#cinishodhareview Archives » ಶೋಧ ನ್ಯೂಸ್ - Shodha News
	1	</sy:updateFrequency>
#cinishodhareview Archives » ಶೋಧ ನ್ಯೂಸ್ - Shodha News
ಮೃಷ್ಟಾನ್ನದ ನಿರೀಕ್ಷೆಯ ಮುಂದೆ ಹಳಸಲು ಚಿತ್ರಾನ್ನ!
ಥೇಟರ್ ತುಂಬಾ ಕಬ್ಜಾ ಕಜ್ಜಾಯ ಸೀದು ಹೋದ ಘಾಟು! ಹೊಸಾ ವರ್ಷ ಆಗಮಿಸುತ್ತಲೇ ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಕ್ರೇಜ್ ಸೃಷ್ಟಿಸಿದ್ದ ಚಿತ್ರ `ಕಬ್ಜಾ’. ಆರಂಭದಲ್ಲಿ ಇಂಥಾದ್ದೊಂದು ರಗಡ್ ಟೈಟಲ್ಲಿನೊಂದಿಗೆ ನಿರ್ದೇಶಕ ಆರ್.ಚಂದ್ರು ಪ್ರತ್ಯಕ್ಷರಾದಾಗ ಹೇಳಿಕೊಳ್ಳುವಂಥಾ ನಿರೀಕ್ಷೆಗಳಿರಲಿಲ್ಲ. ಯಾಕೆಂದರೆ, ನಾಕಾಣೆ ಕೆಲಸ ಮಾಡಿ ಹನ್ನೆರಡಾಣೆ ಪೋಸು ಕೊಡೋದು ಕೇಶಾವರ ಚಂದ್ರುವಿನ ಹುಟ್ಟು ಜಾಯಮಾನ. ಆದರೆ, ಆರಂಭದಿಂದ ಇಲ್ಲಿಯವರೆಗೂ ಲವ್ ಸ್ಟೋರಿಗಳ ಗುಂಗು ಹತ್ತಿಸಿಕೊಂಡಂತಿದ್ದ ಚಂದ್ರು, ಏಕಾಏಕಿ ರಾ ಸಬ್ಜೆಕ್ಟಿನ ಸುಳಿವು ನೀಡಿದಾಗ ಒಂದು ಥರದ ಸಂಚಲನ ಸೃಷ್ಟಿಯಾಗಿದ್ದು ನಿಜ. [...]
The post ಮೃಷ್ಟಾನ್ನದ ನಿರೀಕ್ಷೆಯ ಮುಂದೆ ಹಳಸಲು ಚಿತ್ರಾನ್ನ! appeared first on ಶೋಧ ನ್ಯೂಸ್ - Shodha News.
ಥೇಟರ್ ತುಂಬಾ ಕಬ್ಜಾ ಕಜ್ಜಾಯ ಸೀದು ಹೋದ ಘಾಟು! 
ಕನ್ನಡವೂ ಸೇರಿದಂತೆ ಒಂದಷ್ಟುಯ ಭಾಷೆಗಳಲ್ಲಿ ತಯಾರಾಗಿ, ಏಕಕಾಲದಲ್ಲಿಯೇ ಬಿಡುಗಡೆಗೊಂಡಿರುವ ಪ್ಯಾನಿಂಡಿಯಾ ಚಿತ್ರ ಕಬ್ಜಾ. ಇದರ ಆರಂಭಿಕ ಅಬ್ಬರ ನೋಡಿದವರು ಒಂದು ಭರಪೂರ ಅನುಭೂತಿಯ ಕಜ್ಜಾಯ ಗ್ಯಾರೆಂಟಿ ಅಂದುಕೊಂಡಿದ್ದರು. ಅಂಥಾ ಅಗಾಧ ನಿರೀಕ್ಷೆಯನ್ನಿಟ್ಟುಕೊಂಡು ಸಿನಿಮಾ ಮಂದಿರ ಹೊಕ್ಕವರನ್ನೆಲ್ಲ ಚಂದ್ರು ಅಕ್ಷರಶಃ ಬೆಚ್ಚಿ ಬೀಳಿಸಿದ್ದಾರೆ. ಹಾಗಂತ, ಕಬ್ಜಾವನ್ನು ಹಾರರ್ ಬಸಿನಿಮಾ ಅಂತಂದುಕೊಳ್ಳಬೇಕಿಲ್ಲ. ಇಲ್ಲಿ ಹಾರರ್ ಅಂಶ ಇಲ್ಲದಿದ್ದರೂ ಹಾರಿಬಲ್ ಅನ್ನಿಸುವ ದೃಷ್ಯಾವಳಿಗಳ ಸರಣಿಯೇ ಇದೆ. ಅದರ ಸೆಳವಿಗೆ ಸಿಕ್ಕ ಪಾತ್ರಗಳೆಲ್ಲ ಗೊತ್ತು ಗುರಿಯಿಲ್ಲದಂತೆ ಚೆದುರಿಕೊಂಡಿವೆ. ಅಂಥಾ ನ್ಯೂನತೆಗಳೆಲ್ಲ ಪ್ರೇಕ್ಷಕರ ಕಣ್ಣಿಗೆ ಕಾಣದಂತೆ ಮರೆಮಾಚಲು ಚಂದ್ರು, ಡಾರ್ಕ್ ಶೇಡ್ ತಂತ್ರ ಅನುಸರಿಸಿದ್ದಾರೆ. ಆದರೆ ಅವೆಲ್ಲವೂ ನಮ್ಮದೇ ಕೆಜಿಎಫ್ ಚಿತ್ರವನ್ನು ಕಿತ್ತು ತಂದು ಪೋಣಿಸಿದಂತೆಯೇ ಭಾಸವಾಗುತ್ತದೆ!
ಈ ಹೋರಾಟದಲ್ಲಿ ಅಮರೇಶ್ವರ ಬಲಿಯಾದ ನಂತರದಲ್ಲಿ ಆತನ ಮಡದಿ ಮಕ್ಕಳಿಬ್ಬರನ್ನು ಅವುಚಿಕೊಂಡು ಅಮರಾಪುರಕ್ಕೆ ಬರುತ್ತಾಳೆ. ಅಲ್ಲಿ ಕೂಲಿನಾಲಿ ಮಾಡಿ ಮಕ್ಕಳಾದ ಅರ್ಕೇಶ್ವರ ಮತ್ತ ಸಂಕೇಶ್ವರನನ್ನು ಸಾಕಿ ಸಲಹುತ್ತಾಳೆ. ಮುಂದೆ ಅರ್ಕೇಶ್ವರ ಪೈಲಟ್ ತರಬೇತಿ ಪಡೆದರೆ, ಸಂಕೇಶ್ವರ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಹೊರುತ್ತಾನೆ. ತರಬೇತಿ ಪಡೆದ ಅರ್ಕೇಶ್ವರ ಊರಿಗೆ ವಾಪಾಸಾಗುವ ಹೊತ್ತಿಗೆಲ್ಲ ಸಹೋದರ ಸಂಕೇಶ್ವರ ಕೊಲೆಕೇಸಲ್ಲಿ ಜೈಲು ಪಾಲಾಗಿರುತ್ತಾನೆ. ಆತ ಸಾಯಲು ಕಾರಣವೇನು? ಅದಕ್ಕೆ ಅರ್ಕೆಶ್ವರ ಹೇಗೆ ರಿವೇಂಜು ತೀರಿಸಿಕೊಳ್ಳುತ್ತಾನೆಂಬುದನ್ನು ಹಲವಾರು ಕೊಂಬೆ ಕೋವೆಗಳ ಕಥಾನಕದ ಮೂಲಕ ಚಂದ್ರು ನಿರೂಪಿಸಲು ನೋಡಿದ್ದಾರೆ.
 ಈ ನಡುವೆ ಮತ್ತೊಂದಷ್ಟು ಪಾತ್ರಗಳು ಕಬ್ಜಾ ಕ್ವಾನ್ವಾಸಿನಲ್ಲಿ ಕಾಣಿಸಿಕೊಳ್ಳುತ್ತವೆ. ಶ್ರೀಯಾ ಶರಣ್ ರಾಜಮನೆತನದ ಮಧುಮತಿಯಾಗಿ ಅರ್ಕೇಶ್ವರನ ಬದುಕಿಗೆ ಪ್ರವೇಶಿಸುತ್ತಾಳೆ. ಆಮೇಲೇ ಏನೇನಾಗುತ್ತದೆಂಬ ಪ್ರಶ್ನೆಗೆ ಖುದ್ದು ಚಂದ್ರು ಅವರಲ್ಲಿಯೂ ಗೊಂದಲಗಳಿರಬಹುದು. ಆ ಗೊಂದಲಗಳೇ ಸ್ಕ್ರಿಫ್ಟುಉ, ಸ್ಕ್ರೀನ್ ಪ್ಲೇ, ಪಾತ್ರ ಸೃಷ್ಟಿ ಮುಂತಾದ ಮಹತ್ವದ ಅಂಶಗಳನ್ನು ಆವರಿಸಿಕೊಂಡಿವೆ. ಹೆಜ್ಜೆ ಹೆಜ್ಜೆಗೂ ಪ್ರೇಕ್ಷಕರನ್ನು ಕೊರತೆಗಳು ಎದುರಾಗುತ್ತವೆ. ಗೊಂದಲಗಳು ಕಾಡುತ್ತವೆ. ಕೆಲ ಪಾತ್ರಗಳ ಚಹರೆಗಳೇ ಅಬಾಸದಂತಿವೆ. ಅಮ್ಮನ ಪಾತ್ರ ನಿರ್ವಹಿಸಿದವರು ಅಕ್ಕ ತಂಗಿಯರಂತೆ ಕಾಣಿಸುತ್ತಾರೆ. ಕೆಲವೊಮ್ಮೆ ಆರ್ಭಟವೂ ಕಾಮಿಡಿಯಂತೆ ಭಾಸವಾಗುತ್ತದೆ. ಶ್ರೀಯಾ ಶರಣ್ ಪಾತ್ರದ ಅಮ್ಮನ ಕ್ಯಾರೆಕ್ಟರ್ ಖಾಸಾ ಅಕ್ಕನಂತೆ ಕಾಣಿಸುತ್ತೆ. ಅಳುವನ್ನು ಬಿಟ್ಟರೆ ಆ ಪಾತ್ರದ ಬಾಯಿಂದ ಒಂದೇ ಒಂದು ಡೈಲಾಗೂ ಹೊರಬರುವುದಿಲ್ಲ!
ಇತ್ತೀಚಿನವರೆಗೂ ಕನ್ನಡದ ಸಿನಿಮಾ ಮಂದಿ ಬೇರೆ ಭಾಷೆಗಳ ಸಿನಿಮಾ ನಕಲು ಮಾಡುತ್ತಾರೆಂಬ ಆರೋಪವಿತ್ತು. ಆದರೆ, ಆರ್ ಚಂದ್ರು ಅಂಥಾ ಆರೋಪದಿಂದ ಚಿತ್ರರಂಗವನ್ನು ಪಾರುಗಾಣಿಸಿದ್ದಾರೆ. ಯಾಕೆಂದರೆ, ಅವರು ಕನ್ನಡದ ಕೆಜಿಎಫ್ ಅನ್ನೇ ಕಾಪಿ ಮಾಡಿದ್ದಾರೆ. ಈ ನಕಲಿನ ವಿಚಾರದಲ್ಲಿಯೂ ದೇಸೀ ಮನಃಸ್ಥಿತಿ ಪ್ರದರ್ಶಿಸಿರುವ ಚಂದ್ರುವನ್ನು ಅಭಿನಂದಿಸಲೇಬೇಕು. ಇನ್ನುಳಿದಂತೆ, ಕೊರೋನಾ ಕಾಲದಲ್ಲಿ ಖಾಲಿ ಕುಂತಿದ್ದ ಚಂದ್ರುಗೆ ಕೆಜಿಎಫ್ ಸಿಂಡ್ರೋಮಿನಂತೆ ಕಾಡಿದಂತಿದೆ. ಅದು ಕಬ್ಜಾದ ಕ್ಲೈಮ್ಯಾಕ್ಸಿನಲ್ಲಿಯೂ ಹಣಕಿ ಹಾಕಿದೆ. ಉಪ್ಪಿಯನ್ನು ಹೊಡೆದುರುಳಿಸಲು ಪೊಲೀಸು ಪಡೆ ದಂಡೆತ್ತಿ ಬಂದಾಗ, ಏಕಾಏಕಿ ಶಿವಣ್ಣನ ಪಾತ್ರ ಎಲ್ಲವನ್ನೂ ಕಬ್ಜಾ ಮಾಡಿಕೊಂಡು ಬಿಡುತ್ತಾರೆ. ಪರದೆಯ ಮೇಲೆ ಕಬ್ಜಾ ಪಾರ್ಟ್2 ಸೂಚನೆ ಮೂಡಿಕೊಳ್ಳುತ್ತೆ. ಅದುವರೆಗಿನ ತಲೆನೋವುಗಳನ್ನು ತಡೆದುಕೊಂಡು ನಿತ್ರಾಣನಾದ ಪ್ರೇಕ್ಷಕ ಪ್ರಭುವಿನ ಸಿಟ್ಟಿಗೆ ಅದುವೇ ತುಪ್ಪ ಸುರುವುತ್ತದೆ. ಇದೆಲ್ಲದರಾಚೆಗೆ ಕಥೆ ಚಿತ್ರಕಥೆ, ಡೈಲಾಗ್ ಮುಂತಾದವುಗಳ ಬಗ್ಗೆ ಮುತುವರ್ಜಿ ವಹಸಿದ್ದರೆ ಕಬ್ಜಾ ಎಂಬುದು ಪ್ರೇಕ್ಷಕರ ಪಾಲಿಗೆ ಕಜ್ಜಾಯವಾಗುವ ಸಾಧ್ಯತೆಗಳಿದ್ದವು. ಆದರೆ, ಆ ಕಜ್ಜಾಯ ಸೀದು ಹೋದ ಕಮಟು ಮಾತ್ರವೇ ಚಿತ್ರಮಂದಿರಗಳನ್ನು ಆವರಿಸಿಕೊಂಡಿದೆ. ಆರ್ ಚಂದ್ರುವಿನ ಭಂಡ ಧೈರ್ಯಕ್ಕೊಂದು ಬಹುಪರಾಕ್ ಹೇಳುತ್ತಾ ಪ್ರೇಕ್ಷಕರು ನಿರ್ಗಮಿಸುವಲ್ಲಿಗೆ ಕಬ್ಜಾ ಕಥನ ಸಮಾಪ್ತಿಯಾಗುತ್ತೆ!
