#sudeep Archives » ಶೋಧ ನ್ಯೂಸ್ - Shodha News
#sudeep Archives » ಶೋಧ ನ್ಯೂಸ್ - Shodha News
ಮತ್ತೆ ಒಂದಾಗಲಿದೆಯಾ ಸ್ಟಾರ್ ಜೋಡಿ?
ಒಂದು ಕಾರ್ಗತ್ತಲ ಸನ್ನಿವೇಷದಲ್ಲಿ ಬೆಳಕಿನ ಸಣ್ಣ ಮಿಣುಕೊಂದು ಹೊತ್ತಿಕೊಂಡಂತಿದೆ. ಸದ್ಯ ದರ್ಶನ್ ಅವರಿಗೆ ಹೊಸಪೇಟೆಯಲ್ಲೆದುರಾದ ದುರಾದೃಷ್ಟಕರ ಸನ್ನಿವೇಷದ ಹಿನ್ನೆಲೆಯಲ್ಲಿ ಅಂಥಾದ್ದೊಂದು ಪವಾಡ ಸೃಷ್ಟಿಯಾಗೋ ಲಕ್ಷಣಗಳು ದಟ್ಟವಾಗಿಯೇ ಗೋಚರಿಸಲಾರಂಭಿಸಿವೆ. ಸಾವಿರ ಕಷ್ಟಕೋಟಲೆಗಳನ್ನೇ ಮೆಟ್ಟಿಲಾಗಿಸಿಕೊಂಡು ಗೆದ್ದು ತೋರಿಸಿರುವವರು ದರ್ಶನ್. ಅವರ ಮೇಲೆ ಚಪ್ಪಲಿ ತೂರುವಂಥಾ ವಿಕೃತಿ ನಡೆದಿರೋದರ ವಿರುದ್ಧ ಒಂದಿಡೀ ಚಿತ್ರಂಗವೇ ಒಂದಾಗಿದೆ. ಶಿವಣ್ಣ ಸೇರಿದಂತೆ ಅನೇಕರು ಈ ಘಟನೆಯನ್ನು ಖಂಡಿಸಿದ್ದಾರೆ. ಹೀಗೆ ಚಿತ್ರರಂಗದ ಮಂದಿಯೆಲ್ಲ ಒಂದು ಕಡೆಯಿಂದ ದರ್ಶನ್ ಬೆಂಬಲಕ್ಕೆ ನಿಲ್ಲುತ್ತಿರುವಾಗಲೇ, ಪ್ರೇಕ್ಷಕರ ಚಿತ್ತ ಕಿಚ್ಚಾ ಸುದೀಪ್ ಅವರತ್ತ [...]
The post ಮತ್ತೆ ಒಂದಾಗಲಿದೆಯಾ ಸ್ಟಾರ್ ಜೋಡಿ? appeared first on ಶೋಧ ನ್ಯೂಸ್ - Shodha News.
