗುಂಪುಗಳು ವಿಶೇಷವಾದವೆಂದು ಪರಿಗಣಿಸಲ್ಪಟ್ಟಿದೆ. ಆದರೆ ಬೆಂಗಳೂರಿನ ಈ ಹುಡುಗನದ್ದು ವಿರಳಾತಿ ವಿರಳ ರಕ್ತದ ಗುಂಪು. ಅದನ್ನು ವೈದ್ಯಲೋಕ ಊಊ ಅಂತ ಗುರುತಿಸುತ್ತದೆ. ಬೆಂಗಳೂರಿನ ಮೂವತ್ನಾಲಕ್ಕು ವರ್ಷದ ಆದಿತ್ಯ ಹೆಗಡೆಯದ್ದೂ ಅದೇ ರಕ್ತದ ಗುಂಪು. ಈ ರಕ್ತದ ಗುಂಪು ಅದೆಷ್ಟು ಅಪರೂಪವೆಂದರೆ ನೂರಾರು ಕೋಟಿ ಜನರಿರೋ ಭಾರತದಲ್ಲಿ ಈ ರಕ್ತದ ಗುಂಪಿನವರ ಸಂಖ್ಯೆ ಹತ್ತು ಸಾವಿರವಿರಬಹುದಷ್ಟೆ! ಇಂಥಾ ವಿರಳ ಬ್ಲಡ್ ಗ್ರೂಪ್ ಹೊಂದಿರೋ ವ್ಯಕ್ತಿಗಳ ಸಂಖ್ಯ ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾಧ್ಯಂತ ಹುಡುಕಿದರೂ ಕಡಿಮೆ ಸಂಖ್ಯೆಯಲ್ಲಿ ಪತ್ತೆಯಾಗುತ್ತದೆ. ಆದ್ದರಿಂದ ತೀರಾ ಎಮರ್ಜೆನ್ಸಿ ಸಮಯದಲ್ಲಿ ಈ ಬ್ಲಡ್ ಗ್ರೂಪಿನವರನ್ನು ಹುಡುಕೋದು ಕಷ್ಟ. ಆದ್ದರಿಂದಲೇ ಆದಿತ್ಯ ಹೆಗ್ಡೆಗೆ ಭಾರತದ ವಿವಿಧ ಊರುಗಳಿಂದ, ವಿದೇಶಗಳಿಂದಲೂ ಆಗಾಗ ಕರೆಗಳು ಬರುತ್ತವೆ. ಅದೇನೇ ಕೆಲಸ ಕಾರ್ಯವಿದ್ದರೂ ಅವದೆಷ್ಟೇ ದೂರದ ಊರಾದರೂ ಹೋಗಿ ರಕ್ತ ಕೊಟ್ಟು ಜೀವ…
ಯುವಕರಿಗೂ ಸ್ಫೂರ್ತಿಯಾಗೋ ಅವರ‍್ಯಾರು ಗೊತ್ತಾ? ಶಾಲಾ ಕಾಲೇಜಿನ ಘಟ್ಟ ದಾಟಿದ ಬಳಿಕ ಓದೋದು ಕಷ್ಟ ಎಂಬುದು ಅನೇಕರ ಅನುಕೂಲಸಿಂಧು ಸಿದ್ಧಾಂತ. ಮತ್ತೂ ಅನೇಕರು ಓದೋ ಆಸೆ ಇದ್ದರೂ ಮನೆ ಮಕ್ಕಳು ಸಂಸಾರ ಅಂತ ಕಳೆದು ಹೋಗೋದೇ ಹೆಚ್ಚು. ಆದರೆ ಬಿಹಾರದ ೯೮ ವರ್ಷದ ಅಜ್ಜ ಮಾಡಿದ ಸಾಧನೆಯ ಕಥೆ ಕೇಳಿದರೆ ಹಾಗೆ ಅನಿವಾರ್ಯತೆಗಳ ಮಡುವಿನಲ್ಲಿ ಮುಳುಗಿ ಹೋದವರೆಲ್ಲ ತಾವೇನೋ ಕಳೆದುಕೊಂಡಿದ್ದೇವೆ ಎಂಬಂಥಾ ಚಿಂತೆಗೆ ಬೀಳೋದು ಖಚಿತ. ಬಿಹಾರದ ರಾಜ್‌ಕುಮಾರ್ ವೈಷ್ಯ ೯೮ರ ಇಳೀವಯಸಿನಲ್ಲಿ ನಳಂದ ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪೂರೈಸೋ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಮೊನ್ನೆ ನಡೆದ ನಳಂದಾ ಮುಕ್ತ ವಿಶ್ವವಿದ್ಯಾಲಯದ ಸಮಾರಂಭದಲ್ಲಿ ಮೇಘಾಲಯದ ರಾಜ್ಯಪಾಲರಾದ ಗಂಗಾ ಪ್ರಸಾದ್ ರಾಜ್ ಕುಮಾರ್ ಅವರಿಗೆ ಮಾಸ್ಟರ್ ಡಿಗ್ರಿ ಪ್ರದಾನ ಮಾಡಿದ್ದಾರೆ. ಈ ಸಂದರ್ಭದಲ್ಲೇ ಈ ವಯೋವೃದ್ಧನ ಓದೋ ಆಸಕ್ತಿ, ಅಂದುಕೊಂಡಿದ್ದನ್ನು ಪಟ್ಟು ಬಿಡದೆ ಮಾಡುವ ಛಲವನ್ನು ಮೆಚ್ಚಿ ಕೊಂಡಾಡಿದ್ದಾರೆ. ಈ ಮೂಲಕ ಎಕನಾಮಿಕ್ಸ್‌ನಲ್ಲಿ ಎಂಎ ಮಾಡುವ ಈ ತಾತನ ಕನಸು ನನಸಾಗಿದೆ! ರಾಜ್…
ಐದೈದು ರೂಪಾಯಿ ಕೊಟ್ಟು ಬಾಯಿ ಮುಚ್ಚಿಸಿದ್ದ ಪಾಪಿ ಕಾಮುಕ! ಕಾಮಕ್ಕೆ ಕಣ್ಣಿಲ್ಲ ಮತ್ತು ಮಾನಗೆಟ್ಟವರ ಪಾಲಿಗದು ಮುಪ್ಪಾಗೋದೂ ಇಲ್ಲ ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಇದಕ್ಕೆ ಪೂರಕವಾದ ಆಘಾತಕಾರಿ ಘಟನೆಯೊಂದು ಡೆಲ್ಲಿಯಲ್ಲಿ ನಡೆದಿದೆ. ತನ್ನ ಮನೆಯೆದುರು ಆಟವಾಡುತ್ತಿದ್ದ ಆ ಪುಟ್ಟ ಮಕ್ಕಳನ್ನು ಅರವತ್ತು ವರ್ಷದ ಆ ದುಷ್ಟ ಮುದುಕ ಬಳಸಿಕೊಂಡ ಪರಿ ಕಂಡತೆ ಎಂಥ ಗಟ್ಟಿ ಮನಸಿನವರೂ ಬೆಚ್ಚಿ ಬಿಳೋದು ಗ್ಯಾರೆಂಟಿ. ಡೆಲ್ಲಿಯ ಈ ಕಾಮುಕ ಮುದುಕನ ಹೆಸರು ಮೊಹಮದ್ ಜಿಯಾನುಲ್. ವಯಸ್ಸು ಅರವತ್ತು ದಾಟಿದೆ. ಮೊಮ್ಮಕ್ಕಳನ್ನು ಆಡಿಸಿಕೊಂಡು ಮನೆಯಲ್ಲಿ ಬಿದ್ದಿದ್ದ ಈ ದುಷ್ಟ ಮುದುಕ ತನ್ನ ಮನೆಯೆದುರು ಅಬೋಧವಾಗಿ ಆಟವಾಡುತ್ತಾ ಕಾಲ ಕಳೆಯುತ್ತಿದ್ದ ಐದು ಹಾಗೂ ಒಂಭತ್ತು ವರ್ಷದ ಎರಡು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿದ ಕಥೆ ನಿಜಕ್ಕೂ ಭೀಕರ. ಈ ಮುದುಕ ವಾಸವಿರೋ ಮನೆಯ ಆಸುಪಾಸಲ್ಲಿಯೇ ಬಡ ಕೂಲಿಕಾರರೂ ವಾಸವಿದ್ದಾರೆ. ಆ ಮನೆಗಳವರು ತಮ್ಮ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಕೆಲಸಕ್ಕೆ ಹೋಗದೆ ವಿಧಿಯಿಲ್ಲ. ಅಂಥಾ ಬಡ ತಂದೆ…
ಎಲೆಕ್ಟ್ರಿಕ್ ಗೇಟಿಗೆ ಸಿಕ್ಕಿಕೊಂಡ ‘ಅದ’ನ್ನು ಬಿಡಿಸಲು ಹರಸಾಹಸ! ದಯವಿಟ್ಟು ಟಿಕೆಟ್ ತೆಗೆದುಕೊಂಡು ಪ್ರಯಾಣಿಸಿ, ಟಿಕೆಟ್ಟಿಲ್ಲದ ಪ್ರಯಾಣ ದಂಡಕ್ಕೆ ಆಹ್ವಾನ ಅಂತೆಲ್ಲ ಸ್ಲೋಗನ್ನುಗಳಿಗೆ ಭಾರತದಲ್ಲಿ ಸಾರಿಗೆ ವ್ಯವಸ್ಥೆಯಷ್ಟೇ ಹಳತಾದ ಇತಿಹಾಸವಿದೆ. ಆದರೆ ಇದೆಲ್ಲದರಾಚೆಗೂ ಟಿಕೆಟ್ ಕಳ್ಳತನದ ಪರಂಪರೆ ಕೂಡಾ ವಿಘ್ನವಿಲ್ಲದೆ ಮುಂದುವರೆದುಕೊಂಡು ಬಂದಿದೆ.ಆದರೆ ಟಿಕೆಟ್ ಕಾಸು ಯಾಮಾರಿಸೋ ಖಯಾಲಿ ಇಂಡಿಯಾಕ್ಕೆ ಮಾತ್ರ ಸೀಮಿತ ಅಂದುಕೊಳ್ಳುವಂತಿಲ್ಲ.ಬೇರೆ ಬೇರೆ ದೇಶಗಳಲ್ಲೂ ನಮ್ಮವರನ್ನು ಮೀರಿಸುವಂಥಾ ಚಾಲಾಕಿಗಳಿದ್ದಾರೆ. ಆದರೆ ದೂರದ ಲಂಡನ್ನಿನಲ್ಲಿ ಮೆಟ್ರೋ ಟ್ರೇನಿನ ಟಿಕೆಟ್ ಯಾಮಾರಿಸಲು ಹೋದ ಚಾಲಾಕಿಯೊಬ್ಬ ಮಾನ ಮರ್ಯಾದೆಗಳ ಜೊತೆಗೆ ಗುಪ್ತ ಪ್ರದೇಶದ ಬಹು ಮುಖ್ಯ ಐಟಮ್ಮೊಂದನ್ನೂ ಕಳೆದುಕೊಳ್ಳುವ ಸ್ಥಿತಿ ತಂದುಕೊಂಡಿದ್ದಾನೆ! ಲಂಡನ್ನಿನ ಮಹಾನಗರದಲ್ಲಿ ಆಫ್ರಿಕಾ ಮೂಲದ ಯುವಕನೋರ್ವ ಇಂಥಾ ಸ್ಥಿತಿ ತಂದುಕೊಂಡಿದ್ದಾನೆ. ಎಲೆಕ್ಟ್ರಿಕ್ ಸಿಸ್ಟಮ್ಮಿನ ಗೇಟಿನಲ್ಲಿ ಕಾಸು ತೆತ್ತು ಟಿಕೆಟಿನ ಟೋಕನ್ ಪಡೆಯೋ ಪದ್ಧತಿ ಅಲ್ಲೂ ಇದೆ. ಹಾಗೆ ಈ ಹುಡುಗ ಹೋಗುವಾಗ ಕೊಂಚ ರಶ್ ಇತ್ತಂತೆ. ಹೇಗಾದರೂ ಯಾಮಾರಿಸಬೇಕು ಅಂದುಕೊಂಡ ಆತ ಏಕಾಏಕಿ ಗೇಟು ಹಾರಿದ್ದಾನೆ. ಆದರೆ ಎಲೆಕ್ಟ್ರಿಕ್ ಗೇಟಿನ ಸಂದಿಯಲ್ಲಿ…
ಆ ಪೈಲೆಟ್ ಲೇಡಿ ಪೈಲೆಟ್‌ಗೆ ಏನು ಮಾಡಿದ್ದ ಗೊತ್ತಾ? ಸಿಟ್ಟು ಬಂದಾಗ ಕಂಟ್ರೋಲು ಮೀರಿದರೆ ಕೆಲವರು ವಿಪರೀತವಾಗಿಯೇ ಹಾರಾಡುತ್ತಾರೆ. ಆದರೆ ಹಾರಾಡೋ ವಿಮಾನದೊಳಗೇ, ಅದೂ ಪೈಲಟ್ ಮತ್ತು ಕೋ ಪೈಲಟ್ ನಡುವೆಯೇ ಕಾಳಗ ಶುರುವಾದರೆ ಗತಿಯೇನು? ಇಂಥಾದ್ದೇ ಒಂದು ಘನ ಗಂಭೀರ ಕಾಳಗವೊಂದು ಜೆಟ್ ಏರ್ ವೇಸ್ ವಿಮಾನದಲ್ಲಿ ನಡೆದಿದೆ. ಜೆಟ್ ಏರ್ ವೇಸ್‌ನ ಈ ವಿಮಾನ ಲಂಡನ್ನಿನಿಂದ ಮುಂಬೈನತ್ತ ಪ್ರಯಾಣ ಬೆಳೆಸುತ್ತಿತ್ತು. ಆ ವಿಮಾನದಲ್ಲಿ ಪೈಲೆಟ್ ಜೊತೆಗೊಬ್ಬಾಕೆ ಲೇಡಿ ಪೈಲಟ್ ಕೂಡಾ ಇದ್ದಳು. ಆದರೆ ವಿಮಾನ ಹಾರಾಟ ಶುರುವಿಟ್ಟಾಕ್ಷಣವೇ ಅವರಿಬ್ಬರ ನಡುವೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಶುರುವಾಗಿತ್ತು. ತದ ನಂತರ ಇದು ತಾರಕಕ್ಕೇರಿ ಕೂಗಾಟ ಆರಂಭವಾಗಿತ್ತು. ವಿಮಾನ ಚಲಾಯಿಸುವಂಥಾ ಗಣವಾದ ಜವಾಬ್ದಾರಿ ಹೊತ್ತ ಆ ಪೈಲೆಟ್ ಆಸಾಮಿಯಂತೂ ವಿಮಾನ ಚಾಲನೆಯನ್ನೇ ಮರೆತವನಂತೆ ಜೊತೆಗಾರ್ತಿ ಪೈಲಟ್ ಮೇಲೆ ಎಗರಾಡಲಾರಂಭಿಸಿದ್ದ. ಕಡೆಗೂ ಆತ ಕಾಕಕ್ ಫೀಟ್‌ನಲ್ಲಿಯೇ ಆ ಲೇಡಿ ಪೈಲೆಟ್‌ಗೆ ರಪ ರಪನೆ ಬಾರಿಸಿದ್ದ. ಇದರಿಂದ ಆಘಾತಗೊಂಡು ಕಣ್ಣೀರು ಸುರಿಸುತ್ತಾ ಆ…