ಹುಡುಗೀರು ಹೈ ಹೀಲ್ಸ್ ಚಪ್ಪಲಿ ಹಾಕಿಕೊಂಡು ಓಡಾಡೋದು ಆಧುನಿಕ ಜಗತ್ತಿನ ಫ್ಯಾಷನ್. ಹಾಗೆ ಹೆಣ್ಣುಮಕ್ಕಳು ಹೈ ಹೀಲ್ಸ್ ತೊಟ್ಟು ಬಳುಕುತ್ತಾ ನಡೆದಾಡುತ್ತಿದ್ದರೆ ಗಂಡೈಕಳ ಹೃದಯದ ಬಡಿತ ರೊಮ್ಯಾಂಟಿಕ್ ಆಗಿ ಲಯ ಹಿಡಿಯಲಾರಂಭಿಸುತ್ತೆ. ಈ ಹೈ ಹೀಲ್ಸ್ ಅನ್ನೋದು ಹೈ ಫೈ ಕಲ್ಚರ್ ಮತ್ತು ದೊಡ್ಡಸ್ತಿಕೆಯ ಸಂಕೇತದಂತೆಯೂ ಬಿಂಬಿತವಾಗಿದೆ. ಅದೇ ರೀತಿ ಅದೀಗ ಹೆಂಗಳೆಯರ ಪಾಲಿಗೆ ಸ್ವಂತದ್ದಾಗಿದೆ. ಸುಮ್ಮನೊಂದು ಸಲ ಗಂಡಸರು ಹೈ ಹೀಲ್ಸ್ ಹಾಕೊಂಡು ಓಡಾಡೋದನ್ನೊಮ್ಮೆ ಕಲ್ಪಿಸಿಕೊಳ್ಳಿ. ನಗುವಿನ ಪಟಾಕಿಗೆ ಕೊಳ್ಳಿಯಿಟ್ಟಂತಾಗುತ್ತಲ್ಲಾ? ಆದ್ರೆ ವಾಸ್ತವ ಅನ್ನೋದು ನಮ್ಮ ಆಲೋಚನೆ, ಮನಸ್ಥಿತಿಗಳಿಗೆ ವಿರುದ್ಧವಾಗಿದೆ. ಯಾಕಂದ್ರೆ ಒಂದಾನೊಂದು ಕಾಲದಲ್ಲಿ ಗಂಡಸರು ಹೈ ಹೀಲ್ಸ್ ಹಾಕ್ತಿದ್ರು ಅಂದ್ರೆ ನಂಬಲೇ ಬೇಕು. ಅಷ್ಟಕ್ಕೂ ಈ ಹೈ ಹೀಲ್ಸ್ ಅನ್ನ ಅನ್ವೇಷಣೆ ಮಾಡಿದ್ದದ್ದು ಕೂಡಾ ಪುರುಷರೇ. ಅದರ ಹಿಂದೊಂದು ಇಂಟರೆಸ್ಟಿಂಗ್ ಕಥೆಯೇ ಇದೆ. ಈ ಜಗತ್ತಿನ ಬಹುತೇಕ ಅನ್ವೇಷಣೆಗಳಾಗಿರೋದು ಆಯಾ ಕಾಲದ ತುರ್ತಿಗನುಗುಣವಾಗಿದೆ. ಹೈ ಹೀಲ್ಸ್ ಅನ್ನ ಪುರುಷರು ಆವಿಷ್ಕರಿಸಿದ್ದರ ಹಿಂದಿರೋದೂ ಅಂಥಾದ್ದೇ ಅನಿವಾರ್ಯತೆ. ಯುರೋಪ್ ಸೀಮೆಯಲ್ಲಿ ಹತ್ತನೇ…
Author: Santhosh Bagilagadde
ಇದು ನಂಬಲು ಕಷ್ಟವಾದ್ರೂ ನಂಬಲೇ ಬೇಕಾದ ವಿಚಾರ. ನೀರು ಸಂಜೀವಿನಿ. ಮನುಷ್ಯರು, ಪ್ರಾಣಿಗಳು ಸೇರಿದಂತೆ ಸಕಲ ಜೀವಿಗಳೂ ನೀರಿನಿಂದ ಬದುಕಿಕೊಳ್ಳುತ್ವೆ. ಒಂದು ವೇಳೆ ಒಂದಷ್ಟು ಹೊತ್ತು ಆಹಾರವಿಲ್ಲದಿದ್ದರೂ ನೀರು ಕುಡಿದೇ ಉಸಿರುಳಿಸಿಕೊಳ್ಳೋ ಸಾಧ್ಯತೆಗಳಿವೆ. ಆದ್ರೆ ಅತಿಯಾದ್ರೆ ಅಮೃತವೂ ವಿಷವಾಗಬಲ್ಲುದೆಂಬ ಗಾದೆಯೇ ಇದೆ. ಹಾಗಿರೋವಾಗ ಅತಿಯಾಗಿ ಕುಡಿದ್ರೆ ನೀರೂ ಕೂಡಾ ನಮ್ಮ ದೇಹಕ್ಕೆ ವಿಷವಾಗೋದ್ರಲ್ಲಿ ಅಷ್ಟೇನೂ ಅಚ್ಚರಿ ಕಾಣೋದಿಲ್ಲ. ಆದ್ರೆ ನಾವೆಲ್ಲರೂ ಎಷ್ಟು ನೀರು ಕುಡಿದ್ರೂ ಒಳ್ಳೇದೆಂಬ ಸೂತ್ರಕ್ಕೆ ಕಟ್ಟು ಬಿದ್ದಿರುತ್ತೇವೆ. ಕಡಿಮೆ ನೀರು ಕುಡಿದ್ರೆ ಮನೆ ಮಂದಿಯೇ ಗದರ್ತಾರೆ. ಆರೋಗ್ಯದ ಬಗ್ಗೆ, ನೀರಿನಿಂದಾಗೋ ಪ್ರವಚನಗಳ ಬಗ್ಗೆ ಭಾಷಣ ಬಜಾಯಿಸ್ತಾರೆ. ಆದ್ರೆ ಹೆಚ್ಚಿನವ್ರಿಗೆ ಅತಿಯಾಗಿ ಕುಡಿದ್ರೆ ನೀರೂ ಕೂಡಾ ಡೇಂಜರಸ್ ಅನ್ನೋ ವಿಚಾರ ಗೊತ್ತಿರಲಿಕ್ಕಿಲ್ಲ. ಅದು ಎಷ್ಟು ಅಪಾಯಕಾರಿ ಅಂದ್ರೆ ಪ್ರಾಣವನ್ನೇ ತೆಗೆದು ಬಿಡುವಷ್ಟು. ಪ್ರತಿಯೊಬ್ಬರೂ ದಿನನಿತ್ಯ ಒಂದಷ್ಟು ನೀರು ಕುಡಿಯೋದು ಉತ್ತಮ ಅನ್ನೋದು ಗೊತ್ತಿರುವಂಥಾದ್ದೇ. ದಿನಕ್ಕೆ ಐದಾರು ಲೀಟರ್ ನೀರು ಕುಡಿದ್ರೂ ಒಳ್ಳೇದೇ. ಜೀರ್ಣ ಕ್ರಿಯೆಯೂ ಸೇರಿದಂತೆ ಎಲ್ಲ ಕ್ರಿಯೆಗಳನ್ನೂ ನೀರು…
ಸಂಕೇಶ್ವರರ ಸಾಹಸ ಅಷ್ಟೊಂದು ಸಲೀಸಿನದ್ದಾಗಿತ್ತಾ? ಪ್ರತೀ ಗೆಲುವಿನ ಹಿಂದೆಯೂ ಪದೇ ಪದೆ ಎದುರಾದ ಸೋಲಿನ ತರಚುಗಾಯಗಳಿರುತ್ತವೆ. ಅಂಥಾ ಗಾಯದ ಗುರುತುಗಳಿಲ್ಲದ ಗೆಲುವೊಂದು ಗೆಲುವೇ ಅಲ್ಲ. ಅದರಾಚೆಗೂ ಯಾವನಾದರೂ ಗೆದ್ದೇ ಅಂತ ಬೀಗಿದರೆ, ಒಂದೋ ಆಸುಪಾಸಿನವರ ಎದೆಮೇಲೆ ಕಾಲಿಟ್ಟು ಮೆರೆದಿರಬೇಕಾಗುತ್ತೆ. ಇಲ್ಲವೆಂದರೆ ಯಾರದ್ದೋ ಶ್ರಮಕ್ಕೆ ಏಕಾಏಕಿ ಅಪ್ಪನಾಗಿ ಬಿಡಬೇಕಾಗುತ್ತೆ. ಆದರೆ, ಹಾಗೆ ದಕ್ಕಿಸಿಕೊಂಡ ಗೆಲುವೆಂಬೋ ಭ್ರಮೆ ಬಹುಬೇಗನೆ ಕಳಚಿಕೊಳ್ಳುತ್ತೆ. ಅದ್ಯಾವ ಕ್ಷೇತ್ರವೇ ಆದರೂ ಆದಷ್ಟು ಬೇಗನೆ ಷಡ್ಯಂತ್ರಗಳ ಪೊರೆ ಕಳಚಿ ಬೆತ್ತಲಾಗಬೇಕಾಗುತ್ತೆ. ನಮ್ಮ ಸುತ್ತಲೂ ಹಾಗೆ ಯಾರದ್ದೋ ಶ್ರಮ, ಪ್ರತಿಭೆಗಳನ್ನು ತಮ್ಮದೆಂದು ಬಿಂಬಿಸುತ್ತಾ ಯಾಮಾರಿಸೋ ಫಟಿಂಗರದ್ದೊಂದು ಪಡೆಯೇ ಇರುತ್ತದೆ. ಆದರೆ, ವಿಜಯ ಸಂಕೇಶ್ವರರಂಥಾ ಸಾಧಕರ ಜೀವನಗಾಥೆ ಅದೆಲ್ಲವನ್ನೂ ಮೀರಿಕೊಂಡಿರುವಂಥಾದ್ದು. ಅಲ್ಲಿ ಯಾರ ನೆರಳೂ ಇಲ್ಲ. ಅದರ ಆಸುಪಾಸಿನಲ್ಲಿರೋದು ಬರೀ ಕಠಿಣ ಪರಿಶ್ರಮವಷ್ಟೇ. ಅವರ ಬದುಕಿನ ತುಣುಕುಗಳನ್ನು ಬೊಗಸೆಯಲ್ಲಿಟ್ಟುಕೊಂಡು ಅದೆಷ್ಟೋ ಮಂದಿ ಸಂಭ್ರಮಿಸುತ್ತಾರೆ. ಸಂಕೇಶ್ವರರನ್ನೇ ಸ್ಫೂರ್ತಿಯಾಗಿಸಿಕೊಳ್ಳುತ್ತಾರೆ. ಹಾಗಿರುವಾಗ ಅವರದ್ದೇ ಬದುಕಿನ ಕಥನ ದೃಷ್ಯರೂಪ ಧರಿಸಿದೆ ಅಂದರೆ, ಅದರ ಬಗ್ಗೆ ಕುತೂಹಲ ಮೂಡಿಕೊಳ್ಳದಿರಲು ಸಾಧ್ಯವೇ? ರಿಷಿಕಾ…
ನಮ್ಮ ದೇಶಕ್ಕೆ ಅತೀ ಶೀತ ಮತ್ತು ಅತ್ಯುನ್ನತ ಉಷ್ಣ ವಾತಾವರಣ ಅಪರಿಚಿತವೇನಲ್ಲ. ಅತ್ತ ಜಮ್ಮು ಕಾಶ್ಮೀರದಲ್ಲಿ ಚಳಿ ನಡುಗಿಸಿದ್ರೆ, ಇತ್ತ ಮರುಭೂಮಿ ಪ್ರದೇಶಗಳಲ್ಲಿ, ಬಯಲು ಸೀಮೆಗಳಲ್ಲಿ ಬೆವರಿನ ಧಾರೆ ಹರಿಸೋ ಉಷ್ಣ ವಾತಾವರಣವಿರುತ್ತೆ. ನಮ್ಮ ಪಾಲಿಗೆ ಅತೀ ಹೆಚ್ಚು ತಾಪಮಾನ ಅಂದ್ರೆ ಎಷ್ಟಿರಬಹುದು? ಅದು ನಲವತ್ತು ಡಿಗ್ರಿ ಸೆಲ್ಷಿಯಸ್ ಸಮೀಪ ಹೋದಾಗಲೇ ಜೀವ ಬೇಯಲಾರಂಭಿಸುತ್ತೆ. ನಲವತ್ತೆರಡರ ಹೊಸ್ತಿಲು ತಲುಪಿದ್ರೆ ಮುಗಿದೆ ಹೋಯ್ತು. ನಮ್ಮ ಪಾಲಿನ ಗರಿಷ್ಠ ತಾಪಮಾನ ಅಂದ್ರೆ ಅದು. ಹಾಗಂತ ಅದೇನು ಕಡಿಮೆಯದ್ದಲ್ಲ. ಅದರ ಬೇಗುದಿ ಎಂಥಾದೆಂಬುದು ಅಂಥಾ ಪ್ರದೆಶಗಳಲ್ಲಿ ವಾಸಿಸೋ ಜನರಿಗೆ ಮಾತ್ರವೇ ಗೊತ್ತಿರಲು ಸಾಧ್ಯ. ಹಾಗಿರೋವಾಗ ನಾವ್ಯಾರೂ ನೂರರ ಗಡಿ ದಾಟಿದ ತಾಪಮಾನವನ್ನ ಊಹಿಸಲೂ ಸಾಧ್ಯವಿಲ್ಲ. ಆದ್ರೆ ಅಷ್ಟು ಪ್ರಮಾಣದ ರಣಭೀಕರ ತಾಪಮಾನದಿಂದ ಭಣಗುಡುವ ಪ್ರದೇಶವೊಂದು ಈ ಭೂಮಂಡಲದಲ್ಲಿದೆ. ಅಲ್ಲಿನ ಕನಿಷ್ಠ ತಾಪಮಾನವೇ ತೊಂಬತ್ತೆಂಟು ಡಿಗ್ರಿ ಸೆಲ್ಷಿಯಸ್‍ನಷ್ಟಿರುತ್ತೆ. ಅಂಥಾ ಭಯಾನಕ ತಾಪಮಾನ ಹೊಂದಿರೋ ಜಗತ್ತಿನ ಏಕೈಕ ಪ್ರದೇಶ ಇಥಿಯೋಫಿಯಾದಲ್ಲಿದೆ. ಅಲ್ಲಿನ ದಲ್ಲಾಲ್ ಅನ್ನೋ ಪ್ರದೇಶದಲ್ಲಿ ವರ್ಷದ ಬಹು…
ಈಗೊಂದಷ್ಟು ವರ್ಷಗಳಿಂದೀಚೆಗೆ ಕಿಚ್ಚಾ ಸುದೀಪ್ ಅಭಿಮಾನಿ ಪಡೆಯ ನಡುವೆ ಅದೊಂದು ತೆರೆನಾದ ಅಸಮಾಧಾನ ಹೊಗೆಯಾಡುತ್ತಿದೆ. ಅದೊಂಥರಾ ಪ್ರೀತಿಪೂರ್ವಕ ಅಸಹನೆ ಅಂದರೂ ತಪ್ಪೇನಿಲ್ಲ. ಯಾವ ನಟನ ಅಭಿಮಾನಿಗಳೇ ಆದರೂ, ಒಂದರ ಹಿಂದೊಂದರಂತೆ ಸಿನಿಮಾಗಳು ತೆರೆಗಂಡು, ಅವೆಲ್ಲವೂ ಹಿಟ್ ಆಗಿ, ಸಂಭ್ರಮ ಹಬ್ಬಿಕೊಳ್ಳಬೇಕೆಂದೇ ಬಯಸುತ್ತಾರೆ. ಈ ನಿಟ್ಟಿನಲ್ಲಿ ನೋಡೋದಾದರೆ, ಕಿಚ್ಚನ ಅಭಿಮಾನಿಗಳು ಕೊಂಚ ಕಸಿವಿಸಿಗೊಂಡಿರೋದರಲ್ಲಿ ಯಾವ ಅತಿಶಯವೂ ಇಲ್ಲ. ಯಾಕೆಂದರೆ, ಇತ್ತೀಚಿನ ವರ್ಷಗಳಲ್ಲಿ ಸುದೀಪ್ ಬಿಗ್ ಬಾಸ್ ಶೋಗಳಲ್ಲಿ ಕಳೆದು ಹೋಗಿದ್ದಾರೆ. ಅದರ ನಡುವಲ್ಲೊಂದಷ್ಟು ಬಿಡುವು ಸಿಕ್ಕ ಘಳಿಗೆಯಲ್ಲಿ ಸಿನಿಮಾ ಮಾಡುತ್ತಾ ಎಂಬಂತಾಗಿ ಬಿಟ್ಟಿದೆ. ಈ ವರ್ಷ ಸುದೀಪ್ ಮತ್ತೆ ಹಳೇ ಆವೇಗದೊಂದಿಗೆ ಆಕ್ಟೀವ್ ಆಗುತ್ತಾರೆಂಬ ನಿರೀಕ್ಷೆ ಇತ್ತು. ಆದರದು ಸಿನಿಮಾಗಳ ವಿಚಾರದಲ್ಲಿ ನಿಜವಾಗಿಲ್ಲ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ತೆರೆಗಂಡು, ಒಂದು ಮಟ್ಟದಲ್ಲಿ ಗೆಲುವು ದಾಖಲಿಸಿದೆಯಾದರೂ, ಅದೇನು ಸಮ್ಮೋಹಕ ಗೆಲುವೇನಲ್ಲ. ಆ ಸಿನಿಮಾ ಬಗ್ಗೆ ಹೊತ್ತಿಕೊಂಡಿದ್ದ ಕ್ರೇಜ್‍ಗೂ, ಅದು ಮೂಡಿ ಬಂದಿದ್ದ ರೀತಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಅದೇಕೋ, ಅನೂಪ್ ಭಂಡಾರಿ ದೊಡ್ಡ…