ಒಂದು ಕಾರ್ಗತ್ತಲ ಸನ್ನಿವೇಷದಲ್ಲಿ ಬೆಳಕಿನ ಸಣ್ಣ ಮಿಣುಕೊಂದು ಹೊತ್ತಿಕೊಂಡಂತಿದೆ. ಸದ್ಯ ದರ್ಶನ್ ಅವರಿಗೆ ಹೊಸಪೇಟೆಯಲ್ಲೆದುರಾದ ದುರಾದೃಷ್ಟಕರ ಸನ್ನಿವೇಷದ ಹಿನ್ನೆಲೆಯಲ್ಲಿ ಅಂಥಾದ್ದೊಂದು ಪವಾಡ ಸೃಷ್ಟಿಯಾಗೋ ಲಕ್ಷಣಗಳು ದಟ್ಟವಾಗಿಯೇ ಗೋಚರಿಸಲಾರಂಭಿಸಿವೆ. ಸಾವಿರ ಕಷ್ಟಕೋಟಲೆಗಳನ್ನೇ ಮೆಟ್ಟಿಲಾಗಿಸಿಕೊಂಡು ಗೆದ್ದು ತೋರಿಸಿರುವವರು ದರ್ಶನ್. ಅವರ ಮೇಲೆ ಚಪ್ಪಲಿ ತೂರುವಂಥಾ ವಿಕೃತಿ ನಡೆದಿರೋದರ ವಿರುದ್ಧ ಒಂದಿಡೀ ಚಿತ್ರಂಗವೇ ಒಂದಾಗಿದೆ. ಶಿವಣ್ಣ ಸೇರಿದಂತೆ ಅನೇಕರು ಈ ಘಟನೆಯನ್ನು ಖಂಡಿಸಿದ್ದಾರೆ. ಹೀಗೆ ಚಿತ್ರರಂಗದ ಮಂದಿಯೆಲ್ಲ ಒಂದು ಕಡೆಯಿಂದ ದರ್ಶನ್ ಬೆಂಬಲಕ್ಕೆ ನಿಲ್ಲುತ್ತಿರುವಾಗಲೇ, ಪ್ರೇಕ್ಷಕರ ಚಿತ್ತ ಕಿಚ್ಚಾ ಸುದೀಪ್ ಅವರತ್ತ ನೆಟ್ಟುಕೊಂಡಿತ್ತು. ಕಡೆಗೂ ಅವರು ತಮ್ಮ ಒಂದು ಕಾಲದ ಗೆಳೆಯನ ಬೆಂಬಲಕ್ಕೆ ನಿಂತಿದ್ದಾರೆ. ಈ ಮೂಲಕ ಈ ಘಟನೆಗೆ ತೀವ್ರವಾದ ವಿರೋಧ ವ್ಯಕ್ತಪಡಿಸಿದ್ದಾರೆ.
ಕಿಚ್ಚ ಸುದೀಪ್ ದರ್ಶನ್ ವಿಚಾರದಲ್ಲಿ ಪ್ರತಿಕ್ರಿಯಿಸಿರುವ ರೀತಿಗೆ, ಅವರು ಮಂಡಿಸಿರುವ ಪ್ರೌಢ ವಿಚಾರಗಳಿಗೆ ಎಲ್ಲ ದಿಕ್ಕುಗಳಿಂದಲೂ ಉತ್ತಮ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ. ಹೀಗೆ ಸಾಥ್ ಕೊಟ್ಟ ವಿಚಾರದಲ್ಲಿಯೂ ಮನಬಂದಂತೆ ಕಮೆಂಟು ಮಾಡೋ ಹಲಾಲುಟೋಪಿಗಳಿದ್ದಾರಲ್ಲಾ? ಅಂಥವರನ್ನು ಎಲ್ಲ ನಟರೂ ತಹಬಂದಿಯಲ್ಲಿ ಇಟ್ಟುಕೊಳ್ಳುವಂತಾದರೆ, ಖಂಡಿತವಾಗಿಯೂ ಮುಂದೆಂದೂ ಇಂಥಾ ಅತಿರೇಕಗಳ ನಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಸೇರಿದಂತೆ ಎಲ್ಲ ನಟರೂ ತಂತಮ್ಮ ಅಭಿಮಾನಿ ಬಳಗವನ್ನು ಹಿಡಿತದಲ್ಲಿಟ್ಟುಕೊಳ್ಳುವ ಜರೂರತ್ತಿದೆ.