ರೋಚಕ ಕಥೆಯೊಳಗೆ ಏನೇನಿದೆ?
ಇದೀಗ ಕನ್ನಡ ಚಿತ್ರರಂಗ ಹೊಸಬರ ಆಗಮದಿಂದ, ಹೊಸಾ ಬಗೆಯ ಕಥಾನಕಗಳಿಂದ ಕಳೆಗಟ್ಟಿಕೊಳ್ಳುತ್ತಿದೆ. ಹೀಗೆ ಆಗಮಿಸುವ ಹೊಸಾ ತಂಡಗಳ ಬಗ್ಗೆ ಪ್ರೇಕ್ಷಕರ ವಲಯದಲ್ಲಿಯೂ ಅನೂಹ್ಯವಾದೊಂದು ಪ್ರೀತಿ ಇದ್ದೇ ಇದೆ. ಹೆಚ್ಚೇನೂ ಅಬ್ಬರವಿಲ್ಲದೆ, ಕೇಲವ ಕಂಟೆಂಟಿನ ಕಸುವಿನಿಂದಲೇ ಇಂಥಾ ಒಂದಷ್ಟು ಸಿನಿಮಾಗಳು ಪ್ರೇಕ್ಕರಿಗೆ ಹಿಡಿಸುತ್ತಿವೆ. ಒಂದಿ ಮಟ್ಟಿನ ಗೆಲುವನ್ನೂ ದಾಖಲಿಸುತ್ತಿವೆ. ಆರಂಭದಿಂದಲೂ ಇಂಥಾದ್ದೊಂದು ಪಾಸಿಟಿವ್ ವಾತಾವರಣದಲ್ಲಿ ಸಾಗಿ ಬಂದಿದ್ದ ಚಿತ್ರ ಒಂದು ರಾಬರಿ ಕಥೆ. ಗೋಪಾಲ್ ಹಳ್ಳೇರ ಹೊನ್ನಾವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವೀಗ ಬಿಡುಗಡೆಗೊಂಡಿದೆ. ಅಲ್ಲಲ್ಲಿ ಮೆಚ್ಚುಗೆ [...]
The post ರೋಚಕ ಕಥೆಯೊಳಗೆ ಏನೇನಿದೆ? appeared first on ಶೋಧ ನ್ಯೂಸ್ - Shodha News.
ಇದೀಗ ಕನ್ನಡ ಚಿತ್ರರಂಗ ಹೊಸಬರ ಆಗಮದಿಂದ, ಹೊಸಾ ಬಗೆಯ ಕಥಾನಕಗಳಿಂದ ಕಳೆಗಟ್ಟಿಕೊಳ್ಳುತ್ತಿದೆ. ಹೀಗೆ ಆಗಮಿಸುವ ಹೊಸಾ ತಂಡಗಳ ಬಗ್ಗೆ ಪ್ರೇಕ್ಷಕರ ವಲಯದಲ್ಲಿಯೂ ಅನೂಹ್ಯವಾದೊಂದು ಪ್ರೀತಿ ಇದ್ದೇ ಇದೆ. ಹೆಚ್ಚೇನೂ ಅಬ್ಬರವಿಲ್ಲದೆ, ಕೇಲವ ಕಂಟೆಂಟಿನ ಕಸುವಿನಿಂದಲೇ ಇಂಥಾ ಒಂದಷ್ಟು ಸಿನಿಮಾಗಳು ಪ್ರೇಕ್ಕರಿಗೆ ಹಿಡಿಸುತ್ತಿವೆ. ಒಂದಿ ಮಟ್ಟಿನ ಗೆಲುವನ್ನೂ ದಾಖಲಿಸುತ್ತಿವೆ. ಆರಂಭದಿಂದಲೂ ಇಂಥಾದ್ದೊಂದು ಪಾಸಿಟಿವ್ ವಾತಾವರಣದಲ್ಲಿ ಸಾಗಿ ಬಂದಿದ್ದ ಚಿತ್ರ ಒಂದು ರಾಬರಿ ಕಥೆ. ಗೋಪಾಲ್ ಹಳ್ಳೇರ ಹೊನ್ನಾವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವೀಗ ಬಿಡುಗಡೆಗೊಂಡಿದೆ. ಅಲ್ಲಲ್ಲಿ ಮೆಚ್ಚುಗೆ ಗಳಿಸುತ್ತಾ, ಮತ್ತೆ ಕೆಲವೊಂದು ಬಿಂದುಗಳಲ್ಲಿ ರೇಜಿಗೆ ಹುಟ್ಟಿಸುವಂಥಾ ಮಿಶ್ರ ಭಾವವೊಂದು ನೋಡುಗರನ್ನು ಆವರಿಸಿಕೊಂಡಿದೆ!
ನಿರ್ದೇಶಕರು ಅತ್ಯಂತ ನಾಜೂಕಿನಿಂದ, ಜಾಣ್ಮೆಯಿಂದ ಈ ಸಿನಿಮಾವನ್ನು ಪ್ರೇಕ್ಷಕರ ಮನಸಲ್ಲಿ ಪ್ರತಿಷ್ಟಾಪಿಸಿದ್ದರು. ಆ ನಂತರ ಒಂದಷ್ಟು ರೀತಿಯಲ್ಲಿ ನಾನಾ ಹೊಳಹುಗಳನ್ನು ಹೊಮ್ಮಿಸುತ್ತಾ, ಈ ಚಿತ್ರ ತಾನೇತಾನಾಗಿ ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು. ಅದರಲ್ಲಿಯೂ ಇದೊಂದು ಸತ್ಯ ಘಟನೆಯಾಧಾರಿತ ಚಿತ್ರ ಎಂಬ ಅಂಶ ಜಾಹೀರಾಗುತ್ತಲೇ ರೋಚಕ ಕೌತುಕವೊಂದು ಎಲ್ಲರ ಎದೆತಬ್ಬಿಕೊಂಡಿತ್ತು. ಇಂಥಾ ಒಂದು ರಾಬರಿಯ ಕಥೆ ಅಚ್ಚರಿದಾಯಕವಾಗಿ ತೆರೆದುಕೊಳ್ಳುತ್ತದೆ. ಇಂಥಾ ಕಥನವನ್ನು ಕೈಗೆತ್ತಿಕೊಂಡ ಹೊಸಬರ ತಂಡಕ್ಕೆ ಮೆಚ್ಚುಗೆ ಸೂಚಿಸುವಂತೆ ಪ್ರೇರೇಪಿಸುತ್ತದೆ. ಒಂದೊಂದು ಬಿಂದುವಿನಲ್ಲಿ ಗಾಢ ಗೊಂಡಲ ಹುಟ್ಟಿಸಿ, ಅದಕ್ಕೆಲ್ಲ ಉತ್ತರ ಸಿಗದೆ ತತ್ತರಿಸುವ ಸ್ಥಿತಿಯೂ ನಿರ್ಮಾಣವಾಗುತ್ತದೆ!
ರಾಬರಿಯ ರೋಚಕತೆಯನ್ನೇ ಪ್ರಧಾನವಾಗಿಸುವ ಭರದಲ್ಲಿ ನಿರ್ದೇಶಕರು ಮಿಕ್ಕ ವಿಚಾರಗಳನ್ನು ಅಪೂರ್ಣವಾಗಿಸಿದ್ದಾರೆ. ಹಳ್ಳಿ, ಉತ್ತರ ಕರ್ನಾಟಕದ ಭಾಷೆಯೆಲ್ಲ ಹಿತವೆನಿಸುತ್ತಲೇ, ಅಂದನವಾಡಿ ಟೀಚರ್ ಮತ್ತು ನಾಯಕನ ಸರಸ ಸಲ್ಲಾಪವೇ ಮೇಳೈಸುತ್ತದೆ. ಆ ಅಬ್ಬರದ ನಡುವೆ ಆ ಹಳ್ಳಿಯನ್ನು ಕಾಡುತ್ತಿರುವ ಸಮಸ್ಯೆ ಯಾವುದೆಂಬುದೇ ನಿರ್ದೇಶಕರಿಗೆ ಮರೆತು ಹೋಗುತ್ತೆ. ಇದರ ನಡುವೆ ಒಂದಷ್ಟು ಪಾತ್ರಗಳು ಸೃಷ್ಟಿಯಾಗಿರೋದಕ್ಕೆ ಕಾರಣಗಳೇ ಗೊತ್ತಾಗುವುದಿಲ್ಲ. ಬರಡು ಭೂಮಿಯಲ್ಲಿ ಅದೇನೋ ಕ್ರಾಂತಿ ಮಾಡಲು ಹೊರಡೋ ಅಜ್ಜಯ್ಯ, ಆರಂಭದಲ್ಲಿ ಹೋರಾಟಗಾರನಂತೆ ಕಾಣಿಸುತ್ತಾನೆ. ಅಂಥಾ ಅಜ್ಜಯ್ಯ ಆ ನಂತರ ಕಾಣಿಸೋದು ಹೆಣವಾಗಿಯಷ್ಟೇ. ಆದರೆ ಅದಕ್ಕೆ ಕಾರಣವೇನೆಂಬುದು ಯಾರಿಗೂ ಗೊತ್ತಾಗುವುದಿಲ್ಲ. ಈ ಪ್ರಶ್ನೆ ತಲೆಯಲ್ಲಿ ಮಿಜಿಗುಡುವಾಗಲೇ ಅಜ್ಜಯ್ಯನ ಸಮಾಧಿ ಗೋಚರಿಸಿ, ಎಲ್ಲ ಪ್ರಶ್ನೆಗಳೂ ಅದರೊಳಗೆ ತೂರಿಕೊಳ್ಳುತ್ತವೆ.
ಈ ಚಿತ್ರದ ಹೀರೋ ರಣಧೀರ್ ಗೌಡ ಹೊಸಬ. ಆತನಿಗೆ ವಿಪರೀತ ಬಿಲ್ಡಪ್ ಮತ್ತು ಮಾಸ್ ಡೈಲಾಗುಗಳಿವೆ. ಚಿತ್ರದುದ್ದಕ್ಕೂ ಆತ ಆ ಭಾರವನ್ನು ತಡೆಯಲಾರದೆ ಕಂಗಾಲಾದಂತೆ ಕಾಣಿಸುತ್ತೆ. ಡೈಲಾಗ್ ಡೆಲಿವರಿ, ನಟನೆ ಸೇರಿದಂತೆ ಎಲ್ಲದರಲ್ಲಿಯೂ ರಣಧೀರ್ ಇನ್ನಷ್ಟು ಪಳಗಬೇಕಿದೆ. ಈತನಿಗೆ ಸರಿಯಾಗಿ ನಾಯಕಿ ರಿಶ್ವಿ ಭಟ್ ಕೂಡಾ ಅಷ್ಟಕ್ಕಷ್ಟೇ. ನಟನೆಯೆಂಬುದನ್ನು ಆಕೆ ಇನ್ನೂ ಪಳಗಿಸಿಕೊಳ್ಳಬೇಕಿದೆ. ಇದೆಲ್ಲದರಾಚೆಗೆ ಒಂದು ರಾಬರಿ ಕಥೆಯನ್ನು ಸಹ್ಯವಾಗಿಸೋದು ಕಾಮಿಡಿ ಕಚಗುಳಿ. ಶಿವರಾಜ್ ಕೆಆರ್ ಪೇಟೆ, ಸಂಜು ಬಸಯ್ಯ, ತಬಲಾ ನಾಣಿ, ಜಹಾಂಗೀರ್ ಮುಂತಾದವರ ಕಾಮಿಡಿ ಗ್ಯಾಂಗೇ ಇಲ್ಲಿದೆ. ಅವರೆಲ್ಲರ ಪಾತ್ರಗಳೂ ಮಜವಾಗಿವೆ. ಅದರಲ್ಲಿಯೂ ಶಿವರಾಜ್ ಕೆಆರ್ ಪೇಟೆ ಪಾತ್ರ ಮಸ್ತಾಗಿದೆ. ಆ ಪಾತ್ರವೇ ಪೇಲವ ಹೀರೋಗೆ ಒಂದಷ್ಟು ರಂಗು ತುಂಬುತ್ತದೆ. ಒಟ್ಟಾರೆಯಾಗಿ ಪರಿಣಾಮಕಾರಿಯಾಗಬಹುದಾಗಿದ್ದ ರಾಬರಿ ಕಥೆ ಒಂದರ್ಥದಲ್ಲಿ ಗಾಬರಿ ಹುಟ್ಟಿಸುತ್ತೆ!
ಜನರನ್ನು ಮುಟ್ಟುವ ಹಾದಿಯಲ್ಲೇ ಮುಗ್ಗರಿಸಿದ ಸ್ಥಿತಿ!
ಸಿನಿಮಾ ಎಂಬುದು ಅನಕ್ಷರಸ್ಥರನ್ನೂ ನೇರವಾಗಿ ತಲುಪಿಕೊಳ್ಳಬಲ್ಲ ಪರಿಣಾಮಕಾರಿ ಮಾಧ್ಯಮ. ದುರಂತವೆಂದರೆ, ಕೆಲವೊಂದಷ್ಟು ಸಿನಿಮಾಗಳ ಬಿಟ್ಟರೆ ಕನ್ನಡದಂಥಾ ಭಾಷೆಗಳ ಬಹುತೇಕ ಎಲ್ಲ ಸಿನಿಮಾಗಳೂ ಕೂಡಾ ಕಮರ್ಶಿಯಲ್ ಕಂಟೆಂಟುಗಳ ಸುತ್ತವೆ ಗಿರಕಿ ಹೊಡೆಯುತ್ತಿರುತ್ತವೆ. ಇದೆಲ್ಲದರ ನಡುವೆ ಕ್ರಾಂತಿಯಂಥಾ ಸಾಮಾಜಿಕ ಕಥನದ ಚಿತ್ರ ಬಂದರೂ ಕೂಡಾ, ಅದರ ಮೇಲೆ ನಿರೀಕ್ಷೆಯಿಟ್ಟುಕೊಂಡಿದ್ದೇ ಭ್ರಾಂತಿ ಅನ್ನಿಸಿಬಿಡುತ್ತೆ. ಇಂಥಾ ವಾತಾವರಣದಲ್ಲಿ ಚಿತ್ರವೊಂದು ಅಪ್ಪಟ ಸಾಮಾಜಿಕ ಕಥಾ ಹಂದರದೊಂದಿಗೆ ರೂಪುಗೊಂಡಿದೆಯೆಂದರೆ, ರಾಜಕಾರಣದ ಸ್ಥಿತಿಗತಿಗಳತ್ತ ಕಣ್ಣು ಹಾಯಿಸಿದೆ ಎಂದರೆ ಅಚ್ಚರಿ ಮೂಡಿಕೊಳ್ಳದಿರಲು ಸಾಧ್ಯವೇ? ಈ ಕಾರಣದಿಂದಲೇ ಒಂದಷ್ಟು ಗಮನ [...]
The post ಜನರನ್ನು ಮುಟ್ಟುವ ಹಾದಿಯಲ್ಲೇ ಮುಗ್ಗರಿಸಿದ ಸ್ಥಿತಿ! appeared first on ಶೋಧ ನ್ಯೂಸ್ - Shodha News.
ಸಿನಿಮಾ ಎಂಬುದು ಅನಕ್ಷರಸ್ಥರನ್ನೂ ನೇರವಾಗಿ ತಲುಪಿಕೊಳ್ಳಬಲ್ಲ ಪರಿಣಾಮಕಾರಿ ಮಾಧ್ಯಮ. ದುರಂತವೆಂದರೆ, ಕೆಲವೊಂದಷ್ಟು ಸಿನಿಮಾಗಳ ಬಿಟ್ಟರೆ ಕನ್ನಡದಂಥಾ ಭಾಷೆಗಳ ಬಹುತೇಕ ಎಲ್ಲ ಸಿನಿಮಾಗಳೂ ಕೂಡಾ ಕಮರ್ಶಿಯಲ್ ಕಂಟೆಂಟುಗಳ ಸುತ್ತವೆ ಗಿರಕಿ ಹೊಡೆಯುತ್ತಿರುತ್ತವೆ. ಇದೆಲ್ಲದರ ನಡುವೆ ಕ್ರಾಂತಿಯಂಥಾ ಸಾಮಾಜಿಕ ಕಥನದ ಚಿತ್ರ ಬಂದರೂ ಕೂಡಾ, ಅದರ ಮೇಲೆ ನಿರೀಕ್ಷೆಯಿಟ್ಟುಕೊಂಡಿದ್ದೇ ಭ್ರಾಂತಿ ಅನ್ನಿಸಿಬಿಡುತ್ತೆ. ಇಂಥಾ ವಾತಾವರಣದಲ್ಲಿ ಚಿತ್ರವೊಂದು ಅಪ್ಪಟ ಸಾಮಾಜಿಕ ಕಥಾ ಹಂದರದೊಂದಿಗೆ ರೂಪುಗೊಂಡಿದೆಯೆಂದರೆ, ರಾಜಕಾರಣದ ಸ್ಥಿತಿಗತಿಗಳತ್ತ ಕಣ್ಣು ಹಾಯಿಸಿದೆ ಎಂದರೆ ಅಚ್ಚರಿ ಮೂಡಿಕೊಳ್ಳದಿರಲು ಸಾಧ್ಯವೇ? ಈ ಕಾರಣದಿಂದಲೇ ಒಂದಷ್ಟು ಗಮನ ಸೆಳೆದಿದ್ದ ಚಿತ್ರ `ಪ್ರಜಾರಾಜ್ಯ’.
 ಒಂದು ಮಟ್ಟಿಗೆ ಸಾಮಾಜಿಕ ಕಾಳಜಿ ಹೊಂದಿರುವ ಕಥಾ ವಸ್ತುವನ್ನು ನಿರ್ದೇಶಕ ವಿಜಯ್ ಭಾರ್ಗವ್ ಮುಟ್ಟಿದ್ದಾರೆ. ಇದಕ್ಕೆ ಕಥೆ ಒದಗಿಸಿ, ಮುಖ್ಯ ಪಾತ್ರದಲ್ಲಿ ವರದರಾಜ್ ನಟಿಸಿದ್ದಾರೆ. ಈಗಿನ ಸ್ಥಿತಿಗತಿಗಳನ್ನೊಮ್ಮೆ ಗಮನಿಸಿದರೆ ಪ್ರಜಾಪ್ರಭುತ್ವದ ನೆರಳಲ್ಲಿ ಕಳ್ಳ ಕಾಕರೇ ನಾಯಕರಾಗಿ ಮೆರೆಯುತ್ತಿದ್ದಾರೆ. ಜನರಿಗೆ ವರವಾಗಬಲ್ಲ ಅಧಿಕಾರದ ಮರೆಯಲ್ಲಿ ಸಿಕ್ಕಿದ್ದನ್ನೆಲ್ಲ ಕೆರೆದು ಸ್ವಂತ ತಿಜೋರಿ ತುಂಬಿಸಿಕೊಳ್ಳುವ ಖದೀಮರೇ ಮೆರೆಯುತ್ತಿದ್ದಾರೆ. ಆಳುವವರೂ ಅಂಥವರೇ, ಅವರ ಕೈಕೆಳಗೆ ಕೆಲಸ ಮಾಡುವ ಅಧಿಕಾರಿ ವರ್ಗವೂ ಕೂಳಿಬಾಕ ಸಂತಾನವೇ. ಇಂಥಾ ವ್ಯವಸ್ಥೆಯ ಮೇಲೆ ಕನ್ನಡಿ ಹಿಡಿದಂಥಾ ಕಥೆ ಪ್ರಜಾ ರಾಜ್ಯದ್ದು.
ದೇವರಾಜ್, ಅಚ್ಯುತ್ ಕುಮಾರ್, ಸುಧಾರಾಣಿ, ವರದರಾಜ್ ಮುಂತಾದವರು ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಒಟ್ಟಾರೆ ಸಿನಿಮಾದ ಮೇಕಿಂಗ್ ಗುಣಮಟ್ಟ, ಛಾಯಾಗ್ರಹಣ, ಸಂಗೀತವೆಲ್ಲವೂ ತಕ್ಕಮಟ್ಟಿಗಿದೆ. ಸರ್ಕಾರಿ ಆಸ್ಪತ್ರೆಯಿಲ್ಲದೆ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗೋ ಬಡ ಜನರ ಸಂಕಟ, ರೈತಾಪಿಗಳ ಒಡಲ ಆರ್ತನಾದ ಸೇರಿದಂತೆ ಜನಸಾಮಾನ್ಯರಿಗೆ ನೇರವಾಗಿ ಕನೆಕ್ಟಾಗುವ ಅಂಶಗಳು ಇಲ್ಲಿವೆ. ಆದರೆ ನಿರ್ದೇಶಕರಿಗೆ ಅಲ್ಲಲ್ಲಿ ಸೂತ್ರ ತಪ್ಪಿದೆ. ಕಥೆಯನ್ನು ಬಿಗಿಯಾಗಿಸಿ, ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದರೆ ಪ್ರಜಾರಾಜ್ಯ ಪ್ರಜೆಗಳ ಮನಸು ಗೆಲ್ಲಬಹುದಿತ್ತು. ಆದರೆ, ಈ ಸಿನಿಮಾ ಅದರ ಹತ್ತಿರದ ಹಾದಿಯಲ್ಲಿಯೇ ಬಸವಳಿದು ಮಂಡಿಯೂರಿದೆ ಎಂಬಲ್ಲಿಗೆ ಪ್ರಜಾರಾಜ್ಯದ ಕಥೆ ಸಮಾಪ್ತಿಯಾಗುತ್ತೆ!
ಮನಸೆಂಬೋ ಕಡಲಿಗೆ ವ್ಯಾಕುಲಗಳ ಗಾಳ ಇಳಿದಾಗ…
ಭಾರ್ಗವ ಪಟೇಲ್ ವರುಣ್ ರಾಜ್ ನೆಲೆ ನಿಲ್ಲೋದು ಗ್ಯಾರೆಂಟಿ!ವರ್ಷದ ಮೇಲೆ ವರ್ಷಗಳು ಮಗುಚಿಕೊಂಡರೂ, ಸಿನಿಮಾವೊಂದರತ್ತ ಕೌತುಕವೊಂದು ಮುಕ್ಕಾಗದಂತೆ ಉಳಿದುಕೊಳ್ಳೋದಿದೆಯಲ್ಲಾ? ಅದು ಅಪರೂಪದಲ್ಲೇ ಅಪರೂಪದ ವಿದ್ಯಮಾನ. ಸುಧೀರ್ಘ ಕಾಲದವರೆಗೂ ಅಂಥಾ ಭಾವವನ್ನು ಪ್ರೇಕ್ಷಕರ ಮನಸಲ್ಲಿ ಕಾಯ್ದಿಟ್ಟುಕೊಳ್ಳೋದು ಹೆಚ್ಚಿನ ಚಿತ್ರಗಳಿಗೆ ಸಾಧ್ಯವಾಗೋದಿಲ್ಲ. ಆ ದಿಸೆಯಿಂದ ನೋಡ ಹೋದರೆ ಪನ್ನಗ ಸೋಮಶೇಖರ್ ನಿರ್ದೇಶನದ `ಕಡಲ ತೀರದ ಭಾರ್ಗವ’ ಚಿತ್ರದ್ದು ನಿಜಕ್ಕೂ ಅಚ್ಚರಿದಾಯಕ ಹೆಜ್ಜೆಗಳೇ. ಟೀಸರ್, ಟ್ರೈಲರ್‍ನಲ್ಲಿ ಕಥೆಯ ಬಗ್ಗೆ ಸಣ್ಣ ಸುಳಿವುನ್ನೂ ಬಿಟ್ಟು ಕೊಡದೆಯೂ, ಕ್ರೇಜ್ ನಿಗಿನಿಗಿಸುವಂತೆ ಮಾಡಿದ ಹೆಗ್ಗಳಿಕೆಯೂ ಭಾರ್ಗವನಿಗೆ [...]
The post ಮನಸೆಂಬೋ ಕಡಲಿಗೆ ವ್ಯಾಕುಲಗಳ ಗಾಳ ಇಳಿದಾಗ… appeared first on ಶೋಧ ನ್ಯೂಸ್ - Shodha News.
ಅಷ್ಟಕ್ಕೂ ಮನಸಿಗೆ ಸಂಬಂಧಿಸಿದ ವಿಚಾರಗಳೇ ಇಂಟರೆಸ್ಟಿಂಗ್ ಅನ್ನಿಸಿಕೊಳ್ಳುತ್ತವೆ. ಅದರ ಒಡಲಿನಲ್ಲಿರುವ ಭಾವಗಳು, ತುಡಿತ, ಸಿಟ್ಟು ದ್ವೇಷ ಮತ್ತು ಯಾವ ನಿಲುಕಿಗೂ ಸಿಗದಂಥಾ ನಾನಾ ವ್ಯಾಧಿಗಳಿಗೆ ಕಣ್ಣಾದ ಒಂದಷ್ಟು ಚಿತ್ರಗಳು ಈವರೆಗೂ ತೆರೆಕಂಡಿವೆ. ಆದರೆ, ಕಡಲ ತೀರದ ಭಾರ್ಗವ ಚಿತ್ರದ ವಿಚಾರದಲ್ಲಿ ನಿರ್ದೇಶಕರು ಮನೋಲೋಕದಲ್ಲಿ ಆಳವಾಗಿ ಮಿಂದೆದ್ದಿದ್ದಾರೆ. ಬಹುಶಃ ಕಥೆ ಒಂದಷ್ಟು ಬಿಗುವಾಗಿದೆ ಅನ್ನಿಸಿದರೆ ಅದಕ್ಕೆ ಅಂಥಾ ಸಿದ್ಧತೆಗಳೂ ಪ್ರಧಾನ ಕಾರಣವಾಗಿದ್ದಿರಬಹುದೇನೋ. ಹಾಗಾದರೆ ಈ ಸಿನಿಮಾದ ಅಸಲೀ ಕಥೆಯೇನು? ಅದರಲ್ಲಿನ ಪಾತ್ರಗಳ ಚಹರೆಗಳು ಹೇಗಿವೆ? ಇಷ್ಟು ಕಾಲ ಅಷ್ಟೊಂದು ತನ್ಮಯತೆಯಿಂದ ಚಾಲ್ತಿಯಲ್ಲಿದ್ದ ಕಾಯುವಿಕೆಯನ್ನು ಈ ಸಿನಿಮಾ ತೃಪ್ತವಾಗಿಸುವಂತಿದೆಯಾ? ಇಷ್ಟೆಲ್ಲ ಪ್ರಶ್ನೆಗಳಿಗೆ ಕಥೆಯಷ್ಟೇ ಅಸಂಗತವೆನ್ನಿಸುವ ಉತ್ತರಗಳು ಎದುರಾಗುತ್ತವೆ.
ಕಡಲ ತಡಿಯಲ್ಲಿ ಒಬ್ಬರಿಗೊಬ್ಬರು ಆತುಕೊಂಡೇ ಬೆಳೆದ ಭರತ ಮತ್ತು ಭಾರ್ಗವರೆಂಬ ಗೆಳೆಯರ ಮೂಲಕ ಕಥೆ ತೆರೆದುಕೊಳ್ಳುತ್ತೆ. ಎಳವೆಯಿಂದಲೇ ಜೀವಕ್ಕಂಟಿಕೊಂಡಂತೆ ಬೆಳೆದ ಈ ಇಬ್ಬರೂ ಯೌವನಾವಸ್ಥೆ ತಲುಪುತ್ತಲೇ ಇಂಪನಾ ಎಂಬ ಹುಡುಗಿಯೊಬ್ಬಳ ಎಂಟ್ರಿ ಯಾಗುತ್ತೆ. ಭಾರ್ಗವ ಭರತನ ಮೇಲೆ ಅದೆಂಥಾ ಸ್ನೇಹವಿಟ್ಟುಕೊಂಡಿರುತ್ತಾನೆಂದರೆ, ಅದರ ನಡುವೆ ಯಾರೆಂದರೆ ಯಾರೂ ಬರುವುದು ಅವನಿಷ್ಟವಾಗೋದಿಲ್ಲ. ಅಂಥಾ ಸ್ನೇಹದ ನಡುವೆ ಚೆಂದದ ಹುಡುಗಿಯ ಪ್ರವೇಶವಾಗಿ, ಭರತ ಆಕೆಯೊಂದಿಗೆ ಪ್ರೀತಿಯಲ್ಲಿ ಬೀಳುವಲ್ಲಿಂದ ಕಥೆ ಬೇರೆ ಬೇರೆ ದಿಕ್ಕುಗಳತ್ತ ಹೊರಳಿಕೊಳ್ಳುತ್ತೆ. ಕಥೆಯ ಕೊಂಬೆ ಕೋವೆಗಳು ಅಚ್ಚರಿದಾಯಕವಾಗಿ ಬೆಳೆದು ನಿಲ್ಲುತ್ತವೆ.
ಮೊದಲೇ ಹೇಳಿದಂತೆ ಇದೊಂದು ಸಂಕೀರ್ಣವಾದ ಕಥೆ. ಪಾತ್ರಗಳೂ ಕೂಡಾ ಅಷ್ಟೇ ಗಟ್ಟಿಯಾಗಿವೆ. ಅದನ್ನು ನಿರ್ವಹಿಸಿದ ಕಲಾವಿದರನ್ನು ಮೆಚಿಕೊಳ್ಳದಿರಲಾಗೋದಿಲ್ಲ. ಅದರಲ್ಲಿಯೂ ವಿಶೇಷವಾಗಿ ಪ್ರಧಾನ ಪಾತ್ರಗಳಾದ ಭರತ್ ಮತ್ತು ಭಾರ್ಗವನನ್ನು ಆವಾಹಿಸಿಕೊಂಡಿರುವ ಭರತ್ ಗೌಡ ಮತ್ತು ಪಟೇಲ್ ವರುಣ್ ರಾಜ್ ಗಮನ ಸೆಳೆಯುತ್ತಾರೆ. ಮೊದಲ ಹೆಜ್ಜೆಯಲ್ಲಿಯೇ ನಟರಾಗಿ ಬಮನ ಸೆಳೆಯತ್ತಾರೆ. ಇನ್ನುಳಿದಂತೆ ಅಕ್ಷರಶಃ ಅಬ್ಬರಿಸುತ್ತಾ, ಆ ಪಾತ್ರವೇ ತಾನಾದಂತೆ ನಟಿಸಿರುವ ಪಟೇಲ್ ವರುಣ್ ರಾಜ್ ಅಂತೂ ಪ್ರೇಕ್ಷಕರನ್ನು ಹಿಡಿದಿಡುತ್ತಾರೆ. ಸಿನಿಮಾ ಮುಗಿಯುವ ಹೊತ್ತಿಗೆಲ್ಲ ನೋಡುಗರ ಮನಸಲ್ಲಿ ಈತ ನಾಯಕನಾಗಿ ನೆಲೆ ಕಂಡುಕೊಳ್ಳುತ್ತಾನೆಂಬ ಭಾವನೆ ಚಿಗಿತುಕೊಳ್ಳುತ್ತದೆ. ಅಷ್ಟರ ಮಟ್ಟಿಗೆ ಅವರ ನಟನೆ ಪರಿಣಾಮಕಾರಿಯಾಗಿದೆ.
ಕಾಡಿನೊಡಲ ನಿಟ್ಟುಸಿರಿಗೆ ಮುಖ್ಯವಾಹಿನಿಯನ್ನು ಮುಟ್ಟಿದ ತೃಪ್ತಿ!
ನೆಲಮೂಲದ ಕಥೆಗಳನ್ನು ಹೆಕ್ಕಿ ತಂದು, ಅದಕ್ಕೆ ತಮ್ಮದೇ ಧಾಟಿಯಲ್ಲಿ ಸಿನಿಮಾ ಫ್ರೇಮು ಹಾಕಿ, ಪ್ರೇಕ್ಷಕರ ಮುಂದಿಡುತ್ತಾ ಅಡಿಗಡಿಗೆ ಅಚ್ಚರಿ ಮೂಡಿಸುತ್ತಿರುವವರು ನಿರ್ದೇಶಕ ಮಂಸೋರೆ. ಇಂಥಾ ಗುಣಗಳಿಂದಲೇ ಕನ್ನಡ ಮಟ್ಟಿಗೆ ಅಪರೂಪದ ನಿರ್ದೇಶಕರೆನ್ನಿಸಿಕೊಂಡಿರುವ ಮಂಸೋರೆ, 19.20.21 ಅಂತೊಂದು ಸಿನಿಮಾಗೆ ಸಜ್ಜಾದಾಗಲೂ ವಿಭಿನ್ನ ಕಥಾನಕವೊಂದರ ನಿರೀಕ್ಷೆಯಿತ್ತು. ಆ ನಂತರದಲ್ಲಿ ಹೆಜ್ಜೆ ಹೆಜ್ಜೆಗೂ ತಾನೇ ತಾನಾಗಿ ಸುದ್ದಿ ಮಾಡುತ್ತಾ ಸಾಗಿ ಬಂದಿದ್ದ ಈ ಚಿತ್ರವೀಗ ಬಿಡುಗಡೆಗೊಂಡಿದೆ. ಕಾಡಿನೊಂದಿಗೆ ನಿಕಟ ನಂಟಿಟ್ಟುಕೊಂಡು, ಅದನ್ನೇ ಜಗತ್ತಾಗಿಸಿಕೊಂಡ ಜನರ ಒಡಲ ಸಂಕಟ, ಅಧಿಕಾರಸ್ಥರ ಬೂಟುಗಾಲುಗಳ ಭರ್ಬರ [...]
The post ಕಾಡಿನೊಡಲ ನಿಟ್ಟುಸಿರಿಗೆ ಮುಖ್ಯವಾಹಿನಿಯನ್ನು ಮುಟ್ಟಿದ ತೃಪ್ತಿ! appeared first on ಶೋಧ ನ್ಯೂಸ್ - Shodha News.
ನೆಲಮೂಲದ ಕಥೆಗಳನ್ನು ಹೆಕ್ಕಿ ತಂದು, ಅದಕ್ಕೆ ತಮ್ಮದೇ ಧಾಟಿಯಲ್ಲಿ ಸಿನಿಮಾ ಫ್ರೇಮು ಹಾಕಿ, ಪ್ರೇಕ್ಷಕರ ಮುಂದಿಡುತ್ತಾ ಅಡಿಗಡಿಗೆ ಅಚ್ಚರಿ ಮೂಡಿಸುತ್ತಿರುವವರು ನಿರ್ದೇಶಕ ಮಂಸೋರೆ. ಇಂಥಾ ಗುಣಗಳಿಂದಲೇ ಕನ್ನಡ ಮಟ್ಟಿಗೆ ಅಪರೂಪದ ನಿರ್ದೇಶಕರೆನ್ನಿಸಿಕೊಂಡಿರುವ ಮಂಸೋರೆ, 19.20.21 ಅಂತೊಂದು ಸಿನಿಮಾಗೆ ಸಜ್ಜಾದಾಗಲೂ ವಿಭಿನ್ನ ಕಥಾನಕವೊಂದರ ನಿರೀಕ್ಷೆಯಿತ್ತು. ಆ ನಂತರದಲ್ಲಿ ಹೆಜ್ಜೆ ಹೆಜ್ಜೆಗೂ ತಾನೇ ತಾನಾಗಿ ಸುದ್ದಿ ಮಾಡುತ್ತಾ ಸಾಗಿ ಬಂದಿದ್ದ ಈ ಚಿತ್ರವೀಗ ಬಿಡುಗಡೆಗೊಂಡಿದೆ. ಕಾಡಿನೊಂದಿಗೆ ನಿಕಟ ನಂಟಿಟ್ಟುಕೊಂಡು, ಅದನ್ನೇ ಜಗತ್ತಾಗಿಸಿಕೊಂಡ ಜನರ ಒಡಲ ಸಂಕಟ, ಅಧಿಕಾರಸ್ಥರ ಬೂಟುಗಾಲುಗಳ ಭರ್ಬರ ನಡೆ ಮತ್ತು ಬದುಕಿನ ನೆಲೆಯನ್ನೇ ಕಳೆದುಕೊಳ್ಳುವ ಬೀತಿಯಲ್ಲಿರುವ ಅಮಾಯಕ ಜೀವಗಳ ಆರ್ತ ಸ್ಥಿತಿ… ಇಂಥಾ ಗಟ್ಟಿ ಕಥಾನಕದೊಂದಿಗೆ ಈ ಸಿನಿಮಾ ಪ್ರೇಕ್ಷಕರನ್ನು ದಾಟಿಕೊಂಡು ಮನಸಿಗಿಳಿಯುವಲ್ಲಿ ಯಶ ಕಂಡಿದೆ.
 ಆ ಒಟ್ಟಾರೆ ಘಟನೆಯ ಒಳಸುಳಿಗಳನ್ನಿಲ್ಲಿ ಮಂಸೋರೇ ಸಮರ್ಥವಾಗಿ ದೃಷ್ಯವಾಗಿಸಿದ್ದಾರೆ. ಆ ಕಾಲಕ್ಕೆ ವಿಠಲ್ ಮಲೆಕುಡಿಯ ಪ್ರಕರಣ ದೇಶ ಮಟ್ಟದಲ್ಲಿ ಸುದ್ದಿಯಾದರೂ, ಅದರ ಒಳಸುಳಿಗಳು ನಮ್ಮದೇ ಜನಸಮುದಾಯಕ್ಕೆ ತಲುಪಿಕೊಂಡಿರಲಿಲ್ಲ. ರಾಜಧಾನಿಯಲ್ಲಿ ಈಸೀ ಭಂಗಿಯಲ್ಲಿ ಕುಳಿತು ಪೆನ್ನು ಹಿಡಿದಿದ್ದ ಭಟ್ಟಂಗಿಗಗಳನೇಕರು ಈ ಪ್ರಕರಣಕ್ಕೆ ತಮಗೆ ತೋಚಿದ ಬಣ್ಣ ಬಳಿದರು. ಪೇಜುಗಟ್ಟಲೆ ವಿಸರ್ಜಿಸಿದ್ದರು. ಮತ್ತೆ ಕೆಲವರು ಅಸಲೀಯತ್ತಿಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದದ್ದು ನಿಜ. ಅದಾಗಿ ಹತ್ತು ವರ್ಷಗಳ ಬಳಿಕ ವಿಠಲ್ ಮಲೆಕುಡಿಯ ಖುಲಾಸೆಯಾದದ್ದೂ ನಡೆದಿತ್ತು. ಆದರೆ, ಈ ಪ್ರಕರಣದ ಗರ್ಭದಲ್ಲಿದ್ದ ಜೀವಗಳ ಅಸಲೀ ಯಾತನೆ ಮಾತ್ರ ಅನಾಥವಾಗಿತ್ತು!
ಬಹುಶಃ ಅಂಥಾ ಅನಾಥ ಸತ್ಯಗಳಿಗೆ, ಅದರ ಆಳದ ಪದರುಗಳಿಗೆ ಕಣ್ಣಾಗದೇ ಇದ್ದಿದ್ದರೆ 19.20.21 ಇಷ್ಟೊಂದು ಪರಿಣಾಮಕಾರಿಯಾಗುತ್ತಿರಲಿಲ್ಲ. ಮಂಸೋರೇ ಈ ಪ್ರಕರಣದ ಪ್ರತೀ ವಿಚಾರಗಳನ್ನೂ ಹೆಕ್ಕಿ ತೆಗೆದಿದ್ದಾರೆ. ಎಲ್ಲಿಯೂ ಸತ್ಯಕ್ಕೆ ಅತಿರಂಜಕತೆಯ ಗ್ರಹಣ ಕವುಚದಂತೆ, ಬಡಪಾಯಿ ಜೀವಗಳ ಎದೆಯ ಸಂಕಟ ಮನೋರಂಜನೆಯ ಸರಕಾಗದಂತೆ ಜಾಗ್ರತೆ ವಹಿಸಿದ್ದಾರೆ. ಇದರ ಫಲವಾಗಿಯೇ ಕಾಡಿನ ಮಕ್ಕಳ ತಲ್ಲಣಗಳೆಲ್ಲವೂ ಅತ್ಯಂತ ಪರಿಣಾಮಕಾರಿಯಾಗಿ ಪ್ರೇಕ್ಷಕರತ್ತ ದಾಟಿಕೊಂಡಿವೆ. ಒಂದಷ್ಟು ಕಠೋರ ಸತ್ಯಗಳೂ ಕೂಡಾ ತಣ್ಣನೆಯ ಧಾಟಿಯಲ್ಲಿಯೇ ಪ್ರೇಕ್ಷಕರನ್ನು ಸೋಕಿವೆ. ಆಲೋಚನೆ ಹಚ್ಚಿ ಕಾಡುತ್ತವೆ. ಇದು ಈ ಸಿನಿಮಾದ ನಿಜವಾದ ಸಾರ್ಥಕ್ಯ.
ಇಂಥಾ ನೈಜ ಘಟನೆಗೆ ದೃಷ್ಯದ ಚೌಕಟ್ಟು ಹಾಕುವಾಗ ನಿರ್ದೇಶಕರ ಮೇಲೆ ಗುರುತರವಾದ ಜವಾಬ್ದಾರಿಗಳಿರುತ್ತವೆ. ಇದ್ದದ್ದನ್ನು ಇದ್ದ ಹಾಗೇ ತೋರಿಸಿದರೆ ಡಾಕ್ಯುಮೆಂಟರಿಯಾಗುವ, ಕ್ರಿಯಾಶೀಲವಾಗಿ ಹೇಳ ಹೋದರೆ ರಂಜಕತೆಯಲ್ಲಿ ಕಳೆದು ಹೋಗುವ ಅಪಾಯವಿರುತ್ತದೆ. ಅದರ ಮಧ್ಯಬಿಂದುವಿನಲ್ಲಿ ನಿಂತು ಒಂದಿಡೀ ಸಿನಿಮಾವನ್ನು ಸರಿದೂಗಿಸೋದಿದೆಯಲ್ಲಾ? ಅದು ನಿಜವಾದ ಸವಾಲು. ಅದನ್ನು ನಿರ್ದೇಶಕ ಮಂಸೋರೇ ಲೀಲಾಜಾಲವಾಗಿಯೇ ನಿಭಾಯಿಸಿದ್ದಾರೆ. ಇದು ನಿರ್ದೇಶನದ ಶಕ್ತಿಯಾದರೆ, ಪ್ರತೀ ಪಾತ್ರಗಳನ್ನು ನಿರ್ವಹಿಸಿರುವ ಕಲಾವಿದರೂ ಕೂಡಾ ಒಬ್ಬರನ್ನೊಬ್ಬರು ಮೀರಿಸುವಂತೆ, ಪ್ರೇಕ್ಷಕರ ಮನಸಲ್ಲಿ ಉಳಿದು ಹೋಗುವಂತೆ ನಟಿಸಿದ್ದಾರೆ.
