rajanikanth Archives » ಶೋಧ ನ್ಯೂಸ್ - Shodha News

ಕಾಂತಾರ ನೋಡಿ ಮೆಚ್ಚಿದ್ದ ರಜನಿ ರಿಷಬ್‌ಗೆ ಹೇಳಿದ್ದೇನು?
ರಿಷಬ್ ಶೆಟ್ಟಿ ಪಾಲಿಗೀಗ ಒಂದಿಡೀ ನಸೀಬೇ ಪಥ ಬದಲಿಸಿ ಮಹಾ ಗೆಲುವಿನ ಗಮ್ಯ ಸೇರಿಸಿದೆ. ರಿಷಬ್ ಈ ಗೆಲುವಿನ ಅಲೆಯಲ್ಲಿ ನಡೆದುಕೊಂಡಿರೋ ಒಂದಷ್ಟು ರೀತಿಗಳು ಸೈದ್ಧಾಂತಿಕ ಸಂಘರ್ಷಕ್ಕೆ, ಒಂದಷ್ಟು ವಿರೋಧಗಳಿಗೆ ಕಾರಣವಾಗಿರೋದು ನಿಜ. ಆದರೆ, ಈ ಘಳಿಗೆಯಲ್ಲಿ ರಿಷಬ್ ಶೆಟ್ಟಿಯನ್ನು ಓರ್ವ ನಟ ಮತ್ತು ನಿರ್ದೇಶಕನಾಗಿ ಮತ್ತು ಕಾಂತಾರವನ್ನೊಂದು ಚಿತ್ರವನ್ನಾಗಿ ದಿಟ್ಟಿಸಿದರೆ ಅದು ಮೂಡಿಸಿರುವ ಸಂಚಲನ ರೋಮಾಂಚಕ. ನಟನಾಗಬೇಕೆಂಬ ಅತೀವ ತುಡಿತವನ್ನು ನಿರ್ದೇಶನದತ್ತ ಹೊರಳಿಸಿಕೊಂಡಿದ್ದ ರಿಷಬ್ ಈಗ ಎಲ್ಲ ದಿಕ್ಕಿನಲ್ಲಿಯೂ ಗೆದ್ದಿದ್ದಾರೆ. ಈ ಗೆಲುವನ್ನು ದೇಶಾದ್ಯಂತ ಅತಿರಥಮಹಾರಥರೇ ಸಂಭ್ರಮಿಸುತ್ತಿದ್ದಾರೆ. ಸೂಪರ್ ಸ್ಟಾರ್ ರಜನೀಕಾಂತ್ ಕೂಡಾ ಕಾಂತಾರ ಚಿತ್ರವನ್ನು ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದರು. ಇದೀಗ ರಿಷಬ್ ರಜನೀಕಾಂತ್‌ರ ಮನೆಗೆ ತೆರಳಿ ಮುಖತಃ ಭೇಟಿಯಾಗಿದ್ದಾರೆ.

ರಜನೀಕಾಂತ್ ಒಂದು ಸಿನಿಮಾವನ್ನು ನೋಡಿ ಪ್ರತಿಕ್ರಿಯಿಸೋದಿದೆಯಲ್ಲಾ? ಅದು ಸಿನಿಮಾ ರಂಗದ ಮಂದಿಯ ಪಾಲಿಗೆ ಮಹಾನ್ ಪುರಸ್ಕಾರವಿದ್ದಂತೆ. ಕಾಂತಾರ ಕ್ರೇಜ್ ಕರ್ನಾಟಕದ ಗಡಿದಾಟಿ, ದೇಶದ ಉದ್ದಗಲಕ್ಕೂ ಪಸರಿಸುತ್ತಲೇ ರಜನೀಕಾಂತ್ ಅದರತ್ತ ಆಕರ್ಷಿತರಾಗಿದ್ದರು. ಕಡೆಗೂ ಕಾಂತಾರವನ್ನು ನೋಡಿ ಥ್ರಿಲ್ ಆಗಿ ಅಭಿಪ್ರಾಯ ಹಂಚಿಕೊಂಡಿದ್ದರು. ಕಾಂತಾರ ಎಲ್ಲ ನಿಟ್ಟಿನಲ್ಲಿಯೂ ಚೆಂದದ ಸಿನಿಮಾ ಅನ್ನುತ್ತಲೇ ರಿಷಬ್ ಶೆಟ್ಟಿಯನ್ನು ಮೆಚ್ಚಿಕೊಂಡಿದ್ದ ರಜನಿ, ಒಂದಿಡೀ ಚಿತ್ರತಂಡಕ್ಕೆ ಶುಭ ಕೋರಿದ್ದರು. ರಜನೀಕಾಂತ್ ಚಿತ್ರಗಳನ್ನು ನೋಡಿಕೊಂಡು ಬೆಳೆದ, ಅವರು ನಡೆದು ಬಂದ ಕಡುಗಷ್ಟದ ಹಾದಿಯಿಂದ ಸ್ಫೂರ್ತಿ ಪಡೆದಿದ್ದ ರಿಷಬ್‌ಗೆ ಅವರನ್ನೊಮ್ಮೆ ಕಣ್ತುಂಬಿಕೊಳ್ಳಬೇಕೆಂಬ ಇರಾದೆ ಇತ್ತಂತೆ. ಅದೀಗ ಒಂದು ಅಮೋಘ ಕ್ಷಣಗಳ ಸಮೇತ ಸಾಧ್ಯವಾಗಿದೆ.

ಚೆನೈನಲ್ಲಿರುವ ಮನೆಗೆ ತೆರಳಿ ರಜನೀಕಾಂತ್‌ರನ್ನು ರಿಷಬ್ ಭೇಟಿಯಾಗಿದ್ದಾರೆ. ಸಾಮಾನ್ಯವಾಗಿ ರಜನೀ ಕರ್ನಾಟಕದಿಂದ ಯಾರೇ ಹೋದರೂ ತವರಿಂದ ಬಂದವರೆಂಬಂತೆ ಖುಷಿಗೊಳ್ಳುತ್ತಾರೆ. ಯಾವ ಹಮ್ಮುಬಿಮ್ಮೂ ಇಲ್ಲದೆ ಆದರಿಸುತ್ತಾರೆ. ಅಂಥಾದ್ದೊಂದು ಆತ್ಮೀಯ ಆತಿಥ್ಯ ರಜನೀಕಾಂತ್ ಕಡೆಯಿಂದ ರಿಷಬ್‌ಗೆ ಸಿಕ್ಕಿದೆ. ಈ ಬಗ್ಗೆ ಅವರು ಸಂತಸದಿಂದಲೇ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೀಗೆ ರಿಷಬ್‌ಗೀಗ ಅನಿರೀಕ್ಷಿತ ಖುಷಿಗಳು ಒಂದರ ಹಿಂದೊಂದರಂತೆ ದಕ್ಕುತ್ತಿವೆ. ಅದು ಅವರ ತಂದೆ ಹೇಳಿದಂತೆ ಗಜಕೇಸರಿ ಯೋಗದ ಫಲ ಅಂದುಕೊಳ್ಳೋದಕ್ಕಿಂತಲೂ, ಇದುವರೆಗೆ ರಿಷಬ್ ಸಾಗಿ ಬಂದ ಕಷ್ಟದ ಹಾದಿಯ ಯಾನದ ಪ್ರತಿಫಲ ಅಂದುಕೊಳ್ಳೋದೇ ಹೆಚ್ಚು ಸೂಕ್ತ!

The post ಕಾಂತಾರ ನೋಡಿ ಮೆಚ್ಚಿದ್ದ ರಜನಿ ರಿಷಬ್‌ಗೆ ಹೇಳಿದ್ದೇನು? appeared first on ಶೋಧ ನ್ಯೂಸ್ - Shodha News.