ಇದೆಲ್ಲ ಹಾಗಿರಲಿ, ಇದೀಗ ಕಿಚ್ಚಾ ಸುದೀಪ್ ಮತ್ತು ದರ್ಶನ್ ಬಹುಕಾಲದ ನಂತರ ಮತ್ತೆ ಒಂದಾಗುವ ಮುನ್ಸೂಚನೆಯಂತೂ ಸಿಕ್ಕಿದೆ. ಈ ಇಬ್ಬರು ನಟರ ಅಭಿಮಾನಿಗಳೂ ಕೂಡಾ ಸಾಕಷ್ಟು ವಿಚಾರಗಳಲ್ಲಿ ಶರಂಪರ ಕಿತ್ತಾಡಿಕೊಂಡಿದ್ದರು. ಆದರೆ ಆ ಕಿತ್ತಾಟಗಳ ನಡುವೆಯೂ ಈ ನಟರಿಬ್ಬರು ಮತ್ತೆ ಒಂದಾಗಬೇಕೆಂಬ ಇಂಗಿತ ಅಭಿಮಾನಿ ವಲಯದಲ್ಲಿ ಇದ್ದೇ ಇತ್ತು. ಆಗಾಗ ಈ ಬಗ್ಗೆ ಚರ್ಚೆಗಳಂತೂ ನಡೆಯುತ್ತಾ ಬಂದಿವೆ. ಇನ್ನೇನು ಇವರಿಬ್ಬರೂ ಒಂದಾಗುತ್ತಾರೆಂಬ ಬಗ್ಗೆ ಅಂತೆಕಂತೆಗಳು ಕೇಳಿ ಬರುತ್ತಿದ್ದವು. ಆದರೆ, ಅದೇಕೋ ಆ ಕಾಲ ಇದುವರೆಗೂ ಕೂಡಿ ಬಂದಿರಲಿಲ್ಲ. ಹಾಗೆ ಈ ನಟರಿಬ್ಬರೂ ಮತ್ತೆ ಒಂದಾಗಲೆಂಬ ಆಶಯ ಅಭಿಮಾನದಾಚೆಗೂ ಹಬ್ಬಿಕೊಂಡಿರೋದು ಸುಳ್ಳೇನಲ್ಲ.
ಇದೆಲ್ಲ ಏನೇ ಇದ್ದರೂ ಇದೀಗ ಮುನಿಸು ಮರೆತು ಮತ್ತೆ ಒಂದಾಗುವ ಕಾಲ ಹತ್ತಿರ ಬಂದಂತಿದೆ. ಅದು ಕನ್ನಡ ಚಿತ್ರರಂಗದ ಮಟ್ಟಿಗೆ ನಿಜಕ್ಕೂ ಒಳಿತಿನ ಬೆಳವಣಿಗೆ. ಈ ದಿಸೆಯಲ್ಲಿ ಖುದ್ದು ದರ್ಶನ್ ಆತ್ಮ ವಿಮರ್ಶೆ ಮಾಡಿಕೊಂಡು, ತನ್ನ ಸುತ್ತ ಏನು ನಡೆಯುತ್ತಿದೆ? ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂಬುದರ ಬಗ್ಗೆ ಸೌಜನ್ಯದಿಂದ ಆಲೋಚಿಸುವ ತುರ್ತೂ ಇದೆ. ಅದೇ ರೀತಿ, ಈ ಪ್ರಕರಣದಲ್ಲಿ ಅಜಾತಶತ್ರು ಅಪ್ಪುವಿಗೆ ಅವಮಾನವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಎಲ್ಲರ ಮೇಲಿದೆ. ಒಟ್ಟಾರೆಯಾಗಿ ಕಿಚ್ಚ ಮತ್ತು ದರ್ಶನ್ ಬಹುಕಾಲದ ಮುನಿಸು ಮರೆತು ಮತ್ತೆ ಜೊತೆಯಾಗೋ ಕಾಲ ಹತ್ತಿರದಲ್ಲಿದೆ. ಅದಕ್ಕಿಂತ ಖುಷಿಯ ಸಂಗತಿ ಬೇರೇನಿದೆ?
ಮುಂದಿನ ವರ್ಷ ನಡೆಯಲಿದೆ ಪ್ಯಾನಿಂಡಿಯಾ ಹಬ್ಬ!