ಸುಮ್ಮನೊಮ್ಮೆ ನೆನಪಿಸಿಕೊಳ್ಳಿ… ನಮ್ಮೆಲ್ಲ ಭಾವನೆಗಳು, ಮನೆ, ಊರ ವಿಚಾರಗಳೆಲ್ಲವೂ ಲಕೋಟೆಯ ಮೂಲಕ ರವಾನೆಯಾಗ್ತಿದ್ದ ಆ ಸುವರ್ಣ ಕಾಲವನ್ನ. ಪ್ರೀತಿಪಾತ್ರರ ನಡುವೆ ವಾಹಕವಾಗಿದ್ದ ಏಕೈಕ ಕೇಂದ್ರ ಅಂದ್ರೆ ಅದು ಫೋಸ್ಟಾಫೀಸು. ಅಲ್ಲಿಂದಲೇ ಊರಿಂದೂರಿಗೆ, ಮನಸಿಂದ ಮನಸಿಗೆ ಕನೆಕ್ಷನ್ನು. ಮುಂದೊಂದು ದಿನ ಪೋಸ್ಟ್ ಕಾರ್ಡಿನಲ್ಲಿ, ಲೆಟರಿನಲ್ಲಿನ ಭಾವಗಳೆಲ್ಲ ಬೆರಳ ಮೊನೆಗೆ ಬರುತ್ತೆ, ಅದೆಲ್ಲವನ್ನೂ ಮೊಬೈಲು ನುಂಗಿ ಹಾಕುತ್ತೆಂಬಂಥಾ ಸಣ್ಣ ಸುಳಿವೂ ಇಲ್ಲದ ಕಾಲವನ್ನು… ಅದೀಗ ಭಾರತವೂ ಸೇರಿದಂತೆ ಬಹುತೇಕ ಕಡೆಗಳಲ್ಲಿ ನೆನಪಾಗಿಯಷ್ಟೇ ಉಳಿದುಕೊಂಡಿದೆ. ಆದ್ರೆ ಜಪಾನಿನಲ್ಲಿ ಈ ಹೊತ್ತಿಗೂ ಪತ್ರ ತಲುಪಿಸುವ ಮಧುರಾನುಭೂತಿ ಚಾಲ್ತಿಯಲ್ಲಿದೆ. ನಾವೆಲ್ಲ ಮೊಬೈಲು ಬಂದಾಕ್ಷಣ ಥ್ರಿಲ್ ಆಗಿ ಪೋಸ್ಟ್ ಆಫೀಸುಗಳಲ್ಲಿ ನೊಣ ಸುಳಿದಾಡುವಂಥ ಸ್ಥಿತಿ ತಂದಿಟ್ವಿ. ಆದ್ರೆ ಜಪಾನಿನಲ್ಲಿ ಪತ್ರ ಸಂಸ್ಕøತಿಯನ್ನು ಆಧುನೀಕರಣದ ಭರಾಟೆಯಲ್ಲಿಯೂ ಜೀವಂತವಾಗಿಡೋ ಕ್ರಿಯೇಟಿವ್ ಪ್ರಯತ್ನಗಳು ನಡೀತಿವೆ. ಅದರ ಭಾಗವಾಗಿಯೇ ಅಚ್ಚರಿಗೊಳ್ಳುವಂಥ ಪೋಸ್ಟ್ ಬಾಕ್ಸ್ ಒಂದನ್ನು ಜಪಾನಿನಲ್ಲಿ ನಿರ್ಮಿಸಲಾಗಿದೆ. ಎಂಥವರೂ ಒಂದರೆಕ್ಷಣ ಥ್ರಿಲ್ ಆಗುವಂಥಾ ಸದರಿ ಪೋಸ್ಟ್ ಬಾಕ್ಸ್ ಗಿನ್ನಿಸ್ ದಾಖಲೆಯನ್ನೂ ಮಾಡಿ ಬಿಟ್ಟಿದೆ. ಇಂಥಾದ್ದೊಂದು ವಿಶೇಷ…
ಮನುಷ್ಯ ಭಯಂಕರವಾಗಿ ತಲೆಕೆಡಿಸಿಕೊಳ್ಳೋ ಸಿಲ್ಲಿ ಸಂಗತಿಗಳಲ್ಲಿ ಮೈ ಬಣ್ಣದ್ದು ಪ್ರಧಾನ ಪಾತ್ರ. ಕಪ್ಪಗಿನ ಮೈ ಬಣ್ಣ ಹೊಂದಿರುವ ಅನೇಕರು ಅದನ್ನೇ ಕೀಳರಿಮೆಯಾಗಿಸಿಕೊಂಡು ಕೊರಗೋದಿದೆ. ಇಂಥಾ ಮೈ ಬಣ್ಣ ಈ ಕಾಲಕ್ಕೆ ಸಿಲ್ಲಿ ಅನ್ನಿಸಿದರೂ ಅದರ ಹಿಂದೆ ಜನಾಂಗೀಯ ಅಂಶಗಳಿವೆ. ಬಣ್ಣದ ಆಧಾರದಲ್ಲಿಯೇ ಜನ ವಿಂಗಡನೆಯಾಗಿ ಅದುವೇ ಮಾರಾಮಾರಿಗೆ ಕಾರಣವಾಗಿದ್ದೂ ಇದೆ. ಇದೆಲ್ಲ ಏನೇ ಇದ್ರೂ ಮೈಬಣ್ಣದ ವಿಚಾರದಲ್ಲಿ ಕಪ್ಪು ಮತ್ತು ಬಿಳಿ ಬಣ್ಣಗಳು ಕಾಮನ್. ಅದು ಮನುಷ್ಯ ಸಹಜ ಅಂಶ. ಆದ್ರೆ ಈ ಜಗತ್ತಿನಲ್ಲಿ ನೀಲಿ ಮೈ ಬಣ್ಣ ಹೊಂದಿರೋ ಜನರೂ ಇದ್ದಾರಂದ್ರೆ ನಂಬೋಕೆ ತುಸು ಕಷ್ಟವಾಗಬಹುದು. ಆದರೆ ಅದು ನಿಜ. ಮನುಷ್ಯರ ಮೈ ಬಣ್ಣ ನೀಲಿಯಾಗಿಯೂ ಇರುತ್ತೆ ಅಂದ್ರೆ ಒಪ್ಪಲು ಕಷ್ಟವಾದ್ರೂ ಅದನ್ನ ಒಪ್ಪಿಕೊಳ್ಳಲೇ ಬೇಕು. ಯಾಕಂದ್ರೆ ಒಂದಷ್ಟು ತಲೆಮಾರುಗಳಿಂದ ನೀಲಿ ಮೈ ಬಣ್ಣ ಧರಿಸಿಕೊಂಡಿರೋ ಜನ ಸಮೂಹವೊಂದು ಕೆಂಟುಕಿಯಲ್ಲಿದೆ. ಅಲ್ಲಿನ ಆ ಕುಟುಂಬದ ಪ್ರತಿಯೊಬ್ಬರದ್ದೂ ನೀಲಿ ಬಣ್ಣ. ಹಾಗಂತ ಅದರಲ್ಲೇನೋ ಪವಾಡವಿದೆ ಅಂದುಕೊಳ್ಳಬೇಕಿಲ್ಲ. ಆ ನೀಲಿಯ ಹಿಂದಿರೋದು ಜಗತ್ತಿನಲ್ಲಿಯೇ…
ಭಾರತದಲ್ಲಿ ಆಗಾಗ ಗೋ ಮೂತ್ರದ ಅಗಾಧ ಔಷಧೀಯ ಗುಣಗಳ ಬಗ್ಗೆ ಚರ್ಚೆಗಳಾಗುತ್ತಿರುತ್ವೆ. ಈಗಂತೂ ಅದು ಹಲವಾರು ರೀತಿಯಲ್ಲಿ ಬಳಕೆಯಾಗುತ್ತಿದೆ. ಇದೇ ಹೊತ್ತಿನಲ್ಲಿ ಜಗತ್ತಿನ ನಾನಾ ಭಾಗಗಳ ಮಂದಿ ಸ್ವ ಮೂತ್ರದಲ್ಲಿಯೇ ಬಗೆ ಬಗೆಯ ಮದ್ದು ಹುಡುಕ್ತಿದ್ದಾರೆ. ಅಷ್ಟಕ್ಕೂ ಮನುಷ್ಯನ ಮೂತ್ರದಲ್ಲಿಯೂ ಒಂದಷ್ಟು ಚಿಕಿತ್ಸಕ ಗುಣಗಳಿರೋದು ವೈಜ್ಞಾನಿಕ ಸತ್ಯ. ಅದಕ್ಕೆ ಪೂರಕವಾಗಿಯೇ ಮನುಷ್ಯ ಮೂತ್ರ ನಾನಾ ಬಗೆಯಲ್ಲಿ ಬಳಕೆಯಲ್ಲಿದೆ. ನಮ್ಮಲ್ಲಿ ಯಾವುದಾದ್ರೂ ಗಾಯವಾದಾಗ ಅದಕ್ಕೆ ಮೂತ್ರ ಹೊಯ್ಯುವ ರೂಢಿ ಒಂದಷ್ಟು ಕಡೆ ಚಾಲ್ತಿಯಲ್ಲಿದೆ. ಅದರ ಪರಿಣಾಮಕಾರಿ ಗುಣಗಳೂ ಕೂಡಾ ಇಲ್ಲಿನ ಜೀವನ ಶೈಲಿಗೆ ಪರಿಚಿತ. ಆದರೂ ಸ್ವಮೂತ್ರದ ಬಗ್ಗೆ ಒಂದಷ್ಟು ಅನುಮಾನ, ಮುಜುಗರ ಇದ್ದೇ ಇದೆ. ಆದ್ರೆ ರೋಮನ್ನರು ಮಾತ್ರ ತಂತಮ್ಮ ಮೂತ್ರವನ್ನ ತಮ್ಮದೇ ಆದ ರೀತಿಯಲ್ಲಿ ಬಳಸಿಕೊಳ್ತಿದ್ದಾರಂತೆ. ಹೆಚ್ಚಿನ ರೋಮನ್ನರು ಹಲ್ಲುಜ್ಜೋದಕ್ಕೂ ಮೂತ್ರವನ್ನೇ ಬಳಸುತ್ತಾರೆಂಬುದು ಅಚ್ಚರಿಯಾದ್ರೂ ಸತ್ಯ. ಈಗ ಮಾರುಕಟ್ಟೆಯಲ್ಲಿ ಬಗೆ ಬಗೆಯ ಟೂತ್ ಪೇಸ್ಟುಗಳಿದ್ದಾವೆ. ಆದರೆ ದಂತ ಸಂಬಂಧಿ ಖಾಯಲೆಗಳೂ ಕೂಡಾ ಅದಕ್ಕೆ ಪೈಪೋಟಿ ಕೊಡುವಂತೆ ಬೆಳೆಯುತ್ತಿದೆ. ಬರೀ ಹುಳುಕು…
ಮನುಷ್ಯರು ಎಲ್ಲವನ್ನೂ ತಿಳಿದುಕೊಂಡೆವೆಂದು ಬೀಗುತ್ತಾ ಪದೇ ಪದೆ ಪ್ರಕೃತಿಯ ಹೊಡೆತಗಳ ಮುಂದೆ ಮಂಡಿಯೂರ್ತಾರೆ. ಯಾಕಂದ್ರೆ ಪ್ರಕೃತಿಯ ನಿಗೂಢ ಜಾಡನ್ನು ಅರಿಯೋದು ಅಷ್ಟು ಸಲೀಸಿನ ಸಂಗತಿಯಲ್ಲ. ಈ ಕಾರಣದಿಂದಲೇ ಪ್ರಾಕೃತಿಕ ವಿಕೋಪಗಳು ಮನುಷ್ಯ ನಿರ್ಮಿತವಾದ ಎಲ್ಲವನ್ನೂ ನಾಮಾವಶೇಷ ಮಾಡಿ ಹಾಕುತ್ತೆ. ನಾವು ಭೂಕಂಪದಂಥಾ ಆಘಾತವನ್ನು ಗ್ರಹಿಸಲು ಮಾಪಕಗಳನ್ನ ಅಳವಡಿಸುತ್ತೇವೆ. ಆದರೆ ಅದಕ್ಕೂ ಮೊದಲೇ ಅದರ ಜಾಡು ಹಾವು ಪಕ್ಷಿಗಳಂಥಾ ಜೀವಿಗಳಿಗೆ ಸಿಕ್ಕು ಬಿಟ್ಟಿರುತ್ತೆ. ಸಾಮಾನ್ಯವಾಗಿ ಪ್ರಕೃತಿಯಲ್ಲಿ ಏನೇ ಅಸಮತೋಲನವಾದ್ರೂ ಪಕ್ಷಿಗಳಿಗೆ ಬೇಗ ಗೊತ್ತಾಗುತ್ತೆ ಎಂಬ ನಂಬಿಕೆಯಿದೆ. ಆದ್ರೆ ಪ್ರಪಂಚದ ಬಹುತೇಕ ಭೂಭಾಗಗಳಲ್ಲಿ ವಾಸಿಸೋ ಹಾವುಗಳಿಗೆ ಅಂಥಾ ಶಕ್ತಿ ಹೆಚ್ಚಾಗಿರುತ್ತೆ. ಅದ್ರಲ್ಲಿಯೂ ಭೂಕಂಪನದಂಥಾ ಅವಘಡವನ್ನ ಹಾವಿನಷ್ಟು ಬೇಗನೆ ಮತ್ಯಾವ ಜೀವಿಯೂ ಪತ್ತೆಹಚ್ಚೋದಿಲ್ಲ ಅನ್ನೋದನ್ನ ವಿಜ್ಞಾನಿಗಳೇ ಆವಿಷ್ಕರಿಸಿದ್ದಾರೆ. ಈ ಬಗೆಗಿನ ವಿವರಗಳನ್ನ ನೋಡಿದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ. ಹಾವುಗಳಿಗೆ ಎಪ್ಪತೈದು ಮೈಲಿ ದೂರದಲ್ಲಾಗೋ ಭೂಕಂಪನದ ಸುಳಿವೂ ಮೊದಲೇ ಸಿಗುತ್ತಂತೆ. ತಾವು ವಾಸಿಸೋ ಪ್ರದೇಶದ ಸರಹದ್ದಿನಲ್ಲಿ ಸಂಭವಿಸಬಹುದಾದ ಭೂಕಂಪವನ್ನು ಅವು ಐದು ದಿನ ಮೊದಲೇ ಗ್ರಹಿಸ್ತವಂತೆ. ಹೆಚ್ಚೂಕಮ್ಮಿ ಅದರ…
ಸೀರಿಯಲ್ ಹುಡುಗಿಯ ರಿಯಲ್ ಕಹಾನಿ! ಜೊತೆಜೊತೆಯಲಿ ಅಂತೊಂದು ಧಾರಾವಾಹಿ ಕನ್ನಡ ಕಿರುತೆರೆ ಜಗತ್ತಿನಲ್ಲಿ ಮೂಡಿಸಿರುವ ಛಾಪು ನಿಜಕ್ಕೂ ಅಪರೂಪದ್ದು. ಅವಕಾಶವಿಲ್ಲದೆ ಅಂಡಲೆಯುತ್ತಿದ್ದ ಅನಿರುದ್ಧ ಈ ಸೀರಿಯಲ್ ಮೂಲಕ ಸ್ಟಾರ್‍ಗಿರಿ ಪಡೆದುಕೊಂಡಿದ್ದ. ಅತ್ತೆ ಸೊಸೆ ಜಗಳ, ಜಡೆಗಳ ನಡುವಿನ ಕಿತಾಪತಿ ಮತ್ತು ಬ್ಯಾರಲ್‍ಗಟ್ಟಲೆ ಕಣ್ಣೀರು… ಇವಿಷ್ಟರ ಸುತ್ತಲೇ ಸುತ್ತುತ್ತಿದ್ದ ಸೀರಿಯಲ್ ಜಗತ್ತಿಗೆ ಜೊತೆ ಜೊತೆಯಲಿ ಧಾರಾವಾಹಿ ಹೊಸಾ ಆವೇಗ ತಂದುಕೊಟ್ಟಿತ್ತು. ಇಂಥಾ ಧಾರಾವಾಹಿಯ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾಕೆ ಮಂಗಳೂರು ಸೀಮೆಯ ಹುಡುಗಿ ಮೇಘಾ ಶೆಟ್ಟಿ. ಹಾಗೆ ಈ ಹುಡುಗಿಗೆ ಅನು ಸಿರಿಮನೆ ಎಂಬ ಅಪರೂಪದ ಪಾತ್ರವೊಂದು ಸಿಕ್ಕಿಬಿಟ್ಟಿತ್ತು. ಮೇಘಾ ಶೆಟ್ಟಿಗೆ ಮೊದಲ ಹೆಜ್ಜೆಯಲ್ಲಿಯೇ ಸಿಕ್ಕ ಪಾತ್ರದ ಕಿಮ್ಮತ್ತಿದೆಯಲ್ಲಾ? ಅದು ಅನೇಕರಿಗೆ ಹೊಟ್ಟೆ ಉರಿ ತರಿಸಿದ್ದರೂ ಅಚ್ಚರಿಯೇನಲ್ಲ. ಮಧ್ಯಮವರ್ಗದ ತಲ್ಲಣಗಳನ್ನು ಹೊದ್ದುಕೊಂಡೇ, ನಡುವಯಸ್ಸು ದಾಟಿದವನೊಂದಿಗೆ ಲವ್ವಲ್ಲಿ ಬೀಳೋ ಪಾತ್ರವದು. ಆ ಪಾತ್ರ ಏನು ಬೇಡುತ್ತದೋ, ಅದಕ್ಕೆ ಹೇಳಿಮಾಡಿಸಿದಂಥಾ ನಟನೆ, ಸ್ನಿಗ್ಧ ಸೌಂದರ್ಯ ಹೊಂದಿದ್ದಾಕೆ ಮೇಘಾ ಶೆಟ್ಟಿ. ನೋಡ ನೋಡುತ್ತಲೇ ಸದರಿ ಧಾರಾವಾಹಿ ಜನಪ್ರಿಯತೆಯ…