Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಕೆಲ ನಟ ನಟಿಯರು ಒಂದೆರಡು ಸಿನಿಮಾಗಳಲ್ಲಿ ನಟಿಸಿ, ಒಂದಷ್ಟು ಜನಪ್ರಿಯತೆ ಗಳಿಸಿಕೊಳ್ಳುತ್ತಲೇ ಸ್ಟಾರ್‌ಗಿರಿಯ ಗತ್ತು ಪ್ರದರ್ಶಿಸಲಾರಂಭಿಸುತ್ತಾರೆ. ಇನ್ನೂ ಕೆಲ ಮಂದಿ ನೆಟ್ಟಗೆ ಒಂದು ಸಿನಿಮಾದಲ್ಲಿ ನಟಿಸಿ ಸಾವರಿಸಿಕೊಳ್ಳೋ ಮುನ್ನವೇ, ತಮಗೆ ತಾವೇ ಬಿರುದು ಕೊಟ್ಟುಕೊಂಡು, ಪೇಯ್ಡ್ ಅಭಿಮಾನಿಗಳನ್ನು ಸುತ್ತ ಬಿಟ್ಟುಕೊಂಡು ಮೆರೆಯಲಾರಂಭಿಸುತ್ತಾರೆ. ಇಂಥಾ ಜಗತ್ತಿನಲ್ಲಿ ಸಿಕ್ಕ ಖ್ಯಾತಿ, ದಂಡಿ ದಂಡಿ ಅಭಿಮಾನವನ್ನೆಲ್ಲ ವಿನಮ್ರವಾಗಿ ಸ್ವೀಕರಿಸಿ, ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕೋ ಸ್ಟಾರುಗಳನ್ನು ನೋಡಿದರೆ ನಿಜಕ್ಕೂ ಗೌರವ ಮೂಡಿಕೊಳ್ಳುತ್ತೆ. ಹಾಗೊಂದು ಗೌರವಕ್ಕೆ ಪಾತ್ರರಾಗಿರುವವರಲ್ಲಿ ನಮ್ಮ ರಾಜಣ್ಣ ಪ್ರಮುಖರಾದರೆ, ಈವತ್ತಿಗೆ ಆ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಇನ್ನುಳಿದಂತೆ, ಪಕ್ಕದ ತಮಿಳು ಚಿತ್ರರಂಗದ ವಿಚಾರಕ್ಕೆ ಬರೋದಾದರೆ, ತನ್ನ ಸಿಂಪ್ಲಿಸಿಟಿಯ ಮೂಲಕವೇ ಭಿನ್ನವಾಗಿ ನಿಲ್ಲುವವರು ಚಿಯಾನ್ ವಿಕ್ರಂ! ಅಭಿಮಾನಿಗಳು ಎದುರು ಬಂದು ನಿಂತರೂ, ಆಸುಪಾಸಲ್ಲಿ ಯಾರೇ ಇದ್ದರೂ ಅತ್ಯಂತ ಆತ್ಮೀಯವಾಗಿ ವರ್ತಿಸೋದು ವಿಕ್ರಂ ಸ್ಪೆಷಾಲಿಟಿ. ಅವರೊಂದಿಗೆ ಯಾರೇ ಸಿನಿಮಾಗಳಲ್ಲಿ ಕೆಲಸ ಮಾಡಿದರೂ ವಿಕ್ರಂ ಬಗೆಗೊಂದು ವಿಶೇಷ ಗೌರವ ಮೂಡಿಕೊಳ್ಳುತ್ತಿದೆ. ಅದರಲ್ಲಿಯೂ ತನ್ನ ಮನೆಯ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವವರನ್ನೆಲ್ಲ ವಿಕ್ರಂ ತನ್ನ…

Read More

ಊಟ ಮಾಡುವಾಗ ಅನ್ನದಲ್ಲಿ ಕೂದಲು ಬಿದ್ದಿದ್ದರೂ ಮನೆ ಮಂದಿಯ ಮೇಲೆ ಜುಟ್ಟು ಕೆದರಿಕೊಂಡು ಕಾದಾಟಕ್ಕಿಳಿಯುವವರಿದ್ದಾರೆ. ಈ ಕೂದಲು ಸಿಗುವ ಸಿಲ್ಲಿ ಕಾರಣಕ್ಕೇ ಅದೆಷ್ಟೋ ಸಾಂಸಾರಿಕ ಬದುಕಿನಲ್ಲಿ ಅಶಾಂತಿ ನೆಲೆಯೂರಿ ಬಿಡುತ್ತದೆಂದರೆ ನಿಮಗೆ ಅಚ್ಚರಿಯಾದೀತೇನೋ… ಹಾಗೆ ಸಣ್ಣ ಕೂದಲು ಹಿಡಿದುಕೊಂಡು ಜಗ್ಗಾಡುವ ಮಂದಿ, ಹೊಟೇಲುಗಳಿಗೆ ಹೋಗಿ ತೃಪ್ತಿಯಿಂದ ತಿಂದು ಬರುತ್ತಾರೆ. ಆದರೆ, ಹಾಗೆ ನಾವು ಚಪ್ಪರಿಸಿ ತಿನ್ನೋ ತಿನಿಸಿನ ಮೇಕಿಂಗ್ ಸ್ಟೈಲನ್ನು ಕಣ್ಣಾರೆ ಕಂಡರೆ ಜನುಮ ಪೂರ್ತಿ ವಾಂತಿ ಕಂಟ್ರೋಲಿಗೆ ಬರುವುದು ಕಷ್ಟವಿದೆ. ಇದಕ್ಕೆ ಅಪವಾದವೆಂಬಂತೆ ಒಂದಷ್ಟು ಹೊಟೇಲುಗಳಿರಬಹುದಾದರೂ, ಬಹುತೇಕವುಗಳದ್ದು ಅದೇ ಕಥೆ. ತಮಿಳುನಾಡಿನಲ್ಲಾಗಿರುವ ಒಂದು ಘಟನೆಯ ಕಥೆ ಕೇಳಿದರೆ, ಖಂಡಿತಾ ಹೊಟೇಲಿನ ಬಗ್ಗೆ ಭಯ ಆವರಿಸಿಕೊಂಡು ಬಿಡುತ್ತೆ! ದೊಡ್ಡ ಹೊಟೇಲು, ರೆಸ್ಟೋರೆಂಟ್‌ಗಳಲ್ಲಿ ಭಯಂಕರ ಸ್ವಚ್ಛತೆ ಕಾಪಾಡುತ್ತಾರೆ ಅಂತೊಂದು ಭ್ರಮೆ ಜನಸಾಮಾನ್ಯರಲ್ಲಿದೆ. ತಮಿಳುನಾಡಿನ ಗಾಂಧಿನಗರದ ನಿವಾಸಿ ಮುರಳಿ ಎಂಬಾತ ಬಾಲಾಜಿ ಭವನದಲ್ಲಿ ಖಾಸಗಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಒಂದಷ್ಟು ಜನರಿದ್ದ ಆ ಕಾರ್ಯಕ್ರಮಕ್ಕೆ ತಿರುವಣ್ಣಾಮಲೈ ರೆಸ್ಟೋರೆಂಟಿನಿಂದ ಊಟ ತರಿಸಲಾಗಿತ್ತು. ಅದು ಹೇಳಿಕೇಳಿ ಬಲು ಪ್ರಸಿದ್ಧಿ…