ಇಲ್ಲಿ ವಿಠಲ್ ಮಲೆಕುಡಿಯನ ಪಾತ್ರವನ್ನು ಶೃಂಗ ಬಿ.ವಿ ನಟಿಸಿದ್ದಾರೆ. ನಟಿಸಿದ್ದಾರೆಂಬುದಕ್ಕಿಂತಲೂ ಆ ಪಾತ್ರವೇ ತಾನಾಗಿದ್ದಾರೆಂಬುದೇ ಸೂಕ್ತವೇನೋ. ಇನ್ನುಳಿದಂತೆ ಬಾಲಾಜಿ ಮನೋಹರ್, ರಾಜೇಶ್ ನಟರಂಗ, ಎಂ.ಡಿ.ಪಲ್ಲವಿ, ಕೃಷ್ಣ ಹೆಬ್ಬಾಳೆ, ವಿಶ್ವಕರ್ಣ, ಸಂಪತ್ ಕುಮಾರ್ ಸೇರಿದಂತೆ ಎಲ್ಲ ಕಲಾವಿದರೂ ಕೂಡಾ ನಟನೆಯಲ್ಲಿ ಫುಲ್ ಮಾಕ್ರ್ಸ್ ಪಡೆದುಕೊಳ್ಳುತ್ತಾರೆ. ಉಸಿರೆತ್ತುವ ಶಕ್ತಿ ಕಳೆದುಕೊಂಡ ಬಡಪಾಯಿ ಕಾಡಿನ ಮಕ್ಕಳ ಆರ್ತ ಕಥೆಗಳೆಲ್ಲವೂ ಈ ಮೂಲಕ ಜನರನ್ನು ಮುಖಾಮುಖಿಯಾಗಿವೆ. ಅದನ್ನು ಶಕ್ತವಾಗಿಸುವಲ್ಲಿ ನಿರ್ದೇಶಕರ ಪಾತ್ರ ಪ್ರಧಾನವಾಗಿದೆ. ಒಟ್ಟಾರೆಯಾಗಿ ಈ ಚಿತ್ರ ಬಹುಕಾಲ ಕಾಡುತ್ತದೆ. ಬೇರೆಯದ್ದೇ ಚಹರೆಗಳ ಮೂಲಕ ಮನಸಲ್ಲಿ ನೆಲೆ ಕಂಡುಕೊಳ್ಳುತ್ತದೆ. ಅದೆಷ್ಟೋ ಕಾಲದ ಕಾಡಿನ ಮಕ್ಕಳ ನಿಟ್ಟುಸಿರೊಂದು ಈ ಮೂಲಕ ಸಮರ್ಥವಾಗಿ ಮುಖ್ಯವಾಹಿನಿಗೆ ದಾಟಿಕೊಂಡು ನಿಸೂರಾಗಿದೆ. ಇಂಥಾದ್ದೊಂದು ಸನಿಮಾ ನಿರ್ಮಾಣ ಮಾಡಲು ಮನಸು ಮಾಡಿದ ದೇವರಾಜ್.ಆರ್ ನಿಜಕ್ಕೂ ಅಭಿನಂದನಾರ್ಹರು!
ಮುಗ್ಧ ಜೀವಗಳ ನೆತ್ತರು ಬೆರೆತ ಕಣ್ಣ ಹನಿಗಳಿವೆ ಇಲ್ಲಿ!
ನಮ್ಮಲ್ಲಿರೋದು ಪ್ರಜಾಪ್ರಭುತ್ವ, ಇಲ್ಲಿ ಪ್ರಜೆಗಳೇ ಪ್ರಭುಗಳು ಎಂಬಿತ್ಯಾದಿ ಸವಕಲು ಸ್ಲೋಗನ್ನುಗಳಿವೆಯಲ್ಲಾ? ಅದೇನಿದ್ದರೂ ಜನಪ್ರತಿನಿಧಿಗಳೆಂಬೋ ಫಟಿಂಗರ ನಾಲಿಗೆ ಕೆರೆತ ನಿವಾರಿಸುವ ಮೂಲಿಕೆಯಾಗಿಯಷ್ಟೇ ಬಳಕೆಯಾಗುತ್ತಿದೆ. ಜನರಿಂದ ಆಯ್ಕೆಯಾಗಿ ಅಧಿಕಾರ ಕೇಂದ್ರ ತಲುಪಿಕೊಂಡ ಖಾದಿಗಳು, ಪಟ್ಟಾಗಿ ಕೂತು ಓದಿ ಅಧಿಕಾರಿಗಳಾದವರ ಬೂಟುಗಾಲುಗಳ ಪ್ರಮುಖ ಗುರಿ ಈ ನೆಲದ ಬಾಯಿ ಸತ್ತ ಮುಗ್ಧರೇ ಎಂಬುದು ಕರಾಳ ಸತ್ಯ. ಈ ಮಾತಿಗೆ ಅಪವಾದವೆಂಬಂತಿರುವ ಜನಪ್ರತಿನಿಧಿಗಳು, ಅಧಿಕಾರಿಗಳಿರಬಹುದಾದರೂ ಅಂಥವರ ಧ್ವನಿಗೂ ಇಲ್ಲಿ ಕಿಮ್ಮತ್ತಿಲ್ಲ. ಇಂಥಾ ದುಷ್ಟ ವ್ಯವಸ್ಥೆಯ ನಗ್ನ ಸತ್ಯವೊಂದಕ್ಕೆ ದೃಷ್ಯ ರೂಪ ಬಂದಂತಿರೋ ಚಿತ್ರ [...]
The post ಮುಗ್ಧ ಜೀವಗಳ ನೆತ್ತರು ಬೆರೆತ ಕಣ್ಣ ಹನಿಗಳಿವೆ ಇಲ್ಲಿ! appeared first on ಶೋಧ ನ್ಯೂಸ್ - Shodha News.
ನಮ್ಮಲ್ಲಿರೋದು ಪ್ರಜಾಪ್ರಭುತ್ವ, ಇಲ್ಲಿ ಪ್ರಜೆಗಳೇ ಪ್ರಭುಗಳು ಎಂಬಿತ್ಯಾದಿ ಸವಕಲು ಸ್ಲೋಗನ್ನುಗಳಿವೆಯಲ್ಲಾ? ಅದೇನಿದ್ದರೂ ಜನಪ್ರತಿನಿಧಿಗಳೆಂಬೋ ಫಟಿಂಗರ ನಾಲಿಗೆ ಕೆರೆತ ನಿವಾರಿಸುವ ಮೂಲಿಕೆಯಾಗಿಯಷ್ಟೇ ಬಳಕೆಯಾಗುತ್ತಿದೆ. ಜನರಿಂದ ಆಯ್ಕೆಯಾಗಿ ಅಧಿಕಾರ ಕೇಂದ್ರ ತಲುಪಿಕೊಂಡ ಖಾದಿಗಳು, ಪಟ್ಟಾಗಿ ಕೂತು ಓದಿ ಅಧಿಕಾರಿಗಳಾದವರ ಬೂಟುಗಾಲುಗಳ ಪ್ರಮುಖ ಗುರಿ ಈ ನೆಲದ ಬಾಯಿ ಸತ್ತ ಮುಗ್ಧರೇ ಎಂಬುದು ಕರಾಳ ಸತ್ಯ. ಈ ಮಾತಿಗೆ ಅಪವಾದವೆಂಬಂತಿರುವ ಜನಪ್ರತಿನಿಧಿಗಳು, ಅಧಿಕಾರಿಗಳಿರಬಹುದಾದರೂ ಅಂಥವರ ಧ್ವನಿಗೂ ಇಲ್ಲಿ ಕಿಮ್ಮತ್ತಿಲ್ಲ. ಇಂಥಾ ದುಷ್ಟ ವ್ಯವಸ್ಥೆಯ ನಗ್ನ ಸತ್ಯವೊಂದಕ್ಕೆ ದೃಷ್ಯ ರೂಪ ಬಂದಂತಿರೋ ಚಿತ್ರ `ಗೌಳಿ’. ದೊಡ್ಡ ಮಟ್ಟದಲ್ಲಿ ಭರವಸೆ ಮೂಡಿಸಿದ್ದ ಈ ಸಿನಿಮಾವೀಗ ಬಿಡುಗಡೆಗೊಂಡಿದೆ!
ಅಷ್ಟಕ್ಕೂ ಗೌಳಿ ಈ ಪರಿಯಲ್ಲಿ ನಿರೀಕ್ಷೆ ಮೂಡಿಸಿರೋದರ ಹಿಂದೆ ನಾನಾ ಕಾರಣಗಳಿದ್ದವು. ಒಂದು ಕಡೆಯಲ್ಲಿ ಬಿಸಿ ನೆತ್ತರ ಹುಡುಗ ಸೂರ, ಹಸಿ ಹಸೀ ಕಥೆಯೊಂದರ ಸಾರಥ್ಯ ವಹಿಸಿದ ಸುಳಿವು, ಆರಕ್ಕೇರದೆ ಮೂರಕ್ಕಿಳಿಯದ ಸ್ಥಿತಿಯಲ್ಲಿದ್ದ ಶ್ರೀನಗರ ಕಿಟ್ಟಿಯ ರಗಡ್ ಲುಕ್ಕು ಮತ್ತು ಒಂದೇ ಏಟಿಗೆ ಪ್ಯಾನಿಂಡಿಯಾ ಮಟ್ಟ ಮುಟ್ಟುವಂತಿದ್ದ ಮೇಕಿಂಗ್ ವೈಖರಿ… ಹೀಗೆ ಹೆಜ್ಜೆ ಹೆಜ್ಜೆಗೂ ಸಂಚಲನ ಸೃಷ್ಟಿಸುತ್ತಾ ಸಾಗಿ ಬಂದಿದ್ದ ಈ ಚಿತ್ರಕ್ಕೆ ಚೆಂದದ ಓಪನಿಂಗ್ ಸಿಕ್ಕಿದೆ. ಒಂದಷ್ಟು ಕೊರತೆಗಳಾಚೆಗೂ ಇಷ್ಟವಾಗುವಂತೆ ಮೂಡಿ ಬಂದಿರುವ ಗೌಳಿ ನೆಲದ ಘಮಲಿನ ಕಥೆಯ ಜೊತೆ ಗುಟುರು ಹಾಕಿದ್ದಾನೆ!
ಯಾವ ಕೆಡುಕಿನ ಪಸೆಯೂ ಇಲ್ಲದ ಆ ಊರಲ್ಲಿ ನಡೆಯೋ ಯುವತಿಯೊಬ್ಬಳ ಮೇಲಿನ ಅತ್ಯಾಚಾರ, ಪೊಲೀಸ್ ಅಧಿಕಾರಿಯ ದಬ್ಬಾಳಿಕೆ, ಗೌಳಿಯ ರೂಪವಂತ ಮಡದಿಯ ಮೇಲೇ ಕಣ್ಣಿಡುವಂಥಾ ಖಾಖಿಯೊಳಗಿನ ಕೀಚಕ ಬುದ್ಧಿ… ಒಟ್ಟಾರೆಯಾಗಿ ನೋಡ ನೋಡುತ್ತಲೇ ಕಥೆ ಮತ್ತೊಂದು ಆಯಾಮದತ್ತ ಹೊರಳಿಕೊಳ್ಳುತ್ತೆ. ತಾನಾಯಿತು ತನ್ನ ಪುಟ್ಟ ಜಗತ್ತಾಯಿತು ಎಂಬಂತಿದ್ದ ಮುಗ್ಧ ಗೌಳಿಗೆ ಗೂಳಿಯಾಗದೆ ಬೇರೆ ದಾರಿ ಉಳಿಯೋದಿಲ್ಲ. ಹಾಗೆ ಗೂಳಿಯಾದ ಗೌಳಿ ದುಷ್ಟತನದ ಪಕ್ಕೆಗೆ ಗುಮ್ಮುತ್ತಾನೆ. ಈ ಹಂತದಲ್ಲಿ ಯಥೇಚ್ಛವಾಗಿ ಮಾಸ್ ದೃಷ್ಯಾವಳಿಗಳು ರಂಗೇರುತ್ತವೆ. ಅಲ್ಲಿ ಕಣ್ಣೀರು ಜಿನುಗುತ್ತದೆ. ಅದಕ್ಕೆ ನೆತ್ತರು ಬೆರೆಯುತ್ತದೆ. ಔಭಾವ ತೀವ್ರತೆಯಲ್ಲಿ ದೃಷ್ಯಗಳು ತೋಯುತ್ತವೆ. ಅಂಥಾ ಆದ್ರ್ರ ಭಾವಗಳೆಲ್ಲವೂ ಒಂದಿನಿತೂ ಮುಕ್ಕಾಗದಂತೆ ನೋಡುಗರ ಮನಸಿಗೆ ಸೀದಾ ದಾಟಿಕೊಳ್ಳುತ್ತವೆ. ಅದನ್ನೇ ಗೌಳಿಯ ನಿಜವಾದ ಸಾರ್ಥಕತೆ ಎನ್ನಲಡ್ಡಿಯಿಲ್ಲ!
ನಿಜ, ಇಲ್ಲಿನ ಒಂದಷ್ಟು ಸನ್ನಿವೇಷಗಳನ್ನು ಬೇರೆಯದ್ದೇ ರೀತಿಯಲ್ಲಿ ನಿಭಾಯಿಸಬಹುದೆನ್ನಿಸುತ್ತೆ. ಆದರೆ ಅಂಥಾ ಕಂಪ್ಲೇಂಟುಗಳನ್ನೆಲ್ಲ ಮರೆಮಾಚುವಂತೆ ನಿರ್ದೇಶಕ ಸೂರ ಆಯಕಟ್ಟಿನ ಜಾಗಳಲ್ಲಿ ಮ್ಯಾಜಿಕ್ಕು ಮಾಡಿದ್ದಾರೆ. ಒಂದಿಡೀ ಕಥೆ ತೀವ್ರತೆ ಕಳೆದುಕೊಳ್ಳದಂತೆ ನೋಡಿಕೊಂಡಿರುವ ರೀತಿ, ಈ ಕ್ಷಣಕ್ಕೂ ಪ್ರಸ್ತುತವೆನ್ನಿಸುವಂತೆ, ಆಕ್ರೋಶವೆಂಬುದು ಪಾತ್ರಗಳ ಕಣ್ಣಿಂದ ನೋಡುಗರ ಮನಸಿಗೂ ನೇರವಾಗಿ ನಾಟಿಕೊಳ್ಳುವಂತೆ ದೃಷ್ಯ ಕಟ್ಟುವಲ್ಲಿ ನಿರ್ದೇಶಕರು ನಿಜಕ್ಕೂ ಭರವಸೆ ಮೂಡಿಸುತ್ತಾರೆ. ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಇಲ್ಲಿನ ಪ್ರತೀ ಪಾತ್ರಗಳೂ ಕಾಡುತ್ತವೆ. ನಮ್ಮ ನಡುವಿನ ವಾಸ್ತವಿಕ ವಾತಾವರಣಕ್ಕೆ ತಾಳೆಯಾಗುತ್ತವೆ.
