#kannadathiserial Archives » ಶೋಧ ನ್ಯೂಸ್ - Shodha News
#kannadathiserial Archives » ಶೋಧ ನ್ಯೂಸ್ - Shodha News
ramola: ಕಿರುತೆರೆಯ ವಿಲನ್ ಮುಂದೆ ಅವಕಾಶಗಳ ಮೆರವಣಿಗೆ!
actress ramola: ಕಿರುತೆರೆಯಲ್ಲಿ ಒಂದಷ್ಟು ಪ್ರಸಿದ್ಧಿ ಪಡೆಯುತ್ತಲೇ ಏಕಾಏಕಿ ಹಿರಿತೆರೆಗೆ ಲಗ್ಗೆಯಿಡೋದು ಅನೇಕ ನಟ ನಟಿಯರ ಮಹಾ ಕನಸು. ಆದರೆ, ಆ ಯೋಗ ಮಾತ್ರ ಅಷ್ಟು ಸಲೀಸಾಗಿ ಎಲ್ಲರಿಗೂ ದಕ್ಕುವಂಥಾದ್ದಲ್ಲ. ಆದರೆ, ಹಿರಿತೆರೆಯಲ್ಲಿ (film industry) ಮಿಂಚುವ ಸೆಳೆತವಿರುತ್ತದಲ್ಲಾ? ಅದು ನಾನಾ ಆಟ ಆಡಿಸುತ್ತೆ. ಕೆಲವರನ್ನು ಹತ್ತಿದ ಏಣಿಯನ್ನೇ ಒದ್ದು ಕೆಡವಿ ಬಿಡುವಂತೆಯೂ ಪ್ರೇರೇಪಿಸುತ್ತೆ. ಹಾಗೆ ತಿಮಿರು ತೋರಿಸಿ ಸೀರಿಯಲ್ಲುಗಳಿಂದ ಅರ್ಧಕ್ಕೇ ಎದ್ದು ಬಂದವರನೇಕರು ಹೇಳ ಹೆಸರಿಲ್ಲದಂತೆ ಮಾಯವಾಗಿದ್ದಾರೆ. ಇನ್ನೂ ಕೆಲ ಮಂದಿ ಗಾಂಧಿನಗರದ ಸಂದಿಗೊಂದಿಗಳಲ್ಲಿ ಅಂತರ್‍ಪಿಶಾಚಿಗಳಂತೆ [...]
The post ramola: ಕಿರುತೆರೆಯ ವಿಲನ್ ಮುಂದೆ ಅವಕಾಶಗಳ ಮೆರವಣಿಗೆ! appeared first on ಶೋಧ ನ್ಯೂಸ್ - Shodha News.
ವರ್ಷದ ಹಿಂದೆ ಕನ್ನಡತಿ ಅಂತೊಂದು ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಪ್ರತಿಭಾನ್ವಿತ ನಟಿ ರಂಜನಿ ರಾಘವನ್ ಆ ಸೀರಿಯಲ್ಲಿನ ನಾಯಕಿಯಾಗಿ ನಟಿಸಿದ್ದಳು. ಆಕೆಗೆ ಸದಾ ಕಾಟ ಕೊಡುವ ಖಡಕ್ ವಿಲನ್ ಸಾನಿಯಾ ಆಗಿ ಕಾಣಿಸಿಕೊಂಡಿದ್ದಾಕೆ ರಮೋಲಾ. ಹಾಗೆ ನೋಡಿದರೆ, ಈ ಸೀರಿಯಲ್ಲು ರಂಜಿನಿ ರಾಘವನ್ ಪಾಲಿಗೆ ಮತ್ತಷ್ಟು ಖ್ಯಾತಿ ತಂದು ಕೊಟ್ಟಿತ್ತು. ರಮೋಲಾ ನಿರ್ವಹಿಸಿದ್ದ ಸಾನಿಯಾ ಎಂಬ ಪಾತ್ರ ರಂಜಿನಿಯನ್ನು ಸರಿಗಟ್ಟುವಂತೆ ಪ್ರಚಾರ ಪಡೆದುಕೊಂಡಿತ್ತು. ವಿಲನ್ ಪಾತ್ರದ ಮೂಲಕವೂ ರಮೋಲಾ ತನ್ನ ಕ್ಯೂಟ್ ಲುಕ್ಕು, ಅಭಿನಯದಿಂದ ಮನ ಗೆದ್ದಿದ್ದಳು.
ಆ ಸೀರಿಯಲ್ಲು ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ರಮೋಲಾ ಸಾನಿಯಾ ಪಾತ್ರದಿಂದ ನಿರ್ಗಮಿಸಿದ್ದಳು. ಸಾಮಾನ್ಯವಾಗಿ ಇಂಥಾ ಪಾತ್ರಗಳಲ್ಲಿ ಮಿಂಚಿದ ಕಲಾವಿದರು ಬದಲಾವಣೆಯಾದಾಗ ಸ್ವಲ್ಪ ಸಮಯದ ನಂತರ ಪ್ರೇಕ್ಷಕರು ಹೊಸಬರಿಗೆ ಹಿಒಂದಿಕೊಳ್ಳುತ್ತಾರೆ. ಆದರೆ ಕನ್ನಡತಿ ಅಭಿಮಾನಿಗಳು ಮಾತ್ರ ಸಾನಿಯಾ ಪಾತ್ರಕ್ಕೆ ಸೂಟ್ ಆಗೋದು ರಮೋಲಾ ಮಾತ್ರ ಎಂಬ ನಿರ್ಧಾರಕ್ಕೆ ಬಂದು ಬಿಟ್ಟಿದ್ದರು. ಆದರೆ, ಅಂಥಾ ಯಶಸ್ವಿ ಪಾತ್ರ ಬಿಟ್ಟು ಹೋದ ರಮೋಲಾ ಚಿತ್ರರಂಗದಲ್ಲಿ ಬರಖತ್ತಾಗೋದು ಕಷ್ಟವಿದೆ ಎಂದೇ ಅನೇಕರು ಅಂದುಕೊಂಡಿದ್ದರು. ಅದರ ಬೆನ್ನಿಗೇ ಈಕೆ ರಿಚ್ಚಿ ಅಂತೊಂದು ಚಿತ್ರದಲ್ಲಿ ನಟಿಸುತ್ತಿದ್ದಾಳೆಂಬ ಸುದ್ದಿ ಬಂದಿತ್ತು. ಆ ಚಿತ್ರವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಅದಾಗಲೇ ರಮೋಲಾ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.
ಕೇವಲ ಚಂದ, ವೈಯ್ಯಾರಗಳಿದ್ದರೆ ಸಾಲದು; ಸಿಕ್ಕ ಪಾತ್ರಗಳನ್ನು ಆವಾಹಿಸಿಕೊಳ್ಳುವ ಕಸುವಿರುವ ಕಲಾವಿದರು ಮಾತ್ರವೇ ಕಿರುತೆರೆ, ಚಿತ್ರರಂಗದಲ್ಲಿ ಭದ್ರವಾದ ನೆಲೆ ಕಂಡುಕೊಳ್ಳಲು ಸಾಧ್ಯ. ಅಂಥಾ ಪ್ರತಿಭೆ ಖಂಡಿತವಾಗಿಯೂ ರಮೋಲಾಗಿದೆ. ಈಕೆ ಕನ್ನಡತಿ ಧಾರಾವಾಹಿ ಬಿಟ್ಟು ಬಂದಾಗ `ಆ ಹುಡುಗಿಗೆ ದುರಂಹಕಾರ ಹೆಚ್ಚು’ ಎಂಬಂಥಾ ರೂಮರುಗಳು ಹಬ್ಬಿಕೊಂಡಿದ್ದವು. ಆದರೆ, ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಮೋಲ ಮೊದಲ ಚಿತ್ರವನ್ನು ಯಶಸ್ವಿಯಾಗಿ ಮುಗಿಸಿಕೊಂಡಿದ್ದಾಳೆ. ಆ ಚಿತ್ರದ ಭಾಗವಾಗಿದ್ದವರ ಟೀಮಿನ ಮತ್ತೊಂದು ಚಿತ್ರಕ್ಕೂ ಆಯ್ಕೆಯಾಗಿದ್ದಾಳೆ. ಚಿತ್ರ ತಂಡದಲ್ಲಿ ಆಕೆಯ ಬಗ್ಗೆ ಮೆಚ್ಚುಗೆಯಿದೆಯೇ ಹೊರತು, ಯಾವ ತಕರಾರುಗಳೂ ಇಲ್ಲ. ಈ ಹುಡುಗಿಯ ಸ್ಪೀಡು ನೋಡಿದರೆ, ನಿಸ್ಸಂದೇಹವಾಗಿ ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆ ಕಂಡುಕೊಳ್ಳುವಂತಿದೆ!