Read More

ಪ್ರತೀ ಜೀವ ಸಂಕುಲಗಳ ಮೇಲೂ ಪ್ರಹಾರ ನಡೆಸುತ್ತಾ ಸರ್ವನಾಶ ಮಾಡುವ ಮನುಷ್ಯರನ್ನೂ ಕೂಡಾ ಕೆಲ ಪ್ರಾಣಿಗಳು, ಹುಳ ಹುಪ್ಪಟೆಗಳು ಬೆಚ್ಚಿ ಬೀಳಿಸುತ್ತವೆ. ಗಾತ್ರದಲ್ಲಿ ತುಂಬಾನೇ ಪುಟ್ಟದಾದ ಜೀವಿಗಳೂ ಕೂಡಾ ನಮ್ಮನ್ನು ಕನಸಲ್ಲಿಯೂ ಕಾಡಿ ಕಂಗಾಲು ಮಾಡುತ್ತವೆ. ಯಾಕಂದ್ರೆ ಅವುಗಳ ಮೈ ತುಂಬಾ ಒಂದಷ್ಟು ಮಂದಿಯನ್ನು ಒಂದೇ ಸಲಕ್ಕೆ ಕೊಂದು ಬಿಡುವಷ್ಟು ವಿಷವಿರುತ್ತೆ. ಮತ್ತೆ ಕೆಲ ಜೀವಿಗಳು ಆತ್ಮ ರಕ್ಷಣೆಗಾಗಿ ಕಚ್ಚಿ, ಕುಟುಕಿದರೂ ಕೂಡಾ ಆ ನೋವನ್ನು ಸಹಿಸಿಕೊಂಡು ಸುಧಾರಿಸಿಕೊಳ್ಳೋದಕ್ಕೆ ವಾರಗಟ್ಟಲೆ ಬೇಕಾಗುತ್ತೆ. ಮತ್ತೆ ಕೆಲ ಜೀವಿಗಳು ಕಚ್ಚಿದರೆ ಆ ಭಾಗವೇ ಕೊಳೆತು ನಾರುತ್ತೆ. ಅಂಥಾ ಭಯಾನಕ ವಿಷ ತುಂಬಿಕೊಂಡಿರೋ ಜೀವಿಗಳಲ್ಲಿ ಚೇಳು ಪ್ರಧಾನವಾದದ್ದು. ಚೇಳು ಎಂಬುದು ಯಾರನ್ನೇ ಆದರೂ ನಡುಗಿಸಿ ಹಾಕುವಂಥಾ ಗುಣ ಲಕ್ಷಣಗಳನ್ನು ಹೊಂದಿರೋ ಜೀವಿ. ಅದು ಕೊಂಚ ಪೊದೆ ಪ್ರದೇಶದಲ್ಲಿದ್ದುಕೊಂಡು ಮನುಷ್ಯರು ವಾಸವಿರೋ ಪ್ರದೇಶದಲ್ಲಿಯೇ ಕಾಣಿಸಿಕೊಳ್ಳುತ್ತವೆ. ಕೊಂಚ ಯಾಮಾರಿದರೂ ಕುಟುಕಿ ಒಂದಷ್ಟು ದಿನ ನೋವಲ್ಲಿ ವಿಲಗುಡುವಂತೆ ಮಾಡಿ ಬಿಡುತ್ತವೆ. ಒಂದೇ ಒಂದು ಸಲ ಕುಟುಕಿದರೆ ಅಷ್ಟೆಲ್ಲ ಪರಿಣಾಮ ಬೀರೋ…

Read More

ಮಳೆಗೆ ಅದೆಂಥಾ ಮುನಿಸಿತ್ತೋ… ಥೇಟು ನಿನ್ನಂತೆಯೇ ಕಾಡಿ, ಬಾರದೆ ಸತಾಯಿಸಿ ಮತ್ತೆ ಲಯ ಹಿಡಿದಿದೆ. ಮಾಮೂಲಿಯಂತಿದ್ದರೆ ಈ ಹೊತ್ತಿಗೆಲ್ಲಾ ಪೇಪರು ತಿರುವಿದರೂ, ಟಿವಿ ಆನ್ ಮಾಡಿದ್ದರೂ ಮಳೆಯದ್ದೇ ಸುದ್ದಿ. ಅಲ್ಲೆಲ್ಲೋ ಸೇತುವೆಯ ಮೇಲೆ ಹರಿದ ತೊರೆ, ಮತ್ತೆಲ್ಲೋ ಊರಿಗೂರೇ ದ್ವೀಪ, ಅಣೆಕಟ್ಟೆಗಳೆಲ್ಲ ಭರ್ತಿಯಾದ ಸಂತಸ, ಮುಖ್ಯಮಂತ್ರಿಯೋ, ಸಚಿವನೋ ತುಂಬಿದ ಆಣೆಕಟ್ಟೆಗೆ ಬಾಗೀನ ಬಿಡುವ ಸಾಲು ಸಾಲು ಪೋಸು… ಅಂಥಾ ಮುಂಗಾರು ಈ ಸಾರ್ತಿ ಮಾತ್ರ ನಿನ್ನ ಬುದ್ಧಿಯನ್ನೇ ಫಾಲೋ ಮಾಡಿದಂತಿತ್ತು. ಆದರೀಗ ಮತ್ತೆ ಮೋಡಗಟ್ಟಿದೆ. ಮತ್ತೆ ವರ್ಷಧಾರೆಗೆ ಮೈಕೈಚಾಚಿ ನಡೆಯುವ ಸಂಭ್ರಮ. ಮನಸು ಮಂಕಾದಾಗೆಲ್ಲಾ ಕೆನ್ನೆ ಕೆಂಪಾಗಿಸಿಕೊಂಡು ಕಾಯುತ್ತಿದ್ದಂತಿದ್ದ ನನ್ನಿಷ್ಟದ ಸಂಜೆಗಳೂ ಶೀತಲ ಸ್ಪರ್ಶದಿಂದ ತಂಪು ತಂಪು. ಇಂಥಾ ಸಂಜೆಗಳ ಸನ್ನಿಧಾನದಲ್ಲಿ ನಿನ್ನ ಸಾನಿಧ್ಯವೂ ಇದ್ದಿದ್ದರೆ ಅದರ ರಂಗೇ ಬೇರೆಯದ್ದಿರುತ್ತಿತ್ತು! ತುಂಬಾ ಇಷ್ಟದ ಜೀವದ ಧ್ಯಾನದಲ್ಲಿಯೇ ಈ ಮಳೆ ಜಿಬುರುವ ಸಂಜೆಗಳನ್ನ ಕಳೆಯುವುದು, ಮಧುರ ನೀರವದ ರಾತ್ರಿಗಳನ್ನು ಆಸ್ವಾದಿಸುವ ಆಹ್ಲಾದವೇ ಬೇರೆ. ಬಹುಶಃ ನೀ ನಂಗಿಂಥಾದ್ದೊಂದು ಶಿಕ್ಷೆ ಕೊಟ್ಟಿದ್ದೀಯೆಂದು ಬೀಗುತ್ತಿದ್ದಿರಬಹುದೇನೋ. ಈ…