ಈಗೊಂದಷ್ಟು ವರ್ಷಗಳಿಂದೀಚೆಗೆ ಕಿಚ್ಚಾ ಸುದೀಪ್ ಅಭಿಮಾನಿ ಪಡೆಯ ನಡುವೆ ಅದೊಂದು ತೆರೆನಾದ ಅಸಮಾಧಾನ ಹೊಗೆಯಾಡುತ್ತಿದೆ. ಅದೊಂಥರಾ ಪ್ರೀತಿಪೂರ್ವಕ ಅಸಹನೆ ಅಂದರೂ ತಪ್ಪೇನಿಲ್ಲ. ಯಾವ ನಟನ ಅಭಿಮಾನಿಗಳೇ ಆದರೂ, ಒಂದರ ಹಿಂದೊಂದರಂತೆ ಸಿನಿಮಾಗಳು ತೆರೆಗಂಡು, ಅವೆಲ್ಲವೂ ಹಿಟ್ ಆಗಿ, ಸಂಭ್ರಮ ಹಬ್ಬಿಕೊಳ್ಳಬೇಕೆಂದೇ ಬಯಸುತ್ತಾರೆ. ಈ ನಿಟ್ಟಿನಲ್ಲಿ ನೋಡೋದಾದರೆ, ಕಿಚ್ಚನ ಅಭಿಮಾನಿಗಳು ಕೊಂಚ ಕಸಿವಿಸಿಗೊಂಡಿರೋದರಲ್ಲಿ ಯಾವ ಅತಿಶಯವೂ ಇಲ್ಲ. ಯಾಕೆಂದರೆ, ಇತ್ತೀಚಿನ ವರ್ಷಗಳಲ್ಲಿ ಸುದೀಪ್ ಬಿಗ್ ಬಾಸ್ ಶೋಗಳಲ್ಲಿ ಕಳೆದು ಹೋಗಿದ್ದಾರೆ. ಅದರ ನಡುವಲ್ಲೊಂದಷ್ಟು ಬಿಡುವು ಸಿಕ್ಕ ಘಳಿಗೆಯಲ್ಲಿ ಸಿನಿಮಾ [...]
The post ಮುಂದಿನ ವರ್ಷ ನಡೆಯಲಿದೆ ಪ್ಯಾನಿಂಡಿಯಾ ಹಬ್ಬ! appeared first on ಶೋಧ ನ್ಯೂಸ್ - Shodha News.
ಈಗೊಂದಷ್ಟು ವರ್ಷಗಳಿಂದೀಚೆಗೆ ಕಿಚ್ಚಾ ಸುದೀಪ್ ಅಭಿಮಾನಿ ಪಡೆಯ ನಡುವೆ ಅದೊಂದು ತೆರೆನಾದ ಅಸಮಾಧಾನ ಹೊಗೆಯಾಡುತ್ತಿದೆ. ಅದೊಂಥರಾ ಪ್ರೀತಿಪೂರ್ವಕ ಅಸಹನೆ ಅಂದರೂ ತಪ್ಪೇನಿಲ್ಲ. ಯಾವ ನಟನ ಅಭಿಮಾನಿಗಳೇ ಆದರೂ, ಒಂದರ ಹಿಂದೊಂದರಂತೆ ಸಿನಿಮಾಗಳು ತೆರೆಗಂಡು, ಅವೆಲ್ಲವೂ ಹಿಟ್ ಆಗಿ, ಸಂಭ್ರಮ ಹಬ್ಬಿಕೊಳ್ಳಬೇಕೆಂದೇ ಬಯಸುತ್ತಾರೆ. ಈ ನಿಟ್ಟಿನಲ್ಲಿ ನೋಡೋದಾದರೆ, ಕಿಚ್ಚನ ಅಭಿಮಾನಿಗಳು ಕೊಂಚ ಕಸಿವಿಸಿಗೊಂಡಿರೋದರಲ್ಲಿ ಯಾವ ಅತಿಶಯವೂ ಇಲ್ಲ. ಯಾಕೆಂದರೆ, ಇತ್ತೀಚಿನ ವರ್ಷಗಳಲ್ಲಿ ಸುದೀಪ್ ಬಿಗ್ ಬಾಸ್ ಶೋಗಳಲ್ಲಿ ಕಳೆದು ಹೋಗಿದ್ದಾರೆ. ಅದರ ನಡುವಲ್ಲೊಂದಷ್ಟು ಬಿಡುವು ಸಿಕ್ಕ ಘಳಿಗೆಯಲ್ಲಿ ಸಿನಿಮಾ ಮಾಡುತ್ತಾ ಎಂಬಂತಾಗಿ ಬಿಟ್ಟಿದೆ.