ನಿರ್ದೇಶಕ ಸೂರ
ಇನ್ನು ನಟನೆಯ ವಿಚಾರಕ್ಕೆ ಬಂದರೆ ಒಬ್ಬರನ್ನೊಬ್ಬರು ಮೀರಿಸುವಂತೆ ಕಲಾವಿದರೆಲ್ಲ ಅಭಿನಯಿಸಿದ್ದಾರೆ. ವಿಶೇಷವಾಗಿ ಶ್ರೀನಗರ ಕಿಟ್ಟಿ ಹೇಗೆ ನಟಿಸಿರಬ ಹುದೆಂಬ ಕುತೂಹಲ ಎಲ್ಲರಲ್ಲಿತ್ತು. ಅವರೊಳಗಿನ ನಿಜವಾದ ಕಲಾವಿದನಿಲ್ಲಿ ಮುಗ್ದ ಗೌಳಿಯಾಗಿ ಮನಗೆಲ್ಲುತ್ತಾನೆ. ಥೇಟು ಗೂಳಿಯಂತೆ ಅಬ್ಬರಿಸಿ ಅಚ್ಚರಿ ಮೂಡಿಸುತ್ತಾನೆ. ಒಂದಷ್ಟು ಕಾಲದಿಂದ ಮರೆಗೆ ಸರಿದಂತಿದ್ದ ಕಿಟ್ಟಿ ಪಾಲಿಗೆ ಇದೊಂದು ಮಹತ್ವದ ಚಿತ್ರ. ಅವರು ದೊಡ್ಡ ಮಟ್ಟದಲ್ಲಿಯೇ ಗೌಳಿಯ ನಂತರ ಮಿಂಚುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಇನ್ನುಳಿದಂತೆ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಶರತ್ ಲೋಹಿತಾಶ್ವರದ್ದೂ ಕೂಡಾ ಗಮನಾರ್ಹ ನಟನೆ. ಕಳೆದೇ ಹೋದಂತಿದ್ದ ಪಾವನಾಗಿಲ್ಲಿ ಒಂದೊಳ್ಳೆ ಪಾತ್ರ ಸಿಕ್ಕಿದೆ. ಅದನ್ನಾಕೆ ಚೆಂದಗೆ ನಟಿಸಿದ್ದಾಳೆ. ಗೌಳಿಯ ಚಿಕ್ಕಪ್ಪನಾಗಿ ನಟಿಸಿದ ರಂಗಾಯಣ ರಘು ಬಹು ಕಾಲದ ನಂತರ ಹೊಸಾ ಲುಕ್ಕಿನಲ್ಲಿ ಮತ್ತೆ ಪ್ರೇಕ್ಷಕರ ಮನಗೆದ್ದಿದ್ದಾರೆ.
ನಿರ್ಮಾಪಕ ರಘು ಸಿಂಗಂ
ಗೊಂದಲದ ಗಾಳಕ್ಕೆ ಸಿಕ್ಕ ದಂತಕಥೆ!
ಸಂಕೇಶ್ವರರ ಸಾಹಸ ಅಷ್ಟೊಂದು ಸಲೀಸಿನದ್ದಾಗಿತ್ತಾ? ಪ್ರತೀ ಗೆಲುವಿನ ಹಿಂದೆಯೂ ಪದೇ ಪದೆ ಎದುರಾದ ಸೋಲಿನ ತರಚುಗಾಯಗಳಿರುತ್ತವೆ. ಅಂಥಾ ಗಾಯದ ಗುರುತುಗಳಿಲ್ಲದ ಗೆಲುವೊಂದು ಗೆಲುವೇ ಅಲ್ಲ. ಅದರಾಚೆಗೂ ಯಾವನಾದರೂ ಗೆದ್ದೇ ಅಂತ ಬೀಗಿದರೆ, ಒಂದೋ ಆಸುಪಾಸಿನವರ ಎದೆಮೇಲೆ ಕಾಲಿಟ್ಟು ಮೆರೆದಿರಬೇಕಾಗುತ್ತೆ. ಇಲ್ಲವೆಂದರೆ ಯಾರದ್ದೋ ಶ್ರಮಕ್ಕೆ ಏಕಾಏಕಿ ಅಪ್ಪನಾಗಿ ಬಿಡಬೇಕಾಗುತ್ತೆ. ಆದರೆ, ಹಾಗೆ ದಕ್ಕಿಸಿಕೊಂಡ ಗೆಲುವೆಂಬೋ ಭ್ರಮೆ ಬಹುಬೇಗನೆ ಕಳಚಿಕೊಳ್ಳುತ್ತೆ. ಅದ್ಯಾವ ಕ್ಷೇತ್ರವೇ ಆದರೂ ಆದಷ್ಟು ಬೇಗನೆ ಷಡ್ಯಂತ್ರಗಳ ಪೊರೆ ಕಳಚಿ ಬೆತ್ತಲಾಗಬೇಕಾಗುತ್ತೆ. ನಮ್ಮ ಸುತ್ತಲೂ ಹಾಗೆ ಯಾರದ್ದೋ ಶ್ರಮ, [...]
The post ಗೊಂದಲದ ಗಾಳಕ್ಕೆ ಸಿಕ್ಕ ದಂತಕಥೆ! appeared first on ಶೋಧ ನ್ಯೂಸ್ - Shodha News.
ಸಂಕೇಶ್ವರರ ಸಾಹಸ ಅಷ್ಟೊಂದು ಸಲೀಸಿನದ್ದಾಗಿತ್ತಾ?
ಪ್ರತೀ ಗೆಲುವಿನ ಹಿಂದೆಯೂ ಪದೇ ಪದೆ ಎದುರಾದ ಸೋಲಿನ ತರಚುಗಾಯಗಳಿರುತ್ತವೆ. ಅಂಥಾ ಗಾಯದ ಗುರುತುಗಳಿಲ್ಲದ ಗೆಲುವೊಂದು ಗೆಲುವೇ ಅಲ್ಲ. ಅದರಾಚೆಗೂ ಯಾವನಾದರೂ ಗೆದ್ದೇ ಅಂತ ಬೀಗಿದರೆ, ಒಂದೋ ಆಸುಪಾಸಿನವರ ಎದೆಮೇಲೆ ಕಾಲಿಟ್ಟು ಮೆರೆದಿರಬೇಕಾಗುತ್ತೆ. ಇಲ್ಲವೆಂದರೆ ಯಾರದ್ದೋ ಶ್ರಮಕ್ಕೆ ಏಕಾಏಕಿ ಅಪ್ಪನಾಗಿ ಬಿಡಬೇಕಾಗುತ್ತೆ. ಆದರೆ, ಹಾಗೆ ದಕ್ಕಿಸಿಕೊಂಡ ಗೆಲುವೆಂಬೋ ಭ್ರಮೆ ಬಹುಬೇಗನೆ ಕಳಚಿಕೊಳ್ಳುತ್ತೆ. ಅದ್ಯಾವ ಕ್ಷೇತ್ರವೇ ಆದರೂ ಆದಷ್ಟು ಬೇಗನೆ ಷಡ್ಯಂತ್ರಗಳ ಪೊರೆ ಕಳಚಿ ಬೆತ್ತಲಾಗಬೇಕಾಗುತ್ತೆ. ನಮ್ಮ ಸುತ್ತಲೂ ಹಾಗೆ ಯಾರದ್ದೋ ಶ್ರಮ, ಪ್ರತಿಭೆಗಳನ್ನು ತಮ್ಮದೆಂದು ಬಿಂಬಿಸುತ್ತಾ ಯಾಮಾರಿಸೋ ಫಟಿಂಗರದ್ದೊಂದು ಪಡೆಯೇ ಇರುತ್ತದೆ. ಆದರೆ, ವಿಜಯ ಸಂಕೇಶ್ವರರಂಥಾ ಸಾಧಕರ ಜೀವನಗಾಥೆ ಅದೆಲ್ಲವನ್ನೂ ಮೀರಿಕೊಂಡಿರುವಂಥಾದ್ದು. ಅಲ್ಲಿ ಯಾರ ನೆರಳೂ ಇಲ್ಲ. ಅದರ ಆಸುಪಾಸಿನಲ್ಲಿರೋದು ಬರೀ ಕಠಿಣ ಪರಿಶ್ರಮವಷ್ಟೇ. ಅವರ ಬದುಕಿನ ತುಣುಕುಗಳನ್ನು ಬೊಗಸೆಯಲ್ಲಿಟ್ಟುಕೊಂಡು ಅದೆಷ್ಟೋ ಮಂದಿ ಸಂಭ್ರಮಿಸುತ್ತಾರೆ. ಸಂಕೇಶ್ವರರನ್ನೇ ಸ್ಫೂರ್ತಿಯಾಗಿಸಿಕೊಳ್ಳುತ್ತಾರೆ. ಹಾಗಿರುವಾಗ ಅವರದ್ದೇ ಬದುಕಿನ ಕಥನ ದೃಷ್ಯರೂಪ ಧರಿಸಿದೆ ಅಂದರೆ, ಅದರ ಬಗ್ಗೆ ಕುತೂಹಲ ಮೂಡಿಕೊಳ್ಳದಿರಲು ಸಾಧ್ಯವೇ?
ರಿಷಿಕಾ ಶರ್ಮಾ ನಿರ್ದೇಶನದಲ್ಲಿ ಮೂಡಿ ಬಂದಿದ್ದ ವಿಜಯಾನಂದ ಎಂಬ ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದದ್ದು ಅದೇ ಕಾರಣದಿಂದ. ಎಲ್ಲೋ ಸಂಕೇಶ್ವರರ ಬಗ್ಗೆ ಕೆಲ ಮಾತುಗಳನ್ನು ಕೇಳಿ, ಬರಹಗಳನ್ನು ಓದಿ ಜನ ಪುಳಕಗೊಂಡಿದ್ದರು. ಅಂಥಾ ಸಾಧಕನ ಜೀವನಗಾಥೆ ದೃಷ್ಯರೂಪಕ್ಕಿಳಿದಿರೋದರಿಂದ ಸ್ಫೂರ್ತಿ ಮತ್ತು ಅಚ್ಚರಿಗಳ ಜಳಕ ಗ್ಯಾರೆಂಟಿ ಎಂದೇ ಜನ ಭಾವಿಸಿದ್ದರು. ಇಂಥಾ ಸಾವಿರ ನಿರೀಕ್ಷೆಗಳ ಒಡ್ಡೋಲಗದಲ್ಲಿ ಈ ಚಿತ್ರವೀಗ ಪ್ಯಾನಿಂಡಿಯಾ ಮಟ್ಟದಲ್ಲಿ ತೆರೆಕಂಡಿದೆ. ಅದರಲ್ಲಿ ಅಡಕವಾಗಿರುವ ಸಂಕೇಶ್ವರರ ಯಶೋಗಾಥೆ ಹೇಗಿದೆ? ನಮ್ಮ ಕಾಲಮಾನದಲ್ಲಿಯೇ ನಡೆದ ದಂತಕಥೆಯಂಥಾ ಕಹಾನಿಯನ್ನು ಹೇಗೆ ದೃಷ್ಯಕ್ಕೆ ಒಗ್ಗಿಸಿದ್ದಾರೆ? ಇದು ನಿಜಕ್ಕೂ ಪ್ಯಾನಿಂಡಿಯಾ ಮಟ್ಟಕ್ಕೆ ತಲುಪುವಂತೆ ಮೂಡಿ ಬಂದಿದೆಯಾ? ಹೀಗೆ ಕಾತರದಲ್ಲಿ ಅದ್ದಿ ತೆಗೆದಂಥಾ ಪ್ರಶ್ನೆಗಳನ್ನಿಟ್ಟುಕೊಂಡು ಸಿನಿಮಾ ಮಂದಿರ ಹೊಕ್ಕವರೆಲ್ಲ ಅದೊಂದು ತೆರನಾದ ಅತೃಪ್ತ ಭಾವದೊಂದಿಗೆ ಹೊರಬರುತ್ತಿದ್ದಾರೆ!
ವಿಜಯ ಸಂಕೇಶ್ವರ ಅಂದಾಕ್ಷಣವೇ ಸಾರಿಗೆ ಸಾಮ್ರಾಜ್ಯದ ಅಧಿಪತಿಯಂಥಾ ಚಿತ್ರ ಕಣ್ಮುಂದೆ ಕದಲುತ್ತದೆ. ಅವರು ಸರಕು ಸಾಗಾಟ ವಾಹನ ಕಂಪೆನಿ ಹಾಗೂ ಸಾರಿಗೆ ಸಂಸ್ಥೆಯನ್ನು ಕಟ್ಟಿ ನಿಲ್ಲಿಸಿದ್ದರ ಹಿಂದೆ ರೋಚಕ ಕಥನೆಗಳೇ ಇದ್ದಾವೆ. ಡಾಂಬರು ರಸ್ತೆಗಳ ಎದೆ ಮೇಲೆ ಆಯುಷ್ಯ ಕರಗಿಸಿಕೊಂಡ ಹಳೇ ಟೈರುಗಳನ್ನು ತಾವೇ ಖುದ್ದಾಗಿ ಮಾರೋದರಿಂದ ಹಿಡಿದು, ದಿನಚರಿ ಎಂಬುದು ಒಂಚೂರೂ ಮುಕ್ಕಾಗದಂತೆ ನಡೆದುಕೊಳ್ಳುವ ಶಿಸ್ತಿನವರೆಗೆ ಸಂಕೇಶ್ವರ ಗಮನ ಸೆಳೆಯುತ್ತಾರೆ. ಒಂದು ಲಾರಿಯಿಂದ ಆರಂಭಿಸಿ, ನೂರಾರು ಲಾರಿಗಳ ವರೆಗೆ ಹಬ್ಬಿಕೊಂಡ ಅವರ ಉದ್ಯಮ ಸಾಮ್ರಾಜ್ಯದ ಬಗ್ಗೆ ಕುತೂಹಲ ಮೂಡಿಕೊಳ್ಳುತ್ತೆ. ಅಲ್ಲಿಂದಾಚೇಗೆ ಪತ್ರಿಕೆಗಳನ್ನು ಆರಂಭಿಸಿ, ದೃಷ್ಯಮಾಧ್ಯಮಕ್ಕೂ ಲಗ್ಗೆಯಿಟ್ಟು ಗೆದ್ದ ಸಂಕೇಶ್ವರರ ಗೆಲುವಿನ ಗುಟ್ಟು ತಿಳಿದುಕೊಳ್ಳುವ ಧಾವಂತವೂ ಅನೇಕರಲ್ಲಿದ್ದೇ ಇದೆ. ಅದಕ್ಕೆಲ್ಲ ವಿಜಯಾನಂದ ಚಿತ್ರದಲ್ಲಿ ಉತ್ತರಗಳಿವೆಯಾ ಅಂತ ನೋಡ ಹೋದರೆ, ನಿರಾಸೆ, ಗೊಂದಲಗಳ ಹೊರತಾಗಿ ಬೇರೇನೂ ದಕ್ಕುವುದಿಲ್ಲ!