Read More

ಹಿರಿ ಜೀವದ ಒಡಲೊಳಗಿದೆ ಬೇರೆಯದ್ದೇ ಲೆಕ್ಕಾಚಾರ! ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣರಿಗೆ ಭಾರತೀಯ ಜನತಾ ಪಾರ್ಟಿಯೂ ಬೋರು ಹೊಡೆಸಿತೇ? ಸದ್ಯ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿರುವ ರೂಮರುಗಳ ಪ್ರಕಾರವಾಗಿ ನೋಡ ಹೋದರೆ ಕೃಷ್ಣ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿರೋದು ನಿಜ. ಅದು ಬೋರೋ, ತಮ್ಮ ಲೆಕ್ಕಾಚಾರ ಬೋರಲು ಬಿದ್ದುದರ ವಿರುದ್ಧದ ಅಸಹನೆಯೋ… ಅಂತೂ ಹೈಟೆಕ್ ಕೃಷ್ಣ ಮೆತ್ತಗೆ ಬಿಜೆಪಿ ಹೊಸಿಲಾಚೆ ಕಾಲಿಟ್ಟಿದ್ದಾರೆ. ಅಷ್ಟಕ್ಕೂ ವಯೋವೃದ್ಧರಾದ ಎಸ್.ಎಂ ಕೃಷ್ಣ ಬಿಜೆಪಿ ತೊರೆದರೆ ಆ ಪಕ್ಷಕ್ಕೇನು ನಷ್ಟವಿಲ್ಲ. ಕಾಂಗ್ರೆಸ್‌ಗೆ ಬಂದರೆ ಆಗುವ ಲಾಭವೂ ಅಷ್ಟಕ್ಕಷ್ಟೇ. ಆದರೆ ಕೃಷ್ಣ ಹಿರಿಯ ಮುತ್ಸದ್ಧಿಯಾಗಿರೋದರಿಂದ ಅವರ ನಡಾವಳಿಗಳ ಬಗೆಗೊಂದು ಕುತೂಹಲ ಇದ್ದೇ ಇದೆ! ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ರಾಜ್ಯದ ಮುಖ್ಯಮಂತ್ರಿಯಾಗಿ ಕೇಂದ್ರ ಸಚಿವರಾಗಿಯೂ ಅಧಿಕಾರ ಅನುಭವಿಸಿದ್ದವರು ಎಸ್.ಎಂ ಕೃಷ್ಣ. ಆದರೆ ಈ ಅಧಿಕಾರ ಲಾಲಸೆ ಎಂಬುದು ಅಷ್ಟು ಸುಲಭಕ್ಕೆ ತಣಿಯುವಂಥಾದ್ದಲ್ಲ ಎಂಬುದಕ್ಕೆ ಕೃಷ್ಣ ಅವರಿಗಿಂತಲೂ ಉತ್ತಮ ಉದಾಹರಣೆ ಬೇರೊಂದಿಲ್ಲ. ಬಹುಶಃ ತಮ್ಮ ದೇಹವೇ ತಮ್ಮ ಮಾತು ಕೇಳದ ಸ್ಥಿತಿ ತಲುಪಿರುವಾಗ ಘನತೆಯಿಂದ…

Read More

ಇಡೀ ಭಾರತವೇ ಇದೀಗ ನಾನಾ ಸಮಸ್ಯೆಗಳ ಸಂಕೋಲೆಯಲ್ಲಿ ಸಿಲುಕಿ ನರಳಾಡುತ್ತಿದೆ. ಕೊರೋನಾದಂಥಾ ಮಹಾಮಾರಿ ಬಂದಾದ ಮೇಲಂತೂ, ಇಚ್ಛಾಶಕ್ತಿಯುಳ್ಳ ನಾಯಕತ್ವ ಇದ್ದರೆ ಮಾತ್ರವೇ ಚೇತರಿಸಿಕೊಳ್ಳಲು ಸಾಧ್ಯ. ಆದರೆ, ಆ ಜಾಗವನ್ನು ನರೇಂದ್ರ ಮೋದಿಯಂಥಾ ಶೋಮ್ಯಾನುಗಳು ಆವರಿಸಿಕೊಂಡಿರುವಾಗ, ಪರಿಸ್ಥಿತಿ ತಹಬಂದಿಗೆ ಬರುತ್ತದೆಂಬ ನಿರೀಕ್ಷೆ ಇಟ್ಟುಕೊಳ್ಳುವುದೂ ಮೂರ್ಖತನವೆನ್ನಿಸುತ್ತೆ. ಇಡೀ ಇಂಡಿಯಾದ ಆತ್ಮದಂತಿರುವ ಹಳ್ಳಿಗಳಲ್ಲಿ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಅವ್ಯವಸ್ಥೆಗಳು ಕಾಲು ಚಾಚಿ ಕೂತಿವೆ. ಮೂಲಭೂತ ಸೌಕರ್ಯಗಳು ಇನ್ನೂ ಅಂಥಾ ಹಳ್ಳಿ ಹಾದಿಯತ್ತ ಮುಖ ಮಾಡಿಲ್ಲ. ವಾಸ್ತವ ಹೀಗಿರುವಾಗ ಮೋದಿ ಭಕ್ತರು ಭಾರತ ವಿಶ್ವಗುರು ಎಂಬಂತೆ ಪುಂಗುತ್ತಿರೋದೇ ಪರಮ ಕಾಮಿಡಿಯಂತೆ ಕಾಣುತ್ತಿರೋದರಲ್ಲಿ ಅತಿಶಯವಾದ್ದೇನೂ ಇಲ್ಲ! ಬಡ ಭಾರತವನ್ನು ಬಲಿಷ್ಟವಾಗಿದೆಯೆಂದು ತೋರಿಸುವ ಕಸರತ್ತನ್ನು ಎರಡನೇ ಅವಧಿಯ ನಂತರ ಮೋದಿ ಪಡೆ ವ್ಯವಸ್ಥಿತವಾಗಿಯೇ ಮಾಡುತ್ತಾ ಬಂದಿದೆ. ಅದರ ನಡುವೆಯೂ ಸಾಮಾಜಿಕ ಜಾಲತಾಣಗಳ ದೆಸೆಯಿಂದ ಅಸಲೀ ಭಾರತದ ದಾರುಣಗಾಥೆಗಳು ಆಗಾಗ ಜಾಹೀರಾಗುತ್ತಿರುತ್ತವೆ. ಅಷ್ಟಾದರೂ ಮೋದಿ ಪ್ರಣೀತ ಮುಸುರೆ ಮಾಧ್ಯಮಗಳು ಅದರತ್ತ ಮೌನ ತಾಳುತ್ತವೆ. ಅದೇ ಹೊತ್ತಿನಲ್ಲಿ ಪ್ರಧಾನ ಸೇವಕನನ್ನು…

Read More

ಭಾರತೀಯ ಚಿತ್ರರಂಗದ ಮೇರು ನಿರ್ದೇಶಕ ಮಣಿರತ್ನಂ. ತಾನೇ ಮುರಿಯಲು ಕಷ್ಟವಾಗುವಂಥಾ ಹಿಟ್ ದಾಖಲೆಗಳನ್ನು ಹೊಂದಿರುವ ಮಣಿರತ್ನಂ ನಮ್ಮ ನಡುವಿನ ಕ್ರಿಯಾಶೀಲ ನಿರ್ದೇಶಕರಲ್ಲಿಯೇ ಮುಂಚೂಣಿಯಲ್ಲಿರುವವರು. ಸಾಮಾನ್ಯವಾಗಿ ಒಂದು ಹಿಟ್ ಚಿತ್ರದಾಚೆಗೆ, ಆ ಗೆಲುವಿನ ಪ್ರಭೆಯನ್ನು ಮುಂದುವರೆಸಿಕೊಂಡು ಹೋಗುವುದು ಯಾರ ಪಾಲಿಗಾದರೂ ಸವಾಲಿನ ಸಂಗತಿಯೇ. ಕೆಲವರಂತೂ ಒಂದು ಹಿಟ್ ನಂತರದಲ್ಲಿ ಎದುರಾಗೋ ಆಘಾತದಿಂದ ತತ್ತರಿಸಿ ಅಕ್ಷರಶಃ ಮೂಲೆಗುಂಪಾಗಿಬಿಡೋದಿದೆ. ಆದರೆ ಮಣಿರತ್ನಂ ವೃತ್ತಿ ಬದುಕಿನ ಗ್ರಾಫಿನಲ್ಲಿ ಸಾಕಷ್ಟು ಏರಿಳಿತಗಳು ಕಾಣಿಸುತ್ತವೆ. ಅದ್ಯಾವುದರಿಂದಲೂ ವಿಚಲಿತರಾಗದೆ ಮತ್ತೆ ಹೊಸ ಹೊಸಾ ಅಚ್ಚರಿಗಳ ಮೂಲಕ ಮೇಲೆದ್ದು ನಿಲ್ಲುತ್ತಾ ಬಂದಿರೋದು ನಿಜವಾದ ವಿಶೇಷ. ಅಂಥಾದ್ದೊಂದು ಮಹಾನ್ ಅಚ್ಚರಿಯಂಥಾ ಚಿತ್ರ ‘ಪೊನ್ನಿಯಿನ್ ಸೆಲ್ವನ್’! ‘ಪೊನ್ನಿಯಿನ್ ಸೆಲ್ವನ್’ ಭಾರತೀಯ ಚಿತ್ರರಂಗವೆಲ್ಲ ಸಾರಾಸಗಟಾಗಿ ಕಣ್ಣರಳಿಸಿ ನೋಡುತ್ತಿರುವ, ಪ್ರೇಕ್ಷಕರಲ್ಲಿ ಗಾಢವಾದ ನಿರೀಕ್ಷೆ ಮೂಡಿಸಿರುವ ಚಿತ್ರ. ಒಂದು ಸಿನಿಮಾ ಆರಂಭಿಸಿದರೆಂದರೆ, ಅದನ್ನೊಂದು ಧ್ಯಾನದಂತೆ ಪರಿಭಾವಿಸುವವರು ಮಣಿರತ್ನಂ. ಅಂಥಾದ್ದೊಂದು ತಾದಾತ್ಮ್ಯದ ಶಿಖರ ಸ್ಥಿತಿಯಲ್ಲಿ ಅವರು ನಿರ್ದೇಶನ ಮಾಡಿರುವ ಚಿತ್ರ ‘ಪೊನ್ನಿಯಿನ್ ಸೆಲ್ವನ್’. ಬಹು ದೊಡ್ಡ ತಾರಾಗಣ, ಸ್ಟಾರ್ ನಟ ನಟಿಯರ…

Read More

ವಯಸ್ಸು ಅರವತ್ಮೂರರ ಗಡಿಯಲ್ಲಿ ಗಸ್ತು ಹೊಡೆಯುತ್ತಿದ್ದರೂ ಹದಿನೆಂಟರ ಹುಮ್ಮಸ್ಸನ್ನು ಆವಾಹಿಸಿಕೊಂಡಿರುವವರು ನಟ ಸಂಜಯ್ ದತ್. ಈತನ ಹೆಸರು ಕೇಳಿದಾಕ್ಷಣವೇ ಬಗೆ ಬಗೆಯ ಶೇಡುಗಳುಳ್ಳ, ವಿಕ್ಷಿಪ್ತ ಪರ್ಸನಾಲಿಟಿಗಳು ಕಣ್ಮುಂದೆ ಚಲಿಸಲಾರಂಭಿಸುತ್ತವೆ. ಈ ಆಸಾಮಿ ಬೇಕೆಂತಲೇ ಸೃಷ್ಟಿಕೊಂಡ ವಿವಾದಗಳು, ರಗಳೆ ರಾಮಾಯಣಗಳ ಸುರುಳಿ ಬಿಚ್ಚಿಕೊಳ್ಳುತ್ತವೆ. ಆದರೆ, ಸಂಜು ಬಾಬಾ ಈವತ್ತಿಗೂ ನಟನಾಗಿ ಚಾಲ್ತಿಯಲ್ಲಿರುವುದು, ಬೇಡಿಕೆ ಉಳಿಸಿಕೊಂಡಿರೋದು ತನ್ನೊಳಗಿನ ನಟನೆಯ ಕಸುವಿನಿಂದ ಮಾತ್ರ ಎಂಬುದು ನಿರ್ವಿವಾದ. ಕೆಜಿಎಫ್‌ನಲ್ಲಿ ಅಧೀರನಾಗಿ ಅಬ್ಬರಿಸಿದ ನಂತರವಂತೂ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಂಜು ಬಾಬಾನ ಬೇಡಿಕೆ ದುಪ್ಪಟ್ಟುಗೊಂಡಿದೆ. ಅದಕ್ಕೆ ಸರಿಯಾಗಿ ಅವರ ಸಂಭಾವನೆಯೂ ಅಚ್ಚರಿದಾಯಕವಾಗಿ ಹೆಚ್ಚಾಗಿದೆ. ಸಂಜು ಸ್ನೇಹ ಅಂತ ಬಂದಾಗ ಭಲೇ ಉದಾರಿ; ವ್ಯವಹಾರ ಅಂತ ಬಂದಾಗ ಅಷ್ಟೇ ಕಟ್ಟುನಿಟ್ಟಿನ ಆಸಾಮಿ. ಈ ಕಾರಣದಿಂದಲೇ ಅವರು ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಸಂಭಾವನೆಯ ಮೀಟರ್ ಅನ್ನೂ ಏಕಾಏಕಿ ರೈಸ್ ಮಾಡಿಬಿಟ್ಟಿದ್ದಾರೆ. ಇದೆಲ್ಲವನ್ನೂ ಏಕೆ ಹೇಳಬೇಕಾಯಿತೆಂದರೆ, ಸಂಜು ಬಾಬಾ ಇದೀ ಮತ್ತೊಮ್ಮೆ ದಕ್ಷಿಣ ಭಾರತೀಯ ಚಿತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈಗಾಗಲೇ ಕಮಲ್ ಹಾಸನ್ ನಟನೆಯ…

Read More

ಗಾಯಕಿಯಾಗಿಯೂ ಗಮನ ಸೆಳೆದ ಬಿಗ್‌ಬಾಸ್ ಹುಡುಗಿ! ಕಿರುತೆರೆಯಲ್ಲಿ ಮಿಂಚಿ, ತನ್ನ ಮುದ್ದಾದ ಅಭಿನಯದ ಮೂಲಕ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡುರುವಾಕೆ ಚಂದನಾ ಅನಂತಕೃಷ್ಣ. ಬರೀ ಕಿರುತೆರೆಯಲ್ಲಿಯೇ ಕಳೆದು ಹೋಗದೆ, ಬೇರೆ ಬೇರೆ ಹವ್ಯಾಸಗಳತ್ತ ಕೈಚಾಚುತ್ತಾ, ಥರ ಥರದ ಪ್ರಯೋಗಳಿಗೆ ಒಗ್ಗಿಕೊಳ್ಳುತ್ತಿರುವುದು ಈ ಹುಡುಗಿಯ ಹೆಚ್ಚುಗಾರಿಕೆ. ಪ್ರತಿಭೆ ಮತ್ತು ಅದಕ್ಕಾಗಿನ ನಿರಂತರ ಪರಿಶ್ರಮಗಳಿದ್ದರೆ ಕೊಂಚ ತಡವಾದರೂ ಗೆಲುವೆಂಬುದು ನಾನಾ ಬಗೆಯಲ್ಲಿ ಕೈ ಹಿಡಿಯುತ್ತದೆ ಎಂಬುದಕ್ಕೆ ಚಂದನಾ ನಿಜಕ್ಕೂ ಉದಾಹರಣೆಯಂಥವರು. ಇತ್ತೀಚಿನ ದಿನಗಳಲ್ಲಿ ಕೊಂಚ ಮರೆಯಾದಂತಿದ್ದ ಚಂದನಾ ಅಭಿಮಾನಿಗಳಲ್ಲಿ ಕೊಂಚ ದಿಗಿಲು ಮೂಡಿಸಿದ್ದರು. ಆದರೀಗ ಮತ್ತೊಂದು ಅಚ್ಚರಿಯೊಂದಿಗೆ ವಾಪಾಸಾಗಿದ್ದಾರೆ! ಹಾಗೆ ಚಂದನಾ ಅಚ್ಚರಿ ಮೂಡಿಸಿರೋದು ‘ಎದುರಲಿ ಇರುವಾಗ ನೀನು’ ಎಂಬ ಮೋಹಕವಾದೊಂದು ಆಲ್ಬಂ ಸಾಂಗ್ ಮೂಲಕ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಈ ಆಲ್ಬಂ ಸಾಂಗ್ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ. ಹಾಗೆ ನೋಡಿದರೆ, ಆಲ್ಬಂ ಸಾಂಗುಗಳು ಕನ್ನಡದಲ್ಲಿ ಬಹು ಬೇಗನೆ ಆವರಿಸಿಕೊಂಡಿದ್ದು, ಯಶಸ್ವಿಯಾದದ್ದು ಕಡಿಮೆಯೇ. ಅಂಥಾದ್ದೊಂದು ನಿರ್ವಾತ ಸ್ಥಿತಿಯಲ್ಲಿ ಸದರಿ ಆಲ್ಬಂ ಸಾಂಗ್ ಸಖತ್ತಾಗಿಯೇ ಸೌಂಡು ಮಾಡುತ್ತಿದೆ.…

Read More

ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ನಟನಾಗಿದ್ದುಕೊಂಡು, ಸಾರ್ವಕಾಲಿಕ ಪ್ರೀತಿ ಸಂಪಾದಿಸಿಕೊಂಡಿರುವವರು ಕಮಲ್ ಹಾಸನ್. ಈ ಕಾರಣದಿಂದಲೇ ಕಮಲ್ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿ ಹೊರ ಬೀಳುತ್ತಲೇ ಅದರ ಸುತ್ತ ನಿರೀಕ್ಷೆಗಳು ತಂತಾನೇ ಜಮಾವಣೆಯಾಗಿರುತ್ತವೆ. ಯಾವಾಗ ಕಮಲ್ ವಿಕ್ರಮ್ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆಂಬ ಸುದ್ದಿ ಹೊರ ಬಿದ್ದಿತ್ತೋ, ಆವಾಗಿನಿಂದಲೇ ಪ್ರೇಕ್ಷಕರ ಕಣ್ಣಲ್ಲಿ ಹೊಳಪು ಮೂಡಿಕೊಂಡಿತ್ತು. ಆ ಚಿತ್ರವೀಗ ಬಿಡುಗಡೆಗೊಂಡು ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಹಲವಾರು ಏಳುಬೀಳುಗಳು ಮತ್ತು ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ವಿಕ್ರಮ್ ನೂರರ ಗಡಿ ದಾಟಿಕೊಂಡಿದೆ. ಆ ಕಾರಣದಿಂದಲೇ ಬಹುಕಾಲದ ನಂತರ ಕಮಲ್ ಕಣ್ಣಲ್ಲಿ ಖುಷಿಯ ಕಿಡಿ ಕಾಣಿಸಿಕೊಂಡಿದೆ! ಇದು ಕಮಲ್ ಪಾಲಿಗೆ ನಿಜಕ್ಕೂ ಸಂಭ್ರಮದ ಸಂಗತಿ. ವಿಕ್ರಮ್ ಬಹಳಷ್ಟು ಭಿನ್ನವಾಗಿ, ರಿಚ್ ಆಗಿ ಮೂಡಿ ಬಂದಿದ್ದರೂ ಕೂಡಾ ಬಿಡುಗಡೆಯ ಕ್ಷಣಗಳಲ್ಲಿ ಗ್ರಹಣದಂಥಾ ವಾತಾವರಣವೂ ಇದ್ದಿದ್ದು ನಿಜ. ಯಾಕೆಂದರೆ, ವಿಕ್ರಮ್ ಚೆನ್ನಾಗಿದೆ ಎಂಬ ಅಭಿಪ್ರಾಯಗಳೇ ಮುಸುಕಾಗುವಂತೆ ಮಿಶ್ರ ಪ್ರತಿಕ್ರಿಯೆಗಳ ಒಡ್ಡೋಲಗ ಆರಂಭವಾಗಿತ್ತು. ಇದರಿಂದಾಗಿ ಕೊಂಚ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದರೂ, ವಿಕ್ರಮ್ ಬಹುಬೇಗನೆ ಚೇತರಿಸಿಕೊಂಡು…

Read More