ನಮ್ಮಲ್ಲಿನ ನಂಬಿಕೆಗಳೇ ಅಸಂಗತವಾದವುಗಳು. ಕುಂತರೆ, ನಿಂತರ, ಕೆಮ್ಮಿದರೆ, ಕಣ್ಣು ರೆಪ್ಪೆ ಹೊಡೆದುಕೊಂಡರೆ, ನರಗಳು ಬಡಿದುಕೊಂಡರೂ ಅದಕ್ಕೆ ಒಂದೊಂದು ಶಕುನಗಳಿದ್ದಾವೆ. ಎಡಗಣ್ಣು ಅದುರಿದರೆ ಏನಾಗುತ್ತೆ? ಬಲಗಣ್ಣು ಅದುರಿದರೆ ಯಾವ್ಯಾವ ಫಲಾಫಲಗಳು ಸಿಗುತ್ತವೆ ಎಂಬಲ್ಲಿಯವರೆಗೆ ಎಲ್ಲದಕ್ಕೂ ಒಂದಷ್ಟು ವಿವರಣೆಗಳಿದ್ದಾವೆ. ಅವುಗಳಲ್ಲಿ ಒಂದಷ್ಟು ಸಿಲ್ಲಿಯಾಗಿ, ಮತ್ತೊಂದಷ್ಟು ಮೂರ್ಖತನದ ಪರಮಾವಧಿಯಾಗಿಯೂ ಕಾಣಿಸುತ್ತವೆ. ಹಾಗಿರುವಾಗ ಅರಿವೇ ಇಲ್ಲದಂತೆ ಆಗಾಗ ಕಾಣಿಸಿಕೊಳ್ಳುವ ಆಕಳಿಕೆಗೆ ಅರ್ಥ, ಶಕುನಗಳು ಇಲ್ಲದಿರಲು ಹೇಗೆ ಸಾಧ್ಯ? ಈ ಆಕಳಿಕೆಯ ಬಗ್ಗೆಯಂತೂ ಕನಸಿನ ಬಗ್ಗೆ ಇರುವಷ್ಟೇ ರಂಗು ರಂಗಾದ ವಿವರಣೆಗಳು, ನಂಬಿಕೆಗಳಿದ್ದಾವೆ. ಸಾಮಾನ್ಯವಾಗಿ ಆಲಸ್ಯದಂಥಾ ಘಳಿಗೆಯಲ್ಲಿ, ಆಯಾಸವಾದ ಸಮಯದಲ್ಲಿ, ಬೋರು ಹೊಡೆದಂಥಾ ಸಂದರ್ಭಗಳಲ್ಲಿ ಆಕಳಿಕೆ ಬರುತ್ತೆ. ಕೆಲ ಮಂದಿ ಹೀಗಾದಾಗೆಲ್ಲ ತಮ್ಮನ್ನು ಯಾರೋ ನೆನೆಸಿಕೊಳ್ಳುತ್ತಿದ್ದಾರೆಂದು ಭ್ರಮಿಸ್ತಾರೆ. ಯಾರೋ ನಮ್ಮ ಬಗ್ಗೆ ಹೆಚ್ಚಾಗಿ ಮಾತಾಡುತ್ತಿದ್ದರೆ ಮಾತ್ರವೇ ಆಕಳಿಕೆ ಬರುತ್ತದೆ ಎಂಬಂಥ ನಂಬಿಕೆಗಳೂ ನಮ್ಮಲ್ಲಿದೆ. ಇಂಥಾ ಶಕುನಗಳಲ್ಲಿ ಅದೆಷ್ಟು ನಿಜವಿದೆಯೋ, ಸುಳ್ಳುಗಳಿವೆಯೋ ಭಗವಂತನೇ ಬಲ್ಲ. ಥಾ ನಂಬಿಕೆಗಳ ಬಗ್ಗೆ ವೈಜ್ಞಾನಿಕವಾಗಿ ವಿವರಣೆಗಳು ಇರಲೇ ಬೇಕಲ್ಲ. ಹಾಗಾದ್ರೆ ಇದರ ಬಗ್ಗೆ ವಿಜ್ಞಾನ…
Author: Santhosh Bagilagadde
ದಶಕಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ, ಸಹ ಕಲಾವಿದನಾಗಿ ಮಿಂಚಿದ್ದವರು ಅಭಿಜಿತ್. ವಿಷ್ಣುವರ್ಧನ್ ಸಿನಿಮಾಗಳಲ್ಲಿ ನಟಿಸುತ್ತಾ, ಆ ಪಾತ್ರಗಳ ಮೂಲಕವೂ ಗುರುತಾಗಿದ್ದ ಅಭಿಜಿತ್ ಈಗೊಂದಷ್ಟು ವರ್ಷಗಳಿಂದ ನೇಪಥ್ಯಕ್ಕೆ ಸರಿದುಬಿಟ್ಟಿದ್ದರು. ಇತ್ತೀಚೆಗೆ ಕಿರುತೆರೆ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದ ಅವರೀಕ ಮತ್ತೆ ಸಿನಿಮಾ ನಾಯಕನಾಗಿ ಬಣ್ಣ ಹಚ್ಚಿದ್ದಾರೆ! ಅಟ್ಲಿ ಎಂಬೊಂದು ಭಿನ್ನ ಕಥಾನಕದ ಚಿತ್ರದ ನಾಯಕನ ಪಾತ್ರಕ್ಕೆ ಅಭಿಜಿತ್ ಬಣ್ಣ ಹಚ್ಚಲಿದ್ದಾರೆ. ಹೆಸರೇ ಹೇಳುವಂತೆ ಇದೊಂದು ವಿಶಿಷ್ಟ ಮಾದರಿಯ ಚಿತ್ರ. ವಿಶೇಷವೆಂದರೆ, ಇದೇ ಮೊದಲ ಬಾರಿ ಮುಸ್ಲಿಂ ವ್ಯಕ್ತಿಯಾಗಿ ಅಭಿಜಿತ್ ಕಾಣಿಸಿಕೊಳ್ಳಲಿದ್ದಾರೆ. ನಿಜ ಜೀವನದಲ್ಲಿ ಅವರು ಶುದ್ಧ ಸಸ್ಯಾಹಾರಿ. ಮಾಂಸವಿರಲಿ; ಮೊಟ್ಟೆಯ ರುಚಿಯನ್ನೂ ಆತ ನೋಡಿಲ್ಲ. ಅಂಥಾ ಅಭಿಜಿತ್ ಈ ಸಿನಿಮಾದಲ್ಲಿ ಮಟನ್ ಅಂಗಡಿ ಮಾಲೀಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಅಭಿಜಿತ್‌ಗೆ ಜೋಡಿಯಾಗಿ ಅಳುಮುಂಜಿ ಶ್ರುತಿ ನಟಿಸಲಿದ್ದಾರೆ. ಈಗ್ಗೆ ಮೂವತ್ತು ವರ್ಷಗಳ ಹಿಂದೆ ಅಭಿಜಿತ್ ಮತ್ತು ಶ್ರುತಿ ಜೋಡಿ ಮೋಡಿ ಮಾಡಿತ್ತು. ಅದು ಪ್ರೇಕ್ಷಕರ ಇಷ್ಟದ ಪೇರ್ ಅನ್ನಿಸಿಕೊಂಡಿತ್ತು. ಇದೀಗ ಮೂರು ದಶಕಗಳ ನಂತರ ಅವರು…
ರಶ್ಮಿಕಾ ಮಂದಣ್ಣ ಕಾಂತಾರ ಚಿತ್ರವನ್ನು ನೋಡಿ ಅದರ ಬಗ್ಗೆ ಏನೂ ಮಾತಾಡದೆ ಮುಗುಮ್ಮಾಗಿದ್ದಾಳಾ? ನೋಡಲು ಪುರಸೊತ್ತು ಸಿಗದೆ ಸುಮ್ಮನಾಗಿದ್ದಾಳಾ ಅಂತೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಗಳಾಗುತ್ತಿದ್ದಾವೆ. ಬಹುತೇಕರು ಇದು ಗೆಲುವೆಂಬುದು ರಶ್ಮಿಕಾಳ ನೆತ್ತಿಗೇರಿರೋದರ ಪರಿಣಾಮ ಅಂತೆಲ್ಲ ಮೂದಲಿಸುತ್ತಿದ್ದಾರೆ. ಆದರೂ ಆ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ಕೊಡದಿದ್ದ ರಶ್ಮಿಕಾ, ಕಡೆಗೂ ದೂರದ ಮುಂಬೈನಲ್ಲಿ ನಿಂತು ಆ ಬಗ್ಗೆ ಮಾತಾಡಿದ್ದಾಳೆ. ಈ ಮೂಲಕ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಬೇರೊಂದು ದಿಕ್ಕಿನ ಮೂದಲಿಕೆಗೆ, ಕಟು ಟೀಕೆಗೆ ಗುರಿಯಾಗಿದ್ದಾಳೆ. ಮುಂಬೈನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ರಶ್ಮಿಕಾ ಫೋಟೋಗಳಿಗೆ ಪೋಸು ಕೊಡುತ್ತಿದ್ದಳು. ಈ ಸಂದರ್ಭದಲ್ಲಿ ಆಕೆ ಮೂಲ ಅರಿತಿದ್ದ ಪತ್ರಕರ್ತನೋರ್ವ ‘ನೀವು ಕಾಂತಾರ ಚಿತ್ರ ನೋಡಿದ್ದೀರಾ’ ಅಂತೊಂದು ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ಗಂಭೀರವಾಗಿ ಉತ್ತರಿಸಿದ್ದರೆ ರಶ್ಮಿಕಾಳ ಘನತೆ ತುಸುವಾದರೂ ಉಳಿಯುತ್ತಿತ್ತೇನೋ. ಆದರೆ ಆಕೆ ವಿಚಿತ್ರವಾದ ಆಂಗಿಕ ಅಭಿನಯ ಮಾಡುತ್ತಾ, ಉಡಾಫೆಯ ಶೈಲಿಯಲ್ಲಿ ನೋಡಿಲ್ಲ ಅಂತ ಉತ್ತರಿಸಿದ್ದಾಳೆ. ಬಳಿಕ ಬೆಂಗಳೂರಿಗೆ ಹೋದ ನಂತರ ನೋಡುವುದಾಗಿ ಅದೇ ಧಾಟಿಯಲ್ಲಿ ಉಸುರಿದ್ದಾಳೆ. ಹೀಗೊಂದು…
ಮನುಷ್ಯರಿರಲಿ, ಪ್ರಾಣಿಗಳೇ ಆಗಿರಲಿ… ತಲೆಗೇನಾದರೂ ಸಣ್ಣ ಪೆಟ್ಟಾದರೂ ಇಡೀ ದೇಹದ ವಾತಾರವಣವೇ ಬದಲಾಗಿ ಬಿಡುತ್ತವೆ. ತಲೆಗೇನಾದರೂ ಬಲವಾಗಿ ಪೆಟ್ಟು ಬಿದ್ದರೆ ಸ್ವಾಧೀನವನ್ನೇ ಕಳೆದುಕೊಳ್ಳಬೇಕಾಗುತ್ತೆ. ಹೀಗಿರುವಾಗ ತಲೆಯನ್ನೇ ಕತ್ತರಿಸಿ ತೆಗೆದು ಬಿಟ್ಟರೆ ಜಗತ್ತಿನ ಯಾವ ಜೀವಿಯೇ ಆದರೂ ಬದುಕಲು ಸಾಧ್ಯವೇ? ಇಂಥಾ ಪ್ರಶ್ನೆ ಎದುರಾದರೆ ಇಲ್ಲವೇ ಇಲ್ಲ ಎಂಬ ಉತ್ತರ ಅಷ್ಟ ದಿಕ್ಕುಗಳಿಂದಲೂ ಮೊರೆಯುತ್ತೆ. ಆದರೆ ಒಂದು ವಿಚಿತ್ರವಾದ ಘಟನೆ ನಮ್ಮ ನಂಬಿಕೆಯನ್ನೇ ಸುಳ್ಳು ಮಾಡಿದೆ! ಇಂಥಾದದ್ದೊಂದು ವಿಶೇಷವಾದ ವಿದ್ಯಮಾನ ನಡೆದಿರೋದು ಕೊಲ್ಯಾರಾಡೋದಲ್ಲಿ. ಈಗ್ಗೆ ಹಲವಾರು ವರ್ಷಗಳ ಹಿಂದೆ ನಡೆದಿರೋ ಈಘಟನಾವಳಿಗಳ ಹಿಂಚುಮುಂಚಿನ ವಿದ್ಯಮಾನ ನಿಜಕ್ಕೂ ರೋಚಕವಾಗಿದೆ. ಕೊಲ್ಯಾರಾಡೋದಲ್ಲಿನ ರೈತ ದಂಪತಿಗಳ ಸಮ್ಮುಖದಲ್ಲಿಯೇ ಈ ಅಚ್ಚರಿ ನಡೆದಿದೆ. ಅಲ್ಲಿನ ರೈತನೊಬ್ಬ ಕೃಷಿಯ ಜೊತೆಗೆ ಪೂರಕವಾಗಿ ಅನೇಕ ಪ್ರಾಣಿ ಪಕ್ಷಿಗಳನ್ನ ಸಾಕಿದ್ದ. ಅದರಲ್ಲಿ ಕೋಳಿಗಳೂ ಸೇರಿಕೊಂಡಿದ್ದವು. ಆಗಾಗ ಒಂದೊಂದು ಕೋಳಿಗಳನ್ನ ಕತ್ತರಿಸಿ ತಿನ್ನೋದು ಅವರೆಲ್ಲರ ರೂಢಿಯಾಗಿತ್ತು. ಅದೊಂದು ದಿನ ಬಿಳಿ ಮೈಬಣ್ಣದ ಕೋಳಿಯೊಂದನ್ನು ಆ ರೈತ ತಿನ್ನುವ ಸಲುವಾಗಿ ಕತ್ತು ಕತ್ತರಿಸಿ ಕೊಂದಿದ್ದ. ಮಾಮೂಲಿಯಾದರೆ…
ಈ ಪ್ರಾಣಿ ಪಕ್ಷಿಗಳ ಜೀವನ ಕ್ರಮವೇ ಭೂಮಿ ಮೇಲಿನ ಅದ್ಭುತ. ಈಗ ಇಂಥಾ ಜೀವಿಗಳ ಬಗ್ಗೆ ನಾನಾ ಥರದ ಸಂಶೋಧನೆಗಳು ನಡೆದಿವೆ. ಈಗಲೂ ನಡೆಯುತ್ತಲೇ ಇದ್ದಾವೆ. ಬಹುಶಃ ಇನ್ನೆಷ್ಟು ವರ್ಷ ಅದು ಮುಂದುವರೆಯದರೂ ಕೂಡಾ ನಮಗೆಲ್ಲ ಗೊತ್ತಾಗಿದೆ ಸಂತ ಎದೆಯುಬ್ಬಿಸಿ ನಿರಾಳವಾಗೋ ಅವಕಾಶವೇ ಕೂಡಿ ಬರಲಿಕ್ಕಿಲ್ಲವೇನೋ… ಯಾಕಂದ್ರೆ ಪ್ರಾಣಿ, ಪಕ್ಷಿ, ಜೀವ ಜಂತುಗಳ ಲೋಕ ಅಷ್ಟೊಂದು ವಿಸ್ತಾರವಾಗಿದೆ. ಅದರಲ್ಲಿಯೇ ನಾವೆಲ್ಲ ಕಣ್ಣರಳಿಸಿ ನೋಡುವಂಥ ವಿಸ್ಮಯದ ವಿಚಾರಗಳೂ ಇದ್ದಾವೆ. ಕಣ್ಣಿಗೆ ಕಾಣದ ಜೀವಿಗಳ ಮಾತು ಹಾಗಿರಲಿ. ನಮಗೆ ತೀರಾ ಪರಿಚಿತ ಎಂಬಂಥಾ ಪ್ರಾಣಿಗಳ ಬಗ್ಗೆಗೂ ನಮಗೆ ಗೊತ್ತಿಲ್ಲದಿರುವ ಅದೆಷ್ಟೋ ಅಂಶಗಳಿದ್ದಾವೆ. ನೋಡಿದರೆ ಬರಸೆಳೆದು ಮುದ್ದು ಮಾಡಬೇಕೆನ್ನಿಸುವಷ್ಟು ಮುದ್ದುಮುದ್ದಾಗಿರೋ ಮೊಲಗಳ ಬಗ್ಗೆಯೂ ನಮಗೆ ಗೊತ್ತಿಲ್ಲದಿರೋ ಅನೇಕ ಸಂಗತಿಗಳಿದ್ದಾವೆ. ಮೊಲಗಳು ಸಸ್ಯಾಹಾರಿಗಳು. ತರಕಾರಿ ಸೊಪ್ಪು ಸೆದೆಗಳನ್ನವು ಚಪ್ಪರಿಸಿ ತಿಂದು ತೃಪ್ತವಾಗುತ್ತವೆ. ಆದರೆ ಅವುಗಳಿಗೆ ಏನಾದರೂ ಒತ್ತಡವಾದ್ರೆ ಮಾತ್ರ ತಮ್ಮ ಬಳಗದಲ್ಲಿರೋ ಚಿಕ್ಕ ಮೊಲಗಳಿಗೆ ಗ್ರಹಚಾರ ಕಾಡಿತೆಂದೇ ಅರ್ಥ. ಯಾಕಂದ್ರೆ ಇಂಥಾ ಒತ್ತಡದ ಸಂದರ್ಭದಲ್ಲಿ ಮೊಲಗಳು ಪುಟ್ಟ…
ಸದಾ ಕಾಲವೂ ಹಿಮದ ಚಾದರ ಹೊದ್ದ ಹಿಮಾಲಯ ಯಾವತ್ತಿದ್ದರೂ ಸಾಹಸಿಗಳ ಪಾಲಿಗೆ ಫೇವರಿಟ್ ಸ್ಥಳ. ಕೇವಲ ಸಾಹಸಿಗರಿಗೆ, ಚಾರಣಿಗರಿಗೆ ಮಾತ್ರವಲ್ಲದೆ ದೈವೀಕ ನಂಬಿಕೆಯಲ್ಲಿ ತೊಡಗಿಸಿಕೊಂಡಿರುವವರಿಗೂ ಕೂಡಾ ಆಕರ್ಷಣೆಯ ಕೇಂದ್ರ. ಅಲ್ಲಿ ನಡೆಯೋ ಅಧ್ಯಾತ್ಮಿಕ ಸಾಧನೆಗಳು ಜಗತ್ತಿನ ಬೇರೆಲ್ಲಿಯೂ ಕಾಣಲು ಸಾಧ್ಯವೇ ಇಲ್ಲ. ಈ ವಿಚಾರವೇ ಅದೊಂದು ಪವಿತ್ರವಾದ ಸ್ಥಳ ಎಂಬುದನ್ನ ಬಿಂಬಿಸುತ್ತೆ. ಆದರೆ ಸಾಹಸಪ್ರಿಯದ ಉನ್ಮಾದವೇ ಅದಕ್ಕೊಂದು ಹಾರರ್ ಇಮೇಜನ್ನೂ ಕೂಡಾ ಕಟ್ಟಿ ಕೊಟ್ಟಿದೆ. ಈ ಪರ್ವತದ ಚಾರಣದ ಹಾದಿಗೆ ಶವಗಳೇ ಮೈಲಿಗಲ್ಲುಗಳಂತಿವೆ ಅಂದಮೇಲೆ ಹಿಮಾಲಯದ ಮತ್ತೊಂದು ಭೀಕರ ಮುಖದ ಪರಿಚಯ ಖಂಡಿತವಾಗಿಯೂ ಆಗುತ್ತೆ. ಮೌಂಟ್ ಎವರೆಸ್ಟ್ ಅನ್ನು ಜೀವಿತದಲ್ಲಿ ಒಂದು ಬಾರಿಯಾದರೂ ಅದೆಷ್ಟೋ ಜನರ ಮಹಾ ಕನಸು. ಸಾಹಸ ಪ್ರವೃತ್ತಿಯ ಚಾರಣಪ್ರಿಯರನ್ನಂತೂ ಈ ಪರ್ವತ ಪದೇ ಪದೆ ಕೈಬೀಸಿ ಕರೆಯುತ್ತಿರುತ್ತೆ. ಹಾಗಂತ ಹಿಮಾಲಯವನ್ನು ಏರೋದಂದ್ರೆ ಅದೇನು ಮಕ್ಕಳಾಟದ ಮಾತಲ್ಲ. ಅಲ್ಲಿ ಸೊಗಸಾಗಿ ಪರ್ವತದ ಮೈತುಂಬಾ ತಣ್ಣಗೆ ಹರಡಿಕೊಂಡಿರೋ ಹಿಮದ ನಡುವೆ ಸಾವೆಂಬುದು ಕಣ್ಣೆವೆ ಮುಚ್ಚದೆ ಹೊಂಚಿ ಕೂತಿರುತ್ತೆ. ಕೊಂಚ ಮೈ…
ನೀರಿನಾಳದಲ್ಲಿ ಬದುಕೋ ಜೀವಿಗಳು ಮನುಷ್ಯರೊಂದಿಗೆ ನಿಕಟ ಸಾಂಗತ್ಯ ಹೊಂದೋದು ಅಪರೂಪ. ಪ್ರತಿನಿತ್ಯ ಕಣ್ಣೆದುರೋ ಓಡಾಡಿದರೂ ಕೂಡಾ ಮೀನುಗಳು ಮನುಷ್ಯರನ್ನು ಕಂಡರೆ ಸದಾ ಸೇಫ್ ಆಗಿರಲು ಹವಣಿಸುತ್ತವೆ. ಆದರೆ ಡಾಲ್ಫಿನ್ ಮಾತ್ರ ಅದಕ್ಕೆ ತದ್ವಿರುದ್ಧ. ಅದು ಮನುಷ್ಯರ ಎಲ್ಲ ಭಾವನೆಗಳಿಗೂ ಪ್ರತಿ ಸ್ಪಂದಿಸುವ ಅದ್ಭುತ ಶಕ್ತಿಯನ್ನೊಳಗೊಂಡಿದೆ. ತರಬೇತಿ ಕೊಟ್ಟ ಡಾಲ್ಫಿನ್‌ಗಳು ಮನುಷ್ಯರು ಕಂಡಾಗ ಬಳಿ ಬರುತ್ತವೆ. ನಂಬಿಕೆ ಹುಟ್ಟಿದರೆ ಸುತ್ತಲೇ ಗಿರಕಿ ಹೊಡೆಯುತ್ತವೆ. ಇನ್ನೂ ಹತ್ತಿರಾದರೆ ಮುತ್ತಿಗೂ ಸಿಕ್ಕಿ ಸಂಭ್ರಮ ಪಡುವಂತೆ ಮಾಡುತ್ತವೆ. ಯಾರಿಗೇ ಆದರೂ ಪ್ರೀತಿ ಹುಟ್ಟವಷ್ಟು ಮುದ್ದು ಮುದ್ದಾಗಿರೋ ಡಾಲ್ಫಿನ್‌ಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಆದರೆ ಅವುಗಳ ಬಗ್ಗೆ ಹೆಚ್ಚಾಗಿ ಗೊತ್ತಿರದ ಅದೆಷ್ಟೋ ಅಚ್ಚರಿಗಳಿದ್ದಾವೆ. ನೀರ ಮೇಲೆಯೇ ಮನುಷ್ಯರ ಕೈಗೆ ಸಿಕ್ಕು ಬಿಡುವ ಡಾಲ್ಫಿನ್ನುಗಳಿಗೆ ಅಸಾಧಾರಣವಾದ ಶಕ್ತಿ ಇರುತ್ತೆ. ಸಾಮಾನ್ಯವಾಗಿ ಎಲ್ಲ ಜಲಚರಗಳಿಗೂ ಸಾಕಷ್ಟು ಶಕ್ತಿ ಇರುತ್ತೆ. ಆದ್ರೆ ಡಾಲ್ಫಿನ್ನುಗಳು ಬರೋಬ್ಬರಿ ಸಾವಿರ ಅಡಿಗಳಷ್ಟು ಸಮುದ್ರದಾಳಕ್ಕೆ ಡೈವ್ ಹೊಡೆದು ಈಜಾಡಿಕೊಂಡು ಬರೋ ಸಾಮರ್ಥ್ಯವಿದೆಯಂತೆ. ಹೀಗೆ ಸದಾ ಆಕ್ಟೀವ್ ಆಗಿದ್ದುಕೊಂಡು ಆಹಾರಕ್ಕೇನೂ ಕೊರತೆ…
ಕರ್ನಾಟಕದ ಬಹುಭಾಗಗಳಲ್ಲಿ ಯಶಸ್ವಿಯಾಗಿ ರೋಡ್ ಶೋಗಳನ್ನು ನಡೆಸಿದ್ದ ಬನಾರಸ್ ಹೀರೋ ಝೈದ್ ಖಾನ್ ಇದೀಗ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ. ವಿಶೇಷವೆಂದರೆ, ಸದಾ ಭಾಷೆ ಮತ್ತು ಗಡಿ ವಿವಾದದಿಂದ ಸದ್ದು ಮಾಡುವ ಬೆಳಗಾವಿಯ ನೆಲದಲ್ಲಿಯೇ ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದಾರೆ. ಈ ನಿಮಿತ್ತವಾಗಿ ಬೆಳಗಾವಿಗೆ ಬಂದಿಳಿದ ಝೈದ್ ಖಾನ್ ಅವರಿಗೆ ಬೆಳಗಾವಿ ಸೀಮೆಯ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಅದ್ದೂರಿ ಸ್ವಾಗತ ಕೋರಲಾಯ್ತು. ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರಾದ ಮನ್ಸೂರ್, ಕನ್ನಡ ರಕ್ಷಣಾ ವೇದಿಕೆಯ ರಾಜು ಕಲ್ಲೂರ್ ಮುಂತಾದವರು ಹಾಜರಿದ್ದರು. ಆ ನಂತರದಲ್ಲಿ ಬೆಳಗಾವಿ ಜಿಲ್ಲೆಯ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅರವತ್ತೇಳನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಯೂ ಬನಾರಸ್ ಹೀರೋ ಝೈದ್ ಖಾನ್ ಅವರಿಗೆ ಗೌರವ ಲಭಿಸಿತ್ತು. ಆ ಕಾರ್ಯಕ್ರಮದ ವೇದಿಕೆಗೆ ಝೈದ್‌ರನ್ನು ಪ್ರೀತಿಯಿಂದ ಬರಮಾಡಿಕೊಂಡು, ಸನ್ಮಾನಿಸಲಾಯಿತು. ಅದಾದ ಬಳಿಕ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಳಗಾವಿಯ ಕನ್ನಡ ಪರ ಸಂಘಟನೆಗಳು ಬೃಹತ್ ಪಾದಯಾತ್ರೆಯನ್ನು ಆರಂಭಿಸಿದ್ದವು. ಅದರಲ್ಲಿಯೂ ಝೈದ್ ಖಾನ್ ಉತ್ಸಾಹದಿಂದ ಹೆಜ್ಜೆ…
ಅದೆಂಥಾ ಧೈರ್ಯಶಾಲಿಗಳೇ ಆಗಿದ್ದರೂ ಅವರನ್ನು ತನ್ನ ಗಾತ್ರದ ಮೂಲಕವೇ ಅಳ್ಳೆ ಅದುರಿಸಿಕೊಳ್ಳುವಂತೆ ಮಾಡೋ ತಾಖತ್ತಿರೋ ಪ್ರಾಣಿ ಆನೆ. ತನ್ನ ಗಾತ್ರದಷ್ಟೇ ಅಗಾಧವಾದ ಶಕ್ತಿಯನ್ನೊಳಗೊಂಡಿರೋ ಆನೆ ರೊಚ್ಚಿಗೆದ್ದಿತೆಂದರೆ ಕಂಟ್ರೋಲು ಮಾಡೋದು ಕಷ್ಟ. ಕಾಡಾನೆಗಳ ಕಥೆ ಹಾಗಿರಲಿ; ಸಾಕಿದ ಆನೆಗಳೂ ಕೂಡಾ ಮದವೇರಿ ಅಬ್ಬರಿಸೋ ಪರಿ ಭೀಕರವಾಗಿರುತ್ತೆ. ಇಂಥಾ ರೌದ್ರಾವತಾರಗಳ ಹೊರತಾಗಿ ಆನೆಯಷ್ಟು ಪಾಪದ, ಸೆನ್ಸಿಟಿವ್ ಆದ ಪ್ರಾಣಿ ಮತ್ತೊಂದಿರಲಾರದು. ಬಹುಶಃ ಆನೆಯೊಂದಿಗೆ ನಿಕಟ ನಂಟು ಹೊಂದಿರುವವರನ್ನು ಹೊರತಾಗಿಸಿದರೆ ಮತ್ಯಾರಿಗೂ ಅದೆಷ್ಟು ಸೆನ್ಸಿಟಿವ್ ಪ್ರಾಣಿ ಎಂಬುದರ ಅರಿವಿರಲು ಸಾಧ್ಯವಿಲ್ಲ. ಮನುಷ್ಯರು ಪ್ರತೀ ಭಾವನೆಗಳನ್ನೂ ವ್ಯಕ್ತ ಪಡಿಸುತ್ತಾರೆ. ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸೋ ಶಕ್ತಿಯೂ ಮನುಷ್ಯರಿಗಿದೆ. ಯಾರಾದರೂ ಸತ್ತಾಗ, ಸೂತಕ ಆವರಿಸಿಕೊಂಡಾಗ ನಾವು ಮರುಗುತ್ತೇವೆ. ದುಃಖಿಸುತ್ತೇವೆ. ನಾಯಿಯಂಥಾ ಪ್ರಾಣಿಗಳನ್ನು ಹೊರತಾಗಿಸಿದರೆ ಮತ್ಯಾವ ಪ್ರಾಣಿಗಳೂ ಅಂಥಾ ಶಕ್ತಿ ಹೊಂದಿಲ್ಲ ಎಂದೇ ನಾವು ಭಾವಿಸುತ್ತೇವೆ. ಆದರೆ ಆ ವಿಚಾರದಲ್ಲಿ ದೈತ್ಯ ಗಾತ್ರದ ಆನೆ ನಾಯಿಯನ್ನೂ ಮೀರಿಸುತ್ತೆ. ವಿಶೇಷ ಅಂದ್ರೆ ಅದು ಸಹವರ್ತಿ ಆನೆಗಳು ಸತ್ತಾಗ ಮಾತ್ರವಲ್ಲದೇ ತಮ್ಮ…
ಎಲ್ಲ ಬುದ್ಧಿವಂತಿಕೆ, ತಿಳುವಳಿಕೆಗಳನ್ನು ಹೊಂದಿದ್ದರೂ ಕೂಡಾ ಈ ಮನುಷ್ಯನಷ್ಟು ಕೃತಘ್ನ ಜೀವಿ ಈ ಜಗತ್ತಿನಲ್ಲಿ ಹುಡುಕಿದರೂ ಸಿಗಲು ಸಾಧ್ಯವಿಲ್ಲ. ಹಾಗೊಂದು ವೇಳೆ ಚೂರೇ ಚೂರು ಕೃತಜ್ಞತೆ ಇದ್ದಿದ್ದರೂ ಕೂಡಾ ಸಹಜೀವಿಗಳ ಪಾಡು ಈ ಪರಿಯಾಗಿ ಹಡಾಲೇಳುತ್ತಿರಲಿಲ್ಲ. ಅದರಲ್ಲಿಯೂ ಪ್ರಕೃತಿಯ ಮೇಲೆ ನಾವೆಲ್ಲ ನಿರಂತರವಾಗಿ ಮಾಡುತ್ತಿರೋ ಅತಿಕ್ರಮಗಳಿವೆಯಲ್ಲಾ? ಅದನ್ನು ಯಾವ ಶಕ್ತಿಯೂ ಕ್ಷಮಿಸಲು ಸಾಧ್ಯವೇ ಇಲ್ಲ. ಈವತ್ತಿಗೆ ಇಡೀ ವಾತಾವರಣವನ್ನು ಸಮಸ್ಥಿತಿಯಲ್ಲಿಟ್ಟು ಮನುಷ್ಯ ಉಸಿರಾಡೋದಕ್ಕೂ ಅನುವು ಮಾಡಿಕೊಟ್ಟಿರುವ ಗಿಡ ಮರಗಳು ವಿನಾಶದಂಚಿನಲ್ಲಿವೆ. ಹೀಗೆ ನಾಮಾವಶೇಷ ಹೊಂದುತ್ತಿರೋ ಗಿಡಮರಗಳ ಶಕ್ತಿ ನಿಜಕ್ಕೂ ಊಹಾತೀತ. ಗಿಡ ಮರಗಳಿಗೂ ಜೀವವಿದೆ ಅನ್ನೋ ಕಾಮನ್ ಸೆನ್ಸ್ ನಮಗೆ ಬಂದಿದ್ದೇ ತೀರಾ ಇತ್ತೀಚೆಗೆ. ಅವುಗಳಿಗೆ ಬಾಯಿ ಬರೋದಿಲ್ಲ. ತಮಗಾದ ನೋವುಗಳನ್ನು ಕೂಗಿ ಹೇಳುವ, ತೋರ್ಪಡಿಸಿಕೊಳ್ಳುವ ಅವಕಾಶವನ್ನೂ ಕೂಡಾ ಈ ಸೃಷ್ಟಿ ಅವುಗಳಿಗೆ ಕೊಟ್ಟಿಲ್ಲ. ಕೊಂಬೆ ಕಡಿದಾಗಲೂ ಮರ ತೆಪ್ಪಗಿರೋದರಿಂದ ಅವುಗಳಿಗೆ ನೋವಾಗೋದಿಲ್ಲ ಎಂದೇ ಜನ ಪರಿಭಾವಿಸಿಕೊಂಡಿದ್ದರು. ಆದರೆ ಹಾಗೆ ಕಡಿಯುತ್ತಾ ಸಾಗಿದ್ದರ ಫಲವೆಂಬಂತೆ ನಮಗೇ ಈಗ ನೋವಾಗತೊಡಗಿದೆ. ಅಂದಹಾಗೆ, ಮನುಷ್ಯ…