ಸೋತು ಗೆದ್ದವರ ಕಥೆಗಳು ಯಾವತ್ತಿದ್ದರೂ ಫ್ರೆಶ್ ಆಗಿರುತ್ತವೆ. ಆದರೆ ಸಂಕೇಶ್ವರರ ಜೀವನವನ್ನು ದೃಷ್ಯಕ್ಕೆ ಒಗ್ಗಿಸುವಾಗ ನಿರ್ದೇಶಕಿ ರಿಷಿಕ ಗೊಂದಲಕ್ಕೀಡಾಗಿರೋದು ಪ್ರತೀ ಫ್ರೇಮುಗಳಲ್ಲಿಯೂ ಸ್ಪಷ್ಟವಾಗುತ್ತದೆ. ಸಂಕೇಶ್ವರರ ಜೀವನಗಾಥೆಯನ್ನ ಯಥಾವತ್ತಾಗಿ ದೃಷ್ಯೀಕರಿಸಿದರೆ ಡಾಕ್ಯುಮೆಂಟರಿಯಾಗಿ ದಾಖಲಾಗುವ ಅಪಾಯ, ಕಮರ್ಶಿಯಲ್ ದೃಷಿಯಲ್ಲಿ ದಿಟ್ಟಿಸಿದರೆ ಡ್ರಾಮಾ ಆಗಿಬಿಡುವ ಕಂಟಕ… ಈ ಗೊಂದಲ ನಿರ್ದೇಶಕಿಯನ್ನು ಅತ್ತ ಧರೆ, ಇತ್ತ ಪುಲಿ ಎಂಬಷ್ಟು ತೀವ್ರವಾಗಿ ಕಾಡಿದೆ. ಅದನ್ನು ಮ್ಯಾನೇಜು ಮಾಡುವ ಭರದಲ್ಲಿ ಕಮರ್ಶಿಯಲ್ ಅಂಶಗಳೇ ಮೇಲುಗೈ ಪಡೆದುಕೊಂಡಿವೆ. ತೀವ್ರವಾಗಿ, ಪರಿಣಾಮಕಾರಿಯಾಗಿ ಕಟ್ಟಿಕೊಡಬಹುದಾಗಿದ್ದ ಸಂಕೇಶ್ವರರ ಕಥನ ಹಲವಾರು ಗೋಜಲುಗಳ ನಡುವೆ ಕಳೆದು ಹೋಗಿದೆ.
ಹಾಗೆ ನೋಡಿದರೆ, ವಿಜಯ ಸಂಕೇಶ್ವರರದ್ದು ಹೇಳಿಕೊಳ್ಳುವಂಥಾ ಬಡತನದ ಫ್ಯಾಮನಿಲಿಯೇನಲ್ಲ. ಅವರ ತಂದೆ ಆ ಕಾಲದಲ್ಲಿಯೇ ಪ್ರಿಂಟಿಂಗ್ ಪ್ರೆಸ್ ಮಾಲೀಕರಾಗಿದ್ದರು. ಓದೆಲ್ಲ ಮುಗಿದ ನಂತರ, ತಂದೆಯ ಕಾರ್ಯಕ್ಷೇತ್ರಕ್ಕೆ ಬರುವ ವಿಜಯ ಸಂಕೇಶ್ವರ, ಆ ಪ್ರಿಂಟಿಂಗ್ ಪ್ರೆಸ್ ಅನ್ನೂ ಕೂಡಾ ತಮ್ಮ ಜಾಣ್ಮೆಯಿಂದಲೇ ಹೆಚ್ಚು ವಹಿವಾಟು ನಡೆಸುವಂತೆ ನೋಡಿಕೊಳ್ಳುತ್ತಾರೆ. ಆ ನಂತರ ಏಕಾಏಕಿ ಲಾರಿ ಖರೀದಿಸಿ ಚಾಲಕರಾಗ ಹೊರಟ ಸಂಕೇಶ್ವರರಿಗೆ ಮನೆಮಂದಿಯ ಕಡೆಯಿಂದಲೇ ಸಪೋರ್ಟು ಸಿಗುವುದಿಲ್ಲ. ಹಾಗೆ ಒಂದು ಲಾರಿಯಿಂದ, ನೂರಾರು ಲಾರಿಯವರೆಗೆ ಸಂಕೇಶ್ವರರ ಉದ್ಯಮ ಬೆಳೆದಿದ್ದು ಹೇಗೆಂಬ ಕುತೂಹಲ ಎಲ್ಲರೊಳಗೂ ಇತ್ತು. ಅದನ್ನಿಲ್ಲಿ ಅತ್ಯಂತ ಪೇಲವವವಾಗಿ ಚಿತ್ರೀಕರಿಸಲಾಗಿದೆ.
ಒಂದು ಲಾರಿಯನ್ನಿಟ್ಟುಕೊಂಡು ಹೊಯ್ದಾಡುತ್ತಿದ್ದ ಸಂಕೇಶ್ವರರಿಗೆ ರವಿಚಂದ್ರನ್ ನಿಭಾಯಿಸಿರುವ ಪಾತ್ರದ ಪರಿಚಯವಾಗುತ್ತೆ. ಅದು ಅವರ ಗೆಳೆಯನ ಮೂಲಕ. ಹಾಗೆ ಆ ವ್ಯಕ್ತಿಯ ಮುಂದೆ ನಿಲ್ಲುವ ಸಂಕೇಶ್ವರ ದೊಡ್ಡ ಮೊತ್ತದ ಸಾಲಕ್ಕಾಗಿ ಬೇಡಿಕೆ ಇಡುತ್ತಾರೆ. ಅಲ್ಲಿ ಆ ವ್ಯಕ್ತಿ ಸಂಕೇಶ್ವರರನ್ನು ಸಣ್ಣ ಪರೀಕ್ದಷೆಗೊಡ್ಡುತ್ತಾನೆ. ಆ ಪರೀಕ್ಷೆಯನ್ನೂ ಕೂಡಾ ಸಂಕೇಶ್ವರರು ಮೈಂಡ್ ಗೇಮ್ ಮೂಲಕವೇ ಎದುರಿಸುತ್ತಾರೆ. ಅದನ್ನು ಕಂಡು ಫಿದಾ ಆದ ಆ ವ್ಯಕ್ತಿ ಲಕ್ಷ ಲಕ್ಷ ಸಾಲ ಕೊಡುತ್ತಾನೆ. ಅದರಲ್ಲಿಯೇ ಸಂಕೇಶ್ವರರ ಮತ್ತೊಂದಷ್ಟು ಲಾರಿ ಖರೀದಿಸುತ್ತಾರೆ. ಹೀಗೆ ಪ್ರತೀ ಘಟ್ಟದಲ್ಲಿಯೂ ತಮ್ಮ ಜಾಣ್ಮೆ ಪ್ರದರ್ಶಿಸುತ್ತಲೇ ಸಂಕೇಶ್ವರರ ಪಾತ್ರ ಸರಿಕಟ್ಟಾದ ಸಹಾಯ ಪಡೆದುಕೊಳ್ಳುತ್ತಾ ಸಾಗುತ್ತೆ. ಅದನ್ನು ಬಳಸಿಕೊಂಡು ಗೆಲ್ಲುತ್ತಲೇ ಹೋಗುತ್ತೆ. ವಿಶೇಷವೆಂದರೆ, ಅಂಥಾ ಸಹಾಯ ಪಡೆದಾದ ನಂತರ ಸಂಕೇಶ್ವರ ಶ್ರಮಗಳ ಬಗ್ಗೆ ತೀವ್ರವಾಗಿ ಬೆಳಕು ಹರಿಸಿಲ್ಲ. ಆದ್ದರಿಂದಲೇ ಸಂಕೇಶ್ವರರ ವ್ಯಕ್ತಿತ್ವ ಅವರಿವರ ಸಾಂದರ್ಭಿಕ ಸಹಾಯ ಪಡೆದುಕೊಂಡು ಗೆದ್ದಂತೆಯೇ ಭಾಸವಾಗುತ್ತೆ!
ಅದರ ನಡುವೆ ದಾವಣಗೆರೆಯ ಗೋಡೌನಿಗೆ ಬೆಂಕಿಬೀಳುವ ಸೀನು, ಅದರಿಂದಾಗೋ ನಷ್ಟ ಮತ್ತು ಅದನ್ನು ಸಂಕೇಶ್ವರರು ಜೈಸಿಕೊಂಡ ರೀತಿಯ ಬಗ್ಗೆಯೂ ಪರಿಣಾಮಕಾರಿಯಾಗಿ ಒತ್ತು ಕೊಟ್ಟಿಲ್ಲ. ಎಲ್ಲೋ ಒಂದು ಕಡೆ ಸಂಕೇಶ್ವರರ ಪಾತ್ರಕ್ಕೆ ಹೀರೋಯಿಸಂ ಅನ್ನು ಸವರಲು ಹೋಗಿ, ಆ ಪಾತ್ರದ ಅಸಲೀ ಕಸುವನ್ನೇ ಸವೆಸಿ ಹಾಕಿದ್ದಾರೆಂಬ ಭಾವ ಬಹುತೇಕರನ್ನು ಕಾಡುತ್ತೆ. ಇನ್ನುಳಿದಂತೆ ಸಂಕೇಶ್ವರರ ತಂದೆಯ ಪಾತ್ರದಲ್ಲಿ ಅನಂತ್ ನಾಗ್ ನಟಿಸಿದ್ದಾರೆ. ಉತ್ತರಕರ್ನಾಟಕದ ಜವಾರಿ ಸ್ಟೈಲಿನ ಆ ಪ;ಆತ್ರದ ಭಾಷೆಯ ಬಗ್ಗೆಯೇ ನಿರ್ದೇಶಕರು ತಲೆಕೆಡಿಸಿಕೊಂಡಂತಿಲ್ಲ. ಒಂದು ಹಂತದಲ್ಲಿ ಸಂಕೇಶ್ವರರ ತಂದೆ ನಿಧನರಾಗುತ್ತಾರೆ. ಆ ದೃಷ್ಯ ಸರಿದು ಹೋಗುತ್ತದೆ. ಆದರೆ ತಾಯಿ ಮರೆಯಾದ ವಿಚಾರ ಗೊತ್ತಾಗೋದು ಗೋಡೆಗೆ ನೇತುಬಿದ್ದ ಫೋಟೋ ಮತ್ತು ಅದಕ್ಕೆ ತೂಗುವ ಹಾರದಿಂದಲೇ!
ಒಟ್ಟಾರೆಯಾಗಿ ಯಾವ್ಯಾವುದಕ್ಕೆ ಎಷ್ಟೆಷ್ಟು ಪ್ರಾಶಸ್ತ್ಯ ಕೊಡಬೇಕು, ಯಾವುದರತ್ತ ಪ್ರಧಾನವಾಗಿ ಫೋಕಸ್ ಮಾಡಬೇಕೆಂಬುದೇ ನಿರ್ದೇಶಕ ಪ್ರಧಾನ ಗೊಂದಲವಾದಂತೆ ಗೋಚರಿಸುತ್ತದೆ. ಅದರ ಫಲವಾಗಿ ಇಡೀ ಚಿತ್ರವೇ ಅದ್ದೂರಿತನದಾಚೆಗೂ ಸಪ್ಪೆ ಎನಿಸುತ್ತೆ. ಸಂಕೇಶ್ವರರಂಥಾ ಸಾಧಕರ ಜೀವನಗಾಥೆ ನಿಜಕ್ಕೂ ಅದ್ಭುತ ಫೀಲ್ ಹುಟ್ಟಿಸಬೇಕು. ನೋಡಿದ ಪ್ರತಿಯೊಬ್ಬರನ್ನೂ, ಪ್ರತೀ ಫ್ರೇಮುಗಳಲ್ಲಿಯೂ ಕಾಡುವಂತಿರಬೇಕು. ಆದರೆ, ಆ ಸ್ಥಾನವನ್ನು ಗೊಂದಲ ಮತ್ತು ನಿರಾಸೆಗಳೇ ನುಂಗಿಕೊಳ್ಳುತ್ತವೆ. ನಿಹಾಲ್ ನಟನೆಯಲ್ಲೂ ಕೂಡಾ ಕಸುವಿಲ್ಲ. ಬಿಲ್ಡಪ್ಪುಗಳಿಂದಲೂ ಆ ಪಾತ್ರ ಬರಖತ್ತಾಗೋದಿಲ್ಲ. ಸಂಕೇಶ್ವರರ ಇದುವರೆಗಿನ ಸುದೀರ್ಘ ಯಾನ, ಅಷ್ಟೂ ವರ್ಷ ಸಾಮ್ರಾಜ್ಯ ಕಟ್ಟಿದ ರೋಚಕ ಕಥನಗಳೆಲ್ಲವೂ ಕಮರ್ಶಿಯಲ್ ಎಲಿಮೆಂಟುಗಳ ನಡುವೆ ಕಳೆದು ಹೋಗಿದೆ. ನಿಜಕ್ಕೂ ಪ್ಯಾನಿಂಡಿಯಾ ಮಟ್ಟದಲ್ಲಿ ಕಮಾಲ್ ಮಾಡಬಹುದಾದ ಅವಕಾಶವನ್ನು ವಿಜಯಾನಂದ ಚಿತ್ರ ಕಳೆದುಕೊಂಡಿದೆ. ಎಲ್ಲವೂ ಇದ್ದು ಇಂಥಾ ಸ್ಥಿತಿ ಎದುರಾಗಿರೋದು ಕನ್ನಡ ಚಿತ್ರರಂಗದ ಮಟ್ಟಿಗೆ ವರ್ಷದಂಚಿನ ಮಹಾ ದುರಂತ!