ರಜನಿ ಮತ್ತೊಂದು ಗೆಲುವಿಗೆ ಸಜ್ಜಾದ ಸೂಚನೆ!
ಸೂಪರ್ ಸ್ಟಾರ್ ರಜನೀಕಾಂತ್ ಸದಾ ಸುದ್ದಿ ಕೇಂದ್ರದಲ್ಲಿರುವ ನಟ. ಅವರು ಸಿನಿಮಾವೊಂದರಲ್ಲಿ ಬ್ಯುಸಿಯಾಗಿದ್ದರೂ, ಅದರ ನಡುವೆ ಕೊಂಚ ಬಿಡುವಾಗಿದ್ದರೂ ಅವರ ಸುತ್ತ ಒಂದಷ್ಟು ಸುದ್ದಿಗಳು ಗಿರಕಿ ಹೊಡೆಯುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ರಜನಿ ಮಾನಸಿಕವಾಗಿ ನೊಂದು ಮಾತಾಡುವ ಮೂಲಕ ಒಂದಷ್ಟು ಚರ್ಚೆಗೀಡಾಗಿದ್ದರು. ಝೀರೋ ಪರ್ಸೆಂಟಿನಿಂದ ನಟನಾಗಿ ಮೇಲೆದ್ದು ಬಂದು, ಸೂಪರ್ ಸ್ಟಾರ್ ಆದ ರಜನೀಕಾಂತ್ ಬಾಯಲ್ಲಿ ಅಂಥಾ ಮಾತುಗಳನ್ನು ಕೇಳಿದ ಮಂದಿ ಒಂದಷ್ಟು ಕಸಿವಿಸಿಗೊಳಗಾದದ್ದು ನಿಜ. ಆದರೆ, ಇಂಥಾ ಯಾವುದೇ ತೊಳಲಾಟಗಳೂ ತನ್ನ ವೃತ್ತಿ ಬದುಕಿಗೆ ಬ್ರೇಕ್ ಹಾಕದಂತೆ ಎಚ್ಚರ ವಹಿಸುತ್ತಲೇ ಬಂದವರು ರಜನೀಕಾಂತ್. ಅವರೀಗ ಎಲ್ಲ ತಳಮಳಗಳನ್ನೂ ಕೊಡವಿಕೊಂಡು, ಮತ್ತದೇ ಹುರುಪಿನೊಂದಿಗೆ ಎದ್ದು ನಿಂತಿದ್ದಾರೆ. ಅದರ ಫಲವಾಗಿಯೇ ಅವರ ಮುಂದಿನ ಚಿತ್ರ ‘ಜೈಲರ್’ ದೊಡ್ಡ ಮಟ್ಟದಲ್ಲಿ ಸೌಂಡು ಮಾಡಲಾರಂಭಿಸಿದೆ!

ರಜನೀಕಾಂತ್ ಈಗೊಂದಷ್ಟು ವರ್ಷಗಳಿಂದ ಪುಷ್ಕಳವಾದೊಂದು ಗೆಲುವು ಕಾಣದೆ ತತ್ತರಿಸಿದಂತಿತ್ತು. ಅವರನ್ನು ಅತೀವವಾಗಿ ಮೆಚ್ಚಿಕೊಳ್ಳುವ, ಆರಾಧಿಸುವ ಮಂದಿಗೂ ಅದೊಂದು ಕೊರಗು ಬಿಡದೇ ಕಾಡುತ್ತಿರೋದು ಸತ್ಯ. ಇಂಥಾ ಹೊತ್ತಿನಲ್ಲಿಯೇ ರಜನೀ ಆಂತರಿಕ ತೊಳಲಾಟದಿಂದ ತ್ರಾಣ ಕಳೆದುಕೊಂಡವರಂತೆ, ವೈಯಕ್ತಿಕ ಬದುಕಿನಲ್ಲಿ ತಟುಕು ನೆಮ್ಮದಿಗೂ ತತ್ವಾರ ಅನುಭವಿಸುತ್ತಿರುವವರಂತೆ ಮಾತಾಡಿದರೆ ಅಭಿಮಾನಿಗಳಿಗೆ ಹೇಗಾಗಬೇಡ? ಇಂಥಾದ್ದೊಂದು ಸಂದಿಗ್ಧ ಕಾಲಘಟ್ಟದಲ್ಲಿ ರಜನಿ ಮತ್ತೆ ಫಾರ್ಮಿಗೆ ಮರಳಿದ್ದಾರೆ. ಅವರೀಗ ಜೈಲರ್ ಅವತಾರದಲ್ಲಿ ಕಾಣಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಇದೀಗ ಆ ಚಿತ್ರದ ರಗಡ್ ಪೋಸ್ಟರ್ ಒಂದು ಜಾಹೀರಾಗುವ ಮೂಲಕ ರಜನಿ ಖದರ್ ಮತ್ತೆ ಪ್ರಜ್ವಲಿಸಿದೆ.

ಅಂದಹಾಗೆ, ಜೈಲರ್ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಚಿತ್ರ. ತನ್ನದೇ ಧಾಟಿಯಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ಕೊಡಮಾಡಿರುವ ನೆಲ್ಸನ್, ತಮಿಳಿನಲ್ಲಿ ಸ್ಟಾರ್ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿ ರಜನೀಕಾಂತ್ ಮತ್ತು ನೆಲ್ಸನ್ ಕಾಂಬಿನೇಷನ್ನಿನಲ್ಲಿ ಈ ಚಿತ್ರ ಸೆಟ್ಟೇರಿದೆ. ನೆಲ್ಸನ್ ನಿರ್ದೇಶನದ ಬಗ್ಗೆ ಪ್ರೇಕ್ಷಕರಲ್ಲೊಂದು ನಂಬಿಕೆ ಇದೆ. ಈ ಕಾರಣದಿಂದಲೇ ಜೈಲರ್ ಬಗ್ಗೆ ವ್ಯಾಪಕ ನಿರೀಕ್ಷೆ ಪಡಿಮೂಡಿಕೊಂಡಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ರಜನಿ ಒಂದಷ್ಟು ಕಾಲದ ವನವಾಸದಿಂದ ಮತ್ತೆ ಹೊರಬರಲು ಸಾಧ್ಯವಾಗಬಹುದೇನೋ. ಅಂಥಾದ್ದೊಂದು ಗೆಲುವು ಜೈಲರ್ ಮೂಲಕ ರಜನಿಗೆ ದಕ್ಕಲೆಂದು ಕೋಟ್ಯಾಂತರ ಅಭಿಮಾನಿಗಳು ಮನಸಾರೆ ಹಾರೈಸುತ್ತಿದ್ದಾರೆ.

ರಜನೀಕಾಂತ್ ಯಾವುದೇ ಹೊಸಾ ಸಿನಿಮಾದತ್ತ ಹೊರಳಿಕೊಂಡಾಗಲೂ ದೊಡ್ಡ ಮಟ್ಟದಲ್ಲಿ ಕ್ರೇಜ್ ಮೂಡಿಕೊಳ್ಳುತ್ತೆ. ಆ ಚಿತ್ರಕ್ಕೆ ತಾನೇತಾನಾಗಿ ಭಾರೀ ಪ್ರಚಾರವೂ ಸಿಗುತ್ತದೆ. ಈ ಬಾರಿ ರಜನೀ ಚಿತ್ರಕ್ಕೆ ನೆಲ್ಸನ್ ಸಾರಥ್ಯವಿರೋದರಿಂದ ಆ ನಿರೀಕ್ಷೆ ನೂರ್ಮಡಿಸಿರೋದು ಸುಳ್ಳಲ್ಲ. ತಮಿಳು ಚಿತ್ರರಂಗದಲ್ಲಿ ನೆಲ್ಸನ್ ಅಂತಲೇ ಪ್ರಸಿದ್ಧಿ ಪಡೆದುಕೊಂಡಿರುವ ನೆಲ್ಸನ್ ದಿಲೀಪ್ ಕುಮಾರ್, ೨೦೧೦ರಲ್ಲಿ ತೆರೆಕಂಡಿದ್ದ ವೆಟೈ ಮನ್ನಾನ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದರು. ಸಿಲಂಬರಸನ್ ಮತ್ತು ಹರ್ಷಿಕಾ ಮೋಟ್ವಾನಿ ನಟಿಸಿದ್ದ ಈ ಚಿತ್ರ ಅದೇಕೋ ಅರ್ಧದಲ್ಲಿಯೇ ನಿಂತು ಹೋಗಿತ್ತು. ಆ ನಂತರ ಏರಿಳಿತ ಕಾಣುತ್ತಾ ಬಂದಿದ್ದ ನೆಲ್ಸನ್ ೨೦೧೮ರಲ್ಲಿ ತೆರೆಗಂಡಿದ್ದ, ನಯನತಾರಾ ಲೀಡ್ ರೋಲಿನಲ್ಲಿ ನಟಿಸಿದ್ದ ಕೊಲಮಾವು ಕೋಕಿಲ ಎಂಬ ಹಾಸ್ಯ ಬೆರೆತ ಚಿತ್ರದ ಮೂಲಕ ಕಮರ್ಶಿಯಲ್ ಆಗಿಯೂ ಗೆದ್ದಿದ್ದರು. ಆ ನಂತರ ಕಾರ್ತಿಕೇಯನ್ ನಾಯಕನಾಗಿದ್ದ ಡಾಕ್ಟರ್ ಚಿತ್ರವೂ ಗೆಲುವು ತಂದುಕೊಟ್ಟಿತ್ತು. ಅದು ವಿಜಯ್ ನಟನೆಯ ಬೀಸ್ಟ್ ಚಿತ್ರದ ಮೂಲಕವೂ ಮುಂದುವರೆದಿತ್ತು. ಈ ನಟಿಟಿನಲ್ಲಿ ನೋಡೋದಾದರೆ, ಜೈಲರ್ ಎಂಬುದು ನೆಲ್ಸನ್ ವೃತ್ತಿ ಬದುಕಿನಲ್ಲಿ ಬಹುಮುಖ್ಯ ಚಿತ್ರವಾಗಿ ದಾಖಲಾಗುತ್ತದೆ.

The post ರಜನಿ ಮತ್ತೊಂದು ಗೆಲುವಿಗೆ ಸಜ್ಜಾದ ಸೂಚನೆ! appeared first on ಶೋಧ ನ್ಯೂಸ್ - Shodha News.