ಸುದೀಪ್ ಮುಂದ್ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆಂಬುದೇ ಸದ್ಯಕ್ಕೆ ಪ್ರಶ್ನೆಯಾಗಿ ಉಳಿದುಕೊಂಡಿತ್ತು. ಆ ಉತ್ತರಕ್ಕಾಗಿ ಅಭಿಮಾನಿಗಳೆಲ್ಲ ಕಾತರದಿಂದ ಕಾದು ಕೂತಿದ್ದಾರೆ. ಈಗ ಹರಿದಾಡುತ್ತಿರೋ ಸುದ್ದಿ ಮತ್ತು ಅದರ ಹಿಂಚುಮುಂಚಿನಲ್ಲಿನ ಪಲ್ಲಟಗಳು ಒಂದು ಮಟ್ಟಿಗೆ ಉತ್ತರವಾಗಿ ನಿಲ್ಲುವಂತಿವೆ. ತಮಿಳಿನಲ್ಲಿ ಖ್ಯಾತಿವೆತ್ತಿರುವ ಪ್ರಸಿದ್ಧ ಸಂಸ್ಥೆಯೊಂದು ಸುದೀಪ್ ಸಿನಿಮಾ ನಿರ್ಮಾಣ ಮಾಡೋದು ಪಕ್ಕಾ. ಇತ್ತೀಚೆಗೆ ಬಿಡುಗಡೆಗೊಂಡಿದ್ದ ಪೊನ್ನಿಯಿನ್ ಸೆಲ್ವನ್ ಸೇರಿದಂತೆ, ಅನೇಕ ಹಿಟ್ ಸಿನಿಮಾಗಳನ್ನು ಈ ನಿರ್ಮಾಣ ಸಂಸ್ಥೆ ರೂಪಿಸಿದೆ. ತಮಿಳುನಾಡಿನ ಮಟ್ಟಿಗೆ ಲೈಕಾ ಪ್ರೊಡಕ್ಷನ್ಸ್ ಬಹುದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ. ಅದರ ಕಡೆಯಿಂದ ಪ್ಯಾನಿಂಡಿಯಾ ಸಿನಿಮಾವೊಂದರಲ್ಲಿ ನಟಿಸಲು ಸುದೀಪ್ ಒಪ್ಪಿಗೆ ಸೂಚಿಸಿದ್ದಾರೆ. ಕನ್ನಡ ತಮಿಳು ಸೇರಿದಂತೆ ಒಂದಷ್ಟು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದೆ.
ಒಂದು ಮೂಲದ ಪ್ರಕಾರ, ಈ ಚಿತ್ರಕ್ಕೆ ಹೊಸಾ ವರ್ಷದ ಮೊದಲ ಭಾಗದಲ್ಲಿಯೇ ಅಧಿಕೃತ ಸ್ವರೂಪ ಸಿಗಲಿದೆ. ನಿರ್ದೇಶಕರ್ಯಾರು ಎಂಬುದೂ ಸೇರಿದಂತೆ, ಮತ್ತೊಂದಷ್ಟು ಇಂಟರೆಸ್ಟಿಂಗ್ ವಿಚಾರಗಳು ಇಷ್ಟರಲ್ಲಿಯೇ ಜಾಹೀರಾಗಲಿವೆ. ಇನ್ನೇನು ಬಿಗ್ ಬಾಸ್ ಶೋ ಮುಗಿಯುತ್ತಾ ಬಂದಿದೆ. ಒಂದಷ್ಟು ಕಾಲ ರೆಸ್ಟ್ ತೆಗೆದುಕೊಂಡು, ಹೊಸಾ ವರ್ಷದ ಆರಂಭದಲ್ಲಿಯೇ ಕಿಚ್ಚ ಹೊಸಾ ಸಿನಿಮಾದತ್ತ ಹೊರಳಿಕೊಳ್ಳಲಿದ್ದಾರೆ. ಹಾಗೆಂದಾಕ್ಷಣ ಸುದೀಪ್ ನಟಿಸುತ್ತಿರೋದು ಇದೊಂದೇ ಸಿನಿಮಾದಲ್ಲಿ ಅಂದುಕೊಳ್ಳಬೇಕಿಲ್ಲ. ಇನ್ನೂ ಒಂದಷ್ಟು ಚಿತ್ರಗಳ ಮಾತುಕತೆಗಳು ಚಾಲ್ತಿಯಲ್ಲಿವೆ. ಅವೆಲ್ಲದರ ವಿವರಗಳು ಮುಂದಿನ ವರ್ಷದಲ್ಲಿ ಹಂತ ಹಂತವಾಗಿ ಪ್ರೇಕ್ಷಕರನ್ನು ಎದುರುಗೊಳ್ಳಲಿವೆ.
ವೀಲ್‌ಚೇರ್ ರೋಮಿಯೋಗೆ ಕಿಚ್ಚನ ಮೆಚ್ಚುಗೆ!
ಸದಭಿಪ್ರಾಯ ಕಂಡು ಖುಷಿಗೊಂಡರು ಸುದೀಪ್! ವೀಲ್‌ಚೇರ್ ರೋಮಿಯೋ ಚಿತ್ರ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಒಂದೊಳ್ಳೆಯ ಕಥೆ, ಮನಸೆಳೆಯುವಂಥಾ ಸ್ವಂತಿಕೆ ಮತ್ತು ಒಂದೇ ಸಲಕ್ಕೆ ಮನಸಿಗೆ ಲಗ್ಗೆಯಿಟ್ಟು ಕಾಡಿಸುವ ಚೆಂದದ ಡೈಲಾಗುಗಳು… ಇಷ್ಟಿದ್ದು ಬಿಟ್ಟರೆ ಅದು ಖಂಡಿತವಾಗಿಯು ಪ್ರೇಕ್ಷಕರ ಮನಸೆಳೆಯುತ್ತದೆ. ಈವತ್ತಿಗೆ ವೀಲ್‌ಚೇರ್ ರೋಮಿಯೋ ಬಿಡುಗಡೆಗೊಂಡು ಯಶಸ್ವೀ ಪ್ರದರ್ಶನ ಕಾಣುತ್ತಿದೆ ಎಂದರೆ ಅದರ ಹಿಂದಿರುವ ಶಕ್ತಿ ಮೇಲ್ಕಂಡ ಕ್ವಾಲಿಟಿಗಳಷ್ಟೇ. ಇದೀಗ ಎಲ್ಲ ದಿಕ್ಕುಗಳಿಂದಲೂ ಈ ಚಿತ್ರದ ಬಗ್ಗೆ ಸದಭಿಪ್ರಾಯ ಮನೆಮಾಡಿಕೊಂಡಿದೆ. ಎಲ್ಲ ಕಡೆಗಳಿಂದಲೂ ಒಳ್ಳೆಯ ವಿಮರ್ಶೆಗಳು ಕೇಳಿ [...]
The post ವೀಲ್‌ಚೇರ್ ರೋಮಿಯೋಗೆ ಕಿಚ್ಚನ ಮೆಚ್ಚುಗೆ! appeared first on ಶೋಧ ನ್ಯೂಸ್ - Shodha News.
ಸದಭಿಪ್ರಾಯ ಕಂಡು ಖುಷಿಗೊಂಡರು ಸುದೀಪ್!
ವೀಲ್‌ಚೇರ್ ರೋಮಿಯೋ ಚಿತ್ರ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಒಂದೊಳ್ಳೆಯ ಕಥೆ, ಮನಸೆಳೆಯುವಂಥಾ ಸ್ವಂತಿಕೆ ಮತ್ತು ಒಂದೇ ಸಲಕ್ಕೆ ಮನಸಿಗೆ ಲಗ್ಗೆಯಿಟ್ಟು ಕಾಡಿಸುವ ಚೆಂದದ ಡೈಲಾಗುಗಳು… ಇಷ್ಟಿದ್ದು ಬಿಟ್ಟರೆ ಅದು ಖಂಡಿತವಾಗಿಯು ಪ್ರೇಕ್ಷಕರ ಮನಸೆಳೆಯುತ್ತದೆ. ಈವತ್ತಿಗೆ ವೀಲ್‌ಚೇರ್ ರೋಮಿಯೋ ಬಿಡುಗಡೆಗೊಂಡು ಯಶಸ್ವೀ ಪ್ರದರ್ಶನ ಕಾಣುತ್ತಿದೆ ಎಂದರೆ ಅದರ ಹಿಂದಿರುವ ಶಕ್ತಿ ಮೇಲ್ಕಂಡ ಕ್ವಾಲಿಟಿಗಳಷ್ಟೇ. ಇದೀಗ ಎಲ್ಲ ದಿಕ್ಕುಗಳಿಂದಲೂ ಈ ಚಿತ್ರದ ಬಗ್ಗೆ ಸದಭಿಪ್ರಾಯ ಮನೆಮಾಡಿಕೊಂಡಿದೆ. ಎಲ್ಲ ಕಡೆಗಳಿಂದಲೂ ಒಳ್ಳೆಯ ವಿಮರ್ಶೆಗಳು ಕೇಳಿ ಬರುತ್ತಿವೆ. ಇದೆಲ್ಲವನ್ನೂ ಕಂಡು ಕಿಚ್ಚ ಸುದೀಪ್ ಖುಷಿಗೊಂಡು, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಹೊಸಬರ ಚಿತ್ರಗಳಿಗೆ ಸದಾ ಕಾಲವೂ ಬೆಂಬಲ ನೀಡುತ್ತಾ ಮುಂದುವರೆಯುತ್ತಿರುವವರು ಕಿಚ್ಚ ಸುದೀಪ್. ಸಿನಿಮಾ ರಂಗದ ಆಗು ಹೋಗುಗಳ ಮೇಲೆ ಕಣ್ಣಿಡುತ್ತಾ, ಚೆಂದದ ಚಿತ್ರಗಳನ್ನು ತುಂಬು ಹೃದಯದಿಂದ ಪ್ರೋತ್ಸಾಹಿಸೋದು ಕಿಚ್ಚನ ರೂಢಿ. ಇದೀಗ ವೀಲ್‌ಚೇರ್ ರೋಮಿಯೋನ ಬಗ್ಗೆ ಎಲ್ಲೆಡೆ ಕೇಳಿ ಬರುತ್ತಿರುವ ಒಳ್ಳೆ ಮಾತುಗಳು ಅವರ ಕಿವಿಗೂ ಬಿದ್ದಿವೆ. ಸಕಾರಾತ್ಮಕ ವಿಮರ್ಶೆಗಳನ್ನು ಗಮನಿಸಿರುವ ಕಿಚ್ಚ, ಟ್ವೀಟ್ ಮೂಲಕ ವೀಲ್‌ಚೇರ್ ರೋಮಿಯೋನನ್ನು ಮೆಚ್ಚಿಕೊಂಡಿದ್ದಾರೆ. ಎಲ್ಲವೂ ಒಳಿತಾಗಲೆಂದು ಒಂದಿಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಒಂದು ಸಿನಿಮಾ ತೆರೆ ಕಂಡ ನಂತರದಲ್ಲಿ ಪ್ರೇಕ್ಷಕರ ಬಾಯಿಂದ ಬಾಯಿಗೆ ಒಳ್ಳೆ ಮಾತುಗಳು ಹರಡಿಕೊಳ್ಳುತ್ತವಲ್ಲಾ? ಅದು ಪ್ರಚಂಡ ಗೆಲುವಿನ ಮುನ್ಸೂಚನೆ. ಈ ನಿಟ್ಟಿನಲ್ಲಿ ಹೇಳೋದಾದರೆ ವೀಲ್‌ಚೇರ್ ರೋಮಿಯೋಗೆ ಮೊದಲ ದಿನವೇ ಗೆಲುವಿನ ಸ್ಪಷ್ಟ ಸೂಚನೆ ಸಿಕ್ಕಿ ಹೋಗಿತ್ತು. ವಿಶೇಷವಾಗಿ ಎಲ್ಲ ವರ್ಗದ ಪ್ರೇಕ್ಷಕರಿಗೂ ಈ ಚಿತ್ರ ಇಷ್ಟವಾಗಿತ್ತು. ಪ್ರತಿಯೊಬ್ಬರೂ ವಿಶಿಷ್ಟವಾದ ಕಥೆ ಮತ್ತು ಪಾತ್ರಗಳನ್ನು ಸೃಷ್ಟಿಸಿರೋದರ ಬಗ್ಗೆ ಮೆಚ್ಚಿ ಮಾತಾಡಲಾರಂಭಿಸಿದ್ದರು. ಈ ಕಾರಣದಿಂದಲೇ ವೀಲ್‌ಚೇರ್ ರೋಮಿಯೋಗೆ ರಾಜ್ಯಾದ್ಯಂತ ಹೌಸ್‌ಫುಲ್ ಪ್ರದರ್ಶನದ ಭಾಗ್ಯ ಸಿಗಲಾರಂಭಿಸಿದೆ.
ಇದು ನಟರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಮೊದಲ ಚಿತ್ರ. ಆದರೆ ಮೊದಲ ಹೆಜ್ಜೆ ಎಂದರೆ ನಂಬಲು ಸಾಧ್ಯವಾಗದಂತೆ ಅವರು ಈ ಚಿತ್ರವನ್ನು ರೂಪಿಸಿದ್ದಾರೆ. ಸಂಭಾಷಣಾಕಾರರಾಗಿ ಯಶಸ್ವಿಯಾಗಿದ್ದ ಅವರು ಈ ಮೂಲಕ ನಿರ್ದೇಶಕನಾಗಿಯೂ ಸೈ ಅನ್ನಿಸಿಕೊಂಡಿದ್ದಾರೆ. ವೀಲ್‌ಚೇರ್ ರೋಮಿಯೋ ಚೆಂದದ ಕಥೆಯಿಂದ ಮೈ ಕೈ ತುಂಬಿಕೊಂಡಿದ್ದಾನೆ. ನಿಮ್ಮ ಎಣಿಕೆಗೆ ನಿಲುಕದಂಥಾ ಅದ್ಭುತ ಕಥೆ ಈ ಚಿತ್ರದಲ್ಲಿದೆ. ನೀವೇನಾದರೂ ಇನ್ನೂ ನೋಡಿಲ್ಲವಾದರೆ ಅಪರೂಪದ ಚಿತ್ರವೊಂದನ್ನು ಮಿಸ್ ಮಾಡಿಕೊಂಡಿದ್ದೀರೆಂದೇ ಅರ್ಥ. ಇದೆಲ್ಲ ಏನೇ ಇದ್ದರೂ ಇದೀಗ ಖುದ್ದು ಕಿಚ್ಚ ಸುದೀಪ್ ಸಾಥ್ ಕೊಟ್ಟಿರೋದು ಚಿತ್ರತಂಡಕ್ಕೆ ಮತ್ತಷ್ಟು ಬಲ ತಂದುಕೊಟ್ಟಂತಾಗಿದೆ. ಇದರಿಂದಲೇ ವೀಲ್‌ಚೇರ್ ರೋಮಿಯೋನ ಯಶದ ಓಘಕ್ಕೆ ಮತ್ತಷ್ಟು ಆವೇಗ ಸಿಕ್ಕಿದಂತಾಗಿದೆ!