ಇದು ದಿಗಂತನ ದೌರ್ಭಾಗ್ಯ!
ಅನಂತ್ ನಾಗ್ ಒಂದು ಸಿನಿಮಾದಲ್ಲಿ ನಟಿಸುತ್ತಾರೆಂದರೆ, ತಮ್ಮ ಪಾತ್ರದ ಬಗ್ಗೆ ಖುದ್ದು ಅವರೇ ಒಳ್ಳೆ ಮಾತುಗಳನ್ನಾಡುತ್ತಾರೆಂದರೆ ಆ ಚಿತ್ರದ ಬಗೆಗೊಂದು ಕುತೂಹಲ ಮೂಡದಿರಲು ಸಾಧ್ಯವೇ? ಈ ಕಾರಣದಿಂದಲೇ ಒಂದಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಚಿತ್ರ ತಿಮ್ಮಯ್ಯ ಆಂಡ್ ತಿಮ್ಮಯ್ಯ. ಇದು ಸಂಜಯ್ ಶರ್ಮಾ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ. ಇದು ಅವರ ಪಾಲಿಗೆ ಮೊದಲ ಸಿನಿಮಾವಾದ್ದರಿಂದ ಸಹಜವಾಗಿಯೇ ಪ್ರೇಕ್ಷಕರು ಮಹತ್ತರವಾದದ್ದೇನನ್ನೋ ಬಯಸಿದ್ದರು. ಹಾಗೆ ಹುಟ್ಟಿಕೊಂಡಿದ್ದ ಹತ್ತಾರು ಭಾವಗಳ ಒಡ್ಡೋಲಗದಲ್ಲಿ ತಿಮ್ಮಯ್ಯ ಆಂಡ್ ತಿಮ್ಮಯ್ಯ ಚಿತ್ರ ತೆರೆಗಂಡಿದೆ. ಏನೋ ಅಂದುಕೊಂಡು [...]
The post ಇದು ದಿಗಂತನ ದೌರ್ಭಾಗ್ಯ! appeared first on ಶೋಧ ನ್ಯೂಸ್ - Shodha News.
ಅನಂತ್ ನಾಗ್ ಒಂದು ಸಿನಿಮಾದಲ್ಲಿ ನಟಿಸುತ್ತಾರೆಂದರೆ, ತಮ್ಮ ಪಾತ್ರದ ಬಗ್ಗೆ ಖುದ್ದು ಅವರೇ ಒಳ್ಳೆ ಮಾತುಗಳನ್ನಾಡುತ್ತಾರೆಂದರೆ ಆ ಚಿತ್ರದ ಬಗೆಗೊಂದು ಕುತೂಹಲ ಮೂಡದಿರಲು ಸಾಧ್ಯವೇ? ಈ ಕಾರಣದಿಂದಲೇ ಒಂದಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಚಿತ್ರ ತಿಮ್ಮಯ್ಯ ಆಂಡ್ ತಿಮ್ಮಯ್ಯ. ಇದು ಸಂಜಯ್ ಶರ್ಮಾ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ. ಇದು ಅವರ ಪಾಲಿಗೆ ಮೊದಲ ಸಿನಿಮಾವಾದ್ದರಿಂದ ಸಹಜವಾಗಿಯೇ ಪ್ರೇಕ್ಷಕರು ಮಹತ್ತರವಾದದ್ದೇನನ್ನೋ ಬಯಸಿದ್ದರು. ಹಾಗೆ ಹುಟ್ಟಿಕೊಂಡಿದ್ದ ಹತ್ತಾರು ಭಾವಗಳ ಒಡ್ಡೋಲಗದಲ್ಲಿ ತಿಮ್ಮಯ್ಯ ಆಂಡ್ ತಿಮ್ಮಯ್ಯ ಚಿತ್ರ ತೆರೆಗಂಡಿದೆ. ಏನೋ ಅಂದುಕೊಂಡು ಸಿನಿಮಾ ಮಂದಿರಗಳಿಗೆ ನುಗ್ಗಿದ ಮಂದಿ ಮುಖದಲ್ಲೀಗ ಅಯೋಮಯ ಛಾಯೆಯೊಂದು ಅಳಿಸಲಾಗದಂತೆ ಉಳಿದುಬಿಟ್ಟಿದೆ!
ಅನಂತ್ ನಾಗ್ ಲೆಜೆಂಡರಿ ನಟ. ಎಂಥಾ ಪಾತ್ರಕ್ಕಾದರೂ ಬೆರಗಾಗುವಂತೆ ಜೀವ ತುಂಬಬಲ್ಲ ಕಲಾವಿದ. ಇಂಥಾ ನಟರನ್ನು ಪ್ರಧಾನವಾಗಿಟ್ಟುಕೊಂಡು ಸಿನಿಮಾ ಮಾಡುವಾಗ ನಿರ್ದೇಶಕನಾದವನು ಎಲ್ಲ ಕೋನಗಳಿಂದಲೂ ಎಚ್ಚರವಹಿಸಬೇಕಾಗುತ್ತೆ. ಯಾಕೆಂದರೆ, ಕೊಂಚ ಯಾಮಾರಿದರೂ ಕೂಡಾ ಅದು ಆ ನಟನಿಗೆ ಅಪಮಾನಿಸಿದಂತಾಗುತ್ತೆ. ಆದರೆ, ಆ ನವನಿರ್ದೇಶಕ ಸಂಜಯ್ ಶರ್ಮಾ ಆ ಹಾದಿಯಲ್ಲಿ ಖಂಡಿತಾ ಎಡವಿದ್ದಾರೆ. ಒಂದಷ್ಟು ಚೆಂದಗಿದ್ದ ಕಥೆಯ ಸೂತ್ರವನ್ನು ಸಮರ್ಥವಾಗಿ ನಿಭಾಯಿಸೋದರಲ್ಲಿ ಸೋತಂತೆ ಕಾಣುತ್ತಾರೆ. ಅದರ ಫಲವಾಗಿ ಒಂದಿಡೀ ಸಿನಿಮಾವೇ ಸೊರಗಿದ ಸ್ಥಿತಿಯಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಿದೆ.
ನಿರ್ದೇಶಕ ಸಂಜಯ್ ಶರ್ಮಾ ಜಾಹೀರಾತು ಕ್ಷೇತ್ರದಲ್ಲಿರುವವರಂತೆ. ಹೆಚ್ಚೇನೂ ಬೇಡ, ಜಾಹೀರಾತಿನ ಚುರುಕುತನ, ಹೇಳಬೇಕಾದ್ದನ್ನು ಪರಿಣಾಮಕಾರಿಯಾಗಿ ಹೇಳುವ ಗುಣಗಳನ್ನಾದರೂ ಅಳವಡಿಸಿಕೊಂಡಿದ್ದರೆ ಈ ಚಿತ್ರ ಬೇರೆಯದ್ದೇ ಲೆವೆಲ್ಲಿನಲ್ಲಿರುತ್ತಿತ್ತು. ಆದರೆ, ಅವರು ಇದನ್ನೊಂದು ಕೆಫೆಯ ಇಂಟೀರಿಯರ್ ಡಿಸೈನಿನ ಜಾಹೀರಾತೆಂಬಂತೆ ರೂಪಿಸಿದ್ದಾರೆ. ಯಾಕಂದ್ರೆ, ಬಹುಪಾಲು ಚಿತ್ರ ಕೆಫೆಯ ಸುತ್ತಲೇ ಗಿರಕಿ ಹೊಡೆಯುತ್ತೆ. ಕೆಫೆಯ ಮೇಲಾಟದ ನಡುವೆ ಬಡಪಾಯಿ ಪ್ರೇಕ್ಷಕರು ಎದೆಯಲ್ಲಿ ಕಫ ಕಟ್ಟಿಕೊಂಡಂತಾಗಿ ನರಳುತ್ತಾರೆ. ಪ್ರತೀ ಸೀನುಗಳೂ ಕೂಡಾ ಪ್ರೇಕ್ಷಕರಲ್ಲೊಂದು ಕೊರತೆ ಉಳಿಸುತ್ತಾ, ಅದುವರೆಗೆ ನೋಡಿದ ದೃಷ್ಯಗಳನ್ನೆಲ್ಲ ಮನಸಿಂದ ಅಳಿಸುತ್ತಾ ಸಾಗುತ್ತವೆ. ಇದುವೇ ಈ ಸಿನಿಮಾದ ಪ್ರಧಾನ ಹಿನ್ನಡೆ.
ದಿಗಂತ್, ಐಂದ್ರಿತಾ ರೇ ಸೇರಿದಂತೆ ಯಾವ ಪಾತ್ರಗಳೂ ಮನಸಿಗೆ ತಾಕುವುದಿಲ್ಲ. ಯಾವ ದೃಷ್ಯಗಳೂ ಕೂಡಾ ಪರದೆ ದಾಟಿ ಬಂದು ಪ್ರೇಕ್ಷಕರನ್ನು ಮುಟ್ಟುವಂತಿಲ್ಲ. ನಿರ್ದೇಶಕರು ಏನೋ ಮಾಡಲು ಹೋಗಿ, ಕಥೆಯ ಸೂತ್ರ ಕೈತಪ್ಪಿ ಹತಾಶರಾಗಿ ದೃಷ್ಯ ಕಟ್ಟಿದಂತೆ ಭಾಸವಾಗುತ್ತೆ. ಇನ್ನುಳಿದಂತೆ, ಅದೇನು ದಿಗಂತ್ ಇಂಥಾ ಪಾತ್ರಗಳನ್ನು ಬಯಸುತ್ತಾನೋ, ಅಥವಾ ವಿಧಿಯೇ ಆತನಿಗಾಗಿ ಇಂಥಾ ಪಾತ್ರಗಳನ್ನು ಸೃಷ್ಟಿಸುತ್ತದೋ ಭಗವಂತನೇ ಬಲ್ಲ. ಆತ ಪಾತ್ರದಲ್ಲಾಗಲಿ, ನಟನೆಯಲ್ಲಾಗಲಿ ಯಾವ ಹೊಸತನವೂ ಇಲ್ಲ. ಅದು ದಿಗಂತನ ದೌರ್ಭಾಗ್ಯವೋ, ಪ್ರೇಕ್ಷಕರದ್ದೋ ಅಂತೊಂದು ಗೊಂದರ ಸಿನಿಮಾದ ಸಿಕ್ಕುಗಳಂತೆಯೇ ಕಾಡುತ್ತೆ. ನಿರ್ದೇಶಕರಿಗೆ ಪುರಸೊತ್ತಿರಲಿಲ್ಲವೋ ಅಥವಾ ಮೂಡಿರಲಿಲ್ಲವೋ… ಈ ಚಿತ್ರದಲ್ಲಿ ಸಂಭಾಷಣೆಗಳೇ ಸಪ್ಪೆ ಸಪ್ಪೆ. ಇಲ್ಲಿನ ಡೈಲಾಗುಗಳು `ನೀವ್ ನೀವೇ ಮಾತಾಡ್ಕಳಿ’ ಅಂತ ಕಲಾವಿದರಿಗೆ ಕೇಳಿಕೊಂಡು ಸೃಷ್ಟಿಯಾದಂತಿವೆ.
ಇದೆಲ್ಲದರಾಚೆಗೆ ಇಡೀ ಸಿನಿಮಾವನ್ನು ಒಂದಷ್ಟು ಸಹತ್ವಾಗಿಸೋದು ಅನಂತ್ ನಾಗ್ ಅವರ ಪಾತ್ರ. ಎಲ್ಲ ಮಿತಿಗಳಾಚೆಗೂ ಅನಂತ್ ಆ ಪಾತ್ರಕ್ಕೆ ತಮ್ಮದೇ ಶೈಲಿಯಲ್ಲಿ ಜೀವ ತುಂಬಿದ್ದಾರೆ. ಆ ಮೂಲಕ ಒಂದಿಡೀ ಚಿತ್ರಕ್ಕೆ ಜೀವಕಳೆ ತುಂಬೋ ಪ್ರಯತ್ನ ಮಾಡಿದ್ದಾರೆ. ಪ್ಲಸ್ ಪಾಯಿಂಟಿಗಾಗಿ ತಡಕಾಡಿದರೆ, ಹಾಡುಗಳೂ ಕೂಡಾ ಪ್ರಧಾನವಾಗಿ ಕಣ್ಮುಂದೆ ಬರುತ್ತವೆ. ಬಹುತೇಕ ಹಾಡುಗಳು ಚೆನ್ನಾಗಿವೆ. ನಿಖರವಾಗಿ ಹೇಳಬೇಕೆಂದರೆ, ಈ ಚಿತ್ರ ನಿರ್ದೇಶಕನ ಸೂತ್ರ ಮೀರಿ ಹರಡಿಕೊಂಡಂತಿದೆ. ಪ್ರೇಕ್ಷಕರಂತೂ ಪ್ರತೀ ಘಟ್ಟದಲ್ಲಿಯೂ ತಿಮ್ಮಯ್ಯಾ ಆಡ್ ತಿಮ್ಮಯ್ಯ ಜೀವ ತಿನ್ಬೇಡಿ ದಮ್ಮಯ್ಯ ಎಂಬಂತೆ ನರಳುವಂತಾಗುತ್ತೆ. ಕಾಂತಾರ ನಂತರ ಜನ ಮತ್ತೆ ಸಿನಿಮಾ ಮಂದಿರಗಳತ್ತ ನುಗ್ಗುತ್ತಿದ್ದಾರೆ. ಚಿತ್ರರಂಗದ ಪಾಲಿಗಿದು ಒಳ್ಳೆ ಬೆಳವಣಿಗೆ. ಆದರೆ ತಿಮ್ಮಯ್ಯ ಆಂಡ್ ತಿಮ್ಮಯ್ಯ ಉತ್ಸಾಹದಲ್ಲಿರೋ ಪ್ರೇಕ್ಷಕರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ!